ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 31-12-2019
ಮೇಹಕರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 10/2019, ಕಲಂ. 174
ಸಿ.ಆರ್.ಪಿ.ಸಿ :-
ದಿನಾಂಕ 30-12-2019 ರಂದು ಫಿರ್ಯಾದಿ ಊರ್ಮಿಳಾ ಗಂಡ ಅತ್ರಿನಂದನ ಭಂಡಾರೆ ವಯ: 35 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಅಳವಾಯಿ, ತಾ: ಭಾಲ್ಕಿ ರವರ ಗಂಡನಾದ ಅತ್ರಿನಂದನ ತಂದೆ ಹರಿಶ್ಚಂದ್ರ ಭಂಡಾರೆ ರವರು ಕೃಷಿ ಸಾಲವನ್ನು
ಹೇಗೆ ತಿರಿಸುವುದು ಅಂತ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಢು ಹೊಲದಲ್ಲಿನ ಗಿಡಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಖಟಕಚಿಂಚೋಳಿ ಪೊಲೀಸ್ ಠಾಣೆ ಅಪರಾಧ ಸಂ.
137/2019, ಕಲಂ. 380, 454, 457 ಐಪಿಸಿ :-
ದಿನಾಂಕ 29-12-2019 ರಂದು 1200 ಗಂಟೆಯಿಂದ ದಿನಾಂಕ 30-12-2019 ರಂದು 0930 ಗಂಟೆಯ ಅವಧಿಯಲ್ಲಿ ಸರಕಾರಿ ಫ್ರೌಡಶಾಲೆ ಮದಕಟ್ಟಿ ಗ್ರಾಮದ ಅಡುಗೆ ಕೊಣೆಯ
ಬಿಗವನ್ನು ಯಾರೋ ಅಪರಿಚಿತ ಕಳ್ಳರು ಮುರಿದು ಕೊಣೆಯಲ್ಲಿರುವ 9 ಪಾಕೇಟ್ ಅಕ್ಕಿ ಅ.ಕಿ 4500/- ರೂ., 50 ಕೆ.ಜಿಯ ತೊಗರಿ ಬೆಳೆಯ ಅ.ಕಿ 3000/- ರೂ. ಮತ್ತು ಭಾರತ ಗ್ಯಾಸ್ ಕಂಪನಿಯ ಒಂದು ಸಿಲಿಂಡರ್ ಅ.ಕಿ 2000/- ರೂ. ಹೀಗೆ ಒಟ್ಟು ಅಂದಾಜು 9500/- ರೂ. ಬೆಲೆ ಭಾಳುವ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಫಿರ್ಯಾದಿ ದೀಪಕ ತಂದೆ ಮಲ್ಲಪ್ಪಾ ಹೊನ್ನಳೆ ಸಾ: ಮದಕಟ್ಟಿ ರವರು ನೀಡಿದ ದೂರಿನ ಮೇರೆಗೆ
ದಿನಾಂಕ 30-12-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 181/2019, ಕಲಂ. 392 ಐಪಿಸಿ :-
ದಿನಾಂಕ 30-12-2019 ರಂದು 0600 ಗಂಟೆಯ ಸುಮಾರಿಗೆ ಫಿರ್ಯಾದಿ ಅಭಿನವ ತಂದೆ ಸೊಮನಿಂಗ ಝಂಡೆ ವಯ: 17 ವರ್ಷ, ಜಾತಿ: ಪರಿಶಿಷ್ಟ ಜಾತಿ, ಸಾ: ಗುರುನಾನಕ ಕಾಲೋನಿ ಬೀದರ ರವರು ತನ್ನ ಅಕ್ಕಳಾದ ಅನನ್ಯ ವಯ:19 ವರ್ಷ ಇಬ್ಬರು ಕೂಡಿಕೊಂಡು ಚಿಕ್ಕಪೇಟ ಹತ್ತಿರ
ಎನ.ಜಿ.ಓ. ಕಾಲೋನಿಯಲ್ಲಿರುವ
ತಮ್ಮ ಮಾಮರವರಾದ ಡಾ. ಗೌತಮ ಅರಳಿ ಇವರ ಮನೆಗೆ ಹೋಗುವಾಗ ದಾರಿಯಲ್ಲಿ ಜನವಾಡಾ ರೋಡ ಗುರುನಾನಕ ಕ್ರಾಸ ತತ್ತಿರ ಅಕ್ಕನ ಮೊಬೈಲಿಗೆ ಕರೆ ಬಂದಿದ್ದು ಅಲ್ಲಿ ನಿಂತು ಮೊಬೈಲಿನಲ್ಲಿ ಮಾತನಾಡುವಾಗ ಹಿಂದಿನಿಂದ ಗುರುನಾನಕ ಮಂದಿರದ ಕಡೆಯಿಂದ ಹಳದಿ ಬಣ್ಣದ ಹೊಂಡಾ ಡಿಯೊ ಬೈಕ ಮೇಲೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದು ಪಿüರ್ಯಾದಿಯವರ ಕೈಯಲಿದ್ದ ರೆಡ್ಮಿ 7 ಮೊಬೈಲನ್ನು ಕಸಿದುಕೊಂಡು
ಹೋಗಿದ್ದು ಇರುತ್ತದೆ, ಸದರಿ ಮೊಬೈಲಿನಲ್ಲಿ ಸಿಮ್ಮ ಸಂ. 8088385310 ಇತ್ತು ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 31-12-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 155/2019, ಕಲಂ. 279, 338 ಐಪಿಸಿ :-
ದಿನಾಂಕ 30-12-2019 ರಂದು ಫಿರ್ಯಾದಿ ಶ್ರೀನಾಥ ತಂದೆ ಪ್ರೇಮಸಿಂಗ ರಾಠೋಡ, ವಯ:
24
ವರ್ಷ, ಜಾತಿ: ಲಂಬಾಣಿ, ಸಾ: ಚಿಮ್ಮನಚೌಡ ಚೌಕಿ ತಾಂಡಾ ರವರು ತನ್ನ ತಾಯಿ ಹೇಮಾಬಾಯಿ, ತಂದೆಯಾದ ಪ್ರೇಮಸಿಂಗ ತಂದೆ ಹಾಜಿರಾಮ ವಯ: 46 ವರ್ಷ ಮೂವರು ತಮ್ಮೂರನಿಂದ ಚಿಟಗುಪ್ಪಾಕ್ಕೆ ಬಟ್ಟೆ ಖರೀದಿಗಾಗಿ ಬಂದು ಮರಳಿ ತಮ್ಮೂರಿಗೆ ಹೋಗುವಾಗ ನಿಂಗದಳ್ಳಿ ಶಿವರಾಮನಾಯಕ ತಾಂಡಾದ
ಸಂಬಂಧಿಕರಾದ ಮುಕಿನ, ವಿಜಯಕುಮಾರ ರವರು ಸಿಕ್ಕಿದ್ದು ಎಲ್ಲರೂ ತಮ್ಮ ತಮ್ಮ ಮೋಟರ ಸೈಕಲಗಳ ಮೇಲೆ ಹೋಗುವಾಗ ಫಿರ್ಯಾದಿಯ ತಂದೆ ಪ್ರೇಮಸಿಂಗ ರವರು ಮುಕಿನ ರವರನ್ನು ಕೂಡಿಸಿಕೊಂಡು ಟಿ.ವಿ.ಎಸ್ ಮೋಟರ ಸೈಕಲ ನಂ. ಕೆಎ-32/ಇ.ಕೆ-0344 ನೇದರ ಮೇಲೆ ಹೋಗುವಾಗ ಚಿಟಗುಪ್ಪಾ ಕೊಡಂಬಲ ರೋಡ ಕೊಡಂಬಲ ಫ್ಯಾಕ್ಟರಿ ದಾಟಿದ ನಂತರ ಮುಸ್ತರಿ ಕ್ರಾಸ ಸಮೀಪ ಫಿರ್ಯಾದಿಯ ತಂದೆ ಪ್ರೇಮಸಿಂಗ ರವರು ತನ್ನ ಮೋಟರ ಸೈಕಲನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿ ರಸ್ತೆ ಮೇಲೆ ಮೋಟರ ಸೈಕಲ ಬಿಳಿಸಿ ಅಪಘಾತ ಪಡಿಸಿದ್ದು ಅಪಘಾತದಿಂದ ಫಿರ್ಯಾದಿಯ ತಂದೆಗೆ ಎಡಗಲ್ಲಕ್ಕೆ ರಕ್ತಗಾಯ, ಮೂಗಿಗೆ ತರಚಿದ ರಕ್ತಗಾಯಗಳಾಗಿ
ತಲೆಗೆ ಗುಪ್ತಗಾಯವಾಗಿ ಎರಡೂ ಕಿವಿಯಿಂದ ರಕ್ತಸ್ರಾವವಾಗುತ್ತಿದ್ದು, ಎಡಮೋಳಕೈ ಕೆಳಗೆ ಮೂಳೆ
ಮುರಿದು ಭಾರಿ ಗುಪ್ತಗಾಯ, ಎಡಮೋಳಕಾಲಿಗೆ ತರಚಿದ ರಕ್ತಗಾಯಗಳಾಗಿರುತ್ತವೆ, ಮೋಟರ ಸೈಕಲ ಹಿಂದೆ ಕುಳಿತ ಮುಕೀನ ರವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ, ನಂತರ ಫಿರ್ಯಾದಿಯು
ತಮ್ಮ ತಂದೆಗೆ ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಚಿಟಗುಪ್ಪಾ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ
ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.