ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ
: 28-12-2016
ಭಾಲ್ಕಿ
ನಗರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 13/16 ಕಲಂ 174 ಸಿ.ಆರ್.ಪಿ.ಸಿ:-
ದಿನಾಂಕ
27/12/2016 ರಂದು 13:30 ಗಂಟೆಗೆ ಫಿರ್ಯಾದಿ ಶ್ರೀಮತಿ ರೀತಾ ಗಂಡ ಸಂದೀಪ ಚೋಪಡಾ ವಯ 28 ವರ್ಷ ಜಾತಿ: ಜೈನ (ಮಾರವಾಡಿ) ಉ:ಮನೆಕೆಲಸ ಸಾ: ಭಾತಂಬ್ರಾ ಸಧ್ಯ ಬೀದರ ಗೇಟ ಸಮಾಧಾನ ಮಾರುತಿ ಮಂದೀರದ ಹತ್ತೀರ ಉದಗೀರ ರವರು ಠಾಣೆಗೆ ಹಾಜರಾಗಿ ದೂರು
ಸಲ್ಲಿಸಿದರ ಸಾರಾಂಶ ವೆನೆಂದರೆ ಫಿರ್ಯಾದಿಯ ಭಾತಂಬ್ರಾ ಗ್ರಾಮ ಇದ್ದು 7-8 ವರ್ಷಗಳಿಂದ ತನ್ನ ಗಂಡ ಹಾಗೂ ಮೈದುನ ಮಹಾವೀರ ರವರು ಉದಗೀರದಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡು ಇರುವದರಿಂದ ಉದಗೀರದಲ್ಲೆ ಮನೆ ಮಾಡಿಕೊಂಡು ವಾಸವಾಗಿದ್ದು ದಿನಾಂಕ
20/12/2016 ರಂದು ಮುಂಜಾನೆ 8:45 ಗಂಟೆಗೆ ಕೂಡ ತನ್ನ ಗಂಡ ಸಂದೀಪ ತಂದೆ ರಾಯಚಂದ ಚೋಪಡಾ ವಯ:34 ವರ್ಷ ರವರು ಎಂದಿನಂತೆ ಅಂಗಡಿಗೆ ಹೋಗಿ ಬರುತ್ತೆನೆ ಅಂತಾ ಹೇಳಿ ಹೋದವರು ರಾತ್ರಿ 10 ಗಂಟೆಯಾದರು ಮನೆಗೆ ಬರದ ಕಾರಣ ಫೊನ ಮಾಡಿದಾಗ ಬರುತಿದ್ದೆನೆ ಅಂತಾ ಹೇಳುತಿದ್ದರು ಆದರೆ ಮನೆಗೆ ಬರಲಿಲ್ಲ ಮರು ದಿವಸ ಫೋನ ಮಾಡಿದರೆ ಫೋನ ಹತ್ತಲಿಲ್ಲ ಆದ್ದರಿಂದ ಎಲ್ಲಾ ಕಡೆಗೆ ಸಂಬಂಧಿಕರಿಗೆ ವಿಚಾರಿಸಿದರು ತನ್ನ ಗಂಡನ ಯಾವದೆ ಪತ್ತೆಯಾಗದ ಕಾರಣ ಉದಗೀರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದು ಇರುತ್ತದೆ ಇಂದು ದಿನಾಂಕ
27/12/2016 ರಂದು 11:30 ಗಂಟೆಗೆ ತಾನು ಉದಗೀರದಲ್ಲಿ ಇರುವಾಗ ತನ್ನ ಮೈದುನ ಮಹಾವೀರ ರವರು ಅಣ್ಣ ಭಾಲ್ಕಿಯ ಕಿಲ್ಲಾ ಹತ್ತೀರ ಇರುವ ಬಾವಿಯಲ್ಲಿ ಬಿದ್ದು ಸತ್ತಿರುತ್ತಾನೆ ಅಂತಾ ಭಾತಂಬ್ರಾ ಗ್ರಾಮದಿಂದ ನನ್ನ ಗೆಳೆಯರು ಫೊನ ಮಾಡಿರುತ್ತಾರೆ ನಡೆಯಿರಿ ಭಾಲ್ಕಿಗೆ ಹೋಗೋಣ ಅಂತಾ ಅಂದಾಗ ಭಾಲ್ಕಿಯ ಕಿಲ್ಲಾ ಹತ್ತೀರ ಇರುವ ಬಾವಿಯ ಹತ್ತೀರ ಬಂದು ನೋಡಲು ತನ್ನ ಗಂಡ ಮೃತ ಪಟ್ಟೀದ ವಿಷಯ ನೀಜ ಇದ್ದು ತನ್ನ ಗಂಡ ಮಾಡುತ್ತಿರುವ ವ್ಯಾಪಾರದಲ್ಲಿ 2-3 ವರ್ಷಗಳಿಂದ ನಷ್ಟ ಆಗುತ್ತಲೆ ಬರುತಿದ್ದರಿಂದ ಮನಸ್ಸಿನಲ್ಲಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ನಮ್ಮ ಸ್ವಂತೂರು ಭಾಲ್ಕಿ ಹತ್ತೀರ ಇರುವದರಿಂದ ದಿನಾಂಕ
20/12/2016 ರಂದು ಉದಗೀರದಿಂದ ಭಾಲ್ಕಿಗೆ ಎರಡು ದಿವಸಗಳ ಹಿಂದೆ ಬಾವಿಯಲ್ಲಿ ಬಿದ್ದು ಆತ್ಮ ಹತ್ಯೆ ಮಾಡಿಕೊಂಡಿದ್ದು ಇರುತ್ತದೆ. ಅಂತಾ
ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಚಿಂತಾಕಿ
ಪೊಲೀಸ್ ಠಾಣೆ ಗುನ್ನೆ ನಂ. 77/16 ಕಲಂ 376, 109 ಜೊತೆ 34 ಐಪಿಸಿ :-
ದಿನಾಂಕ:
27/12/2016 ರಂದು 0800 ಗಂಟೆಗೆ ಔರಾದ (ಬಿ) ಸರಕಾರಿ ಆಸ್ಪತ್ರೆಯಿಂದ ಎಮ್ ಎಲ್ ಸಿ ಇದೆ ಬಂದು ಸ್ವೀಕರಿಸಿಕೊಂಡು ಹೋಗಿ ಅಂತ
ತಿಳಿಸಿದ ಮೇರೆಗೆ ನಾನು ಎಸ್ಐ ಶಂಕ್ರೆಪ್ಪಾ ಔರಾದ
ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಗಾಯಾಳು/ಫಿರ್ಯಾದಿ ರವರು
ನೀಡಿದ ಮೌಖಿಕ ಹೇಳಿಕೆಯೆನೆಂದರೆ ಫೀರ್ಯಾದಿರವರು
ಉಜನಿ ಗ್ರಾಮದಲ್ಲಿ ಅಂಗನವಾಡಿ ಸಹಾಯಕಿ ಅಂತ ಕೆಲಸ
ಮಾಡಿಕೊಂಡು ಉಪ ಜೀವಿಸುತ್ತಿದ್ದು ಹಿಗಿರುವಲ್ಲಿ ದಿನಾಂಕ: 26/12/2016 ರಂದು ರಾತ್ರಿ ಉಟಮಾಡಿ ನನ್ನ ಮನೆಯಲ್ಲಿ ಮಲಗಿಕೊಂಡಿರುತಾರೆ. ಫಿರ್ಯಾದಿಯ ತನ್ನ ಮಗಳು ಪ್ರವಾಸಕ್ಕೆ ಹೋಗಿದ್ದು ನನ್ನ ಮನೆಯಲ್ಲಿ ಓಬ್ಬಳೆ ಮಲಗಿಕೊಂಡಿರುತ್ತಾರೆ.
ಹೀಗಿರುವಲ್ಲಿ ದಿನಾಂಕ 26/12/2016 ರಂದು
2345 ಗಂಟೆಯ ಸುಮಾರಿಗೆ ಮನೆಗೆ ಸಿಮೋನ ತಂದೆ ಗುಂಡಪ್ಪಾ
ಮಾಳಗೆ ಹಾಗು ಕಾಂಚನ ಗಂಡ ಸಂಗಮೇಶ ಹೊಬಳೆ ಇವರು ಬಂದು ನನ್ನ ಮನೆಯ ಬಾಗಿಲು ಬಡಿದು ಫಿರ್ಯಾದಿಗೆ
ಎಬ್ಬಿಸಿದ್ದು ಬಾಗಿಲು ತೆರೆದಾಗ ಸಿಮೋನ ತಂದೆ
ಗುಂಡಪ್ಪಾ ಮಾಳಗೆ, ಹಾಗು ಕಾಂಚನ ಗಂಡ ಸಂಗಮೇಶ ಹೊಬಳೆ ಇವರು ನನ್ನ
ಮನೆಯ ಮುಂದೆ ನಿಂತಿದ್ದು ಸಿಮೋನ ಇತನು ನನ್ನ ತಂಗಿಯ ಡೆಲಿವರಿ ಇದೆ ಅವರಿಗೆ ಚಿಂತಾಕಿ ಸರಕಾರಿ ಆಸ್ಪತ್ರೆಗೆ
ತೆಗೆದುಕೊಂಡು ಹೋಗಿದ್ದಿ ಡೆಲಿವರಿ
ಮಾಡಲು ನಡೀರಿ ಅಂತಾ ಹೇಳಿ ಆಟೊ ನಂ ಕೆಎ 38 3904 ನೇದ್ದರಲ್ಲಿ ಗ್ರಾಮದ ಅಬ್ರಹಂ ತಂದೆ ಗುಂಡಪ್ಪಾ ಮಾಳಗೆ
ಹಾಗೂ
ಇನ್ನಿತರರು ಇದ್ದು ಸದರಿ ಆಟೋದಲ್ಲಿ ಕುಳಿತಾಗ ಸಿಮೋನ್ ತನ್ನ ಆಟೊ
ಚಲಾಯಿಸಿಕೊಂಡು ಚಿಂತಾಕಿ ಕಡೆ ಹೊರಟಾಗ ಉಜನಿ ಗ್ರಾಮದ
ಹತ್ತಿರ ಇರುವ ಬ್ರೀಜನ ಹತ್ತಿರ ಕಾಂಚನ ಇವಳು ನನ್ನಗೆ ಟೊಯಲೆಟ್ ಬಂದಿದೆ ಅಂತ ಅಟೋದಿಂದ ಕೆಳಗೆ ಇಳಿದಿದ್ದು
ಸಿಮೋನ್ ಇತನು ತನ್ನ ಅಟೊ ಚಲಾಯಿಸಿಕೊಂಡು ಮುಂದೆ ಬರುತ್ತಿದ್ದಾಗ ಫಿರ್ಯಾದಿಯು
ಸಂಶಯ ಪಟ್ಟು ಯಾಕೋ
ನಿಮ್ಮದು ಎನು ತಿಳಿತಿಲ್ಲಾ ಅಂತಾ ಅಂದಾಗ ಇಲ್ಲಾರಿ ಟೀಚರ ಚಿಂತಾಕಿಗೆ ನಮ್ಮ ತಂಗಿಗೆ ತೆಗೆದುಕೊಂಡು ಹೊಗಿದ್ದೇವೆ, ನಡೀರಿ ಅಂತಾ ಅಂದು ಸುಂಕನಾಳ ಗ್ರಾಮದ ಕ್ರಾಸವರೆಗೆ
ತಂದು ಅಲ್ಲಿ ಸಿಮೋನ್ ತನ್ನ ಆಟೊ ನಿಲ್ಲಿಸಿ ಕೆಳಗೆ ಇಳಿದು ಉಜನಿಯಿಂದ ಹೋಗುವಾಗ ಎಡಗಡೆ ದಿಕ್ಕಿಗೆ
ರೋಡಿನ ಕ್ರಾಸಿನಲ್ಲಿ ಫೀರ್ಯಾದಿ ಕೈ ಹಿಡಿದು ಎಳೆದಾಗ ಸುಮಂತ ಒತ್ತಿ ಹಿಡಿದಾಗ
ಸಿಮೋನ್ ತಂದೆ ಗುಂಡಪ್ಪಾ ಮಾಳಗೆ ಇತನು ಫಿರ್ಯಾದಿಗೆ ಎಡಗಡೆ ಬೆನ್ನಿನಲ್ಲಿ ಭುಜದ ಹತ್ತಿರ, ಬೆನ್ನಿನಲ್ಲಿ ಕಚ್ಚಿ ಸಿಗರೇಟಿನಿಂದ ಗುಪ್ತಾಂಗದ ಹತ್ತಿರ ಚುಚ್ಚಿ ಗಾಯ ಪಡಿಸಿದ್ದು ಅಲ್ಲದೆ ಜಬರಿ ಸಂಭೋಗ ಮಾಡಿರುತ್ತಾನೆ.
ಅಲ್ಲದೆ ಅಬ್ರಾಹಂ ಮತ್ತು
ರಾಮಪ್ಪಾ ತಂದೆ ಕಲ್ಲಪ್ಪಾ ಮಾಳಗೆ ಇತನು ಎರಡು
ಮೊಳಕಾಲ ಕೆಳಗೆ ತೊರಚಿದ ರಕ್ತಗಾಯ ಕೈಯಿಂದ ಮಾಡಿ ಜಬರಿ ಸಂಭೋಗ ಮಾಡಿರುತ್ತಾನೆ. ಇದಾಗುವಷ್ಟರಲ್ಲಿ
ಫಿಯಾಱದಿಯು ಮೊರ್ಛೆ ಹೊಗಿದ್ದು ಇನ್ನೂಳಿದವರು ಎನು ಮಾಡಿದ್ದಾರೆ ಎಂಬ ಬಗ್ಗೆ ಗೊತ್ತಾಗಲಿಲ್ಲಾ
, ನನ್ನಗೆ ದಿನಾಂಕ 27/12/2016
ರಂದು 4 ಎಎಮ್ ಗಂಟೆಗೆ ಎಚ್ಚೆತ್ತು ರೋಡಿಗೆ ಬಂದು ಟಿಪ್ಪರಗಳಿಗೆ
ಕೈ ಮಾಡಿದ್ದು ಅವು ನಿಲ್ಲಿಸದೆ ಇದ್ದಾಗ ನಾನು ನಡೆದುಕೊಂಡು ಚಿಂತಾಕಿ ಸರಕಾರಿ ಆಸ್ಪತ್ರೆಗೆ ಹೊಗಿದ್ದು
ಅಲ್ಲಿನ ವೈಧ್ಯಾಧಿಕಾರಿಗಳು ಚಿಕಿತ್ಸೆ ಮಾಡಿ ಹೆಚ್ಚಿನ
ಚಿಕಿತ್ಸೆ ಕುರಿತು ಅಂಬುಲೆನ್ಸ್ ನಲ್ಲಿ ಸರಕಾರಿ ಆಸ್ಪತ್ರೆ ಔರಾದಕ್ಕೆ ಕಳುಹಿಸಿ ಕೊಟ್ಟಿದ್ದು ಇರುತ್ತದೆ. ಅಂತಾ
ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳಲಾಗಿದೆ.