Police Bhavan Kalaburagi

Police Bhavan Kalaburagi

Saturday, September 5, 2020

BIDAR DISTRICT DAILY CRIME UPDATE 05-09-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 05-09-2020

 

ಬಗದಲ ಪೊಲೀಸ ಠಾಣೆ ಅಪರಾಧ ಸಂ. 60/2020, ಕಲಂ. 379 ಐಪಿಸಿ :-

ದಿನಾಂಕ 03-09-2020 ರಂದು 2200 ಗಂಟೆಯಿಂದ  ದಿನಾಂಕ 04-09-2020 ರಂದು 0500 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ನಿಸ್ಸಾರ್ ಅಹ್ಮದ ತಂದೆ ಮಕ್ಬುಲ ಸಾಬ ಜಮಾದಾರ ವಯ: 58 ವರ್ಷ, ಜಾತಿ: ಮುಸ್ಲಿಂ, ಸಾ: ನೇಲವಾಡ, ತಾ: ಭಾಲ್ಕಿ ರವರ ಜಮೀನಿನಲ್ಲಿದ್ದ ಬಾವಿಯ ಒರಿಯಂಟ್ ಕಂಪನಿಯ 5 ಎಚ್.ಪಿ ನೀರಿನ ಮೊಟಾರ ಅ.ಕಿ 14,200/- ರೂ. ನೇದನ್ನು ಕಳವು ಮಾಡಿಕೊಂಡು ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 73/2020, ಕಲಂ. 379 ಐಪಿಸಿ :-

ದಿನಾಂಕ 27-08-2020 ರಂದು ಫಿರ್ಯಾದಿ ಕೇದಾರ ತಂದೆ ಲಕ್ಷ್ಮಣ ಕುಂಬಾರ ವಯ: 22 ವರ್ಷ, ಜಾತಿ: ಕುಂಬಾರ, ಸಾ: ಮುಚಳಂಬ ರವರು ತನ್ನ ಅಣ್ಣ ನಾಗಶೆಟ್ಟಿ ರವರ ಜೊತೆಯಲ್ಲಿ ರು ಪೀರ ದರ್ಗಾಕ್ಕೆ ದೇವರ ದರ್ಶನಕ್ಕೆ ತಮ್ಮ ಪಲ್ಸರ 150 ಸಿಸಿ ಮೋಟಾರ ಸೈಕಲ ನಂ. ಕೆಎ-56/ಜೆ-0856 ನೇದರ ಮೇಲೆ ಹೋಗಿ ಮುಚಳಂಬ ಗ್ರಾಮದ ದರ್ಗಾದ ಹತ್ತಿರ ವಾಹನ ನಿಲ್ಲಿಸಿ ದರ್ಶನಕ್ಕೆ ಹೋಗಿ ಮರಳಿ ಬಂದಾಗ ಫಿರ್ಯಾದಿಯು ನಿಲ್ಲಿಸಿದ ಜಾಗದಲ್ಲಿ ಸದರಿ ಮೋಟಾರ ಸೈಕಲ ಇರಲಿಲ್ಲ, ಯಾರೋ ಅಪರಿಚೀತ ಕಳ್ಳರು ಸದರಿ ವಾಹನವನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 04-09-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ನೂತನ ನಗರ ಠಾಣೆ ಅಪರಾಧ ಸಂ. 102/2020, ಕಲಂ. 379 ಐಪಿಸಿ :-

ದಿನಾಂಕ 16-08-2020 ರಂದು 1400 ಗಂಟೆಯಿಂದ 2200 ಗಂಟೆಯ ಅವಧಿಯಲ್ಲಿ ಕೊಳಾರ ಕೈಗಾರಿಕಾ ಪ್ರದೇಶದ ತಾಳಂಪಳ್ಳಿ ರಬ್ಬರ ಪ್ರೈವೇಟ ಲಿಮಿಟೆಡ ಕಂಪನಿಯ ಮುಂದೆ ಫಿರ್ಯಾದಿ ವಿಜಯಕುಮಾರ ತಂದೆ ಅಶೋಕ ವಯ: 23 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಬಗದಲ, ತಾ: ಬೀದರ ರವರು ನಿಲ್ಲಿಸಿದ ತನ್ನ ಹೊಂಡಾ ಡಿಯೊ ಸ್ಕೂಟರ್ ನಂ. ಕೆಎ-05/ಇ.ಡಿ-3090, ಚಾಸಿಸ್ ನಂ. ಎಂ.ಇ.4.ಜೆ.ಎಫ್.39.ಹೆಚ್.ಎಫ್.ಕೆ.ಡಬ್ಲು.008191, ಇಂಜಿನ್ ನಂ. ಜೆ.ಎಫ್.39.ಇ.ಡಬ್ಲು.0021769, ಮಾಡಲ್ 2009 ಹಾಗೂ ಬಣ್ಣ: ಕಿತ್ತಳೆ ಬಣ್ಣ ನೇದನ್ನು ಯಾರೋ ಅಪರಿಚಿ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 04-09-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿಗಂಜ ಪೊಲೀಸ ಠಾಣೆ ಬೀದರ ಅಪರಾಧ ಸಂ. 134/2020, ಕಲಂ. 392 ಐಪಿಸಿ :-

ದಿನಾಂಕ 04-09-2020 ರಂದು 1700 ಗಂಟೆಗೆ ಫಿರ್ಯಾದಿ ಸಂಗಮ್ಮಾ ಗಂಡ ಪ್ರಭಾಕರ ಅಣೆಪ್ಪನೋರ ವಯ: 65 ವರ್ಷ, ಜಾತಿ: ಲಿಂಗಾಯತ, ಸಾ: ಮನೆ ನಂ. 9-8-83/1 ಬಸವ ನಗರ ಬೀದರ ರವರು ತಮ್ಮ ಮನೆಯಿಂದ ತನ್ನ ತಾಯಿ ಮನೆ ವಿದ್ಯಾನಗರ ಕಾಲೋನಿಗೆ ಹೋಗಿ ಅವರೊಂದಿಗೆ ಮಾತನಾಡಿಕೊಂಡು ಮರಳಿ 1900 ಗಂಟೆ ಸುಮಾರಿಗೆ ಬಸವ ನಗರದ ಹನುಮಾನ ಮಂದಿರ ಹತ್ತಿರದಿಂದ ಮ್ಮ ಮನೆಗೆ ಹೋಗುತ್ತಿರುವಾಗ ಅವರ ಹಿಂದಿನಿಂದ ಅಂದಾಜು 20-25 ವರ್ಷ ವಯಸ್ಸಿನ ಇಬ್ಬರೂ ಒಂದು ಮೋಟಾರ ಸೈಕಲ್ ಮೇಲೆ ಬಂದು ಫಿರ್ಯಾದಿಯ ಮುಂದೆ ಬಂದು ಅವರಲ್ಲಿ ಮೋಟಾರ ಸೈಕಲ್ ಮೇಲೆ ಹಿಂದೆ ಕುಳಿತ ವ್ಯಕ್ತಿ ಫಿರ್ಯಾದಿಯ ಕೊರಳಿನಲ್ಲಿದ್ದ 25 ಗ್ರಾಂ. ಬಂಗಾರದ ನಾನ್ .ಕಿ 1 ಲಕ್ಷ ರೂ. ಬೆಲೆವುಳ್ಳದ್ದು ಕಿತ್ತುಕೊಂಡು ಮೋಟಾರ ಸೈಕಲ್ ಓಡಿಸಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಗದಲ ಪೊಲೀಸ್ ಠಾಣೆ ಅಪರಾಧ ಸಂ. 61/2020, ಕಲಂ. 279, 337, 338, 304() ಐಪಿಸಿ :-

ದಿನಾಂಕ 04-09-2020 ರಂದು ಫಿರ್ಯಾದಿ ಪ್ರದೀಪ ತಂದೆ ಶಂಕರ ದೊಡ್ಡಮನಿ  ವಯ: 19 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಮಿರಾಗಂಜ್ (ಕಬಿರವಾಡ-ಸಿಪ್ಪಲಗೆರಿ), ತಾ: ಜಿ: ಬೀದರ ರವರು ತಮ್ಮೂರಿನಿಂದ ಮನ್ನಾಏಖೇಳ್ಳಿ ಕಡೆಗೆ ಮ್ಮೂರ ಅಂಕುಶ ತಂದೆ ಸಂಭಾಜಿ ಕೆ.ದೊಡ್ಡಿ ವಯ: ಸುಮಾರು 22 ವರ್ಷ, ಜಾತಿ: ಎಸ್.ಸಿ ಹೊಲಿಯಾ ಇಬ್ಬರೂ ಕೂಡಿಕೊಂಡು ಅಂಕುಶ ಇತನ ಮೊಟರ ಸೈಕಲ್ ನಂ. ಕೆಎ-38/ವಿ-4622 ನೇದ್ದರ ಮೇಲೆ ಹೋಗಿ ಕೆಲಸ ಮುಸಿಕೊಂಡು ಮರಳಿ ತಮ್ಮೂರಿಗೆ ಬರುತ್ತಿರುವಾಗ ಬಗದಲ-ಬೀದರ ರೋಡಿನ ಮೇಲೆ ಮರ್ಜಾಪೂರ (ಎಂ) ಕ್ರಾಸ ಹತ್ತಿರ ಸ್ವಲ್ಪ ಇಳಿಜಾರು ಇದ್ದ ರೋಡಿನ ಮೇಲೆ ಎದುರಗಡೆಯಿಂದ ಅಂದರೆ ಬೀದರ ಕಡೆಯಿಂದ ಬಗದಲ ಕಡೆಗೆ ಬರುತ್ತಿರುವ ಮೊಟರ ಸೈಕಲ್ ನಂ. ಕೆಎ-38/ಆರ್-7695 ನೇದ್ದರ ಚಾಲಕನಾದ ಆರೋಪಿ ರಾಜು ತಂದೆ ಸಂಬಣ್ಣಾ ಹಿಜ್ಜಿ ವಯ: 31 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಸಿರ್ಸಿ () ಗ್ರಾಮ ಇತನು ಸಹ ತನ್ನ ಹಿಂದೆ ಮತ್ತೊಬ್ಬನಿಗೆ ಕೂಡಿಸಿಕೊಂಡು ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಕಂಟ್ರೋಲ್ ಮಾಡದೇ ಫಿರ್ಯಾದಿ ಕುಳಿತು ಬರುತ್ತಿರುವ ಮೊಟರ ಸೈಕಲಗೆ ಜೋರಾಗಿ ಡಿಕ್ಕಿ ಮಾಡಿದ್ದು, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಬಲಗಣ್ಣಿನ ಹುಬ್ಬಿನ ಕೆಳಗೆ ತರಚಿದ ರಕ್ತಗಾಯ, ಬಲಗೈ ಮುಂಗೈ ಮೇಲೆ ತರಚಿದ ರಕ್ತಗಾಯ, ಎಡಗಡೆ ಡೊಕ್ಕೆಯಲ್ಲಿ ಮತ್ತು ಡಗಾಲು ಹೆಬ್ಬೇರಳಿನ ಮೇಲ್ಭಾಗದಲ್ಲಿ ತರಚಿದ ರಕ್ತಗಾಯ ಮತ್ತು ಬಲಗೈ ಮೊಳಕೈ ಹತ್ತಿರ ತರಚಿದ ರಕ್ತಗಾಯಗಳಾಗಿರುತ್ತವೆ ಮತ್ತು ಅಂಕೂಶನಿಗೆ ಗಟಾಯಿಗೆ ಹರಿದ ಭಾರಿ ರಕ್ತಗಾಯವಾಗಿ ದವಡೆ ಎಲಬುಗಳು ಮುರಿದಂತೆ ಕಂಡು ಬಂದಿದ್ದು, ಬಲಗಡೆ ಹಣೆಯ ಮೇಲೆ ತರಚಿದ ರಕ್ತಗಾಯ, ಎಡಪಾದದ ಮೇಲೆ ಹರಿದ ರಕ್ತಗಾಯ, ಡಗಡೆ ತಲೆಯಲ್ಲಿ ಭಾರಿ ಒಳಪೆಟ್ಟಾಗಿ ಬುಗಟಿ ಬಂದು ತಲೆಯಲ್ಲಿ ಭಾರಿ ಒಳಪೆಟ್ಟಾಗಿ ಎರಡು ಕಿವಿಗಳಿಂದ ರಕ್ತ ಸ್ರಾವವಾಗಿ ಘಟನಾ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಮತ್ತು ಆರೋಪಿತನ ಹಿಂದುಗಡೆ ಕುಳಿತ ವ್ಯಕ್ತಿ ಚಂದ್ರಕಾಂತ ತಂದೆ ಅರ್ಜುನ ಹಿಜ್ಜಿ ವಯ: 32 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಸಿರ್ಸಿ() ಗ್ರಾಮ ಇತನಿಗೆ ಹಾಗೂ ಆರೋಪಿಗೂ ಸಹ ಭಾರಿ ಮತ್ತು ರಕ್ತಗಾಯಗಳಾಗಿರುತ್ತವೆ, ನಂತರ ಅಲ್ಲಿ ನೇರೆದ ಹಾದಿ ಹೋಕರು 108 ಅಂಬುಲೇನ್ಸಗೆ ಕರೆಯಿಸಿದ್ದು ಅದರಲ್ಲಿ ಎಲ್ಲರೂ ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆ ಬಂದು ಚಿಕಿತ್ಸೆ ಕುರಿತು ದಾಖಲಾಗಿದ್ದು ಇರುತ್ತದೆ ಅಂತ ಫಿರ್ಯಾದಿಯವರ ದೂರಿನ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 57/2020, ಕಲಂ. 279, 338 ಐಪಿಸಿ :-

ದಿನಾಂಕ 04-09-2020 ರಂದು ಫಿರ್ಯಾದಿ ಸಿರಾಜ್ ಖಾನ್ ತಂದೆ ಸತ್ತಾರಖಾನ್ ಪಠಾಣ ವಯ: 45 ವರ್ಷ, ಜಾತಿ: ಮುಸ್ಲಿಂ, ಸಾ: ರಾಜೇಶ್ವರ, ತಾ: ಬಸವಕಲ್ಯಾಣ ರವರು ತನ್ನ ಮಗನಾದ ಸತ್ತಾರಖಾನ ತಂದೆ ಸಿರಾಜಖಾನ್ ವಯ: 18 ವರ್ಷ ಇಬ್ಬರೂ ಕೂಡಿ ತನ್ನ ಮೋಟಾರ ಸೈಕಲ ನಂ. ಕೆಎ-56/ಹೆಚ್-7306 ನೇದ್ದರ ಮೇಲೆ ಬಸವಕಲ್ಯಾಣ ಬಂಗ್ಲಾ ಸರ್ವಿಸ್ ರೋಡ ಮುಖಾಂತರ ಆಟೋ ನಗರದ ಕಡೆಗೆ ಹೋಗುತ್ತಿರುವಾಗ ರಾ.ಹೆ ನಂ. 65 ರೋಡಿನ ಬಂಗ್ಲಾ ಬ್ರೀಡ್ಜ ಕಡೆಯಿಂದ ಸರ್ವಿಸ್ ರೋಡ ಮೂಖಾಂತರ ಹೋಗಿ ಆಟೋ ನಗರದಲ್ಲಿ ಹೋಗಲು ಅಗ್ನಿ ಶಾಮಕ ಠಾಣೆ ಹತ್ತಿರ ಎಡಗಡೆ ಇಂಡಿಕೇಟರ್ ಹಾಕಿ ಎಡಕ್ಕೆ ತಿರುಗಿಸಿಕೊಂಡಾಗ ಹಿಂದಿನಿಂದ ಒಂದು ಟಟಾ ಮ್ಯಾಜಿಕ ವಾಹನಸಂ. ಕೆಎ-53/ಸಿ-0946 ನೇದ್ದರ ಚಾಲಕನಾದ ಆರೋಪಿ ರಾಜಪ್ಪ ತಂದೆ ಬಸಪ್ಪ ಸಿಂಧೆ, ವಯ: 32 ವರ್ಷ, ಸಾ: ಮೊಳಕೇರಾ, ತಾ: ಹುಮನಾಬಾದ ಇತನು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯವರ ಮೋಟಾರ ಸೈಕಲನ ಹಿಂಭಾಗಕ್ಕೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಗೆ ಎಡಗಡೆ ಹಣೆಗೆ ರಕ್ತಗಾಯ, ಬೆನ್ನಿನಲ್ಲಿ ಗುಪ್ತಗಾಯ ಹಾಗೂ ಎಡಭುಜಕ್ಕೆ ತರಚಿದ ರಕ್ತಗಾಯವಾಗಿರುತ್ತದೆ ಹಾಗೂ ಮೋಟಾರ ಸೈಕಲ ಹಿಂದ ಕುಳಿತ ಫಿರ್ಯಾದಿಯ ಮಗನಿಗೆ ಎಡಗಾಲು ರೊಂಡಿಗೆ ಭಾರಿ ಗುಪ್ತಗಾಯ ಹಾಗೂ ಮುಖದ ಮೇಲೆ ಅಲ್ಲಲ್ಲಿ ತರಚಿದ ರಕ್ತಗಾಯವಾಗಿರುತ್ತದೆ, ಡಿಕ್ಕಿ ಮಾಡಿದ ವಾಹನದಲ್ಲಿ ಕುಳಿತ ಮಲ್ಲಿಶಾಂತ ತಂದೆ ನರಸಪ್ಪ ನಾಗೂರ, ವಯ: 50 ವರ್ಷ, ಸಾ: ಪಂಡರಗೇರಾ ಇತನ ಬೆನ್ನಿನಲ್ಲಿ ಗುಪ್ತಗಾಯವಾಗಿರುತ್ತದೆ, ನಂತರ ಗಾಯಗೊಂಡ ಎಲ್ಲರಿಗೂ ಅಲ್ಲಿ ಸೇರಿದ ಜನರು 108 ಅಂಬುಲೇನ್ಸ ಕರೆಯಿಸಿ ಅದರಲ್ಲಿ ಹಾಕಿ ಚಿಕಿತ್ಸೆ ಕುರಿತು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ನಗರ ಪೊಲೀಸ ಠಾಣೆ ಅಪರಾಧ ಸಂ. 85/2020, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 04-09-2020 ರಂದು ಬೀದರ ನಗರದ ಬಾಗವಾನ ಗಲ್ಲಿ ಕ್ರಾಸ ಹತ್ತಿರ ರಾವ ತಾಲಿಮ ಓಣಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಹೊಗಿ ಬರುವ ಜನರಿಗೆ ಕರೆದು ತನ್ನ ಹತ್ತಿರ ಮಟಕಾ ಜೂಜಾಟ ಆಡಿದರೆ ಒಂದು ರೂಪಾಯಿಗೆ 90/- ರೂ. ಕೊಡುತ್ತೇನೆ ಅಂತ ಕರೆದು ಜನರಿಂದ ಹಣ ಪಡೆದು ಅಂಕಿ ಸಂಖ್ಯೆ ಬರೆದ ಚೀಟಿ ಬರೆದುಕೊಡುತ್ತಿದ್ದಾನೆಂದು ಸಿದ್ದಲಿಂಗ ಪಿ.ಎಸ್. (ಕಾ.ಸು) ಬೀದರ ನಗರ ಪೊಲೀಸ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಾಗವಾನ ಗಲ್ಲಿ ಕ್ರಾಸ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಅಲ್ಲಿ ಆರೋಪಿ ಮಿರ್ಜಾ ಅಸದ ಬೆಗ್ ತಂದೆ ಮಿರ್ಜಾ ನವಾಬ ಬೆಗ್ ವಯ: 47 ವರ್ಷ, ಜಾತಿ: ಮುಸ್ಲಿಂ, ಸಾ: ನೂರ ಖಾನ ತಾಲಿಮ ಬೀದರ ಇತನು ಸಾರ್ವಜನಿಕ ಸ್ಥಳದಲ್ಲಿ ನಿಂತು ಜನರಿಂದ ಹಣ ಪಡೆದು ಅಂಕಿ ಸಂಖ್ಯೆ ಬರೆದ ಚೀಟಿ ಬರೆದು ಕೊಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಸದರಿ ಆರೋಪಿತನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಗೆ ಹಿಡಿದು ಆತನ ಹತ್ತಿರದಿಂದ ಮಟಕಾ ಜೂಜಾಟದಲ್ಲಿ ತೊಡಗಿಸಿದ ನಗದು ಹಣ 750/- ರೂ ಮತ್ತು ಒಂದು ಬಾಲ ಪೆನ್ನು, 2 ಮಟಕಾ ಚೀಟಿ ಜಪ್ತಿ ಮಾಡಿಕೊಂಡು ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 111/2020, ಕಲಂ. 78(3) ಕೆ.ಪಿ ಕಾಯ್ದೆ :- 

ದಿನಾಂಕ 04-09-2020 ರಂದು ಬಸವಕಲ್ಯಾಣ ನಗರದ ಶಿವಾಜಿ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಗಳು ನಿಂತುಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 90/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾರೆಂದು ಸುನೀಲ್ ಕುಮಾರ ಪಿ.ಎಸ. [ಕಾ&ಸು] ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಸವಕಲ್ಯಾಣ ನಗರದ ಶಿವಾಜಿ ಚೌಕ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಅಲ್ಲಿ ಆರೋಪಿತರಾದ 1) ಆಕಾಶ ತಂದೆ ಅಶೋಕ ಹಂತಪ್ಪಾ ವಯ: 27 ವರ್ಷ, ಜಾತಿ: ಲಿಂಗಾಯತ, ಸಾ: ಶಿವಾಜಿ ಚೌಕ ಬಸವಕಲ್ಯಾಣ, 2) ಆಕಾಶ ತಂದೆ ಶಿವರಾಜ ಬಿರಾದಾರ ವಯ: 29 ವರ್ಷ, ಜಾತಿ: ಲಿಂಗಾಯತ, ಸಾ: ಧನ್ನೂರ(ಕೆ), ತಾ: ಬಸವಕಲ್ಯಾಣ ಹಾಗೂ 3) ಪವನಕುಮಾರ ತಂದೆ ಶಂಕರರಾವ ದಾಂಡಗೆ ವಯ: 29 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಸೀತಾ ಕಾಲೋನಿ ಬಸವಕಲ್ಯಾಣ ಇವರೆಲ್ಲರೂ ನಿಂತುಕೊಂಡು ಸಾರ್ವಜನಿಕರಿಗೆ ಒಂದು ರೂಪಾಯಿಗೆ  90/- ರೂ. ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುವುದನ್ನು ನೋಡಿ ಎಲ್ಲರೂ ಒಮ್ಮೇಲೆ ದಾಳಿ ಮಾಡಿ ಹಿಡಿದು ಅವರಿಂದ ಒಟ್ಟು ನಗದು ಹಣ 21,050/- ರೂ., 06 ಮಟಕಾ ಚೀಟಿ ಹಾಗೂ 3 ಬಾಲ್ ಪೆನ್ ನೇದವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 125/2020, ಕಲಂ. ಮನುಷ್ಯ ಕಾಣೆ (ಮಹಿಳೆ ಕಾಣೆ) :-

ಫಿರ್ಯಾದಿ ರತ್ನಮ್ಮಾ ಗಂಡ ನಾಗನಾಥ ಮಾಗೆ ವಯ: 55 ವರ್ಷ, ಜಾತಿ: ಕ್ರಿಶ್ಚಿಯನ, ಸಾ: ಹಜನಾಳ ರವರ ರವರ ಮಗಳಾದ ಚಂಪಮ್ಮಾ @ ಶಿಲ್ಪಾ ಇವಳು ಸುಮಾರು 7-8 ವರ್ಷದಿಂದ ಮಾನಸಿಕವಾಗಿ ಅಸ್ವಸ್ಥಳಾಗಿ ಬಳಲುತ್ತಿದ್ದುವಳಿಗೆ ಭಾಲ್ಕಿ, ಬೀದರ ಮುಂತಾದ ಕಡೆಗೆ ಚಿಕಿತ್ಸೆ ಕೊಡಿಸುತ್ತಾ ಬಂದಿದ್ದು ಇರುತ್ತದೆ, ಅವಳು ಮಾನಸಿಕ ಅಸ್ವಸ್ಥಳಾಗಿದ್ದರಿಂದ ಎರಡು ತಿಂಗಳ ಹಿಂದೆ ಚಂಪಮ್ಮಾ @ ಶಿಲ್ಪಾ ಮತ್ತುವಳ ಮೂರು ಜನ ಮಕ್ಕಳನ್ನು ಗಂಡನ ಮನೆ ಡೊಣಗಾಪೂರದಿಂದ ಹಜನಾಳಕ್ಕೆ ಕರೆದುಕೊಂಡು ಬಂದಿದ್ದು ಇರುತ್ತದೆ, ಹೀಗಿರುವಾಗ ದಿನಾಂಕ 01-09-2020 ರಂದು ಮಗಳಾದ ಚಂಪಮ್ಮಾ ಇವಳು ತಾನು ತನ್ನ ಗಂಡನ ಮನೆ ಡೊಣಗಾಪೂರಕ್ಕೆ ಹೋಗುತ್ತೇನೆ ಅಂತ ಫಿರ್ಯಾದಿಯವರ ಮನೆಯಿಂದ ಹೋಗಿದ್ದು ನಂತರ 2000 ಗಂಟೆಯ ಸುಮಾರಿಗೆ ಅಳಿಯನಾದ ಶಿವಕುಮಾರ ಇವರಿಗೆ ಮಗಳು ಬಂದಿರುವ ವಿಷಯ ಕೇಳಿದಾಗ ಅವರು ಬಂದಿರುವುದಿಲ್ಲ ಅಂತ ತಿಳಿಸಿರುತ್ತಾರೆ, ಮಗಳು ಫಿರ್ಯಾದಿಯವರ ಮನೆಯಿಂದ ತನ್ನ 3 ಜನ ಮಕ್ಕಳನ್ನು ಕರೆದುಕೊಂಡು   ಹೋದವಳು ಡೊಣಗಾಪೂರಕ್ಕೆ ಹೋಗದೇ ಮರಳಿ ಫಿರ್ಯಾದಿಯವರ ಮನೆಗೂ ಬಾರದೇ ಕಾಣೆಯಾಗಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 04-09-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.