ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 27-01-2020
ಬೀದರ ನೂತನ ನಗರ ಪೊಲೀಸ್ ಠಾಣೆ
ಅಪರಾಧ ಸಂ. 10/2020, ಕಲಂ. 504, 505(2),124(ಎ),
153(ಎ)
ಜೊತೆ 34 ಐಪಿಸಿ :-
ದಿನಾಂಕ 26-01-2020 ರಂದು ಫಿರ್ಯಾದಿ ನಿಲೇಶ ರಕ್ಷ್ಯಾಳ ಸಾಮಾಜಿಕ ಕಾರ್ಯಕರ್ತರು ಬೀದರ ರವರು ಠಾಣೆಗೆ
ಹಾಜರಾಗಿ ತಮ್ಮದೊಂದು ಕನ್ನಡದಲ್ಲಿ ಬರೆದ ದೂರು ಅರ್ಜಿಯನ್ನು ಸಲ್ಲಿಸಿದ್ದು ಸಾರಾಂಶವೆನಂದರೆ ಶಾಹೀನ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಹಾಗು ಆಡಳಿತ ಮಂಡಳಿಯವರು ಅಪ್ರಾಪ್ತ ಶಾಲಾ
ಮಕ್ಕಳನ್ನು ಬಳಸಿಕೊಂಡು ದೇಶದ ಮೇಲೆ ದ್ವೇಷ ಭಾವನೆ ಬರುವಂತಹ ಹಾಗೂ ದೇಶದ ಪ್ರಧಾನ ಮಂತ್ರಿಯವರಾದ
ಶ್ರೀ ನರೇಂದ್ರ ಮೋದಿ ರವರಿಗೆ ಚಪ್ಪಲಿಯಿಂದ ಹೊಡೆಯುವ ಅವಾಚ್ಯ ಮಾತುಗಳನ್ನು ಮಕ್ಕಳಿಂದ ಆಡಿಸಿ
ದೇಶದ ಸಂಸತ್ತು ಜಾರಿಗೆ ತಂದಿರುವ ಸಿಎಎ, ಎನ್.ಪಿ.ಆರ್ ಮತ್ತು ಎನ್.ಆರ್.ಸಿ ಕಾನೂನುಗಳನ್ನು ಜಾರಿಗೆ ತಂದರೆ ಮುಸಲ್ಮಾನರು ಈ
ದೇಶ ಬಿಟ್ಟು ಹೋಗಬೇಕಾಗುತ್ತದೆ ಎಂಬ ಸುಳ್ಳು ಸುದ್ದಿಯನ್ನು ಮಕ್ಕಳಿಂದ ನಾಟಕ ರೂಪದಲ್ಲಿ ತಮ್ಮ
ಶಿಕ್ಷಣ ಸಂಸ್ಥೆಯಾದ ಶಾಹೀನ ಸ್ಕೂಲದಲ್ಲಿ ಪ್ರದರ್ಶಸಿ ಅದನ್ನು ಸಾಮಾಜಿಕ ಜಾಲತಾಣವಾದ
ಫೇಸಬುಕನಲ್ಲಿ ಹರಿಬಿಟ್ಟು ಜನಾಂಗಿಯ ದ್ವೇಷ ಹಾಗೂ ಎರಡು ಕೋಮುಗಳ ಮದ್ಯ ಭಯಭೀತಿ ಉಂಟುಮಾಡಿ
ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೃತ್ಯವನ್ನು ಎಸಗಿರುತ್ತಾರೆ, ಇದರಿಂದಾಗಿ ದೇಶದ ಸಂಸತ್ತು
ಜಾರಿಗೆ ತಂದ ಕಾನೂನಿನ ಬಗ್ಗೆ ಶಾಲಾ ಮಕ್ಕಳಲ್ಲಿ ಹಾಗೂ ಸಾರ್ವಜನರಿಗೆ ಶಾಲಾ ಮಕ್ಕಳಿಂದ ಸುಳ್ಳು
ಸಂದೇಶ ಹಾಗು ಎರಡು ಕೋಮಿನ ಮದ್ಯ ಸಂಘರ್ಷಕ್ಕೆ ಕಾರಣವಾಗುವಂತಹ ನಾಟಕಗಳನ್ನು ಪ್ರದರ್ಶಿಸಿ ಜನರಿಗೆ
ತಪ್ಪು ಸಂದೇಶ ಹಾಗು ಕೋಮುಭಾವನೆಗೆ ಧಕ್ಕೆ ತರುವಂತ ಮತ್ತು ದೇಶವು ಜಾರಿಗೆ ತರುವಂತಹ
ಕಾನೂನುಗಳನ್ನು ವಿರೋಧಿಸುವ ಮನೋಪ್ರವೃತಿಯನ್ನು ಹಾಗು ದೇಶದ್ರೋಹ ಎಸಗುವ ಕೃತ್ಯವನ್ನು ಶಾಹೀನ
ಸಂಸ್ಥೆಯ ಮುಖ್ಯಸ್ಥರು ಮತ್ತು ಆಡಳಿತ ಮಂಡಳಿಯ ಸದಸ್ಯರು ತಮ್ಮ ಶಾಲೆಯಲ್ಲಿ ಮಾಡಿರುತ್ತಾರೆ ಹಾಗೂ
ಅಪ್ರಾಪ್ತ ಮಕ್ಕಳು ದೇಶದ ಪ್ರಧಾನಿಯನ್ನು ಅವಹೇಳನ ರೀತಿಯಲ್ಲಿ ಮಾತನಾಡಿ ಮಾಡಿದ ನಾಟಕವನ್ನು
ಮಹ್ಮದ ಯುಸುಫ ರಹೀಮ ಎನ್ನುವವರು ತನ್ನ ಫೇಸ ಬುಕ್ ಖಾತೆಯಲ್ಲಿ ಹರಿಬಿಟ್ಟು ಸಾರ್ವಜನಿಕರಲ್ಲಿ
ಮತ್ತು ಎರಡು ಕೋಮಿನ ಮದ್ಯ ಅಶಾಂತಿ ಉಂಟುಮಾಡುವ ಕೃತ್ಯ ಎಸಗಿದ್ದು ಈ ಘಟನೆಯ ಬಗ್ಗೆ ಫೇಸ ಬುಕ್
ಖಾತೆದಾರನಾದ ಮಹ್ಮದ ಯುಸುಫ ರಹೀಮ ರವರು ದಿನಾಂಕ 21-01-2020 ರಂದು ತಮ್ಮ ಐಡಿಯಲ್ಲಿ ಹರಿಬಿಟ್ಟಿರುತ್ತಾರೆ,
ಕಾರಣ ಶಾಹೀನ ಸಂಸ್ಥೆಯ ಮುಖ್ಯಸ್ಥರು, ಆಡಳಿತ ಮಂಡಳಿ ಮತ್ತು ಫೇಸ್ ಬುಕ್ ಖಾತೆದಾರನಾದ ಮಹ್ಮದ ಯುಸುಫ ರಹೀಮ ರವರುಗಳ
ವಿರುಧ್ಧ ಕಾನುನು ಕ್ರಮಕ್ಕಾಗಿ ಕೋರಿದೆ ಎಂದು ಇರುವ ದೂರನ್ನು ಸ್ವೀಕರಿಸಿಕೊಂಡು, ಸದರಿ ದೂರಿನ
ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮನ್ನಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 06/2020, ಕಲಂ. 279,
338 ಐಪಿಸಿ :-
ದಿನಾಂಕ 26-01-2020 ರಂದು
ಮನ್ನಳ್ಳಿ ಗ್ರಾಮದಲ್ಲಿ ಖಾಸಗಿ ಕೆಲಸದ ನಿಮಿತ್ಯ ಫಿರ್ಯಾದಿ ಸಂಜು ತಂದೆ ಬಾಬು ಘೋಡಂಪಳ್ಳಿ ವಯ: 29 ವರ್ಷ, ಜಾತಿ: ಕುರುಬ, ಸಾ: ನಾಗೋರ ರವರ ತಮ್ಮನಾದ ಪಂಡಿತ ತಂದೆ ಬಾಬು ಘೋಡಂಪಳ್ಳಿ ವಯ: 27 ವರ್ಷ
ಇತನು ಮನ್ನಳ್ಳಿ ಗ್ರಾಮಕ್ಕೆ ಬಂದು ಮರಳಿ ನಾಗೋರ
ಗ್ರಾಮಕ್ಕೆ ತನ್ನ ಹೀರೊ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ್
ನಂ. ಕೆಎ-38/ಕ್ಯೂ-3646 ನೇದರ ಮೇಲೆ ನಾಗೋರ
ಗ್ರಾಮಕ್ಕೆ ಹೋಗುವಾಗ ಮನ್ನಳ್ಳಿ-ಬೀದರ ರಸ್ತೆ ಕೆರೆ
ಹತ್ತಿರ ರಸ್ತೆಯ ಮೇಲೆ ತನ್ನ ಮೋಟಾರ
ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗುವಾಗ ಕೆರೆಯ
ಹತ್ತಿರ ರೋಡಿನ ಮೇಲೆ ತನ್ನ ಮೋಟಾರ ಸೈಕಲ್
ಬ್ರೆಕ್ ಹಾಕಿದಾಗ ಮೋಟರ್ ಸೈಕಲ್ ಸ್ಕೀಡ್ ಆಗಿ ಕೆಳಗೆ ಬಿದ್ದ ಪರಿಣಾಮ ತಲೆಯ ಹಿಂಭಾಗದಲ್ಲಿ ಭಾರಿ
ಗುಪ್ತಗಾಯವಾಗಿದ್ದು, ಇದ್ದರಿಂದ ಪಂಡಿತ
ಇತನು ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲ ಮತ್ತು ಆತನಿಗೆ ಎಡಗೈ ಮುಂಗೈ ಮೇಲೆ ಗುಪ್ತಗಾಯ, ಎರಡು
ಕಾಲುಗಳಿಗೆ ಗುಪ್ತಗಾಯವಾಗಿರುತ್ತದೆ, ಈ
ವೇಳೆಯಲ್ಲಿ ಹಿಂದೆ ಬರುತ್ತಿದ್ದ ಫಿರ್ಯಾದಿ ಮತ್ತು ನಾಗೇಶ ತಂದೆ ಮಲ್ಲಪ್ಪಾ ಸಾ: ನಾಗೋರ
ರವರು ನೋಡಿ 108 ಅಂಬುಲೆನ್ಸ್ಗೆ
ಕರೆ ಮಾಡಿ
ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 28/2020, ಕಲಂ. 32, 34 ಕೆ.ಇ
ಕಾಯ್ದೆ :-
ದಿನಾಂಕ 26-01-2020 ರಂದು
ಭಾಲ್ಕಿಯ ಸಾಯಿ
ಬಂಜಾರಾ ಧಾಬಾದಲ್ಲಿ ಸಂಬಂಧಪಟ್ಟ ಇಲಾಖೆಯಿಂದ ಯಾವುದೆ ಅನುಮತಿ ಇಲ್ಲದೆ ಅನಧಿಕೃತವಾಗಿ ಸರಾಯಿ
ಮಾರಾಟ ಮಾಡುತ್ತಿದ್ದ
ಬಗ್ಗೆ ಮಾಣಿಕರಾವ ಎ.ಎಸ್.ಐ ಭಾಲ್ಕಿ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ
ಎ.ಎಸ್.ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಅಮರ ಖಂಡ್ರೆ ರವರ ಕಂಪೌಂಡದ ಸ್ವಲ್ಪ ಮುಂದೆ ಹೋಗಿ ಮರೆಯಲ್ಲಿ ನಿಂತು ನೋಡಲು
ಸಾಯಿ ಬಂಜಾರಾ ಧಾಬಾದಲ್ಲಿ ಆರೋಪಿ ಸಂಜಯ ತಂದೆ
ಚಂದರ ಪವಾರ ಸಾ: ಬಾಳೂರ ತಾಂಡಾ, ತಾ: ಭಾಲ್ಕಿ ಇತನು ತನ್ನ ವಶದಲ್ಲಿ ಒಂದು ಕಾಟನ ಇಟ್ಟುಕೊಂಡು ಸರಾಯಿ ಮಾರಾಟ ಮಾಡುತ್ತಿರುವದನ್ನು ನೋಡಿ
ಪಂಚರ ಸಮಕ್ಷಮ ಸದರಿ ಆರೋಪಿತನ ಮೇಲೆ ದಾಳಿ ಮಾಡಿ
ಹಿಡಿದು ಅವನ ವಶದಲ್ಲಿದ್ದ ಕಾಟನ ಪರಿಶೀಲಿಸಿ ಮೋಡಲು
ಅದರಲ್ಲಿ 6 ಬ್ಯಾಗ್ ಪೈಪರ್ ವಿಸ್ಕಿ 180 ಎಂ.ಎಲ್ ವುಳ್ಳ ಪೇಪರ್ ಪಾಕೇಟಗಳು ಮ,ತ್ತು 8 ಓಲ್ಡ್ ಟಾವರ್ನ ವಿಸ್ಕಿ 180 ಎಂ.ಎಲ್ ವುಳ್ಳ ಪೇಪರ್ ಪಾಕೇಟಗಳು ಇದ್ದವು ಅವುಗಳು ಎಲ್ಲಿಂದ ತಂದು ಮಾರಾಟ
ಮಾಡುತ್ತಿದ್ದಿ ಅಂತಾ ವಿಚಾರಿಸಿದಾಗ ಇವುಗಳು ಮಲ್ಲಿಕಾರ್ಜುನ ವಾಲೆ
ಸಾಯಿ ಬಾರ
& ರೇಸ್ಟಾರೆಂಟ ಮಾಲಿಕ
ರವರು ಮಾರಾಟ
ಮಾಡು ಅಂತಾ
ಅವರ ಬಾರಿನಿಂದ ಕೊಟ್ಟಿರುತ್ತಾರೆ ಅಂತಾ ತಿಳಿಸಿದ್ದು ಅಲ್ಲದೆ ತನ್ನ ಹತ್ತಿರ ಸಂಬಂಧಪಟ್ಟ ಇಲಾಖೆಯಿಂದ ಪಡೆದ
ಯಾವದೆ ಅನುಮತಿ ಪತ್ರ
ಇರುವದಿಲ್ಲ ಅಂತಾ ತಿಳಿಸಿದಾಗ ಪಂಚರ
ಸಮಕ್ಷಮ ಅವನ ವಶದಲ್ಲಿ ದೋರೆತ ಎಲ್ಲಾ ಸರಾಯಿ ಪಾಕೇಟಗಳು ಅ.ಕಿ 1134/- ರೂ. ದಷ್ಟು ಜಪ್ತಿ ಮಾಡಿಕೊಂಡು ಆರೋಪಿಗೆ ವಶಕ್ಕೆ ತೆಗೆದುಕೊಂಡು, ಸದರಿ ಆರೋಪಿ ಹಾಗೂ ಬಾರ ಮಾಲಿಕನ ವಿರುದ್ಧ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.