ದಿನಂಪ್ರತಿ
ಅಪರಾಧಗಳ ಮಾಹಿತಿ ದಿನಾಂಕ 14-05-2021
ಗಾಂಧಿಗಂಜ ಪೊಲೀಸ ಠಾಣೆ ಅಪರಾಧ ಸಂಖ್ಯೆ
76/2021 ಕಲಂ 457, 380 ಐಪಿಸಿ :-
ದಿನಾಂಕ 13/05/2021 ರಂದು 21-15 ಗಂಟೆಗೆ ಫಿರ್ಯಾದಿ ಡಾ. ರೂಪೇಶ ತಂದೆ ಮುರಳಿಧರ ಎಕಲಾರಕರ್ ವಯ 39 ವರ್ಷ ಜಾತಿ: ಗೊಂಡ ಉದ್ಯೋಗ: ಆರ್ಯುವೆದಿಕ ಕಾಲೇಜ ಭೋದಕ ಸಾ: ಹಳೆ ಆದರ್ಶ ಕಾಲೋನಿ ಬೀದರ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂಧರೆ ಫಿರ್ಯಾದಿಯವರ ಓಣಿಯಲ್ಲಿ ಸಾಯಿ ಬಾಬಾ ಮಂದಿರ ಇದ್ದು, ಮಂದಿರದ ಪ್ರತಿಯೊಂದು ಆಗು ಹೋಗುಗಳನ್ನು ಫಿರ್ಯಾದಿಯೆ ನಾನು ನೋಡಿಕೊಳ್ಳುತ್ತಿದ್ದು ದೇವಸ್ಥಾನ ಅಭಿವೃದ್ದಿಗಾಗಿ ದೇವಸ್ಥಾನದಲ್ಲಿ ಧಾನದ ಹುಂಡಿ ಇಟ್ಟಿದ್ದು ಪ್ರತಿ ದಿವಸ ಭಕ್ತರು ದೇವಸ್ಥಾನಕ್ಕೆ ದರ್ಶನಕ್ಕೆ ಬಂದು ಹುಂಡಿಯಲ್ಲಿ ಹಣ ಹಾಕುತ್ತಾರೆ. ಕಳೆದ 2 ತಿಂಗಳ ಹಿಂದಿನಿಂದ ಇಲ್ಲಿಯ ವರೆಗೆ ಭಕ್ತರು ಹುಂಡಿಯಲ್ಲಿ ಹಾಕಿದ ಹಣ ಅಂದಾಜು 12000/- ರೂ ವರೆಗೆ ಜಮಾ ಆಗಿದ್ದು ಇರುತ್ತದೆ. ಪ್ರತಿ ದಿನ ಬೆಳಗೆ 6.30 ಗಂಟೆಯಿಂದ ರಾತ್ರಿ 9.00 ಗಂಟೆಯ ವರೆಗೆ ಮಂದಿರದಲ್ಲಿ ಪೂಜಾ ಕಾರ್ಯಕ್ರಮ ಮುಗಿಸಿ ರಾತ್ರಿ 9.30 ಗಂಟೆಗೆ ಮಂದಿರಕ್ಕೆ ಬೀಗ ಹಾಕಲಾಗುತ್ತದೆ. ದಿನಾಂಕ 10-05-2021 ರಂದು ರಾತ್ರಿ 9.30 ಗಂಟೆ ಸುಮಾರಿಗೆ ಮಂದಿರ ಪೂಜಾರಿ ರಾಹುಲ ಕುಲಕಣರ್ಿ ರವರು ಪೂಜಾ ಕಾರ್ಯಕ್ರಮ ಮುಗಿಸಿ ಮಂದಿರಕ್ಕೆ ಬೀಗ ಹಾಕಿಕೊಂಡು ಮನೆಗೆ ಹೋಗಿರುತ್ತಾರೆ. ನಂತರ ದಿನಾಂಕ 11-05-2021 ರಂದು ಪ್ರತಿ ದಿನದಂತೆ ಬೆಳಗೆ 6.30 ಗಂಟೆ ಸುಮಾರಿಗೆ ಪೂಜಾರಿ ರಾಹುಲ್ ಕುಲಕರ್ಣಿ ರವರು ಮಂದಿರಕ್ಕೆ ಹೋದಾಗ ಮಂದಿರಕ್ಕೆ ಬಾಕಿದ ಬೀಗ ಒಡೆದಿದ್ದು ಇತ್ತು, ಮಂದಿರದಲ್ಲಿದ್ದ ಸಿ.ಸಿ ಕ್ಯಾಮರಾದಲ್ಲಿ ನೋಡಲು ಒಬ್ಬ ವ್ಯಕ್ತಿ ದಿನಾಂಕ 11/05/2021 ರಂದು ಮದ್ಯ ರಾತ್ರಿ 2.23 ಗಂಟೆ ಸುಮಾರಿಗೆ ಮಂದಿರದ ಬಾಗಿಲು ಒಡೆದು ಮಂದಿರದಲ್ಲಿ ಹೋಗಿ ಮಂದಿರದಲ್ಲಿ ಇದ್ದ ಹುಂಡಿ ಒಡೆದು ಕಳವು ಮಾಡಿಕೊಂಡು ಹೋದ ದೃಶ ಸೇರೆಯಾಗಿದ್ದು ಇರುತ್ತದೆ. ಸಾಯಿ ಬಾಬಾ ಮಂದಿರದ ಬೀಗ ಒಡೆದು ಹುಂಡಿ ಒಡೆದು ಹುಂಡಿಯಲ್ಲಿದ್ದ ಅಂದಾಜು ನಗದು ರೂ. 12,000/- ಕಳವು ಮಾಡಿಕೊಂಡು ಹೋಗಿರುತ್ತಾನೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.