Police Bhavan Kalaburagi

Police Bhavan Kalaburagi

Tuesday, November 26, 2019

BIDAR DISTRICT DAILY CRIME UPDATE 26-11-2019


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 26-11-2019

ಹಳ್ಳಿಖೇಡ (ಬಿ) ಪೊಲೀಸ ಠಾಣೆ ಯು.ಡಿ.ಆರ್ ನಂ. 18/2019, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 25-11-2019 ರಂದು ಫಿರ್ಯಾದಿ ಸಂಜುಕುಮಾರ ತಂದೆ ಕರಬಸಪ್ಪಾ ಗೋರ್ಟೆ ಸಾ: ಹಳ್ಳಿಖೇಡ (ಬಿ) ರವರ ಮಗನಾದ ಅಭಿಷೇಕ ವಯ: 16 ವರ್ಷ ಇತನ ಶಾಲೆಗೆ ರಜೆ ಇರುವುದರಿಂದ ತನ್ನ ಗೆಳೆಯರ ಜೊತೆ ನಾಮದಾಪುರ ವಾಡಿ ಗ್ರಾಮದ ಹತ್ತಿರ ಕೃಷಿ ಹೊಂಡದ ನೀರಿನಲ್ಲಿ ಇಜಾಡಲು ಹೋಗಿ ಆತನಿಗೆ ಮಗನಿಗೆ ಇಜು ಬಾರದೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾನೆ, ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.    

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 22/2019, ಕಲಂ. 174 ಸಿ.ಆರ್.ಪಿ.ಸಿ :-   
ಫಿರ್ಯಾದಿ ಮನೋಹರ ತಂದೆ ಚನ್ನಪ್ಪಾ ಜಾಧವ ವಯ: 60 ವರ್ಷ, ಜಾತಿ: ಕೋರವಾ, ಸಾ: ಈಶ್ವರ ನಗರ ಬಸವಕಲ್ಯಾಣ ರವರ ಎರಡನೆಯ ಮಗನಾದ ರವಿ ಜಾಧವ ಇತನು ಆಳಂದ ತಾಲೂಕಿನ ಸನಗುಂದಿ ಗ್ರಾಮದ ಗೌರಮ್ಮಾ ಎಂಬ ಮಹಿಳೆಯೊಂದಿಗೆ ಮದುವೆಯಾಗಿದ್ದು ಆತನಿಗೆ ಎರಡು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗ ಇರುತ್ತಾನೆ, 3-4 ವರ್ಷದ ಕೆಳಗೆ ಗಂಡ ಹೆಂಡತಿ ನಡುವೆ ಯಾವುದೋ ಕಾರಣಕ್ಕಾಗಿ ಜಗಳವಾಗಿ ಗಂಡನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕೇಸು ಮಾಡಿಸಿ ತನ್ನ ಮೂರು ಮಕ್ಕಳೊಂದಿಗೆ ಗಂಡನಿಗೆ ಬಿಟ್ಟು ತನ್ನ ತವರು ಮನೆಯಲ್ಲಿ ವಾಸವಾಗಿದ್ದು, ಹೆಂಡತಿ ಮತ್ತು ಮಕ್ಕಳು ತನ್ನಿಂದ ದೂರವಾಗಿದ್ದರಿಂದ ಮತ್ತು ಟಿ.ಬಿಯಿಂದ ಬಳಲುತ್ತಿರುವುದರಿಂದ ರವಿ ಜಾಧವ ಇತನು ದಿನಾಲು ರಾಯಿ ಕುಡಿಯಲು ಪ್ರಾರಂಭಿಸಿದನು, ಹೀಗಿರುವಾಗ ದಿನಾಂಕ 25-11-2019 ರಂದು ರವಿ ಜಾಧವ ಇತನು ರಘುನಾಥ ತಂದೆ ಅಣೆಪ್ಪಾ ಮಾನೆ, ಅಂಕುಶ ತಂದೆ ಕಲ್ಲಪ್ಪಾ ಜಾಧವ ಮತ್ತು ದೀಲಿಪ ತಂದೆ ದೇವೆಂದ್ರ ಮಾನೆ ಸಾ: ಖಜೂರಿ, ತಾ: ಆಳಂದ ಇವರೆಲ್ಲರೂ ಕೂಡಿಕೊಂಡು ಬಸವಕಲ್ಯಾಣ ಶಿವಾರದಲ್ಲಿ ಸ್ಮಶಾನ ಹಿಂದುಗಡೆ ಕಾಳಿ ಪಾಟೀಲ್ ರವರ ಬಾವಿ ಹತ್ತಿರ ಸರಾಯಿ ಕುಡಿದು ಊಟ ಮಾಡಿ ಸರಾಯಿ ಕುಡಿದ ನಸೆಯಲ್ಲಿ ರವಿ ಜಾಧವ ಇತನು ತನ್ನ ಹೆಂಡತಿ ಮಕ್ಕಳು ನೆನಪಾಗಿ ಟಿ.ಬಿ ರೋಗದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಒಮ್ಮೆಲೆ ಬೇಸರ ಮಾಡಿಕೊಂಡು ಕಾಳಿ ಪಾಟೀಲ್ ರವರ ಬಾವಿಯಲ್ಲಿ ಜಿಗಿದು ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾನೆ, ಆತನ ಸಾವಿನ ಬಗ್ಗೆ ಯಾರ ಮೇಲೆ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 175/2019, ಕಲಂ. 306 ಜೊತೆ 34 ಐಪಿಸಿ :-
ಫಿರ್ಯಾದಿ ರಾಜೇಶ ತಂದೆ ರಾಮಶೆಟ್ಟಿ ಸಾ: ರೂದನೂರ ರವರ ಮಗನಾದ ಶಾಂತಕುಮಾರ ಇವನಿಗೆ ಕೆಲವು ವ್ಯಕ್ತಿಗಳು ಹಣಕ್ಕಾಗಿ ಕರೆ ಮಾಡಿ ಮಾನಸಿಕ ಹಿಂಸೆ ಕೊಡುತ್ತಿದ್ದರು ಅವನ ಈ ಕಿರುಕುಳ ಕಂಡು ಫಿರ್ಯಾದಿಯು ಸುಮಾರು 8,00,000/- ಲಕ್ಷ ರೂಪಾಯಿ ತನ್ನ ತಮ್ಮನಾದ ಸಂಜು ಇವನಿಂದ ಪಡೆದು ಸದರಿಯವನ ಸಾಲ ಮರುಪಾವತಿ ಮಾಡಿದ್ದು ಇರುತ್ತದೆ, ಆದರು ಸಹ ಕೆಲವರು ಇನ್ನೂ ಹಣ ಬೇಕು ಎಂದು ಮಗನಿಗೆ ಪುನಃ ಪುನಃ ಕಿರುಕುಳ ಕೊಡುತ್ತಿದ್ದರು ಅವರ ಕಿರುಕುಳ ತಾಳಲಾರದೆ ದಿನಾಂಕ 25-11-2019 ರಂದು ಶಾಂತಕುಮಾರ ಇತನು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಅವನ ಚಿಕಿತ್ಸೆಗಾಗಿ ಧನ್ನೂರಾ ವೈದ್ಯರಿಗೆ ತೊರಿಸಿ ಅವರು ಪ್ರಥಮ ಚಿಕಿತ್ಸೆ ನೀಡಿ ಸರಕಾರಿ ಆಸ್ಪತ್ರೆ ಬೀದರಗೆ ಕರೆದುಕೊಂಡು ಹೊಗಲು ಸೂಚಿಸಿದ್ದರಿಂದ ಆತನಿಗೆ ಸರಿಕಾರಿ ಆಸ್ಪತ್ರೆ ಬೀದರೆಗೆ ಕರೆತಂದಾಗ ಮಗ ಮರಣ ಹೊಂದಿರುತ್ತಾನೆಂದು ವೈದ್ಯರು ತಿಳಿಸಿದರು, ಆದಾದ ನಂತರ ಮಗನ ದನಗಳ ಕೊಟ್ಟಿಗೆಯಲ್ಲಿ ಚಿಟಿ ಇದೆ ಎಂದು ತಿಳಿದು ತನ್ನ ತಮ್ಮ ಸಂಜುಕುಮಾರ ಇವನಿಗೆ ಸದರಿ ಚಿಟಿ ತರಿಸಲು ರೂದನೂರ ಗ್ರಾಮಕ್ಕೆ ಕಳುಹಿಸಿ ಚಿಟಿಯನ್ನು ತರಿಸಿ ಅದರಲ್ಲಿ ಮಗನ ಮರಣಕ್ಕೆ 1) ಕೈಲಾಸ ಧನ್ನೂರೆ, 2) ಆನಂದ ಕೊಟೆ, 3) ಸಂಗಮೇಶ ಬಕಚೌಡಿ, 4) ಪ್ರಶಾಂತ ಕೊಟೆ 5) ಸತೀಶ ಹೆಚ.ಡಿ.ಎಫ.ಸಿ ಹಾಗು ಇತರರು ಕಾರಣ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 168/2019, ಕಲಂ. 379 ಐಪಿಸಿ :-
ದಿನಾಂಕ 19-11-2019 ರಂದು 2130 ಗಂಟೆಗೆ ಫಿರ್ಯಾದಿ ಬಸವರಾಜ್ ತಂದೆ ಮಲ್ಲಣ್ಣ ಬೋರಾಳೆ, ವಯ: 39 ವರ್ಷ, ಜಾತಿ: ಲಿಂಗಾಯತ, ಸಾ: ಗಡವಂತಿ ರವರು ಧುಮ್ಮನಸೂರ ಗ್ರಾಮದ ತಮ್ಮ ಸಂಬಂಧಿಕರಾದ ಸಂತೋಷ ಪಾಟೀಲ್ ರವರ ಮನೆಯ ಮುಂದೆ ತನ್ನ ದ್ವೀಚಕ್ರ ವಾಹನ ಫ್ಯಾಷನ್ ಪ್ರೋ ಮೋಟಾರ್ ಸೈಕಲ್ ನಂ. ಕೆಎ-39/ಕೆ-1410 ನೇದನ್ನು ನಿಲ್ಲಿಸಿ ಮನೆಗೆ ಹೋಗಿ ಮರುದಿವಸ ದಿನಾಂಕ 20-10-2019 ರಂದು 0700 ಗಂಟೆಗೆ ನೋಡಲು ಸದರಿ ದ್ವಿಚಕ್ರ ವಾಹನ ಇರಲಿಲ್ಲ, ಅದನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಸದರಿ ವಾಹನವನ್ನು ಫಿರ್ಯಾದಿಯು ಎಲ್ಲಾ ಕಡೆ ಹುಡುಕಿದರು ವಾಹನ ಎಲ್ಲಿಯೂ ಸಿಕ್ಕಿರುವುದಿಲ್ಲ, ಕಳುವಾದ ವಾಹನದ ವಿವರ ಅ.ಕಿ 20,000/- ರೂ 1) ಫ್ಯಾಷನ್ ಪ್ರೋ ಮೋಟಾರ್ ಸೈಕಲ್ ನಂ. ಕೆಎ-39/ಕೆ-1410, 2) ಚಾಸೀಸ್ ನಂ. ಎಮ್.ಬಿ.ಎಲ್.ಹೆಚ್.ಎ10.ಇ.ಡಬ್ಲು.ಬಿ.ಇ.ಬಿ.30729, 3) ಇಂಜಿನ ನಂ. ಹೆಚ್.ಎ.10.ಇ.ಡಿ.ಬಿ.ಜಿ.05942 4) ಮಾಡಲ್ 2011, ಹಾಗೂ 5) ಬಣ್ಣ: ಸಿಲ್ವರ ಬಣ್ಣ ಆಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರು ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 25-11-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 198/2019, ಕಲಂ. 454, 457, 380 ಐಪಿಸಿ :-
ದಿನಾಂಕ 22-11-2019 ರಂದು ಫಿರ್ಯಾದಿ ಎಮ.ಡಿ ನಹೀಮ ಮಲೀಕ ತಂದೆ ದಾವೂದ ಮಲೀಕ ವಯ: 52 ವರ್ಷ, ಜಾತಿ: ಮುಸ್ಲಿಂ, ಸಾ: ವಿದ್ಯಾನಗರ ಕಾಲೋನಿ, ಮೈಲೂರ್ ಕ್ರಾಸ್, ಬೀದರ ಸಂಬಂಧಿಕರ ಹತ್ತಿರ ಮಾಹಾರಾಷ್ಟ್ರದಲ್ಲಿ ಕಾರ್ಯಕ್ರಮ ಇದ್ದ ಪ್ರಯುಕ್ರ ಫಿರ್ಯಾದಿಯು ಕುಟುಂಬದ ಸಮೇತ ಮಾಹಾರಾಷ್ಟ್ರದ ಗ್ರಾಮ ದಾರೂರಕ್ಕೆ ಹೋದಾಗ ಫಿರ್ಯಾದಿಯವರ ಮನೆಯ ಮುಂದಿನ ಬಾಗಿಲ ಬೀಗಕ್ಕೆ ಕೆಂಪು ಕಲ್ಲಿನಿಂದ ಹೊಡೆದು ಕೀಲಿ ಮುರಿದು ಯಾರೋ ಅಪರಿಚಿತ ಕಳ್ಳರು ಮನೆಯ ಒಳಗೆ ಹೋಗಿ ಕಾಗದ ಪತ್ರಗಳು ಬಿಸಾಡಿ ನಂತರ ಎರಡನೇಯ ಅಂತಸ್ತಿನ ಮನೆಯ ಮೇಲೆ ಬೇಡ್ ರೂಮದಲ್ಲಿರುವ ಎರಡು ಅಲಮಾರಿಗಳು ಕಲ್ಲಿನಿಂದ ಬೀಗ ಮುರಿದು ಅದರಲ್ಲಿರುವ ಬಟ್ಟೆಗಳು ಬಿಸಾಡಿ ಲಾಕರದಲ್ಲಿರುವ 1) ಬಂಗಾರದ ಲಾಕೇಟ 20 ಗ್ರಾಂ .ಕಿ. 72,000/- ರೂ., 2) ನಗದು ಹಣ 28,000/- ರೂ. ಹೀಗೆ ಒಟ್ಟು 1,00,000/- ರೂ. ಬೆಲೆ ಬಾಳುವ ನಗದು ಹಣ ಮತ್ತು ಬಂಗಾರದ ಆಭರಣಗಳು ಹಾಗೂ ಮೋಬೈಲಗಳು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 25-11-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.