Police Bhavan Kalaburagi

Police Bhavan Kalaburagi

Wednesday, October 3, 2018

BIDAR DISTRICT DAILY CRIME UPDATEದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 03-10-2018

ಮೇಹಕರ ಪೊಲೀಸ ಠಾಣೆ ಯು.ಡಿ.ಆರ್ ನಂ 06/2018 ಕಲಂ 174 ಸಿ.ಆರ್.ಪಿ.ಸಿ :-

ದಿನಾಂಕ: 02/10/2018 ರಂದು 0900 ಗಂಟೆಗೆ ಕೆಸರಜವಳಗಾ ಗ್ರಾಮದಲ್ಲಿ ಸೀಮಾಬಾಯಿ ಗಂಡ ಶಿವಾಜಿರಾವ ಚೋರಮಲ್ಲೆ 55 ವರ್ಷ ಜಾ : ಹಟಕಾರ ಉ : ಮನೆ ಕೆಲಸ ಸಾ: ಕೇಸರ ಜವಳಗಾ ಇವರ ಪತಿಯಾದ  ಶಿವಾಜಿ ವಯ: 65 ವರ್ಷ ರವರು ತನ್ನ  ಒಟ್ಟು 9 ಎಕರೆ 10 ಗುಂಟೆ ಜಮೀನು ನಮ್ಮೂರ ಶೀವಾರದಲ್ಲಿ ಇರುತ್ತದೆ. ಅದರ ಪೈಕಿ ಸರ್ವೇ ನಂ 31/1 ವಿಸ್ತೀರ್ಣ 6 ಕರೆ 20 ಗುಂಟೆ ನನ್ನ ಗಂಡನ ಹೆಸರಿನಲ್ಲಿ ಇದೆ. ಈ ಹೊಲದ ಮೇಲೆ   ಡಿಸಿಸಿ ಬ್ಯಾಂಕ ಸಾಯಗಾಂವ ಶಾಖೆಯಲ್ಲಿ ಕೃಷಿ ಸಾಲ ಅಂತ 1,25,000/- ರೂ ಪಡೆದುಕೊಂಡಿದ್ದು ಇದೆ. ಆದರೆ ಅತೀ ವೃಷ್ಠಿ ಮತ್ತು ಅನಾವೃಷ್ಠಿಯಿಂದ ಬೆಳೆ ಸರಿಯಾಗಿ ಬಾರದೆ ಇದ್ದುದ್ದಕ್ಕೆ ಸಾಲ ಮರುಪಾವತಿ ಮಾಡಲು ಆಗಿರುವದಿಲ್ಲ.  ಕೃಷಿ ಸಾಲ ಭಾದೆ ತಾಳಲಾರದೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದು ಇರುತ್ತದೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.