Police Bhavan Kalaburagi

Police Bhavan Kalaburagi

Monday, July 20, 2020

BIDAR DISTRICT DAILY CRIME UPDATE : 20-07-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 20-07-2020

ಬಸವ ಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ : 46/2020 ಕಲಂ 279, 304 (ಎ)  ಐಪಿಸಿ ;-
 ದಿನಾಂಕ 19/07/2020 ರಂದು 08:30 ಗಂಟೆಗೆ ಮೃತನ ತಂದೆ  ಶ್ರೀ ಶಾಂತಪ್ಪ ತಂದೆ ಗುರಪ್ಪಾ ಬಾವಗೆ, ಸಾ: ಮಾಡಗೂಳ ಇವರು ಘಟನೆ ಸ್ಥಳಕ್ಕೆ ಬಂದಿದ್ದು ಘಟನೆ ಬಗ್ಗೆ ತಿಳಿದುಕೊಂಡು 09:30 ಗಂಟೆಗೆ ತನ್ನ ಲಿಖಿತ ದೂರನ್ನು ಹಾಜರಪಡಿಸಿದ್ದು ಸ್ವೀಕರಿಸಿಕೊಂಡಿದ್ದು ಅದರ ಸಾರಾಂಶವೆನೆಂದರೆ, ಫಿರ್ಯಾದಿಗೆ ಇಬ್ಬರು ಮಕ್ಕಳಿದ್ದು, 1) ನಾಗೇಶ ಮತ್ತು 2) ಆಕಾಶ ಅಂತಾ ಇದರಲ್ಲಿ ಫಿರ್ಯಾದಿಯ  ಕಿರಿಯ ಮಗ ಆಕಾಶ ಇವನು ಬಗದಲ್ ಗ್ರಾಮದ ಸುಧಾಕರ ಬಿರಾದರ ಎಂಬುವವರ ಬುಲೇರೋ ಗೂಡ್ಸ ವಾಹನ ನಂ. ಕೆಎ38-7249 ನೇದ್ದರ ಮೇಲೆ ಚಾಲಕ ಅಂತಾ 8 -10 ದಿನಗಳಿಂದ ಕೆಲಸ ಮಾಡುತ್ತಿದ್ದನು. ಹೀಗಿರುವಾಗ ದಿನಾಂಕ: 19/07/2020 ರಂದು ಮುಂಜಾನೆ 06:00 ಗಂಟೆ ಸುಮಾರಿಗೆ ಫಿರ್ಯಾದಿಯ ಮಗ ಆಕಾಶ  ವಯ: 23 ವರ್ಷ ಈತನು ಬಸವಕಲ್ಯಾಣಕ್ಕೆ ಹೋಗಿ ತನ್ನ ಮಾಲೀಕರ ಮನೆಗೆ ಅಕ್ಕಿ ತರಲು ಹೋಗುತ್ತಿದ್ದೇನೆ ಅಂತಾ ತಿಳಿಸಿ ತಾನೂ ಚಲಾಯಸುತ್ತಿದ್ದ ಬುಲೇರೋ ಗೂಡ್ಸ ನಂ. ಕೆಎ38-7249 ನೇದ್ದನ್ನು ತೆಗೆದುಕೊಂಡು ಹೋದನು. ನಂತರ ಮುಂಜಾನೆ ಅಂದಾಜು 08:00 ಗಂಟೆ ಸುಮಾರಿಗೆ ಬುಲೇರೋ ವಾಹನ ಮಾಲೀಕರಾದ ಸುಧಾಕರ ಇವನು ಫೊನ್ ಮಾಡಿ ತಿಳಿಸಿದ್ದೆನೆಂದರೆ, ಆಕಾಶ ಇವನಿಗೆ ತಡೋಳಾ ಗ್ರಾಮ ಶಿವಾರಿಗೆ ಎನ್ ಹೆಚ್-65 ರಸ್ತೆಯ ಮೇಲೆ ಅಪಘಾತವಾಗಿ ಮೃತಪಟ್ಟಿರುತ್ತಾನೆ. ಕೂಡಲೇ ಅಪಘಾತ ಸ್ಥಳಕ್ಕೆ ಬನ್ನಿ ಅಂತಾ ತಿಳೀಸಿದ ಮೇರೆಗೆ ನಾನು ಮತ್ತು ನನ್ನ ಮಗ ನಾಗೇಶ ಹಾಗೂ ನಮ್ಮ ಗ್ರಾಮದ ಇತರರು ಕೂಡಿಕೊಂಡು ಘಟನಾ ಸ್ಥಳಕ್ಕೆ ಬಂದು ನೋಡಲು ಆಕಾಶ ಇವನ ಮೃತದೇಹವು ರಸ್ತೆಯ ಮೇಲೆ ಅಂಗಾತಾಗಿ ಬಿದ್ದಿದ್ದು ಅವನ ದೇಹದಿಂದ ಭಾರಿ ರಕ್ತಸ್ರಾವ ಆಗಿರುತ್ತದೆ. ಅವನ ದೇಹದ ಮೇಲಿನ ಗಾಯಗಳು ನೋಡಲು ತೆಲೆಯ ಹಿಂದೆ ಭಾರಿ ರಕ್ತಗಾಯ, ಎಡಕಣ್ಣೀಗೆ ಭಾರಿ ರಕ್ತಗಾಯ, ಬಲಕಿವಿಯಿಂದ ಮೂಗಿನಿಂದ ರಕ್ತಸ್ರಾವ ಹಾಗೂ ದೇಹದ ತರೆ ಕಡೆ ಭಾರಿ ಗುಪ್ತಗಾಯಗಳಾಗಿದ್ದವು. ಘಟನೆ ಸ್ಥಳದಲ್ಲಿ ಹಾಜರಿದ್ದ ಪ್ರತ್ಯಕ್ಷ ದರ್ಶಿಯಾದ ರಾಮಣ್ನ ತಂದೆ ಅಂಬಣ್ಣ ಕನಕಟ್ಟೆ ಸಾ: ನಾರಾಯಣಪೂರ ಎಂಬುವವರು ತಿಳಿಸಿದ್ದೆನೆಂದರೆ ನಿಮ್ಮ ಮಗ ತನ್ನ ಬುಲೇರೋ ಗೂಡ್ಸ ವಾಹನವನ್ನು ಬಂಗ್ಲಾ ಕಡೆಯಿಂದ ಹುಮನಾಬಾದ ಕಡೆಗೆ ಹೋಗುತ್ತಿದ್ದು ಗುರುದೀಪ ಧಾಭ ದಾಟಿದ ನಂತರ ನನ್ನ ಮೋಟಾರ ಸೈಕಲಿಗೆ ಓವರ ಟೇಕ್ ಮಾಡಿ ಮುಂದೆ ತನ್ನ ವಾಹನವನ್ನು ಅತೀ ವೇಗ ಮತ್ತು ನಿಷ್ಕಾಳಜಿತನದಿಂದ ರಸ್ತೆಯು ತಿರುವಿನಿಂದ ಕೂಡಿದ್ದರು ಸಹ ಅದನ್ನು ನೋಡಿ ಹಾಗೆ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗಿ ತನ್ನ ಗೂಡ್ಸ ವಾಹನ ನಿಯಂತ್ರಿಸದೇ ರಸ್ತೆಯ ತಿರುವಿನ ಎಡಬದಿಯಲ್ಲರುವ MBCB ಸೈಡ ಬ್ಯಾರಿಯರಗೆ ಬಲವಾಗಿ ಡಿಕ್ಕಿ ಮಾಡಿರುತ್ತಾನೆ. ಡಿಕ್ಕಿಯ ಪರಿಣಾಮ ಅವನಿಗೆ ಭಾರಿ ರಕ್ತಗಾಯ ಮತ್ತು ಗುಪ್ತದಗಾಯಗಳಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ ಅಂತ ತಿಳಿದು, ಫಿರ್ಯಾದು ಕೊಟ್ಟ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೋಳ್ಳಲಾಗಿದೆ.
ಬಸವ ಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಪ್ರಕರಣ  ಸಂಖ್ಯೆ : 59/2020 ಕಲಂ 279, 304(ಎ) ಐಪಿಸಿ :- 
ದಿನಾಂಕ 19-07-2020 ರಂದು 1800 ಗಂಟೆಗೆ ಫಿರ್ಯಾದಿ  ಶ್ರೀ ವಿನಾಯಕ ತಂದೆ ಶರಣಪ್ಪಾ ಚಕಾರೆ, ವಯ 38 ವರ್ಷ ಜಾ; ಲಿಂಗಾಯತ ಉ; ಡ್ರೈವರ್ ಕೆಲಸ ಸಾ; ಮಂಠಾಳ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ ಮಾಡಿದ ಲಿಖಿತ  ದೂರು ತಂದು ಹಾಜರ ಪಡಿಸಿದ್ದು ಅದನ್ನು ಸ್ವೀಕರಿಸಿಕೊಂಡು ಸಾರಾಂಶವೆನೆಂದರೆ ಫಿರ್ಯಾದಿಯ ಅಣ್ಣ ರಮೇಶ ಇತನು ಎನ್.ಡ್ಬ್ಲು.ಕೆ.ಎಸ್.ಅರ್.ಟಿ.ಸಿ ಹುಬ್ಬಳಿ ಸಿಟಿ ಡಿಪೊ-1 ನೇದ್ದರಲ್ಲಿ ಸುಮಾರು 16 ವರ್ಷಗಳಿಂದ ಚಾಲಕ/ನಿವರ್ಹಕ ಕೆಲಸ ಮಾಡಿಕೊಂಡು ಅಲ್ಲೆ ವಾಸವಾಗಿರುತ್ತಾನೆ. ನನ್ನ ಅಣ್ಣ ರಮೇಶ ಇತನ ಹೆಂಡತಿಯ ತವರು ಮನೆ ಕುರುಬಖೇಳಗಿ ಗ್ರಾಮ ಇರುತ್ತದೆ. ಕರೊನಾ ವೈರಸ ಮಹಾಮಾರಿ ರೋಗ ಇದ್ದರಿಂದ ನನ್ನ ಅಣ್ಣ ತನ್ನ ಹೆಂಡತಿ ಮಕ್ಕಳಿಗೆ ಸುಮಾರು 10-12 ದಿವಸಗಳ ಹಿಂದೆ ತನ್ನ ಹೆಂಡತಿಯ ತವರುರಾದ ಕುರುಬಖೇಳಗಿ ಗ್ರಾಮದಲ್ಲಿ ಬಿಟ್ಟು ಮಂಠಾಳ ಗ್ರಾಮಕ್ಕೆ ದಿನಾಂಕ 11-07-2020 ರಂದು ಬಂದಿರುತ್ತಾನೆ. ಹೀಗಿರುವಾಗ ದಿನಾಂಕ 12-07-2020 ರಂದು ನನ್ನ ಅಣ್ಣ ರಮೇಶ ಇತನು ಮಂಠಾಳ ಗ್ರಾಮದ ನಮ್ಮ ಮನೆಯಿಂದ ನನ್ನ ಹಿರೊ ಫ್ಯಾಷನ ಪ್ರೋ ಮೋಟಾರ ಸೈಕಲ ನಂಬರ ಕೆಎ-56-ಜೆ-0661 ನೇದ್ದರ ಮೇಲೆ ಕುಳಿತು ತನ್ನ ಹೆಂಡತಿ ಮಕ್ಕಳಿಗೆ ನೋಡಿಕೊಂಡು ಬರಲು ಹೋಗುತ್ತಿದ್ದೇನೆ ಅಂತಾ ಹೇಳಿ ಸಾಯಾಂಕಾಲ 6-00 ಗಂಟೆಗೆ ಹೋಗಿರುತ್ತಾನೆ. ಹೀಗಿರುವಾಗ ದಿನಾಂಕ 12-07-2020 ರಂದು ರಾತ್ರಿ 9-30 ಪಿ ಎಮ್ ಗಂಟೆಗೆ ನಾನು ಮನೆಯಲ್ಲಿ ಇದ್ದಾಗ ಮುಚಳಂಬ ಗ್ರಾಮದ ರಾಜಕುಮಾರ ತಂದೆ ರೇವಣಪ್ಪಾ ಪಾಟೀಲ ಇವರು ನನಗೆ ತಿಳಿಸಿದೇನೆಂದೆ ನಾನು ರಾತ್ರಿ 8-00 ಗಂಟೆಗೆ ಮುಚಳಂಬ ಗ್ರಾಮದ ಬಸವೇಶ್ವರ ಚೌಕ ಹತ್ತಿರ  ನಿಂತಾಗ ಮಂಠಾಳ ಗ್ರಾಮದ ಸಂಗಪ್ಪಾ ತಂದೆ ಅಪಣ್ಣಾ ಸಜ್ಜನಶೇಟ್ಟಿ ಇವರು  ಮೋಟಾರ ಸೈಕಲ ನಂಬರ ಕೆಎ-39-ಜೆ-1431 ನೇದ್ದರ ಮೇಲೆ ಬಂದಾಗ ಅವರಿಗೆ ನಾನು ಕೈ ಮಾಡಿ ನಿಲ್ಲಿಸಿ ನನಗೆ ಗೋರ್ಟಾ(ಬಿ) ಗ್ರಾಮದವರೆಗೆ ಬಿಡು ಅಂತಾ ತಿಳಿಸಿದಾಗ ಸಂಗಪ್ಪಾ ಇವರು ನಾನು ಕೂಡ ಗೋರ್ಟಾ(ಬಿ) ಗ್ರಾಮಕ್ಕೆ ನಮ್ಮ ಸಂಬಂದಿಕರ ಮನೆಗೆ  ಹೋಗುತ್ತಿದ್ದೇನೆ ಅಂತಾ ತಿಳಿಸಿ ನನಗೆ ತಮ್ಮ ಮೋಟಾರ ಸೈಕಲ ಹಿಂದೆ ಕುಡಿಸಿಕೊಂಡು ಗೋರ್ಟಾ(ಬಿ)  ಗ್ರಾಮದ ಕಡೆಗೆ ಹೊರಟೆವು. ಸಂಗಪ್ಪಾ ಇವರು ಮೋಟಾರ ಸೈಕಲನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿ ರಾತ್ರಿ 8-30 ಗಂಟೆಗೆ ತೊಗಲೂರ ಕ್ರಾಸ ಹತ್ತಿರ ಇದ್ದ ದಾಬಾದ ಮುಂದೆ ಬಸವಕಲ್ಯಾಣ ಭಾಲ್ಕಿ ರೋಡಿನ ಮೇಲೆ ಫೋನ ಮೇಲೆ ಮಾತಾಡುತ್ತಿದ್ದ ನಿಂತ ಒಬ್ಬ ವ್ಯಕ್ತಿಗೆ ಜೋರಾಗಿ ಮೋಟಾರ ಸೈಕಲದಿಂದ ಡಿಕ್ಕಿ ಮಾಡಿದರಿಂದ ಆ ವ್ಯಕ್ತಿ ರೋಡಿನ ಮೇಲೆ ಬಿದ್ದನು. ಆಗ ನಾನು ಮತ್ತು ಸಂಗಪ್ಪಾ ಇಬ್ಬರು ಕೆಳಗೆ ಇಳಿದು ಡಿಕ್ಕಿ ಮಾಡಿದ ವ್ಯಕ್ತಿಯನ್ನು ನೋಡಿದಾಗ ಆ ವ್ಯಕ್ತಿ ರಮೇಶ ತಂದೆ ಶರಣಪ್ಪಾ ಚಕಾರೆ ಇವರು ಇದ್ದು ಇವರಿಗೆ ತಲೆಗೆ ಭಾರಿ ಮತ್ತು ಮುಖಕ್ಕೆ ಭಾರಿ ಗುಪ್ತಗಾಯ ಮತ್ತು ರಕ್ತಗಾಯ, ಹಾಗೂ ಮೈಯಲ್ಲಾ ಅಲ್ಲಲ್ಲಿ ತರಚಿದ ರಕ್ತಗಾಯವಾಗಿರುತ್ತವೆ. ಅಲ್ಲೆ ರೋಡಿನ ಪಕ್ಕದಲ್ಲಿ ಒಂದು ಮೋಟಾರ ಸೈಕಲ ನಿಂತಿದ್ದು ಅದನ್ನು ನೋಡಲು ಹಿರೊ ಫ್ಯಾಷನ ಪ್ರೋ ಮೋಟಾರ ಸೈಕಲ ನಂಬರ ಕೆಎ-56-ಜೆ-0661 ಇರುತ್ತದೆ ಗಾಯಗೊಂಡ ರಮೇಶ ಇತನಿಗೆ ನಾನು ಮತ್ತು ಸಂಗಪ್ಪಾ ಇಬ್ಬರು ಕೂಡಿಕೊಂಡು ಚಿಕಿತ್ಸೆ ಕುರಿತು ಖಾಸಗಿ ವಾಹನದಲ್ಲಿ ಹಾಕಿಕೊಂಡು ಬಸವಕಲ್ಯಾಣ ಸರಕಾರಿ ಆಸ್ಪತ್ರೆಯಲ್ಲಿ ತಂದು ಸೇರಿಕೆ ಮಾಡಿರುತ್ತೇವೆ ನೀನು ಕೂಡಲೆ ಆಸ್ಪತ್ರೆಗೆ ಬರಲು ತಿಳಿಸಿದಾಗ ಫಿರ್ಯಾಧಿಯು ಸ್ನೇಹಿತ ವಿಜಯಕುಮಾರ ತಂದೆ ಶಿವರಾಯ ನಿರಾಳೆ ಇಬ್ಬರು ಕೂಡಿಕೊಂಡು ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ಬಂದು  ಚಿಕಿತ್ಸೆ ಪಡೆಯುತ್ತಿದ್ದ ನನ್ನ ಅಣ್ಣ ರಮೇಶ ಇತನಿಗೆ ನೋಡಲು ಮೇಲಿನಂತೆ ಗಾಯಗಳು ಆಗಿರುತ್ತವೆ. ನಂತರ ವೈದ್ಯರ ಸಲಹೆ ಮೇರೆಗೆ ನನ್ನ ಅಣ್ಣ ರಮೇಶ ಇತನಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಬೀದರಿನ ಆರೋಗ್ಯ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಘಟನೆ ಬಗ್ಗೆ ನಮ್ಮ ರಮೇಶ ಇವರ ಹೆಂಡತಿಯಾದ ವಿಜಯಲಕ್ಷ್ಮಿ ಇವರಿಗೆ ತಿಳಿಸಿದಾಗ ಅವರು ಕೂಡ ಬೀದರ ಆಸ್ಪತ್ರೆಗೆ ಬಂದಿರುತ್ತಾರೆ. ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ನಾನು ಮತ್ತು ನನ್ನ ಅತ್ತಿಗೆ ಇಬ್ಬರು ಕೂಡಿಕೊಂಡು ದಿನಾಂಕ 13-07-2020 ರಂದು ಹೈದ್ರಾಬಾದಿನ ಒಮಿನಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿಸಿ ನಮ್ಮ ಅಣ್ಣ ರಮೇಶ ಇತನು ಹುಬಳಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಆತನಿಗೆ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳಿಯ ಕಿಮ್ಸ ಆಸ್ಪತ್ರೆಯಲ್ಲಿ ವೈದು ಸೇರಿಕೆ ಮಾಡಿ ನಮ್ಮ ಅತ್ತಿಗೆಗೆ ನಮ್ಮ ಅಣ್ಣನ ಅರೈಕೆಗಾಗಿ ಆಸ್ಪತ್ರೆಯಲ್ಲಿ ಬಿಟ್ಟು ನಾನು ನನ್ನ ಅಣ್ಣನ ಚಿಕಿತ್ಸೆಗಾಗಿ ಹಣತರಲು ಮಂಠಾಳ ಗ್ರಾಮಕ್ಕೆ 3-4 ದಿವಸಗಳ ಹಿಂದೆ ಬಂದಿರುತ್ತೇನೆ. ಇಂದು ದಿನಾಂಕ 19-07-2020 ರಂದು 1-00 ಪಿ ಎಮ್ ಗಂಟೆಗೆ ನಾನು ಮನೆಯಲ್ಲಿ ಇದ್ದಾಗ ನನ್ನ ಅತ್ತಿಗೆ ಇವರು ನನಗೆ ಫೊನ ಮಾಡಿ ತಿಳಿಸಿದೇನೆಂದರೆ ನನ್ನ ಗಂಡ ರಮೇಶ ಇವರು ಚಿಕಿತ್ಸೆ ಫಲಕಾರಿಯಾದೇ 12-25 ಪಿ ಎಮ್ ಗಂಟೆಗೆ ಮೃತ ಪಟ್ಟಿರುತ್ತಾರೆ ಅಂತಾ ತಿಳಿಸಿರುತ್ತಾರೆ. ನಮ್ಮ ಅಣ್ಣ ರಮೇಶ ಇವರು ಚಿಕಿತ್ಸೆಯಲ್ಲಿದ್ದ ಕಾರಣ ನಾವು ಅವನ ಅರೈಕೆಯಲ್ಲಿ ತೊಡಗಿದ್ದು ಇಂದು ಮೃತ ಪಟ್ಟ ವಿಷಯ ಗೊತ್ತಾಗಿ ಠಾಣೆಗೆ ಬಂದು ನನ್ನ ಲಿಖಿತ ದೂರು ನೀಡುತ್ತಿದ್ದೇನೆ. ಈ ಬಗ್ಗೆ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಇರುತ್ತದೆ ಅಂತಾ ಕೊಟ್ಟ ಲಿಖಿತ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ

ಔರಾದ (ಬಿ) ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 56/2020 ಕಲಂ 279, 337 ಐಪಿಸಿ :- 
ದಿನಾಂಕ 19-07-2020 ರಂದು 1135 ಗಂಟೆಗೆ ಔರಾದ ಸರಕಾರಿ ಆಸ್ಪತ್ರೆಯಿಂದ ಎಂ ಎಲ್ ಸಿ ಮಾಹಿತಿ ಬಂದ ಮೇರೆಗೆ ಔರಾದ ಸರಕಾರಿ ಆಸ್ಪತ್ರೆಗೆ ಭೇಟ್ಟಿ ನೀಡಿ ಚಿಕಿತ್ಸೆಗಾಗಿ ದಾಖಲಾದ ಗಾಯಾಳು ಫಿಯರ್ದಿ ಶ್ರೀ ಕೇರಬಾ ತಂದೆ ನರಸಿಂಗರಾವ  ಮಹಾರಾಜವಾಡೆ ಸಾ: ಗಣೇಶಪೂರ(ಎ) ರವರಿಗೆ ವಿಚಾರಿಸಿ ಹೇಳಿಕೆ ಪಡೆದುಕೊಂಡಿದ್ದು ಸಾರಾಂಶವೇನೆಂದರೆ  ದಿನಾಂಕ 19-07-2020 ರಂದು ನಾನು ನಮ್ಮ ಮನೆಯಲ್ಲಿ ಸಾಕೀದ ಎಮ್ಮೆಯನ್ನು ಮೇಯಿಸಲು ನಮ್ಮ ಹೊಲಕ್ಕೆ ಹೊಡೆದುಕೊಂಡು ಹೋಗುವಾಗ ಅಂದಾಜು 11:00 ಗಂಟೆಗೆ ಎಕಂಬಾ ರೋಡಿನ ಮೇಲೆ  ಜ್ಞಾನೇಶ್ವರ ಕಾಳೆ ರವರ ಹೊಲದ ಹತ್ತಿರ ಇದ್ದಾಗ ನನ್ನ ಹಿಂದಿನಿಂದ ಕಾರ ಚಾಲಕನು ತನ್ನ ಕಾರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ನನಗೆ ಬಲಗಾಲ ರೊಂಡಿಗೆ ಡಿಕ್ಕಿ ಹೊಡೆದಿರುತ್ತಾನೆ. ಇದರಿಂದ ನಾನು ಮೇಲಕ್ಕೆ ಹಾರಿ ಕಾರಿನ ಮುಂದಿನ ಗ್ಲಾಸ್ ಮೇಲೆ ಬಿದ್ದಿರುತ್ತೇನೆ ಇದರಿಂದ ನನಗೆ ಕಾರನ ಗ್ಲಾಸ ತಲೆಯ ಹಿಂಭಾಗದಲ್ಲಿ ತಲೆಯ ಬಲಭಾಗದಲ್ಲಿ ಹತ್ತಿ ರಕ್ತಗಾಯವಾಗಿರುತ್ತದೆ. ಎಡಗೈ ಮುಂಗೈಗೆ ಬಲಗಾಲ ಪಾದದ ಮೇಲೆ ಕಾರಿನ ಭಾಗ ಹತ್ತಿ ತರಚಿದ ಗಾಯವಾಗಿರುತ್ತದೆ. ಡಿಕ್ಕಿ ಹತ್ತಿದ ನನ್ನ ಬಲಗಾಲ ರೊಂಡಿಗೆ ಗುಪ್ತಗಾಯವಾಗಿರುತ್ತದೆ. ಅಪಘಾತ ಮಾಡಿದ ಕಾರ ನೋಡಲು ಸುಜಕಿ ಅಲ್ಟೊ 800 ಕಾರ ಕಪ್ಪು ಬಣ್ಣದ್ದು ಇದ್ದು ಅದರ ನೊಂದಣಿ ಸಂಖ್ಯೆ ಕೆಎ-32/ಎನ್-6089 ಇರುತ್ತದೆ. ಅದರ ಚಾಲಕನಿಗೆ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಶಿವಾನಂದ ತಂದೆ ಕಾಶಿನಾಥ ಬಿರಾದಾರ ಸಾ: ರಂಡ್ಯಾಳ ಸದ್ಯ ಔರಾದ(ಬಿ) ಎಂದು ತಿಳಿಸಿರುತ್ತಾನೆ. ಆ ಘಟನೆ ಸ್ಥಳದಿಂದ ಕಾರ ಚಾಲಕನು ನನಗೆ ಅದೇ ಕಾರನಲ್ಲಿ ಚಿಕಿತ್ಸೆ ಕುರಿತು ಔರಾದ ಸರಕಾರಿ ಆಸ್ಪತ್ರೆಗೆ ತಂದು ಸೇರಿಸಿರುತ್ತಾನೆ. ಸದರಿ ಅಪಘಾತದ ಬಗ್ಗೆ ನಾನು ನನ್ನ ಮಗ ಭರತ ಇತನಿಗೆ ಫೊನ ಮಾಡಿ ತಿಳಿಸಿರುತ್ತೇನೆ  ಹಾಗೂ ಅಪಘಾತವಾಗಿದ್ದನ್ನು ಅಲ್ಲೆ ಪಕ್ಕದ ಹೊಲದಲ್ಲಿದ್ದ ನಮ್ಮೂರ ಸಚೀನ ತಂದೆ ತಾನಾಜಿ ಕಾಳೆ ರವರ ನೋಡಿರುತ್ತಾರೆ.  ಆದ್ದರಿಂದ ನನಗೆ ಅಪಘಾತ ಮಾಡಿದ ಕಾರ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರೂಗಿಸಲು ವಿನಂತಿ ಅಂತ ಕೊಟ್ಟ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೇನೆ
 ಬಸವ ಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಯು.ಡಿಆರ್ ಪ್ರಕರಣ  ಸಂಖ್ಯೆ : 09/2020 ಕಲಂ 174 ಸಿ.ಆರ್.ಪಿ.ಸಿ:-
 ದಿನಾಂಕ 19-07-2020 ರಂದು 0800 ಗಂಟೆಗೆ ಬೀದರ ಸಹಾಯವಾಣಿ ಕೇಂದ್ರದಿಂದ ಫೋನ ಮಾಡಿ ವೆಂಕಟ ಸಾ: ಮಲ್ಲಿಕಾರ್ಜುನ ವಾಡಿ ಇತನ ಮೃತ ಪಟ್ಟ ಬಗ್ಗೆ ಮಾಹಿತಿ ತಿಳಿಸಿದ ಮೇರೆಗೆ ಶ್ರೀ ನವಾಜ ಎಎಸ್ಐ ಹಾಗು ಸಿಬ್ಬಂದಿ ಯವರು ಬೀದರ ಸರಕಾರಿ ಆಸ್ಪತ್ರೆಗೆ ಭೇಟ್ಟಿಕೊಟ್ಟು ಮೃತನ ಹತ್ತಿರ ಹಾಜರಿದ್ದ ಶ್ರೀ ಪ್ರಭು ತಂದೆ ಮಾರುತಿ ಇರಾಮೆ ಸಾ: ಮಲ್ಲಿಕಾರ್ಜುನ ವಾಡಿ ಇವರಿಗೆ ವಿಚಾರಿಸಿ ಇವರು 9-45 ಗಂಟೆಗೆ ಇವರು ಲಿಖಿತ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ ನಾನು ಲಾರಿ ಚಾಲಕ ಕೆಲಸ ಮಾಡಿಕೊಂಡು ನನ್ನ ಹೆಂಡತಿ ಮಕ್ಕಳೊಂದಿಗೆ ಮಲ್ಲಿಕಾರ್ಜುನವಾಡಿಯಲ್ಲಿ ವಾಸವಾಗಿರುತ್ತೇವೆ. ನನ್ನ ಹೆಂಡತಿ ಕಲಾವತಿ ಇವಳು ಗೃಹಿಣಿ ಇರುತ್ತಾಳೆ. ನನಗೆ ಒಟ್ಟು 6 ಜನ ಗಂಡು ಮಕ್ಕಳು ಇರುತ್ತಾರೆ. ಹಿಗಿರುವಾಗ ದಿನಾಂಕ 15-07-2020 ರಂದು 5-00 ಪಿ ಎಮ್ ಗಂಟೆಗೆ ನಾನು ಮತ್ತು ನನ್ನ ಮಕ್ಕಳು ಅಡುಗೆ ಮನೆಯಲ್ಲಿ ಊಟ ಮಾಡುತ್ತಿದ್ದಾಗ ಅಕಸ್ಮಿಕವಾಗಿ ಮಹಡಿ ಕೆಳಗೆ ಕುಳಿತ ನನ್ನ ಮಗ ವೆಂಕಟ ಇತನ ಮೇಲೆ ಮಹಡಿ ಮೇಲೆ ಇಟ್ಟಿದ ಚಿಮಣಿ ದೀಪ ಆತನ ಮೈ ಮೇಲೆ ಬಿದ್ದು ವೆಂಕಟ ಇತನಿಗೆ ಮೈಗೆ ಬೆಂಕಿ ಹತ್ತಿ ಎರಡು ಕೈಗಳಿಗೆ, ಬೆನ್ನಿನ ಹಿಂದೆ, ಎರಡು ಕುಂಡಿ ತಿಕ್ಕಗಳಿಗೆ ಎರಡು ಕಾಲುಗಳ ತೊಡೆಗೆ ಬೆಂಕಿ ಹತ್ತಿ ಭಾರಿ ಸುಟ್ಟಗಾಯಗಳಾಗಿದ್ದು ಅಲ್ಲೆ ಇದ್ದ ನಾನು ಮತ್ತು ನನ್ನ ಹೆಂಡತಿ ಮತ್ತು ಮಕ್ಕಳು ಸೇರಿ ಬೆಂಕಿ ಅರಿಸಿರುತ್ತೇವೆ. ವೆಂಕಟ ಇತನಿಗೆ ಚಿಕಿತ್ಸೆ ಕುರಿತು ಖಾಸಗಿ ವಾಹನದಲ್ಲಿ ಹಾಕಿಕೊಂಡು ನಾನು ಮತ್ತು ನನ್ನ ಮಗ ಸಾಗರ ಹಾಗೂ ನಮ್ಮ ಗ್ರಾಮಸ್ಥರಾದ ನಮ್ಮ ಸಂಬಂದಿ ಅಂಬಾದಾಸ ತಂದೆ ಮಾಣಿಕಪ್ಪಾ ನೆರಾಡೆ ಎಲ್ಲರೂ ಕೂಡಿಕೊಂಡು ಹುಮನಾಬಾದ ಸರಕಾರಿ ಆಸ್ಪತ್ರೆಯಲ್ಲಿ ವೈದು ಸೇರಿಕೆ ಮಾಡಿ ಚಿಕಿತ್ಸೆ ಮಾಡಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ವೈದ್ಯರ ಸಲಹೆ ಮೇರೆಗೆ 108 ಅಂಬುಲೇನ್ಸದಲ್ಲಿ ಹಾಕಿಕೊಂಡು ಬೀದರ ಸರಕಾರಿ ಆಸ್ಪತ್ರಗೆ ಸೇರಿಸಿ ಚಿಕಿತ್ಸೆ ಮಾಡಿಸಿರುತ್ತೇವೆ. ದಿನಾಂಕ 19-07-2020 ರಂದು 4-50 ಎ ಎಮ್ ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ವೆಂಕಟ ಇತನು ಸರಕಾರಿ ಆಸ್ಪತ್ರೆ ಬೀದರದಲ್ಲಿ ಮೃತ ಪಟ್ಟಿರುತ್ತಾನೆ. ಘಟನೆ ಅಕಸ್ಮಿಕವಾಗಿ ನಡೆದಿರುತ್ತದೆ. ನನ್ನ ಮಗನ ಸಾವಿನ ಬಗ್ಗೆ ಯವುದೆ ದೂರು ಹಾಗೂ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹುಲಸೂರ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ 51/2020 ಕಲಂ 32, 34 ಕರ್ನಾಟಕ ಅಬಕಾರಿ ಕಾಯ್ದೆ :-
ದಿನಾಂಕ 19/07/2020 ರಂದು 1510 ಗಂಟೆಗೆ ಪಿ.ಎಸ್.ಐ ರವರು ಠಾಣೆಯಲ್ಲಿರುವಾಗ ಫೋನ ಮೂಲಕ ಖಚಿತ ಮಾಹಿತಿ ಬಂದಿದ್ದೆನೆಂದರೆ, ಗಡಿಗೌಂಡಗಾಂವ ಗ್ರಾಮದ ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅಕ್ರಮವಾಗಿ ಮದ್ಯ ತನ್ನ ಅಧಿನದಲ್ಲಿಟ್ಟುಕೊಂಡು ಮಾರಾಟ ಮಾಡಲು ಸಾಗಾಟ ಮಾಡುತಿದ್ದಾನೆಂದು ಖಚಿತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ ರವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಹುಲಸೂರ ಪೊಲೀಸ ಠಾಣೆಯಿಂದ ಜೀಪನ್ನು ಚಲಾಯಿಸಿಕೊಂಡು ಹೋಗಿ ಗಡಿಗೌಂಡಗಾಂವ ಗ್ರಾಮದ ಊರ ಹೊರಗೆ ಜೀಪ ನಿಲ್ಲಿಸಿ ವಾವೆಲ್ಲರೂ ನಡೆದುಕೊಂಡು ಹೋಗಿ ಮನೆಗಳ ಮರೆಯಾಗಿ ನಿಂತು ನೋಡಲು ಗಡಿಗೌಂಡಗಾಂವ ಗ್ರಾಮದ ಬಸವೇಶ್ವರ ಚೌಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಬಿಳಿ ಬಣ್ಣದ ಒಂದು ಪ್ಲಾಸ್ಟಿಕ್ ಚೀಲವನ್ನು ಇಟ್ಟುಕೊಂಡು ನಿಂತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು 1610 ಗಂಟೆಗೆ ಪಂಚರ ಸಮಕ್ಷಮದಲ್ಲಿ ನಾವೇಲ್ಲರೂ ಅವನ ಮೇಲೆ ದಾಳಿ ಮಾಡಿ ಮಲ್ಲಪ್ಪ ಸಿಪಿಸಿ- 1712  ರವರು ಆ ವ್ಯಕ್ತಿಗೆ  ಹಿಡಿದುಕೊಂಡಾಗ ಪಿ.ಎಸ್.ಐ ರವರು  ಆತನ ಹೆಸರು ಮತ್ತು ವಿಳಾಸ ವಿಚಾರಿಸಲು ತಿಳಿಸಿದ್ದೆನೆಂದರೆ, ಮಹೇಶ ತಂದೆ ಮಾದಪ್ಪ ರಾಚೋಟೆ ವಯ: 40 ವರ್ಷ ಜಾತಿ: ಲಿಂಗಾಯತ ಉದ್ಯೋಗ: ಒಕ್ಕಲುತನ ಸಾ|| ಗಡಿಗೌಂಡಗಾಂವ ಅಂತ ತಿಳಿಸಿದ್ದು,  ನಿನ್ನ ಹತ್ತಿರವಿರುವ ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲದಲ್ಲಿ ಎನು ಇದೆ ಅಂತ ವಿಚಾರಿಸಲಾಗಿ ವಿಸ್ಕಿ ಇದ್ದು ಮಾರಾಟ ಮಾಡಲು ಸಾಗಾಟ ಮಾಡುತ್ತಿರುವುದಾಗಿ ತಿಳಿಸಿರುತ್ತಾನೆ. ಮಹೇಶ ಈತನಿಗೆ ವಿಸ್ಕಿ ತನ್ನ ಅಧಿನದಲ್ಲಿಟ್ಟುಕೊಂಡು ಮಾರಾಟ ಮಾಡಲು ಸಾಗಾಟ ಮಾಡುವುದಕ್ಕೆ ಸರಕಾರಿಂದ ಯಾವುದಾದರೂ ಪರವಾನಿಗೆ ವಗ್ಯರೆ ಇದ್ದರೆ ಹಾಜರು ಪಡಿಸು ಅಂತ ಪಿ.ಎಸ್.ಐ ತಿಳಿಸಿದಾಗ ಆತನು ನಾನು ಸರಕಾರದ ಪರವಾನಿಗೆ ಇಲ್ಲದೆ, ಅನಧಿಕೃತವಾಗಿ ನನ್ನ ವಶದಲ್ಲಿಟ್ಟುಕೊಂಡು ಮಾರಾಟ ಮಾಡಲು ಸಾಗಾಟ ಮಾಡುತ್ತಿರುವುದಾಗಿ ತಿಳಿಸಿರುತ್ತಾನೆ. ಮಹೇಶ ಈತನಿಗೆ  ವಿಸ್ಕಿ ಎಲ್ಲಿಂದ ತಂದಿರುವದಾಗಿ ಕೇಳಲಾಗಿ ಯಾವದೇ ಮಾಹಿತಿ ನೀಡಿರುವದಿಲ್ಲ. ಅನಧಿಕೃತವಾಗಿ ನಿನ್ನ ವಶದಲ್ಲಿಟ್ಟುಕೊಂಡು ಮಾರಾಟ ಮಾಡಲು ಸಾಗಾಟ ಮಾಡುವುದು ಕಾನೂನು ಪ್ರಕಾರ ಅಪರಾಧ ಎಂದು ತಿಳಿಸಿ ಅವನ ಹತ್ತಿರವಿದ್ದ ಬಿಳಿ ಬಣ್ಣದ ಪ್ಲಾಸ್ಟಿಕ್  ಚೀಲವನ್ನು ಪಂಚರ ಸಮಕ್ಷಮದಲ್ಲಿ  ತೆರೆದು ನೋಡಲಾಗಿ 1] ಓ.ಟಿ ವಿಸ್ಕಿ 180 ಎಮ್.ಎಲ್ ನ 15 ಪೌಚಗಳು ಅಂ.ಕಿ-1275/- ರೂ 2] ಓ.ಸಿ ವಿಸ್ಕಿ 180 ಎಮ್.ಎಲ್.ನ 19 ಪೌಚಗಳು ಅಂ.ಕಿ-1995/- ರೂ  3] ಓ.ಸಿ ವಿಸ್ಕಿ 90 ಎಮ್.ಎಲ್.ನ 48 ಪೌಚಗಳು ಅಂ.ಕಿ-1680/- ರೂ 4] ಯು.ಎಸ್ ವಿಸ್ಕಿ 90 ಎಮ್.ಎಲ್ ನ 60 ಪೌಚಗಳು ಅಂ.ಕಿ-2100 ರೂ ಹೀಗೆ ಎಲ್ಲಾ ಸೇರಿ ಒಟ್ಟು 7050/- ರೂ ಬೆಲೆ ಬಾಳುವ ವಿಸ್ಕಿ ಎಲ್ಲವುಗಳನ್ನು ಜಪ್ತಿ ಮಾಡಿಕೊಂಡು ಆರೋಪಿತನಿಗೆ ದಸ್ತಗಿರಿ ಮಾಡಿ ಕೊಂಡು ಠಾಣೆಗೆ ಬಂದು ದೂರು ಕೊಟ್ಟ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಯಿತು.

ಬಸವ ಕಲ್ಯಾಣ ನಗರ  ಪೊಲೀಸ್ ಠಾಣೆ ಪ್ರಕರಣ  ಸಂಖ್ಯೆ : 97/2020 ಕಲಂ 269 ಐಪಿಸಿ  ಜೊತೆ 87ಕೆ.ಪಿ. ಕಾಯ್ದೆ:-
ದಿನಾಂಕ:19/07/2020 ರಂದು 1800 ಗಂಟೆಗೆ ನಾನು ಸುನೀಲಕುಮಾರ  ಪಿ.ಎಸ್. (ಕಾ & ಸೂ) ಬಸವಕಲ್ಯಾಣ ನಗರ ಠಾಣೆಯಲ್ಲಿರುವಾಗ ಬಸವಕಲ್ಯಾಣ ನಗರದ ಭೀಮನಗರದಲ್ಲಿರುವ ಸಮುದಾಯ ಭವನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೊರೊನಾ ಸೊಂಕು ಹರಡಬಹುದು ಎಂದು ಗೊತ್ತಿದ್ದರು ಬಗ್ಗೆ ನೀರ್ಲಕ್ಷ ವಹಿಸಿ ಕೆಲವು ಜನರು ಗುಂಪಾಗಿ ಕುಳಿತು ಕೊಂಡು ಹಣ ಹಚ್ಚಿ ಪಣ ತೊಟ್ಟು ಇಸ್ಪಿಟ್ ಎಲೆಗಳ ಅಂದರ ಬಾಹರ್ ನಸಿಬಿನ ಜೂಜಾಟವನ್ನು ಆಡುತ್ತಿದ್ದಾರೆ ಎಂದು ಪೋನ್ ಮುಖಾಂತರ ಖಚಿತ ಭಾತ್ಮಿಯನ್ನು ತಿಳಿದು ಬಂದ ಮೇರೆಗೆ ಸಿಬ್ಬಂದಿ ಹಾಗೂ  ಇಬ್ಬರು ಪಂಚರೊಂದಿಗೆ  ಬಸವಕಲ್ಯಾಣ ನಗರದ ಭೀಮನಗರದಲ್ಲಿರುವ ಸಮುದಾಯ ಭವನ ದಿಂದ 50 ಅಡಿ ಅಂತರದಲ್ಲಿ 18:30 ಗಂಟೆಗೆ ತಲುಪಿ ಮರೆಯಾಗಿ ನಿಂತು ನೋಡಲು ಭಾತ್ಮಿಯಂತೆ ಬಸವಕಲ್ಯಾಣ ನಗರದ ಭೀಮನಗರದಲ್ಲಿರುವ ಸಮುದಾಯ ಭವನ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 07 ಜನರು ಗುಂಪಾಗಿ ಕುಳಿತುಕೊಂಡು ಕೊರೋನಾ ಸೊಂಕು ಹರಡಬಹುದು ಎಂದು ಗೊತ್ತಿದ್ದರು ಮಾಸ್ಕ್ ಧರಿಸದೆ ಮತ್ತು ಸಮಾಜಿಕ ಅಂತರ ಕಾಪಾಡದೆ ಬಗ್ಗೆ ನೀರ್ಲಕ್ಷ ವಹಿಸಿ ಇಸ್ಪಿಟ್ ಎಲೆಗಳ ಅಂದರ ಬಾಹರ ನಸೀಬಿನ ಜೂಜಾಟವನ್ನು ಹಣ ಹಚ್ಚಿ ಪಣ ತೊಟ್ಟು ಆಡುತ್ತಿರುವುದನ್ನು ನೋಡಿ ಸಮಯ:18:40ಗಂಟೆಗೆ ಎಲ್ಲರು ಒಮ್ಮೆಲೆ ದಾಳಿಮಾಡಿ ಹಿಡಿದುಕೊಂಡು ಸಾಲಾಗಿ ನಿಲ್ಲಿಸಿ ಮೊದಲನೆಯವನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು 1] ಬಬ್ಲೂ ತಂದೆ ವಿಶ್ವನಾಥರಾವ ಗಾಯಕವಾಡ ವಯಸ್ಸು//45 ವರ್ಷ ಜಾತಿ//ಎಸ್.ಸಿ ದಲಿತ //ಕೂಲಿಕೆಲಸ ಸಾ// ಭೀಮನಗರ ಬಸವಕಲ್ಯಾಣ ಎಂದು ತಿಳಿಸಿದಾಗ ಇವನ ಅಂಗ ಶೋಧನೆ ಮಾಡಲು ಅವನ ಅಧೀನದಿಂದ ನಗದು ಹಣ 300/-ರೂ ಸಿಕ್ಕ್ಕಿರುತ್ತವೆ,2]ಎರಡನೆಯವನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಪ್ರಶಾಂತ ತಂದೆ ಪ್ರಕಾಶ ಗಜರೆ ವಯಸ್ಸು//32 ವರ್ಷ ಜಾತಿ//ಎಸ್.ಸಿ ದಲಿತ //ವ್ಯಾಪಾರ ಸಾ// ಭೀಮನಗರ ಬಸವಕಲ್ಯಾಣ ಎಂದು ತಿಳಿಸಿದಾಗ ಇವನ ಅಂಗ ಶೋಧನೆ ಮಾಡಲು ಅವನ ಅಧಿನದಿಂದ ನಗದು ಹಣ 200/-ರೂ ಸಿಕ್ಕ್ಕಿರುತ್ತವೆ,3] ಮೂರನೆಯವನಿಗೆ ಹೆಸರುಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಲಕ್ಷ್ಮಣ ತಂದೆ ಲಿಂಬಾಜಿ ಗೋಡಬೊಲೆ ವಯಸ್ಸು//50 ವರ್ಷ ಜಾತಿ//ಎಸ್.ಸಿ ದಲಿತ //ಕೂಲಿಕೆಲಸ ಸಾ// ಭೀಮನಗರ ಬಸವಕಲ್ಯಾಣ ಎಂದು ತಿಳಿಸಿದಾಗ ಇವನ ಅಂಗ ಶೋಧನೆ ಮಾಡಲು ಅವನ ಅಧೀನದಿಂದ ನಗದು ಹಣ 300/-ರೂ ಸಿಕ್ಕ್ಕಿರುತ್ತವೆ,4]ನಾಲ್ಕನೆಯವನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಮುನ್ನಾ ತಂದೆ ರೋಹಿದಾಸ ಗಜರೆ ವಯಸ್ಸು//35 ವರ್ಷ ಜಾತಿ//ಎಸ್.ಸಿ ದಲಿತ //ಟೇಲರ ಕೆಲಸ ಸಾ// ಭೀಮನಗರ ಬಸವಕಲ್ಯಾಣ ಎಂದು ತಿಳಿಸಿದಾಗ ಇವನ ಅಂಗ ಶೋಧನೆ ಮಾಡಲು ಅವನ ಅಧೀನದಿಂದ ನಗದು ಹಣ 200/-ರೂ ಸಿಕ್ಕ್ಕಿರುತ್ತವೆ, 5]ಐದನೆಯವನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ರಮೇಶ ತಂದೆ ಚಂದ್ರಕಾಂತ ಗೊಡಬೊಲೆ ವಯಸ್ಸು//48 ವರ್ಷ ಜಾತಿ//ಎಸ್.ಸಿ ದಲಿತ //ಡ್ರೈವರ್ ಸಾ// ಭೀಮನಗರ ಬಸವಕಲ್ಯಾಣ ಎಂದು ತಿಳಿಸಿದಾಗ ಇವನ ಅಂಗ ಶೋಧನೆ ಮಾಡಲು ಅವನ ಅಧೀನದಿಂದ ನಗದು ಹಣ 100/-ರೂ ಸಿಕ್ಕ್ಕಿರುತ್ತವೆ 6]ಆರನೆಯವನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ವೇಂಕಟ ತಂದೆ ಭೀಕಾಜಿ ಗಜರೆ ವಯಸ್ಸು//45 ವರ್ಷ ಜಾತಿ//ಎಸ್.ಸಿ ದಲಿತ //ಆಟೋ ಡ್ರೈವರ್ ಸಾ// ಭೀಮನಗರ ಬಸವಕಲ್ಯಾಣ ಎಂದು ತಿಳಿಸಿದಾಗ ಇವನ ಅಂಗ ಶೋಧನೆ ಮಾಡಲು ಅವನ ಅಧೀನದಿಂದ ನಗದು ಹಣ 400/-ರೂ ಸಿಕ್ಕ್ಕಿರುತ್ತವೆ, 7]ಏಳನೆಯವನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ರಾಜ ತಂದೆ ಪ್ರಲ್ಹಾದ ಗೊಡಬೊಲೆ ವಯಸ್ಸು//32 ವರ್ಷ ಜಾತಿ//ಎಸ್.ಸಿ ದಲಿತ //ಕೂಲಿಕೆಲಸ ಸಾ// ಭೀಮನಗರ ಬಸವಕಲ್ಯಾಣ ಎಂದು ತಿಳಿಸಿದಾಗ ಇವನ ಅಂಗ ಶೋಧನೆ ಮಾಡಲು ಅವನ ಅಧೀನದಿಂದ ನಗದು ಹಣ 600/-ರೂ ಸಿಕ್ಕ್ಕಿರುತ್ತವೆ, ಹಾಗು ಅಪರಾಧ ಸ್ಥಳದಲ್ಲಿ ಪರಿಶಿಲಿಸಿ ನೋಡಲು ನಗದು ಹಣ 2980/-ರೂ ಮತ್ತು 52 ಇಸ್ಪಿಟ್ಎಲೆಗಳು ಸಿಕ್ಕಿರುತ್ತವೆ. ಸದರಿ ಅಪರಾಧ ಸ್ಥಳದಲ್ಲಿ ಸಿಕ್ಕಿರುವ ಮತ್ತು ಆರೋಪಿತರ ಆಧೀನದಲ್ಲಿ ಸಿಕ್ಕಿರುವ ಒಟ್ಟು ನಗದು ಹಣ 5080/-ರೂ ಮತ್ತು 52ಇಸ್ಪಿಟ್ ಎಲೆಗಳು ಒಂದು ಕಾಗದದ ಕವರದಲ್ಲಿ ಹಾಕಿ ಅದನ್ನು ಪ್ಯಾಕ್ ಮಾಡಿ  ಜಪ್ತಿ ಮಾಡಿ ಆರೋಪಿತರನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಬಂದು ಪ್ರಕರಣ ದಾಖಲಿಸಿ ತನಿಖೆ ಕೈಕಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 158/2020 ಕಲಂ 87 ಕೆ.ಪಿ ಕಾಯ್ದೆ :-
ದಿನಾಂಕ 19/07/2020 ರಂದು 10:00 ಗಂಟೆಗೆ ಠಾಣೆಯಲ್ಲಿದ್ದಾಗ ಭಾಲ್ಕಿಯ ಸರಾಫ ಬಜಾರದಲ್ಲಿರುವ ಆಕಾಶ ರಿಕ್ಕೆ ರವರ ಅಂಗಡಿಯ ಹತ್ತಿರ ಕೆಲವು ಜನರು ಸಾರ್ವಜನೀಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು ಹಣವನ್ನು ಪಣಕ್ಕೆ ಇಟ್ಟು ಪರೆಲ ಎಂಬ ನಸೀಬಿನ ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಸದರಿ ವಿಷಯ ಮಾನ್ಯ ಪೊಲೀಸ್ ಉಪಾಧೀಕ್ಷಕರು ಭಾಲ್ಕಿ ಮತ್ತು ಪೊಲೀಸ್ ನಿರೀಕ್ಷಕರು ಭಾಲ್ಕಿ ನಗರ ಪೊಲೀಸ್ ಠಾಣೆ ರವರಿಗೆ ತಿಳಿಸಿ ಅವರ ಮಾರ್ಗದರ್ಶನದಲ್ಲಿ ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಭಾಲ್ಕಿಯ ಸರಾಫ ಬಜಾರದಲ್ಲಿ ಹೋಗಿ ಒಂದು ಅಂಗಡಿಯ ಮರೆಯಲ್ಲಿ ನಿಂತು ನೋಡಲು ಕೆಲವು ಜನರು ಆಕಾಶ ರಿಕ್ಕೆ ರವರ ಅಂಗಡಿಯ ಮುಂದೆ ಸಾರ್ವಜನೀಕ ಖುಲ್ಲಾ ಜಾಗೆಯಲ್ಲಿ ಕುಳಿತು ಹಣವನ್ನು ಪಣಕ್ಕೆ ಇಟ್ಟು ಪರೆಲ ಎಂಬ ನಶೀಬಿನ ಇಸ್ಪೆಟ ಜೂಜಾಟ ಆಡುತ್ತಿರುವದನ್ನು ನೋಡಿ 10:45 ಗಂಟೆಗೆ ಪಂಚರ ಸಮಕ್ಷಮ ಸದರಿಯವರ ಮೇಲೆ ದಾಳಿ ಮಾಡಿ ಹಿಡಿದು ಒಬ್ಬೋಬ್ಬರ ಹೆಸರು ಮತ್ತು ವಿಳಾಸ ವಿಚಾರಿಸಲು ತಮ್ಮ ಹೆಸರು 1] ಶಾಂತು ತಂದೆ ಶಂಕರ ವಂಕೆ ವಯ:35 ವರ್ಷ ಜಾತಿ:ಲಿಂಗಾಯತ ಉ:ವ್ಯಾಪಾರ ಸಾ: ಹಳೆ ಭಾಲ್ಕಿ ಅಂತಾ ತಿಳಿಸಿದ್ದು ಸದರಿಯವನ ಕೈಯಲ್ಲಿ 3 ಇಸ್ಪೇಟ ಎಲೆಗಳು 250 ರೂ ಇದ್ದವು 2] ದತಾತ್ರಿ ತಂದೆ ಸುರೇಶ ಪಾಂಡ್ರೆ ವಯ:25 ವರ್ಷ ಜಾತಿ:ಮರಾಠಾ ಉ:ಹೂವಿನ ವ್ಯಾಪಾರ ಸಾ:ಕೆ.ಹೆಚ್.ಬಿ ಕಾಲೋನಿ ಭಾಲ್ಕಿ ಅಂತಾ ತಿಳಿಸಿದ್ದು ಸದರಿಯವನ ಕೈಯಲ್ಲಿ 3 ಇಸ್ಪೇಟ ಎಲೆಗಳು 200 ರೂ ಇದ್ದವು 3] ರಾಹುಲ ತಂದೆ ಉಮೇಶ ಸುಂಟೆ ವಯ:26 ವರ್ಷ ಜಾತಿ:ಲಿಂಗಾಯತ ಉ:ವ್ಯಾಪಾರ ಸಾ:ಹಳೆ ಭಾಲ್ಕಿ ಅಂತಾ ತಿಳಿಸಿದ್ದು ಸದರಿಯವನ ಕೈಯಲ್ಲಿ 3 ಇಸ್ಪೇಟ ಎಲೆಗಳು 220 ರೂ ಇದ್ದವು 4] ರಾಜಕುಮಾರ ತಂದೆ ಶಾಮರಾವ ರಾಠೋಡ ವಯ:26 ವರ್ಷ ಜಾತಿ:ಲಮಾಣಿ ಉ:ವಿಧ್ಯಾಭ್ಯಾಸ ಸಾ:ಹಳೆ ಭಾಲ್ಕಿ ಅಂತಾ ತಿಳಿಸಿದ್ದು ಸದರಿಯವನ ಕೈಯಲ್ಲಿ 3 ಇಸ್ಪೇಟ ಎಲೆಗಳು 300 ರೂ ಇದ್ದವು 5] ಸಚೀನ ತಂದೆ ವಿಠಲರಾವ ನಿಟ್ಟುರೆ ವಯ:26 ವರ್ಷ ಜಾತಿ:ಮಾದಿಗ ಉ: ವಿಧ್ಯಾಭ್ಯಾಸ ಸಾ:ಜನತಾ ಕಾಲೋನಿ ಭಾಲ್ಕಿ ಅಂತಾ ತಿಳಿಸಿದ್ದು ಸದರಿಯವನ ಕೈಯಲ್ಲಿ 3 ಇಸ್ಪೇಟ ಎಲೆಗಳು 150 ರೂ ಇದ್ದವು 6] ಶುಭಂ ತಂದೆ ದಿಲೀಪರಾವ ಮಾನೆ ವಯ: 26 ವರ್ಷ ಜಾತಿ:ಮರಾಠಾ ಉ:ವ್ಯಾಪಾರ ಸಾ:ಹಳೆ ಭಾಲ್ಕಿ ಅಂತಾ ತಿಳಿಸಿದ್ದು ಸದರಿಯವನ ಕೈಯಲ್ಲಿ 3 ಇಸ್ಪೇಟ ಎಲೆಗಳು 100 ರೂ ಇದ್ದವು ಎಲ್ಲರ ಮಧ್ಯದಲ್ಲಿ ಜೂಜಾಟದಲ್ಲಿ ತೋಡಗಿಸಿದ ನಗದು ಹಣ 600 ರೂ ಹಾಗೂ ಮತ್ತು 34 ಇಸ್ಪೆಟ ಎಲೆಗಳು ಇದ್ದವು ಸದರಿಯವರಿಗೆ ಪುನಃ ವಿಚಾರಣೆ ಮಾಡಲು ತಾವೆಲ್ಲರೂ ಹಣವನ್ನು ಪಣಕ್ಕೆ ಇಟ್ಟು ಪರೆಲ ಎಂಬ ನಶಿಬಿನ ಇಸ್ಪೇಟ ಜೂಜಾಟ ಆಡುತಿದ್ದ ಬಗ್ಗೆ ಒಪ್ಪಿಕೊಂಡಿದರಿಂದ ಸದರಿಯವರು ಇಸ್ಪೆಟ ಜೂಜಾಟದಲ್ಲಿ ತೋಡಗಿಸಿದ ಒಟ್ಟು ನಗದು ಹಣ 1820 ರೂ ಹಾಗು 52 ಇಸ್ಪೇಟ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿ ಮುದ್ದೆಮಾಲು ಮತ್ತು ಆರೋಪಿತರಿಗೆ ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
 ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 159/2020 ಕಲಂ 87 ಕೆ.ಪಿ ಕಾಯ್ದೆ :-
ದಿನಾಂಕ 19/07/2020 ರಂದು 12:45 ಗಂಟೆಗೆ ಪಿ.ಎಸ್.ಐ(ಕಾ.ಸು)  ಠಾಣೆಯಲ್ಲಿದ್ದಾಗ ಭಾಲ್ಕಿಯ ಸರಾಫ ಬಜಾರದಲ್ಲಿರುವ ಆಕಾಶ ರಿಕ್ಕೆ ರವರ ಅಂಗಡಿಯ ಹತ್ತಿರ ಕೆಲವು ಜನರು ಸಾರ್ವಜನೀಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು ಹಣವನ್ನು ಪಣಕ್ಕೆ ಇಟ್ಟು ಪರೆಲ ಎಂಬ ನಸೀಬಿನ ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಸದರಿ ವಿಷಯ ಮಾನ್ಯ ಪೊಲೀಸ್ ಉಪಾಧೀಕ್ಷಕರು ಭಾಲ್ಕಿ ಮತ್ತು ಪೊಲೀಸ್ ನಿರೀಕ್ಷಕರು ಭಾಲ್ಕಿ ನಗರ ಪೊಲೀಸ್ ಠಾಣೆ ರವರಿಗೆ ತಿಳಿಸಿ ಅವರ ಮಾರ್ಗದರ್ಶನದಲ್ಲಿ ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಭಾಲ್ಕಿಯ ಸರಾಫ ಬಜಾರದಲ್ಲಿ ಹೋಗಿ ಒಂದು ಅಂಗಡಿಯ ಮರೆಯಲ್ಲಿ ನಿಂತು ನೋಡಲು ಕೆಲವು ಜನರು ಆಕಾಶ ರಿಕ್ಕೆ ರವರ ಅಂಗಡಿಯ ಮುಂದೆ ಸಾರ್ವಜನೀಕ ಖುಲ್ಲಾ ಜಾಗೆಯಲ್ಲಿ ಕುಳಿತು ಹಣವನ್ನು ಪಣಕ್ಕೆ ಇಟ್ಟು ಪರೆಲ ಎಂಬ ನಶೀಬಿನ ಇಸ್ಪೆಟ ಜೂಜಾಟ ಆಡುತ್ತಿರುವದನ್ನು ನೋಡಿ 13:30 ಗಂಟೆಗೆ ಪಂಚರ ಸಮಕ್ಷಮ ಸದರಿಯವರ ಮೇಲೆ ದಾಳಿ ಮಾಡಿ ಹಿಡಿದು ಒಬ್ಬೋಬ್ಬರ ಹೆಸರು ಮತ್ತು ವಿಳಾಸ ವಿಚಾರಿಸಲು ತಮ್ಮ ಹೆಸರು 1] ಮುಖೇಶ ತಂದೆ ಈಶ್ವರ ಜಾನೆ ವಯ: 24 ವರ್ಷ ಜಾತಿ ಲಿಂಗಾಯತ ಉ: ಭಾಮಡೆ ಕೆಲಸ ಸಾ: ಗಣೇಶ ನಗರ ಲೇಕ್ಚರ ಕಾಲೋನಿ ಭಾಲ್ಕಿ ಅಂತಾ ತಿಳಿಸಿದ್ದು ಸದರಿಯವನ ಕೈಯಲ್ಲಿ 3 ಇಸ್ಪೇಟ ಎಲೆಗಳು 550 ರೂ ಇದ್ದವು 2] ವೀಶಾಲ ತಂದೆ ಈಶ್ವರ ಭಾಲ್ಕೆ ವಯ: 24 ವರ್ಷ ಜಾತಿ: ಮರಾಠಾ ಉ: ವಿಧ್ಯಾಥರ್ಿ ಸಾ: ಖಂಡ್ರೆ ಗಲ್ಲಿ ಭಾಲ್ಕಿ ಅಂತಾ ತಿಳಿಸಿದ್ದು ಸದರಿಯವನ ಕೈಯಲ್ಲಿ 3 ಇಸ್ಪೇಟ ಎಲೆಗಳು 400 ರೂ ಇದ್ದವು 3] ಅಭಯ ತಂದೆ ಲಕ್ಷ್ಮಣ ಗುಪ್ತಾ ವಯ: 20 ವರ್ಷ ಜಾತಿ : ಎಸಿ ಹೋಲಿಯಾ ಉ: ವಿಧ್ಯಾಭ್ಯಾಸ ಸಾ: ಕೆ.ಹೆಚ್.ಬಿ ಕಾಲೋನಿ ಭಾಲ್ಕಿ ಅಂತಾ ತಿಳಿಸಿದ್ದು ಸದರಿಯವನ ಕೈಯಲ್ಲಿ 3 ಇಸ್ಪೇಟ ಎಲೆಗಳು 300 ರೂ ಇದ್ದವು 4] ಕ್ರೀಷ್ಣಾ ತಂದೆ ಗೋವಿಂದರಾವ ನಿರಗುಡೆ ವಯ: 22 ವರ್ಷ ಜಾತಿ: ಮರಾಠಾ ಉ: ಗುತ್ತೆದಾರ ಸಾ: ಕೆ.ಹೆಚ್.ಬಿ ಕಾಲೋನಿ ಭಾಲ್ಕಿ ಅಂತಾ ತಿಳಿಸಿದ್ದು ಸದರಿಯವನ ಕೈಯಲ್ಲಿ 3 ಇಸ್ಪೇಟ ಎಲೆಗಳು 250 ರೂ ಇದ್ದವು 5] ಅಕ್ಷಯ ತಂದೆ ಮೌನಪ್ಪಾ ಪಾಂಚಾಳ ವಯ: 23 ವರ್ಷ ಜಾತಿ: ಬಡಿಗೇರ ಉ: ವ್ಯಾಪಾರ ಸಾ: ಬಾಲಾಜಿ ನಗರ ಭಾಲ್ಕಿ ಅಂತಾ ತಿಳಿಸಿದ್ದು ಸದರಿಯವನ ಕೈಯಲ್ಲಿ 3 ಇಸ್ಪೇಟ ಎಲೆಗಳು 250 ರೂ ಇದ್ದವು 280 6] ರವಿ ತಂದೆ ಶಿವರಾಜ ಭೂರೆ ವಯ: 32 ವರ್ಷ ಜಾತಿ: ಲಿಂಗಾಯತ ಉ: ವ್ಯಾಪಾರ ಸಾ: ಪ್ರಕಾಶ ಖಂಡ್ರೆ ಗಲ್ಲಿ ಭಾಲ್ಕಿ ಅಂತಾ ತಿಳಿಸಿದ್ದು ಸದರಿಯವನ ಕೈಯಲ್ಲಿ 3 ಇಸ್ಪೇಟ ಎಲೆಗಳು 600 ರೂ ಇದ್ದವು 7] ಅತಿಷ ತಂದೆ ತಾನಾಜಿ ಗೀರಿ ವಯ: 26 ವರ್ಷ ಜಾತಿ ಗೋಸಾಯಿ ಉ: ವ್ಯಾಪಾರ ಸಾ: ಲೇಕ್ಚರ ಕಾಲೋನಿ ಭಾಲ್ಕಿ ಅಂತಾ ತಿಳಿಸಿದ್ದು ಸದರಿಯವನ ಕೈಯಲ್ಲಿ 3 ಇಸ್ಪೇಟ ಎಲೆಗಳು 350 ರೂ ಇದ್ದವು 8] ಹರೀಶ ತಂದೆ ಓಂಪ್ರಕಾಶ ಕಟ್ಟಾಳೆ ವಯ: 32 ವರ್ಷ ಜಾತಿ: ಲೀಂಗಾಯತ ಉ: ಕೂಲಿ ಕೆಲಸ ಸಾ: ಜನತಾ ಕಾಲೋನಿ ಭಾಲ್ಕಿ ಅಂತಾ ತಿಳಿಸಿದ್ದು ಸದರಿಯವನ ಕೈಯಲ್ಲಿ 3 ಇಸ್ಪೇಟ ಎಲೆಗಳು 200 ರೂ ಇದ್ದವು 9] ಚೇತನ ತಂದೆ ಬಸ್ವರಾಜ ಮೇತ್ರೆ ವಯ: 24 ವರ್ಷ ಜಾತಿ: ಕುರುಬ ಉ: ವಿಧ್ಯಾಭ್ಯಾಸ ಸಾ: ಭಾತಂಬ್ರಾ ಅಂತಾ ತಿಳಿಸಿದ್ದು ಸದರಿಯವನ ಕೈಯಲ್ಲಿ 3 ಇಸ್ಪೇಟ ಎಲೆಗಳು 450 ರೂ ಇದ್ದವು ಹಾಗೂ ಎಲ್ಲರ ಮಧ್ಯದಲ್ಲಿ ಜೂಜಾಟದಲ್ಲಿ ತೋಡಗಿಸಿದ ನಗದು ಹಣ 3950 ರೂ ಹಾಗೂ ಮತ್ತು 25 ಇಸ್ಪೆಟ ಎಲೆಗಳು ಇದ್ದವು ಸದರಿಯವರಿಗೆ ಪುನಃ ವಿಚಾರಣೆ ಮಾಡಲು ತಾವೆಲ್ಲರೂ ಹಣವನ್ನು ಪಣಕ್ಕೆ ಇಟ್ಟು ಪರೆಲ ಎಂಬ ನಶಿಬಿನ ಇಸ್ಪೇಟ ಜೂಜಾಟ ಆಡುತಿದ್ದ ಬಗ್ಗೆ ಒಪ್ಪಿಕೊಂಡಿದರಿಂದ ಸದರಿಯವರು ಇಸ್ಪೆಟ ಜೂಜಾಟದಲ್ಲಿ ತೋಡಗಿಸಿದ ಒಟ್ಟು ನಗದು ಹಣ 7330 ರೂ ಹಾಗು 52 ಇಸ್ಪೇಟ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿ ಮುದ್ದೆಮಾಲು ಮತ್ತು ಆರೋಪಿತರಿಗೆ ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.