Police Bhavan Kalaburagi

Police Bhavan Kalaburagi

Monday, January 8, 2018

Yadgir District Reported Crimes Updated on 08-01-2018


                                              Yadgir District Reported Crimes
ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 03/2018 ಕಲಂ 379 ಐಪಿಸಿ ಮತ್ತು 44(1) ಕೆಎಮ್ಎಮ್ಸಿ ರೂಲ್ 1994;- ದಿನಾಂಕ: 07/01/2018 ರಂದು 10.45 ಎ.ಎಂ ಕ್ಕೆ ಮಾನ್ಯ ಸಿಪಿಐ ಸಾಹೇಬರು ಮರಳು ತುಂಬಿದ ಒಂದು ಟ್ರ್ಯಾಕ್ಟರ್ನ್ನು ತಂದು ಒಂದು ವರದಿಯೊಂದಿಗೆ ಜಪ್ತಿಪಂಚನಾಮೆಯನ್ನು ಹಾಜರಪಡಿಸಿದ್ದು ಅದರ ಸಾರಾಂಶವೇನೆಂದರೆ ಇಂದು ದಿನಾಂಕ:07/01/2018 ರಂದು 08.15 ಎ.ಎಂ ಸುಮಾರಿಗೆ ನಾನು ಭೀ.ಗುಡಿ ಪೊಲೀಸ್ ಠಾಣೆಯಲ್ಲಿದ್ದಾಗ ಯಾರೋ ಇಂಗಳಗಿ ಹಳ್ಳದಲ್ಲಿ ಟ್ರಾಕ್ಟರದಲ್ಲಿ ಅಕ್ರಮವಾಗಿ ಮರಳನ್ನು ತುಂಬಿ ಹುರಸಗುಂಡಗಿ ಕಡೆಗೆ ಸಾಗಿಸುತ್ತಿದ್ದಾರೆ ಅಂತಾ ಬಾತ್ಮಿ ಬಂದಿದ್ದರಿಂದ ಸಿಬ್ಬಂದಿ ಹಾಗು ಪಂಚರಿಗೆ ಕರೆದು ಬಾತ್ಮಿ ವಿಷಯ ತಿಳಿಸಿ ಸಕರ್ಾರಿ ಜೀಪ್ ನಂ:ಕೆಎ-33 ಜಿ-153 ನೇದ್ದರಲ್ಲಿ ಜೀಪ್ ಚಾಲಕ ಶ್ರೀ ಮಲ್ಕಾರಿ ಎಪಿಸಿ-45 ರವರೊಂದಿಗೆ ಹೊರಟು 09.00 ಎ.ಎಮ್ ಕ್ಕೆ ಶಿರವಾಳ ಗ್ರಾಮದಲ್ಲಿನ ಅಣಬಿ ಕ್ರಾಸ್ ಹತ್ತಿರ ಹೊರಟಾಗ ಒಂದು ಟ್ರಾಕ್ಟರದಲ್ಲಿ ಹಳ್ಳದ ಮರಳನ್ನು ತುಂಬಿಕೊಂಡು ಹೊರಟಿರುವದನ್ನು ನೋಡಿ ಸದರಿ ಟ್ರಾಕ್ಟರನ್ನು ನಿಲ್ಲಿಸಿದಾಗ ಚಾಲಕನು ಟ್ರಾಕ್ಟರನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿರುತ್ತಾನೆ. ಸದರಿಯವನ ಹತ್ತಿರ ಮರಳಿಗೆ ಸಂಬಂಧಿಸಿದಂತೆ ಯಾವುದೇ ದಾಖಲಾತಿಗಳು ಇಲ್ಲದೇ ಮತ್ತು ಸರಕಾರಕ್ಕೆ ರಾಜಧನ ಕಟ್ಟದೇ ಇಂಗಳಗಿ ಹಳ್ಳದಿಂದ ಮರಳನ್ನು ತುಂಬಿಕೊಂಡು ಹುರಸಗುಂಡಗಿ ಕಡೆಗೆ ಹೊರಟಿರುವ ಬಗ್ಗೆ ಕಂಡು ಬಂದಿರುತ್ತದೆ. ಸದರಿ ಟ್ರಾಕ್ಟರನ್ನು ಪರಿಶೀಲಿಸಿ ನೋಡಲಾಗಿ ಒಂದು ಸ್ವರಾಜ ಕಂಪನಿಯ ನೀಲಿ ಬಣ್ಣದ ಟ್ರಾಕ್ಟರ ಇದ್ದು, ಅದರ ಪಾಸಿಂಗ್ ನಂಬರ್ ಇರುವದಿಲ್ಲ. ಇಂಜಿನ ನಂ:ಈಪಿ010420ಎ ಅಂತಾ ಇರುತ್ತದೆ. ನೀಲಿ ಬಣ್ಣದ ಟ್ರಾಲಿ ಇದ್ದು, ಅದರ ಪಾಸಿಂಗ್ ನಂಬರ್ ಆಗಲಿ, ಚೆಸ್ಸಿ ನಂಬರ ಆಗಲಿ ಇರುವುದಿಲ್ಲ. ಟ್ರಾಲಿಯಲ್ಲಿದ್ದ ಮರಳನ್ನು ಪರಿಶೀಲಿಸಿ ನೋಡಲಾಗಿ ಅಂದಾಜು 2000/- ರೂ ಕಿಮ್ಮತ್ತಿನ ಮರಳು ಇರುತ್ತದೆ. ಓಡಿ ಹೋದ ಟ್ರಾಕ್ಟರ್ ಚಾಲಕನ ಹೆಸರು ಸಿದ್ದನಗೌಡ ತಂದೆ ಭೀಮನಗೌಡ ಚಟ್ನಳ್ಳಿ ಸಾ:ಇಂಗಳಗಿ ಇರುತ್ತದೆ ಅಂತಾ ಬಾತ್ಮಿದಾರರಿಂದ ತಿಳಿದು ಬಂದಿರುತ್ತದೆ. ನಂತರ ಸದರಿ ಟ್ರಾಕ್ಟರನ್ನು ಮತ್ತು ಅದರಲ್ಲಿದ್ದ ಮರಳು ಸಮೇತ ಪಂಚರ ಸಮಕ್ಷಮ 09.15 ಎ.ಎಮ್ ದಿಂದ 10.15 ಎ.ಎಮ್ ವರೆಗೆ ಜಪ್ತಿ ಪಡಿಸಿಕೊಂಡು ಸದರಿ ಟ್ರಾಕ್ಟರನ್ನು ಒಬ್ಬ ಖಾಸಗಿ ಚಾಲಕನ ಸಹಾಯದಿಂದ 10.45 ಎ.ಎಮ್.ಕ್ಕೆ ಠಾಣೆಗೆ ತಂದು ಮುಂದಿನ ಕ್ರಮ ಕುರಿತು ಒಪ್ಪಿಸಿದ್ದು ಇರುತ್ತದೆ ಅಂತ ಅದರ ಸಾರಾಂಶದ ಮೇಲಿಂದ ಭೀ.ಗುಡಿ ಠಾಣೆ ಗುನ್ನೆ ನಂ. 03/2018 ಕಲಂ 379 ಐಪಿಸಿ ಮತ್ತು 44(1) ಕೆಎಮ್.ಎಮ್.ಸಿ ರೂಲ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 02/2018 ಕಲಂ 279 337 338 ಐಪಿಸಿ ;- ದಿನಾಂಕ:07/01/2018 ರಂದು 14.30 ಗಂಟೆಗೆ ಮಹಾರಾಷ್ಟ್ರ ರಾಜ್ಯದ ಮಿರಜ ನಗರದ ಗಾಂಧಿಚೌಕ ಪೊಲೀಸ ಠಾಣೆಯಿಂದಾ ಒಂದು ಎಂಎಲ್ಸಿ ಹೇಳಿಕೆ ಅಂಚೆಯ ಮೂಲಕ ಮರಾಠಿ ಬಾಷೆಯಲ್ಲಿ ವಸೂಲಾಗಿದ್ದು ಪಡೆದಯಕೊಂಡು ನಿವೃತ್ತ ಹೆಚ್.ಸಿ ಸೋಮನಿಂಗಪ್ಪ ರವರಿಂದಾ ಕನ್ನಡ ಬಾಷೆಗೆ ಅನುವಾದ ಮಾಡಿಸಲು ಎಂಎಲ್ಸಿ ಹೇಳಿಕೆ ಸಾರಾಂಶವೇನಂದರೆ ದಿ:24/12/17 ರಂದು ಪ್ರಕರಣ ಫಿರ್ಯಾಧಿಯು ತನ್ನ ಗೆಳೆಯನಾದ ಸಿದ್ದನಗೌಡ ಈತನೊಂದಿಗೆ ಯುನಿಕಾರ್ನ ಮೋಟಾರ್ ಸೈಕಲ ನಂ. ಕೆಎ-33 ಯು-6783 ನೇದ್ದರ ಮೇಲೆ ಕೆಂಬಾವಿಯಿಂದಾ ಹುಣಸಗಿಗೆ ಬಂದು ಕೆಲಸ ಮುಗಿಸಿಕೊಂಡು ಮರಳಿ ಕೆಂಭಾವಿಗೆ ಹೊರಟಾ ಹುಣಸಗಿ ಮಹಾಂತಸ್ವಾಮಿ ಸರ್ಕಲನಲ್ಲಿ ರಾತ್ರಿ 9.30 ಗಂಟೆಯ ಸುಮಾರಿಗೆ ತಾಳಿಕೋಟಿ ಕಡೆಯಿಂದಾ ಒಂದು ಟಾಟಾ ಎಸ್ ನಂ. ಕೆಎ-28 ಸಿ-7880 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಹಾಗೂ ಅಲಕ್ಷತನದಿಂದಾ ನಡೆಯಿಸಿಕೊಂಡು ಬಂದು ಪಿಯರ್ಾದಿ ಹಿಂದೆ ಕುಳಿತು ಹೊರಟ ಮೋಟಾರ್ ಸೈಕಲಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು, ಅಪಘಾತದಲ್ಲಿ ಪಿಯರ್ಾದಿಗೆ ಬಲಗಾಲ ಮೊಳಕಾಲ ಕೆಳಗೆ ಭಾರಿ ರಕ್ತಗಾಯವಾಗಿ ಮುರಿದಂತೆ ಆಗಿದ್ದು, ಮೋಟಾರ್ ಸೈಕಲ ನಡೆಯಿಸುತ್ತಿದ್ದ ಸಿದ್ದನಗೌಡನಿಗೆ ಸಣ್ಣಪುಟ್ಟ ತರಚಿದ ಗಾಯವಾಗಿದ್ದು ನನಗೆ ನಮ್ಮ ಸಂಭಂದಿ ಒಂದು ಖಾಸಗಿ ಜೀಪನಲ್ಲಿ ಉಪಚಾರಕ್ಕೆಂದು ಮಿರಜ ದವಾಖಾನೆ ಕಳಿಸಿದ್ದು ಅಂತಾ ಇತ್ಯಾದಿ ಹೇಳಿಕೆ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ.  
 

KALABURAGI DISTRICT CRIME REPORTS.

ಗ್ರಾಮೀಣ ಠಾಣೆ ಕಲಬುರಗಿ  : ದಿನಾಂಕ:- 08/01/2017 ರಂದು ಬೆಳಿಗ್ಗೆ 07:30 ಗಂಟಗೆ ಫಿರ್ಯಾದಿ ಶ್ರೀ ದಿಗಂಬರ ತಂದೆ ಹರಿಶ್ಚಂದ್ರ ಸಿಂದೇ ಸಾ:ಗೌರಿ ಶಂಕರ ಸೋಸೈಟಿ ಬಾಬಳಗಾಂವ ಆರ್.ಟಿ.ಓ ಆಫೀಸ ಹತ್ತಿರ ಲಾತೂರ ಮಹಾರಾಷ್ಟ್ರ ಇತನು ಪೊಲೀಸ ಠಾಣೆಗೆ ಹಾಜರಾಗಿ ಒಂದು ಹೇಳಿಕೆ ಫಿರ್ಯಾದಿ ಕಂಪ್ಯೂಟರನಲ್ಲಿ ಬೆರಳಚ್ಚು ಮಾಡಿಸಿದ್ದು ಸದರಿ ಫಿರ್ಯಾದಿ ಹೇಳಿಕೆ ಸಾರಾಂಶವೆನೆಂದರೆ ನನಗೆ ಮಾಯಾ ಎಂಬ ಹೆಂಡತಿ ಇದ್ದು ಅವಳ ಹೊಟ್ಟೆಯಿಂದ ಅಶ್ವಿನಿ ಎಂಬ ಹೆಣ್ಣು ಮಗಳಿದ್ದು ಅವಳು ಅಂದಾಜು 20 ವರ್ಷಗಳ ಹಿಂದೆ ತೀರಿಕೊಂಡಿದ್ದು ತದನಂತರ  2-3 ವರ್ಷಗಳ ಮೇಲೆ ನಾನು ನಮ್ಮ ಜಾತಿಯವರೆ ಆದ ಸತ್ಯಭಾಮಾ ಎಂಬವಳೊಂದಿಗೆ ಪ್ರೀತಿಸಿದ್ದು ಅವಳಿಗೆ ಮೊದಲು ರಾಮ ಎಂಬುವನೊಂದಿಗೆ ಲಗ್ನವಾಗಿ ಶರದ ಮತ್ತು ಯುವರಾಜ ಎಂಬ ಎರಡು ಜನ ಗಂಡು ಮಕ್ಕಳಿದ್ದು ಅವಳು ಗಂಡನಿಗೆ ಬಿಟ್ಟು ನನ್ನೊಂದಿಗೆ ಈ ಮಕ್ಕಳೊಂದಿಗೆ ಉಳಿದುಕೊಂಡಿದ್ದು ಅಂದಿನಿಂದ ನಾವು ಗಂಡ ಹೆಂಡತಿಯರಾಗಿ ಮತ್ತು ಈ ಮಕ್ಕಳನ್ನು ಕೂಡಾ ನನ್ನ ಮಕ್ಕಳಂತೆ ನೋಡಿಕೊಂಡು ಬರುತ್ತಿರುತ್ತೇನೆ. ಲಾತೂರಿನ ಟಿ.ಎಂ.ಸಿ ಟ್ರಾನ್ಸಪೊರ್ಟದ ಲಾರಿ ನಂ MH-24 AB-9263 ನೆದ್ದರ ಮೇಲೆ ಡೈವರ್ ಅಂತಾ ಕೆಲಸ ಮಾಡಿಕೊಂಡಿರುತ್ತೇನೆ. ನಿನ್ನೆ ದಿನಾಂಕ:- 07/01/2018 ರಂದು  ಮಹಾರಾಷ್ಟ್ರದ ನಗರದ ಜಿಲ್ಲೆಯಲ್ಲಿ ಈ ಲಾರಿಯಲ್ಲಿದ್ದ ಸಿಮೆಂಟ ಲೋಡನ್ನು ಖಾಲಿ ಮಾಡಿ ಅಲ್ಲಿಂದ ಮದ್ಯಾಹ್ನದ ನಂತರ ನಾನು ಮತ್ತು ನನ್ನ ಸಾಕು ಮಗ ಯುವರಾಜ ವಯ:20 ವರ್ಷ ಇಬ್ಬರು ಅಲ್ಲಿಂದ ಬಿಟ್ಟು ಚಿತ್ತಾಪೂರದ ಸಿಮೆಂಟ ಕಾರ್ಖಾನೆಗೆ ಬರುವ ಕುರಿತು ಹೊರಟಿದ್ದು ಮಗ ಯುವರಾಜ ಇತನು ಲಾರಿಯನ್ನು ನಡೆಸಿಕೊಂಡು ಬರುತ್ತಿದ್ದು ಇಂದು ದಿನಾಂಕ:- 08/01/2018 ರಂದು ಬೆಳಗಿನ ಜಾವ 04:00 ಗಂಟೆ ಸುಮಾರಿಗೆ ಕಲಬುರಗಿ-ಆಳಂದ ರೋಡಿನ ಪಟ್ಟಣ ಗ್ರಾಮದ ಟೋಲ ನಾಕಾ ಹತ್ತಿರ ಬಂದಾಗ ಮಗನು ನನಗೆ ಎಬ್ಬಿಸಿ ಲಾರಿಯನ್ನು ನನಗೆ ನಡೆಸುವಂತೆ ಹೇಳಿದ್ದು ನಾನು ಲಾರಿಯನ್ನು ಟೋಲ ನಾಕಾ ಪಾಸ್ ಮಾಡಿ ಸ್ವಲ್ಪ ಅಂತರದಲ್ಲಿ 04:15 ಗಂಟೆ ಸುಮಾರಿಗೆ ಸಂಡಾಸ ಬರುತ್ತಿರುವುದ್ದರಿಂದ್ದ ರೋಡಿನ ಬದಿಯಲ್ಲಿ ಲಾರಿಯನ್ನು ನಿಲ್ಲಿಸಿ ನಾನು ಸಂಡಾಸಕ್ಕೆ ರೋಡಿನ ಬದಿಯಲ್ಲಿಯೇ ಕುಳಿತುಕೊಳ್ಳುವಾಗ ಮಗನು ಲಾರಿಯಲ್ಲಿಯೇ ಮಲಗಿಕೊಂಡಿದ್ದನು. ಅಷ್ಟೋತ್ತಿಗೆ ಲಾರಿಯ ಹಿಂದುಗಡೆಯಿಂದ ಇಬ್ಬರು 30-35 ವರ್ಷದ ವಯಸ್ಸಿನ ಗಂಡು ಮಕ್ಕಳು ಬಂದವರೇ ನನಗೆ ಒಮ್ಮಲೇ ಮುಖಕ್ಕೆ ಒತ್ತಿ ಹಿಡಿದು ರೋಡಿನ ತಗ್ಗಿನಲ್ಲಿ ಕರೆದುಕೊಂಡು ಹೋಗುವಾಗ ನಾನು ಅದರಿಂದ ಭಯಗೊಂಡು ಚೀರಾಡಿದಾಗ ಈ ಶಬ್ದವನ್ನು ನನ್ನ ಮಗ ಕೇಳಿ ಲಾರಿಯಿಂದ ಇಳಿದು ನಮ್ಮ ಹತ್ತಿರ ಬಂದವನೇ ಹಾಗೆಯೇ ನಾನು ಚೀರಾಡುವಾಗ ಅವರಿಗೆ ಮಗ ಬೀಡುವಂತೆ ಒಂದು ಏಟು ಅವರಲ್ಲಿ ಒಬ್ಬನ ಮುಖಕ್ಕೆ ಹೊಡೆದಿದ್ದರಿಂದ್ದ ಅವರು ಒಮ್ಮಲೇ ನನಗೆ ಮತ್ತು ಮಗನಿಗೆ ನೂಕಿಸಿಕೊಟ್ಟಂತೆ ಮಾಡಿ ಒಬ್ಬನು ತನ್ನಲ್ಲಿರುವ ಹರಿತವಾದ ಚಾಕುವಿನಿಂದ ಮಗನ ಕುತ್ತಿಗೆಯ ಬಲಬದಿಗೆ ಜೋರಾಗಿ ಹೊಡೆದಿದ್ದರಿಂದ್ದ ಮಗನು ಚೀರಾಡುತ್ತಾ ನೆಲಕ್ಕೆ ಬಿದ್ದನು ನೋಡಲಾಗಿ ಭಾರಿ ಪ್ರಮಾಣದ ರಕ್ತಗಾಯವಾಗಿ ಕಾಲು ತಿಕ್ಕುತ್ತಿದ್ದಾಗ ಅವರಿಬ್ಬರು ಅಲ್ಲಿಂದ ಓಡಿ ಹೋದರು ಇದರಿಂದ್ದ ನಾನು ಚೀರಾಡುತ್ತಾ ಟೋಲ ನಾಕಾದ ಕಡೆಗೆ ಓಡುತ್ತಾ ಹೋಗಿ ಟೋಲ ನಾಕಾದ ಮಾನ್ಯೇಜರ್ ಹಾಗು ಇನ್ನು ಇಬ್ಬರನ್ನು ಕರೆದುಕೊಂಡು ಬರುವಷ್ಟ್ರರಲ್ಲಿ ಮಗನು ಭಾರಿ ರಕ್ತಸ್ರಾವವಾಗಿ ಕೊಲೆ ಆಗಿ ಬಿದ್ದಿದ್ದನು.ಈ ಘಟನೆಯು 04:15 ಎ.ಎಂದಿಂದ 04:20 ಎ.ಎಂದ ಸುಮಾರಿಗೆ ಸಂಭವಿಸಿರುತ್ತದೆ. ಅವರನ್ನು ಮತ್ತೆ ನೋಡಿದಲ್ಲಿ ಗುರ್ತಿಸುತ್ತೇನೆ.  ಕಾರಣ ಯಾರೋ ಇಬ್ಬರು ಗಂಡು ಮನುಷ್ಯರು ಅಂದಾಜು 30-35 ವರ್ಷ ವಯಸ್ಸಿನವರು ನನ್ನ ಹತ್ತಿರ ಬಂದು ಒತ್ತಿ ಹಿಡಿದುಕೊಂಡು ಜಗ್ಗಿಕೊಂಡು ಹೋಗುವಾಗ ಮಗನು ಬೀಡಿಸಲು ಬಂದಾಗ ಹರಿತವಾದ ಚಾಕುವಿನಿಂದ ಯಾವುದೋ ಬಲವಾದ ಉದ್ದೇಶಕ್ಕಾಗಿ ಮಗನ ಬಲಭಾಗದ ಕುತ್ತಿಗಿಗೆ ಚುಚ್ಚಿ ಭಾರಿ ಗಾಯಗೊಳಿಸಿ ಕೊಲೆ ಮಾಡಿ ಪರಾರಿ ಆಗಿದ್ದು ಅವರನ್ನು ಪತ್ತೆ ಮಾಡಿ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ವಗೈರೇ ಫಿರ್ಯಾದಿ ಹೇಳಿಕೆ ಸಾರಾಂಶದ ಗುನ್ನೆ ದಾಖಲಿಸಿಕೊಂಡು ಬಗ್ಗೆ ವರದಿ.

BIDAR DISTRICT DAILY CRIME UPDATE 08-01-2018



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 08-01-2018

§¸ÀªÀPÀ¯Áåt £ÀUÀgÀ ¥Éưøï oÁuÉ C¥ÀgÁzsÀ ¸ÀA. 03/2018, PÀ®A. 457, 380 L¦¹ :-
ದಿನಾಂಕ 06-01-2018 ರಂದು 1100 ಗಂಟೆಯಿಂದ 1400 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿ ಜ್ಞಾನೇಶ್ವರ ತಂದೆ ವಿಶ್ವನಾಥ ರೇಡ್ಡಿ ವಯ: 54 ವರ್ಷ, ಜಾತಿ: ರೇಡ್ಡಿ, ಸಾ: ಚೌಕೇವಾಡಿ ರವರ ಮನೆಯ ಕೊಣೆ ಕೀಲಿ ಮುರಿದು ಕೊಣೆಯಲ್ಲಿ ಪ್ರವೇಶ ಮಾಡಿ ಕೊಣೆಯಲ್ಲಿಟ್ಟಿದ ಅಲಮಾರಿ ಒಡೆದು ಅಲಮಾರಿಯಲ್ಲಿದ್ದ 1) ಬಂಗಾರದ ಗಂಟನ 4 ತೊಲೆ ಅ.ಕಿ 1,12,000/- ರೂ., 2) ಕೀವಿಯಲ್ಲಿನ ಝುಮಕಾ 6 ಗ್ರಾಂ. 2 ಜೊತೆ ಅ.ಕಿ 28,000/- ರೂ., 3) ಕೀವಿಯಲ್ಲಿನ ಬಂಗಾರದ ಸರಾಸರಿ 3 ಗ್ರಾಂ. ಅ.ಕಿ 8,400/- ರೂ., 4) ಬಂಗಾರದ ಮಣಿ ( ಗುಂಡು) 2 ಗ್ರಾಂ. 5,600/- ರೂ. ಹಾಗೂ 5] ನಗದು ಹಣ 8,500/- ರೂ. ಹೀಗೆ ಒಟ್ಟು 1,62,500/- ರೂ. ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

§¸ÀªÀPÀ¯Áåt UÁæ«ÄÃt ¥Éưøï oÁuÉ C¥ÀgÁzsÀ ¸ÀA. 04/2018, PÀ®A. 379 L¦¹ :-
ದಿನಾಂಕ 04-01-2018 ರಂದು ರಂದು 2300 ಗಂಟೆಯಿಂದ ದಿನಾಂಕ 05-01-2018 ರಂದು 0500 ಗಂಟೆಯ ಮಧ್ಯದ ಅವಧಿಯಲ್ಲಿ ಸಂಗಮೇಶ ತಂದೆ ಮಹಾರುದ್ರಪ್ಪಾ ಡೊಣಗಾಪೂರೆ ವಯ: 31 ವರ್ಷ, ಜಾತಿ: ಲಿಂಗಾಯತ, ಸಾ: ಗೋರ್ಟಾ(ಬಿ) ರವರ ಮಹಿಂದ್ರಾ ಟ್ರಾಕ್ಟರ ಇಂಜಿನ ಟಿಪಿ ನಂ. ಕೆಎ-38/ಟಿ.ಇ-006742/2017/18 ನೇದ್ದು ಅ.ಕಿ 7,50,000/- ರೂ. ನೇದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ ಸಾರಾಂಶದ ಮೇರೆಗೆ ದಿನಾಂಕ 07-01-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 01/2018, ಕಲಂ. 279, 337, 338, 283, 304(ಎ) ಐಪಿಸಿ :-
ದಿನಾಂಕ 08-01-2017 ರಂದು ಫಿರ್ಯಾದಿ ಪ್ರಲ್ಹಾದರೆಡ್ಡಿ ತಂದೆ ವೆಂಕಟರೆಡ್ಡಿ ಬೊಗಲೆ ವಯ: 29 ವರ್ಷ, ಜಾತಿ: ರೆಡ್ಡಿ, ಸಾ: ದಣ್ಣೂರ, ತಾ: ಅಳಂದ, ಜಿಲ್ಲಾ: ಕಲಬುರಗಿ ರವರು ಮನೆಯಲ್ಲಿದ್ದಾಗ ಪ್ರವೀಣ ತಂದೆ ವೀರಶೆಟ್ಟಿ ಗಾಡಿ ಸಾ: ಬಾಪೂರ, ತಾ & ಜಿ: ಬೀದರ ರವರು ಕರೆ ಮಾಡಿ ತಿಳಿಸಿದೇನೆಂದರೆ ನಾನು ನವೀನಕುಮಾರ ತಂದೆ ನಾರಾಯಣ ಸಾ: ಜಹೀರಾಬಾದ ರವರೊಂದಿಗೆ ಜೀಪ ಸಂಖ್ಯೆ ಕೆಎ-39/ಎ-0205 ನೇದರಲ್ಲಿ ಕುಳಿತು ರಸ್ತೆ ಸುರಕ್ಷತೆ ಪೆಟ್ರೋಲಿಂಗ ಕರ್ತವ್ಯ ಕುರಿತು ಮಂಗಲಗಿ ಗ್ರಾಮದಿಂದ ರಾಷ್ಟೀಯ ಹೆದ್ದಾರಿ-65 ಸೋಲಾಪುರ - ಹೈದ್ರಾಬಾದ ರೋಡಿನ ಮೇಲೆ ಬರುತ್ತಿದ್ದಾಗ ಜನತಾ ನಗರ ಹುಡಗಿ ಹತ್ತಿರ ಬಂದಾಗ ಕಬ್ಬಿನ ಲಾರಿ ಸಂ. ಕೆಎ-39/5815 ನೇದರ ಚಾಲಕನು ತನ್ನ ಲಾರಿಯನ್ನು ರಾತ್ರಿಯ ಸಮಯದಲ್ಲಿ ರೋಡಿನ ಮೇಲೆ ನಿಲ್ಲಿಸಿ ಇಂಡಿಕೇಟರ್ ಹಾಕದೇ ಯಾವುದೇ ಮುಂಜಾಗೃತೆ ಕ್ರಮ ವಹಿಸದೇ ಅಜಾಗರುಕತೆಯಿಂದ ನಿಲ್ಲಿಸಿದ್ದರಿಂದ ನಾನು ನಮ್ಮ ಜೀಪನ್ನು ನಿಲ್ಲಿಸಿ ಲಾರಿ ಚಾಲಕನಿಗೆ ವಿಚಾರಣೆ ಮಾಡಲಾಗಿ ಅವನು ತಿಳಿಸಿದೇನೆಂದರೆ ಸರ್ ನಮ್ಮ ಲಾರಿ ಪಂಚರ್ ಆಗಿದೆ 10 ನಿಮಿಷದಲ್ಲಿ ಕೆಲಸ ಮಾಡಿಕೊಂಡು ಹೋಗುತ್ತೇನೆ ಅಂತ ತಿಳಿಸಿರುತ್ತಾನೆ, ನಂತರ ನಾನು ಲಾರಿ ಚಾಲಕನಿಗೆ ಇದು ಹೈವೇ ರೋಡ ಇದೇ ನಿನ್ನ ಲಾರಿಯನ್ನು ರೋಡಿನ ಪಕ್ಕದಲ್ಲಿ ನಿಲ್ಲಿಸಿ ನಿನ್ನ ಕೆಲಸ ಮಾಡಿಕೊಳ್ಳು ಅಂತ ಹೇಳಿ ಸ್ವಲ್ಪ ಮುಂದೆ ಬಂದಾಗ ಹೈದ್ರಾಬಾದ ಕಡೆಯಿಂದ ಹೈದ್ರಾಬಾದ - ಕಲಬುರಗಿ ಬಸ್ ಸಂಖ್ಯೆ ಕೆಎ-32/ಎಫ್-2089 ನೇದರ ಚಾಲಕ ಮಡಿವಾಳಪ್ಪಾ ತಂದೆ ಶರಣಪ್ಪಾ ಪಾಟೀಲ್. ಸಾ: ರಾಯಕೊಡ ಇವನು ತನ್ನ ಬಸನ್ನು ಅತಿ ವೇಗ ಮತ್ತು ನಿಷ್ಕಾಳಜಿತನದಿಂದ ರೋಡಿನ ಮೇಲೆ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಜನತಾ ನಗರ ಹುಡಗಿ ಹತ್ತಿರ ರೋಡಿನ ಮೇಲೆ ನಿಂತಿದ್ದ ಲಾರಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿರುತ್ತಾನೆ, ನಂತರ ನಾನು ಹೋಗಿ ನೋಡಲಾಗಿ ಬಸ್ ಕಂಡಕ್ಟರ್ ಅಂಬರಾಯ ತಂದೆ ಮಲ್ಲಪ್ಪಾ ಸಾ: ಇಟಗಾ ಇವರಿಗೆ ಬಲಗಾಲ ಮೊಳಕಾಲ ಕೆಳಗೆ ಭಾರಿ ರಕ್ತಗಾಯವಾಗಿ ಮುರಿದಿರುತ್ತದೆ, ಎಡಗಾಲ ಮೊಳಕಾಲಗೆ ಭಾರಿ ಗುಪ್ತಗಾಯವಾಗಿ ಮುರಿದಿರುತ್ತದೆ, ಎಡಗಣ್ಣಿನ ಮೇಲೆ ಸಾದಾ ರಕ್ತಗಾಯ, ಬಲಗಡೆ ಗಲ್ಲಕ್ಕೆ ತರಚಿದ ಗಾಯ ತಲೆಗೆ ಸಾದಾ ಗುಪ್ತಗಾಯ ಮತ್ತು ಎದೆಯಲ್ಲಿ ಸಾದಾ ಗುಪ್ತಗಾಯವಾಗಿರುತ್ತದೆ, ನಿಮ್ಮ ತಂದೆ ವೆಂಕಟರೆಡ್ಡಿ ತಂದೆ ಶಂಕರರೆಡ್ಡಿ ಸಾ: ದಣ್ಣೂರ ಇವರಿಗೆ ಎಡಗಾಲ ಮೊಳಕಾಲ ಕೆಳಗೆ ಭಾರಿ ರಕ್ತಗಾಯವಾಗಿ ಮುರಿದಿರುತ್ತದೆ, ಎದೆಯಲ್ಲಿ ಭಾರಿ ಗುಪ್ತಗಾಯ, ಹಣೆಯ ಎಡಗಡೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲೇ ಮೃತ ಪಟ್ಟಿರುತ್ತಾರೆ, ಬಸ್ ಚಾಲಕ ಮಡಿವಾಳಪ್ಪಾ ಇವನಿಗೆ ಬಲ ಮೊಳಕಾಲಗೆ ಸಾದಾ ರಕ್ತಗಾಯ ಮತ್ತು ಎಡಗಡೆ ತೊಡೆಗೆ ಸಾದಾ ಗುಪ್ತ ಗಾಯಗಳು ಆಗಿರುತ್ತವೆ, ನಂತರ ನಾನು ಎಲ್ಲರಿಗೆ (ಎಲ್ & ಟಿ) ಎನ್.ಹೆಚ್.ಎ.ಐ ನ ಅಂಬುಲೆನ್ಸದಲ್ಲಿ ಕೂಡಿಸಿಕೊಂಡು ಚಿಕಿತ್ಸೆ ಕುರಿತು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತೇನೆ, ಬಸ್ ಕಂಡಕ್ಟರ್ ಹೆಸರು ಮತ್ತು ವಿಳಾಸವನ್ನು ಬಸ್ ಚಾಲಕನಿಂದ ಕೇಳಿ ತಿಳಿದುಕೊಂಡಿದ್ದು ಮತ್ತು ನಿಮ್ಮ ತಂದೆ ಮೃತ ವೆಂಕಟರೆಡ್ಡಿ ಇವರ ಜೇಬಿನಲ್ಲಿ ಇದ್ದ ಐ.ಡಿ ಕಾರ್ಡ ನೋಡಿ ಹೆಸರು ಮತ್ತು ವಿಳಾಸವನ್ನು ತಿಳಿದುಕೊಂಡಿರುತ್ತೇನೆ, ಲಾರಿ ಚಾಲಕನ ಹೆಸರು ಮತ್ತು ವಿಳಾಸವನ್ನು ಗೊತ್ತಾಗಿರುವುದಿಲ್ಲಾ, ಲಾರಿ ಚಾಲಕನ್ನು ನೋಡಿದರೆ ಗುರುತ್ತಿಸುತ್ತೇನೆ ಅಂತ ತಿಳಿಸಿರುತ್ತಾರೆ, ನಂತರ ಫಿರ್ಯಾದಿಯು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ಬಂದು ತಮ್ಮ ತಂದೆ ವೆಂಕಟರೆಡ್ಡಿ ಇವರಿಗೆ ನೋಡಲಾಗಿ ಈ ಮೇಲಿನಂತೆ ಗಾಯಗಳಾಗಿ ಮೃತಪಟ್ಟಿದ್ದು ಕಂಡು ಬಂದಿರುತ್ತದೆ ಅಮತ ನೀಡಿದ ಮೌಖಿಕ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.