Police Bhavan Kalaburagi

Police Bhavan Kalaburagi

Sunday, July 2, 2017

BIDAR DISTRICT DAILY CRIME UPDATE 02-07-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 02-07-2017

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 93/2017, ಕಲಂ. 279, 338 ಐಪಿಸಿ :-
ದಿನಾಂಕ 01-07-2017 ರಂದು ಫಿರ್ಯಾದಿ ವಿಜಯಕುಮಾರ ತಂದೆ ಹರಿಶ್ಚಂದ್ರ ರಾಠೋಡ, ವಯ: 40 ವರ್ಷ, ಜಾತಿ: ಲಂಬಾಣಿ (ಬಂಜಾರಾ), ಸಾ: ಕಲಖೋರಾ ತಾಂಡಾ, ಸದ್ಯ: ಶಿವಾಜಿನಗರ ಬಸವಕಲ್ಯಾಣ ರವರು ತನ್ನ ಮಾರುತಿ ಸುಜುಕಿ ಡಿಸೈರ ಕಾರ ನಂ. ಕೆಎ-56/ಎಂ-630 ನೇದರಲ್ಲಿ ಬಸವಕಲ್ಯಾಣದಿಂದ ಕಲ್ಲಕೋರಾಕ್ಕೆ ಹೋಗುತ್ತಿರುವಾಗ ಬಂಗ್ಲಾ-ಬಸವಕಲ್ಯಾಣ ರೋಡ ಅನುಭವ ಮಂಟಪ ಕ್ರಾಸ್ ಹತ್ತಿರ ಹಿಂದಿನಿಂದ ಒಂದು ರಾಯಲ ಎನ್ಙಫೀಲ್ಡ ಮೋಟಾರ ಸೈಕಲ ನಂ. ಕೆಎ-56/ಎಚ್-4800 ನೇದರ ಚಾಲಕನಾದ ಆರೋಪಿ ಅಜೀಮೊದ್ದಿನ ತಂದೆ ಮುಕ್ತಾರೊದ್ದಿನ ಪತಂಗೆ, ವಯ: 40 ವರ್ಷ, ಜಾತಿ: ಮುಸ್ಲಿಂ, ಸಾ: ಬಿಜಲಿಖಾನಾ ಮಜೀದ ಬಸವಕಲ್ಯಾಣ ಇತನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಕಂಟ್ರೋಲ ಮಾಡದೆ ಫಿರ್ಯಾದಿಯ ಕಾರಿಗೆ ಹಿಂದಿನಿಂದ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಆರೋಪಿಯ ಎಡಗಾಲ ಹಿಮ್ಮಡಿಯ ಮೇಲೆ ಭಾರಿ ರಕ್ತಗಾಯವಾಗಿ ಕಾಲು ಮುರಿದಿರುತ್ತದೆ, ಬಲ ಮುಂಗೈಗೆ, ಬಲಗಾಲಿಗೆ ತರಚಿದ ಗಾಯ, ಮತ್ತು ಎಡ ತೊಡೆಗೆ ಗುಪ್ತಗಾವಾಗಿರುತ್ತದೆ, ಆತನಿಗೆ ಒಂದು ಖಾಸಗಿ ವಾಹನದಿಂದ ಬಸವಕಲ್ಯಾಣ ಸರಕಾರಿ ಆಸ್ಪತ್ರಗೆ ಕಳುಹಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಗಾಂಧಿಗಂಜ ಪೊಲೀಸ ಠಾಣೆ ಬೀದರ ಗುನ್ನೆ ನಂ. 124/217, ಕಲಂ. 447 ಐಪಿಸಿ :-
¢£ÁAPÀ 01-07-2017 gÀAzÀÄ ¦üAiÀiÁ𢠸ÀºÁAiÀÄPÀ ¸ÉPÀÆåjn D¦üøÀgÀ KgÀ ¥sÉÆøÀð ¸ÉÖõÀ£ï ©ÃzÀgÀ gÀªÀgÀÄ oÁuÉUÉ RÄzÁÝV ºÁdgÁV vÀ£Àß MAzÀÄ EAVèõÀzÀ°è mÉÊ¥À ªÀiÁrzÀ zÀÆgÀÄ ¸À°è¹zÀÄÝ CzÀgÀ ¸ÁgÁA±ÀªÉ£ÉAzÀgÉ ¢£ÁAPÀ 30-06-2017 gÀAzÀÄ M§â C¥ÀjavÀ ªÀåQÛ ©ÃzÀgÀ KgÀ ¥sÉÆøÀðzÀ «J¸À« KjAiÀiÁzÀ°è (qÉƪÉÄùÖÃPï KjAiÀiÁ) zÀ eÉqÀÆâ÷èN gÁ ¹AUï ªÉÄ¸ï ¥ÀªÀgÀ ºË¸À ºÀwÛgÀ CwÃPÀæªÀÄ ¥ÀæªÉñÀ ªÀiÁrgÀÄvÁÛ£É D ªÀåQÛAiÀÄ ºÉ¸ÀgÀÄ «ZÁj¹zÁUÀ ¸ÀļÀÄî ¸ÀļÀÄî ºÉ¸ÀgÀÄUÀ¼ÀÄ ºÉýgÀÄvÁÛ£É CªÀ£À ºÉ¸ÀgÀÄ ªÀÄvÀÄÛ «¼Á¸À «ZÁj¸À¯ÁV AiÀiÁªÀÅzÉ vÀgÀºÀzÀ ¸ÀéAvÀ ºÉ¸ÀgÀÄ ªÀÄvÀÄÛ «¼Á¸À ¤ÃrgÀĪÀ¢¯Áè CAvÀ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Kalaburagi District Reported Crimes

ಅಪಘಾತ ಪ್ರಕರಣ :
ಜೇವರಗಿ ಠಾಣೆ : ಜೇವರಗಿ ಠಾಣೆ : ದಿನಾಂಕ 01.07.2017 ರಂದು ಬೆಳಿಗ್ಗೆ ಶ್ರೀ ಕಲ್ಲಣ್ಣಗೌಡ ತಂದೆ  ಜಗಶೇಟ್ಟಿಗೌಡ ಮಾಲಿಪಾಟೀಲ  ಸಾಃ ಕೆಲ್ಲೂರ ತಾಃ ಜೇವರಗಿ ರವರು ಮತ್ತು ನನ್ನ ಕಾಕನಾದ  ಬಸಣ್ಣಗೌಡ ತಂದೆ ಅಯ್ಯಪ್ಪಗೌಡ ಮಾಲಿಪಾಟೀಲ ಇಬ್ಬರೂ ಕೂಡಿಕೊಂಡು ನಮ್ಮ ಹೊಲಕ್ಕೆ ಹೋಗಿ ಹೊಲದಲ್ಲಿ ಕೆಲಸ ಮುಗಿಸಿಕೊಂಡು ಮರಳಿ ಮನೆಗೆ ಬರುವಾಗ ಸಾಯಂಕಾಲ 5.00 ಗಂಟೆಯ ಸುಮಾರಿಗೆ ನಮ್ಮೂರ ಸರಕಾರಿ ಶಾಲೆಯ ಹತ್ತಿರ ಜೇವರಗಿ- ಶಹಾಪೂರ ರೋಡಿನಲ್ಲಿ ಇಬ್ಬರೂ ರೋಡ ಸೈಡಿನಿಂದ ನಡೆದುಕೊಂಡು ಬರುವಾಗ  ಅದೇ ವೇಳೆಗೆ ಶಹಾಪೂರ ರೋಡಿನ ಕಡೆಯಿಂದ ಒಂದು ಲಾರಿಯನ್ನು ಅದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನನ್ನ ಸಂಗಡ ಬರುತ್ತಿದ್ದ ನಮ್ಮ ಕಾಕ ಬಸಣ್ಣಗೌಡ ಇತನಿಗೆ ಹಿಂದಿನಿಂದ ಡಿಕ್ಕಿಪಡಿಸಿದನು, ಆಗ ನಮ್ಮ ಕಾಕ ರೋಡಿನಲ್ಲಿ ಬಿದ್ದನು. ನಾನು ಮತ್ತು ಅಲ್ಲಿಯೇ ರೋಡಿನಲ್ಲಿ ಬರುತ್ತಿದ್ದ ನಮ್ಮೂರ ಮಲ್ಲಿಕಾರ್ಜುನ ತಂದೆ ಬಸವರಾಜಗೌಡ ಪಾಟೀಲ, ಸುಬಾಶ್ಚಂದ್ರ ತಂದೆ ಕರಬಸ್ಸಪ್ಪ ಜವಳಿ ನಮ್ಮ ಕಾಕನಿಗೆ ನೊಡಲು ಅವನ ತಲೆಗೆಎರಡು ಕೈಗಳಿಗೆ ಎದೆಗೆ ಬೇನ್ನಿಗೆ ಭಾರಿ ರಕ್ತ ಗಾಯಗಳಾಗಿ  ಅವನು ಸ್ಥಳದಲ್ಲಿಯೇ ಮೃತಪಟ್ಟಿದ್ದನು .ಲಾರಿ ಚಾಲಕನು ತನ್ನ ಲಾರಿ ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿದನು.  ಲಾರಿಯನ್ನು ನೋಡಲಾಗಿ ಅದು  22 ಚಕ್ರವುಳ್ಳ ಉದ್ದನೇಯ ಟ್ರ್ಯಾಲಿಯ ಲಾರಿ ಇದ್ದು. ಅದರ  ನಂ ಹೆಚ್.ಆರ್-39-ಡಿ-7783 ಇತ್ತು. ಅದರ ಚಾಲಕನಿಗೆ ಹೆಸರು ಕೇಳಲಾಗಿ ಅವನು ತನ್ನ ಹೆಸರು ದೀಪಕ ತಂದೆ ರಮೇಶ ತಿವಾರಿ ಯು.ಪಿ. ಅಂತಾ ಹೇಳಿ, ಬಸಣ್ಣಗೌಡ ಮೃತಪಟ್ಟಿದ್ದನ್ನು ನೋಡಿ ಲಾರಿ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದುವೆಯಾಗುವುದಾಗಿ ನಂಬಿಸಿ ಬಲತ್ಕಾರ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಆಳಂದ ಠಾಣೆ : ಕುಮಾರಿ ರವರಿಗೆ ಆಳಂದದ ಅಜಮಲ್‌ ತಂದೆ ಯೂಸೂಫ್‌ ಅನ್ಸಾರಿ ಈತನು 2016 ನೇ ಸಾಲಿನ ಸೆಪ್ಟಂಬರ್‌ ತಿಂಗಳಿಂದ ಪಾಲೋ ಮಾಡಿ ನನ್ನ ಹಿಂದೆ ಬಂದು ನನ್ನೊಂದಿಗೆ ಸಲಿಗೆಯಿಂದ ಮಾತಾಡುತ್ತಾ ಪೀಡಿಸುತ್ತಾ ಬಂದು ನೀನು ನನ್ನೊಂದಿಗೆ ಪ್ರೀತಿಸು ನಿನಗೆ ಮದುವೆಯಾಗುತ್ತೇನೆ ಎಂದು ಹೇಳಿದಾಗ ನಾನು ನಿನಗೆ ಪ್ರೀತಿ ಮಾಡುವದಿಲ್ಲ ಎಂದು ಹೇಳಿದಾಗ ಅವನು ಈ ವಿಷಯ ಕಾಲೇಜಿನಲ್ಲಿ ಬಂದು ಮತ್ತು ನೀನು ಕೆಲಸ ಮಾಡುವಲ್ಲಿ ಬಂದು ಚೀರುತ್ತೇನೆ ನಿನ್ನ ಮರ್ಯಾದೆ ತೆಗೆಯುತ್ತೇನೆ ಎಂದು ಹೆದರಿಸಿದ್ದರಿಂದ ನಾನು ಅವನೊಂದಿಗೆ ಸಲುಗೆಯಿಂದ ಇರುತ್ತಿದ್ದೇನು. ನಂತರ 2016 ನೇ ಸಾಲಿನ ನವೆಂಬರ್‌ ತಿಂಗಳಲ್ಲಿ ಅಜ್ಮಲ್‌ ತಂದೆ ಯೂಸೂಫ್‌ ಅನ್ಸಾರಿ ಈತನು ನಿನಗೆ ಸಚ್ಚಾ ಮನಸ್ಸಿನಿಂದ ಪ್ರೀತಿಸುತ್ತೇನೆ, ನನಗೆ ತಾಯಿ ಇಲ್ಲ, ನೀನೆ ನನಗೆ ಎಲ್ಲಾ, ನಿನ್ನಷ್ಟು ನನಗೆ ಅರ್ಥ ಮಾಡಿಕೊಳ್ಳುವವರು ಯಾರು ಇಲ್ಲ, ನಿನ್ನೊಂದಿಗೆ ನಿಜವಾದ ಪ್ರೀತಿ ಮಾಡುತ್ತೇನೆ ಎಂದು ನನಗೆ ನಂಬಿಸಿದ್ದರಿಂದ ನನಗೂ ಒಂದು ಜೀವನ ಆಗುತ್ತದೆ ಎಂದು ಅವನೊಂದಿಗೆ ಪ್ರೀತಿಸುತ್ತಾ ಬಂದಿರುತ್ತೇನೆ. ನಂತರ ದಿನಾಂಕ:24/09/2016 ರಂದು ನನಗೆ ಪುಸಲಾಯಿಸಿ ಕಲಬುರಗಿಗೆ ಕರೆದುಕೊಂಡು ಹೋಗಿ ಆಳಂದ ಚೆಕ್‌ ಪೋಷ್ಟ ಹತ್ತಿರ ಇರುವ ಒಂದು ಲಾಡ್ಜಗೆ ಒಯ್ದು ಒತ್ತಾಯ ಪೂರ್ವಕವಾಗಿ ನನಗೆ ಮೈ ಮೇಲಿನ ಬಟ್ಟೆ ಕಳೆಯುತ್ತಿದ್ದಾಗ ನಾನು ಬೇಡ ಮದುವೆಯಾಗುವವರೆಗೆ ಇದೆಲ್ಲ ಬೇಡ ಅಂದರು ಕೂಡ ನಾನೇ ನಿನಗೆ ಮದುವೆಯಾಗುವವನು ಇದ್ದೇನೆ ಎಂದು ನನಗೆ ಒತ್ತಾಯಪೂರ್ವಕವಾಗಿ ಬಟ್ಟೆ ಕಳೆದು ನನ್ನ ಎರಡು ಕಾಲುಗಳು ಎತ್ತಿ ನನಗೆ ಒತ್ತಿ ಹಿಡಿದು ಜಬರದಸ್ತಿಯಿಂದ ನನಗೆ ಸಂಬೋಗ ಮಾಡಿರುತ್ತಾನೆ. ನಂತರ ನಾನು ಪ್ರಗ್ನೆಂಟ್‌ ಆಗಿದ್ದಾಗ ಅಜಮಲ್‌ ಈತನು ಮದುವೆಯಾಗುವವರೆಗೆ ಮಕ್ಕಳು ಬೇಡ ಅಬಾರೇಷನ್‌ ಮಾಡಿಸು ಎಂದು ಒತ್ತಾಯ ಪೂರ್ವಕವಾಗಿ ನನಗೆ ಮಾತ್ರೆ ನೀಡಿದ್ದರಿಂದ ಅಬಾರೇಷನ್‌ ಆಗಿರುತ್ತದೆ. ಇದೇ ರೀತಿಯಾಗಿ ಹೊರಗೆ ಕರೆದುಕೊಂಡು ಹೋಗಿ ಜಬರದಸ್ತಿಯಿಂದ ಸಂಬೋಗ ಮಾಡಿರುತ್ತಾನೆ. ನಂತರ ನಾನು ಮಾರ್ಚ ತಿಂಗಳಲ್ಲಿ ಮೊತ್ತೊಮ್ಮೆ ಪ್ರಗ್ನೆಂಟ್‌ ಆಗಿದ್ದರಿಂದ ಮಕ್ಕಳು ಬೇಡ ಎಂದು ಮಾತ್ರೆ ನೀಡಿದ್ದರಿಂದ ಅಬಾರೇಷನ್‌ ಆಗಿರುತ್ತದೆ. ನಾನು ಮದುವೆಯಾಗೋಣ ಎಂದು ಕೇಳಿದರೆ ಮುಂದೆ ಆಗೋಣ ಇನ್ನು ಸ್ವಲ್ಪ ಸಮಯ ಹೋಗಲಿ ಎಂದು ಮುಂದೆ ಹಾಕುತ್ತಾ ಬಂದು ನನಗೆ ಪುಸಲಾಯಿಸಿ ದಿನಾಂಕ:27/05/2017 ರಂದು ಕಲಬುರಗಿಯ ಆಳಂದ ಚೆಕ್‌ಪೋಷ್ಟ್‌ ಹತ್ತಿರ ಇರುವ ಒಂದು ಲಾಡ್ಜಗೆ ಕರೆದುಕೊಂಡು ಹೋಗಿ ಮತ್ತೆ ಒತ್ತಾಯ ಪೂರ್ವಕವಾಗಿ ಸಂಬೋಗ ಮಾಡಿರುತ್ತಾನೆ. ನಂತರ ನಾನು ಅಜಮಲ್‌ ಈತನಿಗೆ ಮದುವೆಯಾಗು ಎಂದು ಕೇಳಲು ಹೋದರೆ ನಾನು ನಿನಗೆ ಯಾವಾಗ ಮದುವೆಯಾಗುತ್ತೇನೆ ಎಂದು ಹೇಳಿದ್ದೇನೆ. ನಿನಗೆ ಮದುವೆಯಾಗುವದಿಲ್ಲ ಬೇಕಾದರೆ ನಾವು ಹೀಗೆ ಕೂಡುತ್ತಾ ಇರೋಣ ಮದುವೆ ಬೇಡ ಎಂದು ಹೇಳಿರುತ್ತಾನೆ. ದಿನಾಂಕ: 30/06/2017 ರಂದು 12-30 ಪಿಎಮ್‌ ವೇಳೆಗೆ ಅಜಮಲ್ ಇತನ ತಂದೆಯಾದ ಯೂಸೂಫ್‌ ಅನ್ಸಾರಿ ಈತನು ನಿನ್ನೊಂದಿಗೆ ಮಾತಾಡುವದಿದೆ ಮನೆಗೆ ಬಾ ಎಂದು ಕರೆದಿದ್ದರಿಂದ ನಾನು ಅವರ ಮನೆಗೆ ಹೋದಾಗ  ಅವರ ಮನೆಯಲ್ಲಿ 1) ಯೂಸೂಫ್ ತಂದೆ ಬೂರಾನುದ್ದಿನ್ ಅನ್ಸಾರಿ, 2) ಫಿರಾಸತ್‌ ಅನ್ಸಾರಿ ತಂದೆ ಮೈಬೂಬ್ ಅನ್ಸಾರಿ, 3) ಫುರಖಾನ್ ತಂದೆ ಮೈಬೂಬ್‌ ಅನ್ಸಾರಿ 4) ಕಾಲೇಮೀರ್ ತಂದೆ ಮೈಮೂದ್ ಅನ್ಸಾರಿ ಹಾಗೂ 5) ಯೂಸೂಫ್ ಅನ್ಸಾರಿ ಈತನ ಅಳಿಯ ಹೆಸರು ಗೊತ್ತಿಲ್ಲ ಎಲ್ಲರು ಹಾಜರಿದ್ದರು. ಆಗ ನಾನು ಯೂಸೂಫ್ ಅನ್ಸಾರಿ ಈತನೊಂದಿಗೆ ಮಾತಾಡುತ್ತಿದ್ದಾಗ ನಮ್ಮ ಮಗ ಗಂಡಸಿದ್ದಾನೆ ಹೀಗೆ ಮಾಢುತ್ತಾನೆ ನೀನು ರಂಡಿ ಇದ್ದಿ ನಿನ್ನ ನಡತೆ ಸರಿ ಇರುವದಿಲ್ಲ ಎಂದು ಬೈದಿರುತ್ತಾನೆ ಮತ್ತು ನಮ್ಮ ವಸೂಲಿ ಬಹಳ ದೂರದವರೆಗೆ ಇದೆ ನೀನು ಏನು ಮಾಡಕ್ಕಾಗಲ್ಲ ನಿನಗೆ ಹೊಡೆದು ಹಾಕಿದರು ಕೂಡ ಯಾರು ಕೇಳುವವರಿಲ್ಲ ಎಂದು ಬೆದರಿಕೆ ಹಾಕಿರುತ್ತಾನೆ. ಫಿರಾಸತ್‌ ಅನ್ಸಾರಿ ಈತನು ಮತ್ತು ಪುರಖಾನ್ ಅನ್ಸಾರಿ ಹಾಗು ಕಾಲೇಮಿರ್ ಇವರು ಕೂಡಿ ನೀನು ಕ್ಯಾರೆಕ್ಟರ್‌ ಲೆಸ್‌ ಇದಿ ಹರಾಮಕೋರ್ ಇದಿ ನಿನಗೆ ಖಲಾಸ್‌ ಮಾಡಿದರು ಕೇಳುವವರಿಲ್ಲ ನೀನು ಕೇಸು ಮಾಡಿದರೆ ನಿಮ್ಮ ಮನೆಯ ಮರ್ಯಾದೆ ತೆಗೆಯುತ್ತೇವೆ ನಮ್ಮ ಅನ್ಸಾರಿ ಬಿರಾದಾರಿ ಕೂಡಿ ನಿಮ್ಮ ಮನೆಯವರಿಗೆ ಅಗಸಿಗೆ ತಂದು ಹೊಡೆಯುತ್ತೇವೆ ಎಂದು ಬೆದರಿಕೆ ಹಾಕಿರುತ್ತಾರೆ.  ಫುರಖಾನಾ ಅನ್ಸಾರಿ ಈತನು ನನ್ನ ಕೈ ಹಿಡಿದು ಎಳೆದು ಕಪಾಳಕ್ಕೆ ಕೈಯಿಂದ ಹೊಡೆದಿರುತ್ತಾನೆ. ಫಿರಾಸತ್‌ ಅನ್ಸಾರಿ ಈತನು ಕೈಯಿಂದ ತಳ್ಳಿ ನೆಲಕ್ಕೆ ಕೆಡವಿರುತ್ತಾನೆ. ಮತ್ತು ನಿನಗೆ ಹೊಡೆದು ಹಾಕಿದರೆ ಯಾರು ಕೇಳುತ್ತಾರೆ ಎಂದು ಹೊಡೆಯಲು ಬಂದಿರುತ್ತಾನೆ. ಯೂಸೂಫ್‌ ಅನ್ಸಾರಿ ಈತನ ಅಳಿಯ ಈತನು ಅನ್ಸಾರಿ ಇವರಿಗೆ ಇದೆಲ್ಲ ಕಾಮನ್‌ ಇದೆ ನೀನೇನು ಮಾಡುತ್ತಿ ನಿನ್ನ ಪಾಡಿಗೆ ನೀನಿರು ಆಗಿದ್ದು ಆಗಿದೆ ಎಂದು ಬೈದಿರುತ್ತಾನೆ. ನಂತರ ಎಲ್ಲರೂ ಕೂಡಿ ನನಗೆ ಒತ್ತಾಯ ಪೂರ್ವಕವಾಗಿ ಕೇಸು ಮಾಡುವದಿಲ್ಲ ಅಜಮಲ್‌ ಈತನೊಂದಿಗೆ ಸಂಬಂದ ಇರುವದಿಲ್ಲ ನನ್ನ ಪಾಡಿಗೆ ನಾನಿರುತ್ತೇನೆ ಅಂತಾ ಸಹಿ ಮಾಡು ಎಂದು ಬಾಂಡ್ ಮೇಲೆ ನನಗೆ ಹೆದರಿಸಿ ಸಹಿ ಪಡೆದಿದ್ದು ನಾನು ನಿರಾಕರಿಸಿದರೂ ಕೂಡ ನನ್ನ ಎರಡು ಕೈಗಳ ಹೆಬ್ಬರಳು ಒತ್ತಿಸಿಕೊಂಡಿರುತ್ತಾರೆ. ನಂತರ ನನಗೆ ಕಾರಿನಲ್ಲಿ ತಂದು ಮಟಕಿ ಕ್ರಾಸ್ ಹತ್ತಿರ ತಳ್ಳಿ ಬಿಟ್ಟು ಹೋಗಿರುತ್ತಾರೆ. ನಂತರ ನಾನು ಅಜಮಲ್‌ ಅನ್ಸಾರಿ ಈತನಿಂದ ಮೋಸ ಹೋಗಿ ಅವರ ಮನೆಯವರಿಂದ ನನಗೆ ನ್ಯಾಯ ಸಿಗದೆ ಇದ್ದ ಕಾರಣಕ್ಕಾಗಿ ನಾನು ಮಾನ ಮರ್ಯಾದೆಗೆ ಅಂಜಿ ಮನ ನೊಂದುಕೊಂಡು ಸಾಯ ಬೇಕು ಅಂತಾ  ಮಾತ್ರೆ ಸೇವನೆ ಮಾಡಿದ್ದರಿಂದ ಚಕ್ಕರ್‌ ಬಂದು ಗುತ್ತೆದಾರ ಇವರ ಮನೆಯ ಹತ್ತಿರ ಬಿದ್ದಿದ್ದಾಗ ನಮ್ಮ ಮನೆಯವರಿಗೆ ವಿಷಯ ಗೊತ್ತಾಗಿ ನಮ್ಮ ಅಣ್ಣ ಇಶಾಕ್‌ ತಂದೆ ಅಬ್ದುಲ್ ರೆಹಮಾನ್ ಹಾಗು ನಮ್ಮ ಮಾಮಿ ಕಾಜಾಬೀ ಗಂಡ ಜಾನಿ ಕಡ್ಡೆ ಮತ್ತು ನಮ್ಮ ತಾಯಿ ಆಶಾಬೀ ಗಂಡ ಅಬ್ದುಲ್‌ ರೆಹಮಾನ್‌ ಇವರು ಉಪಚಾರ ಕುರಿತು ಪಿ.ಎನ್.ಶಹಾ ಆಸ್ಪತ್ರೆಗೆ ತಂದು ಉಪಚಾರಪಡಿಸಿ ನಂತರ ಸರ್ಕಾರಿ ಆಸ್ಪತ್ರೆ ಆಳಂದಕ್ಕೆ ಒಯ್ದು ಸೇರಿಕೆ ಮಾಡಿದ್ದು ಇರುತ್ತದೆ. ಕಾರಣ ಅಜಮಲ್ ಅನ್ಸಾರಿ ಈತನು ನನಗೆ ಮದುವೆ ಆಗುತ್ತೇನೆ ಎಂದು ನಂಬಿಸಿ ಮೋಸ ಮಾಡಿ ಒತ್ತಾಯ ಪೂರ್ವಕವಾಗಿ ಬಲವಂತವಾಗಿ ಸಂಬೋಗ ಮಾಡಿ ಮದುವೆಗೆ ನಿರಾಕರಿಸಿದ್ದರಿಂದ ಮತ್ತು ಅವನ ಮನೆಯವರಿಗೆ ಕೇಳಲು ಹೋದರೆ ನನ್ನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಳ್ಳು ಸಕ್ಷಿ ಹೇಳುವಂತೆ ಒತ್ತಾಯಿಸಿ ಜೀವ ಭಯ ಹಾಕಿದ ಪ್ರಕರಣ :
ಫರತಾಬಾದ ಠಾಣೆ : ಶ್ರೀಮತಿ  ಪರ್ವೀನ ಗಂಡ ಶಾಬೊದ್ದಿನ ಜಮಾದಾರ ಸಾ: ಮೈನಾಳ ತಾ:ಜಿ: ಕಲಬುರಗಿ ಇವರು ದಿನಾಂಕ 05/12/2014 ರಂದು ನನ್ನ ಗಂಡನಾದ ಶಹಾಬೂದ್ದಿನ ಇವರಿಗೆ  ಕವಲಗಾ ಸಿಮಾಂತರದ ಹೋಲದಲ್ಲಿ ನನ್ನ ಭಾವನ ಮಗನಾದ ಎಮ್.ಡಿ ಮಶಾಕ @ ಎಮ್.ಡಿ ಜುನೇದ ತಂದೆ ಮೈನೊದ್ದಿನ ಜಮಾದಾರ ಇತನು ತನ್ನ ಗೇಳೆಯನೊಂದಿಗೆ ಹೋಲದ ವಿಷಯದ ಸಂಬಂಧ ನನ್ನ ಗಂಡನಿಗೆ ಹರಿತವಾದ ಆಯುಧದಿಂದ ಚುಚ್ಚಿ ಕೋಲೆ ಮಾಡಿದ್ದು ಈ ಬಗ್ಗೆ ನನ್ನ ಭಾವನ ಮಗ ಹಾಗೂ ಆತನ ಗೆಳೆಯ ಎಮ್.ಡಿ ಜಹೀದ ತಂದೆ ಖಾಜಾಮಿಯ್ಯಾ ಇವರ ಮೇಲೆ ಫರಹತಾಬಾದ ಪೊಲೀಸ ಠಾಣೆಯಲ್ಲಿ ಗುನ್ನೆ ನಂ 178/14 ಕಲಂ 302,201, ನೇದ್ದರಲ್ಲಿ ಪ್ರಕರಣ ದಾಖಲಾಗಿ ಇಬ್ಬರಿಗೂ ಮಾನ್ಯ ನ್ಯಾಯಾದೀಶರು ನ್ಯಾಯಂಗ ಬಂಧನಕ್ಕೆ ಕಳುಹಿಸಿದ್ದು ಸುಮಾರೂ ನಾಲ್ಕೈದು ತಿಂಗಳ ನಂತರ ಭಾವನ ಮಗ ಎಮ್.ಡಿ ಮಶಾಕ @ ಎಮ್.ಡಿ ಜುನೇದ ಇತನು ಜೈಲಿನಿಂದ ಜಾಮಿನಿನ ಮೇಲೆ ಬಿಡುಗಡೆಯಾಗಿ ಕಲಬುರಗಿಗೆ ಬಂದು ಅಲ್ಲೆ ಕೆಲಸ ಮಾಡಿಕೊಂಡು ಈಗ ಎರಡು ತಿಂಗಳಿಂದ ಆಗಾಗ  ಊರಿಗೆ ಬಂದು  ನನಗೆ  ನೀನು ನಮ್ಮ ಮೇಲೆ ಕೇಸು ಮಾಡಿ ಜೈಲಿಗೆ ಕಳುಹಿಸಿದ್ದಿ ನೀನು ಮುಂದೆ ಕೋರ್ಟಿ ನಲ್ಲಿ ಸಾಕ್ಷಿ ಹೇಳುವಾಗ ನಾನು ನಿನ್ನ  ಗಂಡನಿಗೆ ಕೋಲೆ ಮಾಡಿರುವುದಿಲ್ಲಾ ಅಂತಾ ಸುಳ್ಳು ಹೇಳಬೆಕು ಇಲ್ಲದಿದ್ದರೆ  ನಿನ್ನ ಜೀವ ಸಹೀತ ಬಿಡುವುದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿರುತ್ತಾನೆ. ಅಲ್ಲದೆ ಊರಿನ ಜನರ ಮುಂದೆಯೂ ಸಹ ಇದೆ ರೀತಿ ಹೇಳಿ ಕೊಳ್ಳುತ್ತಾ ತಿರಗಾಡುತ್ತಾ ಇದ್ದು. ಇತನಿಂದ ನನಗೆ ಪ್ರಾಣ ಭಯವಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 01-07-2017 ರಂದು ಶ್ರೀ ಸಿದ್ದಾರೂಡ ತಂದೆ ಅಪ್ಪಯ್ಯ ಗೌಡಗಾಂವ ಸಾ: ಮಾಶಾಳ ಇವರು ಈಗ ಸುಮಾರು 40 ವರ್ಷಗಳ ಹಿಂದೆ ನಮ್ಮ ಬಾಬನ ಮಗಳಾದ ಗುರುಶಾಂತವ್ವ ಗಂಡ ದುಂಡಪ್ಪಾ ಕೊಡಗುಂಟ ಸಾ:ರೂಗಿ ಇವಳಿಗೆ ನಮ್ಮ ಬಾಬಾನಾದ ಭೀಮಶಾ ಇವರಿಗೆ ಗಂಡು ಮಕ್ಕಳ ಇರದೆ 5 ಜನ ಹೆಣ್ಣು ಮಕ್ಕಳು ಇರುತ್ತಾರೆ. ಅವರಿಗೆ ಸಂಬಂಧಿಸಿದ ಆಸ್ತಿಯನ್ನು ಹೆಣ್ಣು ಮಕ್ಕಳಿಗೆ ಸಮಪಾಲು ಹಂಚಿಕೆ ಮಾಡಿಕೊಟ್ಟಿರುತ್ತಾರೆ. ನಮ್ಮ ಬಾಬನ ಆಸ್ತಿಯನ್ನು ಗುರುಶಾಂತವ್ವ ಇವಳ ಪಾಲಿಗೆ ಬಂದಿದ್ದು ಮಾರಾಟ ಮಾಡಲು ಹೋದಾಗ ಈಗ 10 ವರ್ಷದ ಹಿಂದೆ ಅವಳ ಪಾಲಿಗೆ ಬಂದಿದ್ದ 6 ಎಕರೆ ಜಮೀನನ್ನು ನಾನು 70 ಸಾವಿರ ರೂಪಾಯಿಗಳನ್ನು ಕೊಟ್ಟು ನಮ್ಮ ತಮ್ಮನಾದ ದೂಳಪ್ಪನ ಹೆಸರಿನ ಮೇಲೆ ಊರಿನ ಪ್ರಮುಖರ ಸಮಕ್ಷಮದಲ್ಲಿ ಖರೀಧಿ ಮಾಡಿದ್ದು, ಖರೀಧಿ ಮಾಡಿದ ಬಗ್ಗೆ 50 ರೂ. ಸ್ಟಾಂಪ ಪೇಪರ ಮೇಲೆ ಬರೆದುಕೊಟ್ಟಿರುತ್ತಾರೆ. ಆಗಿನಿಂದ ಇಂದಿನ ವರೆಗೆ ಸದರಿ 6 ಎಕರೆ ಹೊಲವನ್ನು ನಾವೇ ಉಳಿಮೆ ಮಾಡಿಕೊಂಡು ಬಂದಿರುತ್ತೇನೆ. ಖರೀಧಿ ಮಾಡಿಕೊಂಡ 6 ತಿಂಗಳ ಮೇಲೆ ನನ್ನ ಅಕ್ಕಳಾದ ಗುರುಶಾಂತವ್ವಳು ತೀರಿಕೊಂಡಿದ್ದು ಇರುತ್ತದೆ. ನನ್ನ ಅಕ್ಕಳಾದ ಗುರುಶಾಂತವ್ವಳು ತೀರಿಕೊಂಡ ಮೇಲೆ ಖರೀಧಿ ಮಾಡಿದ ಹೊಲವನ್ನು ನಮ್ಮ ಹೆಸರಿಗೆ ಮಾಡಿಕೊಂಡಿರುವುದಿಲ್ಲ. ಮುಂದೆ 10 ವರ್ಷ ತನಕ ಸದರಿ ಹೊಲವನ್ನು ನಮ್ಮ ಕಬ್ಜೆಯಲ್ಲಿದ್ದು, ಅದನ್ನು ಉಳಿಮೆ ಮಾಡಿಕೊಂಡು ಬಂದಿರುತ್ತೇವೆ.  ಈಗ ಎರಡು ವರ್ಷಗಳ ಹಿಂದೆ ನಮ್ಮ ಅಕ್ಕಳ ಗಂಡನಾದ ದುಂಡಪ್ಪಾ ಕುಡಗುಂಟಿ ಇತನು ನಮಗೆ ಗೊತ್ತಿಲ್ಲದೆ ನಾವು ಖರೀಧಿ ಮಾಡಿದ ಹೊಲ 6 ಎಕರೆ ಹೊಲವನ್ನು ನಮ್ಮೂರಿನ ಶಿವಪ್ಪಾ ತಂದೆ ಸಿದ್ರಾಮಪ್ಪ ಪ್ಯಾಟಿ ಇತನಿಗೆ ಮಾರಾಟ ಮಾಡಿರುತ್ತಾನೆ. ಮಾರಾಟ ಮಾಡುವುದಕಿಂತ ಮುಂಚೆ ನಮಗೆ ಗೊತ್ತಾಗಿ ನಾವು ಅಣ್ಣತಮ್ಮಂದಿರು ಕೂಡಿ ಶಿವಪ್ಪ ಪ್ಯಾಟಿ ಇತನಿಗೆ ನಾವು ನಮ್ಮ ಅಕ್ಕಳ ಇರುವಾಗಲೇ ಹೊಲ ಖರೀಧಿ ಮಾಡಿರುತ್ತೇನೆ ನೀನು ತಗೆದುಕೊಳ್ಳಬೇಡಾ ಅಂತಾ ತಿಳಿಸಿರುತ್ತೇನೆ. ಮುಂದೆ ಸದರಿ ಶಿವಪ್ಪ ಪ್ಯಾಟಿ ಇತನು ನಾವು ಖರೀಧಿ ಮಾಡಿದ ಹೊಲವನ್ನು ಖರೀದಿ ಮಾಡಿಕೊಂಡು 2015 ನೇ ವರ್ಷದಲ್ಲಿ ಅವನು ದಬ್ಬಾಳಿಕೆ ಮಾಡಿ ನಮ್ಮ ಸಂಗಡ ಜಗಳ ತಗೆದು ಹೊಲ ತಾನು ಖರೀದಿ ಮಾಡಿರುತ್ತೇನೆ ಅಂತಾ ನಮಗೆ ಮತ್ತು ನನ್ನ ತಮ್ಮನ ಹೆಂಡತಿಗೆ ಹೊಡೆಬಡೆ ಮಾಡಿದ್ದು ನಾವು ಸದರಿ ಹೊಲದಲ್ಲಿ ಹರತಿ ಹೊಡೆದಿದ್ದರೂ, ಅವನು ನಮಗೆ ಅಂಜಿಸಿ ಹೊಲ ಬಿತ್ತಿ ಅವನೇ ಬೆಳೆ ತಗೆದುಕೊಂಡಿರುತ್ತಾನೆ. ಇದರಿಂದ ನಮ್ಮ ಹೊಲದ ಹತ್ತಿರ ಬೊರಟಿ ಗ್ರಾಮದ ಚಂದಪ್ಪಾ ತಂದೆ ಶಂಕರ ಮಡ್ಡಿ ಇತನದ ಹೊಲ ಇದ್ದು, ಅವನ ಹೊಲದ ಬಾಂದರಿ ನಮ್ಮ ಹೊಲದ ಬಾಂದರಿಗಳು ಕೂಡಿದ್ದು, ಸದರಿ ಚಂದಪ್ಪಾನು ನಮ್ಮೂರ ಶಿವಪ್ಪ ಪ್ಯಾಟಿ ಇತನ ಮಾತು ಕೇಳಿ ಈ ವರ್ಷ ನಮ್ಮ ಹೊಲದಲ್ಲಿನ ಗುಂಟದಕಲ್ಲುಗಳನ್ನು ಕಿತ್ತಿದ್ದು, ಇದನ್ನು ನೋಡಿ ನಾನು ದಿನಾಂಕ:28/06/2017 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ಹೊಲದಲ್ಲಿ ಚಂದಪ್ಪನಿಗೆ ಕೇಳಿದಾಗ ಚಂದಪ್ಪನು, ಮತ್ತು ಅವನ  ಅಣ್ಣತಮ್ಮಂದಿರಾದ ಸಿದ್ದಪ್ಪಾ ತಂದೆ ದ್ಯಾವಪ್ಪಾ ಮಡ್ಡಿ, ಕಾಶಿನಾಥ ತಂದೆ ದ್ಯಾವಪ್ಪಾ ಮಡ್ಡಿ, ನಾಗಪ್ಪಾ ತಂದೆ ಶಂಕರ ಮಡ್ಡಿ, ಆದಪ್ಪ ತಂದೆ ಶಂಕರ ಮಡ್ಡಿ ಹಾಗೂ ಬೊರಟಿ ಗ್ರಾಮದ ಮಹ್ಮದ ಜೇವೂರ, ಇವರೆಲ್ಲರೂ ಕೂಡಿ ನನಗೆ ಮತ್ತು ನನ್ನ ತಮ್ಮ ದೂಳಪ್ಪನಿಗೆ ಅವಾಚ್ಯ ಶಬ್ದಗಳಿಂದ ಬೈದು ಬಡಿಗೆಯಿಂದ ಬೆನ್ನ ಮೇಲೆ ಹೊಡೆದಿದ್ದು, ಬಿಡಿಸಲು ಬಂದು ನನ್ನ ತಮ್ಮ ದೂಳಪ್ಪನಿಗೂ ಕೂಡಾ ಹೊಡೆಬಡೆ ಮಾಡಿ ಅಂಜಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರಣ ಮಾನ್ಯರವರು ಸದರಿಯವರ ಮೇಲೆ ಕ್ರಮ ಕೈಕೊಳ್ಳಬೇಕೆಂದು  ಅಂತಾ ಕೊಟ್ಟ ವಗೈರೆ ಫೀರ್ಯಾಧಿ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 163/2017 ಕಲಂ 143, 147, 148, 504, 323, 324, 109, 506, ಸಂ 149 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.