ಕಳವು ಪ್ರಕರಣ :
ಆಳಂದ ಠಾಣೆ : ಶ್ರೀ ಸಂಜಯಕುಮಾರ ತಂದೆ ಬಾಬುರಾವ ಶೇರಿಕಾರ ಸಾ|| ಪಡಸಾವಳಿ ತಾ|| ಆಳಂದ ರವರು ದಿನಾಂಕ 26/05/2019 ರಂದು ರಾತ್ರಿ 11-00 ಗಂಟೆಯವರೆಗೆ ಮನೆಯಲ್ಲಿ ಊಟ ಮಾಡಿ ನಮ್ಮ ಮನೆಯ ಮುಂದಿನ
ಕಂಪೌಂಡಕ್ಕೆ ಹತ್ತಿದ್ದ ಕಬ್ಬಿಣದ ಗೇಟಿಗೆ & ಮನೆಯ ಮುಂದಿನ ಬಾಗಿಲಿಗೆ ಕೀಲಿ ಹಾಕಿಕೊಂಡು ಬೇಸಿಗೆ
ಇದ್ದ ಪ್ರಯುಕ್ತ ರಾತ್ರಿ 11-30 ಗಂಟೆಯ ಸುಮಾರಿಗೆ ನಾವೆಲ್ಲರೂ ಕೂಡಿಕೊಂಡು ಮನೆಯ
ಮಾಳಿಗೆ ಮೇಲೆ ಹೋಗಿ ಮಲಗಿಕೊಂಡಿದ್ದು ನಂತರ ದಿನಾಂಕ 27/05/2019 ರಂದು ಬೆಳಗಿನ ಜಾವ 05-00 ಗಂಟೆಯ ಸುಮಾರಿಗೆ ನಾನು & ನನ್ನ ಹೆಂಡತಿ ಹಾಗೂ ನನ್ನ ತಾಯಿ ಮಾಳಿಗೆಯಿಂದ ಕೆಳಗೆ
ಇಳಿದು ನಮ್ಮ ಕಬ್ಬಿಣದ ಗೇಟಿಗೆ ಹಾಕಿದ ಕೀಲಿಯನ್ನು ನೋಡಲಾಗಿ ಮುರಿದು ಗೇಟ್ ಅರ್ಧ ತೆರೆದಿದ್ದು
ಮುಂದಿನ ಬಾಗಿಲಗೆ ನೋಡಲಾಗಿ ಕೀಲಿ ಮುರಿದು ಕೊಂಡಿಯನ್ನು ಮುರಿದಿದ್ದು ಆಗ ಗಾಬರಿಯಾಗಿ ನಾವೆಲ್ಲರೂ
ಕೂಡಿಕೊಂಡು ಒಳಗಡೆ ಹೋಗಿ ನೋಡಲಾಗಿ ಮಲಗುವ ಕೋಣೆಯಲ್ಲಿದ್ದ ಕಬ್ಬಿಣದ ಅಲಮಾರಿಯ ಲಾಕರ ಮುರಿದು
ಒಳಗಡೆ ಇಟ್ಟಿದ್ದ ಬಂಗಾರದ ಬೆಳ್ಳಿಯ ಆಭರಣಗಳು ಮತ್ತು ನಗದು ಹಣ ಒಟ್ಟು 2.35,000/- ರೂಪಾಯಿಗಳು ಬೆಲೆ ಬಾಳುವ ಬಂಗಾರದ & ಬೆಳ್ಳಿ ಆಭರಣ ಹಾಗು ನಗದು ಹಣವನ್ನು ನಿನ್ನೆ ರಾತ್ರಿ 11-45 ಪಿ ಎಮ್ ದಿಂದ ಇಂದು ಬೆಳಗಿನ ಜಾವ 05-00 ಗಂಟೆಯ ಸುಮಾರಿನ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ನನ್ನ ಮನೆಯ ಗೇಟಿನ ಕೀಲಿ ಹಾಗು ಮನೆಯ
ಮುಖ್ಯ ಬಾಗಿಲಿನ ಕೀಲಿಯನ್ನು ಕಬ್ಬಿಣದ ರಾಡಿನಿಂದ ಮುರಿದು ಮನೆಯೊಳಗೆ ಪ್ರವೇಶ ಮಾಡಿ ರಾತ್ರಿ
ವೇಳೆಯಲ್ಲಿ ಈ ಮೆಲ್ಕಂಡ ಬಂಗಾರದ ಆಭರಣಗಳು ಹಾಗೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು
ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಚೌಕ ಠಾಣೆ : ಡಾ.ಶಿವಲಿಂಗಪ್ಪಾ ತಂದೆ ವಿಠ್ಠಲ ಗೌಳಿ, ಸಾ: ಮನೆ ನಂ.9-953/12ಜಿ, ಪ್ಲಾಟ್
ನಂ.25 ಸಿದ್ದಾರೋಡ ಮಠದ ಹತ್ತಿರ ಜನತಾ ಲೇಔಟ್ ಕಲಬುರಗಿ ರವರು ರಾಜಾಪೂರ ಗ್ರಾಮ, ತಾ: ಶಿರೋಳ, ಜಿ: ಕೊಲ್ಹಾಪೂರ, ಮಹಾರಾಷ್ಟ್ರ ರಾಜ್ಯದ ದುಳಪ್ಪಾ ತಂದೆ ಮಹಾನಿಂಗಪ್ಪಾ ಧಿವಟೆ ಇವರ ಮಗನಾಗಿರುವ ಧಯಾನಂದ ದುಳಪ್ಪಾ ಧಿವಟೆ ಇವರೊಂದಿಗೆ ಈ ಹಿಂದೆ ಸಂಬಂದವಾಗಿದ್ದು ಆ ಪ್ರಕಾರ ದುಳಪ್ಪಾ ಇವರ ಮಗಳಾದ, ಮನೀಷಾ ಅನ್ನುವವಳನ್ನು ನನ್ನ ತಮ್ಮನ ಮಗನಾಗಿರುವ ಈಶ್ವರ ಇತನಿಗೆ ಮದುವೆ ಮಾಡುವ ಪ್ರಯುಕ್ತ ನಿಶ್ಚಯದ ಮಾತುಕತೆ ಸಮಾಜದ ಮುಖಂಡರ ಮುಂದೆ ಕಳೆದ ಎರಡು ವರ್ಷಗಳ ಹಿಂದೆ ಮಾತುಕತೆಯಾಗಿದ್ದು ಆದರೆ ದುಳಪ್ಪಾ ಇವರು ಸದ್ಯದ ಪರಸ್ಥಿತಿಯಲ್ಲಿ ನನ್ನ ತಮ್ಮನ ಮಗನಿಗೆ ಮದುವೆ ಮಾಡಿಕೊಡುವುದಿಲ್ಲ ಅಂತಾ ತಕರಾರು ನಡೆದಿರುತ್ತದೆ. ಹೀಗಿದ್ದು, ದಿನಾಂಕ.24.05.2019 ರಂದು ರಾತ್ರಿ
7.30 ಗಂಟೆಯಿಂದ 8.00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಮಕ್ಕಳೊಂದಿಗೆ ನಮ್ಮ ಮನೆಯಲ್ಲಿದ್ದಾಗ ನಮ್ಮ ನೆಂಟಸ್ಥರೆ ಆಗಿರುವಂತಹ 1) ಶ್ರೀ ದುಳಪ್ಪಾ ತಂದೆ ಮಹಾನಿಂಗಪ್ಪಾ ದಿವಟೆ ಅವರ ಹೆಂಡತಿಯಾದ 2) ಶ್ರೀಮತಿ ಗೀತಾ ಗಂಡ ದುಳಪ್ಪಾ ದಿವಟೆ, ತಮ್ಮನಾದ 3) ಅನೀಲ ತಂದೆ ಮಹಾನಿಂಗಪ್ಪಾ ದಿವಟೆ, ಮಗನಾದ, 4) ಧಯಾನಂದ ತಂದೆ ದುಳಪ್ಪಾ ದಿವಟೆ, ದುಳಪ್ಪ ವರ ಮಾಮನಾದ 5) ಪಾಂಡು (ಪಂಡೀತ ಪೂಜಾರಿ) ದಿವಟೆ, ದುಳಪ್ಪ ಇವರ ತಂಗಿಯಾದ 6) ಇಠಾಬಾಯಿ ಗಂಡ ಬಾಳು ದಿವಟೆ, ಅವರ ಹೆಣ್ಣುಮಕ್ಕಳಾದ 7) ಕುಮಾರಿ ಮನೀಷಾ ತಂದೆ ದುಳಪ್ಪಾ ದಿವಟೆ, 8) ಕುಮಾರಿ ಮನಾಲಿ ತಂದೆ ದುಳಪ್ಪಾ ದಿವಟೆ ಮತ್ತು ಅವರ ಜೊತೆಯಲ್ಲಿ ಇನ್ನು ಕೆಲವರು ಕೂಡಿಕೊಂಡು ನಮ್ಮ ಮನೆಯಲ್ಲಿ ನೆಂಟಸ್ಥನ ಮಾಡುವ ಬಗ್ಗೆ ನೆಪಮಾಡಿಕೊಂಡು ಮನೆಯಲ್ಲಿ ಏಕಾಏಕಿಯಾಗಿ ನುಗ್ಗಿದವರೆ ನನಗೆ ಹೊಡೆಯಲು ಬಂದರು ಯಾಕೆ ಯಾಕೆ ಎನಾಗಿದೆ ಹೇಳಿ ಅಂತಾ ಅಂದಾಗ ಸುಳಿ ಮಕ್ಕಳ್ರ್ಯಾ ನೀವು ಚಪ್ಪಲಿ ಹೊಲಿಯುವವರು, ಖಂಡ ಮಾಂಸ ತಿನ್ನುವ ಹೊಲಸು ಸುಳೆ ಮಕ್ಕಳಿದ್ದಿರಿ, ನೀವು ನಮ್ಮ ಮಕ್ಕಳಾದ ಕುಮಾರಿ ಮನೀಷಾ ಮತ್ತು ಮನಾಲಿ ಇವರಿಗೆ ನಿಮ್ಮ ಕುಟುಂಬಕ್ಕೆ ಕೊಡು ಅಂತಾ ಕೇಳುತ್ತಿರಿ ಸುಳೆ ಮಕ್ಕಳೆ ಅಂತಾ ಅನ್ನುತ್ತಾ ನನಗೆ 2-3 ಜನ ಹಿಡಿದುಕೊಂಡು ಮರಣಾಂತಿಕ ಹಲ್ಲೆ ಮಾಡಿದ್ದಾರೆ ಕಾಲಿಗೆ ಕಟ್ಟಿಗೆಯಿಂದ, ರಾಡನಿಂದ ನಾಜುಕು ಜಾಗಗಳಿಗೆ ಹೊಡೆದು ಹಮ್ಲಾ ಮಾಡಿದ್ದಾರೆ, ವಯಸ್ಸಾದ ನನ್ನ ತಾಯಿ ಅಂಬವ್ವಾ ಗಂಡ ವಿಠ್ಠಲ ಗೌಳಿ, ಇವರಿಗು ಸಹ ಕೈ ಹಿಡಿದು ಎಳೆದಾಡಿ ಅವಮಾನಪಡಿಸಿ ಕೈಯಿಂದ ಹೊಡೆಬಡೆ ಮಾಡಿರುತ್ತಾರೆ ಬಿಡಿಸಲು ಬಂದ ನಮ್ಮ ಹೆಂಡತಿಯಾದ ಶಾಂತಾಬಾಯಿ ಗಂಡ ಶಿವಲಿಂಗಪ್ಪಾ ಗೌಳಿ ಇವರಿಗೂ ಸಹ ರಂಡೆ ಮುಂಡೆ ಅಂತಾ ಅವ್ಯಾಚ ಶಬ್ದಗಳಿಂದ ಬೈದಾಡಿ ಕೈ ಹಿಡಿದು ಎಳೆದಾಡಿ ಅವಮಾನಪಡಿಸಿದ್ದು ಅಲ್ಲದೇ ರಂಡೆರೆ ನಮ್ಮ ಜಾತಿ ಬಹಳ ಶ್ರೇಷ್ಠ ಜಾತಿ ನಾವು ಪಂಡಿತ ಪುರೋಹಿತ ಕಿರ್ತನೆ ಮತ್ತು ಬಜನೆ ಮಾಡುವವರಿದ್ದು ಅದಕ್ಕೆ ನಮಗೆ ದಿವಟೆಗಳೆಂದು ಕರೆಯುತ್ತಾರೆ. ನಿಮಗೆ ಹೊಲಸು ತಿನ್ನುವ ಸಮಗಾರಂತ ಕರೆಯುತ್ತಾರೆ ಅಂತಾ ಹೊಡೆದಿರುತ್ತಾರೆ. ಇದನ್ನು ಕಂಡು ಬಿಡಿಸಲು ಬಂದ ನನ್ನ ಅಳಿಯ ಶಿವಾನಂದ ತಂದೆ ಚಂದ್ರಶ್ಯಾ ಹರಳಯ್ಯ ಇವರಿಗೆ ಕೈಯಿಂದ ಹೊಡೆಬಡೆ ಮಾಡಿ ಎಡಕೈ ಒಡ್ಡುಮುರಿದು ಗುಪ್ತಗಾಯಪಡಿಸಿರುತ್ತಾರೆ. ಇವರೆಲ್ಲರೂ ಈ ರೀತಿ ನಮ್ಮ ಮನೆಯಲ್ಲಿ ಏಕಾಏಕಿಯಾಗಿ ನುಗ್ಗಿ ಯಾವುದೇ ಮಾತನು ಕೇಳದೇ ಹಳೆಯ ವೈಮನಸ್ಸಿನಿಂದ ನಮ್ಮ ಮನೆಯಲ್ಲಿ ಬಂದು ನಮಗೆ ಈ ರೀತಿ ಮರಣಾಂತಿಕ ಹಲ್ಲೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.