ಕೊಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ 21-10-2017 ರಂದು ನನ್ನ ಕೆಲಸ ಮುಗಿಸಿಕೊಂಡು ರಾತ್ರಿ ರಾಘವೆಂದ್ರ ಸ್ವಾಮಿ ಗುಡಿಯ ಪಕ್ಕದಲ್ಲಿ ನನ್ನ ಗೆಳೆಯ ಲಕ್ಷ್ಮಿಕಾಂತ ಪೂಜಾರಿ ಇತನು ಕುಳಿತ್ತಿದ್ದು ನಾನು ಅವನ ಹತ್ತಿರ ಹೋಗಿ ಮಾತನಾಡುತ್ತಾ ಕುಳಿತ್ತಿದ್ದು ರಾತ್ರಿ 9-30
ಗಂಟೆಯ ಸುಮಾರಿಗೆ ದಿನೇಶ ದೇಸಾಯಿ ಬಂದಿದ್ದು ಆಗ ಲಕ್ಷ್ಮಿಕಾಂತ ಇತನು ಸದರಿಯವರಿಗೆ ಮಹಾರಾಜರೆ ಅಂತ ಕರೆದಿದ್ದು ಆಗ ದಿನೇಶ ಇವರು ಲಕ್ಷ್ಮಿಕಾಂತನಿಗೆ ನೀನು ನನ್ನ ಸಂಗಡ ಮಾಜಾಕ (ಹುಡುಗಾಟ) ಮಾಡುತ್ತಿ ಅಂತ ಕೇಳಿದ್ದು ಅದೆ ವಿಷಯಕ್ಕೆ ಇಬ್ಬರ ಮಧ್ಯ ಬಾಯಿ ಮಾತಿನ ಜಗಳ ಆಗುತ್ತಿದ್ದು ಆಗ ನಾನು ಸದರಿ ದಿನೇಶ ಇವರಿಗೆ ಸಣ್ಣ ವಿಷಯಕ್ಕೆ ಜಗಳ ಎಕೆ ಮಾಡಿಕೊಳ್ಳುತ್ತಿರಿ ಅಂತ ಹೇಳಿದ್ದು ದಿನೇಶ ಇವರು ನನ್ನ ಅಂಗಿ ಕಾಲರ ಹಿಡಿದು ಏ ರಂಡಿ ಮಗನೆ ನೀನು ಯಾರು ನನಗೆ ಹೇಳುವವನು ಅಂತ ಬೈಯುತ್ತಾ ಕೈಯಿಂದ ನನ್ನ ಕಪಾಳ ಮೇಲೆ ಹೊಡೆದಿದ್ದು ದಿನಾಂಕ 22-10-2017 ರಂದು ಬೆಳ್ಳಿಗ್ಗೆ ಸದರಿ ದಿನೇಶ ದೇಸಾಯಿ ಮತ್ತು ಅವರ ಮಗ ಓಂ ದೇಸಾಯಿ ಕೂಡಿಕೊಂಡು ರಾಘವೆಂದ್ರ ಗುಡಿಯ ಹತ್ತಿರ ಬಂದಿದ್ದು ಆಗ ನಮ್ಮ ಅಣ್ಣ ಸಂಗಮೇಶ ಇತನು ಸದರಿ ದಿನೇಶ ದೇಸಾಯಿ ಇತನಿಗೆ ನಿನ್ನೆ ನೀವು ಯಾಕೆ ನಮ್ಮ ತಮ್ಮ ವಿಜಯಕುಮಾರ ನೊಂದಿಗೆ ಜಗಳ ತೆಗೆದು ಹೊಡೆದಿದ್ದಿರಿ ಅಂತ ಕೇಳಿದ್ದು ಆಗ ದಿನೇಶ ದೇಸಾಯಿ ಇತನು ನಿಮ್ಮ ತಮ್ಮನೆ ನನ್ನ ಸಂಗಡ ಜಗಳ ಮಾಡಿದ್ದಾನೆ ಈಗ ನೀನು ಕೆಳಲು ಬಂದಿದ್ದಿ ಮಗನೆ ಅಂತ ಬೈಯುತ್ತಿದ್ದು ಆಗ ನಾನು ನನ್ನ ಗೆಳೆಯ ಲಕ್ಷ್ಮಿಕಾಂತ ಸದರಿ ದಿನೇಶ ಇವರಿಗೆ ನೀವೆ ನಮ್ಮ ಸಂಗಡ ಜಗಳ ಮಾಡಿ ಈಗ ಇಲ್ಲ ಅಂತ ಹೇಳುತ್ತಿರಿ ಅಂತ ಅನ್ನುತ್ತಿದ್ದಾಗ ಸದರಿ ದಿನೇಶ ಇವರ ಮಗ ಓಂ ಇತನು ತನ್ನ ಹತ್ತಿರ ಯಾವುದೊ ಸ್ಪ್ರೇ ತೆಗೆದುಕೊಂಡು ನಮ್ಮ ಅಣ್ಣ ಸಂಗಮೇಶನ ಮುಖದ ಮೇಲೆ ಸಿಂಪಡಿಸಿ ತನ್ನ ಹತ್ತಿರ ಇದ್ದ ಚಾಕು ತೆಗೆದುಕೊಂಡು ನಮ್ಮ ಅಣ್ಣನ ಎಡಗಾಲ ತೊಡೆಗೆ ಗುದದ್ವಾರ ಹತ್ತಿರ ಜೋರಾಗಿ ಹೊಡೆದಿದ್ದು. ಚಾಕು ನಮ್ಮ ಅಣ್ಣ ಎಡಗಾಲ ತೊಡೆಯ ಟೊಂಕದ ಹತ್ತಿರ ಛಪ್ಪೆಯ ಭಾಗದಲ್ಲಿ ಹೊರಗೆ ಬಂದು ಭಾರಿ ಗಾಯವಾಗಿದ್ದು, ಆಗ ನಾನು ಮತ್ತು ಲಕ್ಷ್ಮಿಕಾಂತ ಇಬ್ಬರು ಕೂಡಿಕೊಂಡು ನಮ್ಮ ಅಣ್ಣನಿಗೆ ಬಿಡಿಸಿಕೊಳ್ಳಲು ಹೊಗುತ್ತಿದ್ದಾಗ ಓಂ ಇತನು ಚಾಕವನ್ನು ನಮ್ಮ ಕಡೆಗೆ ತಿರುಗಾಡಿಸಿದ್ದು ಆಗ ನಾವು ಅಂಜಿ ಹಿಂದಕ್ಕೆ ಸರೆದಿದ್ದು ನಂತರ ಓಂ ಇತನು ಅದೆ ಚಾಕು ತೆಗೆದುಕೊಂಡು ನಮ್ಮ ಅಣ್ಣ ಸಂಗಮೇಶನ ಬಲಗಾಲ ತೊಡೆಗೆ ಚುಚ್ಚಿ ಹರಿದ ಭಾರಿಗಾಯವಾಗಿದ್ದು. ಸದರಿ ಓಂ ಇತನು ನಮ್ಮ ಅಣ್ಣನಿಗೆ ಚಾಕು ಚುಚ್ಚಿದ್ದರಿಂದ ನಮ್ಮ ಅಣ್ಣ ಕುಸಿದು ಕೆಳಗೆ ಬಿದ್ದಿದ್ದು ನಮ್ಮ ಅಣ್ಣ ಕೆಳಗೆ ಬಿದ್ದಿರುವದನ್ನು ನೋಡಿ ಓಂ ಮತ್ತು ಅವರ ತಂದೆ ದಿನೇಶ ದೇಸಾಯಿ ಇವರು ನಮ್ಮ ಅಣ್ಣನಿಗೆ ಅಲ್ಲೆ ಬಿಟ್ಟು ಹೋಗಿದ್ದು ನಂತರ ನಾನು ನಮ್ಮ ಅಣ್ಣನ ಹತ್ತಿರ ಹೋಗಿ ನೋಡಲು ಅವನ ಕಾಲುಗಳಿಂದ ಅತಿಯಾಗಿ ರಕ್ತಸ್ರಾವ ವಾಗುತ್ತಿದ್ದು ಆಗ ನಮ್ಮ ಗೆಳೆಯ ಲಕ್ಷ್ಮಿಕಾಂತ ಇತನು ಅಟೊ ತೆಗೆದುಕೊಂಡು ಬರಲು ಹೋಗಿ ಸ್ವಲ್ಪ ಸಮಯದಲ್ಲಿ ಲಕ್ಷ್ಮಿಕಾಂತ ಇತನ ಅಟೊ ತೆಗೆದುಕೊಂಡು ಬಂದಿದ್ದು ಆಗ ನಾನು ನಮ್ಮ ಗೆಳೆಯ ಲಕ್ಷ್ಮಿಕಾಂತ ಕೂಡಿಕೊಂಡು ನಮ್ಮ ಅಣ್ಣನಿಗೆ ಅಟೊದಲ್ಲಿ ಹಾಕಿಕೊಂಡು ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೇಗೆ ತೆಗೆದುಕೊಂಡು ಹೋಗಿದ್ದು ವ್ಯಧ್ಯರು ನಮ್ಮ ಅಣ್ಣನಿಗೆ ಪರಿಕ್ಷೇ ಮಾಡಿ ಮೃತ ಪಟ್ಟಿದ್ದಾನೆ ಅಂತ ತಿಳಿಸಿದ್ದು ನಂತರ ನಾವು ನಮ್ಮ ಅಣ್ಣನ ಶವವನ್ನು ಜಿಲ್ಲಾ ಸರಕಾರಿ ಆಸ್ಪತ್ರೇಗೆ ತೆಗೆದುಕೊಂಡು ಬಂದಿದ್ದು ಇರುತ್ತದೆ. ನಮ್ಮ ಅಣ್ಣ ಸಂಗಮೇಶನೊಂದಿಗೆ ಜಗಳ ಮಾಡಿ ಅವನ ಮುಖಕ್ಕೆ ಸ್ಪೇಯರ್ ಸಿಂಪಡಿಸಿ ಚಾಕುದಿಂದ ಎರಡು ಕಾಲಗಳಿಗೆ ಹೊಡೆದು ಕೊಲೆ ಮಾಡಿದ ದಿನೇಶ ದೇಸಾಯಿ, ಮತ್ತು ಓಂ ತಂದೆ ದಿನೇಶ ದೇಸಾಯಿ ಇವರ ವಿರುಧ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಶ್ರೀ ವಿಜಯಕುಮಾರ ನಂದರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಡಿಲು ಬಡಿದು ಸಾವು ಪ್ರಕರಣ :
ನರೋಣಾ ಠಾಣೆ : ದಿನಾಂಕ:22-10-2017
ರಂದು ಮಧ್ಯಾಹ್ನ ನಾನು ಮತ್ತು ನನ್ನ ಅತ್ತೆ ಶಾರದಾಬಾಯಿ ಮನೆಯಲ್ಲಿದ್ದಾಗ ನನ್ನ ಗಂಡನಾದ ರಾಜೇಂದ್ರ ಇವರು ನಮ್ಮ ಕೊಳ್ಳದ ಹೊಲಕ್ಕೆ ಹೋಗಿ ಎತ್ತುಗಳು ಮೇಯಿಕೊಂಡು ಬರುತ್ತೇನೆಂದು ಹೇಳಿ ಮನೆಯಿಂದ ಹೋದರು ಸಾಯಂಕಾಲ 4-30 ಗಂಟೆ ಸುಮಾರಿಗೆ ನಮ್ಮ ಮೈಧುನನಾದ ಮಲ್ಲಿಕಾರ್ಜುನ ಬಿರಾದಾರ ಇವರು ಮನೆಗೆ ಬಂದು ನನಗೆ ಹಾಗೂ ನನ್ನ ಅತ್ತಿಗೆ ನನ್ನ ಗಂಡನಾದ ರಾಜೇಂದ್ರ ಇವರು ಮಧ್ಯಾಹ್ನ 3-30 ಗಂಟೆ ಸುಮಾರಿಗೆ ಮಳೆ ಹಾಗೂ ಗುಡುಗು ಮತ್ತು ಸಿಡಿಲು ಆಗುವ ಕಾಲಕ್ಕೆ ಕೋಳದ ಹೊಲದಲ್ಲಿದ್ದಾಗ ಮೈಮೇಲೆ ಸಿಡಲು ಬಡಿದ್ದರಿಂದ ಸುಟ್ಟಂತ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ನಾನು ಹೋಗಿ ನೋಡಿಕೊಂಡು ಅವರ ಶವ ಮನೆಗೆ ತಗೆದುಕೊಂಡು ಬರುತ್ತೇನೆಂದು ಹೇಳಿ ಮನೆಯಿಂದ ಹೋಗಿ ಒಂದೆರಡು ತಾಸುಗಳ ನಂತರ ನನ್ನ ಮೈಧುನ ಹಾಗೂ ಇತರರು ಕೂಡಿ ನನ್ನ ಗಂಡನ ಶವ ಮನೆಗೆ ತಗೆದುಕೊಂಡು ಬಂದಿರುತ್ತಾರೆ. ನಾನು ನೋಡಲಾಗಿ ನನ್ನ ಗಂಡನ ಎಡಗಡೆ ಭುಜದಿಂದ ಎಡಗಾಲಿನ ಪಾದದ ವರೆಗೆ ಸುಟ್ಟಂತ ಕಪ್ಪಾದ ಗಾಯವಾಗಿ ಚರ್ಮ ಸುಲಿದಂತಾಗಿ ಒಳಗಿನ ಮೌಂಸ ಕಂಡು ಬರುತ್ತಿತ್ತು ದಿನಾಂಕ:22-10-2017 ರಂದು 3-30 ಪಿ.ಎಂ ದಿಂದ 4-00 ಪಿ.ಎಂ ಮಧ್ಯದ ಅವಧಿಯಲ್ಲಿ ನನ್ನ ಗಂಡನಾದ ರಾಜೇಂದ್ರ ಇವರು ನಮ್ಮ ಕೋಳದ ಹೊಲ ಸರ್ವೆ ನಂ-126 ರರಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದಾಗ ಆಕಸ್ಮಿಕವಾಗಿ ಅವರಿಗೆ ಸಿಡಿಲು ಬಡಿದಿದ್ದರಿಂದ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾರೆ. ಅಂತಾ ಶ್ರೀಮತಿ ಮಹಾದೇವಿ ಗಂಡ ರಾಜೇಂದ್ರ ಬಿರಾದಾರ ಸಾ||ಬೋಧನ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.