Police Bhavan Kalaburagi

Police Bhavan Kalaburagi

Friday, August 31, 2018

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ರಾಘಬೇಂದ್ರ ನಗರ ಠಾಣೆ : ದಿನಾಂಕ 30.08.2018 ರಂದು ಸಾಯಂಕಾಲ ರಂದು ರಾಘವೇಂದ್ರ ನಗರ , ಠಾಣಾ ವ್ಯಾಪ್ತಿಯ  ಗಂಗಾ ನಗರ ಸ್ಮಶಾನದ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಮೇರೆಗೆ ಶ್ರೀ . ಮೌಲಾ .ಎಸ್.. ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಗಂಗಾ ನಗರದ  ಸ್ಮಶಾನ ಹತ್ತಿರ ಹೋಗಿ ನೋಡಲು ಸ್ಮಶಾನ ಕಂಪೌಂಡ ಪಕ್ಕದ ಸಾರ್ವಜನಿಕ ಸ್ಥಳಲ್ಲಿ 8 ಜನರು ಗುಂಪಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದು ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಿ ಜೂಜಾಟ ನಿರತರನ್ನು ವಶಕ್ಕೆ ಪಡೆದುಕೊಂಡು ನಂತರ ಸದರಿಯವರ ಹೆಸರು ವಿಳಾಸ ವಿಚಾರಿಸಲು 1) ಬಸವರಾಜ ತಂದೆ ಜಟ್ಟೆಪ್ಪ ಗಣಘಾಪುರ ಸಾ|| ಗಂಗಾ ನಗರ ಕಲಬುರಗಿ. 2) ಶರಣಬಸಪ್ಪ ತಂದೆ ಹಣವಂತರಾಯ ಪಾಟೀಲ್ ಸಾ|| ಗ್ರೀಕಲ್ಚರ್ ಲೇಔಟ ಬ್ರಹ್ಮಪೂರ ಕಲಬುರಗಿ 3) ಮಹ್ಮದ್ ಖದೀರ ತಂದೆ ಮಹ್ಮದ್ ಹಿರುದ್ದಿನ ಸಾ|| ಲಾಲಗೇರಿ ಮಜ್ಜೀದ್ ಹತ್ತಿರ ಬ್ರಹ್ಮಪೂರ ಕಲಬುರಗಿ 4) ಬಾಬುರಾವ್ ತಂದೆ ಗನಪತಿರಾವ್ ಇಂಗಳಗಿ ಸಾ|| ಜಾಧವ್ ಶಾಲೆ ಹತ್ತಿರ ನ್ಯುರಾಘವೇಂದ್ರ ಕಾಲೋನಿ ಕಲಬುರಗಿ 5) ಶಿವಕುಮಾರ ತಂದೆ ಪ್ರಭು ಡೋಣ್ಣೂರ ಸಾ|| ವೆಂಕಟೇಶ್ವರ ಗುಡಿಯ ಕಮಾನ್ ಮುಂಬಾಗ ನ್ಯೂ ರಾಘವೇಂದ್ರ ಕಾಲೋನಿ ಕಲಬುರಗಿ 6) ಪರಮೇಶ್ವರ ತಂದೆ ಸಯದಪ್ಪ ಗಡೇದ ಸಾ|| ಹನುಮಾನ ಗುಡಿ ಹತ್ತಿರ ಗಂಗಾನಗರ ಬ್ರಹ್ಮಪೂರ ಕಲಬುರಗಿ  7) ಬಸವರಾಜ ತಂದೆ ಚಂದ್ರಶ್ಯಾ ಜಮಾದಾರ ಸಾ|| ಯಲ್ಲಮ್ಮ ಗುಡಿಯ ಹತ್ತಿರ ಗಂಗಾ ನಗರ ಬ್ರಹ್ಮಪುರ ಕಲಬುರಗಿ 8) ರೇವನಸಿದ್ದಪ್ಪ ಶರಣಬಸಪ್ಪ ಮದರಿ ಸಾ|| ಮೋರೆಕಾಂಪ್ಲೇಕ್ಸ ಹತ್ತಿರ ನ್ಯೂ ರಾಘವೇಂದ್ರ ಕಾಲೋನಿ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 10750/- ರೂ ಮತ್ತು 52 ಇಸ್ಪೇಟ ಎಲೆಗಳು ದೊರೆತಿದ್ದು  ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಜೇವರಗಿ ಠಾಣೆ : ದಿನಾಂಕ 19.08.2018 ರಂದು ನನ್ನ ಮೈದುನನಾದ ಶಿವಪುತ್ರ ಕೇರೂರ ಇವರ ಅತ್ತೆ ಕಲಬುರಗಿ ತಾಲೂಕಿನ ಶರಣಶಿರಸಗಿ ಗ್ರಾಮದಲ್ಲಿ ಮರಣ ಹೊಂದಿದ್ದರಿಂದ ಅವಳ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ನಮ್ಮೂರಿನಿಂದ ನಾನು, ನನ್ನ ಭಾವನ ಹೆಂಡತಿ ಶಾಂತಮ್ಮ ಗಂಡ ಬಸವರಾಜ ಹಾಗೂ ನನ್ನ ಮೈದುನ ಶಿವಪುತ್ರ ಕೇರೂರ ಮೂವರೂ ಕೂಡಿಕೊಂಡು ನಮ್ಮೂರಿನ ಶ್ರೀಶೈಲ ತಂದೆ ರಾಜಶೇಖರ ಗರೂರು ಇತನು ಚಲಾಯಿಸುವ ಆಟೋ ನಂ ಕೆಎ 33 ,4972 ನೇದ್ದನ್ನು ಬಾಡಿಗೆ ಮಾಡಿಕೊಂಡು ಅದರಲ್ಲಿ ಕುಳಿತಕೊಂಡು ನಾವು ಮೂರು ಜನ ಶರಣಶಿರಸಗಿ ಗ್ರಾಮಕ್ಕೆ ಹೋಗಿ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿ ನಂತರ ನಮ್ಮೂರಿಗೆ ಹೋಗುವ ಕುರಿತು ಸದರಿ ಮೇಲೆ ನಮೂದಿಸಿದ ಆಟೋದಲ್ಲಿ ಕುಳಿತುಕೊಂಡು ಹೋಗುತ್ತೀರುವಾಗ ರಾತ್ರಿ 07.30 ಪಿಎಮ್ ಸುಮಾರಿಗೆ ನಮ್ಮ ಆಟೋ ಚಾಲಕ ಜೇವರಗಿ ನಗರ ದಾಟಿ ಶಹಾಪೂರ ಕಡೆಗೆ ಆಟೋ ಚಲಾಯಿಸಿಕೊಂಡು ಹೋಗುತ್ತಿದ್ದಂತೆ ಜೇವರಗಿ ನಗರದ ಹೋರ ವಲಯದಲ್ಲಿರು ಸತ್ತಾರ ಸಾಬ ಪೇಟ್ರೋಲ್ ಬಂಕ ಎದುರುಗಡೆ ರೋಡಿನ ಮೇಲೆ ಎದುರಿನಿಂದ ಒಂದು ಕಾರ ನಂ ಕೆಎ 25 ಪಿ 1579 ನೇದ್ದರ ಚಾಲಕನು ತನ್ನ ಕಾರನ್ನು ಅತೀ ವೇಗ ಮತ್ತು ಅಜಾಗುರುಕತೆಯಿಂದ ಚಲಾಯಿಸಿಕೊಂಡು ಬಂದು ನಮ್ಮ ಆಟೋಕ್ಕೆ ಬಲಬಾಗದಲ್ಲಿ ಡಿಕ್ಕಿ ಹೋಡೆದ ಪರಣಾಮವಾಗಿ ನಮ್ಮ ಆಟೋದ ಬಲ ಬದಿಯ ಸೀಟಿನಲ್ಲಿ ಕುಳಿತಿರುವ ನನ್ನ ನೆಗೇಣಿ ಶಾಂತಮ್ಮ ಗಂಡ ಬಸವರಾಜ ಕೇರೂರ ಇವಳಿಗೆ ಬಲಗೈ ಮುಂಗೈಯ ಹತ್ತೀರ ಭಾರಿ ರಕ್ತ ಗಾಯವಾಗಿರುತ್ತದೆ. ಘಟನೆ ನಂತರ ಸದರಿ ಕಾರ ಚಾಲಕ ತನ್ನ ಕಾರ ಸ್ವಲ್ಪ ಮುಂದಕ್ಕೆ ಹೋಗಿ ನಿಲ್ಲಿಸಿ ಶಾಂತಮ್ಮಳಿಗೆ ಆದ ಗಾಯ ನೋಡಿ ಅಲ್ಲಿಂದ ತನ್ನ ಕಾರ ಸೇಮೆತ ಓಡಿ ಹೋಗಿರುತ್ತಾನೆ. ನಮಗೆ ಸದರಿ ಕಾರ ಚಾಲಕನ ಹೆಸರು ಮತ್ತು ವಿಳಾಸ ಗೊತ್ತಾಗಿರುವುದಿಲ್ಲಾ ಮುಂದೆ ನೋಡಿದರೆ ಗುರುತಿಸುತ್ತೇನೆ, ನಂತರ ಶಾಂತಮ್ಮ ಇವಳಿಗೆ ಸರ್ಕಾರಿ ಆಸ್ಪತ್ರೆ ಜೇವರಗಿಗೆ ತಂದು ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಯುನೈಟೆಡ ಆಸ್ಪತ್ರೆ ಕಲಬುರಗಿಗೆ ತಂದು  ಸೇರಿಕೆ ಮಾಡಿರುತ್ತೇವೆ, ಕಾರಣ ಮಾನ್ಯರು ಕಾರ ನಂ ಕೆಎ 25 ಪಿ 1579 ನೇದ್ದರ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೆಕಂತಾ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸದರ ಪ್ರಕರಣದಲ್ಲಿನ ಗಾಯಾಳು ಶ್ರೀಮತಿ ಶಾಂತಮ್ಮ ಗಂಡ ಬಸವರಾಜ ಕೆರೂರ ಇವಳು; ದಿನಾಂಕ; 19/08/2018 ರಂದು ರಸ್ತೆ ಅಪಘಾತದಲ್ಲಿ ಗಾಯಹೊಂದಿ ಚಿಕಿತ್ಸೆ ಕುರಿತು ಯುನೈಟೆಡ್ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಮಾಡಿದ್ದು ಅಲ್ಲಿ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆ ಕುರಿತು ದಿನಾಂಕ; 29/08/2018 ರಂದು ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಮಾಡಿದ್ದು ನಮ್ಮ ಅತ್ತಿಗೆ ಶಾಂತಮ್ಮ ಇವಳು ಚಿಕಿತ್ಸೆ ಪಡೆಯುತ್ತಾ ಚಿಕಿತ್ಸೆ ಫಲಕಾರಿಯಾಗದೆ. ಇಂದು ದಿನಾಂಕ; 30/08/2018 ರಂದು ಬೆಳಿಗ್ಗೆ 7-00 ಗಂಟೆಗೆ ಮೃತಪಟ್ಟಿರುತ್ತಾಳೆ ಮೃತಪಟ್ಟಿರುತ್ತಾಳೆ ಅಂತಾ ಶ್ರೀ ಶಿವಪುತ್ರ ತಂದೆ ಸಿದ್ದರಾಮಪ್ಪ ಕೆರೂರ ಸಾ; ಮುಡಬೂಳ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BIDAR DISTRICT DAILY CRIME UPDATE 31-08-2018¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 31-08-2018

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 111/2018, ಕಲಂ. 279, 337, 304(ಎ) ಐಪಿಸಿ :-
ದಿನಾಂಕ 30-08-2018 ರಂದು ಫಿರ್ಯಾದಿ ಬಾಗಣ್ಣಾ ತಂದೆ ಮರೇಪ್ಪಾ ತಳವಾರ ವಯ: 19 ವರ್ಷ, ಜಾತಿ: ಕಬ್ಬಲಿಗ,  ಸಾ: ಮನೆ ಸಂ. 57, ಪಂಚಶೀಲ ನಗರ ರೇಲ್ವೆ ನಿಲ್ದಾಣದ ಹತ್ತಿರ ಕಲಬುರಗಿ ರವರು ಮೊಹಮ್ಮದ ಮುಸ್ತಾಫಾ ತಂದೆ ಗುಲಾಮ ರಸೂಲ್. ಸಾ: ಘೊಡವಾಡಿ. ತಾ: ಹುಮನಾಬಾದ ಮೋಟಾರ್ ಸೈಕಲ್ ನಂ. ಕೆಎ-51/ಇಕೆ-3797 ನೇದರ ಮೇಲೆ ಇಬ್ಬರೂ ಕೂಡಿ ಕಲಬುರಗಿ ನಗರದಿಂದ ಹುಮನಾಬಾದ ಮಾರ್ಗವಾಗಿ ಘೊಡವಾಡಿ ಗ್ರಾಮಕ್ಕೆ ಹೋಗುತ್ತಿದ್ದಾಗ ಮೊಹಮ್ಮದ ಮುಸ್ತಾಫಾ ಇವನು ರಾತ್ರಿಯಾಗಿದ್ದರಿಂದ ತನ್ನ ಮೋಟಾರ್ ಸೈಕಲ್ ನಿಧಾನವಾಗಿ ರೋಡಿನ ಬದಿಯಲ್ಲಿ ಚಲಾಯಿಸಿಕೊಂಡು ಹೊಸ ಆರ್.ಟಿ.ಓ ಚೆಕ್ ಪೋಸ್ಟ್ ಮೊಳಕೇರಾ ಹತ್ತಿರ ಹೋದಾಗ ರಾಷ್ಟ್ರೀಯ ಹೆದ್ದಾರಿ ನಂ. 65 ಸೋಲಾಪುರ - ಹೈದ್ರಾಬಾದ ರೋಡಿನ ಮೇಲೆ ಕಂಟೆನರ್ ಸಂ. ಎಪಿ-16/ಟಿಬಿ-9025. ನೇದರ ಚಾಲಕನಾದ ಆರೋಪಿ ತ್ರಿನಾಧ ತಂದೆ ಸೀತಮನಾಯಡು ಚಿಮಲ ಸಾ: ಬಿ.ಸಿ ಕಾಲೋನಿ ಗುಂಡುಗೋಲಾನು ವೇಸ್ಟ ಗೋದಾವರಿ (ಆಂದ್ರ ಪ್ರದೇಶ) ಇವನು ತಾನು ಚಲಾಯಿಸುತ್ತಿದ್ದ ಕಂಟೆನರ್ ಹಿಂದಿನಿಂದ ಅಂದರೆ ಹೈದ್ರಾಬಾದ ಕಡೆಯಿಂದ ಅತಿವೇಗ ಮತ್ತು ನಿಷ್ಕಾಳಜಿತನದಿಂದ ರೋಡಿನ ಮೇಲೆ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಮೊಹಮ್ಮದ ಮುಸ್ತಾಫಾ ಇವನು ಚಲಾಯಿಸುತ್ತಿದ್ದ ಮೋಟಾರ್ ಸೈಕಲನ ಬಲಗಡೆಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿರುತ್ತಾರೆ, ಕಾರಣ ಸದರಿ ಅಪಘಾತದಿಂದ ಫಿರ್ಯಾದಿಗೆ ಎಡಗೈ ಬೆರಳುಗಳಿಗೆ ತರಚಿದ ಗಾಯ, ಬಲಗಾಲ ತೊಡೆಗೆ ಸಾದಾ ಗುಪ್ತಗಾಯಗಳು ಆಗಿರುತ್ತವೆ, ಮೊಹಮ್ಮದ ಮುಸ್ತಾಫಾ ಇವನಿಗೆ ನೋಡಲಾಗಿ ತಲೆಗೆ ತೀವೃ ರಕ್ತಗಾಯ ಮತ್ತು ಎರಡು ಮೊಣಕಾಲುಗಳಿಗೆ ತರಚಿದ ಗಾಯಗಳು ಆಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಮೌಖಿಕ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

aAvÁQ ¥ÉưøÀ oÁuÉ C¥ÀgÁzsÀ ¸ÀA. 85/2018, PÀ®A. 323, 324, 355, 504, 506, 34 L¦¹ eÉÆvÉ J¸ï.¹/J¸ï.¹ 3(1) (Dgï) (J¸ï) :-
ಸುಮಾರು 15 ದಿವಸಗಳ ಹಿಂದೆ ರಾಯಪಳ್ಳಿ ಗ್ರಾಮದ ಆಕಾಶ ಈತನು ನಾಗಮಾರಪಳ್ಳಿ ಗ್ರಾಮಕ್ಕೆ ಬಂದಾಗ ಫಿರ್ಯಾದಿ ರಾಜಕುಮಾರ ತಂದೆ ಈರಪ್ಪಾ ಕಾಂಬಳೆ ವಯ 30 ವರ್ಷ, ಜಾತಿ: ಎಸ್.ಸಿ ಹೊಲಿಯಾ ಸಾ: ನಾಗಮಾರಪಳ್ಳಿ ಆಕಾಶ ಈತನಿಗೆ 200/- ರೂ. ತನ್ನ ಮನೆಯ ಮೇಲಿನ ಡಿಟಿಹೆಚ್ ಸಿಗ್ನಲ್ ಸೆಟ್ ಮಾಡಲು ಕೊಟ್ಟಿದ್ದು,  ಆಕಾಶ ಈತನು ಮನೆಯ ಮೇಲಿನ ಡಿಟಿಹೆಚ್ ಬುಟ್ಟಿ ಚೆಕ್ ಮಾಡಿ ಇದು ಆಗುವುದಿಲ್ಲ ಕೆಟ್ಟು ಹೊಗಿದೆ ಹೊಸ ಬುಟ್ಟಿ ತೆಗೆದುಕೊಂಡು ಬಾ ನಾನು ಕೂಡಿಸಿಕೊಡುತ್ತೆನೆ ಅಂತಾ ಹೆಳಿ ಹೊಗಿದ್ದು, ಹಿಗಿರುವಲ್ಲಿ ದಿನಾಂಕ 30-08-2018 ರಂದು ಫಿರ್ಯಾದಿಯು ಅಂಬೇಡ್ಕರ ಕಟ್ಟೆಯ ಮೇಲೆ ಕುಳಿತಾಗ ಆಕಾಶ ಈತನು ತಮ್ಮೂರ ನಾಮದೇವ ಈತನ ಹೊಟೆಲ್ ಮುಂದೆ ಸಿಸಿ ರೋಡಿನ ಮೇಲೆ ಬಂದಿದ್ದನ್ನು ನೋಡಿ ಆಕಾಶನ  ಹತ್ತಿರ ಹೊಗಿ ನಾನು ಕೊಟ್ಟ 200/- ರೂ. ನನಗೆ ವಾಪಸ್ಸು ಕೊಡು ಅಂತಾ ಕೆಳಿದಾಗ ಆಕಾಶ ಈತನು ನನಗೆ 200/- ರೂ ವಾಪಸ್ಸು ಕೊಟ್ಟಾಗ ಅಲ್ಲೆ ಇದ್ದ ನಾಗರಾಜ ತಂದೆ ಹಣಮಂತ ದೆಗಲವಾಡೆ ವಯ: 28 ವರ್ಷ, ಜಾತಿ: ಲಿಂಗಾಯತ, ಸಂತೋಷ ತಂದೆ ವಿಜಯಕುಮಾರ ಬೆಣ್ಣೆ ವಯ: 23 ವರ್ಷ, ಜಾತಿ: ಲಿಂಗಾಯತ, ವಿರಶೆಟ್ಟಿ ತಂದೆ ಹಣಮಂತ ದೆಗಲವಾಡೆ ವಯ: 24 ವರ್ಷ, ಜಾತಿ: ಲಿಂಗಾಯತ ಇಬ್ಬರು ಸಾ: ನಾಗಮಾರಪಳ್ಳಿ ರವರು ಕೂಡಿ ಫಿರ್ಯಾದಿಗೆ ಏ ರಾಜ್ಯಾ ನಿನು ನಮ್ಮ ಗೆಳೆಯನಿಗೆ ಡಿಟಿಹೆಚ್ ರಿಪೇರಿ ಮಾಡಲು ಕೊಟ್ಟ ಹಣ ಯಾಕೆ ವಾಪಸ್ಸು ತೆಗೆದುಕೊಂಡಿದ್ದಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ವಿರಶೆಟ್ಟಿ ಈತನು ಒತ್ತಿ ಹಿಡಿದಾಗ ಸಂತೋಷ ಈತನು ತನ್ನ ಬಲಗಾಲಿನ ಚಪ್ಪಲಿ ತನ್ನ ಬಲಗೈಯಲ್ಲಿ ತೆಗೆದುಕೊಂಡು ಚಪ್ಪಲಿಯಿಂದ ಎರಡು ಕಪಾಳದ ಮೇಲೆ ಹೊಡೆದಿರುತ್ತಾನೆ, ನಾಗರಾಜ ಈತನು ಬಡಿಗೆಯಿಂದ ಎಡಮೊಣಕೈ ಹತ್ತಿರ, ಎಡಗಾಲಿನ ಪಿಂಡರಕಿ ಮೇಲೆ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ, ಸದರಿ ಘಟನೆಯನ್ನು ನೋಡಿ ಬಿಡಿಸಲು ಬಂದ ಫಿರ್ಯಾದಿಯ ಅಣ್ಣನಾದ ಸಂಜುಕುಮಾರ ಈತನಿಗೆ ನಾಗರಾಜ ಈತನು ಒಂದು ಕಲ್ಲು ತೆಗೆದುಕೊಂಡು ಕಲ್ಲಿನಿಂದ ಬಲಗಾಲಿನ ಮೊಣಕಾಲಿನ ಕೆಳಭಾಗದಲ್ಲಿ ಹೊಡೆದು ರಕ್ತಗಾಯ ಪಡಿಸಿರತ್ತಾನೆ, ಮೂವರು ಸೇರಿ ಫಿರ್ಯಾದಿಗೆ ನೀವು ಎಲ್ಲಿಯಾದರು ಸಿಕ್ಕರೆ ನಿಮಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕರುತ್ತಾರೆ, ಸದರಿ ಘಟನೆಯನ್ನು ಕಂಟೆಪ್ಪಾ ತಂದೆ ರಾಮಪ್ಪಾ ಮತ್ತು ಗಣಪತಿ ತಂದೆ ಶಿವಪ್ಪಾ ವರ್ಮಾ ರವರು ನೊಡಿ ಬಿಡಿಸಿಕೊಂಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.