Police Bhavan Kalaburagi

Police Bhavan Kalaburagi

Wednesday, January 15, 2020

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ:14-01-2020 ರಂದು ಅಫಜಲಪೂರ ಠಾಣಾ ವ್ಯಾಪ್ತಿಯ  ಮಣ್ಣೂರ ಗ್ರಾಮದ ಬಸ್ ನಿಲ್ದಾಣ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು ಮಟಕಾ ಬರೆದುಕೊಳ್ಳುತ್ತಿದ್ದಾನೆ.ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಣ್ಣೂರ ಗ್ರಾಮಕ್ಕೆ ಹೋಗಿ ಬಸ್ ನಿಲ್ದಾಣದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಬಸ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಹೋಗಿ ಬರುವ ಜನಗಳಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ಅದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಿ ಅಂಗ ಶೋದನೆ ಮಾಡಲಾಗಿ  ಆತನು ತನ್ನ ಹೆಸರು ಸುಭಾಷ ತಂದೆ ಶರಣಪ್ಪ ಲಾತೂರ ಸಾ||ಮಣ್ಣೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1) 1430/-  ರೂಪಾಯಿ ನಗದು ಹಣ ಹಾಗೂ 2)ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಹಾಗೂ 3)ಒಂದು ಪೆನ್ನ ದೊರೆತವು, ಸದರಿಯವುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ:14-01-2020 ರಂದು ಅಫಜಲಪೂರ ಠಾಣಾ ವ್ಯಾಪ್ತಿಯ  ಮಣ್ಣೂರ ಗ್ರಾಮದ ಯಲ್ಲಮ್ಮ ದೇವಸ್ಥಾನದ  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ ಇದು ಮುಂಬೈ ಮಟಕಾ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು ಮಟಕಾ ಬರೆದುಕೊಳ್ಳುತ್ತಿದ್ದಾನೆ.ಅಂತಾ ಮಾಹಿತಿ ಬಂದ  ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಣ್ಣೂರ ಗ್ರಾಮಕ್ಕೆ ಹೋಗಿ ಯಲ್ಲಮ್ಮನ ದೇವಸ್ಥಾನದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ದೇವಸ್ಥಾನದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಹೋಗಿ ಬರುವ ಜನಗಳಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ಅದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಿ ಅಂಗ ಶೋದನೆ ಮಾಡಲಾಗಿ  ಆತನು ತನ್ನ ಹೆಸರು  ಸಾಯಬಗೌಡ ತಂದೆ ಭೀಮಾಶಂಕರ ಹಳಿಮನಿ ಸಾ||ಮಣ್ಣೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1) 1160/-  ರೂಪಾಯಿ ನಗದು ಹಣ ಹಾಗೂ 2)ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಹಾಗೂ 3)ಒಂದು ಪೆನ್ನ ದೊರೆತವು, ಸದರಿಯವುಗಳನ್ನು ವಶಕ್ಕೆ ಪಡೆದು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಮಾಡಿ ಸರ್ಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ನಾಗಯ್ಯ ತಂದೆ ಬಸಲಿಂಗಯ್ಯ ಹೀರೆಮಠ ಸಾ:ವಡಗೆರಾ ಈ ವ್ಯಕ್ತಿಯು ದಿನಾಂಕ:14-01-2020 ರಂದು ಸಮಯ 05:00 ಗಂಟೆಗೆ ಈ ವ್ಯಕ್ತಿಯು ಬಂದು ತಹಸೀಲ್ದಾರ ಸಾಹೇಬರಿಗೆ ನನಗೆ ಬೇಡ ಜಂಗಮ್ಮ ಪ್ರಮಾಣ ಪತ್ರ ನಿಡಬೇಕೆಂದು ವಾದ ಮಾಡುವಾಗ ಶ್ರೀ ನಾಗಯ್ಯ ತಂದೆ ಬಸಲಿಂಗಯ್ಯ ಹೀರೆಮಠ  ರವರಿಗೆ ಹೋರಗಡೆ ಹಾಕಲು ಯತ್ನಿಸಿದಾಗ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ನನ್ನ ಮೇಲೆ ಕೈ ಮಾಡಲು ಯತ್ನಿಸಿದ್ದು ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುತ್ತಾನೆ ಕಾರಣ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀ ಶಿವರಾಜ ತಂದೆ ಬನಗೌಡ ಬಿರಾದಾರ :ಸೀಪಾಯಿ ತಹಸೀಲ್ದಾರ ಕಾರ್ಯಾಲಯ ಯಡ್ರಾಮಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ನಾಗಯ್ಯ ತಂದೆ ಬಸಲಿಂಗಯ್ಯ ಹೀರೆಮಠ ಸಾ:ವಡಗೇರಾ ಈ ವ್ಯಕ್ತಿ ಇಂದು ದಿನಾಂಕ:14-01-2020 ರಂದು ಸಮಯ 05:00 ಘಂಟೆಗೆ ಮಾನ್ಯ ದಂಡಾಧಿಕಾರಿಗಳ ಹತ್ತಿರ ಬೇಡ ಜಂಗಮ್ಮ SC ಜಾತಿ ಪ್ರಮಾಣ ಪತ್ರ ನೀಡಬೆಕೆಂದು  ಬಲವಂತ ಮಾಡುತ್ತಿರುವಾಗ ನಾನು ನನ್ನ ಕೆಲಸದ ಪ್ರಯುಕ್ತ ಹೋಗಿದ್ದೆ ನಾನು ನೀವು ಗುರುಗಳು ನೀವು ದೋಡ್ಡ ಕುಲದವರು ನೀವು ಈ ರೀತಿ ಸುಳ್ಳು ದಾಖಲೆ ನೀಡಿ SC ಪ್ರಮಾಣ ಪತ್ರ ತೆಗೆದುಕೊಂಡರು ನಾವು ಮೂಲ SC ಜಾತಿ ಅವನು ಏನು ಮಾಡಬೇಕೆಂದು ಕೇಳಿದರೆ ನೀ ಏನು ಕೇಳತಿ ವಡ್ಡರ ಸೂಳಿ ಮಗನ್ಯಾ ನಿನ್ನಗೆ ಸಾಹೀಸುತ್ತೆನೆ ಎಂದು ನನಗೆ ಒಂದು ಏಟು ಹೊಡೇದು ತಳ್ಳಿ ನುಕಿದನು ಅಲ್ಲಿ ಇದ್ದ ಪೀವುನ ಮತ್ತು ಜನರು ಬಂದು ನನಗೆ ರಕ್ಷಣೆ ಮಾಡಿದ್ದರು. ಆದ ಕಾರಣ ತಾವು ದಯಾಳುಗಳಾದ ತಾವು ನಾಗಯ್ಯ ತಂದೆ ಬಸಲಿಂಗಯ್ಯ ಹೀರೆಮಠ ಸಾ:ವಡಗೇರ ಈ ವ್ಯಕ್ತಿಗೆ ಬಂದಿಸಿ ನನಗೆ ನನ್ನ ಕುಟುಂಬಕ್ಕೆ ರಕ್ಷಣೆ ನೀಡಿ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀ ಆನಂದಕುಮಾರ ತಂದೆ ಬಸಣ್ಣ ಕುಸ್ತಿ ಸಾ:ಯಡ್ರಾಮಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ  ಸುನಂದಾ ಗಂಡ ಚನ್ನಬಸಪ್ಪ ಕರೂಟಿ ಸಾ||ಶಿವಬಾಳ ನಗರ ಮಣ್ಣೂರ ಗ್ರಾಮ ರವರದು ಅಕ್ಕಲಕೋಟ ತಾಲೂಕಿನ ಹಿಳ್ಳಿ ಗ್ರಾಮದ ಸಿಮಾಂತರದಲ್ಲಿ ಬರುವ ಹೊಲ ಸರ್ವೆ ನಂ:170 ನೇದ್ದು ನನ್ನ ಅಣ್ಣನಾದ ಶಾಂತಪ್ಪ ತಂದೆ ಚಂದ್ರಾಮಪ್ಪ ಹೆಗ್ಗೊಂಡೆ ಸಾ||ಹಿಳ್ಳಿ ರವರ ಹೆಸರಿನಲ್ಲಿದ್ದು ಸದರಿ ಹೊಲ ನನ್ನ ಗಂಡನು ಪಾಲಕ್ಕೆ ಮಾಡಿದ್ದು ಇರುತ್ತದೆ ಹಿಗಿದ್ದು ಇಂದು ನಾನು ಮತ್ತು ನನ್ನ ಗಂಡನು ಕೂಡಿಕೊಂಡು ಹೊಲದಲ್ಲಿ ಕೇಲಸ ಮುಗಿಸಿಕೊಂಡು ಮರಳಿ ನಮ್ಮ ಗ್ರಾಮಕ್ಕೆ ಬರುತ್ತಿರುವಾಗ ಮಾರ್ಗ ಮಧ್ಯದಲ್ಲಿ 5-30 ಪಿ,ಎಮ್.ಕ್ಕೆ ಹೀಳ್ಳಿ ಗ್ರಾಮದ 1)ಬಸಣ್ಣ ತಂದೆ ಮಲಕಣ್ಣ ಶಟಗಾರ 2)ಸಾಗರ ತಂದೆ ಬಸಣ್ಣಮ ಶಟಗಾರ 3)ಶಿವಲಿಂಗವ್ವ ಗಂಡ ಬಸಣ್ಣ ಶಟಗಾರ ಮತ್ತು  ಲಚ್ಯಾಣ ಗ್ರಾಮದ 4) ಗುರು ಮುಜಗೊಂಡ ರವರು ಕೂಡಿ ಕೊಂಡು ಬಂದು ನಮಗೆ ಅಡ್ಡಗಟ್ಟಿ ಮುಂದೆ ಹೋಗದಂತೆ ತಡೆದು ಅದರಲ್ಲಿ ಸಾಗರ ಈತನು ನನ್ನ ಗಂಡನಿಗೆ ಏ ಬೋಸಡಿ ಮಗನೆ ಆ ಹೊಲ ನಾವು ಖರಿದಿ ಮಾಡಿದ್ದಿವಿ ನಿ ಯಾಕೆ ಬಟಾಯಿ ಪಾಲ ಮಾಡಿದಿ ಅಂತ ಅವಾಚ್ಯವಾಗಿ ಬೈದನು ಮತ್ತು ಬಸಣ್ಣ ಈತನು ಈ ಸುಳಿ ಮಗನಿಗೆ ಈ ಮೋದಲು ನಾ ಹೇಳಿದರು ಕಿಮ್ಮತ್ತೆ ಮಾಡಲಾಗ್ಯಾನ ಅಂತ ಅಂದನು ಶಿವಲಿಂಗವ್ವ ಇವಳು ನನಗೆ ಕಪಾಳ ಮೇಲೆ ಹೊಡೆದು ಎಲ್ಲಾ ಈ ರಂಡಿನೆ ಮಾಡುಕತ್ತಾಳ ಅಂತ ಬೈದಳು ಆಗ ಅಲ್ಲೆ ರೋಡಿನ ಮೇಲೆ ಮೋಟಾರ ಸೈಕಲ ಮೇಲೆ ಹೋಗುತ್ತಿದ್ದ ನಮ್ಮ ಗ್ರಾಮದ 1)ಭೀಮಶ್ಯಾ ತಂದೆ ಸಾಯಬಣ್ಣ ನಾಯಕೋಡಿ 2)ಶಿವರಾಜ ತಂದೆ ಪರಮೇಶ್ವ್ರ ಪೂಜಾರಿ ರವರು ಜಗಳ ನೋಡಿ ಜಗಳ ಬಿಡಿಸಿದರು ಆಗ  ಗುರು ಮುಜಗೊಂಡ ಈತನು ನಮಗೆ ಇವತ್ತು ನೀವು ಉಳಿದುಕೊಂಡಿರಿ ಇನ್ನೋಮ್ಮೆ ಸಿಕ್ಕರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋಗಿರುತ್ತಾರೆ ಕಾರಣ ನಮಗೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಕಪಾಳಕ್ಕೆ ಹೊಡೆದು ಜೀವ ಬೇದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.