ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 04-02-2021
ಸಿ.ಇ.ಎನ್ ಕ್ರೈಂ ಪೊಲೀಸ ಠಾಣೆ ಬೀದರ ಅಪರಾಧ ಸಂ. 01/2021, ಕಲಂ. 420 ಐಪಿಸಿ ಮತ್ತು 66(ಸಿ), (ಡಿ) :-
ದಿನಾಂಕ 28-01-2021 ರಂದು ಬೆಳಿಗ್ಗೆ 1030 ಗಂಟೆ ಸುಮಾರಿಗೆ ಫಿರ್ಯಾದಿ ಇಂದು ಗಂಡ ಈಶ್ವರ ಚಿದಕ್ ವಯ: 40 ವರ್ಷ, ಜಾತಿ: ಮಾದಿಗ, ಸಾ: ಸಿರ್ಸಿ(ಎ), ಸದ್ಯ: ಮೇಹಕರ ಗ್ರಾಮ ರವರು ಭಾಲ್ಕಿ ಎಸ್.ಬಿ.ಐ ಎಟಿಎಂ ನಲ್ಲಿ ಹಣ ಡ್ರಾ ಮಾಡಿಕೊಳ್ಳಲು ಹೋದಾಗ ಅಪರಿಚಿತ ವ್ಯಕ್ತಿ ಫಿರ್ಯಾದಿಯು ಹಣ ಡ್ರಾ ಮಾಡಿಕೊಳ್ಳುವಾಗ ಪಿನ್ ನಂಬರ ನೋಡಿಕೊಂಡು ಹಣ ತೆಗೆದ ನಂತರ ಎಟಿಎಂ ಕಾರ್ಡ ಮಶೀನದಿಂದ ತೆಗೆದುಕೊಂಡು ಫಿರ್ಯಾದಿಗೆ ಹಣ ಏಣಿಕೆ ಮಾಡಿಕೊಳ್ಳುವಂತೆ ಹೇಳಿ ಫಿರ್ಯಾದಿಯ ಗಮನ ಬೇರೆ ಕಡೆ ಹರಿಸಿ ಸದರಿ ಎಟಿಎಂ ಕಾರ್ಡ ಬದಲಾಯಿಸಿ ಅದೇ ತರಹದ ಬೇರೆ ಎಟಿಎಂ ಕಾರ್ಡ ಫಿರ್ಯಾದಿಗೆ ಮರಳಿ ಕೊಟ್ಟ ಫಿರ್ಯಾದಿಯವರ ಎಟಿಎಂ ಕಾರ್ಡ ಮತ್ತು ಪಿನ್ ನಂಬರ ಬಳಸಿ ಫಿರ್ಯಾದಿಯವರ ಬ್ಯಾಂಕ ಖಾತೆಯಿಂದ ಒಟ್ಟು 48,500/- ರೂಪಾಯಿ ತೆಗೆದುಕೊಂಡು ಮೋಸ ಮಾಡಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 03-02-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 20/2021, ಕಲಂ. 454, 457, 380 ಐಪಿಸಿ :-
ದಿನಾಂಕ 18-01-2021 ರಂದು 1800 ಗಂಟೆಗೆ ಫಿರ್ಯಾದಿ ಸಮಿನಾ ಆಫ್ರೀನ ಗಂಡ ಶೇಖ ಇನಾಯತ ವಯ: 30 ವರ್ಷ, ಜಾತಿ: ಮುಸ್ಲಿಂ, ಸಾ: ಮನೆ ನಂ. 9-5-476/1 ಹೈದರ ಕಾಲೋನಿ ಬೀದರ ತನ್ನ ಮನೆಗೆ ಬೀಗ ಹಾಕಿ ಮುಲ್ತಾನಿ ಕಾಲೋನಿಗೆ ತಮ್ಮ ಸಂಬಂಧಿಯವರ ಮನೆಗೆ ಹೋದಾಗ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿಯವರ ಮನೆಯ ಹಾಲನಲ್ಲಿದ್ದ 1) ಒಂದು ಸೋನಿ ಕಂಪನಿಯ ಟಿ.ವಿ 40 ಇಂಚ ಅ.ಕಿ 40,000/- ರೂ., 2) ಡೇಲ ಕಂಪನಿಯ ಲ್ಯಾಪಟಾಪ ಗ್ರೇ ಬಣ್ಣದು ಅ.ಕಿ 10,000/- ರೂ., 3) ಕಂಟಮ ಕಂಪನಿಯ ಐಪ್ಯಾಡ ಒಟ್ಟು 02 ಅ.ಕಿ 4000/- ರೂ., 4) ಸ್ಯಾಮಸಂಗ ಐ.ಪ್ಯಾಡ ಅ.ಕಿ 8000/- ರೂ., 5) ಲಿನೊವೋ ಐ.ಪ್ಯಾಡ ಅ.ಕಿ 5000/- ರೂ. ಐ.ಎಂ.ಇ.ಐ ನಂ. 868159028868714 ಹಾಗೂ ಮಲಗುವ ಕೊಣೆಯಲ್ಲಿದ್ದ ಅಲಮಾರಿ ಕೀಲಿ ಒಡೆದು ಅದರಲ್ಲಿದ್ದ 6) 04 ಬೇಬಿ ರಿಂಗ 04 ಗ್ರಾಮ ಅ.ಕಿ 20,000/- ರೂ., 7) ಮಕ್ಕಳ ಮನಕಿ ಬಂಗಾರದು 02 ಗ್ರಾಮ ಅ.ಕಿ. 8000/- ರೂ., 8) ಬೇಳ್ಳಿಯ ಕಾಲು ಚೇನು 10 ತೋಲೆ ಅ.ಕಿ 5000/- ರೂ., 9) ಸೋನಿ ಕಂಪನಿಯ ಡಿ.ವಿ.ಡಿ. ಪ್ಲೇಯರ್ ಅ.ಕಿ 3000/- ರೂ., 10) ಸ್ಯಾಮಸಂಗ ಕಂಪನಿಯ ಎರಡು ಮೋಬೈಲಗಳು ಅ.ಕಿ 20,000/- ರೂ., 11) ಎಸೆಸ ಕಂಪನಿಯ ಒಂದು ಮೋಬೈಲ ಐ.ಎಂ.ಇ.ಐ ನಂ. 357252083513701 & 357252083513719 ಅ.ಕಿ 5000/- ರೂ., 12) ನಗದು ಹಣ 15,000/- ರೂ. ಹೀಗೆ ಒಟ್ಟು 1,43,000/- ರೂ., ಬೇಲೆ ಬಾಳುವ ವಸ್ತುಗಳು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 03-02-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.