Police Bhavan Kalaburagi

Police Bhavan Kalaburagi

Saturday, October 10, 2020

BIDAR DISTRICT DAILY CRIME UPDATE 10-10-2020

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 10-10-2020

 

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 115/2020 ಕಲಂ 120(ಬಿ), 341, 354(ಡಿ)(1), 506, 509, 511 ಜೊತೆ 34 ಐಪಿಸಿ :-

 

ದಿನಾಂಕ: 09/10/2020 ರಂದು ಮದ್ಯಾಹ್ನ 0130 ಗಂಟೆಗೆ ಫಿರ್ಯಾದಿದಾರರಾದ ಕು. ಮಂಗಳಾ ಕಾಂಬಳೆ, ಪಿ.ಡಿ.ಓ ಚಾಂಬೋಳ ಗ್ರಾಮ ಪಂಚಾಯತಿ ರವರು ಠಾಣೆಗೆ ಹಾಜರಾಗಿ  ಲಿಖಿತ ದೂರು ಸಲ್ಲಿಸಿದರ ಸಾರಾಂಶವೇನೆಂದರೆ, ಫಿರ್ಯಾದಿರವರು ಪಿ.ಡಿ.ಓ ಆಗಿ ಚಾಂಬೋಳ ಗ್ರಾಮ ಪಂಚಾಯತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಇವರಿಗೆ ಮಾರ್ಚ ತಿಂಗಳಿನಿಂದ ಕೆಲವು ಗೂಂಡಾಗಳು  ಹಿಂಬಾಲಿಸುತಿದ್ದು, ನನ್ನ ಜೀವಕ್ಕೆ ಹಾನಿ ಮಾಡಲು ಯತ್ನಿಸುತ್ತಿದ್ದಾರೆ, ನನಗೆ ರೇಪ್ ಮಾಡಿ ಕೊಲೆ ಮಾಡುತ್ತೇವೆ ಎಂದು ಜೀವ ಬೇದರಿಕೆ ಹಾಕಿರುತ್ತಾರೆ. ಕೆಲವು ಗೂಂಡಾಗಳು ನನಗೆ ಬೈಕ ಮೇಲೆ ಕಾರಿನ ಮೂಲಕ ಮತ್ತು ನಮ್ಮ ಮನೆಯ ಮುಂದೆ ಗುರುನಾನಕ ಕಾಲೋನಿಯಲ್ಲಿ ಜಿಲ್ಲಾ ಪಂಚಾಯತಿಗೆ ಹೋಗುವ ದಾರಿಯಲ್ಲಿ ಮತ್ತು ಚಾಂಬೋಳ ಗ್ರಾಮ ಪಂಚಾಯತಿಯ ದಾರಿಯಲ್ಲಿ ಕೆಲವು ಯುವಕರ ತಂಡ ಹಿಂಬಾಲಿಸುತ್ತಿದ್ದಾರೆ. ನ್ಯೂ ಟೌನ್ ಪೊಲೀಸ್ ಠಾಣೆಯ ಪಕ್ಕದಲ್ಲಿ ನನ್ನ ಕಾರಿಗೆ ಅಡ್ಡಗಟ್ಟಿ ನಿಲ್ಲಿಸಲು ಪ್ರಯತ್ನ ಮಾಡಿದ್ದಾರೆ, ನನಗೆ ಸನ್ನೆ ಮಾಡುವುದು, ಚುಡಾಯಿಸುವುದು, ಜೀವ ಬೆದರಿಕೆ ಹಾಕುವುದನ್ನು ಮಾಡುತ್ತಿದ್ದಾರೆ. ನಾನು ಈಗಾಗಲೆ ಚಿಲ್ಲರ್ಗಿ ಗ್ರಾಮ ಪಂಚಾಯತಿಯಲ್ಲಿ ನಡೆದ ಅವ್ಯವಹಾರದ ಬಗ್ಗೆ ದೂರು ನೀಡಿದ್ದೇನೆ. ಅವರ ಮೇಲೆ ಕ್ರಮ ಜರುಗಿಸಲು ಇ.ಓ ರವರು ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನಲೆಯಲ್ಲಿ ನನಗೆ ಗೂಂಡಾಗಳು ಹಿಂಬಾಲಿಸುತ್ತಿದ್ದಾರೆ. ಈಗ ನಾನು ಚಂಬೋಳ ಗ್ರಾಮ ಪಂಚಾಯತಿ ಸದಸ್ಯರ ಅವ್ಯವಹಾರಕ್ಕೆ ಅವಕಾಶ ನೀಡಿಲ್ಲವೆಂದು ಅವರು ಸಹ ಈ ಸಂಚಿನಲ್ಲಿ ಭಾಗಿಯಾಗಿದ್ದಾರೆ ಅವರುಗಳ ಹೆಸರುಗಳು ಈ ಕೇಳಕಂಡಂತೆ ಇವೆ. 1) ಶ್ರೀ ಗೂಡೂರು ಭೀಮಸೇನ್, ಉಪಕಾರ್ಯದಶರ್ಿ ಮಾಜಿ ಜಿಲ್ಲಾಪಂಚಾಯತಿ ಬೀದರ. 2) ಶ್ರೀಮತಿ ಶ್ವೇತಾ ಶಿವಪೂಜೆ, ಮಾಜಿ ಅದ್ಯಕ್ಷರು, ಚಿಲ್ಲರ್ಗಿ ಗ್ರಾಮ ಪಂಚಾಯತ. 3) ಶ್ರೀ ಮಲ್ಲಿಕಾರ್ಜುನ್  ಪಂಚಾಕ್ಷರಿ, ಮಾಜಿ ಅಧೀಕ್ಷಕ್ಷರು ಜಿಲ್ಲಾಪಂಚಾಯತ ಬೀದರ. 4) ಶ್ರೀ ನಾಗೇಂದ್ರ ಪಾಟೀಲ್ ಮಾಜಿ ಅದ್ಯಕ್ಷರು ಚಾಂಬೋಳ. 5) ಶ್ರೀ ಧನರಾಜ ಪಾಟೀಲ್ ನಿವಾಸಿ ಚಾಂಬೋಳ ಗ್ರಾಮ. 6) ಶ್ರೀ ಅರ್ಜುನ್ ಸದಸ್ಯರು ಚಾಂಬೋಳ ಗ್ರಾಮ. 7) ಶ್ರೀ ಶ್ರೀನಿವಾಸ್ ಬರಾಟೆ ನಿವಾಸಿ ಜನವಾಡಾ ಇವರುಗಳ  ವಿರುದ್ದ ಭ್ರಷ್ಟಾಚಾರ ಹಾಗೂ ನನಗೆ ನೀಡಿದ ಕಿರುಕುಳದ ಹಿನ್ನಲೆಯಲ್ಲಿ ದೂರು ನೀಡಿದ್ದರಿಂದ ಇವರೆಲ್ಲರೂ ಒಂದಾಗಿ ಉನ್ನತ ಮಟ್ಟದ ರಾಜಕೀಯ ಪ್ರಭಾವ ಬಳಸಿಕೊಂಡು ಕೆಲವು ಪುಡಾರಿ ಗೂಂಡಾಗಳನ್ನು ನನ್ನ ಹಿಂದೆ ಬಿಟ್ಟು ಬಲತ್ಕಾರದ ಪ್ರಕರಣದ ಮಾಡಿ ವ್ಯವಸ್ಥಿತವಾಗಿ ನನ್ನನ್ನು ಕೊಲೆ ಮಾಡಲು ಪ್ರಯತ್ನಿಸುತ್ತಿದ್ದಾರೆ.  ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಮಾಕರ್ೆಟ ಪೊಲೀಸ ಠಾಣೆ ಅಪರಾಧ ಸಂಖ್ಯೆ 69/2020 ಕಲಂ 363 ಐಪಿಸಿ :-

9/10/20 ರಂದು 1600 ಗಂಟೆಗೆ ಫೀರ್ಯಾದಿ  ಸೂರ್ಯಕಾಂತ ತಂದೆ ಮಾರೂತಿ ಹೊಸಮನಿ ಸಾ:ಎಡೆನ ಕಾಲೋನಿ ಬೀದರ  ರವರು ಠಾಣೆಗೆ ಹಾಜರಾಗಿ ದೂರು ನೀಡಿದರ ಸಾರಾಂಶವೆನೆಂದರೆ ದಿನಾಂಕ:30-9-2020 ರಂದು ಇವರ ಹಿರಿಯ ಮಗ ಸ್ಟೀವನ್ ವಯ:17 ವರ್ಷ ಇವನು ಮನೆಯಿಂದ ಹೊರಗೆ ಹೋದವನು ಮರಳಿ ಮನೆಗೆ ಬಂದಿರುವದಿಲ್ಲಾ ನಾನು ನನ್ನ ಪತ್ತಿ ಹಾಗೂ ನನ್ನ ತಮ್ಮ ಎಲ್ಲರೂ ಕೂಡಿ ಹುಡುಕಾಡಿದರೂ ಸಿಕ್ಕಿರುವದಿಲ್ಲಾ ಆದರೂ ಸಹ ನನ್ನ ಮಗ ಸಿಕ್ಕಿರುವದಿಲ್ಲಾ ಸದರಿ ನನ್ನ ಮಗನಿಗೆ ಯಾರೋ ಅಪರಿಚಿತರು ಅಪಹರಣ ಮಾಡಿಕೊಂಡು ಹೋಗಿರಬಹುದು   ಮಗನಿಗೆ ಹುಡುಕಾಡಿ ಠಾಣೆಗೆ ಬಂದು ದೂರು ನೀಡಲು ವಿಳಂಬವಾಗಿರುತ್ತದೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 130/2020 ಕಲಂ 87 ಕೆಪಿ ಕಾಯ್ದೆ :-

 

ದಿನಾಂಕ:09/10/2020 ರಂದು 11:30 ಗಂಟೆಗೆ   ಅಲೀಮ್ ಪಿ.ಎಸ್. (.ವಿ) ಬಸವಕಲ್ಯಾಣ ನಗರ ಠಾಣೆಯಲ್ಲಿರುವಾಗ ಬಸವಕಲ್ಯಾಣ ನಗರದ ಅನುಭವ ಮಂಟಪ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತು ಕೊಂಡು ಹಣ ಹಚ್ಚಿ ಪಣ ತೋಟ್ಟು ಇಸ್ಪಿಟ್ ಎಲೆಗಳ ಅಂದರ ಬಾಹರ್ ನಸಿಬಿನ ಜೂಜಾಟವನ್ನು ಆಡುತ್ತಿದ್ದಾರೆ ಅಂತಾ ಮಾಹಿತಿ ಬಂದಿದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ನೋಡಿದಾಗ ಬಸವಕಲ್ಯಾಣ ನಗರದ ಅನುಭವ ಮಂಟಪ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 5 ಜನರು ಗುಂಪಾಗಿ ಕುಳಿತು ಇಸ್ಪಿಟ್ ಎಲೆಗಳ ಅಂದರ ಬಾಹರ ನಸೀಬಿನ ಜೂಜಾಟವನ್ನು ಹಣ ಹಚ್ಚಿ ಪಣ ತೊಟ್ಟು ಆಡುತ್ತಿರುವುದನ್ನು ನೋಡಿ   ದಾಳಿಮಾಡಿ   1] ಭಾಲ್ಕೇಶ್ವರ ತಂದೆ ರೇವಣಪ್ಪಾ ಸೋನಾರ ವಯಸ್ಸು//38  ವನ ಅಧೀನದಿಂದ ನಗದು ಹಣ 2100/-ರೂ   2] ರಮೇಶ ತಂದೆ ಮಾದಪ್ಪಾ ಹಲಗುಂದೆ ವಯಸ್ಸು//32 ವನ ಅಧಿನದಿಂದ ನಗದು ಹಣ 1900/-ರೂ 3] ಶಿವಶಂಕರ ತಂದೆ ಚಂದ್ರಕಾಂತ ರಾಜೋಳೆ ವಯಸ್ಸು//25 ವರ್ಷ ವನ ಧಿನದಿಂದ ನಗದು ಹಣ 2000/-ರೂ  4] ಆಕಾಶ ತಂದೆ ಸಂಗಪ್ಪಾ ಸೋನಾರ ವಯಸ್ಸು//24 ವರ್ಷ ವನ ಅಧೀನದಿಂದ ನಗದು ಹಣ 1200/-ರೂ ಸಿಕ್ಕ್ಕಿರುತ್ತವೆ, ಮತ್ತು 5] ಆಕಾಶ ತಂದೆ ಪಂಡಿತ ರಾಠೋಡ್ ವಯಸ್ಸು//25 ವರ್ಷ ವನ ಅಧೀನದಿಂದ ನಗದು ಹಣ 2800/-ರೂ ಸಿಕ್ಕ್ಕಿರುತ್ತವೆ ಹಾಗು ಅಪರಾಧ ಸ್ಥಳದಲ್ಲಿ ಪರಿಶಿಲಿಸಿ ನೋಡಲು ನಗದು ಹಣ 5120/-ರೂ ಮತ್ತು 52 ಇಸ್ಪಿಟ್ ಎಲೆಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.