ದಿನಂಪ್ರತಿ
ಅಪರಾಧಗಳ ಮಾಹಿತಿ ದಿನಾಂಕ: 14-04-2020
ಭಾಲ್ಕಿ ನಗರ
ಪೊಲೀಸ್ ಠಾಣೆ ಅಪರಾಧ ಸಂಖ್ಯೆ 98/2020 ಕಲಂ ಕಲಂ. 143, 147, 148, 341,
323, 324, 504, 307, 353, 354 ಜೊತೆ 149 ಐಪಿಸಿ. :-
ದಿನಾಂಕ: 13-04-2020
ರಂದು
1500
ಗಂಟೆಗೆ
ಫಿರ್ಯಾದಿ ಶ್ರೀಮತಿ ಕರೀಮಾ ಬೀ ಗಂಡ ಪಾಶಾಮಿಯಾ ಲತಾಳೆ ಸಾ: ಶೇಮಶಾಪೂರವಾಡಿ ಗ್ರಾಮ ತಾ: ಭಾಲ್ಕಿ ರವರು
ನೀಡಿದ
ದೂರಿನ ಸಾರಾಂಶವೆನೆಂದರೆ ಫಿರ್ಯಾದಿಯು ಕೂಲಿ ಕೆಲಸ ಮಾಡಿಕೊಂಡು ಉಪಜೀವನ ಮಾಡುತ್ತಿದ್ದು ಇವರಿಗೆ
1) ಸುಮಯಾ, 2) ಅಯುಬ, 3) ಸಮಾ ಮತ್ತು 4) ಅಶ್ಫಾಕ್ ಅಂತ
ನಾಲ್ಕು ಜನ ಮಕ್ಕಳಿರುತ್ತಾರೆ. ಅಯುಬ ವಯ: 22 ವರ್ಷ, ಕೂಲಿ ಕೆಲಸ
ಮಾಡಿಕೊಂಡಿರುತ್ತಾನೆ. ಗ್ರಾಮದ ಆಶಾ ಗಂಡ ಅರವಿಂದ
ತಪಶ್ಯಾಳೆ ವಯ: 20
ವರ್ಷ, ರವರ
ಮನೆ ಮತ್ತು ಫಿರ್ಯಾದಿ ಮನೆ
ಹತ್ತಿರದಲ್ಲಿಯೇ ಇರುತ್ತವೆ ಮನೆಯ ಹತ್ತಿರ
ನೀರು ತುಂಬುವ ಟ್ಯಾಂಕ ಇದ್ದು ಫಿರ್ಯಾದಿ ಮಗ ಅಯುಬ ನೀರು ತರುವಾಗ
ಆಶಾ ಇವಳ ಜೊತೆ ಪರಿಚಯವಾಗಿದ್ದು ಇದೆ. ನೀರು ತುಂಬುವಾಗ ಹೆಣ್ಣು ಮಕ್ಕಳ ಜೊತೆ ಮಾತನಾಡಬೇಡ ಅಂತ ಮಗ ಅಯುಬನಿಗೆ ಒಂದು ತಿಂಗಳ ಹಿಂದೆ ಫಿರ್ಯಾದಿಯು
ಹೇಳಿರುತ್ತಾರೆ. ದಿನಾಂಕ:
13-04-2020
ರಂದು
ಶಮಶಾಪೂರವಾಡಿಯಿಂದ ಕಾಸರತೂಗಾಂವ ಕ್ರಾಸ್ ಮೂಲಕ ಭಾಲ್ಕಿಯ ಕಡೆಗೆ ಫಿರ್ಯಾದಿ ಮಗ ಮತ್ತು ಆಶಾ
ಇಬ್ಬರು ಕೂಡಿಕೊಂಡು ಬರುವಾಗ ಗ್ರಾಮದ ಆಶಾಳ ಗಂಡ 1) ಅರವಿಂದ ತಂದೆ
ವಿಜಯಕುಮಾರ ತಪಶ್ಯಾಳೆ, 30 ವರ್ಷ, 2) ಸುನೀಲ ತಂದೆ ವಿಜಯಕುಮಾರ
ಆಶಾಳ ಮಾವ 3)
ವಿಜಯಕುಮಾರ
ತಪಶ್ಯಾಳೆ ಮತ್ತು ಆಶಾಳ ಅಣ್ಣ 4) ಜ್ಞಾನೋಬಾ ತಂದೆ ಶಿವಾಜಿರಾವ, 5) ಅನೀಲ ತಂದೆ
ಲಕ್ಷ್ಮಿಣರಾವ,
ರವರು
ಕೂಡಿಕೊಂಡು ಬಂದು 1230 ಗಂಟೆಗೆ ಭಾಲ್ಕಿಯ ಬಸ ಡಿಪೋ ಹತ್ತಿರ ತಡೆದು, ಅರವಿಂದನು
ಅಯುಬ್ ಸೂಳೆ ಮಗನೆ ನನ್ನ ಹೆಂಡತಿಗೆ ಎತ್ಕೊಂಡು ಹೋಗುತ್ತಿ ಅಂತಾ ಅವಾಚ್ಯವಾಗಿ ಬೈದು, ಬಡಿಗೆಯಿಂದ ತಲೆಯ
ಎಡಗಡೆ,
ಎಡ
ರಟ್ಟೆಯ ಮೇಲೆ,
ಹೊಡೆಯುವಾಗ
ಸುನೀಲ ಒತ್ತಿ ಹಿಡಿದಿರುತ್ತಾನೆ, ಆಶಾ ಬಿಡಿಸುವಾಗ ಅವಳಿಗೂ ಕೂಡಾ ಜ್ಞಾನೋಬಾ ಇವನು
ಹೊಟ್ಟೆಯಲ್ಲಿ ಒದ್ದಿದ್ದರಿಂದ ಅವಳು ಕೆಳಗೆ ಬಿದ್ದಾಗ ಅವಳ ಎಡಗೈಗೆ ಬಲ ಮೊಣಕೈಗೆ ತರಚಿದ ಮತ್ತು
ಹೊಟ್ಟೆಯಲ್ಲಿ ಗುಪ್ತಗಾಯ ವಾಗಿರುತ್ತದೆ. ಮತ್ತು ಮಾವ ವಿಜಯಕುಮಾರ ಆಶಾಳಿಗೆ ಕಪಾಳದ ಮೇಲೆ
ಹೊಡೆದನು. ಮತ್ತೆ ಎಲ್ಲರು ನಮ್ಮ ಹೆಣ್ಣು ಮಗಳ ಜೊತೆ ಇರುತ್ತಿ ರಂಡಿ ಮಗನೆ ಅಂತ ಬೈದು, ಸುನೀಲನು
ಬಡಿಗೆಯಿಂದ ಮತ್ತು ಜ್ಞಾನೋಬಾ ಕಲ್ಲಿನಿಂದ ನನ್ನ ಬೆನ್ನಿನ ಮೇಲೆ ಹೊಡೆದಾಗ, ಮತ್ತೆ
ಅರವಿಂದ ತಪಸಾಳೆ ಇವನು ಕೊಲೆ ಮಾಡುವ ಉದ್ದೇಶದಿಂದ ಬಡಿಗೆಯಿಂದ ತಲೆಗೆ ಹೊಡೆದು
ರಕ್ತಗಾಯಪಡಿಸಿರುತ್ತಾನೆ. ಅಷ್ಟರಲ್ಲಿಯೆ ಅದೇ ವೇಳಗೆ ಹೋಗುತ್ತಿರುವ ಪೊಲೀಸರಾದ ಗುರುನಾಥ ಮತ್ತು
ಜೀಪ ಚಾಲಕ ರಾಜಕುಮಾರ ಎಂಬುವರು ಜಗಳ ಬಿಡಿಸುವಾಗ ಅನೀಲನು ಬಡಿಗೆಯಿಂದ ನನಗೆ ಹೊಡೆಯುವಾಗ ಗುರುನಾಥ
ಪೊಲೀಸರ ಎಡಗೈಗೆ ಪೆಟ್ಟು ಬಿದ್ದಿರುತ್ತದೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೋಳ್ಳಲಾಗಿದೆ.