ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ 04-09-2014 ರಂದು ಅಫಜಲಪೂರ ಪಟ್ಟಣದ ಬಸವೇಶ್ವರ ಸರ್ಕಲ ಹತ್ತಿರ ಸಾರ್ವಜನಿಕ
ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ
ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ
ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ, ಸಿಬ್ಬಂದಿ ಮತ್ತು ಪಂಚರೊಂದಿಗೆ
ಸ್ಥಲಕ್ಕೆ ಹೋಗಿ ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ರಾಜಶೇಖರ ತಂದೆ
ಗುಂಡೆರಾವ ಕುಲಕರ್ಣಿ ಸಾ|| ಬ್ರಾಹ್ಮಣ ಗಲ್ಲಿ ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ
ಜೂಜಾಟಕ್ಕೆ ಸಂಬಂಧ ಪಟ್ಟ 750/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ
ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಮರಳಿ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ 03-09-2014 ರಂದು 11-00 ಎ.ಎಮ್ ಕ್ಕೆ ಶ್ರೀ ಶಿವರಾಜ @ ಶಿವರಾಯ ತಂದೆ ಶಾಂತಪ್ಪಾ ಡೊಣುರ, ಸಾಃ ಕುಮಸಿ ವಾಡಿ, ತಾಃ ಜಿಃ ಗುಲಬರ್ಗಾ ರವರು ಬಂಬು ಬಜಾರ ಕಟ್ಟಿಗೆ ಅಡ್ಡಾದ ಎದರುಗಡೆ ನಡೆದುಕೊಂಡು
ಹೋಗುತ್ತಿದ್ದಾಗ ಸುಲ್ತಾನಪೂರ ರೋಡ ಕಡೆಯಿಂದ ಯಾವುದೊ ಒಬ್ಬ ಮೋಟಾರ ಸೈಕಲ ಚಾಲಕ ತನ್ನ ಮೋಟಾರ
ಸೈಕಲ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ನಡೆದುಕೊಂಡು ಹೋಗುತ್ತಿದ್ದು
ಫಿರ್ಯಾದಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದು
ಅಪಘಾತದಿಂದ ಫಿರ್ಯಾದಿಗೆ ಕಣ್ಣಿನ ಮೆಲಕಿನ ಹತ್ತಿರ ಎಡಗಾಲು ಹೆಬ್ಬರಳಿಗೆ ಬಲಗಾಲು ಮೊಳಕಾಲಿಗೆ, ರಕ್ತಗಾಯವಾಗಿತ್ತು. ಎದೆಗೆ ಗುಪ್ತ ಪೆಟ್ಟಾಗಿರುತ್ತದೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ
ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ವಿಠ್ಠಲ ಜಾಮಗೊಂಡ ಸಾ|| ಬಂಕಲಗಿ ರವರು ದಿನಾಂಕ 03/09/2014 ರಂದು ನಾವು ಅಂದರೆ ವಿಠ್ಠಲ ಜಾಮಗೊಂಡ ಮತ್ತು ಧೂಳಪ್ಪ ಇಬ್ಬರು ಅಫಜಲಪೂರದಿಂದ ಊರಿಗೆ ಬರುವಾಗ ಬಮಕಲಗಾ ಬ್ರಿಡ್ಜ ಹತ್ತಿರ ನಮ್ಮನ್ನು ಬೈಕ್ ತಡೆದು ನಮ್ಮ ಮೇಲೆ ಹಲ್ಲೆ ನಡೆಸಿದ್ದಾನೆ ಹಲ್ಲೆ ನಡೆಸಿದವನು ತಿಪ್ಪಣ್ನ ತಂದೆ ಸವರಪ್ಪಾ ಪೂಜಾರಿ ಇದ್ದು ನಮಗೆ ಅಂಗಿ ಹಿಡಿದು ಜಗ್ಗಿ ನಿವು ನಮ್ಮ ಅಣ್ನನ ನ್ಯಾಯ ಮಾಡಿದ್ದಿರಿ ಅವತ್ತು ನಮಗೆ ಅವಾಚ್ಯ ಶಬ್ದಗಳಿಂದ ಬೈದು ನಮಗೆ ಊರಿನ ಜನರ ಮುಂದೆ ಮರ್ಯಾದೆ ಕಳೆದಿದ್ದಾನೆ ನಿಮಗೆ ಒಂದು ದಿವಸ ಹೊಡೆಯುತ್ತೆನೆ ಅಂತ ಜೀವ ಭಯ ಹಾಕಿದ್ದಾನೆ ಮತ್ತು ನಮಗೆ ಇವನಿಂದ ಜೀವ ಭಯವಿದೆ ಮತ್ತು ನಮ್ಮ ಅಂಗಿಯನ್ನು ಹರಿದು ಹಾಕಿದ್ದಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.