Police Bhavan Kalaburagi

Police Bhavan Kalaburagi

Saturday, August 28, 2021

BIDAR DISTRICT DAILY CRIME UPDATE 28-08-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 28-08-2021

 

ಮುಡಬಿ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 06/2021, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ಶಶಿಕಲಾ ಗಂಡ ಅನೀಲ ಪಾಲಾಡಿ ವಯ: 30 ವರ್ಷ, ಜಾತಿ: ಗೊಲ್ಲ, ಸಾ: ಮುಡಬಿ ವಾಡಿ ರವರ ಗಂಡನಿಗೆ ಹೊಟ್ಟೆಯಲ್ಲಿ ಗಡ್ಡಿಯಾಗಿ ಆಸ್ಪತ್ರೆಗೆ ತೋರಿಸಿ ಶಸ್ತ್ರಚಿಕಿತ್ಸೆ ಮಾಡಿಸಿದ್ದು ಅದಕ್ಕೆ ಬಹಳ ಹಣ ಖರ್ಚಾಗಿ ಅಲ್ಲಿ ಇಲ್ಲಿ ಕೈಸಾಲ ಮಾಡಿರುತ್ತಾರೆ, ಅದಲ್ಲದೆ ಫಿರ್ಯಾದಿಗೆ 2-3 ವರ್ಷಗಳಿಂದ ಆರೋಗ್ಯ ಸರಿಇರಲಾರದ ಕಾರಣ ಫಿರ್ಯಾದಿಯು ಅಲ್ಲಿ ಇಲ್ಲಿ ಆಸ್ಪತ್ರೆಗೆ ತೋರಿಸಿಕೊಳ್ಳುತ್ತಿದ್ದು ಇಲ್ಲಿಯವರೆಗೆ ಫಿರ್ಯಾದಿಯ ಆಸ್ಪತ್ರೆಗೆ ಖರ್ಚು ಸುಮಾರು 2-3 ಲಕ್ಷ ಆಗಿದ್ದು ಆದರೂ ಇನ್ನೂ ಆರಾಮ ಆಗಿರುವುದಿಲ್ಲ, ಹೀಗಾಗಿ ಗಂಡ ತನ್ನ ಆಸ್ಪತ್ರೆ ಖರ್ಚು ಸಾಲವು ತೀರಿಲ್ಲ ಮತ್ತು ಫಿರ್ಯಾದಿಯ ಆಸ್ಪತ್ರೆ ಖರ್ಚು ಹೊಂದಿಸಲಾಗದೆ ಅಲ್ಲಿ ಇಲ್ಲಿ ಬಾಕಿ ಮಾಡಿ ಮುಂದೆ ಜೀವನ ಹೇಗೆ ಮಾಡುವುದು ಅಂತಾ ಬಹಳ ಚಿಂತೆ ಮಾಡುತ್ತಿದ್ದರು, ಹೀಗಿರುವಾಗ ದಿನಾಂಕ 26-08-2021 ರಂದು ಫಿರ್ಯಾದಿಯವರ ಗಂಡನಾದ ಅನೀಲ ತಂದೆ ಶರಣಪ್ಪ ಪಾಲಾಡಿ ವಯ: 35 ವರ್ಷ ರವರು ಆಸ್ಪತ್ರೆ ಖರ್ಚಿನಿಂದ ಬೆಸತ್ತು ಜೀವನದಲ್ಲಿ ಜಿಗುಪ್ಸೆಗೊಂಡು ಮುಡಬಿ ವಾಡಿ ಶಿವಾರದಲ್ಲಿ ಹತ್ಯಾಳ ರೋಡಿಗೆ ಸಮೀಪ ಇರುವ ಗುಂಡಪ್ಪ ತಂದೆ ರಾಮಣ್ಣ ಪಾಲಾಡಿ ಇವರ ಹೊಲದ ಬಂದರಿಗೆ ಇರುವ ಬೇವಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ, ತನ್ನ ಗಂಡನ ಸಾವಿನಲ್ಲಿ ಯಾವುದೆ ರೀತಿಯ ಸಂಶಯ ಇಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 27-08-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 84/2021, ಕಲಂ. 394 ಐಪಿಸಿ :-

ಫಿರ್ಯಾದಿ ವನಮಾಲಾ ಗಂಡ ಜಗನ್ನಾಥ ಗಂದೆವಾರ ವಯ: 65 ವರ್ಷ, ಜಾತಿ: ಕೊಮಟಿ, ಸಾ: ಕೊಸಂ ರವರ ಅಕ್ಕ ನಿಲಾವತಿ ಗಂಡ ಲಕ್ಷ್ಮಣ ಸಾ: ಕೀನವಟ, ಜಿ: ನಾಂದೇಡ್ ಇವರಿಗೆ ಆರೋಗ್ಯ ಸರಿ ಇರಲಾದರದ ಕಾರಣ ಚಿಕಿತ್ಸೆ ಕುರಿತು ನಾಂದೇಡದ ವಿಷ್ಣುಪೂರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು ಆಕೆಗೆ ಮಾತನಾಡಲು ಫಿರ್ಯಾದಿಯು ದಿನಾಂಕ 25-08-2021 ರಂದು ನಾಂದೇಡಗೆ ಹೋಗಿ ಆಸ್ಪತ್ರೆಯಲ್ಲಿ ತನ್ನ ಅಕ್ಕಳಿಗೆ ಭೇಟಿಯಾಗಿ ಮರಳಿ ಕೊಸಂ ಗ್ರಾಮಕ್ಕೆ ಬರಲು ದಿನಾಂಕ 26-08-2021 ರಂದು 1600 ಗಂಟೆಗೆ ನಾಂದೇಡದಿಂದ ನಾಂದೇಡ-ಬೀದರ ಬಸ್ಸಿನಲ್ಲಿ ಕುಳಿತುಕೊಂಡು ಹಲಬರ್ಗಾ ಗ್ರಾಮದಲ್ಲಿ ಬಸ್ಸಿನಿಂದ ಇಳಿದು ಕೊಸಂ ಗ್ರಾಮಕ್ಕೆ ಹೋಗಲು ಹಲಬರ್ಗಾ ಬಸ ನಿಲ್ದಾಣದಿಂದ ಆಟೊ ನಂ. ಕೆಎ-38/8536 ನೇದರಲ್ಲಿ ಕುಳಿತುಕೊಂಡು ತಮ್ಮೂರಿನ ಹೋಗುವಾಗ ಆಟೋದಲ್ಲಿ ಫಿರ್ಯಾದಿಯು ಒಬ್ಬರೆ ಇದ್ದು, ಸದರಿ ಆಟೋ ಚಾಲಕನು ಹಾಲಹಿಪ್ಪರ್ಗಾ ಗ್ರಾಮದ ಹತ್ತಿರ ಹೋಗಿ ಕೊಸಂ ಗ್ರಾಮದ ಕಡೆಗೆ ಹೊಗುವ ರಸ್ತೆ ಬಿಟ್ಟು ಜೈನಾಪೂರ-ಬಾಳೂರ ಗ್ರಾಮದ ಕಡೆಗೆ ಹೋಗುವ ರಸ್ತೆಯಲ್ಲಿ ತಿರುಗಿಸಿಕೊಂಡಾಗ ಫಿರ್ಯಾದಿಯು ಆತನಿಗೆ ನಮ್ಮೂರ ದಾರಿ ಬಿಟ್ಟು ಬೇರೆ ಗ್ರಾಮಕ್ಕೆ ಯಾಕೆ ತೆಗೆದುಕೊಂಡು ಹೊಗುತ್ತಿದ್ದಿ ಅಂತ ಕೇಳಿದಾಗ ಹಾಲಹಿಪ್ಪರ್ಗಾ ಕಡೆಯಿಂದ ರಸ್ತೆ ಸರಿ ಇಲ್ಲಾ ಕಡೆಯಿಂದ ಸರಿ ಇರುತ್ತದೆ ಅಂತ ಹೇಳಿ ಆಟೋವನ್ನು ಜೈನಾಪೂರ-ಬಾಳೂರ ಗ್ರಾಮದ ಕಡೆಗೆ ಚಲಾಯಿಸಿಕೊಂಡು 2100 ಗಂಟೆ ಸುಮಾರಿಗೆ ಜೈನಾಪೂರ ಗ್ರಾಮ ದಾಟಿ ಸ್ವಲ್ಪ ದೂರದಲ್ಲಿ ಹೋಗಿ ಆಟೋ ನೀಲ್ಲಿಸಿ ಮೂತ್ರ ವಿಸರ್ಜನೆಗೆಂದು ಹೇಳಿ ಆಟೋದಿಂದ ಇಳಿದು ನಂತರ ಫಿರ್ಯಾದಿಗೆ ಆಟೋದಿಂದ ಕೇಳಗೆ ಇಳಿಸಿ ನಿನ್ನ ಹತ್ತಿರ ಇರುವ ಬಂಗಾರ ಮತ್ತು ಹಣ ಕೊಡು ಅಂತ ಹೇಳಿದಾಗ ಫಿರ್ಯಾದಿಯು ಆತನಿಗೆ ನಾನು ನಿನಗೆ ಯಾಕೆ ಕೊಡಬೇಕೆಂದು ಹೇಳಿದಾಗ ಆಟೊ ಚಾಲಕನು ಒತ್ತಾಯದಿಂದ ಫಿರ್ಯಾದಿಯ ಕೊರಳಿನಲ್ಲಿರುವ 53 ಅಷ್ಟಮಣಿ ಮತ್ತು 5 ದೊಡ್ಡ ಗುಂಡುಗಳು ಹಾಗೂ ಒಂದು ಪದಕ ಇರುವ ಬಂಗಾರದ ಸರವನ್ನು ಕಿತ್ತುಕೊಂಡಿರುತ್ತಾನೆ, ನಂತರ ಫಿರ್ಯಾದಿಯವರ ಕುತ್ತಿಗೆಗೆ ಕೈ ಹಾಕಿ ಇನ್ನೂ ಬಂಗಾರ ಮತ್ತು ಹಣ ಇದ್ದರೆ ಕೊಡು ಅಂತ ಕೇಳುತ್ತಿರುವಾಗ ಅದೇ ಸಮಯಕ್ಕೆ ಬಾಳೂರ ಕಡೆಯಿಂದ ಒಂದು ಮೊಟಾರ ಸೈಕಲ ಬರುತ್ತಿರುವುದನ್ನು ನೋಡಿ ಆಟೋ ಚಾಲಕನು ಫಿರ್ಯಾದಿಗೆ ಅಲ್ಲೇ ಬಿಟ್ಟು ಆಟೋ ಚಲಾಯಿಸಿಕೊಂಡು ಫಿರ್ಯಾದಿಯಿಂದ ಕಿತ್ತುಕೊಂಡ ಬಂಗಾರದ ಸರವನ್ನು ತನ್ನ ಜೊತೆಯಲ್ಲಿ ತೆಗೆದುಕೊಂಡು ಹೋಗಿರುತ್ತಾನೆ, ಆತನು ತೆಗೆದುಕೊಂಡು ಹೋದ ಬಂಗಾರದ ಸರವು ಅಂದಾಜು 7 ಗ್ರಾಂ ಇದ್ದು .ಕಿ 30,000/- ರೂಪಾಯಿ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 27-08-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.