ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 11-01-2021
ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 07/2021, ಕಲಂ. 279, 304(ಎ) ಐ.ಪಿ.ಸಿ :-
ದಿನಾಂಕ 10-01-2021 ರಂದು ಫಿರ್ಯಾದಿ ಯೋಗೆಶ ತಂದೆ ಮಚೇಂದ್ರ ಗೋಣೆ, ಸಾ: ಯರಂಡಗಿ ರವರು ಮುಡಬಿ ಕ್ರಾಸ್ ಹತ್ತಿ ರಾಹೆ ನಂ. 65 ರ ಪಕ್ಕದಲ್ಲಿ ಗಣೇಶ ಹೋಟೆಲ ಇಟ್ಟುಕೊಂಡು ಉಪಜಿವಿಸುತ್ತಿದ್ದು, ಹೀಗಿರುವಲ್ಲಿ ದಿನಾಂಕ 10-01-2021 ರಂದು ತನ್ನ ಹೊಟೆಲ ಎದುರಿಗೆ ನಿಂತಿರುವಾಗ ಅಂದಾಜು 55 ರಿಂದ 60 ವಯಸ್ಸಿನ ಒಬ್ಬ ಅಪರಿಚಿತ ವ್ಯಕ್ತಿ ಹೊಟೆಲ ಹತ್ತಿರ ಬಂದು ಹೋಟೆಲ ಎದುರಿಗೆ ಇಟ್ಟಿರುವ ನೀರು ಕುಡಿದು ಅಲ್ಲೆ ಬಿದ್ದ ಕಬ್ಬಿನ ತುಕಡಿ ತೆಗೆದುಕೊಂಡು ಹೋಟೆಲ ಎದುರಿನಿಂದ ಕೌಡಿಯಾಳ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಬಂಗ್ಲಾ ಕಡೆಯಿಂದ ಲಾರಿ ನಂ. ಕೆಎ-56/3221 ನೇದರ ಚಾಲಕನಾದ ಆರೋಪಿ ವೆಂಕಟ ತಂದೆ ಸಿಕಿಂದರ್ ಸರ್ವದೆ ವಯ: 54 ವರ್ಷ, ಸಾ: ಚಿಲವಂತವಾಡಿ, ತಾ: ನಿಲಂಗಾ. ಜಿ: ಲಾತೂರ ಇತನು ತನ್ನ ಲಾರಿಯನ್ನು ಅತಿವೇಗ & ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ತನ್ನ ಲಾರಿಯನ್ನು ರೋಡಿನ ಕೆಳಗೆ ತೆಗೆದುಕೊಳ್ಳುತ್ತಿರುವಾಗ ಲಾರಿಯ ಮಧ್ಯದ ಎಡಭಾಗ ಅಪರಿಚಿತ ವ್ಯಕ್ತಿಗೆ ಹತ್ತಿದ್ದರಿಂದ ಅವನು ಲಾರಿಯ ಹಿಂದಿನ ಟೈರಿನ ಕೆಳಗೆ ಬಿದ್ದನು, ಆಗ ಲಾರಿ ಚಾಲಕನು ತನ್ನ ಲಾರಿ ನಿಲ್ಲಿಸದೆ ಹಾಗೆಯೇ ಮುಂದಕ್ಕೆ ನಿಷ್ಕಾಳಜಿಯಿಂದ ಅಪರಿಚಿತ ವ್ಯಕ್ತಿ ಮೇಲಿನಿಂದ ಚಲಾಯಿಸಿಕೊಂಡು ಹೋಗಿರುತ್ತಾನೆ, ಪರಿಣಾಮ ಅಪರಿಚಿತ ವ್ಯಕ್ತಿಯ ತಲೆ ಪೂರ್ತಿಯಾಗಿ ಒಡೆದು ಮೆದಳು, ಎದೆಯಲ್ಲಿನ, ಹೊಟ್ಟೆಯಲ್ಲಿನ ಮಾಂಸ ಖಂಡಗಳು ಹೊರಗೆ ಬಂದು ಭಾರಿ ರಕ್ತಗಾಯ, ಎಡಕೈಗೆ ಭಾರಿ ರಕ್ತಗಾಯ, ಬಲಗಾಲು ಮೊಳಕಾಲು ಮತ್ತು ಎಡಗಾಲಿಗೆ ಮೂಳೆ ಮುರಿದ ಭಾರಿ ರಕ್ತಗಾಯಗಳಾಗಿ ಮೂಳೆ ಮಾಂಸ ಹೊರಗೆ ಬಂದು ಸ್ಥಳದಲ್ಲೆ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 04/2021, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 10-01-2021 ರಂದು ಫಿರ್ಯಾದಿ ಸಂಜು ತಂದೆ ಮಾರುತಿ ಚಾರೆ ವಯ: 37 ವರ್ಷ, ಜಾತಿ : ಎಸ.ಸಿ ಹೊಲಿಯಾ, ಸಾ: ನಾರಾಯಣಪೂರ ರವರ ಚಿಕ್ಕಪ್ಪ ವಿಠಲ ಚಾರೆ ರವರ ಮಗಳಾದ ಪ್ರವೀಣಾ ಇವಳ ಮದುವೆ ಹುಮನಾಬಾದ ತಾಲೂಕಿನ ಓತಗಿ ಗ್ರಾಮದಲ್ಲಿದ್ದರಿಂದ ಫಿರ್ಯಾದಿ ಮತ್ತು ಚಿಕ್ಕಪ್ಪನ ಮಗನಾದ ವಿಶಾಲ ಚಾರೆ ರವರು ಕೂಡಿಕೊಂಡು ತಮ್ಮ ಮೋಟಾರ ಸೈಕಲ ನಂ. ಕೆಎ-56/ಹೆಚ-6402 ನೇದರ ಮೇಲೆ ರಾಜೋಳಾ ಮಾರ್ಗವಾಗಿ ಓತಗಿ ಗ್ರಾಮಕ್ಕೆ ಮದುವೆ ಕಾರ್ಯಕ್ರಮಕ್ಕೆ ಹೋಗಿ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ತಮ್ಮೂರಿಗೆ ರಾಜೋಳ ಮಾರ್ಗವಾಗಿ ಫಿರ್ಯಾದಿ ಮತ್ತು ವಿಶಾಲ ಇಬ್ಬರು ಸದರಿ ಮೋಟಾರ ಸೈಕಲ ಮೇಲೆ ಬರುವಾಗ ಮೋಟಾರ ಸೈಕಲನ್ನು ಫಿರ್ಯಾದಿಯು ಚಲಾಯಿಸಿಕೊಂಡು ರಾಜೋಳಾ ನಾರಾಯಣಪೂರ ರೋಡಿನ ಮೇಲೆ ಹುಲಗುತ್ತಿ ಕ್ರಾಸ್ ಹತ್ತಿರ ಬಂದಾಗ ಎದುರಿನಿಂದ ಕಾರ ನಂ. ಎಪಿ-23/ಎಸಿ-5304 ನೇದರ ಚಾಲಕನದ ಆರೋಪಿಯು ತನ್ನ ಕಾರನ್ನು ಅತಿವೇಗವಾಗಿ ಹಾಗೂ ನಿಷ್ಕಾಳಜಿಯಿಂದ ಓಡಿಸಿಕೊಂಡು ಬಂದು ಫಿರ್ಯಾದಿಯವರ ಮೋಟಾರ ಸೈಕಲಿಗೆ ಡಿಕ್ಕಿ ಮಾಡಿ ಆರೋಪಿಯು ತನ್ನ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ತಲೆಯಲ್ಲಿ ಭಾರಿ ರಕ್ತಗಾಯ, ಹಣೆಯಲ್ಲಿ ರಕ್ತಗಾಯ, ಬಲಗಾಲ ಮೋಣಕಾಲ ಕೆಳಗೆ ರಕ್ತಗಾಯ ಹಾಗು ಹಿಂದೆ ಕುಳಿತು ವಿಶಾಲ ಇತನಿಗೆ ತಲೆಯಲ್ಲಿ ಭಾರಿಗಾಯವಾಗಿ ಎಡಕಿವಿಯಿಂದ ರಕ್ತಸ್ರಾವ, ತಲೆಯ ಎಡಭಾಗಕ್ಕೆ ರಕ್ತಗಾಯಗಳು ಆಗಿರುತ್ತದೆ, ಹಿಂದೆ ಬೇರೆ ವಾಹನದಲ್ಲಿ ಬರುತ್ತಿದ್ದ ಜನರು ಗಾಯಗೊಂಡ ಇಬ್ಬರಿಗೂ ಚಿಕಿತ್ಸೆ ಕುರಿತು ಬಸವಕಲ್ಯಾನ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಪಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 05/2021, ಕಲಂ. 379 ಐಪಿಸಿ :-
ದಿನಾಂಕ 06-01-2021 ರಂದು 0900 ಗಂಟೆಯಿಂದ 200 ಗಂಟೆಯ ಅವಧಿಯಲ್ಲಿ ಹುಮನಾಬಾದ ಪಟ್ಟಣದ ಸರಕಾರಿ ಆಸ್ಪತ್ರೆಯ ಪಾರ್ಕಿಂಗನಲ್ಲಿ ನಿಲ್ಲಿಸಿದ ಫಿರ್ಯಾದಿ ಸರಿತಾ ಬೇಬಿ ಗಂಡ ಧರ್ಮವೀರ ಪೋಲಾ, ವಯ: 38 ವರ್ಷ, ಜಾತಿ: ಎಸ.ಸಿ ಹೋಲಿಯಾ, ಸಾ: ಟೀಚರ್ಸ ಕಾಲೋನಿ, ಸಾ: ಹುಮನಾಬಾದ ರವರ ಹಿರೋ ಹೊಂಡಾ ಪ್ಲಿಸರ್ ಮೋಟಾರ ಸೈಕಲ ನಂ. ಕೆ.ಎ-38/ಕೆ-6891, ಚಾಸಿಸ್ ನಂ. ಎಮ.ಬಿ.ಎಲ್.ಜೆ.ಎಪ್.16.ಇ.ಡಿ.ಎ.ಜಿ.ಡಿ.10907, ಇಂಜಿನ್ ನಂ. ಜೆ.ಎಫ್.16.ಇ.ಬಿ.ಎ.ಜಿ.ಡಿ.14517, ಅ.ಕಿ 20,000/- ರೂ. ನೇದನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 10-01-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 04/2021, ಕಲಂ. ಮಹಿಳೆ ಕಾಣೆ :-
ಫಿರ್ಯಾದಿ ಭಾರತಬಾಯಿ ಗಂಡ ಕಿಶೋರ ಕೋಳಿ ವಯ: 40 ವರ್ಷ, ಜಾತಿ: ಕಬ್ಬಲಿಗ, ಸಾ: ಕಿಟ್ಟಾ, ತಾ: ಬಸವಕಲ್ಯಾಣ ರವರ ಮಗಳಾದ ಅಶ್ವಿನಿ ಇವಳಿಗೆ 6 ತಿಂಗಳ ಮುಂದೆ ತನ್ನ ನಾದನಿ ಲಿಲಾವತಿ ರವರ ಮಗನಾದ ಸುಧಕಾರ ಇತನೊಂದಿಗೆ ಮದುವೆ ಮಾಡಿ ಕೊಟ್ಟಿದ್ದು, ಹೀಗಿರುವಲ್ಲಿ ದಿನಾಂಕ 07-01-2021 ರಂದು ಅಶ್ವಿನಿ ಇವಳಿಗೆ ಆರೋಗ್ಯ ಸರಿ ಇಲ್ಲದ ಕಾರಣ ಬಸವಕಲ್ಯಾಣದಲ್ಲಿ ಡಾ:ಯುವರಾಜ ಬಿರಾದಾರ ರವರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೋಡಿಸುವ ಗೋಸ್ಕರ ಅತ್ತೆ ರುಕ್ಮಿಣಿಬಾಯಿ ರವರು ಕರೆದುಕೊಂಡು ಹೋದಾಗ ಅಶ್ವಿನಿ ಇವಳು ಸೇಬು ತರುತ್ತೆನೆಂದು ಆಸ್ಪತ್ರೆಯಿಂದ ಬಸವಕಲ್ಯಾಣ ನಗರದ ನಾರಾಯಣಪೂರ ಕ್ರಾಸ ಹತ್ತಿರ ಇರುವ ಡಾ:ಯುವರಾಜ ಬಿರಾದಾರ ರವರ ಆಸ್ಪತ್ರೆ ಎದುರುಗಡೆ ಸೇಬು ತರುತ್ತೆನೆ ಎಂದು ಹೋದವಳು ಮರಳಿ ಮನೆಗೆ ಬಂದಿರುವುದಿಲ್ಲ, ಮಗಳು ಕಾಣೆಯಾಗಿರುತ್ತಾಳೆ, ಅವಳ ಚಹರೆ ಪಟ್ಟಿ :- ಉದ್ದ ಮುಖ, ನೇರ ಮೂಗು, ಸಾದಾ ಕಪ್ಪು ಮೈಬಣ್ಣ, ಸಾದಾರಣ ಮೈಕಟ್ಟು, 4.5 ಅಡಿ ಎತ್ತರ, ಅವಳ ಮೈ ಮೇಲೆ ಬೀಳಿ ಬಣ್ಣದ ಕೆಂಪು ಹೊವುಳ್ಳ ಸಲ್ವಾರ ಮತ್ತು ಕೆಂಪು ಬಣ್ಣದ ಜೆಗ್ಗಿನ್ಸ್ ಪ್ಯಾಂಟ ಇರುತ್ತದೆ, ಅವಳು ಕನ್ನಡ, ಹಿಂದಿ, ಮರಾಠಿ ಮತ್ತು ಸ್ವಲ್ಪ ಇಂಗ್ಲೀಷ ಮಾತನಾಡುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 10-01-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಹಿಳಾ ಪೊಲೀಸ ಠಾಣೆ, ಬೀದರ ಅಪರಾಧ ಸಂ. 02/2021, ಕಲಂ. 498(ಎ), 323, 324, 354(ಎ) (1) 504, 506(2) ಜೊತೆ 34 ಐಪಿಸಿ :-
ಫಿರ್ಯಾದಿ ಶ್ವೇತಾ ಗಂಡ ಪ್ರವೀಣ ಸ್ವಾಮಿ ವಯ: 28 ವರ್ಷ, ಜಾತಿ: ಜಂಗಮ್, ಸಾ: ರಾಂಪುರೆ ಕಾಲೋನಿ, ಸದ್ಯ: ಶಿವ ನಗರ ದಕ್ಷಿಣ, ಬೀದರ ರವರ ಮದುವೆಯು ದಿನಾಂಕ 20-12-2015 ರಂದು ಪ್ರವೀಣ ಜೊತೆಯಲ್ಲಿ ಆಶಾ ಫಂಕ್ಷನ್ ಹಾಲ್ ಬೀದರನಲ್ಲಿ ಆಗಿರುತ್ತದೆ, ಮದುವೆಯಾದ ನಂತರ ಒಂದು ತಿಂಗಳು ಗಂಡ ಫಿರ್ಯಾದಿಯ ಜೊತೆಯಲ್ಲಿ ಚೆನ್ನಾಗಿದ್ದು, ನಂತರ ನಾದಣಿ ಮತ್ತು ನಾದಣಿ ಗಂಡ ರವರ ಮಾತು ಕೇಳಿ ಹೊಡೆಯುವದು, ಬಡೆಯುವದು, ಒಂದು ಎರಡು ದಿವಸ ಊಟ ಕೊಡದೆ ಉಪವಾಸ ಇಡುವದು, ಅಶ್ಲೀಲ ಶಬ್ದಗಳಿಂದ ನಿಂದಿಸುವದು ಮತ್ತು ನೀನು ದಪ್ಪಗಿದ್ದಿ ನೋಡಲು ಚೆನ್ನಾಗಿಲ್ಲ ಎಂದು ಗಂಡ ವಣಕೆ ಮತ್ತು ಬೆಲ್ಟಿನಿಂದ ಹೊಡೆಯುವುದು ಮತ್ತು ದಿನಾಲು ಮಾನಸಿಕ ಹಾಗು ದೈಹಿಕ ಕಿರುಕುಳ ಕೊಟ್ಟಿರುತ್ತಾರೆ, ಗಂಡ ಪ್ರವೀಣ ಸ್ವಾಮಿ ರವರು ಆಗ ಜಿಲ್ಲಾ ಪಂಚಾಯತ ಬಳ್ಳಾರಿಯಲ್ಲಿ ಸರ್ಕಾರಿ ಹುದ್ದೆಯಲ್ಲಿ ಇದ್ದು, 15 ದಿವಸಕ್ಕೊಮ್ಮೆ, ತಿಂಗಳಿಗೊಮ್ಮೆ ಮನೆಗೆ ಬರುತ್ತಿದ್ದರು, ಅವರು ಇಲ್ಲದಿರುವಾಗ ಮನೆಯವರೆಲ್ಲರ ಫಿರ್ಯಾದಿಗೆ ಕೆಟ್ಟದ್ದಾಗಿ ನಡೆಯಿಸಿಕೊಂಡಿದ್ದಾರೆ, ಮದುವೆಯಾದ ಎರಡುವರೆ ವರ್ಷದ ನಂತರ ಗಂಡ ಬೀದರಗೆ ವರ್ಗಾವಣೆ ಮಾಡಿಕೊಂಡಿರುತ್ತಾರೆ, ತದನಂತರ ಆರೋಪಿತರಾದ 1) ಪ್ರವೀಣ ತಂದೆ ರೇವಣಯ್ಯಾ ಸ್ವಾಮಿ (ಗಂಡ), 2) ರೇವಣಯ್ಯಾ ಸ್ವಾಮಿ ತಂದೆ ರುದ್ರಯ್ಯಾ ಸ್ವಾಮಿ (ಮಾವ), ಸಾ: ಇಬ್ಬರು ರಾಂಪುರೆ ಕಾಲೋನಿ ಬೀದರ, 3) ಆರತಿ ಗಂಡ ಮಹಾಲಿಂಗ್ ಸ್ವಾಮಿ (ನಾದಣೀ), 4) ಮಹಾಲಿಂಗ್ ಸ್ವಾಮಿ (ನಾದನಿ ಗಂಡ) ಸಾ: ಚಟನಳ್ಳಿ ಗ್ರಾಮ, ಸದ್ಯ ಹೌಸಿಂಗ್ ಬೊರ್ಡ ಕಾಲೋನಿ ಬೀದರ ಇವರೆಲ್ಲರೂ ಹೊಡೆಯುವದು, ಬಡೆಯುವದು ಮತ್ತು ಕೂದಲು ಹಿಡಿದು ಎಳೆಯುವದು, ನಿನ್ನ ಗಂಡನಿಗೆ ಇನ್ನೊಂದು ಮದುವೆ ಮಾಡುತ್ತೇವೆಂದು ಬೆದರಿಕೆ ಹಾಕಿರುತ್ತಾರೆ, ಫಿರ್ಯಾದಿಯು ನಿಂತರು ಕುಂತರು ಕೆಟ್ಟ ಶಬ್ದಗಳಿಂದ ಬೈಯುತ್ತಿದ್ದರು, ಗಂಡ ಬಳ್ಳಾರಿಯಲ್ಲಿ ಕೆಲಸ ಮಾಡುತ್ತಿರುವಾಗ ಮಾವ ಫಿರ್ಯಾದಿಯ ಮೇಲೆ ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದನು, ಮನೆಯಲ್ಲಿ ಯಾರು ಇರದ ಸಮಯದಲ್ಲಿ ಫಿರ್ಯಾದಿಗೆ ಹಿಡಿಯಲು ಮತ್ತು ಫಿರ್ಯಾದಿಗೆ ಎಳೆದುಕೊಂಡು ಹೋಗುತ್ತಿರುವಾಗ ಅವರಿಂದ ತಪ್ಪಿಸಿಕೊಂಡು ಮನೆಯಿಂದ ಹೊರಗೆ ಓಡಿ ಬಂದಿದ್ದು ಇರುತ್ತದೆ, ನಾದಣಿಯ ಗಂಡ ಮಹಾಲಿಂಗ್ ಸ್ವಾಮಿ ಇತನು ಸಹ ಯಾವುದೋ ನೆಪ ಹೇಳಿಕೊಂಡು ಮನೆಯಲ್ಲಿ ಯಾರು ಇರದ ಸಮಯ ಮನೆಗೆ ಬಂದು ಫಿರ್ಯಾದಿಗೆ ಕೆಟ್ಟ ದೃಷ್ಟಿಯಿಂದ ನೋಡುವದು, ಹಿಡಿಯುವದು, ಮೈಮುಟ್ಟುವದು ಮಾಡುತ್ತಿದ್ದರು. ಆ ಸಮಯದಲ್ಲಿ ಫಿರ್ಯಾದಿಯು ಮನೆಯ ಹೊರಗೆ ಬಂದು ನಿಂತಿದ್ದು, ರಾಂಪುರೆ ಕಾಲೋನಿಯ ನಿವಾಸಿಗಳು ಮನೆಯ ಹತ್ತಿರ ಬಂದು ವಿಚಾರಿಸಿದಾಗ ಫಿರ್ಯಾದಿಯು ಮನೆಯಿಂದ ಹೊರಗೆ ಅಳುತ್ತಾ ನಿಂತಾಗ ಫಿರ್ಯಾದಿಗೆ ವಿಚಾರಿಸಿ ಸದರಿ ವಿಷಯ ಅವರಿಗೆ ಹೇಳಿದಾಗ ಮಹಾಲಿಂಗ್ ಸ್ವಾಮಿ ಇತನು ನೋಡಿ ಓಡಿ ಹೋಗಿರುತ್ತಾನೆ ಮತ್ತು ಸದರಿ ವಿಷಯ ಫಿರ್ಯಾದಿಯು ತನ್ನ ಗಂಡನ ಮುಂದೆ ಹೇಳಿದಾಗ ಅವರು ಫಿರ್ಯಾದಿಗೆ ಅವರ ಜೊತೆಯಲ್ಲಿ ಸಹಕರಿಸು ಎಂದು ಒತ್ತಾಯಪುರ್ವಕವಾಗಿ ಹೇಳಿದಾಗ, ಸದರಿ ಈ ವಿಷಯವನ್ನು ಫಿರ್ಯಾದಿಯು ತನ್ನ ತಾಯಿಯ ಮುಂದೆ ಹೇಳಿದ್ದು ಇರುತ್ತದೆ, ಆವಾಗ ಎಲ್ಲಾ ಬಂದು ಬಳಗದ ಸಕ್ಷಮ ಪಂಚಾಯಿತಿ ಮಾಡಿದಾಗ ಸದರಿ ಆರೋಪಿತರೆಲ್ಲರೂ ತನ್ನ ತಪ್ಪು ಒಪ್ಪಿಕೊಂಡು ಮುಂದೆ ಈ ತರಹ ಮಾಡುವುದಿಲ್ಲ ಎಂದು ಹೇಳಿರುತ್ತಾರೆ, ಅದಾದ ನಂತರ ಮನೆಗೆ ಬಂದಾಗ ಅವಾಚ್ಯವಾಗಿ ನೀನು ನಮಗೆ ಪಂಚಾಯಿತಿ ಮುಂದೆ ಮಾನ ಹರಾಜು ಮಾಡಿದಿ ಎಂದು ಮಾವನಾದ ರೇವಣಯ್ಯಾ ಸ್ವಾಮಿ ಇತನು ಕೂದಲು ಹಿಡಿದು, ಮಾಹಾಲಿಂಗ್ ಸ್ವಾಮಿ ಇವನು ಎದೆಯ ಮೇಲೆ ಕೈ ಹಾಕಿ ಹಿಗ್ಗಾಮುಗ್ಗಾ ಮಾಡಿ ಕೆಳಗೆ ಎಸೆದಿರುತ್ತಾರೆ, ನಿನಗೆ ಇವತ್ತು ಖತಂ ಮಾಡ್ತೀನಿ ಎಂದು ಚಾಕು ಹಿಡಿದು ಹೊಡೆಯಲು ಬಂದಾಗ ಫಿರ್ಯಾದಿಯು ಚೀರಾಡಲು ಪ್ರಾರಂಭಿಸಿದ್ದು ಆವಾಗ ಓಣಿಯವರು ಮನೆಗೆ ಬಂದಾಗ ಅದನ್ನು ನೋಡಿ ಮಾಹಾಲಿಂಗ್ ಸ್ವಾಮಿ ಮನೆಯಿಂದ ಓಡಿ ಹೋಗಿರುತ್ತಾನೆ, ಸದರಿ ವಿಷಯ ತನ್ನ ತಂದೆ, ತಾಯಿ, ಬಂದು ಬಳಗದವರಿಗೆ ತಿಳಿಸಿದಾಗ ಅವರೆಲ್ಲರೂ ದಿನಾಂಕ 28-10-2020 ರಂದು ಬಂದು ಪಂಚಾಯಿತಿ ನಡೆಸಿ ಅಲ್ಲಿ ಎಲ್ಲರ ಸಮಕ್ಷಮ ಕ್ಷಮೆ ಕೇಳಿ ಫಿರ್ಯಾದಿಗೆ ಮನೆಗೆ ಕರೆದುಕೊಂಡು ಹೋಗಿರುತ್ತಾರೆ, ಅತ್ತೆ ನಿನಗೆ ಅಡುಗೆ ಮಾಡಲು ಬರುವದಿಲ್ಲ, ನಿನ್ನಂತಹ ಅಪ್ಪೆಸಿ ಸೊಸೆ ನಮ್ಮ ಮನೆಗೆ ಬಂದಿದ್ದಿಯ್ಯಾ ಮತ್ತು ನಿನ್ನಂತಹ ಹುಚ್ಚಿಯನ್ನು ಸೊಸೆಯಾಗಿ ಮಾಡಿಕೊಂಡಿದ್ದೇನೆ. ನಿನ್ನ ಗಂಡನಿಗೆ ಇನ್ನೊಂದು ಮದುವೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿರುತ್ತಾಳೆ, ನಾದಣಿಯು ದಿನಾಲು ಮನೆಗೆ ಬಂದು ಇಲ್ಲಸಲ್ಲದ ಮಾತನಾಡಿ ಮಾನಸಿಕವಾಗಿ ಕಿರುಕುಳ ಕೊಡುವದು, ನೀನು ದಪ್ಪಗಿದಿಯ್ಯಾ, ನನ್ನ ತಮ್ಮನಿಗೆ ಇನ್ನೊಂದು ಮದುವೆ ಮಾಡುತ್ತೇನೆಂದು ಕೂದಲು ಹಿಡಿದು ಏಳೆದು ನಿನ್ನನ್ನು ಜುಟ್ಟು ಬೋಳಿಸಿ ನಿನ್ನ ತವರು ಮನೆಗೆ ಕಳಿಸಿಕೊಡುತ್ತೇನೆಂದು ಚಿತ್ರಹಿಂಸೆ ಕೊಡುತ್ತಿದ್ದಳು, ಸದರಿ ಆರೋಪಿತರು ಫಿರ್ಯಾದಿಗೆ ಹೊಡೆಯುವದು, ಬಡೆಯುವದು, ಕೂದಲು ಹಿಡಿದು ಎಳೆಯುವದು, ನಿನ್ನ ಗಂಡನಿಗೆ ಇನ್ನೊಂದು ಮದುವೆ ಮಾಡುತ್ತೇವೆಂದು ಬೆದರಿಕೆ ಹಾಕಿರುತ್ತಾರೆ, ಆದಾದ ನಂತರ ಪುನಃ ದಿನಾಲು ಫಿರ್ಯಾದಿಗೆ ಪಂಚಾಯಿತಿ ಹಾಕಿದಿ ಅಂತ ಸದರಿ ಆರೋಪಿತರೆಲ್ಲರೂ ಫಿರ್ಯಾದಿಗೆ ಮನೆಯಿಂದ ಆಚೆ ಹಾಕಿರುತ್ತಾರೆ, ಫಿರ್ಯಾದಿಯ ತಂದೆ ಮತ್ತು ಅಣ್ಣ ತನ್ನ ಗಂಡನ ಮನೆಗೆ ಬಿಡಲು ಬಂದಾಗ ತಂದೆ ಮತ್ತು ಅಣ್ಣನನ್ನು ದಿನಾಂಕ 08-11-2020 ರಂದು ಮನಬಂದಂತೆ ನಿಂದಿಸಿ ಫಿರ್ಯಾದಿಯ ಬ್ಯಾಗನ್ನು ಎಸೆದು ವಾಪಸ ಕಳಿಸಿರುತ್ತಾರೆ, ಇದನ್ನು ನೋಡಿ ಫಿರ್ಯಾದಿಯ ತಂದೆಯವರು ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 10-01-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 05/2021, ಕಲಂ. 498 (ಎ), 504, 354(ಬಿ) 109 ಜೋತೆ 34 ಐಪಿಸಿ ಮತ್ತು ಕಲಂ. 3 & 4 ಡಿ.ಪಿ ಕಾಯ್ದೆ :-
ಫಿರ್ಯಾದಿ ಸನಾ ಗಂಡ ಸಲಿಂ ಖೇಡಕರ ವಯ: 20 ವರ್ಷ, ಜಾತಿ: ಮುಸ್ಲಿಂ, ಸಾ: ಕೆ.ಜಿ.ಎನ್ ಗಲ್ಲಿ ಭಾಲ್ಕಿ ರವರಿಗೆ 2 ವರ್ಷಗಳ ಹಿಂದೆ 2019 ನೇ 2 ಮಾರ್ಚ ರಂದು ಭಾಲ್ಕಿ ನಗರದ ಚುನ್ನುಮಿಯ್ಯಾ ರವರ ಎರಡನೆ ಮಗನಾದ ಸಲಿಂ ಇತನೊಂದಿಗೆ ಮದುವೆಯಾಗಿದ್ದು, ಮದುವೆಯಾಗಿ 2 ತಿಂಗಳ ನಂತರ ಅತ್ತೆ ನನ್ನುಬಿ ಇವಳು ಫಿರ್ಯಾದಿಗೆ ಅನಾವಶ್ಯಕವಾಗಿ ಬೈಯುವುದು, ಫಿರ್ಯಾದಿಯು ಬಟ್ಟೆಗಳನ್ನು ತೊಳೆದು ಮನೆ ಮೇಲೆ ಹಾಕಲು ಹೊದಾಗ ನೀನು ಯಾರನ್ನು ನೊಡಲು ಹೊಗಿದಿಯ್ಯಾ ಅಂತ ಮಾತನಾಡುತ್ತಿದ್ದರು, ಅದಕ್ಕೆ ಫಿರ್ಯಾದಿಯು ಇಲ್ಲಿ ಏಕೆ? ಹೀಗೆ ಮಾತನಾಡುತ್ತಿರಿ ಅಂದಾಗ ಫಿರ್ಯಾದಿಯ ಕೂದಲು ಹಿಡಿದು ಎಳೆಯುವುದು ಮಾಡುತ್ತಿದ್ದಳು, ಮಾವ ಚುನ್ನುಮಿಯಾ ಇತನು ಬೆನ್ನ ಮೇಲೆ ಹೊಡೆಯುತ್ತಿದನು, ಗಂಡ ರೆಲ್ವೆ ಇಲಾಖೆಯಲ್ಲಿ ನೌಕರನಿದ್ದು ಆತನು ಕರ್ತವ್ಯ ಮುಗಿಸಿಕೊಂಡು ಬರುವಾಗ ರಾತ್ರಿ ಸರಾಯಿ ಕುಡಿದು ಬರುತ್ತಾನೆ, ಅವನು ಬಂದಾಗ ಅತ್ತೆ ಮಾವ ಸುಳ್ಳು ಮಾತು ಹೇಳುತ್ತಿದ್ದು ಅದನ್ನು ಕೇಳಿ ಅವನು ಕೂದಲು ಹಿಡಿದು ಹೊಡೆಯುವುದು ಬಡೆಯುವುದು ಮಾಡುತ್ತಿದನು, ಫಿರ್ಯಾದಿಯವರ ಅವರ ಕಿರಿಕಿರಿಯನ್ನು ತಾಳಲಾರದೆ ತನ್ನ ತಂದೆ ತಾಯಿಯವರಿಗೆ ತಿಳಿಸಿದಾಗ ಅವರು ಬಂದು ಫಿರ್ಯಾದಿಗೆ ಹೈದ್ರಾಬಾದಗೆ ಕರೆದುಕೊಂಡು ಹೊದರು, ಮದುವೆಯಾಗಿ 5 ತಿಂಗಳು ಆಗಿತ್ತು ನಂತರ ಗಂಡನ ಅಣ್ಣ ಯುಸುಫ ಇತನು ನನ್ನ ತಮ್ಮನಿಗೆ ತಲಾಖ್ ಕೊಡು ಆತನಿಗೆ ನಾವು ಇನ್ನೊಂದು ಮದುವೆ ಮಾಡುತ್ತೆವೆಂದು ಹೇಳಿದ್ದು, ಅದಕ್ಕೆ ಫಿರ್ಯಾದಿಯ ತಂದೆ ತಾಯಿ ಅಣ್ಣ ತಮ್ಮಂದಿರು ಎಲ್ಲರು ಬಂದಿದ್ದು ಅವರಿಗೆ ಈ ರಿತಿ ಮಾಡಬಾರದೆಂದು ತಿಳಿಸಿ ಫಿರ್ಯಾದಿಗೆ ಗಂಡನ ಮನೆಯಲ್ಲಿ ಬಿಟ್ಟು ಹೋಗಿರುತ್ತಾರೆ, ನಂತರ ಆರೋಪಿತರಾದ ಮಾವ, ಅತ್ತೆ, ಗಂಡ ಇವರೆಲ್ಲರೂ ಪುನಃ ಕಿರಕುಳ ಕೋಡಲು ಪ್ರಾರಂಭಿಸಿದ್ದು ಹಾಗೂ ಫಿರ್ಯಾದಿಯ ಮಾವ ಫಿರ್ಯಾದಿಗೆ ನೀನು ತೆಳ್ಳಗಿದ್ದಿಯ್ಯಾ ನಿನ್ನ ಬಾಡಿ ದೊಡ್ಡದಿಲ್ಲ ಅಂತ ಕೈಯನ್ನು ಹಿಡಿದು ಕೊಳ್ಳುವುದು ಹಿಂದಿನ ಭಾಗವನ್ನು ಮುಟ್ಟುವುದು, ದೇಹದ ಭಾಗಗಳನ್ನು ನೋಡಿ ಇವು ದೊಡ್ಡದು ಇಲ್ಲ ನೋಡು ನಿನ್ನ ಅತ್ತೆದು ಹೇಗೆ ಇದೆ ಅಂತ ಮಾತನಾಡುವುದು ಮಾಡುತ್ತಿದನು, ಅಲ್ಲದೆ ಅತ್ತೆ ಹಾಕಿಕೊಳ್ಳುವ ನೈಟಿ ಹಾಕಿಕೊಂಡು ತಲೆಗೆ ಹೆಣ್ಣು ಮಕ್ಕಳು ಸುತ್ತಿಕೊಳ್ಳುವ ಹಾಗೆ ಬಟ್ಟೆಯನ್ನು ಸುತ್ತಿಕೊಂಡು ಹಿಂದೆ ಬಂದು ನಿಂತುಕೊಂಡು ದೇಹದ ಹಿಂಭಾಗಕ್ಕೆ ಅವನ ಕೈಗಳಿಂದ ಮುಟ್ಟುತ್ತಿದನ್ನು ಹಾಗೂ ನನಗೆ 3 ಲಕ್ಷ ರೂಪಾಯಿ ಸಾಲವಾಗಿದೆ ಅದನ್ನು ನೀನು ನಿಮ್ಮ ತಂದೆ ತಾಯಿಗೆ ತಿಳಿಸಿ ನನಗೆ ತೆಗೆದುಕೊಂಡು ಬಾ ಎಂದು ಗಂಡ, ಅತ್ತೆ, ಮಾವ ಒತ್ತಾಯ ಮಾಡುತ್ತಿದರು, ಮದುವೆಯಾಗಿ 1 ವರ್ಷದ ನಂತರ ತಂದೆ ತಾಯಿಗೆ ಅವರು ಕಿರಕುಳ ಹೆಚ್ಚಾದ ಬಗ್ಗೆ ತಿಳಿಸಲು ಅವರು ಫಿರ್ಯಾದಿಗೆ ಹೈದ್ರಾಬಾದಗೆ ಕರೆದುಕೊಂಡು ಹೊಗಿದ್ದು ಅಲ್ಲಿ ಒಂದು ತಿಂಗಳು ಇದ್ದಾಗ ಗಂಡನಿಗೆ ಇನ್ನೊಂದು ಮದುವೆ ಮಾಡಲು ಅವನ ತಂದೆ, ತಾಯಿ, ಅಣ್ಣ, ಗಂಡನ ಸಂಬಂದಿ ನಿಜಾಮಪಾಶಾ ತಂದೆ ಮುನ್ನಾಮಿಯ್ಯಾ ಸಾ: ನಿಟ್ಟೂರ (ಬಿ), ಮೊಯಿಜ್ ತಂದೆ ಅಲ್ಲಿಮೊದ್ದಿನ ಸಾ: ಅಣದೂರ ತಯಾರಿ ನಡೆಸಿದ್ದು ಗೊತ್ತಾಗಿ ಫಿರ್ಯಾದಿ ಮತ್ತು ತಂದೆ ತಾಯಿ ಹೈದ್ರಾಬಾದ ಪೊಲೀಸರಿಗೆ ತಿಳಿಸಿದಾಗ ಅವರು ಗಂಡನನ್ನು ಹೈದ್ರಾಬಾದಗೆ ಕರೆದುಕೊಂಡು ಬಂದು ಇಬ್ಬರಿಗೆ ಕೌನ್ಸಲಿಂಗ ಮಾಡಿ ಮತ್ತೊಮ್ಮೆ ಕೌನ್ಸಲಿಂಗ ಮಾಡುವುದಾಗಿ ತಿಳಿಸಿದರು, ನಂತರ ಫಿರ್ಯಾದಿಯು ಗಂಡನ ಮನೆಗೆ ಬಂದಿದ್ದು ಇರುತ್ತದೆ, ಹೀಗಿರುವಾಗ ದಿನಾಂಕ 09-01-2021 ರಂದು ಫಿರ್ಯಾದಿಯ ತಮ್ಮ ಜಹಿರ, ಜಾವಿದ, ಜಾಕಿರ, ತಂದೆ, ತಾಯಿ ಬಂದು ಮಗಳು ಅಳಿಯ ಇಬ್ಬರದು ಹೈದ್ರಾಬದನಲ್ಲಿ ಕೌನ್ಸಲಿಂಗ ಮಾಡುವುದಿದೆ ಅಂದಾಗ ಮಾವ ಚುನ್ನುಮಿಯಾ ಇತನು ಅಣ್ಣ ಜಾವಿದ ಇತನಿಗೆ ಮನೆ ಹೊರಗೆ ನಿಲ್ಲಿಸಿ ಬಲಗಡೆ ಬೆನ್ನಿನ ಮೇಲೆ ಕಲ್ಲಿನಿಂದ ಹೊಡೆದಿರುತ್ತಾನೆ ಹಾಗೂ ಗಂಡ ಮತ್ತು ಆತನ ಗೆಳೆಯರೊಂದಿಗೆ ಬಂದು ಅಣ್ಣಂದಿರಾದ ಜಾಕಿರ, ಜಹೀರ ಇವರಿಗೆ ಹೊಡೆದಿರುತ್ತಾನೆ, ಅತ್ತೆಯು ತಂದೆ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದು ಮನೆಯ ಹೊರಗೆ ನಿಲ್ಲಿಸಿ ಅತ್ತೆ ಮನೆ ಒಳಗೆ ಬಂದು ಕೈಯಿಂದ ಫಿರ್ಯಾದಿಗೆ ಹೊಡೆದಳು, ಈ ಜಗಳ ಯುಸೂಫನ ಪ್ರಚೋದನೆಯಿಂದ ಆಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 10-01-2021 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.