Police Bhavan Kalaburagi

Police Bhavan Kalaburagi

Wednesday, October 16, 2019

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಸೇಡಂ ಠಾಣೆ : ದಿನಾಂಕ: 15.10.2019 ರಂದು ರಾತ್ರಿ ಗೆಕ್ರೂಜರ್ ಜೀಪ ನಂಬರ ಕೆಎ/33-ಎಮ್ –0672 ನೇದ್ದರ ಚಾಲಕನು ತನ್ನ ವಾಹನವನ್ನು ಯಾದಗಿರಿ ಕಡೆಯಿಂದ ಕೊಡ್ಲಾ ಕಡೆಗೆ ಬರುವಾಗ ಅತಿವೇಗ ಹಾಗು ನಿಷ್ಕಾಳಜೀತನಿಂದ ನಡೆಯಿಸಿಕೊಂಡು ಬಂದು ಕೊಡ್ಲಾ ಕಡೆಯಿಂದ ನಾಮವಾರ ಗ್ರಾಮಕ್ಕೆ ಹೊಗುತ್ತಿದ್ದ ನಮ್ಮ ತಮ್ಮನಾದ ಈರಣ್ಣಾ ಇತನ ಮೊ/ಸೈಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದರಿಂದ ನಮ್ಮ ತಮ್ಮನಾದ ಈರಣ್ಣಾ ಈತನು ಭಾರಿಗಾಯಹೊಂದಿ ಉಪಚಾರ ಕುರಿತು ಸೇಡಂ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದಾಗ ಇಂದು ರಾತ್ರಿ 07-30ಗಂಟೆ ಸುಮಾರಿಗೆ ಮೃತ ಪಟ್ಟಿದ್ದು ನಮ್ಮ ತಮ್ಮನ ಮೊ/ಸೈ ಮೇಲೆ ಹಿಂದುಗಡೆ ಕುಳಿತು ಮಲ್ಲಪ್ಪ ಯಾದಗಿರಿ ಈತನು ಭಾರಿಗಾಯ ಹೊಂದಿದ್ದು ಸದರಿ ಅಪಘಾತ ಪಡಿಸಿದ ಕ್ರೂಜರ ಜೀಪ ಚಾಲಕನು ಅಪಘಾತ ಪಡಿಸಿ ತನ್ನ ಜೀಪನ್ನು ಅಲ್ಲೇ ಬಿಟ್ಟು ಓಡಿ ಹೋಗಿದ್ದು, ಸದರಿ ಜೀಪ ಚಾಲಕನ ವಿರುದ್ದ ಕಾನೂನು ಕ್ರಮ  ಜರುಗಿಸಬೇಕು ಅಂತಾ ಶ್ರೀ ಲಾಲಪ್ಪ ತಂದೆ ಸೋಮರಾಯ ಇಟಕಲ್ ಸಾ|| ನಾಮವಾರ ಗ್ರಾಮ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೇಡಂ ಠಾಣೆ : ದಿನಾಂಕ: 13-10-19 ರಂದು ಸಾಯಂಕಾಲ ಸೇಡಂನ ನಾಗರಕಟ್ಟಾ ಹತ್ತಿರ ಟ್ರಾಕ್ಟರ ನಂ ಕೆಎ.32.ಟಿ.ಬಿ 2337-2338 ನ್ನೆದ್ದರ ಚಾಲಕನಾದ ಭೀಮಣ್ಣಾ ಹುಡಾ(ಬಿ) ಇತನು ತನ್ನ ಟ್ರಾಕ್ಟರನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ  ನಡೆಸಿಕೊಂಡು ಬಂದು ಸೇಡಂ ಬಜಾರದಲ್ಲಿ ಸಂತೆ ಮಾಡುತಿದ್ದ ಶ್ರೀಮತಿ ಕಲ್ಪನಾ ಗಂಡ ಯಲ್ಲಾಪ್ಪಾ ಸಂಗಾವಿ ಸಾ ಸಟಪಟನಹಳ್ಳಿ ತಾ : ಸೇಡಂ ರವರಿಗೆ ಡಿಕ್ಕಿ ಪಡಿಸಿ ಅಫಘಾತ ಮಾಡಿ ಭಾರಿ ಗುಪ್ತಗಾಯ ಪಡಿಸಿ ಟ್ರಾಕ್ಟರ ಚಾಲಕನು ತನ್ನ ಟ್ರಾಕ್ಟರನ್ನು ಅಲ್ಲೆ ಸ್ಥಳದಲ್ಲಿ ಬಿಟ್ಟು ಓಡಿ ಹೊಗಿದ್ದು ಇರುತ್ತದೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತ್ಯಾಚಾರವೆಸಗಿದ ಪ್ರಕರಣ :
ಯಡ್ರಾಮಿ ಠಾಣೆ :  ಮೌನೇಶ ತಂದೆ ಮರಳಪ್ಪ ಬಿಜೇವಾಡಿ ಇವನ ಮನೆಯು ನಮ್ಮ ಮನೆಯ ಮುಂದೆ ಇದ್ದು, ಮೌನೇಶ ಇವನು ಈಗ ಕೆಲವು ತಿಂಗಳ ಹಿಂದೆ ನನ್ನ ಮಗಳು ಕುಮಾರಿ ಇವಳಿಗೆ ಆಗಾಗ ನೋಡುವುದು ಮತ್ತು ಮಾತನಾಡಿಸುವುದು ಮಾಡುತ್ತಿದ್ದರಿಂದ ನಾನು ಮೌನೆಶನಿಗೆ ಇನ್ನೊಮ್ಮೆ ನನ್ನ ಮಗಳೊಂದಿಗೆ ಮಾತನಾಡಬೇಡ ಅಂತಾ ತಿಳವಳಿಕೆ ಹೇಳಿರುತ್ತೇನೆ, ದಿನಾಂಕ 12-10-2019 ರಂದು ರಾತ್ರಿ 9;00 ಗಂಟೆ ಸುಮಾರಿಗೆ ನಾನು ನನ್ನ ಹೆಂಡತಿ ನನ್ನ ಮಕ್ಕಳು ರವರು ಕೂಡಿ ಊಟ ಮಾಡಿಕೊಂಡು ಮನೆಯಲ್ಲಿ ಮಲಗಿಕೊಂಡಿದ್ದೇವು, ನಂತರ ರಾತ್ರಿ 12;00 ಗಂಟೆ ಸುಮಾರಿಗೆ ನಾನು ಕಾಲಮಡಿಯಲು ಎದ್ದು ನಂತರ ಮನೆಯಲ್ಲಿ ಹೋಗಿ ಮಲಗಿಕೋಡಿರುತ್ತೇನೆ, ದಿನಾಂಕ 13-10-2019 ರಂದು ಬೆಳಿಗ್ಗೆ 05;00 ಗಂಟೆಗೆ ನಾವು ಎದ್ದು ನೋಡಿದಾಗ ನನ್ನ ಕಿರಿ ಮಗಳು ಮನೆಯಲ್ಲಿ ಇರಲಿಲ್ಲಾ, ನಂತರ ನಾವು ಉರಲ್ಲಿ ಎಲ್ಲಾಕಡೆ ಹುಡಕಾಡಿದರು ನಮ್ಮ ಮಗಳು ಸಿಕ್ಕಿರುವುದಿಲ್ಲಾನನ್ನ ಮಗಳು ನಮ್ಮೂರ ಮೌನೇಶ ತಂದೆ ಮರಳಪ್ಪ ಬಿಜೇವಾಡಿ ಇವನು ಯಾವುದೊ ಆಸೇ ತೋರಿಸಿ ಇಂದು ದಿನಾಂಕ 13-10-2019 ರಂದು 12;00 .ಎಂ ದಿಂದ ಬೆಳಗಿನಜಾವವ 05;00 .ಎಂ ಮದ್ಯದಲ್ಲಿ ನಮ್ಮ ಮನೆಯಿಂದ ಅಪರಹರಿಸಿಕೊಂಡು ಹೋಗಿರಬಹುದು, ಆದ್ದರಿಂದ ಮೌನೇಶನ ವಿರುದ್ದ ಕಾನೂನುರ ರೀತಿ ಕ್ರಮ ಕೈಗೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ಆರೋಪಿ ಮತ್ತು ಅಪಹರಣೊಕ್ಕಳಗಾದವಳ ಪತ್ತೆ ಕುರಿತು ರಾಜೇಂದ್ರಪ್ರಸಾಸ ಎ.ಎಸ್.ಐ  ಮತ್ತು ಖಾಸಿಂಬಿ ಮಪಿಸಿ 1197 ರವರನ್ನು ನೇಮಿಸಿ ಕಳುಹಿಸಿಕೊಟ್ಟೆನು. ಸದರಿಯವರು ದಿನಾಂಕ 15-10-2019 ರಂದು ಬೆಳಿಗ್ಗೆ 10;00 ಸುಮಾರಿಗೆ ಆರೊಪಿ ಮೌನೇಶ ಬಿಜೇವಾಡಿ ಮತ್ತು ಅಪಹರಣಕ್ಕೊಳಗಾದ ಕುಮಾರಿಯನ್ನು ನನ್ನ ಮುಂದೆ ಹಾಜರಪಡಿಸಿರುತ್ತಾರೆ, ನಂತರ ಜೇವರ್ಗಿ ಠಾಣೆಯಿಂದ ಶ್ರೀಮತಿ ನಿರ್ಮಲಾ ಹೆಚ್.ಸಿ 443 ರವರನ್ನು ಠಾಣೆಗೆ ಕರೆಯಿಸಿ ಸಂತ್ರಸ್ತೆಯನ್ನು ರವರಿಗೆ ಅವರ ತಾಯಿಯ ಸಮಕ್ಷಮದಲ್ಲಿ ಅವರ ಕೋರಿಕೆಯಂತೆ ವಿಚಾರಿಸಿದಾಗ ಹೇಳಿಕೆ ನೀಡಿದ್ದೇನೆಂದರೆ, ನಮ್ಮ ತಂದೆ ತಾಯಿಗೆ ನಾವು ಮೂರು ಜನ ಹೆಣ್ಣು ಮಕ್ಕಳಿರುತ್ತೇವೆ.  ನಾನು ನಮ್ಮೂರ ಸರಕಾರಿ ಪ್ರೌಡ ಶಾಲೆಯಲ್ಲಿ 8ನೇ ತರಗತಿವರೆಗೆ ಕಲಿತಿದ್ದು ಈಗ 2 ವರ್ಷದಿಂದ ಶಾಲೆ ಬಿಟ್ಟು ಮನೆಯಲ್ಲಿಯೇ ಇರುತ್ತೇನೆ. ನಮ್ಮ ಮನೆಯ ಸಮೀಪವೇ ನಮ್ಮೂರ ಮೌನೇಶ ತಂದೆ ಮರಳಪ್ಪ ಬಿಜೇವಾಡಿ ಇವರ ಮನೆ ಇರುತ್ತದೆ.  ಈಗ  ಒಂದು ವರ್ಷದಿಂದ ಮೌನೇಶ ಇತನು ನಮ್ಮ ಮನೆಯ ಕಡೆಗೆ ಬಂದು ನನ್ನೊಂದಿಗೆ ಸಲುಗೆಯಿಂದ ಮಾತನಾಡುತ್ತಾ ನನಗೆ ಪರಿಚಯವಾಗಿದ್ದನು. ಅಲ್ಲದೆ ಅವನು ನನಗೆ ನಾನು ನಿನಗೆ ತುಂಬಾ ಪ್ರೀತಿ ಮಾಡುತ್ತಿದ್ದೇನೆ ಅಂತಾ ಅಂದಾಗ ನಾನು ಅವನಿಗೆ ಹಾಗೇಲ್ಲ ಮಾಡಬೇಡ ಅಂತಾ ಅಂದಿದ್ದೇನು. ಆದರು ಅವನು ಕೇಳದೆ ನನಗೆ 2-3 ಸಲ ಪ್ರಫೋಜ ಮಾಡಿದ್ದರಿಂದ ನಾನು ಆಯಿತು ಅಂತಾ ಒಪ್ಪಿಕೊಂಡಿದ್ದೇನು. ಇದಾದ ಮೇಲೆ ಒಂದು ದಿವಸ ಮದ್ಯಾಹ್ನ 1-30 ಗಂಟೆ ಸುಮಾರಿಗೆ ನಮ್ಮ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮೌನೇಶ ಇತನು ನಮ್ಮ ಮನೆಯ ಕಡೆಗೆ ಬಂದು ನನಗೆ ನಮ್ಮ ಮನೆಯ ಹಿಂದೆ ಕರೆದು ಇಬ್ಬರು ಮಲಗೋಣ ಬಾ ಅಂತಾ ಅಂದನು  ನಾನು ಅವನಿಗೆ ಬೇಡ ಬೇಡ ಅಂದರು ಕೂಡಾ ಒತ್ತಾಯದಿಂದ ಸಂಭೋಗ ಮಾಡಿರುತ್ತಾನೆ. ಇದಾದ ಮೇಲೆ ಕೂಡಾ ಅವನು ನನಗೆ ಯಾರು ಇಲ್ಲದ ಸಮಯದಲ್ಲಿ 2-3 ಸಲ ನಮ್ಮ ಮನೆಯ ಹಿಂದೆಯೇ ಕರೆದು ಸಂಭೋಗ ಮಾಡಿರುತ್ತಾನೆ. ಮೌನೇಶ ಇತನು ನನ್ನೊಂದಿಗೆ ಸಲುಗೆಯಿಂದ ಮಾತನಾಡುವ ವಿಷಯ ನಮ್ಮ ಮನೆಯಲ್ಲಿ ಗೊತ್ತಾದಾಗ ನನ್ನ ತಂದೆ ತಾಯಿ ಅವನಿಗೆ ಬುದ್ದಿ ಮಾತು ಹೇಳಿದ್ದರು. ಆದರೂ ಕೂಡಾ ದಿ: 12-10-19 ರಂದು ಮುಂಜಾನೆ ನಾನು ಮತ್ತು ನನ್ನ ತಾಯಿ ಹಾಗೂ ಅಕ್ಕಂದಿರರು ಕೂಡಿ ಕೆಲಸಕ್ಕೆ ಹೋಗಿ ಸಂಜೆ ವಾಪಾಸ ಮನೆಗೆ ಬಂದಾಗ ಅಂದು ಸಂಜೆ ಹೊತ್ತಿನಲ್ಲಿ ಮೌನೇಶನು ನನಗೆ ನಮ್ಮ ಮನೆಯ ಹಿಂದೆ ಸಿಕ್ಕಾಗ ನಾನು ನಿನಗೆ ಕರಾಡಕ್ಕೆ ಕರೆದುಕೊಂಡು ಹೋಗುತ್ತೇನೆ. ರಾತ್ರಿ ಮನೆಯಿಂದ ಎದ್ದು ರೋಡಿನ ಕಡೆಗೆ ಬಾ ಅಂತಾ ಹೇಳಿ ಹೋಗಿದ್ದನು. ಅದೆ ಪ್ರಕಾರ ಅಂದು ರಾತ್ರಿ ಮನೆಯಲ್ಲಿ ನಾನು ಮತ್ತು ನನ್ನ ತಂದೆ ತಾಯಿ ಅಕ್ಕಂದಿರರು ಎಲ್ಲರೂ ಕೂಡಿ ಊಟ ಮಾಡಿ ಮಲಗಿಕೊಂಡಿದ್ದು ಮನೆಯಲ್ಲಿ ಎಲ್ಲರೂ ಮಲಗಿಕೊಂಡಾಗ ರಾತ್ರಿ 11-30 ಗಂಟೆ ಸುಮಾರಿಗೆ ನಾನು ಎದ್ದು ರೋಡಿನ ಕಡೆಗೆ ಹೋದಾಗ ಅಲ್ಲಿ ಮೌನೇಶ ನಿಂತಿದ್ದನು. ನಂತರ ಅವನು ನನಗೆ ಅಲ್ಲಿಂದ ನಡೆಸಿಕೊಂಡು ವಡಗೇರಿ ಕ್ರಾಸ ತನಕ ಕರೆದುಕೊಂಡು ಹೋಗಿದ್ದು ನಾವಿಬ್ಬರೂ ಸ್ವಲ್ಪ ಹೊತ್ತು ಅಲ್ಲಿ ನಿಂತಾಗ ಆ ಕಡೆ ಒಂದು ಟಂ ಟಂ ಬಂದಿದ್ದು, ಆ ಮೇಲೆ ಇಬ್ಬರೂ ಅದರಲ್ಲಿ ಮಲ್ಲಾ ಕ್ರಾಸ ತನಕ ಹೋದೆವು. ರಾತ್ರಿ ನಾವು ಮಲ್ಲಾ ಕ್ರಾಸ ಹತ್ತಿರ ನಿಂತಾಗ ಶಹಾಪೂರ ಕಡೆಯಿಂದ ಒಂದು ಬಸ್ಸ ಬಂದಿದ್ದು ಅದರಲ್ಲಿ ಇಬ್ಬರೂ ಕೂಡಿ ಸಿಂದಗಿಗೆ ಹೋಗಿದ್ದು ರಾತ್ರಿ ಅವನು ಸಿಂದಗಿಯಲ್ಲಿ ರೋಡಿನ ಪಕ್ಕದಲ್ಲಿರುವ ಒಂದು ಲಾಡ್ಜ ಬಾಡಿಗೆಯಿಂದ ಹಿಡಿದು ಇಬ್ಬರೂ ರಾತ್ರಿ ಲಾಡ್ಜನಲ್ಲಿ ಮಲಗಿಕೊಂಡಾಗ ಅಲ್ಲಿ ಕೂಡಾ ಒತ್ತಾಯ ಮಾಡಿ ಸಂಭೋಗ ಮಾಡಿರುತ್ತಾನೆ. ಮರುದಿನ ದಿ: 13-10-19 ರಂದು ಮುಂಜಾನೆ ಅವನು ನನಗೆ ಸಿಂದಗಿಯಿಂದ ಬಸ್ಸಿನಲ್ಲಿ ಬಿಜಾಪೂರ ತನಕ ಕರೆದುಕೊಂಡು ಹೋಗಿ ಅಲ್ಲಿಂದ ಬಸ್ಸಿನಲ್ಲಿ ಮಹಾರಾಷ್ಟ್ರದ ಕರಾಡ ಕಡೆ ಇರುವ ಚಿಪಲೂನ ಹತ್ತಿರ ಒಂದು ಊರಿನಲ್ಲಿರುವ ಅವರ ಅಣ್ಣನ ಮನೆಗೆ ಕರೆದುಕೊಂಡು ಹೋಗಿದ್ದು ಅಂದು ರಾತ್ರಿ ನಾವಿಬ್ಬರೂ ಅವರ ಅಣ್ಣನ ಮನೆಯಲ್ಲಿ ಮಲಗಿಕೊಂಡಾಗ ಅಲ್ಲಿ ಕೂಡಾ ನನಗೆ ಜಬರದಸ್ತಿಯಿಂದ ಸಂಭೋಗ ಮಾಡಿರುತ್ತಾನೆ. ಅಂತಾ ಹೇಳಿಕೆ ನಿಡಿದ್ದರ ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಸೇಡಂ ಠಾಣೆ : ಶ್ರೀ ವಿಜಯಕುಮಾರ ತಂದೆ ವೀರಶೇಟ್ಟೆಪ್ಪಾ ಸಾ : ವಿದ್ಯಾನಗರ ಸೇಡಂ ರವರು ದಿನಾಂಕ; 15-10-2019 ರಂದು ಮುಂಜಾನೆ 9-30 ಗಂಟೆ ಸುಮಾರಿಗೆ ಎಂದಿನಂತೆ ಮನೆಯಿಂದ ತನ್ನ ಕಿರಾಣಿ ಅಂಗಡಿಗೆ ಬಂದು ನನ್ನ ಕಿರಾಣಿ ಅಂಗಡಿಯ ಸೇಟರ ಕಿಲಿ ತೆರೆದು ನಾನು ಮನೆಯಿಂದ ಬರುವಾಗ ನನ್ನ ಜೊತೆಯಲ್ಲಿ ತಂದಿದ್ದ 6,00000/- ರೂ ಇದ್ದ ಕೈ ಚಿಲವನ್ನು ನನ್ನ ಕಿರಾಣಿ ಅಂಗಡಿ ಕೌಂಟರ ಡ್ರಾದ ಪಕ್ಕದಲ್ಲಿರುವ ಖುಲ್ಲಾ ಜಾಗದಲ್ಲಿ ಇಟ್ಟು ಅಂಗಡಿಯ  ಹೊರಗಡೆ ಲಾರಿಯಲ್ಲಿ ಬಂದಿದ್ದ ಅಕ್ಕಿಯ ಚಿಲಗಳನ್ನು ಹಮಾಲರ ಮುಖಾಂತರ ತನ್ನ ಕಿರಾಣಿ ಅಂಗಡಿಯಲ್ಲಿ ಒಳಗಡೆ ಹಾಕಿಸುತಿದ್ದಾಗ ಒಬ್ಬ ಹುಡುಗನು ಕೈಯಲ್ಲಿ ನೊಟು ಹಿಡಿದುಕೊಂಡು ಕೌಂಟರ ಹತ್ತಿರ ಬಂದನು ನಾನು ಆತನಿಗೆ ಎನು ಬೆಕು ಅಂತಾ ಕೇಳಿದ್ದು ಆಗಾ ಅತನು ನನಗೆ ಎನು ಮಾತಾಡದೆ ಹಿಂದಕ್ಕೆ ಹೊದನು ನಂತರ ನಾನು ನನ್ನ ಅಂಗಡಿಯೊಳಗೆ ಹೊಗಿ ಅಕ್ಕಿಯ ಚಿಲಗಳನ್ನು ಹಾಕಿಸಿ ಹೊರಗಡೆ ಬಂದು ಬೆಳಗ್ಗೆ 9-45 ಗಂಟೆ ಸುಮಾರಿಗೆ ನನ್ನ ಕೌಂಟರದಲ್ಲಿ ಇಟ್ಟಿದ್ದ ಹಣದ ಕೈ ಚಿಲವನ್ನು ತೆಗೆದು ಒಳಗಡೆ ಲಾಕರದಲ್ಲಿ ಇಡಬೆಕು ಅಂತಾ ಕೌಂಟರದಲ್ಲಿ ಕೈ ಹಾಕಿ ಹಣದ ಚಿಲ ತೆಗೆದುಕೊಳ್ಳಲು ಹೊದಾಗ ನಾನು ಕೌಂಟರದಲ್ಲಿ ಇಟ್ಟಿದ್ದ ಹಣದ ಕೈ ಚಿಲ ಇರಲಿಲ್ಲಾ ಸದರಿ 6,00,000/- (ಆರು ಲಕ್ಷ ರೂ) ಇದ್ದ ಹಣದ ಕೈ ಚಿಲವನ್ನು ಕಳುವಾಗಿದ್ದು.ಇರುತ್ತದೆ. ಅಂತಾ ಸಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.