Police Bhavan Kalaburagi

Police Bhavan Kalaburagi

Sunday, November 19, 2017

Yadgir District Reported Crimes Updated on 19-11-2017

                                  Yadgir District Reported Crimes

ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ. 57/2016 ಕಲಂ:143, 147, 148, 323, 324, 307, 504, 506 ಸಂಗಡ 149 ಐಪಿಸಿ ;- ದಿನಾಂಕ:15/11/2017ರಂದು 10:30 ಎ.ಎಮ್. ಗಂಟೆಯ ಸುಮಾರಿಗೆ ಪಿಯರ್ಾದಿಯ ಮನೆಯ ಮುಂದಿನ ಅಂಗಳದಲ್ಲಿ ಪಿಯರ್ಾದಿಯ ಅಣ್ಣ ಭೀಮಣ್ಣ ಹಾಗೂ ಅತ್ತಿಗೆ ಪಾರ್ವತಿಯೊಂದಿಗೆ ನಾರಾಯಣಪೂರ ಐಬಿ ತಾಂಡಾದ ಆರೋಪಿತರು ಜಗಳ ತೆಗೆದು ಶಾಂತಪ್ಪ ಮತ್ತು ಪ್ರಕಾಶ ಜ್ಯೋತಿ ಇವರು ಭೀಮಣ್ಣನಿಗೆ ಎಳೆದಾಡಿ ಕೈಯಿಂದು ಹೊಡೆದಿದ್ದು, ರೆಷ್ಮಾ, ಗುರುಬಾಯಿ ಶಾಂತಪ್ಪ ಇವರು ಪಾರ್ವತಿಗೆ ಕೈಯಿಂದ ಹೊಡೆದಿದ್ದು ಬಡಿಗೆಯಿಂದ ಹೊಡೆದು ಗುರುಬಾಯಿ ರೆಷ್ಮಾ ಕೂಡಿ ಅವಳನ್ನು ನುಗಿಸಿ ಕೆಡವಿದ್ದು, ಆಗ ಪಿಯರ್ಾದಿಯು ಆರೋಪಿತರಿಗೆ ಅಣ್ಣ ಅತ್ತಿಗೆಗೆ ಯಾಕೆ ಹೊಡೆಯುತ್ತಿರಿ ಅಂತಾ ಕೇಳಿದಾಗ ಎಲ್ಲಾರು ಈ ಸೂಳಿ ಮಗನದು ಬಹಳ ಸೊಕ್ಕು ಆಗೈತಿ ಅಂದು ಪ್ರಕಾಶ ಮತ್ತು ವಿನೋದ ಕೂಡಿ ಕೈಯಿಂದ ಹೊಡೆದರು ಅಶೋಕ ತಂದೆ ಬಾಲಚಂದ್ರ ಈತನು ಬಡಿಗೆಯಿಂದ ಹೊಡೆದಿದ್ದು ಮತ್ತು ಶಾಂತಪ್ಪ ತಂದೆ ಶಂಕ್ರಪ್ಪ ಈತನು ತನ್ನ ಕೈಯಲ್ಲಿದ್ದ ಕೊಡಲಿಯಿಂದ ಪಿಯರ್ಾದಿಯ ತಲೆಯ ಎಡಗಡೆ ಹೊಡೆದು ಭಾರಿ ರಕ್ತಗಾಯ ಪಡೆಸಿದ್ದು ಆಗ ನೆಲಕ್ಕೆ ಬಿದಿದ್ದು ನಮ್ಮ ತಾಂಡಾದ ರಾಜು ಚವ್ಹಾಣ, ಸೋಮ್ಲಪ್ಪ ರಾಠೋಡ, ಗಂಗಪ್ಪ ಜಾದವ ಇವರು ನೋಡಿ ಜಗಳವನ್ನು ಬಿಡಿಸಿದ್ದು ಇರುತ್ತದೆ. ಕಸ್ತೂರೆಪ್ಪ ತಂದೆ ನಾರಾಯಣ ಗುರುಬಾಯಿ ಗಂಡ ಶಾಂತಪ್ಪ, ಶಾಂತಪ್ಪ ತಂದೆ ಶಂಕ್ರಪ್ಪ ಇವರು ಇವನ ಸೊಕ್ಕು ಬಹಳ ಆಗೈತಿ ಇವನ ಜೀವ ಸಹಿತ ಬಿಡಬಾರದು ಅಂತಾ ಅಂದು ಅಲ್ಲಿಂದ ಹೋಗಿದ್ದು ಈ ಜಗಳ ಆಗಲು ಕಾರಣ ಪಿಯರ್ಾದಿಯ ಅಣ್ಣನಿಂದ ಶಾಂತಪ್ಪ ತಂದೆ ಶಂಕ್ರಪ್ಪ ಈತನು ಒಂದು ಲಕ್ಷ ರೂಪಾಯಿ ಕೈಗಡ ಹಿಸಿದುಕೊಂಡಿದ್ದು ಕೊಟ್ಟ ಹಣವನ್ನು 15ದಿವಸಗಳಹಿಂದೆ ಕೇಳಿದ್ದಕ್ಕೆ ಇದೆ ವಿಷಯದ ಸಲುವಾಗಿ ಶಾಂತಪ್ಪ ಹಾಗೂ ಉಳಿದವರು ಕೂಡಿ ಪಿಯರ್ಾದಿಗೆ ಹಾಗೂ ಪಿಯರ್ಾದಿಯ ಅಣ್ಣ ಅತ್ತಿಗೆಗೆ ಅವಾಚ್ಯವಾಗಿ ಬೈದು ಬಡಿಗೆ ಕೈಯಿಂದ ಹೊಡೆದು ಗುಪ್ತಗಾಯ ಮಾಡಿದ್ದು ಕೊಡಲಿಯಿಂದ ಹೊಡೆದು ರಕ್ತಗಾಯ ಮಾಡಿದ್ದು ಕಾರಣ ನಮಗೆ ಹೊಡೆ-ಬಡೆ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 229/2017 ಕಲಂ 454,457,380 ಐಪಿಸಿ;- ದಿನಾಂಕ 17/11/2017 ರಂದು ರಾತ್ರಿ 08-30 ಗಂಟೆಗೆ ಫಿಯರ್ಾದಿ ಠಾಣೆಗೆ ಹಾಜರಾಗಿ ಒಂದು ಗಣಕೀಕರಣ ಮಾಡಿದ ದೂರು ಅಜರ್ಿ ನೀಡಿದ್ದು ಸದರಿ ದೂರಿನ ಸಾರಾಶವೇನೆಂದರೆ, ನಾನು ಲಕ್ಷ್ಮೀ ನಗರದ ಈಶ್ವರಪ್ಪ ನಿವೃತ್ತ ಪಿ.ಎಸ್.ಐ ಇವರ ಮನೆಯಲ್ಲಿ ಬಾಡಿಗೆಯಿಂದ ವಾಸಿಸುತ್ತೇನೆ. ದಿನಾಂಕ 15/11/2017 ರಂದು ಮಧ್ಯಾಹ್ನ 01-00 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯ ಬೀಗ ಹಾಕಿಕೊಂಡು ಕುಟುಂಬ ಸಮ್ಮೇತವಾಗಿ ಶ್ರೀಶೈಲ ದೇವಸ್ಥಾನಕ್ಕೆ ಹೋಗಿದ್ದೆವು. ದೇವಸ್ಥಾನದಿಂದ ಮರಳಿ ದಿನಾಂಕ 17/11/2017 ರಂದು ಮಧ್ಯ ರಾತ್ರಿ 02-00 ಗಂಟೆಯ ಸುಮಾರಿಗೆ ಯಾದಗಿರಿಯ ನಮ್ಮ ಮನೆಗೆ ಬಂದು ನೋಡಿದಾಗ ನಮ್ಮ ಮನೆಗೆ ಹಾಕಿದ ಬೀಗ ಮುರಿದು ಬಾಗಿಲು ತೆಗೆದಿತ್ತು. ನಾನು ಹಾಗೂ ನನ್ನ ಹೆಂಡತಿ ಲಕ್ಷ್ಮೀ ಇಬ್ಬರು ಕೂಡಿ ಗಾಬರಿಯಾಗಿ ಮನೆ ಒಳಗೆ ಹೋಗಿ ನೋಡಿದಾಗ ಮನೆಯಲ್ಲಿಯ ಸಾಮಾನುಗಳೆ ಚೆಲ್ಲಾ ಪಲ್ಲಿಯಾಗಿ ಬಿದ್ದಿದ್ದವು. ಹಾಗೂ ಅಡಿಗೆ ಮನೆಯಲ್ಲಿ ಇಟ್ಟಿದ್ದ ಅಲಮಾರಿ ಕೀಲಿ ಮುರಿತು ತೆಗೆದಿತ್ತು. ನೋಡಲಾಗಿ ಅದರಲ್ಲಿ ಇಟ್ಟಿದ್ದ ಬೆಳ್ಳಿಯ ಎರಡು ಸಮೆಗಳು ಅಂದಾಜು ತೂಕ 28 ತೊಲೆಗಳು, ಅ.ಕಿ 7980=00 ರೂ|| ಗಳು. ಹಾಗೂ ಒಂದು ಬೆಳ್ಳಿಯ ಕಳಸದ ಸೆಟ್ (ಒಂದು ಬೆಳ್ಳಿ ಪ್ಲೇಟ್, 2 ಸಣ್ಣ ದೀಪಗಳು, ಒಂದು ಕುಂಕುಮ ಭರಣಿ, ಒಂದು ಸಣ್ಣ ಕುತ್ತಿಗೆ ತಂಬಿಗೆ ) ಅಂದಾಜು ತೂಕ 23 ತೊಲೆಯದು.ಅ.ಕಿ 6,555=00 ಮತ್ತು ಅಂದಾಜು 4 ಗ್ರಾಂಮಿನ ಒಂದು ಜೊತೆ ಬಂಗಾರದ ಬೆಂಡೋಲಿ, ಅ.ಕಿ 10,000=00 ರೂ|| ಗಳು ನೇದ್ದವುಗಳು ಇರಲಿಲ್ಲ. ಕಾರಣ ದಿನಾಂಕ 15/11/2017 ರಂದು ಮಧ್ಯಾಹ್ನ 01-00 ಗಂಟೆಯಿಂದ ದಿನಾಂಕ 17/11/2017 ರಂದು ಮಧ್ಯ ರಾತ್ರಿ 02-00 ಗಂಟೆಯ ಅವಧಿಯಲ್ಲಿ ನಮ್ಮ ಮನೆಯ ಬೀಗ ಮುರಿದು ಮನೆ ಒಳೆಗೆ ಪ್ರವೇಶಿಸಿ ಮನೆಯ ಅಲಮರಿಯಲ್ಲಿಟ್ಟ ಒಟ್ಟು 51 ತೊಲೆಯ ಬೆಳ್ಳಿಯ ಸಾಮಾನುಗಳು. ಹಾಗೂ 4 ಗ್ರಾಂ. ಬಂಗಾರದ ಒಂದು ಜೊತೆ ಬಂಗಾರ ಬೆಂಡೋಲಿ ಹೀಗೆ ಒಟ್ಟು 24,535=00 ಕಿಮ್ಮತ್ತಿನ ಆಭರಣಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಸದರಿ ಸಾಮಾನುಗಳನ್ನು ಪತ್ತೆ ಮಾಡಿ ಕಳವು ಮಾಡಿದವರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 229/2017 ಕಲಂ 454, 457, 380 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.  
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 171/2017 ಕಲಂ 279, 337, 304(ಎ)  ಐಪಿಸಿ;- ದಿ:18/11/2017 ರಂದು ಪಿಯರ್ಾದಿ ಮತ್ತು ಮೃತ ಇಬ್ಬರೂ ಕೂಡಿ ಪಿಯರ್ಾದಿ ಟಿವಿಎಸ್. ಮೋಟಾರ್ ಸೈಕಲ ನಂ. ಕೆಎ-28 ಇಪಿ-7890 ನೇದ್ದರ ಮೇಲೆ ಅಗ್ನಿ ಗ್ರಾಮಕ್ಕೆ ದೇವರಿಗೆಂದು ಹೊರಟಿದ್ದು ಮೃತನು ಹಿಂದೆ ಕುಳಿತಿದ್ದು, ಪಿಯರ್ಾದಿ ಮೋಟಾರ್ ಸೈಕಲನ್ನು ನಡೆಯಿಸಿಕೊಂಡು  ಹುಣಸಗಿ ಮೇಲೆ ಹಾದು ಅಗ್ನಿ ಗ್ರಾಮಕ್ಕೆ ಹುಣಸಗಿ - ಕೆಂಭಾವಿ ರೋಡಿನ ಮೇಲೆ ಹೊರಟಾಗ ಗುಂಡಲಗೇರಾ ಗ್ರಾಮವನ್ನು ದಾಟಿ ಇಳಿಜಾರಿನಲ್ಲಿ ಕೆಂಭಾವಿ ಕಡೆಗೆ ಹೊರಟಾಗ ಹಿಂದಿನಿಂದಾ ಕೆ.ಎಸ್.ಆರ್.ಟಿ.ಸಿ ಬಸ್ ನಂ. ಕೆಎ-33 ಎಫ್-0101 ನೇದ್ದರ ಚಾಲಕ ಆರೋಪಿತನು ತನ್ನ ಬಸ್ನ್ನು ಅತಿವೇಗೆ ಹಾಗೂ ಅಲಕ್ಷತನದಿಂದಾ  ನಡೆಯಿಸಿಕೊಂಡು ಬಂದು ಪಿಯರ್ಾದಿ ಮೋಟಾರ್ ಸೈಕಲಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದರಿಂದಾ ಮೃತನಿಗೆ ತೆಲೆಗೆ ಭಾರಿ ರಕ್ತಗಾಯವಾಗಿ ಅಶೋಕ ಈತನು ಸ್ಥಳದಲ್ಲಿಯೇ ಮೃತಪಟ್ಟಿದ್ದು ಪಿಯರ್ಾದಿಗೆ ಸಣ್ಣಪುಟ್ಟ ತರಚಿದಗಾಯವಾಗಿದ್ದು ಅಂತಾ ಇತ್ಯಾದಿ ಫಿರ್ಯಾಧಿ ಹೇಳಿಕೆ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.   
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 323/2017 ಕಲಂಃ 143 147 148 323 324 307 395 504 ಸಂಗಡ 149 ಐಪಿಸಿ;- ದಿನಾಂಕಃ 17/11/2017 ರಂದು 1-40 ಪಿ.ಎಮ್ ಕ್ಕೆ ಸುರಪೂರ ಸಕರ್ಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ತಿಳಿಸಿದ ಮೇರೆಗೆ ಆಸ್ಪತ್ರೆಗೆ ಭೇಟಿನೀಡಿದೇನು. ಗಾಯಾಳು ಕೃಷ್ಣ ತಂದೆ ಸಿದ್ರಾಮ ಪಾಟೀಲ್ ಸಾ: ಉದ್ದಾರ ಓಣಿ ಸುರಪೂರ ಇವರು ನೀಡಿದ ಲಿಖಿತ ಫಿಯರ್ಾದಿ ಅಜರ್ಿಯ ಸಾರಾಂಶವೆನೆಂದರೆ, ದಿನಾಂಕಃ 16-11-2017 ರಂದು ರಾತ್ರಿ 10-30ರ ಸುಮಾರಿಗೆ ನಾನು ಮನೆಗೆ ಹೊರಟಿದ್ದಾಗ, ಸುರಪೂರ ಪಟ್ಟಣದ ಪಾಂಡುರಂಗ ದೇವಸ್ಥಾನದ ಹತ್ತಿರ 1) ಪವನಕುಮಾರ ತಂದೆ ಬ್ರಿಜು ಗೋಪಾಲ ರಾಠಿ 2) ರಾಕೇಶ ತಂದೆ ನಾರಾಯಣ ಸುಣ್ಣದಕಲ್ 3) ಆನಂದ ಗಡಗಡೆ ತಂದೆ ವಿದ್ಯಾಸಾಗರ ಗಡಗಡೆ 4) ಉದಯಕುಮಾರ ಕೊಂಗಂಡಿ 5) ಅಕ್ಷಯ ಕಟ್ಟಿಮನಿ 6) ಆನಂದ ನಾಟೇಕರ್ ಎಲ್ಲರೂ ಸಾ: ಸುರಪೂರ ಇವರೆಲ್ಲರೂ ಏಕಾಏಕಿ ನನಗೆ ತಡೆದು ನಿಲ್ಲಿಸಿ ಈ ಸೂಳೆಮಗನನ್ನು ರಾತ್ರಿ ವೇಳೆಯಲ್ಲಿಯೇ ಸಿಕ್ಕಾನ, ಇವತ್ತು ಸಾಯಿಸಿಬಿಡೋಣಾ, ಈ ಭೋಸಡಿ ಮಗನಂದು ಬಹಳಾಗಿದೆ ಎನ್ನುತ್ತ ನನ್ನ ಎದೆಯ ಮೇಲಿನ ಅಂಗಿ ಹಿಡಿದು ಪವನಕುಮಾರ ರಾಠಿ ಇತನು ನೆಲಕ್ಕೆ ಕೆಡವಿದನು. ರಾಕೇಶನು ಕೊಂದೆ ಬಿಡೋಣಾ ಎಂದು ಹೇಳುತ್ತ ತನ್ನ ಕೈಯಲ್ಲಿ ಇದ್ದ ಎರಡು ಹಾಕಿ ಸ್ಟೀಕ್ ಗಳಿಂದ ಎಡಗೈ ಭಾಗಕ್ಕೆ, ಎಡಗಾಲಿನ ಭಾಗಕ್ಕೆ ಮತ್ತು ಬೆನ್ನಿಗೆ ಹೊಡೆದನು. ಆನಂದ ಗಡಗಡೆ ಇತನು ನನ್ನ ಕುತ್ತಿಗೆಗೆ ಕೈ ಹಾಕಿ ಹುಚುಕಿ ಕೊಲೆ ಮಾಡಲು ಪ್ರಯತ್ನ ಮಾಡಿದನು. ನನ್ನ ಕೊರಳಲ್ಲಿದ್ದ 2 ತೊಲೆ ಬಂಗಾರದ ಚೈನ ಕಿತ್ತುಕೊಂಡು ಹೋಗಿರುತ್ತಾರೆ. ಉದಯಕುಮಾರ ಎಂಬಾತ ಈ ಸೂಳೆ ಮಗನದು ಬಹಳಾಗಿದೆ, ಬಿಟ್ಟರೆ ನಮಗೆ ಉಳಿಗಾಲವಿಲ್ಲೆನ್ನುತ್ತ ಅಲ್ಲೆ ಇದ್ದ ಕಲ್ಲನ್ನು ಎತ್ತಿಕೊಂಡು ನನ್ನ ತಲೆ ಮೇಲೆ ಹಾಕಲಿಕ್ಕೆ ಬಂದಾಗ ನಾನು ತಪ್ಪಿಸಿಕೊಂಡಿದ್ದು, ಕಲ್ಲು ತಲೆಯ ಎಡಭಾಗದಲ್ಲಿ ತರಚಿ ಗಾಯವಾಗಿರುತ್ತದೆ. ಆಗ ನಾನು ಬಹಳ ಜೋರಾಗಿ ಕಿರುಚಾಡಿದಾಗ ರಮೇಶ ತಂದೆ ಗುಂಡಪ್ಪ ಮತ್ತು ಪಾರಪ್ಪ ಗುತ್ತೇದಾರ ಇವರು ಬಿಡಿಸಿಕೊಂಡರು. ಅಷ್ಟೊತ್ತಿಗೆ ನನ್ನ ಮೊಬೈಲ್ ಸಹ ಕಿತ್ತುಕೊಂಡರು. ಇಂದು ರಮೇಶ ಹಾಗು  ಪಾರಪ್ಪ ಇವರ ಸಹಾಯದಿಂದ ಫಿಯರ್ಾದಿ ನೀಡುತ್ತಿದ್ದು, ಈ ಮೇಲಿನ ಆರೋಪಿಗಳ ವಿರುದ್ದ ಕಾನೂನಿನ ಕ್ರಮ ಕೈಕೊಳ್ಳಬೇಕು ಅಂತಾ ವಗೈರೆ ಸಾರಾಂಶವಿರುವ ಅಜರ್ಿಯನ್ನು ಪಡೆದುಕೊಂಡು 9-00 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ಸದರಿ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 323/2017 ಕಲಂ: 143 147 148 323 324 307 395 504 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
 
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 324/2017 ಕಲಂಃ 143 147 148 323 324 307 395 504 ಸಂಗಡ 149 ಐಪಿಸಿ  ;- ದಿನಾಂಕಃ 17/11/2017 ರಂದು 10-30 ಪಿ.ಎಮ್ ಕ್ಕೆ ಶ್ರೀ ಪವನ್ ರಾಠಿ ತಂದೆ ಬ್ರಿಜ್ ಗೋಪಾಲ ರಾಠಿ ಸಾ: ಶೆಟ್ಟಿಮೊಹಲ್ಲಾ ಸುರಪೂರ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿಯರ್ಾದಿ ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಿನ್ನೆ ದಿನಾಂಕಃ 16/11/2017 ರಂದು ರಾತ್ರಿ 10-11 ಗಂಟೆಯ ಸುಮಾರಿಗೆ ನನ್ನ ಹೆಂಡತಿ ಹೈದ್ರಾಬಾದನಲ್ಲಿದ್ದಾಗ ನನ್ನ ಹೆಂಡತಿ ಫೋನ್ ನಂ. 7892592383 ಗೆ ಕೃಷ್ಣ ಪಾಟೀಲ್ ಎಂಬುವವರ ಫೋನ್ ನಂ. 9686972622 ದಿಂದ ಕಾಲ್ ಮಾಡಿದಾಗ ನನ್ನ ಹೆಂಡತಿ ರಿಸೀವ್ ಮಾಡದೇ ನನಗೆ ಸದರಿ ವಿಷಯ ತಿಳಿಸಿದ್ದಾಳೆ. ಈ ಹಿಂದೆ ಸುಮಾರು ದಿವಸಗಳಿಂದ ನಮ್ಮ ಮನೆಯ ಹತ್ತಿರ ಬಂದು ಹೋಗುವದು, ಮತ್ತು ನನ್ನ ಹೆಂಡತಿ ಬಜಾರಿಗೆ ಹೋದರೆ ಹಿಂದೆ ಸುತ್ತುವದು, ನನ್ನ ಹೆಂಡತಿಯ ಪಕ್ಕದಲ್ಲಿ ಬಂದು ಅಶ್ಲೀಲವಾಗಿ ಮಾತನಾಡುವದು ಮಾಡುತ್ತಿದ್ದ. ಅವನ ಅಶ್ಲೀಲ ವರ್ತನೆ, ಕಿರುಕುಳ ಸಾಕಾಗಿ ನನಗೆ ವಿಷಯ ತಿಳಿಸಿದ್ದಾಳೆ. ನಿನ್ನೆ ರಾತ್ರಿ 11.00 ಗಂಟೆಯ ಸುಮಾರಿಗೆ ನನ್ನ ಮನೆಯ ಮುಂದೆ ಕೃಷ್ಣ ಪಾಟೀಲ್ ತಂದೆ ಸಿದ್ರಾಮ ಪಾಟೀಲ್ ಹಾಗು ಇತರರು ಬಂದು ನಿಂತಾಗ, ನನ್ನ ಹೆಂಡತಿಗೆ ಯಾಕೆ ಕಾಲ್ ಮಾಡಿದಿ, ಅಲ್ಲದೇ ನನ್ನ ಹೆಂಡತಿಯನ್ನು ಬಹಳ ದಿವಸಗಳಿಂದ ಯಾಕೆ ಹಿಂಬಾಲಿಸುತ್ತಿಎಂದು ಕೇಳಿದಾಗ, ಆತನು ಹಿಂಬಾಲಿಸುವುದೇನೂ ನಿನ್ನ ಹೆಂಡತಿಯನ್ನು ಕಿಡ್ನಾಪ್ ಮಾಡಿಕೊಂಡು ಹೋಗುತ್ತೇವೆ ಎಂದು ಅಂದಾವನೇ 1) ಕೃಷ್ಣ ಪಾಟೀಲ್ ತಂ/ ಸಿದ್ರಾಮ ಪಾಟೀಲ್ ಸಾ|| ಉದ್ದಾರ ಓಣಿ ಸುರಪುರ 2) ರಮೇಶಗೌಡ ಉದ್ದಾರ ಓಣಿ ಸುರಪುರ ಹಾಗೂ ಆತನ ಸಂಗಡ ಇದ್ದ ಇನ್ನೂ 5 ಜನರು ಬಂದವರೆ. ಎಲೇ ಬೋಸುಡಿ ಮಗನೇ ನಾನು ಕಾಲ್ ಮಾಡಿದ್ದು ನೀ ಎನ್ ಕೇಳಿತ್ತಿ, ನಿನ್ನ ಹೆಂಡತಿ ಎಲ್ಲಿದ್ದಾಳೆ ಹೊರಗೆ ಕರೆ ಎಂದು ಜಗಳಕ್ಕೆ ಬಿದ್ದು, ನನ್ನ ಎದೆಯ ಮೇಲೆ ಅಂಗಿ ಹಿಡಿದು ಎಳೆದಾಡಿ ಕೈಯಿಂದ ಹೊಡೆದು ಕಾಲಿನಿಂದ ಒದ್ದು, ನೆಲಕ್ಕೆ ಕೆಡಿವಿ ಕೃಷ್ಠ ಪಾಟೀಲ್ ಎಂಬಾತನು ನನ್ನ ಎದೆಯ ಮೇಲೆ ಕುಳಿತು ನನ್ನ ಕೊರಳಲ್ಲಿ ಇದ್ದ ಮಫ್ಲಾಲರ್(ಉದ್ದನ ಟವಲ್) ಎರಡು ಕೈಯಿಂದ ಹಿಡಿದು ಕುತ್ತಿಗೆ ಸುತ್ತ ಸುತ್ತಿ ಬಲವಾಗಿ ಒತ್ತಿ ಹಿಡಿದು ಉಸಿರುಗಟ್ಟುವಾಗೆ ಜಗ್ಗಿ ಸಾಯಿಸುವ ಪ್ರಯತ್ನ ಮಾಡುತ್ತಿದ್ದನು. ಹೆಸರು ಗೊತ್ತಿಲ್ಲದ ಉಳಿದವರೆಲ್ಲರೂ ನನ್ನ ಕೈ, ಕಾಲು ಹೊತ್ತಿ ಹಿಡಿದಿದ್ದರು. ಆಗ ನಾನು ನನ್ನ ಜೀವ ಹೋಗುತ್ತಿದೆ ಎಂದು ಜೋರಾಗಿ ಚೀರಾಡುತ್ತಿದ್ದಾಗ 1) ಶ್ರೀ ಲಕ್ಷ್ಮಣ ತಂ/ ಗೋಪಾಲ ನಾಯಕ ಸುರಪುರ 2) ಬಸವರಾಜ ತಂ/ ಹಣಮಂತ್ರಾಯ ಡೊಣ್ಣಿಗೇರಾ ಬಂದು ಬಿಡಿಸಿಕೊಂಡರು. ಆಗ ಈದಿನ ಜಗಳ ಬಿಡಿಸಿಕೊಂಡಿದ್ದಾರೆ ಎಂದು ತಿಳಿಯಬೇಡ ನಾವು ಎಂದಾದರೂ ಒಂದು ದಿನ ನಿನ್ನ ಹೆಂಡತಿಯನ್ನು ಕಿಡ್ನಾಪ್ ಮಾಡಿ ಬಲತ್ಕಾರ ಮಾಡುವುದು ನಮ್ಮ ಉದ್ದೇಶವಿದೆ ಅಂತ ಕೂಗಿದವರೇ, ನನ್ನ ಕೈಯಲ್ಲಿರುವ(ಬ್ರಾಸ್ಲೇಟ್) 5 ತೊಲೆ ಬಂಗಾರದ ಚೈನ್ ಹಾಗೂ ನನ್ನ ಪಾಕೀಟ್ನಲ್ಲಿ ಇರುವ 7000 ಸಾವಿರ ರೂಪಾಯಿಗಳು ಬಲವಂತವಾಗಿ ಕಿತ್ತಿಕೊಂಡರು.  ಅಲ್ಲದೇ ನಮ್ಮನ್ನು ಹೆದರು ಹಾಕಿಕೊಂಡು ಊರಲ್ಲಿ ಹೇಗೆ ಕಾಲ ಕಳಿಯುತ್ತಿ ಅಂತ ಜೀವ  ತೆಗೆಯುವ ಕೊಲೆ ಬೇದರಿಕಿ ಹಾಕಿ ಹೋದರು. ಉಳಿದ 5 ಜನರನ್ನು ಮುಖ ನೋಡಿದರೆ ಗುರುತಿಸುತ್ತೇನೆ. ಅಂತಾ ವಗೈರೆ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 324/2017 ಕಲಂ: 143 147 148 354(ಡಿ), 323 307 395 504 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
 


KALABURAGI DISTRICT REPORTED CRIMES

ಕೊಲೆ ಪ್ರಕರಣಗಳು :
ಅಫಜಲಪೂರ ಠಾಣೆ :  ಶ್ರೀಮತಿ ನರಸಮ್ಮ ಗಂಡ ದೇವಿಂದ್ರ @ ಪಾಂಡು ಭಜಂತ್ರಿ (ಪಂಡಿತ) ಸಾ||ಆಶ್ರಯ ಕಾಲೋನಿ ಡಿಗ್ರಿ ಕಾಲೇಜ ಹತ್ತಿರ  ಅಫಜಲಪೂರ ರವರ ದೊಡ್ಡಮಗನಾದ ಅರ್ಜುನನ ಕಾಲೇಜ ರಜೆ ಇದ್ದುದ್ದರಿಂದ ಅಫಜಲಪೂರಕ್ಕೆ ಬಂದಿದ್ದು ನನ್ನ ಎಲ್ಲಾ ಮಕ್ಕಳ ಆದಾಯ ಪ್ರಮಾಣ ಪತ್ರಗಳು ಕೊಟ್ಟು ಬರಲು ದಿನಾಂಕ 12/11/2017 ರಂದು ಸಾಯಂಕಾಲ 5.30 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ದೊಡ್ಡಮಗ ಅರ್ಜುನ ಇಬ್ಬರು ಕಲಬುರಗಿಗೆ ಹೋಗಿ ರೈಲ್ವೆ ನಿಲ್ದಾಣದಲಿದ್ದಾಗ ನನ್ನ ಗಂಡನು ನನ್ನ ಮೊಬೈಲ ಪೋನಿಗೆ ಕರೆ ಮಾಡಿ ರೈಲು ಸಿಕ್ಕಿರುತ್ತದೆ ಹೇಗೆ ಅಂತ ಕೇಳಿದನು ಆಗ ನಾನು ರೈಲು ಸ್ಟೇಷನನಲ್ಲಿ  ಬರುತ್ತಿರುವ ಬಗ್ಗೆ ಧ್ವನಿ ವರ್ಧಕದಲ್ಲಿ ಸೂಚನೆ ನೀಡುತಿದ್ದಾರೆ ಸ್ವಲ್ಪ ಸಮಯದಲ್ಲಿ ರೈಲು ಬರಬಹುದು ಅಂತ ತಿಳಿಸಿದೆನು ನಂತರ ರಾತ್ರಿ 9.00 ಗಂಟೆಗೆ ಸೋಲಾಪೂರ-ಯಶ್ವಂತಪೂರ ರೈಲು ಬಂದ ನಂತರ ಸದರಿ ರೈಲಿನಲ್ಲಿ ಹತ್ತಿಕೊಂಡು ಬೆಂಗಳೂರಿಗೆ ಹೋಗಿರುತ್ತೇವೆ. ದಿನಾಂಕ 14/11/2017 ರಂದು ರಾತ್ರಿ ಯಶ್ವಂತಪೂರ- ಸೋಲಾಪೂರ ರೈಲಿನಲ್ಲಿ ಬೆಂಗಳೂರಿನಿಂದ ನಾನು ಮತ್ತು ನನ್ನ ದೊಡ್ಡಮಗ ಅರ್ಜುನ ಇಬ್ಬರು ಹೊರಟು ದಿನಾಂಕ 15/11/2017 ರಂದು ಬೆಳಿಗ್ಗೆ ಕಲಬುರಗಿಗೆ ಬಂದು ಮದ್ಯಾಹ್ನ 12.00 ಗಂಟೆ ಸುಮಾರಿಗೆ ಮರಳಿ ಅಫಜಲಪೂರ ಪಟ್ಟಣದಲ್ಲಿರುವ ನಮ್ಮ ಮನೆಗೆ ಬಂದಿರುತ್ತೇವೆ. ನಮ್ಮ ಮನೆಗೆ ಹಾಕುವ ಕೀಲಿಗೆ ಎರಡು ಚಾವಿಗಳಿದ್ದು ಒಂದು ನನ್ನ ಹತ್ತಿರ ಇನೊಂದು ನನ್ನ ಗಂಡನ ಹತ್ತಿರ ಇರುತ್ತದೆ. ನಾನು ಬೆಂಗಳೂರಿನಿಂದ ನಮ್ಮ ಮನೆಗೆ ಬಂದಾಗ ನಮ್ಮ ಮನೆಯ ಬಾಗಿಲಿಗೆ  ಕೀಲಿ ಹಾಕಿದ್ದು ನಾನು ಮತ್ತು ನನ್ನ ಮಗ ಇಬ್ಬರು ಕೀಲಿ ತಗೆದು ಮನೆಯ ಒಳಗೆ ಹೋಗಿ ನೋಡಲು ಬಟ್ಟೆ ಹೊಲೆಯುವ ಮಶಿನ್ ಮೇಲೆ ನನ್ನ ಗಂಡನ ಒಂದು ಮೊಬೈಲ್ ಪೋನ್  ಮತ್ತು ಪರ್ಸ ಇತ್ತು. ಇನ್ನೊಂದು ಮೋಬೈಲ ಪೋನ ಇದ್ದಿರಲಿಲ್ಲ ನಂತರ ನಾನು ನನ್ನ ಗಂಡನಿಗಾಗಿ ಓಣಿಯಲ್ಲಿ ಮತ್ತು ನನ್ನ ಗಂಡನು ಕೆಲಸ ಮಾಡುವ ಹೊಟೇಲಗಳಲ್ಲಿ ವಿಚಾರಿಸಿದರು ನನ್ನ ಗಂಡನ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ ಎಲ್ಲಿಗಾದರು ಹೋಗಿರಬಹುದು ನಂತರ ತಾನೇ ಮರಳಿ ಮನೆಗೆ ಬರಬಹುದೆಂದು ಸುಮ್ಮನಿದ್ದೆನು.ದಿನಾಂಕ 18/11/2017 ರಂದು ಬೆಳಿಗ್ಗೆ 10.00 ಗಂಟೆ ಸುಮಾರಿಗೆ ನಮ್ಮ ಓಣಿಯಲ್ಲಿ ಜನರು ಅಫಜಲಪೂರದಿಂದ ಘತ್ತರಗಾ ಕಡೆಗೆ ಹೋಗುವ ರೋಡಿನ ಹತ್ತಿರ ಇರುವ ಹಮೀದ ಅಫ್ಜಲ್ ತಂದೆ ಅಲಿ ಅಫ್ಜಲ್ ಜಹಾಗೀರದಾರ ರವರ ಹೊಲದಲ್ಲಿ ಒಬ್ಬ ಗಂಡು ವ್ಯಕ್ತಿಯ ಶವ ಬಿದ್ದಿದೆ ಅಂತ ಮಾತಾಡುವದನ್ನು ಕೇಳಿ ನಾನು ಮತ್ತು ನನ್ನ ಮಗ ಅರ್ಜುನ ಇಬ್ಬರು ಹೋಗಿ ನೋಡಲು ಕೊಲೆಯಾಗಿ ಬಿದ್ದಿರುವ ವ್ಯಕ್ತಿ ಶವ ಪೂರ್ತಿ ಕೊಳೆತಿದ್ದು ಶವದ ಮೇಲಿನ ಬಟ್ಟೆಗಳು ಮತ್ತು ಕೊಲೆಯಾದ ಸ್ಥಳದಲ್ಲಿ  ಬಿದ್ದಿರುವ ಚಪ್ಪಲಿಗಳು ಹಾಗು  ಪ್ಯಾಂಟಿಗೆ ಕಟ್ಟುವ ಬೆಲ್ಟನೇದ್ದವುಗಳನ್ನು ನೋಡಿ ಗುರುತಿಸಿದ್ದು ಕೊಲೆಯಾಗಿ ಬಿದ್ದ ವ್ಯಕ್ತಿ ನನ್ನ ಗಂಡ ದೇವಿಂದ್ರ@ ಪಾಂಡು ತಂದೆ ಶಂಕರ ಪಂಡಿತ(ಭಜಂತ್ರಿ) ಇರುತ್ತಾನೆ. ನನ್ನ ಗಂಡನಿಗೆ ದಿನಾಂಕ 12/11/2017 ರಿಂದ ದಿನಾಂಕ 18/11/2017 ರ ಬೆಳಗ್ಗಿನ 10.00 ಗಂಟೆಯ ಮದ್ಯದ ಅವದಿಯಲ್ಲಿ ಯಾರೋ ದುಷ್ಕರ್ಮಿಗಳು ಯಾವುದೋ ದುರುದ್ದೇಶದಿಂದ ಹಮೀದ ಅಫ್ಜಲ್ ತಂದೆ ಅಲಿ ಅಫ್ಜಲ್ ಜಹಾಗೀರದಾರ ರವರ ಹೊಲದಲ್ಲಿನ ತೊಗರಿ ಬೆಳೆ ಇದ್ದ ಹೊಲದ ಬಾಂದಾರಿ ಮೇಲೆ ಇರುವ ಬೇವಿನ ಗಿಡದ ಪಕ್ಕದಲ್ಲಿ ತಲೆಯ ಮೇಲೆ ದೊಡ್ಡ ಬಂಡೆಗಲ್ಲು ಎತ್ತಿ ಹಾಕಿ ಕೊಲೆ ಮಾಡಿ ಸಾಕ್ಷಿ ಪುರಾವೆಗಳು ನಾಶಪಡಿಸುವ ಉದ್ದೇಶದಿಂದ ಶವವನ್ನು ಕೊಲೆ ಮಾಡಿದ ಸ್ಥಳದಿಂದ ಎಳೆದುಕೊಂಡು ಹೋಗಿ ತೊಗರಿ ಬೆಳೆಯ ಪಕ್ಕದಲ್ಲಿರುವ ಕಬ್ಬಿನ ಗದ್ದೆಯಲ್ಲಿ ಹಾಕಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಲೋಗಿ ಠಾಣೆ : ಶ್ರೀ ಭಗವಂತ್ರಾಯ ತಂದೆ ಸಿದ್ದಪ್ಪ ಗುಜಗೊಂಡ ಸಾ : ನೆಲೋಗಿ ತಾ : ಜೇವರಗಿ ರವರು ದಿನಾಂಕ:18/11/2017 ರಂದು ಸಾಯಂಕಾಲ 4:30 ಘಂಟೆ ಸುಮಾರಿಗೆ ನಮ್ಮ ಹೊಲ ಸರ್ವೇ ನಂ: 165 ನೇದ್ದರಲ್ಲಿ ಕೆಲಸ ಮಾಡುತ್ತಿದ್ದ ಎಂ.ವೀರಾಂಜನೇಯ ಯವರು ನನಗೆ ತಿಳಿಸಿದ್ದೇನೆಂದರೆ. ನೇಲೋಗಿಯಿಂದ ಸೋನ್ನ ಕ್ರಾಸ ಕಡೆಗೆ ಹೋಗುವ ಮಾರ್ಗದಲ್ಲಿ ನಮ್ಮ ಹೋಲದ ಬದಿಗೆ ಯಾವದೋ ಒಂದು ಅಪರಿಚಿತ ಶವ ಕಂಡು ಬಂದಿರುತ್ತದೆ ಅಂತ ತಿಳಿಸಿದ ಮೇರೆಗೆ ನಾನು ಹೋಲಕ್ಕೆ ಹೋಗಿ ನೋಡಲಾಗಿ ಒಂದು ಅಪರಚಿತ ಶವ ಸುಮಾರು ಅಂದಾಜು 25-30 ವರ್ಷದ ಗಂಡು ವ್ಯೆಕ್ತಿಯ ಶವ ಇತ್ತು . ನಾನು ಹಾಗೂ ಅಲ್ಲಿ ಕೆಲಸ ಮಾಡುತ್ತಿರುವ ವ್ಯೆಕ್ತಿಗಳು ಕೂಡಿ ಶವವನ್ನು ನೋಡಲಾಗಿ ದೇಹದ ಮೇಲೆ ಸಣ್ಣ ಪುಟ್ಟಗಾಯಗಳು ಕಂಡು ಬಂದಿರುತ್ತದೆ. ಬಲಗಣ್ಣಿನ ಮೇಲೆ ಬಲವಾಗಿ ಹೋಡೆದು ಗಾಯ ಮಾಡಿದ್ದು ಕಂಡು ಬಂದಿರುತ್ತದೆ. ಯಾವದೋ ಒಂದು ವಸ್ತುವಿನಿಂದ ಕುತ್ತಿಗೆಗೆ ಬಿಗಿದ್ದಿದ್ದು ಕುತ್ತಿಗೆ ಮೇಲೆ ಕಂದು ಬಣ್ಣದ ಗುರುತು ಕಂಡು ಬಂದಿರುತ್ತದೆ, ಮೈಮೇಲೆ ಅಲ್ಲಲ್ಲಿ ತರಚಿದ ಗಾಯಗಳು ಹಾಗೂ ಕಂದುಗಟ್ಟಿದ ಗಾಯಗಳು ಕಂಡು ಬಂದಿರುತ್ತದೆ, ಬಲ ಭುಜದ ಮೇಲೆ ಸೂರ್ಯನ ಆಕಾರಮಚ್ಚೆ ಗುರುತು ಇದ್ದು ಮದ್ಯದಲ್ಲಿ ಓಂ ಅಂತ ಹಣಚೆ ಬಟ್ಟು ಹಾಕಿದ್ದು ಇರುತ್ತದೆ. ಬಲಗೈ ಮೇಲೆ ಬಿರಾದಾರ ಅಂತ ಇಂಗ್ಲೀಷನಲ್ಲಿ ಹಣಚೆ ಬೋಟ್ಟು ಹಾಕಿದ್ದು ಅದೆ. ಎಡ ಭೂಜದ ಮೇಲೆ ಓಂ ಅದರ ಮೇಲೆ ಡಮರುಗದ ಹಣಚೆ ಬೋಟ್ಟು ಹಾಕಿದ್ದು ಇರುತ್ತದೆ. ಮೈಮೇಲೆ ಹಳದಿ ಬಣ್ಣದ ಟೀ ಶರ್ಟ ಹಾಗೂ ಭೂದಿ ಬಣ್ಣದ 1.4 ಭೋರ್ಮಡಾ ಧರಸಿದ್ದು ಇರುತ್ತದೆ,  ಮೃತ ದೇಹವನ್ನು ನೋಡಿದವರು ಯಾರೂ ಕೂಡಾ ಶವವನ್ನು ಗುರುತಿಸಿರುವದಿಲ್ಲಾ. ಯಾರೋ ದುಷ್ಕರ್ಮಿಗಳು ಯಾವದೋ ದುರುದ್ವೇಶದಿಂದ ಕೋಲೆ ಮಾಡಿ ಸಾಕ್ಷಿ ನಾಶ ಮಾಡುವ ಸಲುವಾಗಿ ಈ ಸ್ಥಳದಲ್ಲಿ ಮೃತ ದೇಹವನ್ನು ಎಸೆದು ಹೋಗಿರುತ್ತಾರೆ.ಸದರಿ ಘಟನೆಯು ದಿನಾಂಕ:18/11/2017 ಮದ್ಯ ರಾತ್ರಿಯಿಂದ ಇಲ್ಲಿಯವರೆಗೆ ಜರಗಿರಬಹುದು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಆಳಂದ ಠಾಣೆ : ಶ್ರೀಮತಿ ಪ್ರಭಾವತಿ ಗಂಡ ಶಂಕರ ಕಜಾಳೆ ಸಾ : ಪಡಸಾವಳಿ ತಾ : ಆಳಂದ ರವರ ಗಂಡ ಶಂಕರ ತಂದೆ ಬಾಬು ಕಾಜಳೆ ಇವರು ಇಂದು ದಿನಾಂಕ 18/11/2017 ರಂದು ಬೆಳಿಗ್ಗೆ ಉಮರ್ಗಾ ತಾಲೂಕಿನ ಸಾವಳೇಶ್ವರ್ ಗ್ರಾಮದಲ್ಲಿರುವ ಅಕ್ಕಳಾದ ಸುಭಾಬಾಯಿ ಹತ್ತಿರ ಹೋಗಿ ಬರುತ್ತೆನೆ ಅಂತಾ ಹೇಳಿ ನಮ್ಮ ಮೋಟಾರ ಸೈಕಲ್ ನಂಬರ ಕೆಎ 32 ಇಜಿ 2069 ನೆದ್ದರ ಮೇಲೆ ಕುಳಿತು ಚಾಲು ಮಾಡಿಕೊಂಡು ಮನೆಯಿಂದ ಹೋದರು ಬೆಳಿಗ್ಗೆ 9.30 ಗಂಟೆಯ ಸುಮಾರಿಗೆ ನಮ್ಮ ಅಳಿಯ ಶ್ರೀಶೈಲ್ ಘಾಳೆ ಇವರು ಬಂದು ನನಗೆ ವಿಷಯ ತಿಳಿಸಿದ್ದೆನೆಂದರೆ ತಡೋಳಾ ಗ್ರಾಮದ ಪರಿಚಯದ ಬಾಬುರಾವ ತಂದೆ ಉದ್ದರವರಾವ ಪಾಟೀಲ್ ಇವರು ನನಗೆ ಫೋನ್ ಮಾಡಿ ಮಾಮನಾದ ಶಂಕರ ಕಾಜಳೆ ಇವರು ಮೋಟಾರ ಸೈಕಲ್ ಮೇಲೆ ತಡೋಲಾ ಗ್ರಾಮದ ಸರಕಾರಿ ಪ್ರೌಢ ಶಾಲೆ ಹತ್ತಿರ ರೋಡಿನಲ್ಲಿ ಅವರ ಎದುರುಗಡೆಯಿಂದ ಖಜೂರಿ ಬಾರಡರ ಕಡೆಯಿಂದ ಒಂದು ಮೋಟಾರ ಸೈಕಲ್ ನಂ ಎಮ್‌ಹೆಚ್‌ 06 ಎಜೆ 4269 ನೇದ್ದರ ಸವಾರನು ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಮಾಮಾನ ಮೋಟರ ಸೈಕಲಗೆ ಡಿಕ್ಕಿ ಪಡಿಸಿದ್ದರಿಂದ ಕೆಳಗೆ ಬಿದ್ದು ಮಾಮಾನ ಹಣೆಗೆ ತಲೆಗೆ ಗದ್ದಕ್ಕೆ ಮತ್ತು ಎಡಗೈ ಮುಂಗೈಗೆ ಭಾರಿ ರಕ್ತ ಮತ್ತು ಗುಪ್ತ ಗಾಯಗಳಾಗಿರುತ್ತವೆ, ಡಿಕ್ಕಿ ಪಡಿಸಿದವನಿಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ, ಡಿಕ್ಕಿಪಡಿಸಿದವನ ಹೆಸರು ವಿಚಾರಿಸಲಾಗಿ ನಾರಾಯಣ ತಂದೆ ರಾಮ ವಾಗಮೋಡೆ ಸಾ : ಕುನ್ನಳ್ಳಿ ತಾ : ಉಮರಗಾ ಜಿ : ಉಸ್ಮಾನಾಬಾದ ಅಂತಾ ತಿಳಿದು ಬಂದಿರುತ್ತದೆ, ಅಂತಾ ತಿಳಿಸಿದ್ದು ಆಗ ನಾನು ಗಾಬರಿಯಾಗಿ ನಮ್ಮ ಅಳಿಯ ಶ್ರೀಶೈಲ್ ಘಾಳೆ ಹಾಗೂ ನಮ್ಮೂರಿನ ಮಹಿಬೂಬ ಗುಂಜೋಟಿ, ಮತ್ತು ಇಮಾಮ ಶೇಕ್, ಹಾಗೂ ಇತರರೊಂದಿಗೆ ಒಂದು ಖಾಸಗಿ ವಾಹನದಲ್ಲಿ ಅಪಘಾತ ನಡೆದ ಸ್ಥಳಕ್ಕೆ ಹೋಗಿ ನೋಡಲಾಗಿ ವಿಷಯ ನಿಜವಿದ್ದು ನನ್ನ ಗಂಡನಿಗೆ ಹಣೆಗೆ ತಲೆಗೆ ಗದ್ದಕ್ಕೆ ಮತ್ತು ಎಡಗೈ ಮುಂಗೈಗೆ ಹಾಗೂ ಇತರ ಕಡೆಗೆ ಭಾರಿ ರಕ್ತ ಮತ್ತು  ಗುಪ್ತ ಗಾಯಗಳಾಗಿದ್ದು ನಾವೆಲ್ಲರೂ ಕೂಡಿ ನನ್ನ ಗಂಡನಿಗೆ ಎತ್ತಿ ನಮ್ಮ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಉಮರ್ಗಾ ದವಾಖಾನೆಗೆ ತೆಗೆದುಕೊಂಡು ಹೋಗುತ್ತಿರುವಾಗ ಉಮರ್ಗಾ ಹತ್ತಿರ ನನ್ನ ಗಂಡ ಶಂಕರ ಕಾಜಳೆ ಇವರು ಅಪಘಾತದಲ್ಲಿ ಹೊಂದಿದ ಗಾಯದಿಂದ ಮೃತಪಟ್ಟಿದ್ದು ಇರುತ್ತದೆ,  ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಲಿಗೆ ಪ್ರಕರಣ :
ಜೇವರಗಿ ಠಾಣೆ :  ಶ್ರೀ ಸಿದ್ದನಗೌಡ ತಂದೆ ಬಸವಂತರಾಯ ಮಾಲಿ ಪಾಟೀಲ ಸಾ|| ಚನ್ನೂರ ಹಾ:ವ: ಓಂ ನಗರ ಜೇವರಗಿ ಇವರು ಠಾಣೆಗೆ ಜೇವರಗಿ ಎಸ್.ಬಿ.ಹೆಚ್ (ಎಸ್.ಬಿ.ಐ) ಬ್ಯಾಂಕನಲ್ಲಿ ನನ್ನ ಹೆಸರಿನಿಂದ ಬ್ಯಾಂಕ ಖಾತೆ ನಂ 62291009973 ನೇದ್ದು ಇರುತ್ತದೆ.  ನಾನು ಇಂದು ದಿನಾಂಕ 18.11.2017 ರಂದು ಮುಂಜಾನೆ ಮನೆಯಿಂದ ಹಣ ಡ್ರಾಮಾಡಿಕೊಂಡು ಬರಲು ಬ್ಯಾಂಕಿಗೆ  ಬಂದು ಜೇವರಗಿ ಎಸ್.ಬಿ.ಹೆಚ್ (ಎಸ್.ಬಿ.ಐ) ಬ್ಯಾಂಕನಲ್ಲಿ ಮೇಲೆ ನಮೂದಿಸಿದ ನನ್ನ ಖಾತೆಯಿಂದ ಒಟ್ಟು 80,000/- ( ಎಂಭತ್ತು ಸಾವಿರ ರೂಪಾಯಿ) ಹಣ ಡ್ರಾ ಮಾಡಿಕೊಂಡು ಹಣವನ್ನು ಒಂದು ಪ್ಲಾಸ್ಟೀಕ್ ಕೈ ಚೀಲದಲ್ಲಿ ಹಾಕಿಕೊಂಡು ನನ್ನ ಕೈಯಲ್ಲಿ ಹಿಡಿದುಕೊಂಡು ಬ್ಯಾಂಕಿನಿಂದ ಹೊರಗೆ ಬಂದು,  ಮನೆಗೆ ಹೋಗಲು ನಡೆದುಕೊಂಡು ರೊಡಿನಲ್ಲಿ ಬರುತ್ತಿದ್ದೆನು, ಮುಂಜಾನೆ 11.45 ಗಂಟೆಯ ಸುಮಾರಿಗೆ ಜೇವರಗಿ ಪಟ್ಟಣದ ಹಳೆಯ ಬಿ.ಇ.ಓ ಕಚೇರಿಯ ಹತ್ತಿರ ರೋಡಿನಲ್ಲಿ ನಡೆದುಕೊಂಡು ಬರುತ್ತಿದ್ದಾಗ ಅದೇ ವೇಳೆಗೆ ನನ್ನ ಎದುರಿನಿಂದ ಒಂದು ಕಪ್ಪು ಬಣ್ಣದ ಅಪ್ಪಾಚಿ ಮೊಟಾರ್ ಸೈಕಲ ಮೇಲೆ ಇಬ್ಬರು ಅಪರಿಚಿತ ವ್ಯಕ್ತಿಗಳು ಅಂದಾಜು 25-30 ವರ್ಷ ವಯಸ್ಸಿನವರು ಕುಳಿತುಕೊಂಡು ಬಂದು ನನ್ನ ಕೈಯಲ್ಲಿನ ಹಣ ಇದ್ದ ಪ್ಲಾಷ್ಟೀಕ ಕೈ ಚೀಲ ಹಣ ಸಮೇತ ಜಬರದಸ್ತಿಯಿಂದ ಕಸಿದುಕೊಂಡು ಹೋದರು, ನಾನು ಚಿರ್ಯಾಡುತ್ತಾ ಅವರ ಹಿಂದೆ ಬೇನ್ನು ಹತ್ತಿದ್ದರು ಅವರು ಸಿಕ್ಕಿರುವುದಿಲ್ಲಾ, ಅವರು ತಮ್ಮ ಮೊಟಾರ್ ಸೈಕಲನ್ನು ಜೊರಾಗಿ ನಡೆಯಿಸಿಕೊಂಡು ಹೋದರು ಮೊಟಾರ್ ಸೈಕಲ್ ನಂಬರ ಗುರುತು ಸಿಕ್ಕಿರುವುದಿಲ್ಲಾ. &  ಮೊಟಾರ್ ಸೈಕಲ ನಡೆಯಿಸುತ್ತಿದ್ದವನ ಬಟ್ಟೆಗಳು ಸರಿಯಾಗಿ ಕಂಡಿರುವುದಿಲ್ಲಾ ಅವನು ಕನ್ನಡಕ ಹಾಕಿಕೊಂಡಿದನು,  ಹಿಂದೆ ಕುಳಿತವನು ಬಿಳಿ ಬಣ್ಣದ ಪೂಲ್ ಶರ್ಟ, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದನು. ನಂತರ ನಾನು ನನ್ನ ಗೆಳೆಯರಾದ ನಾಡಗೌಡ ತಂದೆ ಅಪ್ಪಾಸಾಹೇಬಗೌಡ ಮಾಲಿ ಪಾಟೀಲ, ಭೀಮರಾಯ ತಂದೆ ಮಲ್ಲಪ್ಪ ಸೂರಪೂರ ಇವರನ್ನು ಬರಮಾಡಿಕೊಂಡು ಜೇವರಗಿ ಪಟ್ಟಣದಲ್ಲಿ ಹುಡುಕಾಡಿದರು ಸಿಕ್ಕಿರುವುದಿಲ್ಲಾ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.