Police Bhavan Kalaburagi

Police Bhavan Kalaburagi

Thursday, February 28, 2019

BIDAR DISTRICT DAILY CRIME UPDATE 28-02-2019



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 28-02-2019

ಬೀದರ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ನಂ. 02/2019, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 26-02-2019 ರಂದು ಫಿರ್ಯಾದಿ ಕಮಳಮ್ಮ ಗಂಡ ಚಂದ್ರಕಾಂತ ಎಲ್ಲಾನೋರ ಸಾ: ಹಳ್ಳದಕೇರಿ, ಬೀದರ ರವರ ತಂಗಿಯಾದ ಚಂದ್ರಕಲಾ ಗಂಡ ಘಾಳೆಪ್ಪಾ  ಸಾ: ಇಮಾಮಬಾದ ಇವಳು ಕ್ಷುಲ್ಲಕ ವಿಷಯಕ್ಕೆ ಮನನೊಂದು ವಿಷ ಸೇವನೆ ಮಾಡಿ ಮ್ರತಪಟ್ಟಿರುತ್ತಾಳೆ, ಈ ಬಗ್ಗೆ ನಮ್ಮದು ಯಾರ ಮೇಲೆ ಯಾವುದೇ ದೂರು ಸಂಶಯ ಇರುವುದಿಲ್ಲಾ ಅಂತ ಫಿರ್ಯಾದಿಯವರು ನೀಡಿದ ಹೇಳಿಕೆಯ ಸಾರಾಂಶದ ಮೇರೆಗೆ ದಿನಾಂಕ 27-02-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 20/2019, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 27-02-2019 ರಂದು ಫಿರ್ಯಾದಿ ಶೆಶಿಕುಮಾರ ತಂದೆ ಮಾಣಿಕ ಶೇರಿಕಾರ ವಯ: 25 ವರ್ಷ, ಜಾತಿ: ಎಸ್.ಸಿ ಹೋಲಿಯಾ, ಸಾ: ಹೊನ್ನಡಿ, ತಾ: ಜಿ: ಬೀದರ ರವರ ತಂದೆಯಾದ ಮಾಣಿಕ ತಂದೆ ಸಿದ್ರಾಮ ಶೇರಿಕಾರ, ವಯ: 48 ವರ್ಷ ಇವರು ಬೀದರ ಕೋರ್ಟನಲ್ಲಿ ಕೆಲಸ ಮುಗಿಸಿಕೊಂಡು ತಮ್ಮ ಮೋಟಾರ ಸೈಕಲ ನಂ. ಕೆಎ-39/ಇ-6895 ನೇದರ ಮೇಲೆ ಕೋರ್ಟನ ಮೇನ ಗೇಟ ಮಂದೆ ರೋಡಿನ ಮೇಲೆ ಬಂದಾಗ ಮಹಾವೀರ ವೃತ್ತದ ಕಡೆಯಿಂದ ಒಂದು ಟಾಟಾ ಮ್ಯಾಜಿಕ ಗೂಡ್ಸ್ ವಾಹನ ಸಂ. ಕೆಎ-39/6482 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತೀವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ತಂದೆಗೆ ಡಿಕ್ಕಿ ಮಾಡಿ ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ತಂದೆಗೆ ತಲೆಯಲ್ಲಿ ಭಾರಿ ರಕ್ತಗಾಯ ಮತ್ತು ಬಲಗೈ ಬೆರಳುಗಳಿಗೆ ತರಚಿದ ಗಾಯವಾಗಿದ್ದರಿಂದ ಅವರಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 31/2019, ಕಲಂ. 279, 337, 338 ಐಪಿಸಿ :-
ದಿನಾಂಕ 26-02-2019 ರಂದು ಭಾಲ್ಕಿ ನಗರದಲ್ಲಿ ಸನತಕುಮಾರ ತಂದೆ ಸಿದ್ದಪ್ಪಾ ಸನ್ಮಣಿ ಇವರ ಸಂಬಂಧಿಕರ ಮದುವೆ ಕಾರ್ಯಕ್ರಮ ಇರುವುದರಿಂದ ಫಿರ್ಯಾದಿ ಬಜರಂಗ ತಂದೆ ಅಶೋಕ ಸಾ: ಬೆನಕನಳ್ಳಿ ರವರು ತನ್ನ ಮೊಟಾರ ಸೈಕಲ ನಂ. ಕೆಎ-38/ಎಲ್-3747 ನೇದರ ಮೇಲೆ ಮತ್ತು ಸನತಕುಮಾರ ಹಾಗು ಅವರ ತಂದೆ ಸಿದ್ದಪ್ಪಾ ಇಬ್ಬರು ಅವರ ಮೊಟಾರ ಸೈಕಲ ನಂ. ಕೆಎ-38/ವಿ-3882 ನೇದರ ಮೇಲೆ ಭಾಲ್ಕಿಗೆ ಬಂದು ಭಾಲ್ಕಿಯಲ್ಲಿ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಬೀದರಕ್ಕೆ ಹೊಗಲು ಎಲ್ಲರು ಅವರವರ ಮೊಟಾರ ಸೈಕಲಗಳ ಮೇಲೆ ಭಾಲ್ಕಿ-ಬೀದರ ರಸ್ತೆ ಹಿಡಿದು ಬೀದರಕ್ಕೆ ಹೊಗುವಾಗ ಹಲಬರ್ಗಾ ಗ್ರಾಮದ ಕಾಂಕ್ರೆಟ ಕ್ರೆಷರ್ ಮಷಿನ ಹತ್ತಿರ ಬಂದಾಗ ಸನತಕುಮಾರ ಇತನು ತನ್ನ ಮೊಟಾರ ಸೈಕಲ ಅತಿವೇಗ ಹಾಗು ನಿಸ್ಕಾಳಜಿಯಿಂದ ಚಲಾಯಿಸಿಕೊಂಡು ಬಂದಿದ್ದರಿಂದ ಮೊಟಾರ ಸೈಕಲ ಸ್ಕಿಡಾಗಿ ಒಮ್ಮೆಲೆ ಇಬ್ಬರು ರಸ್ತೆ ಮೇಲೆ ಬಿದ್ದಿರುತ್ತಾರೆ, ಈ ಅಪಘಾತದಿಂದ ಸಿದ್ದಪ್ಪಾ ತಂದೆ ಗುಂಡಪ್ಪಾ ವಯ: 72 ವರ್ಷ ಇವರಿಗೆ ತಲೆಯಲ್ಲಿ, ಮೂಗಿನ ಮೇಲೆ, ಎಡಕೈಗಳ ಮೊಳಕೈ ಮೇಲೆ, ಎರಡು ಕಾಲು ಮೊಳಕಾಲ ಮೇಲೆ ರಕ್ತಗಾಯಗಳು, ಎಡಗಣ್ಣಿನ ಹತ್ತಿರ ಭಾರಿ ರಕ್ತಗಾಯವಾಗಿರುತ್ತದೆ ಮತ್ತು ಸನತಕುಮಾರ ತಂದೆ ಸಿದ್ದಪ್ಪಾ ವಯ: 33 ವರ್ಷ ಇವರಿಗೆ ಬಲಗೈ ಮೊಳಕೈ ಮೇಲೆ ರಕ್ತಗಾಯವಾಗಿರುತ್ತದೆ, ನಂತರ ಕೂಡಲೆ ಫಿರ್ಯಾದಿಯು 108 ಅಂಬುಲೇನ್ಸಗೆ ಕರೆಯಿಸಿ ಗಾಯಾಳು ಇಬ್ಬರಿಗೆ ಚಿಕಿತ್ಸೆ ಕುರಿತು ಬೀದರನ ಆರೋಗ್ಯ ಆಸ್ಪತ್ರೆಗೆ ತಂದಾಗ ಆರೊಗ್ಯ ಆಸ್ಪತ್ರೆಯ ವೈದ್ಯರು ಸಿದ್ದಪ್ಪಾ ಸನ್ಮಣಿ ಇವರಿಗೆ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆ ಕುರಿತು ಹೈದ್ರಾಬಾದಕ್ಕೆ ಹೊಗಲು ತಿಳಿಸಿದ್ದರಿಂದ ಸನತಕುಮಾರ ಮತ್ತು ಆತನ ಭಾವ ರಾಜಕುಮಾರ ಇಬ್ಬರು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಹೈದ್ರಾಬಾದದ ಸನ್ ಶೈನ್ ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 27-02-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.