Police Bhavan Kalaburagi

Police Bhavan Kalaburagi

Thursday, June 4, 2020

BIDAR DISTRICT DAILY CRIME UPDATE 04-06-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 04-06-2020

ಮಂಠಾಳ ಪೊಲೀಸ್ ಠಾಣೆ ಯು.ಡಿ.ಆರ್ ನಂ. 08/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 03-06-2020 ರಂದು ಫಿರ್ಯಾದಿ ಕಲಾವತಿ ಗಂಡ ಕಮಲಾಕರ್ ಟೊಣ್ಣೆ ವಯ: 38 ವರ್ಷ, ಜಾತಿ: ಲಿಂಗಾಯತ, ಸಾ: ಅತಲಾಪುರ, ತಾ: ಬಸವಕಲಾಣ ರವರ ಗಂಡನಾದ ಕಮಲಾಕರ್ ತಂದೆ ಮೊನಪ್ಪಾ ಟೊಣ್ಣೆ ವಯ: 44 ವರ್ಷ, ಸಾ: ಅತಲಾಪುರ ರವರು ಮಂಠಾಳ ಗ್ರಾಮದ ಜಗನ್ನಾಥ ತಂದೆ ಮಹಾದೇವಪ್ಪಾ ಪಾಟೀಲ್ ರವರ ಮಂಠಾಳ ಗ್ರಾಮ ಶಿವಾರದಲ್ಲಿರುವ ಹೊಲದಲ್ಲಿ ಕರೆಂಟ್ ಮೊಟಾರ್ ಸ್ಟಾರ್ಟ ಮಾಡುವಾಗ ಆಕಸ್ಮೀಕವಾಗಿ ಕರೆಂಟ್ ತಾಗಿ ಮೃತಟ್ಟಿದ್ದು ಇರುತ್ತದೆ, ತನ್ನ ಗಂಡನ ಮರಣದಲ್ಲಿ ನನ್ನದು ಮತ್ತು ನನ್ನ ಪರಿವಾರದ್ದು ಯಾರ ಮೇಲೆಯೂ ಯಾವುದೇ ತರಹದ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಲಸೂರ ಪೊಲೀಸ್ ಠಾಣೆ ಅಪರಾಧ ಸಂ. 38/2020, ಕಲಂ. 32, 34 ಕೆ. ಕಾಯ್ದೆ ;-
ದಿನಾಂಕ 03-06-2020 ರಂದು ಬೇಲೂರ ಗ್ರಾಮದ ಮಿರಕಲ್ ರಸ್ತೆಯ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರಾಯಿ ತನ್ನ ಅಧಿನದಲ್ಲಿಟ್ಟುಕೊಂಡು ಮಾರಾಟ ಮಾಡಲು ಸಾಗಾಟ ಮಾಡುತಿದ್ದಾನೆಂದು ಗೌತಮ ಪಿಎಸ್ಐ ಹುಲಸೂರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬೇಲೂರ ಗ್ರಾಮದ ಹತ್ತಿರವಿರುವ ವಾಟರ್ ಫಿಲ್ಟರ್ ಹತ್ತಿರ ಹೋಗಿ ಮನೆಗಳ ಮರೆಯಾಗಿ ನಿಂತು ನೋಡಲು ಬೇಲೂರ ಗ್ರಾಮದ ಮಿರಕಲ್ ಕ್ರಾಸ್ ರಸ್ತೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ವೀರಯ್ಯ ತಂದೆ ಮಲ್ಲಯ್ಯಾ ಸ್ವಾಮಿ ವಯ: 30 ವರ್ಷ, ಜಾತಿ: ಜಂಗಮ, ಸಾ: ಬೇಲೂರ ಇತನು ಎರಡು ಕಾಟನ ಬಾಕ್ಸ್‌, ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲ ಇಟ್ಟುಕೊಂಡು ನಿಂತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಎಲ್ಲರೂ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಆತನಿಗೆ ಹಿಡಿದುಕೊಂಡು ನಿನ್ನ ಹತ್ತಿರವಿರುವ ಕಾಟನ್ ಬಾಕ್ಸ್‌ದಲ್ಲಿ ಮತ್ತು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲದಲ್ಲಿ ಎನಿದೇ? ಇದೆ ಅಂತ ವಿಚಾರಿಸಲಾಗಿ ಇದರಲ್ಲಿ ಬಿಯರ್ ಬಾಟಲಗಳು ಮತ್ತು ವಿಸ್ಕಿ ಪೌಚಗಳು ಇದ್ದು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿರುತ್ತಾನೆ, ನಂತರ ಆತನಿಗೆ ಸಾರಾಯಿ ಸಾಗಾಟ ಮಾಡಲು ಮತ್ತು ಮಾರಾಟ ಮಾಡಲು ಸರಕಾರಿಂದ ಯಾವುದಾದರೂ ಪರವಾನಿಗೆ ವಗೈರೆ ಇದ್ದರೆ ಹಾಜರು ಪಡಿಸು ಅಂತ ತಿಳಿಸಿದಾಗ ಆತನು ನಾನು ಸರಕಾರದ ಪರವಾನಿಗೆ ಇಲ್ಲದೆ, ಅನಧಿಕೃತವಾಗಿ ನನ್ನ ವಶದಲ್ಲಿಟ್ಟುಕೊಂಡು ಸಾಗಾಟ ಮಾಡಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿರುತ್ತಾನೆ, ನಂತರ ಅವನ ಹತ್ತಿರವಿದ್ದ ಕಾಟನ್ ಬಾಕ್ಸ್‌  ಪಂಚರ ಸಮಕ್ಷಮದಲ್ಲಿ ತೆರೆದು ನೋಡಲಾಗಿ ಒಂದು ಕಾಟನ್ ಬಾಕ್ಸದಲ್ಲಿ 1) ಕಿಂಗ್ ಫೀಶರ್ ಬೀಯರ 650 ಎಮ್.ಎಲ್ ನ 12 ಬಾಟಲಗಳು ಅ.ಕಿ 1800/- ರೂಪಾಯಿಗಳು, ಮತ್ತೊಂದು ಕಾಟನ್ ಬಾಕ್ಸದಲ್ಲಿ 2) ಓಟಿ ವಿಸ್ಕಿ ಟೆಟ್ರ್ಯಾ ಪ್ಯಾಕವುಳ್ಳ 180 ಎಮ್.ಎಲ್ ನ 15 ಪೌಚಗಳು ಅ.ಕಿ 1290/- ರೂಪಾಯಿಗಳು ಮತ್ತು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲದಲ್ಲಿ 3) ಯು.ಎಸ್ ವಿಸ್ಕಿ 90 ಎಮ್.ಎಲ್ನ 25 ಪ್ಲಾಸ್ಟಿಕ್ ಬಾಟಲಗಳು ಅ.ಕಿ 875/- ರೂಪಾಯಿಗಳು ಹೀಗೆ ಒಟ್ಟು ಅ.ಕಿ 3965/- ರೂಪಾಯಿಗಳು ಇದ್ದು ಎಲ್ಲವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 72/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 03-06-2020 ರಂದು ಬಸವಕಲ್ಯಾಣ ನಗರದ ಜಿಜಾಮಾತಾ ಶಾಲೆ ಮುಚಳಂಬ ಕ್ರಾಸ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 80/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆಂದು ಕರೆ ಮುಖಾಂತರ ಸುನಿಲಕುಮಾರ ಪಿ.ಎಸ. [ಕಾ&ಸು] ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಸವಕಲ್ಯಾಣ ನಗರದ ಜಿಜಾಮಾತಾ ಶಾಲೆ ಮುಚಳಂಬ ಕ್ರಾಸ ಹತ್ತಿರದಿಂದ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ಜಿಜಾಮಾತಾ ಶಾಲೆ ಮುಚಳಂಬ ಕ್ರಾಸ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಜಿಶಾನ ಅಹ್ಮದ ತಂದೆ ಶೇರಅಲಿ ವಯ: 26 ವರ್ಷ, ಜಾತಿ: ಮುಸ್ಲಿಂ, ಸಾ: ರೀಕ್ಷಾ ಕಾಲೋನಿ ಬಸವಕಲ್ಯಾಣ ಇತನು ನಿಂತುಕೊಂಡು ಸಾರ್ವಜನಿಕರಿಗೆ ಒಂದು ರೂಪಾಯಿಗೆ 80/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುವುದನ್ನು ನೋಡಿ ಎಲ್ಲರು ಒಮ್ಮೆಲೆ ದಾಳಿ ಮಾಡಿ ಆರೋಪಿತನಿಗೆ ಹಿಡಿದುಕೊಂಡು ಅವನ ಅಂಗ ಶೋಧನೆ ಮಾಡಲು ಅವನಿಂದ ನಗದು ಹಣ 6100/- ರೂ., 03 ಮಟಕಾ ಚೀಟಿ ಹಾಗು ಒಂದು ಬಾಲ್ ಪೆನ್ ಮತ್ತು ಒಂದು ಟೆಕ್ನೋ ಮೊಬೈಲ್ ಅ.ಕಿ 3000/- ರೂ. ನೇದ್ದವುಗಳನ್ನು ತಾಬೆಗೆ ತೆಗೆದುಕೊಂಡು ಸದರಿಯವನಿಗೆ ಮಟಕಾ ಚೀಟಿ ಬರೆದುಕೊಂಡು ಸಂಗ್ರಹ ಮಾಡಿದ ಹಣ ಯಾರಿಗೆ ಕೊಡುತ್ತಿ? ಅಂತ ವಿಚಾರಿಸಲು ಇಮ್ರಾನ್ ತಂದೆ ಶೇರಖಾನ್ ಪಠಾಣ ವಯ: 25 ವರ್ಷ, ಜಾತಿ: ಮುಸ್ಲಿಂ, ಸಾ: ಗಾಡವಾನಗಲ್ಲಿ ಬಸವಕಲ್ಯಾಣ ಇತನಿಗೆ ಕೊಡುತ್ತೆನೆ ಎಂದು ತಿಳಿಸಿದನು, ನಂತರ ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.        

ಭಾಲ್ಕಿ ಗ್ರಾಮೀಣ ಪೋಲಿಸ್ ಠಾಣೆ ಅಪರಾಧ ಸಂ. 71/2020, ಕಲಂ. 147, 148, 448, 323, 324, 354, 504, 506, 109 ಜೊತೆ 149 ಐಪಿಸಿ ಮತ್ತು 3(1), (ಆರ್) (ಎಸ್) (ಡಬ್ಲು) ಎಸ್.ಸಿ/ಎಸ್.ಟಿ ಕಾಯ್ದೆ 1989 :-      
ದಿನಾಂಕ 03-06-2020 ರಂದು ಬಬ್ಲೂ ತಂದೆ ಮಹೇಬೂಬಸಾಬ ಸೈಯದ ಸಾ: ಜಾಯಗಾಂತ ಇತಯನು ಫಿರ್ಯಾದಿ ಆಶಾಬಾಯಿ ಗಂಡ ಅಶೊಕ ಸೂರ್ಯವಂಶಿ ವಯ: 40 ವರ್ಷ, ಜಾತಿ: ಎಸ.ಸಿ ಮಾದಿಗ, ಸಾ: ಜಾಯಗಾವ ರವರ ಮನೆಯ ಹಿಂದೆ ರಸ್ತೆಯಿಂದ ಟ್ರ್ಯಾಕ್ಟರ ನಡೆಸಿಕೊಂಡು ಹೊಗುತ್ತಿರುವಾಗ ಫಿರ್ಯಾದಿಯವರ ಮಗನಾದ ವಿದ್ಯಾಸಾಗರ ತಂದೆ ಅಶೋಕ ಮತ್ತು ಆತನ ಗೆಳಿಯಾನಾದ ಸಂದೇಶ ತಂದೆ ಸುನೀಲ ಗಾಯಕವಾಡ ಇವರಿಬ್ಬರು ಮಗಳಾದ ಮರಿಯಾ ತಂದೆ ಅಶೋಕ ಇವಳ ಮೇಲೆ ಆಟ ಆಡುತ್ತಾ ನೀರು ಎಸಿಯುತ್ತಿರುವಾಗ ತಪ್ಪಿನಿಂದಾಗಿ ಬಬ್ಲೂ ಈತನ ಮೇಲೆ ನೀರು ಬಿದ್ದಿರುತ್ತದೆ, ನೀರು ಬಿದ್ದ ಪ್ರಯುಕ್ತ ಬಬ್ಲು ಇತನು ಆರೋಪಿತರಾದ ಸೊಮನಾಥ ತಂದೆ ಶಿವಪ್ಪಾ ಧಡ್ಡೆ, ಶಿವಾ ತಂದೆ ಸೊಮನಾಥ ಧಡ್ಡೆ, ಜಗದೀಶ ತಂದೆ ಅನೀಲಕುಮಾರ ಧಡ್ಡೆ, ರತನ ತಂದೆ ಕಾಶೇಪ್ಪಾ ಧಡ್ಡೆ, ರಾಜಕುಮಾರ ತಂದೆ ಕಾಶೇಪ್ಪಾ ವಡಗಾವೆ, ಅಭೀಷಕ ತಂದೆ ಸೊಮನಾಥ ಧಡ್ಡೆ ಎಲ್ಲರು ಸಾ: ಜಾಯಗಾಂವ ಇವರೆಲ್ಲರಿಗೆ ಕರೆ ಮೂಲಕ ಕರೆಯಿಸಿಕೊಂಡು ಎಲ್ಲಾ ಆರೋಪಿತರು ಸೇರಿ ಫಿರ್ಯಾದಿಯವರ ಮನೆಯಲ್ಲಿ ಅತಿಕ್ರಮಣ ಪ್ರವೇಶ ಮಾಡಿ ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ನಮ್ಮ ಮನುಷ್ಯನ ಮೇಲೆ ಬೇಕಂತ ನೀರು ಛೆಲ್ಲುತ್ತಿ ಎಂದು ಬೈದು ಜಾತಿ ನಿಂದಣೆ ಮಾಡಿ ಕೈ ಹಿಡಿದು ಎಳೆದು ಝಿಂಜಾಮುಷ್ಟಿ ಮಾಡಿ ಹೊಡೆಬಡೆ ಮಾಡಿರುತ್ತಾರೆ ಹಾಗೂ ಫಿರ್ಯಾದಿಯವರ ಮಗನಾದ ವಿಧ್ಯಾಸಾಗರ ಈತನಿಗೆ ನಮಗೆ ಎನು ತಿಳಿದಿದ್ದಿ ನಮ್ಮ ಮನುಷ್ಯನ ಮೇಲೆ ನೀರು ಹಾಕುತ್ತಿ ಎಂದು ಜಾತಿ ನಿಂದನೆ ಮಾಡಿ ಮಗನ ಹೊಟ್ಟೆಯ ಭಕಾಳಿಯಲ್ಲಿ ಹಾಗೂ ತಲೆಯಲ್ಲಿ ಕಲ್ಲಿನಿಂದ ಹೊಡೆದು ಗುಪ್ತಗಾಯ, ಬೆನ್ನಿನ ಮೇಲೆ ಕೈ ಮುಷ್ಟಿ ಮಾಡಿ ಹೊಡೆದು ಗುಪ್ತಗಾಯ, ಕುದಲು ಹಿಡಿದು ಝಿಂಜಾಮುಷ್ಟಿ ಮಾಡಿ ಹೊಡೆದು ರಕ್ತಗಾಯ ಪಡಿಸಿರುತ್ತಾರೆ, ಆ ಸಮಯದಲ್ಲಿ ಫಿರ್ಯಾದಿಯವರ ನೇಗೆಣಿಯಾದ ಕವೀತಾ ಗಂಡ ಬಾಬುರಾವ ಸೂರ್ಯವಂಶಿ ಇವರು ಜಗಳ ಬಿಡಿಸಲು ಬಂದಾಗ ಸದರಿ ಆರೋಪಿತರೆಲ್ಲರೂ ಸೇರಿ ನೇಗೆಣಿಯ ಕೂದಲು ಎಳೆದು, ಸೀರೆ ಎಳೆದು ಮಾನಭಂಗ ಮಾಡಿ ಒಂದು ಕಟ್ಟಿಗೆ ತೆಗೆದುಕೊಂಡು ನೇಗೆಣಿಯ ಎಡಗೈಗೆ ಜೊರಾಗಿ ಹೊಡೆದು ರಕ್ತಗಾಯ ಪಡಿಸಿರುತ್ತಾರೆ, ಫಿರ್ಯಾದಿಯವರ ಚಿಕ್ಕ ಮಗನಾದ ಗಂಗಾಸಾಗರ ಈತನಿಗೆ ತುಟಿಯ ಮೇಲೆ ಹೊಡೆದು ರಕ್ತಗಾಯ ಪಡಿಸಿರುತ್ತಾರೆ, ನಂತರ ಅತ್ತೆ ಚಂದ್ರಾಬಾಯಿ ಇವರಿಗೆ ಹೊಡೆದು ಗುಪ್ತಗಾಯ ಪಡಿಸಿರುತ್ತಾರೆ ಹಾಗೂ ಸದರಿ ಆರೋಪಿತರು ಫಿರ್ಯಾದಿಗೆ ಹಾಗೂ ಫಿರ್ಯಾದಿಯ ಕುಟುಂಬದವರಿಗೆ ಊರಿನಲ್ಲಿ ಬಂದರೆ ನಿಮಗೆ ಖತಂ ಮಾಡುತ್ತೇವೆ ಅಂತ ಜೀವದ ಬೇದರಿಕೆ ಹಾಕಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.