Police Bhavan Kalaburagi

Police Bhavan Kalaburagi

Thursday, May 30, 2019

KALABURAGI DISTRICT REPORTED CRIMES

ಕಳವು ಪ್ರಕರಣಗಳು  :
ಯಡ್ರಾಮಿ ಠಾಣೆ : ಶ್ರೀ ಹುಸೇನಬಾಷಾ ತಂದೆ ಸಾಹೇಬಪಟೇಲ ಮಂದೇವಾಲ ಸಾ:ಮಳ್ಳಿ ತಾ:ಜೇವರಗಿ ರವರು ದಿನಾಂಕ 29-05-2019 ರಂದು ಬೆಳಗಿನ ಜಾವ 1:00 ಗಂಟೆಯಿಂದ 4;00 ಗಂಟೆಯ ಮಧ್ಯದಲ್ಲಿ ಯಾರೋ ಕಳ್ಳರು ಮನೆಯೊಳಗೆ ಪ್ರವೇಶ ಮಾಡಿ   ಆಲಮಾರಿಯಲ್ಲಿಯ 2,04,000/- ಕಿಮ್ಮತ್ತಿನ ಬಂಗಾರದ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಕಳುವಾದ ಬಂಗಾರದ ಆಭರಣಗಳನ್ನು ಪತ್ತೆಮಾಡಿ ಆರೋಪಿತರ ಮೇಲೆ ಕಾನೂನು ರೀತಿ ಕ್ರಮ ಕೈಗೋಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ಅಶೋಕ ನಗರ ಠಾಣೆ : ದಿನಾಂಕ:29.05.219  ರಂದು ಬೆಳಿಗ್ಗೆ ಶ್ರೀ  ಲಕ್ಷ್ಮೀಕಾಂತ ತಂದೆ ರೂಪಕುಮಾರ ಕಾಂಬಳೆ ಸಾ|| ಎಂ.ಎಸ್.ಕೆ. ಮಿಲ್ ಕ್ವಾಟರ್ಸ ಸಿದ್ದಾರ್ಥ ನಗರ ಕಲಬುರಗಿ ರವರು ತಮ್ಮ ಬಡಾವಣೆಗೆ ನೀರು ಬಿಡಬಹುದು ಅಂತ ಮನೆಯಲ್ಲಿದ್ದ ನೀರೆತ್ತುವ ಸಣ್ಣ ಮಷಿನ್ ತೆಗಹೆದುಕೊಂಡು ನಳ ಬಿಟ್ಟ ನಂತರ ಅದನ್ನು ಜೋಡಿಸಬೇಕು ಅಂತ ಅಂಗಳದಲ್ಲಿ ಇಟ್ಟು ಮನೆ ಒಳಗೆ ಹೋಗಿರುತ್ತೇನೆ. ಸ್ವಲ್ಪ ಸಮಯದ ನಂತರ ಸುಮಾರು 06:45 ಗಂಟೆಗೆ  ನಾನು ಹೊರಗಡೆ ಬಂದು ನೋಡಲಾಗಿ ನಾನು ನಮ್ಮ ಮನೆಯ ಅಂಗಳದಲ್ಲಿ ಇಟ್ಟಿದ್ದ ಸಣ್ಣ ನೀರೆತ್ತುವ ಮಷಿನ್ ಅ.ಕಿ. 1500/- ಇದ್ದಿರುವುದಿಲ್ಲ, ನಾನು ಅನುಮಾನಗೊಂಡು ಎಲ್ಲಾ ಕಡೆಗಳಲ್ಲಿ ಹುಡುಕಾಡಿ ಮನೆಯಲ್ಲಿ ನನ್ನ ಹೆಂಡತಿ ಮತ್ತು ತಾಯಿಗೆ ಕೇಳಲು ಅವರಿಗೂ ಸಹ ಅದರ ಬಗ್ಗೆ ಗೊತ್ತಿರುವುದಿಲ್ಲ. ನಂತರ ನಾನು ಹೊರಗಡೆ ಬಂದು ಬಡಾವಣೆಯಲ್ಲಿ ಹುಡುಕಾಡುತ್ತಿರುವಾಗ ಬೆಳಿಗ್ಗೆ ಕಸದ ತೊಟ್ಟೆಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಬಾಟಲಿ ಹಾಗೂ ಇತರೆ ಪ್ಲಾಸ್ಟಿಕ್ ಹಾಗೂ ಕಬ್ಬಿಣದ ಸಾಮಾನುಗಳನ್ನು ಆರಿಸುತ್ತಾ 3 ಜರನ ಹೆಣ್ಣು ಮಕ್ಕಳು ಸಂಶಯಸ್ಪದ ರೀತಿಯಲ್ಲಿ ಕಸ ಆರಿಸುವ ನೆಪದಲ್ಲಿ ಅವರಿವರ ಮನೆಯ ಅಂಗಳಗಳಲ್ಲಿ ನೋಡುತ್ತಿದ್ದರು, ನಾನು ಅವರ ಹತ್ತಿರ ಹೋಗುತ್ತಿದ್ದಂತೆ ನನಗೆ ನೋಡಿ ಓಡಲು ಪ್ರಾರಂಭಿಸಿದರು ಆಗ ನಾನು ಕಳ್ಳರು ಕಳ್ಳರು ಅಂತ ಚಿರುತ್ತಿದ್ದಾಗ ನಮ್ಮ ಪರಿಚಯದವರಾದ  ಅತೀಶ ಗಾಯಕವಾಡ ಇಬ್ಬರು ಓಡಿ ಅವರಿಗೆ ಬೆನ್ನತ್ತಿ ಹಿಡಿದು ಅವರ ಹತ್ತಿರ ಇದ್ದ ಚೀಲವನ್ನು ಪರಿಶೀಲಿಸಿ ನೋಡಲು ನನ್ನ ಮನೆಯ ಅಂಗಳದಿಂದ ಕಳ್ಳತನ ಮಾಡಿರುವ  ಸಣ್ಣ ನೀರೆತ್ತುವ ಮಷಿನ್ ಅವರ ಹತ್ತಿರ ಇರುತ್ತದೆ. ನಾನು ನಮ್ಮ ಮಷಿನ ಏಕೆ ಕಳ್ಳತನ ಮಾಡಿಕೊಂಡು ಹೋಗುತ್ತಿರುವಿರಿ ನಿಮ್ಮ ಹೆಸರು ಏನು ಅಂತ ವಿಚಾರಿಸಲು ಅವರು ಇದು ನಮ್ಮ ಮಷೀನ್ ಇರುತ್ತದೆ ಅಂತ ನನ್ನೊಂದಿಗೆ ವಾದವಿವಾದ ಮಾಡಿದಾಗ ನಾನು ಮತ್ತು ನಮ್ಮ ಪರಿಚಯದವರಾದ ಅತೀಶ ಗಾಯಕವಾಡ ಇಬ್ಬರು ಕೂಡಿಕೊಂಡು ಈ 3 ಜನ ಹೆಣ್ಣು ಮಕ್ಕಳನ್ನು ಠಾಣೆಗೆ ಕರೆದುಕೊಂಡು ಬಂದಿದ್ದು, ನಮ್ಮ ಅಂಗಳದಿಂದ ನೀರೆತ್ತುವ ಸಣ್ಣ ಮಷಿನ್ ಕಳ್ಳತನ ಮಾಡಿದ 3 ಜನ ಹೆಣ್ಣು ಮಕ್ಕಳ ವಿರುದ್ಧ ಕಾನೂನು ಕ್ರಮ ಜರುಗಿಸಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಧೋಕ ನಗರ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.     
ಅಶೋಕ ನಗರ ಠಾಣೆ : ಶ್ರೀ ಮಹ್ಮದ ರಫೀಕ್ ತಂದೆ ಮೈನುದ್ದಿನ್ ಶಹಬಾಜಖಾನ ಉ: ಕ್ಷೇತ್ರ ಕಾರ್ಯ ನಿರ್ವಾಹಕರು ಎ.ಜಿ.ಎಸ್. ಟ್ರಾನಜಾಕ್ಟ ಟೇಕ್ನಾಲಾಜಿ ಲಿಮಿಟೆಟ್ ಬೆಂಗಳೂರು ಸಾ|| ಮ.ನಂ. 112 ಕಿಲ್ಲಾ ಗೋಖಾಕ ಹಾ|| ವ|| ಮಿನಾಕ್ಷಿ ಚೌಕ್ ಮಕಾನದಾರ ಪಿ.ಜಿ. ವಿಜಯಾಪೂರ  ರವರು ತಮ್ಮ ಕಂಪನಿಯ ಎ.ಜಿ.ಎಸ್. ಟ್ರಾನಜಾಕ್ಟ ಟೇಕ್ನಾಲಾಜಿ ಲಿಮಿಟೆಡ್  ನೇದ್ದರ ಎಕ್ಸಿಸ್ ಬ್ಯಾಂಕ್ ಎ.ಟಿ.ಎಂ. ಐ.ಡಿ. ನಂ. 34218 ಇದು ಕಲಬುರಗಿ ನಗರದ ಕರುಣೇಶ್ವರ ನಗದಲ್ಲಿ ಇರುತ್ತದೆ. ಸದರಿ ಎ.ಟಿ.ಎಂ. ಮಷಿನಿನಲ್ಲಿ ನಾವು ರೂ. 4,40,500/- ಹಣವನ್ನು ತುಂಬಿದ್ದು ಅದರಲ್ಲಿ ರೂ. 73,200/- ಹಣವವು ಸಾರ್ವಜನಿಕರಿಂದ ಡ್ರಾ ಮಾಡಲಾಗಿದ್ದು ಅದರಲ್ಲಿ ಇನ್ನೂ ರೂ. 3,67,300/- ಉಳಿದರುತ್ತವೆ. ಹೀಗಿದ್ದು ದಿನಾಂಕ:29.05.2019 ರಂದು 02:45 ಎ.ಎಂ. ಸುಮಾರಿಗೆ ಯಾರೊ ಕಳ್ಳರು ನಮ್ಮ ಎ.ಟಿ.ಎಂ. ಮಷಿನ್ ಒಡೆದು ಹಣವನ್ನು ಕಳ್ಳತನ ಮಾಡಲು ವಿಫಲ ಪ್ರಯತ್ನ ಮಾಡಿರುತ್ತಾರೆ. ಕಾರಣ ನಮ್ಮ ಎ.ಟಿ.ಎಂ. ಮಷಿನ್ ಒಡೆದು ಹಣ ಕಳ್ಳತನ ಮಾಡಲು ಪ್ರಯತ್ನ ಮಾಡಿರುವ ಕಳ್ಳರನ್ನು ಪತ್ತೆಮಾಡಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಸಿದ್ದಾರೂಢ ತಂದೆ ಭಿಮಶ್ಯಾ ಪಟ್ಟಣ ಸಾಃ ಸುಂಟನೂರ ರವರು ದಿನಾಂಕ 29/05/2019 ರಂದು ಹಡಲಗಿ ಗ್ರಾಮದಲ್ಲಿ ನಮಗೆ ಪರಿಚಯದವರಾದ ಶ್ರೀ ದತ್ತು ತಂದೆ ಧರ್ಮಣ್ಣ ಕರ್ಚನ ಇವರ ದೇವರು ಮಾಡುವ ಕಾರ್ಯಕ್ರಮ ಇದ್ದುದ್ದರಿಂದ ನಾನು ಹಾಗು ನಮ್ಮೂರಿನ ಚಂದ್ರಕಾಂತ ತಂದೆ ಲಾಡಪ್ಪಾ ನೀಲೂರ, ಹಾಗು ವೈಜಾಪೂರ ಗ್ರಾಮದ ಸಿದ್ದಾರಾಮ ತಂದೆ ಪರಸಪ್ಪಾ ಹಾದಿಮನಿ, ವೇಣುಗೋಪಾಲ ತಂದೆ ಶ್ರೀಮಂತ ಹಾದಿಮನಿ, ಅಪ್ಪಾರಾಯ ತಂದೆ ನಾಗಪ್ಪಾ ರಂಬಾ ಎಲ್ಲರು ಸೇರಿ ಮಧ್ಯಾಹ್ನ 02.00 ಗಂಟೆ ಸುಮಾರಿಗೆ ವೇಣುಗೋಪಾಲ ಇವರ ಮಾರುತಿ ಕಂಪನಿಯ ಕಾರಿನಲ್ಲಿ ಹಡಲಗಿ ಗ್ರಾಮಕ್ಕೆ ಬಂದಿರುತ್ತೆವೆ. ವೇಣುಗೋಪಾಲ ಇವರು ಒಂದು ವಾರದ ಹಿಂದೆ ಕಾರ ಖರೀದಿ ಮಾಡಿದ್ದರಿಂದ ಇನ್ನು ಮಾರುತಿ ಕಾರ ನಂಬರ ಬಂದಿರುವದಿಲ್ಲ. ಕಾರ ತಾತ್ಕಾಲಿಕ ರೆಜಿಸ್ಟ್ರೆಶನ ನಂ KA/32/TMP/2019/16054 ಹಾಗು ಚೆಸಿ ನಂ. MA3CZF03SKE535558 ಇದ್ದಿರುತ್ತದೆ. ಹೀಗಿದ್ದು ನಾನು ಹಾಗೂ ಚಂದ್ರಕಾಂತ ನೀಲೂರ, ಸಿದ್ದಾರಾಮ ಹಾದಿಮನಿ, ವೇಣುಗೊಪಾಲ ಹಾದಿಮನಿ, ಅಪ್ಪಾರಾಯ ರಂಬಾ ಎಲ್ಲರೂ ಶ್ರೀ ದತ್ತು ತಂದೆ ಧರ್ಮಣ್ಣ ಕರ್ಚನ ಇವರ ದೇವರು ಮಾಡುವ ಕಾರ್ಯಕ್ರಮ ಮಗಿಸಿ ವೈಜಾಪೂರ ಗ್ರಾಮಕ್ಕೆ ಹಡಲಗಿ ಗ್ರಾಮದಿಂದ 05.30 ಪಿ.ಎಮ ಸುಮಾರಿಗೆ ಮಾರುತಿ ತಾತ್ಕಾಲಿಕ ರೆಜಿಸ್ಟ್ರೆಶನ ನಂ KA/32/TMP/2019/16054 ಹಾಗು ಚೆಸಿ ನಂ. MA3CZF03SKE535558 ನೇದ್ದರಲ್ಲಿ ಹೊರಟಿದ್ದು ವೇಣುಗೊಪಾಲ ಇವರು ಕಾರ ಚಲಾಯಿಸುತ್ತಿರುತ್ತಾರೆ. ಹಡಲಗಿ ಗ್ರಾಮದಿಂದ ವೈಜಾಪೂರಕ್ಕೆ ಬರುವಾಗ ಯಳಸಂಗಿ ಗ್ರಾಮದ ಕ್ರಾಸ ಹತ್ತಿರದಲ್ಲಿ ಬರುತ್ತಿರುವಾಗ ವೇಣುಗೊಪಾಲ ಇತನು ತನ್ನ ಕಾರನ್ನು ಅತೀ ವೇಗವಾಗಿ ನಿಷ್ಕಾಳಜಿತನದಿಂದ ಚಲಾಯಿಸುತ್ತಿದ್ದಾಗ ನಾನು ಆತನಿಗೆ ಸಾವದಾನ ಹೊಗಲು ನಾನು ಹೇಳಿದಾಗ ಮತ್ತೆ ವೇಣುಗೊಪಾಲ ಇನತು ತನ್ನ ಕಾರನ್ನು ನಿಷ್ಕಾಳಜಿತನದಿಂದ ಚಲಾಯಿಸಿ ಯಳಸಂಗಿ ಗ್ರಾಮದ ಕ್ರಾಸ ಸಮೀಪದಲ್ಲಿ ಫೂಲಿನ ಹತ್ತಿರ ಕಾರನ್ನು ರೊಡಿನ ಕೆಳಗೆ ಇಳಿಸಿದಾಗ ರೊಡಿನ ಪಕ್ಕದಲ್ಲಿ ಇರುವ ಗಾರಿಯಲ್ಲಿ ಕಾರ ಪಲ್ಟಿಯಾಗಿ ವಿದ್ಯೂತ ಕಂಬಕ್ಕೆ ಡಿಕ್ಕಿಯಾಗಿದ್ದು ಆಗ ನನಗೆ ಎದೆಗೆ ಗುಪ್ತಗಾಯ ಹಾಗು ತಲೆಗೆ ರಕ್ತ ಗಾಯವಾಗಿದ್ದು, ನಮ್ಮ ಜೊತೆಗೆ ಬಂದಿದ್ದ ಸಿದ್ದಾರಾಮ ತಂದೆ ಪರಸಪ್ಪಾ ಹಾದಿಮನಿ ಇವನಿಗೆ ನೋಡಲಾಗಿ ಎಡಗಡೆ ಕಣ್ಣಿನ ಕೆಳಗೆ, ಹಣೆಯ ಮೇಲೆ ಭಾರಿ ರಕ್ತಗಾಯವಾಗಿದ್ದು ಕಿವಿಯಿಂದ ರಕ್ತ ಬರುತ್ತಿದ್ದು, ಹಾಗು ಚಂದ್ರಕಾಂತ ತಂದೆ ಲಾಡಪ್ಪಾ ನೀಲೂರ ಈತನಿಗೆ ನೋಡಲಾಗಿ ಬಲಗೈ ಕಿರು ಬೇರಳಿನ ಹತ್ತಿರ ಹಾಗು ಹಣೆಯ ಮೇಲೆ ತೆರಚಿದ ಗಾಯ, ಅಪ್ಪಾರಾಯ ತಂದೆ ನಾಗಪ್ಪಾ ರಂಬಾ ಇವರಿಗೆ ಹಣೆಯ ಮೇಲೆ ಭಾರಿ ರಕ್ತಗಾಯವಾಗಿದ್ದು ಹಾಗು ತಲೆಯ ಮೇಲೆ ರಕ್ತವಾಗಿದ್ದು, ಮೂಗಿನಿಂದ ರಕ್ತ ಬರುತ್ತಿದ್ದು, ವೇಣುಗೋಪಾಲನಿಗೆ ನೋಡಲಾಗಿ ಆತನ ಬಲಗೈ ಮೊಳಕೈಗೆ ರಕ್ತ ಗಾಯವಾಗಿದ್ದು ಇರುತ್ತದೆ. ಅಷ್ಟರಲ್ಲಿ ನಮ್ಮೂರಿನ ಅಜರ್ುನ ವಗ್ಗನ, ಬಾಬುರಾವ ಮಂಟಗಿ ಹಾಗು ಶಿವಾನಂದ ಸಾಗರ ಇವರು ಬಂದು ನಮ್ಮೆಲ್ಲರನ್ನು ಕಾರಿನಿಂದ ಕೆಳಗೆ ಇಳಿಸಿ ಅಂಬುಲೆನ್ಸ ಕರೆಯಿಸಿದ್ದು ಅಂಬುಲೆನ್ಸ ಬಂದ ನಂತರ ನಮ್ಮೆಲ್ಲರನ್ನು ಅಂಬುಲೇನ್ಸದಲ್ಲಿ ಹಾಕಿಕೊಂಡು ಉಪಚಾರಕ್ಕಾಗಿ ಯುನೈಟೆಡ್ ಆಸ್ಪತ್ರೆಗೆ ತರುವಾಗ ಮಾರ್ಗ ಮಧ್ಯದಲ್ಲಿ 07.30 ಪಿ.ಎಮ ಸುಮಾರಿಗೆ ಅಪ್ಪಾರಾಯ ರಂಬಾ ಇತನು ಮೃತಪಟ್ಟಿರುತ್ತಾನೆ. ಕಾರಣ ತನ್ನ ವಾಹನವನ್ನು ಅತೀ ವೇಗವಾಗಿ ನಿರ್ಲಕ್ಷತನದಿಂದ ಚಲಾಯಿಸಿ ಅಪಘಾತಪಡಿಸಿದ ವೇಣುಗೋಪಾಲ ಈತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಸಂಚಾರಿ ಠಾಣೆ 02 : ದಿನಾಂಕ-27/05/2019 ರಂದು ಸಾಯಂಕಾಲ ಶ್ರೀಮತಿ ರೇಣುಕಾ ಗಂಡ ಸಂತೋಷಕುಮಾರ ತ್ರಿಲಾಪೂರ ಸಾ : ಕನಕಪೂರ ತಾ : ಚಿಂಚೋಳಿ ರವರ  ಗಂಡ ಸಂತೋಷಕುಮಾರ ತನ್ನ ಮೋಟಾರ ಸೈಕಲ ನಂ ಕೆಎ- 32 ಕ್ಯೂ-3539 ನೇದ್ದರ ಮೇಲೆ ಹಿಂದುಗಡೆ ನನಗು ಹಾಗೂ ಇಬ್ಬರು ಮಕ್ಕಳಾದ ಭಾಗ್ಯಶ್ರೀ, ಶ್ರೀಕಾಂತ ಇವರಿಗೆ ಕೂಡಿಸಿಕೊಂಡು ಸೂಗೂರ ಗ್ರಾಮದಿಂದ ಸಣ್ಣೂರ ಕ್ರಾಸ್ ಮುಖಾಂತರ ಕಲಬುರಗಿಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲನ್ನು ನಿಧಾನವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಮದಿಹಾಳ ತಾಂಡಾ ಕ್ರಾಸ್ ಹತ್ತಿರ  ರೋಡ ಮೇಲೆ ಎದುರುಗಡೆಯಿಂದ  ಒಂದು ಕಾರ ನಂ ಕೆಎ-25 ಪಿ-4927 ನೇದ್ದ ರ ಚಾಲಕ ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಫಿರ್ಯಾದಿಗೆ ಮತ್ತು ಅವರ ಗಂಡನಾದ ಸಂತೋಷಕುಮಾರ ಹಾಗೂ ಇಬ್ಬರು ಮಕ್ಕಳಾದ ಭಾಗ್ಯಶ್ರೀ, ಶ್ರೀಕಾಂತ ಇವರಿಗೆ ಭಾರಿಗಾಯಗೊಳಿಸಿ ಕಾರ ಸಮೇತ ಚಾಲಕ ಓಡಿ ಹೋಗಿದ್ದು ಇರುತ್ತದೆ. ಸಂತೋಷಕುಮಾರ ಇತನು ಯುನೈಟೇಡ್ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಉಪಚಾರ ಫಲಕಾರಿಯಾಗದೆ. ದಿನಾಂಕ-28/05/2019 ರಂದು ಮೃತ ಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 02 ರಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 28-05-2019 ರಂದು ಶಿವಪೂರ ಗ್ರಾಮದ ಭೀಮಾ ನದಿಯಿಂದ ಟ್ಯಾಕ್ಟರದಲ್ಲಿ ಕಳ್ಳತನದಿಂದ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ ಸಿ.ಪಿ.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಶಿವಪೂರ ಗ್ರಾಮದ ಕಡೆಗೆ ಹೋಗುತ್ತಿದ್ದಾಗ ಬನ್ನೆಟ್ಟಿ ಕ್ರಾಸ  ಹತ್ತಿರ ಶಿವಪುರ ಕಡೆಯಿಂದ ಒಂದು ಟ್ರ್ಯಾಕ್ಟರ ಬರುತ್ತಿತ್ತು, ಆಗ ಸದರಿ ಟ್ರ್ಯಾಕ್ಟರನ್ನು ನಿಲ್ಲಿಸಲು ಕೈ ಸೂಚನೆ ಕೊಟ್ಟಾಗ, ಟ್ರ್ಯಾಕ್ಟರ ಚಾಲಕ ನಮ್ಮ ಪೊಲೀಸ್ ಜೀಪನ್ನು ನೋಡಿ ಟ್ರ್ಯಾಕ್ಟರನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋದನು, ನಂತರ ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಚೆಕ್ಕ ಮಾಡಲು ಜಾನಡಿಯರ ಕಂಪನಿಯ ಟ್ಯಾಕ್ಟರ ಇದ್ದು ಅದರ ಟ್ರ್ಯಾಕ್ಟರ ಟ್ರೈಲಿಯಲ್ಲಿ ಮರಳು ತುಂಬಿತ್ತು, ಟ್ಯಾಕ್ಟರ ಮೇಲೆ ಪಾಸಿಂಗ್ ನಂಬರ ಇರಲಿಲ್ಲ. ಸದರಿ ಟ್ಯಾಕ್ಟರ ಇಂಜೆನ್ ನಂಬರ ಚೆಕ್ ಮಾಡಲಾಗಿ ಅದರ CH NO :- PY5310S05919 ENG NO:- PY6029D24938 ಅಂತಾ ಇರುತ್ತದೆ. ಸದರಿ ಟ್ಯಾಕ್ಟರ ಟ್ರೈಲಿಗೆ ಎಲ್ಲಿಯು ನಂಬರ ಇದ್ದಿರುವುದಿಲ್ಲ. ಸದರಿ ಟ್ರ್ಯಾಕ್ಟರ ಅ.ಕಿ 5,00,000/-ರೂ  ಇರಬಹುದು. ಟ್ರ್ಯಾಕ್ಟರ ಟ್ರೈಲಿಯಲಿದ್ದ ಮರಳಿನ ಅ.ಕಿ 3000/- ರೂ ಇರಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರನ್ನು ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.