ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ 01 :
ದಿನಾಂಕ
23.06.2019 ರಂದು ಸಾಯಂಕಾಲ 7-30 ಗಂಟೆ ಸುಮಾರಿಗೆ ಮೃತ ಶಿವಪ್ರಸಾದ ಇತನು ಯಡ್ರಾಮಿ ತಾಲ್ಲೂಕಿನಲ್ಲಿ ಬರುವ ಕಾಚಾಪೂರ ಗ್ರಾಮದಲ್ಲಿರುವ ತಮ್ಮ ಜಮೀನಕ್ಕೆ ಹೋಗಿ ವಾಪಸ್ಸ ಕಲಬುರಗಿಗೆ ಬರುವ ಕುರಿತು ಮೋಟಾರ ಸೈಕಲ ನಂ ಕೆಎ-32/ಇಆರ್-1387 ನೇದ್ದನ್ನು ಚಲಾಯಿಸಿಕೊಂಡು ಬರುವಾಗ ಕಲಬುರಗಿ ಜೇವರಗಿ ಮುಖ್ಯ ರಸ್ತೆಯ ಮೇಲೆ ಬರುವ ಫೀರೋಜಾಬಾದ ದರ್ಗಾ ಸಮೀಪ ರೋಡ ಮೇಲೆ ಕಾರ ನಂಬರ ಕೆಎ-32/ಪಿ-3346 ನೇದ್ದರ ಚಾಲಕನು ಕಲಬುರಗಿ ಕಡೆಯಿಂದ ಜೇವರಗಿ ಕಡೆಗೆ ಹೋಗುವ ಕುರಿತು ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ತನ್ನ ಮುಂದುಗಡೆ ಹೋಗುತ್ತೀರುವ ಒಂದು ಕಾರಿಗೆ ಓವರ ಟೆಕ್ ಮಾಡಿ ಎಡ ರೋಡಿನಿಂದ ಬಲ ರೋಡಿಗೆ ಬಂದು ಎದುರಿನಿಂದ ಶೀವಪ್ರಸಾದ ಇತನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಶಿವಪ್ರಸಾದ ಇತನಿಗೆ ಭಾರಿಗಾಯಗೊಳಿಸಿದ್ದಿಂದ ಶಿವಪ್ರಸಾದ ಇತನು ಘಟನೆ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಅಂತಾ ಶ್ರೀಮತಿ ಅನುಶ್ರೀ ಗಂಡ ಶಿವಪ್ರಸಾದ ಬಳಗಾನೂರ ಸಾ: ಮುದ್ದೆಬಿಹಾಳ ಹಾ.ವ. ಕುವೆಂಪು ನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಪೊಲೀಸ್ ಠಾಣೆ-01 ರ ಗುನ್ನೆ ನಂ 77/2019 ಕಲಂ 279, 304(ಎ) ಐ.ಪಿ.ಸಿ ಸಂ 187 ಐಎಮವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಆಳಂದ ಠಾಣೆ : ದಿನಾಂಕ.27/05/2019
ರಂದು ಬೇಳಗ್ಗೆ 08-00 ಗಂಟೆಯಿಂದ 10-00 ಗಂಟೆಯ ನಡುವಿನ ಅವಧಿಯಲ್ಲಿ ಅಪರಿಚಿತ ಅಂದಾಜು 30-35 ವಯಸ್ಸಿನ ಹುಚ್ಚ ಮನುಷ್ಯ ವಾಗ್ದರ್ಗಿ-ರಿಬ್ಬನಪಲ್ಲಿ ಮುಖ್ಯ ರಸ್ತೆಯ ಖಾನಾಪೂರ ಕ್ರಾಸ್ ಹತ್ತಿರ ರೋಡಿನ ಮೇಲಿಂದ ನಡೆದುಕೊಂಡು ಹೋಗುವಾಗ ಯಾವುದೋ ವಾಹನದ ಚಾಲಕ ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಡಿಕ್ಕಿಪಡಿಸಿ ಎಡಗಾಲಿನ ತೊಡೆಯ ಹತ್ತಿರ ಭಾರಿ ಗುಪ್ತಗಾಯವಾಗಿ ಕಾಲು ಮುರಿದಿದ್ದು ಅಲ್ಲಲ್ಲಿ ರಕ್ತಗಾಯವಾಗಿದ್ದರಿಂದ ಆತನಿಗೆ ಆಳಂದ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ನಂತರ ಹೆಚ್ಚಿನ ಉಪಚಾರ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆ ಕಲಬುರಗಿಗೆ ಸೇರಿಕೆ ಮಾಡಿದ್ದು ಸದರಿ ಹುಚ್ಚ ಮನುಷ್ಯ ಉಪಚಾರ ಫಲಕಾರಿಯಾಗದೇ ದಿನಾಂಕ.21/06/2019
ರಂದು ಬೇಳಗ್ಗೆ 11-15 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ಶ್ರೀ.ಶರಣಬಸಪ್ಪಾ
ತಂದೆ ವಿಶ್ವನಾಥ ಕಂಬಾರ ವಯಃ 23ವರ್ಷ ಜಾಃ ಕಂಬಾರ ಉಃಕಾರ ಪೇಂಟರ್ ಕೆಲಸ ಸಾಃನಾಗಲೇಗಾಂವ ತಾಃ ಆಳಂದ ಜಿಃ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆ ಗುನ್ನೆ ನಂ.122/2019
ಕಲಂ.279,338,304(ಎ) ಐಪಿಸಿ ಸಂಗಡ 187 ಐ.ಎಮ್.ವ್ಹಿ.ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಜೇವರಗಿ ಠಾಣೆ : ಶ್ರೀಮತಿ
ಮಾಲಾಶ್ರೀ
ಗಂಡ
ರಮೇಶ
ಜಾಧವ
ರವರ ಗಂಡ ರಮೇಶ ತಂದೆ ಹೊಬು ಜಾಧವ ರವರು ದಿನಾಂಕ ದಿನಾಂಕ 22.06.2019 ರಂದು ಸಾಯಂಕಾಲ ಬಿತ್ತನೆಗೆ ಹತ್ತಿ ಬೀಜ ಖರೀದಿ ಮಾಡಿಕೊಂಡು ಬರಲೆಂದು ಚಿಗರಳ್ಳಿ ಕ್ರಾಸ್ ಗೆ ಹೋಗಿರುತ್ತಾರೆ.ನಂತರ ರಾತ್ರಿ 8-30 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿ ಇದ್ದಾಗ ನನ್ನ ಗಂಡನ ಚಿಕ್ಕಪ್ಪನಾದ ಸೇವು ತಂದೆ ಚಂದು ನಾಯ್ಕ ಇವರು ನನಗೆ ಪೋನ ಮಾಡಿ ವಿಷಯ ತಿಳಿಸಿದ್ದೇನೆಂದರೆ, ಈಗ ಅರ್ದ ಗಂಟೆಯ ಹಿಂದೆ ಅಂದರೆ 8-00 ಪಿ.ಎಮ್ ಸುಮಾರಿಗೆ ಚಿಗರಳ್ಳಿ ಕ್ರಾಸ್ ಹತ್ತೀರ ರೋಡಿನಲ್ಲಿ ರಮೇಶನಿಗೆ ಒಂದು EICHER GOODS
ವಹಾನ
ಡಿಕ್ಕಿಯಾಗಿದ್ದರಿಂದ ತಲೆಗೆ ಭಾರಿ ರಕ್ತಗಾಯವಾಗಿರುತ್ತದೆ, ನಾನು ರಮೆಶನಿಗೆ ಅಂಬುಲೇನ್ಸ 108 ವಹಾನದಲ್ಲಿ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆ ಜೇವರಗಿಗೆ ತೆಗೆದುಕೊಂಡು ಹೋಗುತ್ತಿದ್ದೇನೆ. ನೀವು ಕೂಡಲೆ ಆಸ್ಪತ್ರೆಗೆ ಬನ್ನೀರಿ ಅಂತಾ ತಿಳಿಸಿದ್ದರಿಂದ ನಾನು ಗಾಬರಿಯಾಗಿ ನನ್ನ ಭಾವ ರೇವು ಇವರೊಂದಿಗೆ ಸರಕಾರಿ ಆಸ್ಪತ್ರೆ ಜೇವರಗಿಗೆ ಹೋಗಿ ನೋಡಲಾಗಿ ನನ್ನ ಗಂಡ ರಮೇಶ ಇತನಿಗೆ ತಲೆಗೆ ಭಾರಿ ರಕ್ತಗಾಯ ವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದನು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ.ನಂತರ ಅಲ್ಲಿಯೇ ಇದ್ದ ನನ್ನ ಚಿಕ್ಕ ಮಾವ ಸೇವು ಇವರಿಗೆ ಹೇಗಾಯಿತು ಅಂತಾ ವಿಚಾರಿಸಿದಾಗ ನಾವಿಬ್ಬರೂ ಚಿಗರಳ್ಳಿ ಕ್ರಾಸ್ ನಲ್ಲಿ ಹತ್ತಿ ಬೀಜ ಖರೀದಿ ಮಾಡಿಕೊಂಡು ಇನ್ನೇನು ನಮ್ಮೂರಿಗೆ ಹೋಗಲು ಬಸ್ಸಿಗಾಗಿ ಕಾಯುತ್ತಾ ಚಿಗರಳ್ಳಿ ಕ್ರಾಸ್ ನಲ್ಲಿ ರೋಡಿನ ಬದಿಯಲ್ಲಿ 8 ಪಿ.ಎಮ್ ಸುಮಾರಿಗೆ ನಿಂತಿರುವಾಗ ಇದೇ ವೇಳೇಗೆ ಶಹಾಪೂರ ಕಡೆಯಿಂದ ಒಂದು EICHER ಕಂಪನಿಯ GOODS ವಹಾನ ನಂ KA-36,
5310 ನೇದ್ದರ
ಚಾಲಕ
ಅತೀ
ವೇಗ
ಮತ್ತು
ಅಜಾಗುರಕತೆಯಿಂದ
ಚಲಾಯಿಸಿಕೊಂಡು
ಬಂದು
ನಿಯಂತ್ರಣ
ಕಳೆದುಕೊಂಡು
ರೋಡಿನ
ಬದಿಯಲ್ಲಿ
ನಿಂತಿರುವ
ರಮೇಶನಿಗೆ
ಡಿಕ್ಕಿ
ಪಡಿಸಿದನು.ನಂತರ ಸ್ವಲ್ಪ ಮುಂದೆ ಹೋಗಿ ತನ್ನ ವಹಾನ ನಿಲ್ಲಿಸಿ ಕೆಳಗಿ ಇಳಿದು ರಮೇಶನಿಗೆ ಆದ ಗಾಯ ನೋಡಿ ತನ್ನ ವಹಾನ ಅಲ್ಲಿಯೇ ಬಿಟ್ಟು ಓಡಿ ಹೋದನು. ಅವನ ಹೆಸರು ಮತ್ತು ವಿಳಾಸ ಗೊತ್ತಾಗಿರುವದಿಲ್ಲಾ ಮುಂದೆ ಅವನನ್ನು ನೋಡಿದರೆ ಗುರುತಿಸುತ್ತೆನೆ. ಅಂತಾ ಹೇಳಿದರು ನಂತರ ನಾನು , ನನ್ನ ಭಾವ ರೇವು ಹಾಗೂ ಮಾವ ಸೇವು ಮೂವರು ಕೂಡಿ ನನ್ನ ಗಂಡನಿಗೆ ಚಿಕಿತ್ಸೆಗಾಗಿ(ಹೆಚ್ಚಿನ) ಯುನೈಟೆಡ್ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿರುತ್ತೇವೆ ಕಾರಣ ಮಾನ್ಯರು ನನ್ನ ಗಂಡನಿಗೆ ಡಿಕ್ಕಿ ಪಡಿಸಿದ ವಹಾನ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರೂಗಿಸಬೇಕು
ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಜೇವರಗಿ ಠಾಣೆಯ ಗುನ್ನೆ ನಂ 131/2019 ಕಲಂ 279,338 ಐಪಿಸಿ ಸಂ. 187 ಐ.ಎಮ್.ವ್ಹಿ ಯಾಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.