ಮಟಕಾ
ಜೂಜಾಟದಲ್ಲಿ ನಿರತವನ ಬಂಧನ :
ನರೋಣಾ ಠಾಣೆ : ದಿನಾಂಕ:
06/01/2020 ರಂದು ನರೋಣಾ ಪೊಲೀಸ ಠಾಣಾ ವ್ಯಾಪ್ತಿಯ . ವ್ಹಿ,ಕೆ,ಸಲಗರ ಗ್ರಾಮದಲ್ಲಿ ಹನುಮಾನ ದೇವಸ್ಥಾನ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ
ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಅಂಕಿಸಂಖ್ಯೆಗಳನ್ನು ಬರೆದುಕೊಡುತ್ತಿರುವ
ಬಗ್ಗೆ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ನರೋಣಾ ಠಾಣೆ
ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ್.ಪಿ
ಸಾಹೇಬರು ಆಳಂದ ಹಾಗೂ ಸಿ.ಪಿ.ಐ ಸಾಹೇಬರು ಆಳಂದರವರ ಮಾರ್ಗದರ್ಶನದಲ್ಲಿ, ಠಾಣೆಯಿಂದ ಹೊರಟು ಹನುಮಾನ
ದೇವರ ಗುಡಿಯ ಹತ್ತಿರ ಹೊಗಿ ಮರೆಯಾಗಿ ನಿಂತು ನೋಡಲಾಗಿ ಗುಡಿಯ ಮುಂದಿನ ರೋಡಿನ ಬದಿಯಲ್ಲಿ ಸಾರ್ವಜನಿಕ
ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಸಾರ್ವಜನಿಕರಿಂದ ಹಣ
ಪಡೆದು ಓಪನ್ ನಂಬರ್ ಬಂದರೆ ಒಂದು ರೂಪಾಯಿಗೆ 08 ರೂಪಾಯಿ ಗೆಲ್ಲಿರಿ, ಜಾಯಿಂಟ್ ನಂಬರ್ ಬಂದರೆ 01
ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಅಂತಾ ಕೂಗುತ್ತಾ ಮಟಕಾ ಅಂಕಿ ಸಂಖೆಯುಳ್ಳ ಚೀಟಿಗಳನ್ನು
ಬರೆದುಕೊಡುತ್ತಾ ಸಾರ್ವಜನಿಕರಿಗೆ ಮೊಸ ಮಾಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಿ
ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಬಸವರಾಜ ತಂದೆ ಶಾಂತಪ್ಪಾ ಬೊಧನ ಸಾ: ವ್ಹಿ,ಕೆ,ಸಲಗರ ಅಂತಾ ತಿಳಿಸಿದ್ದು ಸದರಿಯವನಿಗೆ ಅಂಗಶೋಧನ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಸಿದ
1]ಒಂದು ಮಟಕಾ ಅಂಕಿಸಂಖ್ಯೆಯುಳ್ಳ ಚೀಟಿ, 2)ಒಂದು ಬಾಲ ಪೆನ್ 3)ನಗದು ಹಣ 11,010/- ರೂಪಾಯಿಗಳು ವಶಕ್ಕೆ ತಗೆದುಕೊಂಡು ಸದರಿಯವನಿಗೆ ವಶಕ್ಕೆ ತೆಗೆದುಕೊಂಡು ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ
ಜೂಜಾಟದಲ್ಲಿ ನಿರತವರ ಬಂಧನ :
ನರೋಣಾ ಠಾಣೆ : ದಿನಾಂಕ
06/01/2020 ರಂದು ನರೋಣಾ ಠಾಣಾ ವ್ಯಾಪ್ತಿಯ ವ್ಹಿ,ಕೆ,ಸಲಗರ
ಗ್ರಾಮದ ಹನುಮಾನ ದೇವಸ್ಥಾನದ
ಕಟ್ಟೆಯ ಮೇಲೆ ಸಾರ್ವಜನಿಕ
ಸ್ಥಳದಲ್ಲಿ ಕೆಲವು ಜನರು
ದುಂಡಾಗಿ ಕುಳಿತು ಅಂದರ
ಬಾಹರ ಎಂಬ ಇಸ್ಪಿಟ
ಜೂಜಾಟಕ್ಕೆ ಹಣ ಪಣಕಿಟ್ಟು
ಆಡುತ್ತಿರುವ ಬಗ್ಗೆ ಖಚಿತ
ಬಾತ್ಮಿ ಬಂದ ಮೇರೆಗೆ
ಪಿ.ಎಸ್.ಐ. ನರೋಣಾ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ್.ಪಿ
ಸಾಹೇಬ ಆಳಂದ ಹಾಗೂ
ಮಾನ್ಯ ಸಿಪಿಐ ಆಳಂದ
ರವರ ಮಾರ್ಗದರ್ಶನದಂತೆ ಒಂದು
ಖಾಸಗಿ ಕ್ರೂಜರ ಜೀಪಿನಲ್ಲಿ
ಠಾಣೆಯಿಂದ ಹೊರಟು ಬಾತ್ಮಿ
ಬಂದ ಸ್ಥಳವಾದ ವ್ಹಿ,ಕೆ,ಸಲಗರ
ಗ್ರಾಮದ ಹನುಮಾನ ದೇವಸ್ಥಾನದ
ಕಟ್ಟೆಯ ಹತ್ತಿರ ಹೋಗಿ
ಮರೆಯಾಗಿ ನಿಂತು ನೋಡಲಾಗಿ
ದೇವಸ್ಥಾನದ ಕಟ್ಟೆಯ ಮೇಲೆ
ಸಾರ್ವಜನಿಕ ಸ್ಥಳದಲ್ಲಿ 4 ಜನರು
ದುಂಡಾಗಿ ಕುಳಿತು ಅಂದರ
ಬಾಹರ ಎಂಬ ಇಸ್ಪಿಟ
ಪಣಕ್ಕೆ ಹಣ ಹಚ್ಚಿ
ಆಡುತ್ತಿರುವುದನ್ನು ಖಚಿತ
ಪಡಿಸಿಕೊಂಡು ದಾಳಿ ಮಾಡಿ
ಅವರನ್ನು ಹಿಡಿದು ಅವರ
ಹೆಸರು ವಿಳಾಸ ವಿಚಾರಿಸಲಾಗಿ 1) ಶಿವಾಜಿ ತಂದೆ
ಲಕ್ಷ್ಮಣ ಗುಂಡುರೆ, ಸಾ:ಕೊಹಿನೂರ
ವಾಡಿ ತಾ: ಬಸವಕಲ್ಯಾಣ,
2) ಚಂದ್ರಕಾಂತ ತಂದೆ
ಕಲ್ಯಾಣಿ ಜಮಾದಾರ, ಸಾ:ವ್ಹಿ,ಕೆ,ಸಲಗರ
ಗ್ರಾಮ, 3) ಸುನೀಲಕುಮಾರ
ತಂದೆ ಲಕ್ಷ್ಮಣ ಮೂಲಗೆ,
ಸಾ:ಕೋಹಿನೂರವಾಡಿ ತಾ:
ಬಸವಕಲ್ಯಾಣ, 4) ಸಂಜುಕುಮಾರ
ತಂದೆ ಕಾಶಪ್ಪಾ ಜಮಾದಾರ,
ಸಾ:ವ್ಹಿ,ಕೆ,ಸಲಗರ
ಗ್ರಾಮ, ಅಂತಾ ತಿಳಿಸಿದ್ದು ಸದರಿಯವರಿಂದ
ಜೂಜಾಟಕ್ಕೆ ಬಳಸಿದ ನಗದು ಹಣ 5210/- ರೂಪಾಯಿ
ಮತ್ತು 52 ಇಸ್ಪಿಟ
ಎಲೆಗಳನ್ನು ಪಂಚರ ಸಮಕ್ಷಮದಲ್ಲಿ
ವಶಕ್ಕೆ ತೆಗೆದುಕೊಂಡು
ಸದರಿಯವರೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.