ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 03-08-2020
ಜನವಾಡಾ ಪೊಲೀಸ್ ಠಾಣೆ ಯು.ಡಿ.ಆರ್ ನಂ. 13/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 02-08-2020 ರಂದು
ಫಿರ್ಯಾದಿ ಚಂದ್ರಕಾಂತ ತಂದೆ ಶ್ಯಾಮು ರಾಠೋಡ್ ವಯ: 45 ವರ್ಷ, ಜಾತಿ: ಲಂಬಾಣಿ, ಸಾ: ಖಾನಾಪೂರ, ತಾ: ಭಾಲ್ಕಿ, ಜಿ: ಬೀದರ ರವರ
ಮಗನಾದ ಗಣೇಶ
ತಂದೆ ಚಂದ್ರಕಾಂತ ರಾಠೋಡ್ ವಯ: 14 ವರ್ಷ ಇತನು ತಮ್ಮ ತಾಂಡಾದ ಗೆಳೆಯರಾದ ಗುರುನಾಥ ತಂದೆ ಪರಶುರಾಮ ಚೌಹಾಣ ಮತ್ತು ಪ್ರೇಮ್ ತಂದೆ ಜೈಸಿಂಗ್ ಚೌಹಾಣ ರವರ ಜೊತೆಯಲ್ಲಿ ಹೊನ್ನಿಕೇರಿ ಶಿವಾರದ ಅರಣ್ಯದಲ್ಲಿರುವ ಚೆಕಡ್ಯಾಮಿಗೆ ತಮ್ಮ ತಮ್ಮ ದನಕರು ಹಾಗು ಆಡುಗಳಿಗೆ ನೀರು ಕುಡಿಸಿ ತಾವು ನೀರು ಕುಡಿಯಲು ಹೋದಾಗ ಗಣೇಶ ಇತನು ಆಕಸ್ಮಿಕವಾಗಿ ಕಾಲು ಜ್ಯಾರಿ ಚೆಕಡ್ಯಾಮ್ ನೀರಿನಲ್ಲಿ ಬಿದ್ದು ಮುಳುಗುತ್ತಿರುವಾಗ
ಅವನಿಗೆ ಹಿಡಿಯಲು ಹೊದ ಗುರುನಾಥ ಚೌಹಾಣ ಇವನು ಕೂಡಾ ಈಜು ಬಾರದೇ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುತ್ತಾರೆ, ಅವರ ಸಾವಿನಲ್ಲಿ ಯಾರ ಮೇಲೆ ಯಾವುದೆ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮನ್ನಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 34/2020, ಕಲಂ. 302 ಐಪಿಸಿ :-
ದಿನಾಂಕ 02-08-2020
ರಂದು ಫಿರ್ಯಾದಿ ಬಸವರಾಜ ತಂದೆ ಝರೆಪ್ಪಾ ಬಸಗೊಂಡ ವಯ: 45 ವರ್ಷ, ಜಾತಿ: ಎಸ.ಟಿ ಗೊಂಡ, ಸಾ: ಖಾಸೆಂಪುರ(ಪಿ) ಗ್ರಾಮ ರವರ ಮಗನಾದ ಅನೀಲ ವಯ: 16
ವರ್ಷ ಈತನಿಗೆ ಯಾರೋ ಅಪರಿಚಿತ ವ್ಯಕ್ತಿಗಳು ಕೈ, ಕಾಲು, ಬಾಯಿ ಕಟ್ಟಿ ಬೀರದೇವ ಗುಡಿಯ ಹತ್ತಿರ ಇದ್ದ ಒಂದು ಸರ್ಕಾರಿ ಗಿಡದ ಟೊಂಗೆಗೆ ಹಗ್ಗದಿಂದ ಕಟ್ಟಿ ನೇಣು ಹಾಕಿ ಕೋಲೆ ಮಾಡಿ ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ
ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಗದಲ್ ಪೊಲೀಸ ಠಾಣೆ ಅಪರಾಧ ಸಂ.
46/2020, ಕಲಂ. 279, 304(ಎ) ಐಪಿಸಿ :-
ದಿನಾಂಕ 02-08-2020
ರಂದು ಫಿರ್ಯಾದಿ ರವಿ ತಂದೆ ವಿಠಲ ಮೇತ್ರೆ ವಯ: 23 ವರ್ಷ, ಜಾತಿ: ಎಸ್.ಟಿ
ಗೊಂಡ, ಸಾ: ಬಗದಲ, ತಾ: ಜಿಲ್ಲಾ: ಬೀದರ ರವರ ತಂದೆಯಾದ ವಿಠಲ ತಂದೆ ಶಿವರಾಯ ಮೇತ್ರೆ ವಯ: 55 ವರ್ಷ, ಸಾ: ಬಕಚೌಡಿ ರವರು ತಮ್ಮ ಮೊಟಾರ ಸೈಕಲ ನಂ. ಕೆಎ-38/ಎಸ್-8516 ನೇದರ
ಮೇಲೆ ಬಗದಲಗೆ ಬರುವಾಗ ತನ್ನ ಅತಿವೇಗ ಹಾಗು ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಬಗದಲ ಧರಿಯ ಮೇಲಿರುವ ತಿರುವು ರಸ್ತೆಯ ಮೇಲೆ ತನ್ನ ವಾಹನವನ್ನು ಕಂಟ್ರೋಲ್ ಮಾಡದೇ ತಿರುವು ರಸ್ತೆಯ ಬದಿಯಲ್ಲಿ ಹಾಕಲಾದ ರಸ್ತೆಯ ಸನ್ನೆಗಳ ಕಂಬಕ್ಕೆ ಡಿಕ್ಕಿ ಮಾಡಿ ವಾಹನ ಸಮೇತ ರಸ್ತೆಯ ಬದಿಯಲ್ಲಿ ಬಿದ್ದ ಪ್ರಯುಕ್ತ ಅವರ ತಲೆಯ ಬಲ ಭಾಗಕ್ಕೆ ಭಾರಿ ಒಳ ಪೆಟ್ಟಾಗಿ ಸಾಕಷ್ಟು ರಕ್ತ ಹೊರ ಬಂದಿರುತ್ತದೆ
& ಅವರ ಎಡಗಣ್ಣಿನ ಹುಬ್ಬಿನಿಂದ ಎಡಗಡೆಯ ಕಪಾಳದವರೆಗೆ ಭಾರಿ ರಕ್ತಗಾಯ ಮತ್ತು ಎಡಗಡೆ ಎದೆಯ ಮೇಲೆಯು ಸಹ
ರಕ್ತ ಗಾಯಗಳಾಗಿ ಸ್ಧಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಜನವಾಡಾ ಪೊಲೀಸ್
ಠಾಣೆ ಅಪರಾಧ
ಸಂ. 46/2020, ಕಲಂ. 32, 34 ಕರ್ನಾಟಕ ಅಬಕಾರಿ
ಕಾಯ್ದೆ :-
ದಿನಾಂಕ 01-08-2020 ರಂದು
2345 ಗಂಟೆಗೆ ಯರನಳ್ಳಿ ಗ್ರಾಮದ ದಶರಥ ಪರ್ಬುನೋರ ಈತನು ತನ್ನ ಹೋಟಲ್ ಅಂಗಡಿಯಲ್ಲಿ ಸರಾಯಿ ಬಾಟಲಗಳು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆಂದು ಗಂಗಮ್ಮ ಪಿ.ಎಸ್.ಐ ಜನವಾಡಾ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು,
ಠಾಣೆಯ ಸಿಬ್ಬಂದಿಯವರೊಡನೆ ಹೋಗಿ ದಿನಾಂಕ
02-08-2020 ರಂದು ಆರೋಪಿ ದಶರಥ ತಂದೆ ಮಾಣಿಕ ಪರ್ಬಾನೋರ ವಯ:
40 ವರ್ಷ, ಜಾತಿ: ಎಸ್.ಟಿ
(ಗೊಂಡ), ಸಾ: ಯರನಳ್ಳಿ ಗ್ರಾಮ ಇತನ ಮೇಲೆ ದಾಳಿ ಮಾಡಿ ಆತನಿಗೆ ದಸ್ತಗಿರಿ ಮಾಡಿ ಅವನಿಂದ
1) 90 ಎಮ್.ಎಲ್ ನ
60 ಓರಿಜಿನಲ್ ಚಾಯ್ಸ್ ಡೀಲಕ್ಸ್
ವಿಸ್ಕಿಯ ಸರಾಯಿ ತುಂಬಿದ ಫುಟ್ಟದ ಪಾಕೇಟಗಳು ಅ.ಕಿ 2107.8
ರೂ., 2) 180 ಎಮ್.ಎಲ್ ನ
09 ಇಂಪೇರಿಯಲ್ ಬ್ಲ್ಯೂ ಸರಾಯಿ ತುಂಬಿದ ಬಾಟಲ್ಗಳು ಅ.ಕಿ 1783.89
ರೂ., ನೇದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು,
ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 102/2020, ಕಲಂ. 269
ಐಪಿಸಿ ಜೊತೆ 87 ಕರ್ನಾಟಕ ಪೊಲೀಸ್ ಕಾಯ್ದೆ :-
ದಿನಾಂಕ 02-08-2020 ರಂದು ಬಸವಕಲ್ಯಾಣ ನಗರದ ಇಂದಿರಾ ಕ್ಯಾಂಟಿನ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೊರೊನಾ ಸೊಂಕು ಹರಡಬಹುದು ಎಂದು ಗೊತ್ತಿದ್ದರು ಈ
ಬಗ್ಗೆ ನೀರ್ಲಕ್ಷ ವಹಿಸಿ ಕೆಲವು ಜನರು ಗುಂಪಾಗಿ ಕುಳಿತುಕೊಂಡು ಹಣ
ಹಚ್ಚಿ ಪಣ
ತೊಟ್ಟು ಇಸ್ಪಿಟ್ ಎಲೆಗಳ ಅಂದರ ಬಾಹರ್ ನಸಿಬಿನ ಜೂಜಾಟವನ್ನು ಆಡುತ್ತಿದ್ದಾರೆಂದು ಕರೆ ಮುಖಾಂತರ ಸುನಿಲಕುಮಾರ ಪಿ.ಎಸ್.ಐ (ಕಾ&ಸೂ) ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿಯನ್ನು ತಿಳಿದು ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು
ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಸವಕಲ್ಯಾಣ ನಗರದ ಇಂದಿರಾ ಕ್ಯಾಂಟಿನ್ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ಬಸವಕಲ್ಯಾಣ ನಗರದ ಇಂದಿರಾ ಕ್ಯಾಂಟಿನ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಮಹೆತಾಬ ತಂದೆ ಅಬ್ದುಲ್ಸಾಬ ವಯ: 32 ವರ್ಷ, ಜಾತಿ:
ಮುಸ್ಲಿಂ, 2) ಅಹ್ಮೆದ ತಂದೆ ಇಸ್ಮಾಯಿಲ್ಸಾಬ ವಯ: 21 ವರ್ಷ, ಜಾತಿ: ಮುಸ್ಲಿಂ, 3) ಸೈಯದ ಮುನವರ ತಂದೆ ಸೈಯದ ಅಬ್ದುಲ್ಸಾಬ ವಯ: 30 ವರ್ಷ, ಜಾತಿ:
ಮುಸ್ಲಿಂ, 3) ಸೈಯದ ಮುನವರ ತಂದೆ ಸೈಯದ ಅಬ್ದುಲ್ಸಾಬ ವಯ: 30 ವರ್ಷ, ಜಾತಿ:
ಮುಸ್ಲಿಂ, ಮೂವರು ಸಾ: ರೇಣಾಗಲ್ಲಿ ಬಸವಕಲ್ಯಾಣ, 4) ಅಮ್ಜದ್ ತಂದೆ ಗುಲಾಮರಸೂಲ ವಯ: 28 ವರ್ಷ, ಜಾತಿ:
ಮುಸ್ಲಿಂ, ಹಾಗು 5) ಬಬ್ಲು ತಂದೆ ಅಜಿಮೋದ್ದಿನ್ ವಯ: 24 ವರ್ಷ, ಜಾತಿ:
ಮುಸ್ಲಿಂ, ಇಬನ್ಬರು ಸಾ: ಯಾಕೂಬಪೂರಾ
ಬಸವಕಲ್ಯಾಣ ಇವರೆಲ್ಲರೂ ಗುಂಪಾಗಿ ಕುಳಿತುಕೊಂಡು ಕೊರೋನಾ ಸೊಂಕು ಹರಡಬಹುದು ಎಂದು ಗೊತ್ತಿದ್ದರು ಮಾಸ್ಕ್ ಧರಿಸದೆ ಮತ್ತು ಸಮಾಜಿಕ ಅಂತರ ಕಾಪಾಡದೆ ಈ
ಬಗ್ಗೆ ನೀರ್ಲಕ್ಷ ವಹಿಸಿ ಇಸ್ಪಿಟ್ ಎಲೆಗಳ ಅಂದರ ಬಾಹರ ನಸೀಬಿನ ಜೂಜಾಟವನ್ನು ಹಣ
ಹಚ್ಚಿ ಪಣ
ತೊಟ್ಟು ಆಡುತ್ತಿರುವುದನ್ನು ನೋಡಿ ಎಲ್ಲರು ಒಮ್ಮೆಲೆ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಹಿಡಿದುಕೊಂಡು ಅವರಿಂದ ಒಟ್ಟು ನಗದು ಹಣ 5400/- ರೂ ಮತ್ತು 52 ಇಸ್ಪಿಟ್ ಎಲೆಗಳನ್ನು
ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.