ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಮಲ್ಲಿಕಾರ್ಜುನ ತಂದೆ
ಶಿವಶರಣಪ್ಪ ಕಿಳ್ಳಿ ಸಾ:ಶ್ರೀನಿವಾಸ ಸರಡಗಿ ತಾ;ಜಿ:ಗುಲಬರ್ಗಾ ಇವರ ಮಗಳಾದ ಮಲ್ಲಮ್ಮಾ ಇವಳಿಗೆ ಲಗ್ನವಾಗಿ 10 ವರ್ಷ ಕಳೆದಿದ್ದು, ಆಕೆಯ
ಗಂಡ ಲಕ್ಕಪ್ಪ ಕುಡಿತ ಚಟಕ್ಕೆ ಬಲಿಯಾಗಿ ಎನು ಕೆಲಸ ಮಾಡದೇ ತವರು ಮನೆಯಿಂದ ಸಂಸಾರದ ಖರ್ಚಿಗೆ ಹಣ ತೆಗೆದುಕೊಂಡು
ಬಾ ಅಂತಾ ಹೇಳಿ ಹೊಡೆ ಬಡಿ ಮಾಡುತ್ತಾ ಬಂದಿರುತ್ತಾರೆ. ಅಲ್ಲದೇ ಈಗ ಒಂದು ತಿಂಗಳ ಹಿಂದೆ ನಮ್ಮ ಭಾವ ನಮ್ಮ ಅಕ್ಕಳಿಗೆ ಮತ್ತೆ ತವರು ಮನೆಯಿಂದ ಖರ್ಚಿಗೆ ಹತ್ತು ಸಾವಿರ ರೂಪಾಯಿ ಹಣ ತೆಗೆದುಕೊಂಡು ಬಾ ಅಂತಾ ಹೇಳಿ ಹೊಡೆ ಬಡಿ ಮಾಡಿದ್ದು. ಇಂದು ದಿನಾಂಕ 15-10-14 ರಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ನನ್ನ ಚಿಕ್ಕಪ್ಪ ಹಣಮಂತ ಇವರ ಪೋನಿಗೆ ಪಟ್ಟಣ ಗ್ರಾಮದ ದತ್ತು ಪಾಟೀಲ ಇವರು ಪೋನ ಮಾಡಿ ನಮ್ಮ ಅಕ್ಕ ಸತ್ತಿರುತ್ತಾಳೆ ಅಂತಾ ತಿಳಿಸಿದ್ದು, ಈ ವಿಷಯ ಕೇಳಿ ನಾನು ಮತ್ತು ಚಿಕ್ಕಪ್ಪ ಹಣಮಂತ, ತಾಯಿ ನಾಗಮ್ಮಾ ಮತ್ತು ಊರಿನ ಇತರೇ ಜನರು ಪಟ್ಟಣ ಗ್ರಾಮಕ್ಕೆ ಹೋಗಿ ನೋಡಲಾಗಿ ಅಕ್ಕಳ ಶವ ನೆಲದ ಮೇಲೆ ಮಲಗಿಸಿದ್ದು, ಅವಳ ಕುತ್ತಿಗಿಗೆ ನೇಣು ಹಾಕಿದ ಗಾಯದ ಗುರುತು ಇಂಡು ಬಂದಿರುತ್ತದೆ. ನಮ್ಮ ಅಕ್ಕ ಇವಳಿಗೆ ಆಕೆಯ ಗಂಡ ಲಕ್ಕಪ್ಪ, ಮೈದನ ರವಿ ಅತ್ತೆ ಹೀರಾಬಾಯಿ ಮೂವರು ಕೂಡಿ ಈ ಒಂದು ತಿಂಗಳ ಹಿಂದೆ ಹತ್ತು ಸಾವಿರ ರೂ. ಹಣ ಕೊಡಲಾರದ್ದಕ್ಕೆ ಅದೇ ದ್ವೇಷದಿಂದ ನಮ್ಮ ಅಕ್ಕಳಿಗೆ ಓಡನಿ ಬಟ್ಟೆಯಿಂದ ಕುತ್ತಿಗಿಗೆ ಬಿಗಿದು ಕೊಲೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ
ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ 15-10-2014 ರಂದು ಅಫಜಲಪೂರ ಪಟ್ಟಣದ ಕಾರ್ಯದ ದೇವಿಯ ಗುಡಿಯ ಮುಂದೆ ಸಾರ್ವಜನಿಕರ
ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ
ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ
ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು
ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಸಿ.ಪಿ.ಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ
ದೇವಿಯ ಗುಡಿಯಿಂದ ಸ್ವಲ್ಪ ದೂರದಲ್ಲಿ ನಮ್ಮ ಜೀಪ ನಿಲ್ಲಿಸಿ ಮರೆಯಾಗಿ ನಿಂತು ನೋಡಲು ದೇವಿಯ ಗುಡಿಯ
ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ
ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು
ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಶಿವಾಜಿ ತಂದೆ ನರ್ಸಪ್ಪ ಜಮಾದಾರ ಸಾ|| ಕರಜಗಿ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 270/-
ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು
ಮರಳಿ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಸಂದೀಪ ತಂದೆ ಬಾನುದಾಸರಾವ ಪಾಟೀಲ ಸಾ: ಗೋದುತಾಯಿ ನಗರ ಗುಲಬರ್ಗಾ ಇವರು ದಿನಾಂಕ
02/10/2014 ರಂದು ಮುಂಜಾನೆ 10-35 ಗಂಟೆ ಸುಮಾರಿಗೆ ನನ್ನ ಸ್ವಗ್ರಾಮಕ್ಕೆ ಹೊಗುವ ಸಲುವಾಗಿ
ಲ್ಯಾಪಟಾಪ ಬ್ಯಾಗಿನಲ್ಲಿ ಹೆಚ್.ಪಿ ಲ್ಯಾಪಟಾಪ, ಒಂದು ಡಾಟಾ ಕಾರ್ಡ, ಪೇನ ಡ್ರೈವ, 2 ವರ್ಕ ಡ್ರೈರಿ ಮತ್ತು ಬಟ್ಟೆಗಳನ್ನು ಹಾಕಿಕೊಂಡು ಗುಲಬರ್ಗಾ ಬಸ ನಿಲ್ದಾಣದಲ್ಲಿ
ಬಸವಕಲ್ಯಾಣಕ್ಕೆ ಹೊಗುವ ಕೆ.ಎಸ್.ಆರ್.ಟಿ.ಸಿ ಬಸ್ಸ ನಂ. ಕೆಎ 38-ಎಫ್-696 ನೇದ್ದರಲ್ಲಿ ನನ್ನ
ಬ್ಯಾಗವನ್ನು ಇಟ್ಟು ನೀರಿನ ಬಾಟಲ ತರಲು ಕ್ಯಾಂಟಿನಿಗೆ ಹೊಗಿ ಬರುವಷ್ಟರಲ್ಲಿ ಯಾರೋ ನನ್ನ
ಲ್ಯಾಪಟಾಪವುಳ್ಳ ಬ್ಯಾಗವನ್ನು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ. ಕಳುವಾದ ನನ್ನ ಹೆಚ್.ಪಿ ಲ್ಯಾಪಟಾಪ ಮತ್ತು ಚಾರ್ಜರ
ಇದರ ಬೆಲೆ 30000/- ರೂ ನೇದ್ದನ್ನು ಪತ್ತೆ
ಹಚ್ಚಿಕೊಡಬೇಕೆಂದು ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ
ವಾಹನಗಳ ವಶ ಮತ್ತು ಬಂಧನ :
ಕಮಲಾಪೂರ ಠಾಣೆ : ದಿನಾಂಕ: 15/10/2014 ರಂದು ಶ್ರೀ,ಗಜಾನನ್ ಪಿ.ಎಸ್.ಐ ಕಮಲಾಪೂರ ಪೊಲೀಸ್ ಠಾಣೆ ರವರು ಮುಂಜಾನೆ 0945 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಸಂ.218 ರ ಓಕಳಿ ಕ್ರಾಸ
ಹತ್ತೀರ ಬರುತ್ತಿರುವಾಗ ಅಲ್ಲಿ ಇಬ್ಬರು ವ್ಯಕ್ತಿಗಳು ಎರಡು ಮೋಟರ ಸೈಕಲಗಳ ಸಮೇತ ನಿಂತಿದ್ದು ಅವರು ನಮ್ಮ ಜೀಪನ್ನು ನೋಡಿ ಸಂಶಯಾಸ್ಪದವಾಗಿ
ವರ್ತಿಸುತ್ತಾ ಮತ್ತು ತಮ್ಮನ್ನು ಮರಮಾಚುತ್ತಿರುವದನ್ನು ನೋಡಿ ನನ್ನ ಜೋತೆಗೆ ಕರ್ತವ್ಯದಲ್ಲಿದ್ದ
ಪಿ.ಸಿ-310 ರವರ ಸಹಾಯದಿಂದ ಇಬ್ಬರಿಗೆ ಹಿಡಿದು ಅವರ ಹೆಸರು
ವಿಳಾಸದ ಬಗ್ಗೆ ವಿಚಾರ ಮಾಡಲು ಸರಿಯಾದ ಉತ್ತರ ಕೋಡದೆ ಸಂಶಯಾಸ್ಪದವಾಗಿ ವರ್ತಿಸಿದ್ದು
ಮತ್ತು ಅವರ ಹತ್ತೀರವಿದ್ದ ಮೋಟರ ಸೈಕಲಗಳ
ಕಾಗದ ಪತ್ರಗಳು ತೋರಿಸುವಂತೆ ಹೇಳಲು ಯಾವುದೇ ಸಮಂಜಸವಾದ
ಉತ್ತರ ನೀಡಲಿಲ್ಲ ಮತ್ತು ಕಾಗದ ಪತ್ರಗಳು ಹಾಜರ ಪಡಿಸಲಿಲ್ಲ ಸದರಿಯವರು ಹೊಂದಿದ ಮೋಟರ ಸೈಕಲಗಳು
ವಾರಸುದಾರರ ಬಗ್ಗೆ ಖಚಿತವಾಗಿ ತಿಳಿಸದೆ
ಇದ್ದರಿಂದ ಸದರಿ ಮೋಟರ .ಸೈಕಲಗಳು ಸಂಶಯಾಸ್ಪದ ಸ್ವತ್ತುಗಳು ಇರುವುದರ ಬಗ್ಗೆ ಬಲವಾದ ಸಂಶಯ
ಬಂದಿದ್ದರಿಂದ ಪಂಚರನ್ನು ಬರಮಾಡಿಕೊಂಡು ದಿನಾಂಕ:
15-10-2014 ರ ಮುಂಜಾನೆ 10-00 ಗಂಟೆಯಿಂದ 11-00 ಗಂಟೆಯ ಅವಧಿಯಲ್ಲಿ ಜಪ್ತಿ ಪಂಚನಾಮೆಯನ್ನು
ಬರೆಸಿಕೊಂಡು ಇಬ್ಬರು ಆರೋಪಿತರನ್ನು ದಸ್ತಗಿರಿ
ಮಾಡಿಕೊಂಡು ಮತ್ತು
ಜಪ್ತಿ ಪಡಿಸಿಕೊಂಡ ಬಜಾಜ್ ಪಲ್ಸರ್
ಮೋ.ಸೈಕಲ್ ನಂ ಕೆ.ಎ-56-ಇ-6141 ಅದರ ಚೆಸ್ಸಿ ನಂ MD2A11CZHDCM78907 ಇಂಜಿನ್ ನಂ DHZPDM71100 ಮತ್ತು ಹಿರೊ
ಹೊಂಡಾ ಸ್ಪೇಲಂಡರ ಪ್ರೋ ಮೋ.ಸೈಕಲ್ ನಂ ಕೆಎ-32-ಇಎ-9185 MBLHA10ADCHA5536 ಇಂಜಿನ್ ನಂ HA10EHCHA65608 ನೇದ್ದರ ಸಮೇತ
ಠಾಣೆಗೆ ಮರಳಿ ಆರೋಪಿ ಮತ್ತು ಮುದ್ದೇಮಾಲುಗಳೋಂದಿಗೆ ಕಮಲಾಪೂರ
ಠಾಣೆಗೆ ಬಂದು ಸದರಿಯವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.