Police Bhavan Kalaburagi

Police Bhavan Kalaburagi

Wednesday, April 7, 2021

BIDAR DISTRICT DAILY CRIME UDPATE 07-04-2021

 ದಿನಂಪ್ರತಿ ಅಪರಾಧಳ ಮಾಹಿತಿ ದಿನಾಂಕ 07-04-2021

 

ಮನ್ನಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 11/2021, ಕಲಂ. 279, 338, 304() ಐಪಿಸಿ & ಕಲಂ. 05 ಜೋತೆ 180 ಎಂವಿ ಕಾಯ್ದೆ :-

ದಿನಾಂಕ 06-04-2021 ರಂದು ಫಿಯಾದಿ ಮಲ್ಲಪ್ಪಾ ತಂದೆ ರಾಚಪ್ಪಾ ಸಾ: ರಾಜಗೀರಾ ರವರ ಮಗನಾದ ರಾಕೇಶ ಇತನು ತಮ್ಮ ಸಂಬಂಧಿಕರಾದ ವೀರಪ್ಪಾ ಇವರ ಮಗನಾದ ಪವನ ಇವನ ಜೊತೆಯಲ್ಲಿ ಸಪ್ಲೆಂಡರ ಪ್ಲಸ ಮೋಟಾರ ಸೈಕಲ ನಂ. ಕೆಎ-38/ಡಬ್ಲು-7142 ನೇದರ ಮೇಲೆ ಅವರ ಹೊಲಕ್ಕೆ ಹೋಗುವಾಗ ಆರೋಪಿ ಪವನ ತಂದೆ ವೀರಪ್ಪಾ ವಯ: 17 ವರ್ಷ, ಸಾ: ರಾಜಗೀರಾ ಇತನು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ಗ್ರಾಮದ ವಾಟರ ಟ್ಯಾಂಕ ಹತ್ತಿರವಿರುವ ವಿದ್ಯುತ ಕಂಬಕ್ಕೆ ಡಿಕ್ಕಿ ಹೋಡೆದಿರುತ್ತಾನೆ, ಸದರಿ ಡಿಕ್ಕಿಯಿಂದ ರಾಕೆಶನಿಗೆ ತಲೆಯ ಹಿಂದೆ ಭಾರಿ ಗುಪ್ತಗಾಯವಾಗಿ ಉದಿಕೊಂಡಿರುತ್ತದೆ, ಮತ್ತು ಕಿವಿಯಿಂದ & ಮೂಗಿನಿಂದ ರಕ್ತಸ್ರಾವವಾಗಿರುತ್ತದೆ ಹಾಗೂ ಪವನ ಇತನಿಗೆ ಬಲಗಾಲ ತೊಡೆಯ ಹತ್ತಿರ ರಕ್ತಗಾಯ, ಗಲ್ಲಕ್ಕೆ ತರಚಿರುತ್ತದೆ, ನಂತರ ಒಂದು ಖಾಸಗಿ ವಾಹನದಲ್ಲಿ ರಾಕೇಶ ಮತ್ತು ಪವನ ಇಬ್ಬರಿಗೂ ಹಾಕಿಕೊಂಡು ಬೀದರ ಸರಕಾರಿ ಆಸ್ಪತ್ರೆಗೆ ಬಂದಾಗ ರಾಕೇಶ ಇತನಿಗೆ ವೈದ್ಯರು ಪರೀಕ್ಷೆ ಮಾಡಿ ಮೃತಪಟ್ಟಿರುತ್ತಾನೆಂದು ತಿಳಿಸಿರುತ್ತಾರೆ, ಕಾರಣ ಅಪ್ರಾಪ್ತ ವಯಸ್ಕನಾದ ಪವನ ಇವನಿಗೆ ಆತನ ತಂದೆ ವೀರಪ್ಪಾ ಇವರು ವಾಹನ ಚಲಾಯಿಸಲು ನೀಡಿದ ಪರಿಣಾಮ ಸದರಿ ಘಟನೆ ಜರುಗಿರುತ್ತದೆ ಅಂತ ಕೊಟಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಕುಶನೂರ ಪೊಲೀಸ್ ಠಾಣೆ ಅಪರಾಧ ಸಂ. 23/2021, ಕಲಂ. 279, 337, 304() ಐಪಿಸಿ :-

ದಿನಾಂಕ 06-04-2021 ರಂದು ಫಿರ್ಯಾದಿ ಸುಶಿಲಬಾಯಿ ಗಂಡ ವೈಜಿನಾಥ ಲಾಕೆ ಸಾ: ಬೇಡಕುಂದಾ ಗ್ರಾಮ ರವರ ಸಂಬಂಧಿಕರಾದ ಎಕಂಬಾ ಗ್ರಾಮದ ಸೋದರಳಿಯನ ಮದುವೆ ಕಾರ್ಯಕ್ರಮಕ್ಕೆ ನೆಗೆಣಿ ಸಾಗರಬಾಯಿ ಹಾಗು ಮಗಳಾದ ವಂದನಾ ಮತ್ತು ಆಕೆಯ ಮಕ್ಕಳಾದ ಆದಿತ್ಯ, ಸ್ವಾತಿ ಮತ್ತು ಸಂಬಂಧಿ ಬಾಬು ತಂದೆ ಕಾಡು ರವರುಗಳು ಕೂಡಿ ಎಕಂಬಾಕ್ಕೆ ಹೊಗುವ ಸಲುವಾಗಿ ಮೈದುನನಾದ ಮುರಳಿಧರ ಇತನ ಮಗನಾದ ಅಭೀಶಕ ಇತನ ಆಟೋ ನಂ. ಕೆಎ-38/0887 ನೇದರಲ್ಲಿ ಕುಳಿತು ಕುಶನೂರಗೆ ಬಂದು ಕುಶನೂರದಲ್ಲಿ ಸಂಬಂಧಿ ರೋಷನ ತಂದೆ ಸಂಗ್ರಾಮ ಇವನಿಗೆ ಕೂಡಿಸಿಕೊಂಡು ಎಕಂಬಾ ಕಡೆಗೆ ಹೊಗುತ್ತಿರುವಾಗ ಆರೋಪಿ ಅಭೀಷೇಕ್ ತಂದೆ ಮುರಳಿಧರ್ ಲಾಕೆ ಸಾ: ಬೇಡಕುಂದಾ ಗ್ರಾಮ ಇತನು ತನ್ನ ಆಟೋವನ್ನು ಅತೀವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿ ಕೊರೆಕಲ್ಲ ಕ್ರಾಸ್ ದಾಟಿದ ನಂತರ ಕಲ್ಲಪ್ಪಾ ಕರಂಜೆ ರವರ ಜಮೀನಿನ ಹತ್ತಿರ ಹೊದಾಗ ವಾಹನ ನಿಯಂತ್ರಣ ತಪ್ಪಿ ಪಲ್ಟಿ ಮಾಡಿರುತ್ತಾನೆ, ಸದರಿ ವಾಹನ ಪಲ್ಟಿಯಿಂದ ಫಿರ್ಯಾದಿಯವರ ತಲೆಗೆ ರಕ್ತಗಾಯವಾಗಿ  ಸೊಂಟಕ್ಕೆ ಗುಪ್ತಗಾಯವಾಗಿರುತ್ತದೆ, ಸ್ವರಸ್ವತಿ ರವರ ಎಡಕಪಾಳಕ್ಕೆ, ತಲೆಯ ಎಡಭಾಗಕ್ಕೆ ರಕ್ತಗಾಯ, ಆದಿತ್ಯಗೆ ಚಿಕ್ಕಪುಟ್ಟ ಗಾಯ, ಆಟೋದಲ್ಲಿದ್ದ ಬಾಬು ಇವರಿಗೆ ತಲೆಗೆ ಭಾರಿ ರಕ್ತಗಾಯ, ಎಡಗಾಲಿನ ಮೊಳಕಾಲಿಗೆ ಭಾರಿ ಗುಪ್ತಗಾಯ, ಎಡಗೈ ಮುಂಗೈ ಹತ್ತಿರ ತರಚಿದ ರಕ್ತಗಾಯವಾಗಿರುತ್ತದೆ ಮತ್ತು ರೋಷನ್ ಇವನಿಗೆ ಎಡಗಾಲಿನ ಮೊಳಕಾಲಿಗೆ ಗುಪ್ತಗಾಯ, ತಲೆಗೆ ಗುಪ್ತಗಾಯ, ಸಾಗರಬಾಯಿಗೆ ಚಿಕ್ಕಪುಟ್ಟ ಗಾಯ ಹಾಗೂ ಅಭೀಷಕನಿಗೆ ಹಣೆಗೆ ರಕ್ತಗಾಯ, ಎಡಕಪಾಳಿಗೆ ತರಚಿದ ಗಾಯವಾಗಿರುತ್ತದೆ, ಅಷ್ಟರಲ್ಲಿ ಸಂಬಂಧಿ ಕಲ್ಲಪ್ಪಾ ತಂದೆ ಮಾಣಿಕ, ಪವನ ತಂದೆ ಪ್ರಭು ರವರು ಬಂದಿದ್ದು ಗಾಯಗೊಂಡ ಎಲ್ಲರಿಗೂ ಕುಶನೂರ ಸರಕಾರಿ ಆಸ್ಪತ್ರೆಗೆ ತಂದು ಅಲ್ಲಿಂದ ಸಂತಪೂರ ಸರಕಾರಿ ಆಸ್ಪತ್ರಗೆ ತಂದು ನಂತರ ಹೆಚ್ಚಿನ ಚಿಕತ್ಸೆಗಾಗಿ ಬೀದರ ಸರಕಾರಿ ಆಸ್ಪತ್ರೆಗೆ ತರುವಾಗ ಬಾಬು ರವರು ಚಿಕ್ಕಪೇಟ್ ಹತ್ತಿರ ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ನಗರ ಪೊಲೀಸ ಠಾಣೆ ಅಪರಾಧ ಸಂ. 28/2021, ಕಲಂ. 32, 34 ಕೆ.ಇ ಕಾಯ್ದೆ :-

ದಿನಾಂಕ 06-04-2021 ರಂದು ಉಸ್ಮಾನ ಗಂಜ್ ವೈದ್ಯಹಿ ವೈನ್ ಶಾಫ್ ಹತ್ತಿರ ಒಬ್ಬ ವ್ಯಕ್ತಿ ತನ್ನ ವಶದಲ್ಲಿ ಅನಧಿಕೃತವಾಗಿ ಮಧ್ಯದ ಬಾಟಲಿಗಳು ಇಟ್ಟುಕೊಂಡು ಜನರಿಗೆ ಮಾರಾಟ ಮಾಡುತ್ತಿದ್ದಾನೆ ಅಂತ ಪ್ರಭಾಕರ ಪಾಟೀಲ್ ಪಿ.ಎಸ್. (ಕಾಸು) ಬೀದರ ನಗರ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹೋಗಿ ಆರೋಪಿತನಾದ ಭಗವಂತ ತಂದೆ ಸಿದ್ರಾಮಪ್ಪಾ ಹಳ್ಳಿಖೇಡ ವಯ: 47 ವರ್ಷ, ಜಾತಿ: ಲಿಂಗಾಯತ, ಸಾ: ಯಾಕತಪೂರ ಗ್ರಾಮ ಇತನ ಮೇಲೆ ದಾಳಿ ಮಾಡಿ ಹಿಡಿದು ಆತನ ವಶದಿಂದ ಓರಜಿನಲ್ ಚಾಯಿಸ್ 90 ಎಂ.ಎಲ್ ವುಳ್ಳ 80 ಪೇಪರ ಪೌಚಗಳು ಅ.ಕಿ 2810/- ರೂ ನೇದವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 66/2021, ಕಲಂ. 366(ಎ) ಐಪಿಸಿ :-

ಫಿರ್ಯಾದಿ ಫೆರೋಜಾ ಬಿ ಗಂಡ ಮಹ್ಮದ ದಸ್ತಗಿರಿ ನಿರ್ನಾ, ವಯ: 37 ವರ್ಷ, ಜಾತಿ: ಮುಸ್ಲಿಂ, ಸಾ: ಕನಕಟ್ಟಾ, ತಾ: ಹುಮನಾಬಾದ ರವರ ಮಗಳಾದ ರೂಕ್ಸಾರ ಬೆಗಂ ಇವಳು 10 ನೇ ತರಗತಿ ಪಾಸಾಗಿ ಶಾಲೆ ಬಿಟ್ಟು ಮನೆ ಕೆಲಸ ಮಾಡಿಕೊಂಡು ಮನೆಯಲ್ಲೇ ಇರುತ್ತಾಳೆ, ಹೀಗಿರುವಲ್ಲಿ ದಿನಾಂಕ 31-03-2021 ರಂದು ರಾತ್ರಿ ಫಿರ್ಯಾದಿಯು ತನ್ನ ಮಕ್ಕಳು ಹಾಗೂ ಗಂಡ ಎಲ್ಲರು ಊಟ ಮಾಡಿ ಮನೆಯಲ್ಲಿ ಮಲಗಿಕೊಂಡಿದ್ದು, ರಾತ್ರಿ 0200 ಗಂಟೆಗೆ ಎಚ್ಚರವಾಗಿ ನೋಡಲು ಮಗಳು ರೂಕ್ಸರಾ ಬೇಗಂ ಇರಲಿಲ್ಲ, ನಂತರ ಫಿರ್ಯಾದಿಯು ಇಲ್ಲೆ ಎಲ್ಲಿಯಾದರೂ ಮೂತ್ರ ವಿಸರ್ಜನೆಗೆ ಹೋಗಿರಬೇಕೆಂದು ಮಲಗಿಕೊಂಡು ಮುಂಜಾನೆ 0600 ಗಂಟೆಗೆ ಎದ್ದು ನೋಡಲು ಮಗಳು ಮನೆಯಲ್ಲಿ ಇರಲಿಲ್ಲ, ಅವಳನ್ನು ಎಲ್ಲಾ ಕಡೆ ಹುಡುಕಾಡಿ ನೋಡಲು ಸಿಕ್ಕಿರುವುದಿಲ್ಲ, ರೂಕ್ಸಾರ ಇವಳಿಗೆ ಯಾರೋ ಅಪಹರಿಸಿಕೊಂಡು ಹೋಗಿರಬಹುದೆಂದು ಅಂತಾ ಸಂಶಯ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 06-04-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 34/2021, ಕಲಂ. 279, 338 ಐಪಿಸಿ :- 

ದಿನಾಂಕ 06-04-2021 ರಂದು ಫಿರ್ಯಾದಿ ಅನೀಲಕುಮಾರ ತಂದೆ ಸಿದ್ರಾಮಪ್ಪಾ ಕಟ್ಟೋಳ್ಳಿ ವಯ: 30 ವರ್ಷ, ಜಾತಿ: ಲಿಂಗಾಯತ, ಸಾ: ತಡೋಳಾ, ತಾ: ಬಸವಕಲ್ಯಾಣ ರವರ ತಂದೆ ಸಿದ್ರಾಮಪ್ಪಾ ತಂದೆ ಮಹಾರುದ್ರಪ್ಪ ಕಟ್ಟೋಳ್ಳಿ ಇವರು ಹೊಲಕ್ಕೆ ಹೋಗಿ ಬರುವುದಾಗಿ ತನ್ನ ಟಿ.ವ್ಹಿ.ಎಸ್ ಮೋಪೆಡ್ ನಂ. ಕೆಎ-39/ಹೆಚ್-6859 ನೇದರ ಮೇಲೆ ಹೋಗುವಾಗ ಭವಾನಿ ಮಂದಿರದ ಹತ್ತಿರ ಗೂಡ್ಸ್ ವಾಹನ ಸಂ. ಎಮ್.ಹೆಚ್-13/ಸಿ.ಯು-3538 ನೇದರ ಚಾಲಕನಾದ ಆರೋಪಿ ಮಶಾಕ ತಂದೆ ಖಾಸಿಂ ಇನಾಮದಾರ ಸಾ: ಮಿತ್ರ ನಗರ ಸೋಲಾಪೂರ  ಇತನು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯವರ ತಂದೆಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಅವರ ತಲೆಗೆ ಭಾರಿ ಗುಪ್ತಗಾಯವಾಗಿ ಬಲಗಡೆ ಕಿವಿಯಿಂದ ರಕ್ತ ಬಂದು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ, ನಂತರ ಅವರಿಗೆ ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಪಾಟೀಲ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.