ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 18-07-2021
ಜನವಾಡಾ ಪೊಲಿಸ್ ಠಾಣೆ ಅಪರಾಧ ಸಂ. 46/2021, ಕಲಂ. 279, 304(ಎ) ಐಪಿಸಿ :-
ದಿನಾಂಕ 16-07-2021 ರಂದು ಫಿರ್ಯಾದಿ ವಿಜಯಲಕ್ಷ್ಮೀ ಗಂಡ ನಾಗಗೊಂಡ ಗೋರನಾಳಕಿರ ಸಾ: ನವಲಾಸಪೂರ ಗ್ರಾಮ, ತಾ: & ಜಿ: ಬೀದರ ರವರ ಗಂಡನಾದ ನಾಗಗೊಂಡ ತಂದೆ ಕಾಶಪ್ಪಾ ಗೊರನಾಳಕರ ವಯ: 32 ವರ್ಷ ರವರು ತಮ್ಮ ಹೀರೊ ಸ್ಪ್ಲೆಂಡರ್ ಪ್ಲಸ್ ಮೋಟಾರ್ ನಂ. ಕೆಎ-38/ಎಕ್ಸ್-0671 ನೇದರ ಮೇಲೆ ಅಲಿಯಂಬರ ಗ್ರಾಮದಿಂದ ಜನವಾಡಾ ಮಾರ್ಗವಾಗಿ ನವಲಾಸಪೂರ ಗ್ರಾಮಕ್ಕೆ ಬರುತ್ತಿರುವಾಗ ತನ್ನ ಮೋಟಾರ್ ಸೈಕಲನ್ನು ಅತಿವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ವೇಗದಲ್ಲಿದ್ದ ತನ್ನ ಮೋಟಾರ್ ಸೈಕಲನೊಂದಿಗೆ ಆಯತಪ್ಪಿ ಬಿದ್ದು ಗಾಯಗೊಡು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 17-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 67/2021, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 17-07-2021 ರಂದು ಫಿರ್ಯಾದಿ ವಿಠಲ ತಂದೆ ವಿಶ್ವನಾಥ ಬುರ್ಜಿನ ವಯ: 21 ವರ್ಷ, ಜಾತಿ: ಕಬ್ಬಲಿಗ, ಸಾ: ವಿಠಲಪುರ ಗ್ರಾಮ, ತಾ: ಚಿಟಗುಪ್ಪಾ, ಜಿ: ಬೀದರ ರವರು ಖಾಸಗಿ ಕೆಲಸದ ಪ್ರಯುಕ್ತ ತನ್ನ ಗೆಳೆಯನಾದ ಸಚಿನ ತಂದೆ ನಾಗಪ್ಪಾ ಮುಚಳಂಬ ವಯ: 18 ವರ್ಷ, ಸಾ: ಪೊಲಕಪಳ್ಳಿ ಗ್ರಾಮ ಇಬ್ಬರೂ ಕೂಡಿ ಸಚಿನ ಇತನ ಮೋಟರ ಸೈಕಲ್ ನಂ. ಕೆಎ-39/ಎಸ್-0631 ನೇದರ ಮೇಲೆ ಮನ್ನಾಏಖೇಳ್ಳಿ ಗ್ರಾಮಕ್ಕೆ ಬಂದು ಕೆಲಸ ಮುಗಿಸಿಕೊಂಡು ಮರಳಿ ತಮ್ಮೂರ ಕಡೆಗೆ ಹಳೆಯ ಎನ್.ಹೆಚ್-9 ರಸ್ತೆಯ ಮುಖಾಂತರ ಹೋಗುತ್ತಿರುವಾಗ ಮನ್ನಾಏಖೇಳ್ಳಿಯ ಜ್ಯೋತಿ ವೈನಶಾಪ್ ಮುಂದೆ ಎದುರಿನಿಂದ ಅಂದರೆ ಮೀನಕೆರಾ ಕ್ರಾಸ್ ಕಡೆಯಿಂದ ಬರುತ್ತಿದ್ದ ಕಾರ ನಂ. ಎಮ್.ಹೆಚ್-43/ಎ.ಎಫ್-5919 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸುತ್ತಾ ಬಂದು ಫಿರ್ಯಾದಿ ಕುಳಿತ ಮೋಟರ ಸೈಕಲ್ಗೆ ಎದುರಗಡೆಯಿಂದ ಡಿಕ್ಕಿ ಮಾಡಿ ತನ್ನ ವಾಹನ ನಿಲ್ಲಿಸದೇ ವಾಹನ ಸಮೇತ ಓಡಿ ಹೋಗಿರುತ್ತಾನೆ. ಸದರಿ ಡಿಕ್ಕಿಯ ಪರಿಣಾಮ ಸಚಿನ ಇತನಿಗೆ ಎಡಗಡೆ ಕಾಲಿಗೆ ತೊಡೆಯ ಹತ್ತಿರ ಭಾರಿ ಗುಪ್ತಗಾಯ, ತುಟಿಯ ಒಳಗೆ ರಕ್ತಗಾಯವಾಗಿರುತ್ತದೆ ಹಾಗೂ ಫಿರ್ಯಾದಿಗೆ ಯಾವುದೇ ರೀತಿಯ ಗಾಯಗಳಾಗಿರುವುದಿಲ್ಲಾ, ನಂತರ ಅಲ್ಲಿಯ ವೈನ್ ಶಾಪ ಮುಂದೆ ನಿಂತ ಶ್ರೀಹರಿ ತಂದೆ ಚಂದ್ರಶೇಖರ ಬೇಳಕೆರಾ ರವರು ಘಟನೆ ನೋಡಿ ಓಡುತ್ತಾ ಬಂದು 108 ಅಂಬುಲೇನ್ಸಗೆ ಕರೆಯಿಸಿ ಸಚಿನ ಇತನಿಗೆ ಚಿಕಿತ್ಸೆ ಕುರಿತು ಮನ್ನಾಏಖೇಳ್ಳಿ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ ನಗರ ಪೊಲೀಸ ಠಾಣೆ ಅಪರಾಧ ಸಂ. 51/2021, ಕಲಂ. 379 ಐಪಿಸಿ :-
ದಿನಾಂಕ 08-06-2021 ರಂದು
1330 ಗಂಟೆಗೆ ಫಿರ್ಯಾದಿ ಕಿರಣ ಕುಮಾರ ತಂದೆ ಸಂಗಮನಾಥ ರಾವ ವಯ: 49 ವರ್ಷ, ಜಾತಿ: ಬ್ರಾಹ್ಮಣ, ಸಾ: ಮನೆ ನಂ 1-3-33 ಫತ್ತೆ ದರ್ವಾಜಾ ಪನ್ಸಾಲ್ ತಾಲೀಮ ಬೀದರ ರವರು ತಮ್ಮ ಮನೆಯಿಂದ ತನ್ನ ಗೆಳೆಯನಾದ ಗೋಪಾಲ ತಂದೆ ರಾಮಚಂದ್ರ ಹಿಪ್ಪರಗೆ ವಯ: 50 ವರ್ಷ, ಜಾತಿ: ಬ್ರಾಹ್ಮಣ, ಸಾ: ಮನೆ ನಂ 2-4-70, ಹೋಸ ನಂ. 2-4-81 ಬಾರ್ವಚಿ ಗಲ್ಲಿ ಬೀದರ ರವರ ಮನೆಗೆ ಮಾತಾಡಿ ಬರಲು ತನ್ನ ಹೊಂಡಾ ಡ್ರೀಮ್ ಮೊಟಾರ ಸೈಕಲ್ ನಂ. ಕೆಎ-38/ಕ್ಯೂ-5272, ಚಾಸಿಸ್ ನಂ. ME4JC623GD8032326, ಇಂಜಿನ್
ನಂ. JC62E81032314, ಮಾದರಿ 2013 ಹಾಗೂ ಅ.ಕಿ 30,000/- ರೂ. ನೇದರ ಮೇಲೆ ಹೋಗಿ ಅವರ ಮನೆಯ ಎದುರುಗಡೆ ಬಾವರ್ಚಿ ಗಲ್ಲಿ ರಸ್ತೆಯ ಬದಿಯಲ್ಲಿ ಸದರಿ ಮೊಟಾರ ಸೈಕಲ್ ನಿಲ್ಲಿಸಿ ಸೈಡ್ ಲಾಕ್ ಹಾಕಿ, ಅವರ ಮನೆಗೆ ಹೋಗಿ ಮಾತಾಡಿಸಿಕೊಂಡು ಮರಳಿ 1530 ಗಂಟೆಗೆ ಮನೆ ಹೊರಗಡೆ ಬಂದು ನೋಡಲು ರಸ್ತೆಯ ಬದಿಯಲ್ಲಿ ನಿಲ್ಲಿಸಿದ ತನ್ನ ಮೊಟಾರ ಸೈಕಲ್ ಇರಲಿಲ್ಲ, ಯಾರೋ ಅಪರಿಚಿತ ಕಳ್ಳರು ಸದರಿ ಮೋಟಾರ್ ಸೈಕಲನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ
ಮೇರೆಗೆ ದಿನಾಂಕ 17-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.