Police Bhavan Kalaburagi

Police Bhavan Kalaburagi

Thursday, January 14, 2021

BIDAR DISTRICT DAILY CRIME UPDATE 14-01-2021

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 14-01-2021

 

ಮಾರ್ಕೆಟ ಪೊಲೀಸ ಠಾಣೆ, ಬೀದರ ಯು.ಡಿ.ಆರ್ ನಂ. 01/2021, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 13-01-2021 ರಂದು 1030 ಗಂಟೆಯಿಂದ 2010 ಗಂಟೆಯ ಅವಧಿಯಲ್ಲಿ ನರಸಿಂಹ ತಂದೆ ಶಿವರಾಮ ಕಡಮಿಂಚೋಳ ವಯ: 27 ವರ್ಷ, ಜಾತಿ: ಸುಡಗಾರಸಿದ್ದ, ಸಾ: ಲೇಬರ ಕಾಲೋನಿ, ಬೀದರ ಇತನು ಯಾವುದೋ ವಿಷಯದಲ್ಲಿ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಬೀದರ ನಗರದ ಲೇಬರ ಕಾಲೋನಿಯಲ್ಲಿ ತನ್ನ ಮನೆಯ ಮಲಗುವ ಕೋಣೆಯಲ್ಲಿರುವ ಫ್ಯಾನಿಗೆ ನೈಲಾನ ಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆಂದು ಫಿರ್ಯಾದಿ ಸತ್ಯಮ್ಮ ಗಂಡ  ಶಿವರಾಮ ಕಡಮಿಂಚೋಳ ವಯ: 52 ವರ್ಷ, ಜಾತಿ: ಸುಡಗಾರಸಿದ್ದ, ಸಾ: ಲೇಬರ ಕಾಲೋನಿ ಬೀದರ ರವರು ನೀಡಿದ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 05/2021, ಕಲಂ. 279, 338, 304(ಎ) ಐಪಿಸಿ ಜೊತೆ 185 .ಎಂ.ವಿ ಕಾಯ್ದೆ :-

ದಿನಾಂಕ 12-01-2021 ರಂದು ಫಿರ್ಯಾದಿ ಹಣಮಂತ ತಂದೆ ರವಿಂದ್ರ ಸುತಾರ ವಯ: 19 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಗುಂಡುರ, ಸದ್ಯ: ನೀಲಕಂಠ ಗ್ರಾಮ, ತಾ: ಬಸವಕಲ್ಯಾಣ ರವರ ತಂದೆಯಾದ ರವಿಂದ್ರ ಸುತಾರ ರವರು ಫಿರ್ಯಾದಿಯವರ ಚಿಕ್ಕಮ್ಮನಾದ ಅಂಬಿಕಾ ರವರ ತವರು ಮನೆಯಾದ ಯಲ್ಲದಗುಂಡಿ ಗ್ರಾಮದಲ್ಲಿ ಜಾತ್ರೆವಿದ್ದ ಪ್ರಯುಕ್ತ ಅಂಬಾದಾಸ ತಂದೆ ತಿಪ್ಪಣ್ಣಾ ಸುತಾರ ಇತನ ಕವಾಸಾಕಿ ಬಾಕ್ಸರ್ ದ್ವಿಚಕ್ರ ವಾಹನ ಸಂ. ಎಂ.ಹೆಚ್-12/ಬಿ.ಕೆ 9262 ನೇದರ ಮೇಲೆ ಫಿರ್ಯಾದಿಯ ತಂದೆ ಮತ್ತು ಅಂಬಾದಾಸನ ತಮ್ಮನಾದ ತುಳಸಿರಾಮ ಸುತಾರ ಮೂವರು ಕುಳಿತುಕೊಂಡು ಹೋಗಿ ಯಲ್ಲದಗುಂಡಿ ಗ್ರಾಮದಲ್ಲಿ ಜಾತ್ರೆ ಕಾರ್ಯಕ್ರಮವನ್ನು ಮುಗಿಸಿಕೊಂಡು ಯಾವುದೋ ಒಂದು ಧಾಬಾದಲ್ಲಿ ಮೂವರು ಸರಾಯಿ ಕುಡಿದು ಊಟ ಮಾಡಿ ಮರಳಿ ಬರುವಾಗ ಸಸ್ತಾಪೂರ -ಮಿರ್ಜಾಪೂರ ರಸ್ತೆಯ ಮೇಲೆ ಸಸ್ತಾಪೂರ ಶಿವಾರದಲ್ಲಿ ಅಂಬಾದಾಸ ತಂದೆ ತಿಪ್ಪಣ್ಣಾ ಸುತಾರ ಇತನು ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ರಾತ್ರಿ ನಿವರ್ತಿ ರೆಡ್ಡಿ ರವರ ಜಮೀನಿನ ಹತ್ತಿರ ರಸ್ತೆಯ ಬದಿಯಲ್ಲಿರುವ ವಿದ್ಯುತ ಕಂಬಕ್ಕೆ ಸರಾಯಿ ಕುಡಿದ ಅಮಲಿನಲ್ಲಿ ಡಿಕ್ಕಿ ಮಾಡಿದ್ದರಿಂದ ತಂದೆಯಾದ ರವಿಂದ್ರ ಸುತಾರ ರವರ ತಲೆಯ ಬಲಭಾಗಕ್ಕೆ ಭಾರಿ ಗುಪ್ತಗಾಯ ಮತ್ತು ಬಲಗಾಲಿಗೆ ಮೊಳಕಾಲು ಹತ್ತಿರ ತರಚಿದ ರಕ್ತಗಾಯವಾಗಿ ಮೂಗಿನಿಂದ ಮತ್ತು ಬಾಯಿಯಿಂದ ರಕ್ತ ಬಂದಿರುತ್ತದೆ ಮತ್ತು ಅಂಬಾದಾಸ ತಂದೆ ತಿಪ್ಪಣ್ಣಾ ಸುತಾರ ಇತನಿಗೆ ತಲೆಯ ಎಡಭಾಗಕ್ಕೆ ಭಾರಿ ಗುಪ್ತಗಾಯ, ಹಣೆಯ ಎಡಭಾಗಕ್ಕೆ ಭಾರಿ ರಕ್ತಗಾಯ ಮತ್ತು ಎಡಗಾಲಿನ ಮೊಳಕಾಲು ಹತ್ತಿರ ತರಚಿದ ರಕ್ತಗಾಯವಾಗಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಮತ್ತು ದೊಡ್ಡಪ್ಪನ ಮಗನಾದ ತುಳಸಿರಾಮ ತಂದೆ ತಿಪ್ಪಣ್ಣಾ ಸುತಾರ ವಯ: 25 ವರ್ಷ ಇತನಿಗೆ ತಲೆಯ ಎಡಭಾಗಕ್ಕೆ ಭಾರಿ ಗುಪ್ತಗಾಯವಾಗಿ ಬಲಕಿವಿಯಿಂದ ರಕ್ತಸ್ರಾವವಾಗುತಿದ್ದು ಇತನಿಗೆ ಯಾರೋ ಒಬ್ಬರು 108 ಅಂಬುಲೆನ್ಸನಲ್ಲಿ ಚಿಕಿತ್ಸೆ ಕುರಿತು ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ನೂತನ ನಗರ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 04/2021, ಕಲಂ. 309 ಐಪಿಸಿ :-

ದಿನಾಂಕ 13-01-2021 ರಂದು ಫಿರ್ಯಾದಿ ನಾಗೇಶರಾವ ತಂದೆ ಈರಪ್ಪ ಹಡಪದ ಸಾ: ಚಾಂಗಲೇರಾ ರವರ ಮಗಳಾದ 1) ಕಾವೇರಿ ಗಂಡ ಶ್ರೀಧರ ವಯ: 30 ವರ್ಷ, ಜಾತಿ: ಹಡಪದ, ಸಾ: ಹಜ್ಜರಗಿ ಹಾಗೂ ಅಳಿಯ 2) ಶ್ರೀಧರ ಹಡಪದ ವಯ: 35 ವರ್ಷ, ಸಾ: ಹಜ್ಜರಗಿ ಇವರಿಬ್ಬರು ಸಂಸಾರ ಸಾಕಾಗಿದೇ ಅಂತ ಸಾಯಬೇಕೆಂದು ಹುಲ್ಲಿಗೆ ಹೊಡೆಯುವ ಔಷಧವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಸಿದ್ದು ಇರುತ್ತದೆ, ಸದರಿಯವರ ವಿರುಧ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 08/2021, ಕಲಂ. 457, 380 ಐಪಿಸಿ :-

ದಿನಾಂಕ 13-01-2021 ರಂದು ಫಿರ್ಯಾದಿ ರಾಜಶ್ರೀ ಗಂಡ ಅರುಣ ಸಿಂಧೆ ವಯ: 32 ವರ್ಷ, ಜಾತಿ: ಎಸ್.ಸಿ ಹೋಲಿಯಾ, ಸಾ: ಘಾಟಬೊರಾಳ ರವರು ತನ್ನ ಮಗಳು ಕಾವ್ಯ ಇವಳಿಗೆ ಅನಾರೋಗ್ಯದ ಪ್ರಯುಕ್ತ ವರವಟ್ಟಿ (ಬಿ) ಗ್ರಾಮಕ್ಕೆ ಹೋದಾಗ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿಯವರ ಮನೆಗೆ ಹಾಕಿದ ಕೀಲಿ ಮುರಿದು ಮನೆಯಲ್ಲಿ ಸೂಟ್ ಕೇಟಕೇಸನಲ್ಲಿದ್ದ 11,000/- ರೂ ನಗದು ಹಣ, 5 ಗ್ರಾಂ ಬಂಗಾರದ ಮಂಗಳ ಸೂತ್ರ ಅ.ಕಿ 20,000/- ರೂ ಮತ್ತು 2 ತೋಲಿ ಬೆಳ್ಳಿ ಕಾಲೂಂಗರ ಅ.ಕಿ 1300/- ರೂ. ನೇದವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಹಾಗೂ ಗ್ರಾಮದ ಗುರುನಾಥ ರವರ ಮನೆಯಲ್ಲಿ  ಅಲಮಾರಿ ಕೀಲಿ ಮುರಿದು ಅಲಮಾರಿಯಲ್ಲಿದ್ದ 3000/- ರೂ ನಗದು ಹಣ ಹಾಗು 1 ಗ್ರಾಂ ಬಂಗಾರ ಅ.ಕಿ 4000/- ರೂ ಮತ್ತು ಕೃಷ್ಣ ತಂದೆ ಮಾರುತಿ ನಲ್ಲೆ ರವರ ಮನೆಯಲ್ಲಿದ್ದ ನಗದು ಹಣ 6000/- ರೂ. ಮತ್ತು ಅಶೋಕ ತಂದೆ ಮಾಣಿಕರಾವ ಸಗರ ರವರ ಮನೆಯಲ್ಲಿದ್ದ ನಗದು ಹಣ 5000/- ರೂ ಮತ್ತು ಒಂದು ಮೋಬೈಲ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಗದಲ ಪೊಲೀಸ್ ಠಾಣೆ ಅಪರಾಧ ಸಂ. 02/2021, ಕಲಂ. 457, 380 ಐಪಿಸಿ :-

ದಿನಾಂಕ 12-01-2021 ರಂದು ಫಿರ್ಯಾದಿ ಗುರನಾಥ ತಂದೆ ಮಲ್ಲಪ್ಪಾ ಕೊಳ್ಳಾರದೋರ್ ಸಾ: ಬಾವಗಿ ಗ್ರಾಮ, ತಾ: ಜಿ: ಬೀದರ ರವರು ತನ್ನ ಕುಟುಂಬದೊಂದಿಗೆ ಮನೆಯಲ್ಲಿ ಊಟ ಮಾಡಿಕೊಂಡು 2300 ಗಂಟೆಯ ಸುಮಾರಿಗೆ ಎಲ್ಲರೂ ಮನೆಯಲ್ಲಿಯೇ ಮಲಗಿರುವಾಗ ರಾತ್ರಿವೇಳೆಯಲ್ಲಿ ಯಾರೋ ಅಪರಿಚಿತ ಕಳ್ಳರು ಮನೆಯ ಬಾಗಿಲು ಮುರಿದು ಒಳಗಡೆ ಬಂದು ಅಲಮಾರಿಯಲ್ಲಿಟ್ಟಿದ್ದ 3 ತೋಲಿ ಬಂಗಾರದ ತಾಳಿ ಚೈನ್ .ಕಿ 1,20,000/- ರೂ., 2 ತೋಲಿ ಬಂಗಾರದ ನಾನ್ .ಕಿ 80,000/-ರೂ., 3 ತೋಲಿ ಬಂಗಾರದ ಚೈನ್ ಸರಾ .ಕಿ 1,20,000/- ರೂ. ಮತ್ತು 2 ತೋಲಿ ಬಂಗಾರದ ಪಾಟಲಿಗಳು .ಕಿ 80,000/- ಹೀಗೆ ಎಲ್ಲವೂ ಸೇರಿ ಒಟ್ಟು 10 ತೋಲಿ ಬಂಗಾರದ ಆಭರಣಗಳು .ಕಿ 4,00,000/- ಮತ್ತು ಅಲಮಾರಿಯಲ್ಲಿಟ್ಟಿದ 40,000/-  ರೂಪಾಯಿ ನಗದು ಹಣ ಹೀಗೆ ಒಟ್ಟು 4,40,000=00 ರೂಪಾಯಿ ಬೆಲೆ ಬಾಳುವುದನ್ನು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ದಿನಾಂಕ 13-01-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.