ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 11-02-2021
ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 05/2021, ಕಲಂ. 454, 457, 380 ಐಪಿಸಿ :-
ದಿನಾಂಕ 09-02-2020 ರಂದು ರಾತ್ರಿ ವೇಳೆಯಲ್ಲಿ ಯಾರೋ ಅಪರಿಚಿತ ಕಳ್ಳರು ಮಂಗಲಪೇಟದಲ್ಲಿರುವ ಮಡಿವಾಳೇಶ್ವರ ಮಂದಿರದಲ್ಲಿರುವ ಹುಂಡಿಯನ್ನು ಕಳುವು ಮಾಡಿಕೊಂಡು ಸರಕಾರಿ ಹಿರಿಯ ಪ್ರಾಥಮೀಕ ಶಾಲೆ ಮಂಗಲಪೇಟ ಆವರಣದಲ್ಲಿ ಹೋಗಿ ದಾನದ ಪೆಟ್ಟಿಗೆಯ ಕೀಲಿ ಮುರಿದು ಅದರಲ್ಲಿಯ ಒಟ್ಟು ಅಂದಾಜು 10 ರಿಂದ 12 ಸಾವಿರ ರೂಪಾಯಿಗಳು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಫಿರ್ಯಾದಿ ವೀರಯ್ಯಾ ಸ್ವಾಮಿ ತಂದೆ ಮಹಾರುದ್ರಪ್ಪಾ ವಯ: 76 ವರ್ಷ, ಸಾ: ಮಂಗಲಪೇಟ್ ಬೀದರ ರವರು ನೀಡಿದ ದೂರಿನ ಮೇರೆಗೆ ದಿನಾಂಕ 10-02-2021 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ ನೂತನ ನಗರ ಠಾಣೆ ಅಪರಾಧ ಸಂ. 12/2021, ಕಲಂ. 457, 380 ಐಪಿಸಿ :-
ದಿನಾಂಕ 09-02-2021 ರಂದು 1930 ಗಂಟೆಗೆ ಫಿರ್ಯಾದಿ ಅಂಬುಜಾ ಗಂಡ ಮಹೇಂದ್ರ ದೇಶಪಾಂಡೆ ವಯ: 48 ವರ್ಷ, ಜಾತಿ: ಬ್ರಾಹ್ಮಣ, ಸಾ: ಮಾಧವ ನಗರ ಬೀದರ ರವರು ತಮ್ಮ ಮನೆಯ ಬಾಗಿಲುಗಳನ್ನು ಮುಚ್ಚಿ ಬೀಗ ಹಾಕಿ ವಾಯುವಿಹಾರಕ್ಕೆಂದು ಹೋದಾಗ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿಯವರ ಮನೆಯ ಹಿಂದಿನ ಬಾಗಿಲಿನಿಂದ ಒಳಗೆ ಪ್ರವೇಶ ಮಾಡಿ ಮನೆಯಲ್ಲಿನ 1) 50 ಗ್ರಾಂ. ಬಂಗಾರದ ಗಂಠನ ಸರ 5 ತೊಲೆ ಅ.ಕಿ 2,00,000/- ರೂ., 2) 50 ಗ್ರಾಂ. ಬಂಗಾರದ ಪಾಟಲಿ ಅ.ಕಿ 2,00,000/- ರೂ., 3) 30 ಗ್ರಾಂ. ಬಂಗಾರದ ರಾಣಿ ಸರ ಅ.ಕಿ 1,20,000/- ರೂ., 4) 30 ಗ್ರಾಂ. ಬಂಗಾರದ ಮೊಹನ ಹಾರ ಅ.ಕಿ 1,20,000/- ರೂ., 5) 4 ಗ್ರಾಂ ಬಂಗಾರದ ಮುತ್ತಿನ ಹಾರ ಅ.ಕಿ 16,000/- ರೂ. 6) 5 ಗ್ರಾಂ. ಬಂಗಾರದ ಉಂಗುರ ಅ.ಕಿ 20,000/- ರೂ. ಹೀಗೆ ಒಟ್ಟು 169 ಗ್ರಾಂ ತೂಕದ ಬಂಗಾರದ ಆಭರಣಗಳು ಅ.ಕಿ. 6,76,000/- ರೂ. ಬೆಲೆಬಾಳುವದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 10-02-2021 ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.