Police Bhavan Kalaburagi

Police Bhavan Kalaburagi

Wednesday, November 1, 2017

BIDAR DISTRICT DAILY CRIME UPDATE 01-11-2017¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 01-11-2017

ºÀ½îSÉÃqÀ (©) ¥Éưøï oÁuÉ AiÀÄÄ.r.Dgï £ÀA. 14/2017, PÀ®A. 174 ¹.Dgï.¦.¹ :-
ಫಿರ್ಯಾದಿ ಭೀಮರಾವ ತಂದೆ ವೀರಪ್ಪಾ ನರಸಗೊಂಡಿ ವಯ: 59 ವರ್ಷ, ಜಾತಿ: ಲಿಂಗಾಯತ, ಸಾ: ದುಬಲಗುಂಡಿ ರವರಿಗೆ ದುಬಲಗುಂಡಿ ಶಿವಾರ ಹೊಲ ಸರ್ವೆ ನಂ. 213 ಮತ್ತು 214 ರಲ್ಲಿ ಒಟ್ಟು 11 ಎಕ್ಕರೆ ಜಮೀನು ಇದ್ದು, ಸದರಿ ಜಮೀನು ಸಂಬಂಧವಾಗಿ ನ್ಯಾಶನಲೈಸ್ ಬ್ಯಾಂಕ ಮತ್ತು ಪಿ.ಕೆ.ಪಿ.ಎಸ್ ಬ್ಯಾಂಕಿನಲ್ಲಿ ಹಾಗು ಖಾಸಗಿ ಸಾಲ ಸೇರಿ ಒಟ್ಟು 8 ರಿಂದ 9 ಲಕ್ಷದ ವರೆಗೆ ಸಾಲವಾಗಿದ್ದು, ಈಗ ಸುಮಾರು 4-5 ವರ್ಷದಿಂದ ಹೊಲದಲ್ಲಿ ಸರಿಯಾಗಿ ಬೆಳೆ ಬೆಳೆಯದ ಕಾರಣ ಫಿರ್ಯಾದಿಗೆ ಮನೆ ನಡೆಸುವುದು ಕಷ್ಟ ಆಗುತ್ತಿತ್ತು, ಹೀಗೆ ಫಿರ್ಯಾದಿಯವರ ಹೆಂಡತಿ ಶಾಂತಾಬಾಯಿ ಗಂಡ ಭೀಮರಾವ ನರಸಗೊಂಡಿ ವಯ 42 ವರ್ಷ, ಜಾತಿ: ಲಿಂಗಾಯತ, ಸಾ: ದುಬಲಗುಂಡಿ ರವರು ತನ್ನ ಗಂಡನ ಕಷ್ಟ ಚಿಂತೆಯನ್ನು ನೋಡಿ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ದಿನಾಂಕ 31-10-2017 ರಂದು 0800 ಗಂಟೆಯಿಂದ 0900 ಗಂಟೆಯ ಮಧ್ಯಾವಧಿಯಲ್ಲಿ ತನ್ನ ಹೊಲದ ಪಕ್ಕದ ಹೊಲದವರಾದ ಕಲ್ಲಪ್ಪಾ ಚಂದನಕೇರೆ ರವರ ಹೊಲದಲ್ಲಿರುವ ಬಾವಿಯ ನೀರಿನಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮನ್ನಾಎಖೇಳ್ಳಿ ಪೋಲಿಸ್ ಠಾಣೆ ಯು.ಡಿ.ಆರ್ ನಂ. 18/2017, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 25-10-2017 ರಂದು ಫಿರ್ಯಾದಿ ರಂಗಮ್ಮಾ ಗಂಡ ಜಗನ್ನಾಥ ವಯ: 24 ವರ್ಷ, ಜಾತಿ: ಕಬ್ಬಲಿಗ, ಸಾ: ರೇಕುಳಗಿ ರವರ ಗಂಡನಾದ ಜಗನ್ನಾಥ ತಂದೆ ನರಸಪ್ಪಾ ಗಿರಗಂಟಿ ವಯ: 28 ವರ್ಷ, ಜಾತಿ:  ಕಬ್ಬಲಿಗ, ಸಾ: ರೇಕುಳಗಿ ರವರು ತನ್ನ ಹೊಲದಲ್ಲಿ ಬೆಳೆದಿದ್ದ ತೊಗರಿ ಬೆಳೆ ನೋಡಲು ಹೊಗಿದ್ದು ಅಲ್ಲಿ ಛಳಿ ಜಾಸ್ತಿಯಾದ ಪ್ರಯುಕ್ತ ಕಾಯಿಸಿಕೊಳ್ಳಲು ಬಂಕಿ ಹಚ್ಚಿ ಕಾಯಿಸಿ ಕೊಳ್ಳುತ್ತಿರುವಾಗ ಆಕಸ್ಮೀಕವಾಗಿ ಗಂಡನ ಲುಂಗಿಗೆ ಬೆಂಕಿ ತಗುಲಿದ ಪ್ರಯುಕ್ತ ಅವರ ಮೈ ಸುಟ್ಟಿದ್ದು, ಎರಡು ಕಾಲು, ಮುಖ, ಹೊಟ್ಟೆಯ ಭಾಗ, ಎರಡು ಕೈಗಳು, ತೊಡೆಗೆಳು ಸುಟ್ಟಿದ್ದರಿಂದ ಚಿಕಿತ್ಸೆ ಕುರಿತು ಮನ್ನಾಎಖೆಳ್ಳಿ ಆಸ್ಪತ್ರೆಗೆ ತಂದಾಗ ವೈದ್ಯಾಧಿಕಾರಿಗಳು ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ಕಳುಹಿಸಿದ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಗಾಂಧಿ ಆಸ್ಪತ್ರೆಗೆ ಕಳುಹಿಸಿದಾಗ ಚಿಕಿತ್ಸೆಯ ಸಮಯದಲ್ಲಿ ಫಿರ್ಯಾದಿಯವರ ಗಂಡ ದಿನಾಂಕ 29-10-2017 ರಂದು  ಮೃತಪಟ್ಟಿರುತ್ತಾನೆ, ತನ್ನ ಗಂಡನ ಸಾವಿನಲ್ಲಿ ಯಾರ ಮೇಲೆ ಯಾವುದೆ ರೀತಿಯ ಸಂಶಯ ಇರುವುದಿಲ್ಲಾ, ಸದರಿ ಘಟನೆ ಆಕಸ್ಮಿಕವಾಗಿ ಜರೂಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರು ನೀಡಿದ ಹೇಳಿಕೆಯ ಸಾರಾಂಶದ ಮೇರೆಗೆ ದಿನಾಂಕ 31-10-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀ½îSÉÃqÀ (©) ¥ÉưøÀ oÁuÉ C¥ÀgÁzsÀ ¸ÀA. 157/2017, PÀ®A. 406, 409, 420 eÉÆvÉ 34 L¦¹ :-
ದಿನಾಂಕ 31-10-2017 ರಂದು ಫಿರ್ಯಾದಿ ಸಂಗಮೇಶ ಪಾಟೀಲ ಮಾಜಿ ಅಧ್ಯಕ್ಷರು ಬಿ.ಎಸ್.ಎಸ್.ಕೆ ಹಳ್ಳಿಖೇಡ (ಬಿ) ರವರ ನೀಡಿದ ಸಾರಾಂಶವೆನೆಂದರೆ ಬೀದರ ಸಹಕಾರ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಕಬ್ಬು ಕಟಾವು ಮಾಡುವ ಗುತ್ತೆದಾರರಿಂದ ಸುಮಾರು 11 ಲಾರಿಗಳು 2008 ನೇ ಸಾಲಿನಲ್ಲಿ ಜಪ್ತಿ ಮಾಡಿ ಇಡಲಾಗಿತ್ತು, ಫಿರ್ಯಾದಿ ಮತ್ತು ಬಿ.ಎಸ್.ಎಸ್.ಕೆ ಕಾರ್ಖಾನೆಯ ನಿರ್ದೆಶಕರಾದ ಕಿರಣ ಚಂದಾ ರವರು ದಿನಾಂಕ 23-10-2017 ರಂದು ಬಾಯಲಾರ ಪೂಜೆಗೆಂದು ಬಿ.ಎಸ್.ಎಸ್.ಕೆ ಕಾರ್ಖಾನೆಗೆ ಬಂದಾಗ ಜಪ್ತಿ ಮಾಡಿದ ಲಾರಿಗಳು ಕಾಣಿಸಲಿಲ್ಲ, ಆಗ ಅವರು ಕಾರ್ಖಾನೆಯ ಭದ್ರತಾ ಅಧಿಕಾರಿಯಾದ ಮಲ್ಲಿಕಾರ್ಜುನ ಭರಶೆಟ್ಟಿ ರವರನ್ನು ವಿಚಾರಿಸಿದಾಗ ಅವರು ನೀಡಿದ ಮಾಹಿತಿ ಪ್ರಕಾರ ಮಾನ್ಯ ಅಧ್ಯಕ್ಷರು ಸಂಜಯಖೇಣಿ ಮತ್ತು ಪ್ರಭಾರಿ ವ್ಯವಸ್ಥಾಪಕ ನಿರ್ದೆಶಕರಾದ ಶಿವಶರಣಪ್ಪಾ ಬಸಪ್ಪಾ ಹಾಗು ಮುಖ್ಯ ಕಬ್ಬು ಅಭಿವೃಧಿ ಅಧಿಕಾರಿಯಾದ ಸತೀಶ ಚೊಂಡೆ ರವರುಗಳ ಮೌಖಿಕ ಆದೇಶ ಅಪ್ಪಣೆಯ ಮೇರೆಗೆ ಕಾರ್ಖಾನೆಯ ಮುಖ್ಯದ್ವಾರದಿಂದ ನಾನು ಲಾರಿಗಳು ಬಿಡುಗಡೆ ಮಾಡಿರುತ್ತೇನೆ ಅಂತ ಭದ್ರತಾ ಅಧಿಕಾರಿಯಾದ ಮಲ್ಲಿಕಾರ್ಜುನ ಭರಶೆಟ್ಟಿ ಅವರು ದಾಖಲಾತಿ ಪ್ರತಿಗಳು ನೀಡಿದ್ದು, ದಾಖಲಾತಿ ಪ್ರಕಾರ ಸದರಿ ಲಾರಿಗಳನ್ನು ಗುಜರಿ ಅಂಗಡಿಯವನಾದ ಇಸಾಮೋದ್ದಿನ್ ಪಟೇಲ ಬಸವಕಲ್ಯಾಣ ಇವರು ತೆಗೆದುಕೊಂಡು ಹೋಗಿರುತ್ತಾರೆ ಅಂತ ಹೇಳಿರುತ್ತಾರೆ, ಸದರಿ ಲಾರಿಗಳನ್ನು ತೆಗೆದುಕೊಂಡು ಹೋದ ದಿನಾಂಕ ಮತ್ತು ಲಾರಿ ನಂಬರಗಳು ಇಂತಿವೆ, ದಿನಾಂಕ 16-09-2017 ರಂದು ಲಾರಿ ನಂ. ಎಪಿ-09/ವ್ಹಿ-6554, ಕೆಎ-38/ಎ-2072, ಎಂ.ಹೆಚ್-12/ಸಿ.ಹೆಚ್-2139, ಎಂ.ಹೆಚ್-22/ಎನ್-0072, ದಿನಾಂಕ 20-09-2017 ರಂದು ಲಾರಿ ನಂ. ಎಂ.ಹೆಚ್-26/ಬಿ-7963, ಎಂ.ಹೆಚ್-06/ಕೆ-3768, ಎಪಿ-37/ಟಿ-4059 ಮತ್ತು ದಿನಾಂಕ 22-09-2017 ರಂದು ಲಾರಿ ನಂ. ಎಂ.ಹೆಚ್-16/ಕ್ಯು-1433, ಎಂ.ಹೆಚ್-27/ಎಕ್ಸ-3337, ಎಂ.ಹೆಚ್-04/ಪಿ-6456, ಎಂ.ಹೆಚ್-15/ಕ್ಯು-1673 ನೇದ್ದವುಗಳನ್ನು ತೆಗೆದುಕೊಂಡು ಹೋಗಿರುತ್ತಾರೆ, ಸದರಿ ಲಾರಿಗಳನ್ನು ಕಾರ್ಖಾನೆಯ ಅಧ್ಯಕ್ಷರಾದ ಆರೋಪಿತರಾದ ಸಂಜಯಖೇಣಿ, ಪ್ರಭಾರಿ ವ್ಯವಸ್ಥಾಪಕ ನಿರ್ದೆಶಕರಾದ ಶಿವಶರಣಪ್ಪಾ ಬಸಪ್ಪಾ, ಕಬ್ಬು ಅಭಿವೃಧಿ ಅಧಿಕಾರಿಯಾದ ಸತೀಶ ಚೊಂಡೆ ಹಾಗು ಮಾರಾಟ ವಿಭಾಗದ ಸುಭಾಶಚಂದ್ರ ನಾಗಶೆಟ್ಟಿ ರವರುಗಳು ಸೇರಿಕೊಂಡು ಕಬ್ಬು ಕಟಾವು ಮಾಡುತ್ತಿದ್ದವರ ಲಾರಿಗಳು ಹಿಡಿದುಕೊಂಡು ಇದ್ದ ಲಾರಿಗಳನ್ನು ಯಾವುದೆ ಪರವಾನಿಗೆ ಪಡೆಯದೆ ಮತ್ತು ಮಾಲೀಕರನ್ನು ಕೇಳದೆ ತಮ್ಮ ಲಾಭಕ್ಕೋಸ್ಕರ ಗುಜರಿ ವ್ಯಾಪಾರ ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

KALABURAGI DISTRICT REPORTED CRIMES

ಆಕ್ರಮ ಕೂಟ ಕಟ್ಟಿಕೊಂಡು ಸರಕಾರಿ ಕರ್ತವ್ಯಕ್ಕೆ ಅಡ ತಡೆ ಮಾಡಿ ಮಾರಣಾಂತಿಕ ಹಲ್ಲೆ ಮಾಡಿದ ಪ್ರಕರಣಗಳು  :
ಜೇವರಗಿ ಠಾಣೆ : ದಿನಾಂಕ: 30-10-17 ರಂದು ಮದ್ಯಾಹ್ನ ಜೇವರಗಿ ಪೊಲೀಸ ಠಾಣೆ ಪ್ರಕರಣಕ್ಕೆ ಸಂಬಂಧಪಟ್ಟ ಆರೋಪಿತನಾದ ಸಿದ್ದಲಿಂಗ ಸ್ವಾಮಿ ಅಂದೋಲಾ ಇವರನ್ನು ಬಂದಿಸಲು ಜೇವರಗಿ ಪೊಲೀಸರು ಅಂದೋಲಾ ಗ್ರಾಮಕ್ಕೆ ಹೋಗಿರುತ್ತಾರೆ. ಅವರನ್ನು ದಸ್ತಗೀರಿ ಮಾಡಿದಲ್ಲಿ ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗುವ ಸಾದ್ಯತೆ ಇರುತ್ತದೆ. ನೀವು ತಕ್ಷಣ ಸಿಬ್ಬಂದಿವರೊಂದಿಗೆ ಜೇವರಗಿ ಪೊಲೀಸ ಠಾಣೆಗೆ ಹೋಗಿರಿ ಅಂತಾ ಮೇಲಾಧಿಕಾರಿಗಳ ಮೌಖಿಕ ಆದೇಶದಂತೆ ನಾನು ಜೇವರಗಿಗೆ ಬಂದಾಗ ಡಿ ಎಸ್ ಪಿ ಗ್ರಾಮಾಂತರ ಉಪ ವಿಭಾಗ ಕಲಬುರಗಿ ರವರು ನನಗೆ, ಅಂದೋಲಾ ಸ್ವಾಮಿಗಳನ್ನು ದಸ್ತಗೀರಿ ಮಾಡಿ ಠಾಣೆಗೆ ತರುವಾಗ ಜನರು ಮದ್ಯ ಬಂದು ತಕರಾರು ಮಾಡಬಹುದು, ನೀವು ಕೆಲ್ಲೂರ ಗ್ರಾಮದ ಯುಕೆಪಿ ಕ್ಯಾಂಪ ಹತ್ತಿರ ಇದ್ದು ಕರ್ತವ್ಯ ನಿರ್ವಹಿಸಬೇಕು ಅಂತಾ ಹೇಳಿದರು. ಅದರಂತೆ ನಾನು ಮತ್ತು ಬಸವರಾಜ ಕೆ ಡಿ ಎಸ್ ಪಿ ಶಹಾಬಾದ, ಶಂಕರಗೌಡ ಪಾಟೀಲ ಸಿಪಿಐ ಚಿತ್ತಾಪೂರ, ಘಾಳಪ್ಪಾ ಪಿಐ ರೋಜಾ ಮತ್ತು ಜೇವರಗಿ ಠಾಣೆಯಿಂದ, ಹೊರಗಡೆ ಠಾಣೆಗಳಿಂದ ಬಂದೋಬಸ್ತ ಕರ್ತವ್ಯಕ್ಕೆ ಬಂದಿದ್ದ ಅಧಿಕಾರಿ ಸಿಬ್ಬಂದಿ ಜನರು ಅಲ್ಲದೆ ಡಿಎಆರ್ ವಾಹನ ಸಂ, ಕೆಎ-32-ಜಿ-405 ರಲ್ಲಿದ್ದ ಸಿಬ್ಬಂದಿಯವರೆಲ್ಲರು ಕರ್ತವ್ಯದ ಮೇಲೆ ಇದ್ದೇವು. ರಾತ್ರಿ 8-30 ಗಂಟೆ ಸುಮಾರಿಗೆ ನಮ್ಮ ಹತ್ತಿರ 1] ಶರಣು ಕೋಳಕೂರ ಸಾ: ಜೇವರಗಿ 2] ಅಪ್ಪು ಗುಬ್ಬೇವಾಡಗಿ ಸಾ: ಕಲಬುರಗಿ 3] ರಾಜಶೇಖರ ಗುಡೂರ 04] ಪ್ರದೀಪ ರಾಠೋಡ 5] ಸಿದ್ದು ಕೆಲ್ಲೂರ 6] ಈಶ್ವರ ಹಿಪ್ಪರಗಿ 7] ನಾಗರಾಜ ಮಾಲಿಪಾಟಿಲ್‌ ಸಾ: ರಾಸಣಗಿ 8] ಮಲ್ಲಿಕಾರ್ಜುನ್ ಲಕ್ಕಾಣಿ ಸಾ: ಆಂದೋಲಾ 9] ಶಿವಕುಮಾರ ಜೇವರ್ಗಿ ಸಾ: ಅಂದೋಲಾ 10] ಮಲ್ಕಪ್ಪಾ ಪೂಜಾರಿ ಸಾ: ಚೆನ್ನೂರ 11] ಮಲ್ಲಿಕಾರ್ಜುನ್‌ ಪೂಜಾರಿ ಸಾ: ಚೆನ್ನೂರ 12] ಆನಂದ ತಂದೆ ರಮೇಶ ದೇಸಾಯಿ ಸಾ: ಜೇರಟಗಿ 13] ಧರ್ಮಾ ಚಿನ್ನಾ ರಾಠೋಡ 14] ಶಿವಶರಣಪ್ಪಾ ತಂದೆ ಸೂಗಪ್ಪ ಹಂಗರಗಿ ಸಾ: ಅಂದೋಲಾ 15] ಮೋನೇಶ ತಂದೆ ದ್ಯಾವಪ್ಪ ತಳವಾರ ಸಾ: ಆಂದೋಲಾ 16] ಮಹಾಂತಯ್ಯ ತಂದೆ ಈರಯ್ಯ ಪತ್ರಿಮಠ ಸಾ: ಅಂದೋಲಾ 17] ಭೀಮರಾಯ ತಳವಾರ 18] ಆನಂದ ಕುಸ್ತಿ ಯಡ್ರಾಮಿ 19] ಬಸವರಾಜ ಹಂದಗಿ 20] ರಮೇಶ ದರ್ಶನಾಪೂರ 21] ಅನಿಲ್‌ ತಂದೆ ರವಿಂದ್ರ ಚೆವ್ಹಾಣ ಸಾ: ಕಟ್ಟಿಸಂಗಾವಿ 22] ದಶರಥ ದೇಸಾಯಿ ಶಹಾಬಜಾರ 23] ತೋಟಯ್ಯ ತಂದೆ ಶರಣಯ್ಯ ಕೆಲ್ಲೂರ 24) ಲಕ್ಷ್ಮಣ ತಂದೆ ಸಿದ್ದರಾಮಪ್ಪಾ ಸಾ: ಕಾಸರ ಭೋಸಗಾ 25] ಅಮರ ತಂದೆ ರಮೇಶ ಬಿಜಾಪೂರ 26] ಅಮರೇಶ ತಂದೆ ಸಂಗಣ್ಣ ದಮೇತಿ ಸಾ: ಆಂದೋಲಾ 27] ಸಂಗು ಡ್ರೈವರ್‌ ಸಾ: ಆಂದೋಲಾ 28] ಕರಣೇಶ ಬಿ ಹಂಗರಗಿ 29] ಸಂಗಮನಾಥ ತಂದೆ ಶಿವಶರಣಪ್ಪ ಪೀರಪ್ಪಗೋಳ 30] ಹೊನ್ನಪ್ಪ ತಂದೆ ಭೀಮರಾಯ ನಾಟಿಕರ್‌ 31] ಲಕ್ಷ್ಮೀಕಾಂತ ಸಾದ್ವಿ ಕಲಬುರಗಿ 32] ವಿಜಯ ಪಾಟಿಲ್‌ ಕಲಬುರಗಿ 33] ಪ್ರವೀಣ ಕುಮಾರ ಕುಂಟೋಜಿಮಠ 34] ಮಲ್ಲಣ್ಣಗೌಡ ಕಟ್ಟಿಸಂಗಾವಿ 35] ನಿಂಗಣಗೌಡ ಮಾಲಿ ಪಾಟಿಲ್ 36] ಸಂದೀಪ್‌ ಮಹೇಂದ್ರಕರ್‌ ಯಾದಗೀರ 37] ಮಡಿವಾಳಪ್ಪ ತಂದೆ ಹಲಕಟ್ಟಪ್ಪ ತಳವಾರ ಸಾ: ಯಡ್ರಾಮಿ 38] ವಿಶ್ವನಾಥ ತಂದೆ ನೂರಂದಪ್ಪಾ ಮಾಲಿ ಪಾಟಿಲ್‌ ಸಾ: ಯಡ್ರಾಮಿ 39] ಅಂಬರೇಶ ಎಸ್‌ ಜೆವಳಗಿ ಸಾ: ಯಡ್ರಾಮಿ 40] ಬಸಣ್ಣಗೌಡ ತಂದೆ ಹಣಮಂತ್ರಾಯಗೌಡ ಪಾಟಿಲ್‌ ಸಾ: ಯಡ್ರಾಮಿ 41] ಶಿವಕುಮಾರ ಎಮ್‌ ನಾಟಿಕರ್‌ ಸಾ: ಯಡ್ರಾಮಿ 42] ಸಿದ್ದು ಎಮ್‌ ನೈಕೋಡಿ ಸಾ: ಯಡ್ರಾಮಿ 43] ವಿರೇಶ ಸ್ವಾಮಿ ಸಾ: ಅಖಂಡಹಳ್ಳಿ 44] ಹುಲೆಪ್ಪ ತಂದೆ ಜಾನಪ್ಪ ಮದರಿ 45] ಚಂದ್ರಶೇಖರ ತಂದೆ ಜಾನಪ್ಪ ಮದರಿ ಸಾ: ಕಾಸರಬೋಸಗಾ 46] ದೇವು ಪತ್ತಾರ ಸಾ: ಅಂದೋಲಾ 47] ಪ್ರದೀಪ್‌ ಜೇವರ್ಗಿ 48] ಕರಣಪ್ಪಾ ಕಾವೇರಿ ವೈನಶಾಪ್‌ ಸಾ: ಅಂದೋಲಾ 49] ದ್ಯಾವಪ್ಪಾ @ ದೇವಿಂದ್ರ ತಂದೆ ಶರಣಪ್ಪ ಹಡಪಾದ ಸಾ: ಅಂದೋಲಾ 50] ಪವನಕುಮಾರ 51] ಸಿದ್ದರಾಮ ತಳವಾರ 52] ರಮೇಶ ತಳವಾರ 53] ಮಹಾಂತೇಶ ಹಾದಿಮನಿ 54] ಶಶಿಕಾಂತ ಜೈನಾಪೂರ 55] ಸಂತೋಷ ಜೈನಾಪೂರ 56] ವಿರೇಶ ಪಾಟಿಲ್‌ ಸಾ: ಕಟ್ಟಿಸಂಗಾವಿ 57] ಶಾಂತಯ್ಯ ಸ್ವಾಮಿ ಹಿರೆಮಠ 58] ಭೋಜರಾಜು ತಂದೆ ಸುಬ್ಬರಾಯ ಹಟಗಾರ ಸಾ: ಜೇರಟಗಿ 59] ಚಂದ್ರಶೇಖರ ತಂದೆ ಶರಣಪ್ಪಾ ಪೂಜಾರಿ 60] ರೇವಣಸಿದ್ದ ತಂದೆ ಶರಣಪ್ಪಾ ವಾಲಿಕರ್‌ 61] ಹಣಮಂತ ತಂದೆ ಬಸಪ್ಪಾ ಪೂಜಾರಿ 62] ಅಶೋಕ ತಂದೆ ನಿಂಗಪ್ಪಾ ಬಿಜಾಪೂರ 63] ಈರಣ್ಣ ರದ್ದೆವಾಡಗಿ 64] ಲಕ್ಷ್ಮಣ ತಂದೆ ಸಿದ್ದರಾಮಪ್ಪಾ ಕಾಸರಬೋಸಗಾ 65] ಅಶೋಕ ತಂದೆ ಕರಣಪ್ಪ ಹಂದಗಿ ಸಾ: ಅಂದೋಲಾ ಮಡಿವಾಳಪ್ಪಾ ಹೂಗಾರ 66] ಶರಣಪ್ಪಾ ಗುತ್ತೆದಾರ 67] ಪರಶುರಾಮ ತಂದೆ ರೇವಣಸಿದ್ದಪ್ಪ ಪೂಜಾರಿ 68] ಪರುತಪ್ಪ ತಂದೆ ಶ್ರೀಮಂತಪ್ಪಾ ತಳ್ಳೊಳ್ಳಿ ಸಾ: ಅಂದೋಲಾ 69] ಅರುಣ ತಂದೆ ಶರಣಯ್ಯ ಕಲ್ಲೂರ ಸಾ: ಅಂದೋಲಾ 70] ವಿಶ್ವರಾದ್ಯ ತಂದೆ ಕರಬಸಯ್ಯ ಹಿರೇಮಠ ಸಾ: ಅಂದೋಲಾ 71] ಶರಣಯ್ಯ ತಂದೆ ಪಕಿರಯ್ಯ ಹಿರೇಮಠ ಸಾ: ಅಂದೋಲಾ 72] ಮಹಾಂತಗೌಡ ತಂದೆ ತೋಟಪ್ಪ ಗೌಡ ಮಾಲಿ ಬಿರಾದಾರ ಸಾ: ಅಂದೋಲಾ 73] ಹಣಮಂತ ತಂದೆ ದೇವಣ್ಣ ದೊರೆ 74] ಮೊನೇಶ ತಂದೆ ದ್ಯಾವಪ್ಪ ಪುಜಾರಿ ಸಾ: ಅಂದೋಲಾ  75] ಗೌರೇಶ ತಂದೆ ಚಂದ್ರಪ್ಫಾ ಸರಕಾರಿ ಮನೆ 76] ಸುರೇಶ ತಂದೆ ಮಡಿವಾಳಪ್ಪ ಹೂಗಾರ ಸಾ: ಕಾಸರಬೋಸಗಾ 77] ಮಾಳಪ್ಪ ತಂದೆ ಶರಣಪ್ಪ ಪೂಜಾರಿ ಸಾ: ಕಾಸರಬೋಸಗಾ 78] ಈರಣ್ಣ ತಂದೆ ನಾಗಪ್ಪ ಪಡಶೆಟ್ಟಿ ಸಾ: ಕಾಸರಬೋಸಗಾ 79] ಮಡಿವಾಳಯ್ಯ ತಂದೆ ಶಂಕ್ರಯ್ಯ ಕೂಕನೂರ  ಸಾ: ಜೇರಟಗಿ 80] ಪ್ರಮೋದ ತಂದೆ ಅಮೃತ ಸಾ: ಅಖಂಡಹಳ್ಳಿ 81] ಪ್ರಭು ತಂದೆ ಸಿದ್ದಣ್ಣ ನೈಕೋಡಿ ಸಾ: ಯಡ್ರಾಮಿ 82] ಪ್ರಭು ತಂದೆ ರಾಮಣ್ಣ ಚಿಗರಿ ಸಾ: ಯಡ್ರಾಮಿ 83] ಮಲ್ಲಿಕಾರ್ಜುನ @ ಪಿಂಟು ತಂದೆ ರೇವಣಗೌಡ ಮಾಲಿಪಾಟೀಲ ಸಾ: ಯಡ್ರಾಮಿ 84] ಸಿದ್ದು ತಂದೆ ನಂದಪ್ಪ ಬಿಲ್ಲಾರ ಸಾ: ಜನತಾ ಕಾಲನಿ ಜೇವರಗಿ 85] ಗೌತಮ ತಂದೆ ದಶರಥ ಡುಗನಕರ ಸಾ: ಜನತಾ ಕಾಲನಿ ಜೇವರಗಿ ಮತ್ತು ಇನ್ನಿತರರು ಕೂಡಿ ಅಕ್ರಮಕೂಟ ಕಟ್ಟಿಕೊಂಡು ಮೋಟರ ಸೈಕಲ ಮತ್ತು ಇತರ ವಾಹನಗಳಲ್ಲಿ ನಮ್ಮ ಹತ್ತಿರ ಬಂದು, ರಂಡಿ ಮಕ್ಕಳು ಪೊಲೀಸರು ಅಂದೋಲಾ ಸ್ವಾಮಿಗಳಿಗೆ ಹಿಡಿದುಕೊಂಡು ಹೋಗಿದ್ದಾರೆ ಇವರಿಗೆ ಖಲಾಸ ಮಾಡಿ ಜೇವರಗಿ ಠಾಣೆಗೆ ಹೋಗಿ ಕೆಳೋಣ ನಡಿರಿ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದರು. ನಾನು ಅವರಿಗೆ ಅಂದೋಲಾ ಸ್ವಾಮಿಗಳ ವಿರುದ್ದ ಜೇವರಗಿ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ. ಅದಕ್ಕಾಗಿ ಹಿಡಿದುಕೊಂಡು ಹೋಗಿರುತ್ತಾರೆ. ನೀವು ಈ ರೀತಿ ಮಾಡುವದು ಸರಿಯಲ್ಲ ಅಂತಾ ಅನ್ನುತ್ತಿದ್ದಾಗ ಇನ್ನೂಳಿದವರೆಲ್ಲರೂ ಚೀರಾಡುತ್ತಾ ಅವರ ಕೈಯ್ಯಲ್ಲಿದ್ದ  ಬಡಿಗೆಯಿಂದ, ಕಲ್ಲಿನಿಂದ ಅಲ್ಲದೆ ಕೈಯಿಂದ ಕರ್ತವ್ಯದ ಮೇಲಿದ್ದ ಪೊಲೀಸರಿಗೆ ಹೊಡೆದಿರುತ್ತಾರೆ. ಮತ್ತು ಕರ್ತವ್ಯದ ಮೇಲಿದ್ದ ಪೊಲೀಸರ ಮೇಲೆ ಅಪಾಯಕರ ರೀತಿಯಲ್ಲಿ ಮನುಷ್ಯರ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಸಿಕ್ಕಾಪಟ್ಟೆ ಕಲ್ಲುಗಳನ್ನು ತೂರಾಟ ಮಾಡಿರುತ್ತಾರೆ. ಪೊಲೀಸರಿಗೆ ಕೊಲೆ ಮಾಡುವ ಉದ್ದೇಶದಿಂದ ಶರಣು ಕೋಳಕೂರ ಇತನು ವಿಠಲ ಪಿಸಿ 126 ಸ್ಟೇಸನ ಬಜಾರ ಪೊಲೀಸ ಠಾಣೆ ಇತನಿಗೆ ಕಲ್ಲಿನಿಂದ ಎದೆಗೆ, ಕೈ ಕಾಲುಗಳಿಗೆ ಹೊಡೆದಿರುತ್ತಾನೆ. ಇನ್ನೂಳೀದವರು ಕೂಡಾ ನಮ್ಮ ಮೇಲೆ ಕಲ್ಲು ತೂರಾಟ ಮಾಡಿರುತ್ತಾರೆ. ಇದರಿಂದ ಕರ್ತವ್ಯದ ಮೇಲಿದ್ದ ಶಂಕರಗೌಡ ಪಾಟೀಲ ಸಿಪಿಐ ರವರಿಗೆ, ಒಬಳೇಶ ಪಿಸಿ 175 ಶಹಾಬಾದ ಠಾಣೆ, ಶಿವರಾಜಕುಮಾರ ಪಿಸಿ 498, ಅನೀಲ ಪಿಸಿ 232, ಮಲ್ಲಿಕಾರ್ಜುನ ಪಿಸಿ 1260, ಭಾಗಪ್ಪ ಪಿಸಿ 701, ಡಿಎಆರ್ ಸಿಬ್ಬಂದಿ ಜನರಾದ 1] ನಂದಾರೆಡ್ಡಿ ಎಹೆಚ್ ಸಿ 202, 2] ಕೊಟ್ಟೆಪ್ಪ ಬಿ ಎಪಿಸಿ 357, 3] ನಾಗೇಂದ್ರ ಎಹೆಚ್ ಸಿ 126, 4] ಅವ್ವಪ್ಪ ಎಪಿಸಿ 179 ರವರಿಗೆ ಹಾಗೂ ನನ್ನ ಬಲ ತೊಡೆಯ ಒಳಭಾಗಕ್ಕೆ ಕಲ್ಲಿನೇಟು ಬಿದ್ದುದಕ್ಕೆ ಗುಪ್ತಪೆಟ್ಟಾಗಿರುತ್ತದೆ. ಅಲ್ಲದೆ ಕಲ್ಲು ತೂರಾಟದಲ್ಲಿ ಸರಕಾರಿ ಮೋಟರ ಸೈಕಲ ನಂ, ಕೆಎ-32-ಜಿ-467 ನೇದ್ದು ಕೂಡಾ ಜಖಂಗೊಂಡಿರುತ್ತದೆ. ನಂತರ ನಾವು ಅಲ್ಲಿದ್ದ ಗುಂಪು ಚದುರಿಸಿ ಆ ಮೇಲೆ  ಗಾಯಗೊಂಡ ಪೋಲಿಸರೆಲ್ಲರೂ ನಮ್ಮ ಪೊಲೀಸ ವಾಹನಗಳಲ್ಲಿ ಜೇವರಗಿಗೆ ಬಂದು  ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆಯಾಗಿ ಇಲಾಜ ಪಡೆದುಕೊಂಡಿರುತ್ತೇವೆ. ಮೇಲ್ಕಂಡ ಆರೋಪಿತರನ್ನು ನಾನು ಹಾಗೂ ಜೊತೆಯಲ್ಲಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ವಾಹನಗಳ ಲೈಟಿನ ಬೆಳಕಿನಲ್ಲಿ ನೋಡಿ ತಿಳಿದುಕೊಂಡಿರುತ್ತೇವೆ. ಮೇಲ್ಕಂಡ ಶರಣು ಕೋಳಕೂರ ಮತ್ತು ಆತನ ಸಂಗಡಿಗರೆಲ್ಲರೂ ಕೈಯ್ಯಲ್ಲಿ ಕಲ್ಲು, ಬಡಿಗೆ ಹಿಡಿದುಕೊಂಡು ಅಕ್ರಮವಾಗಿ ಗುಂಪು ಕಟ್ಟಿಕೊಂಡು ಕರ್ತವ್ಯದ ಮೇಲೆ ಇದ್ದ ನಮ್ಮ ಹತ್ತಿರ ಬಂದು ಅವಾಚ್ಯ ಶಬ್ದಗಳಿಂದ ಬೈದು, ಕರ್ತವ್ಯಕ್ಕೆ ಅಡೆ ತಡೆ ಮಾಡಿ ಕೊಲೆ ಮಾಡುವ ಉದ್ದೇಶದಿಂದ ಅಪಾಯಕರ ರೀತಿಯಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿ, ಕೈಯಿಂದ ಕಲ್ಲಿನಿಂದ ಬಡಿಗೆಯಿಂದ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ. ಅಂತಾ ಶ್ರೀ ಲೋಕೇಶ ಭರಮಪ್ಪ ಜಗಲಾಸರ ಎಎಸ್ ಪಿ ಎ ಉಪ ವಿಭಾಗ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ಶ್ರೀ ಮಂಜುನಾಥ  ಜಿ. ಹೂಗರ ಪಿ.ಎಸ್.ಐ  ಜೇವರಗಿ ಪೊಲೀಸ ಠಾಣೆ ರವರು ದಿನಾಂಕ 31-10-2017 ರಂದು ಮುಂಜಾನೆ ಆಂದೊಲಾ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಸ್ಥಳದಲ್ಲಿದ್ದ  ಹೊಟೇಲಗಳು ಅಂಗಡಿಗಳು ಮತ್ತು ಪಾನ ಡಬ್ಬಾಗಳು ತೆರವುಗೊಳಿಸಿದ ವಿಷಯದಲ್ಲಿ ಆಂದೊಲಾ ಗ್ರಾಮದಲ್ಲಿ ಖಾದರಸಾಬ ಯಲಗಾರ ಮತ್ತು ಶಿವಪ್ಪ ಲಕ್ಕಾಣಿ ಇವರ ಮದ್ಯದಲ್ಲಿ ಜಗಳವಾಗಿದ್ದು .ಸದರಿ ಜಗಳಕ್ಕೆ ಮೂಲ ಕಾರಣ ಆಂದೊಲ ಗ್ರಾಮದ ಸಿದ್ದಲಿಂಗಯ್ಯ ಕೆ. ಸ್ವಾಮಿ ಇವರು ಇರುತ್ತಾರೆ. ಅಲ್ಲದೆ ಜೆವರಗಿ ಪಟ್ಟಣದಲ್ಲಿ ಶ್ರೀರಾಮ ಸೇನಾ ಸಂಘಂಟನೆಯ ವತಿಯಿಂದ ಪ್ರತಿಷ್ಟಾಪನೆ ಮಾಡಿದ ಗಣೇಶ ವಿಗ್ರಹ ವಿಸರ್ಜನೆ ಮೇರವಣಿಗೆ ಕಾಲಕ್ಕೆ ಸಿದ್ದಲಿಂಗಯ್ಯ ಸ್ವಾಮಿ ಇವರು ಮುಸ್ಲಿಂರ ವಿರುದ್ದವಾಗಿ ಮಾತನಾಡಿ ಪ್ರಚೊದನಕಾರಿ ಬಾಷಣ ಮಾಡಿದ ವಿಷಯದಲ್ಲಿ ಮತ್ತು  ಸದರಿ ಸಿದ್ದಲಿಂಗಯ್ಯ ಸ್ವಾಮಿಯವರು ಸಾರ್ವಜನಿಕ ಸಮಾರಂಭಗಳಲ್ಲಿ ಮಾತು ತೆಗದರೆ ಮುಸ್ಲಿಂರ ವಿರುದ್ದ ಮಾತನಾಡುತ್ತಾ ಬಂದಿರುತ್ತಾನೆ. ಅಂತಾ ಮುಸ್ಲಿಂರು ಸದರಿ ಸಿದ್ದಲಿಂಗಯ್ಯ ಸ್ವಾಮಿ ಆಂದೊಲಾ ರವರ ವಿರುದ್ದ ಜೇವರಗಿ ಪಟ್ಟಣದ ನೂರಾರು ಮುಸ್ಲಿಂರು ಆಕ್ರಮ ಕೂಟ ಕಟ್ಟಿಕೊಂಡು, ಸಿದ್ದಲಿಂಗ ಸ್ವಾಮಿಗೆ ದಸ್ತಗೀರ ಮಾಡಬೇಕು ಮತ್ತು ಅವರನ್ನು ಗಡಿಪಾರು ಮಾಡಬೆಕೆಂದು ಪ್ರತಿಭಟನೆ ಮೇರವಣಿಗೆ ಮಾಡಲು ಸರಕಾರದಿಂದ ಯಾವುದೆ ಪರವಾನಿಗೆ ಪಡೆದುಕೊಳ್ಳದೆ ಜೇವರಗಿ ಪಟ್ಟಣದಲ್ಲಿ ದಿನಾಂಕ; 23.10.2017 ರಂದು ಸಿದ್ದಲಿಂಗಯ್ಯ ಸ್ವಾಮಿ ರವರ ವಿರುದ್ದ ಪ್ರತಿಭಟನೆ ಮಾಡಿದ್ದು ಅಲ್ಲದೆ ದಿನಾಂಕ 28.10.2017 ರಂದು ಮುಸ್ಲಿಂ ಸಂಘಟನೆಯ ಎಸ್.ಡಿ.ಪಿ.ಐ. ಇತರೆ ಸಂಘಟನೆಗಳು ಮತ್ತು ದಲಿತ ಸೇನಾ ಸಂಘಟನೆ & ಹಿಂದುಳಿದ ಸಂಘಟನೆಗಳು ಆಂದೊಲಾ ಚಲೊ ಕಾರ್ಯಾಕ್ರಮ ಹಮ್ಮಿಕೊಂಡಿದ್ದು ಇರುತ್ತದೆ.  ಈ ಸಮಯದಲ್ಲಿ ಜೇವರಗಿ ಪಟ್ಟಣದಲ್ಲಿ & ಆಂದೊಲಾ ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಡಿಯಿಂದ ಸಿಪಿಐ ಜೇವರಗಿ ರವರ ವರದಿಯಂತೆ ಮಾನ್ಯ ತಸೀಲ್ದಾರರು ಜೇವರಗಿ ರವರು ಆಂದೊಲಾ ಮತ್ತು ಜೇವರಗಿಯಲ್ಲಿ ಕಲಂ 144 ಸಿ.ಆರ್.ಪಿ.ಸಿ. ನಿಷೇದಾಜ್ಞೆ ಹೊರಡಿಸಿದ್ದು ಇದೆ. ಆದರೂ ಸಹ ಎಸ್‌ಡಿಪಿಐ ಸಂಘಟನೆಯವರು ಜೇವರಗಿ ಮಿನಿ ವಿದಾನಸೌದ ದಿಂದ ಆಂದೊಲಾ ಚಲೊ ಕಾರ್ಯಕ್ರಮ ಮಾಡುತ್ತಿರುವ ಬಗ್ಗೆ ಗೊತ್ತಾಗಿ ನಾನು ಮತ್ತು ನಮ್ಮ ಠಾಣೆಯ ಶ್ರೀ ಗುರುಬಸ್ಸಪ್ಪ ಹೆಚ್.ಸಿ. 65, ಶ್ರೀ ತುಕರಾಮ ಹೆಚ್.ಸಿ. 166, ಶ್ರೀ ಸುಬ್ಬುನಾಯ್ಕ ಹೆಚ್.ಸಿ. 446, ಶ್ರೀ ನಾಗಯ್ಯ ಹೆಚ್.ಸಿ. 335, ಶ್ರೀ ಬಾಗಪ್ಪ ಸಿಪಿಸಿ 701, ಶ್ರೀ ಸಿದ್ದಣ್ಣ ಸಿಪಿಸಿ-23 ವರರೆಲ್ಲರೂ  ಕೂಡಿಕೊಂಡು ಮತ್ತು ಬೇರೆ ಬೇರೆ ಪೊಲೀಸ್ ಠಾಣೆಗಳಿಂದ ಬಂದ ಶ್ರೀ ಸಿದ್ದರಾಯ ಬಳೂರ್ಗಿ ಪಿ.ಎಸ್.ಐ ನೇಲೊಗಿ ಠಾಣೆ , ಶ್ರೀ ನಾಗಭೂಷಣ ಎ.ಎಸ್.ಐ ಯಡ್ರಾಮಿ ಪೊಲೀಸ್ ಠಾಣೆ, ಮತ್ತು ಅವರ ಸಿಬ್ಬಂದಿಯವರು ಕೂಡಿಕೊಂಡು ಜೇವರಗಿ ಪಟ್ಟಣದ ತಸೀಲ್ದಾರ ಕಾರ್ಯಾಲಯದ ಹತ್ತಿರ ಮದ್ಯಾಹ್ನ 12.30 ಗಂಟೆಯ ಸುಮಾರಿಗೆ ಬಂದೋಬಸ್ತ ಕರ್ತವ್ಯದಲ್ಲಿ ನಿರತರಾಗಿದ್ದಾಗ 1) ಮಹ್ಮದ ರಫೀಯೋದ್ದಿನ ಬಾಗ ತಂದೆ ಬಸೀರೊದ್ದೀನ ಬಾಗ  ಸಾಃ ಎ.ಎಸ್.ಕೆ.ಮಿಲ್ ಕಲಬುರಗಿ 2) ಅಬ್ದುಲ್ ಲತೀಫ್ ತಂದೆ ಮೈಹಿಬೂಬ ಸಾಃ ಗಂವ್ಹಾರ, 3) ಮಹಿಬೂಬ ಪಟೇಲ ತಂದೆ ಇಮಾಮ ಪಟೇಲ ಕಾಸರ ಬೊಸಗಾ, 4) ಶಬ್ಬೀರ ಪಟೆಲ ಸಾಃ ಕಾಸರ ಬೊಸಗಾ, 5) ಬಿ.ಕೆ. ದಾವೂದ್ ಇಬ್ರಾಹಿಂ ತಂದೆ ಅಬ್ದುಲ್ ರಜಾಕ ಸಾಃ ಜೇವರಗಿ 6) ಸಾಹೇಬ ಪಟೆಲ ತಂದೆ ಮೈಹಿಬೂಬ ಪಟೆಲ ಕಾಸರ್ ಬೊಸಗಾ, 7) ಎಜಾಜ ಖಾನ ತಂದೆ ಇಸ್ಮಾಯಿಲ್ ಖಾನ  ಸಾಃ ದೇವದುರ್ಗ, 08) ಸಾದೀಕ ತಂದೆ ಸೈಯ್ಯದ ರಫೀಕ್‌ ಸಾಃ ಶಹಾಪೂರ, 9) ಸಿರಾಜ ತಂದೆ ಅಬ್ದುಲ್ ಖಾಲಿದ ಸಾಃ ಶಹಾಪೂರ, 10) ಮಹ್ಮದ್ ತೈಯ್ಯಬ ತಂದೆ ಮಹ್ಮದ್ ಅಹೇಮದಸಾಬ ಸಾಃ ಜೇವರಗಿ 11) ಶೇಖ ತಂದೆ ಜಮೀರ ಶೇಖ ಸಾಃ ಜೇವರಗಿ, 12) ಮಹ್ಮದ್ ಜಾವೀದ ತಂದೆ ಅಬ್ದುಲ್ ಜಬ್ಬಾರ ಸಾಃ ಶಹಾಬಾದ, 13) ಮಹ್ಮದ್ ಮೋಸಿನ್ ತಂದೆ ಮಹ್ಮದ್ ಮೊಯೊದ್ದೀನ ಸಾಃ ಅಬುಬಕರ್ ಕಾಲೊನಿ ಕಲಬುರಗಿ 14) ಶಬ್ಬೀರಖಾನ ತಂದೆ ಅಮೀರಖಾನ ಸಾಃ ಕಾಸರ ಬೊಸ್ಗಾ 15) ಮಹ್ಮದ್ ದಾವೂದ್ ತಂದೆ ಬಸೀರ ಅಹೇಮದ್ ಸಾಃ ಶಹಾಪೂರ, 16) ಮಹ್ಮದ್ ಅಕ್ಬರ್ ತಂದೆ ಇನಾಯತ ಪಾಸಾ 17) ದೌಲ್‌ ಪಾಷಾ ತಂದೆ ಖಾಜಾ ಹುಸೇನ ಗೊಬ್ಬರವಾಡಿ ಸಾಃ ಯಲಗೊಡ, 18) ಮಕ್ಬೂಲ ತಂದೆ ಇಮಾಮ ಪಟೇಲ ಪೊಲೀಸ್ ಪಾಟೀಲ ಸಾಃ ಯಲಗೊಡ, 19) ಸಿಕಂದರ್ ತಂದೆ ಚಾಂದಪಟೇಲ ಪೊಲೀಸ್ ಪಾಟೀಲ ಸಾಃ ಯಲಗೊಡ, 20) ಅಲೀಮ ಪಟೇಲ ತಂದೆ ಹುಸೇನ ಪಟೆಲ ಸಾಃ ಯಲಗೊಡ, 21) ಸಲಿಮ್ ತಂದೆ ಶಹಾಹುಸೇನ ನಾಯ್ಕೊಡಿ ಸಾಃ ಯಲಗೊಡ,  22) ಮೈಹಿಬೂಬ ತಂದೆ ನಬೀಸಾಬ ಸಾಃ ಯಲಗೊಡ, 23) ಮೈಹಿಬೂಬ್‌ ತಂದೆ ಅಬ್ದುಲ್ ಗಪೂರ ಸಾಃ ಶಾಸ್ತ್ರಿ ಚೌಕ ಜೇವರಗಿ,24) ಮಹಿಬೂಬ ಪಟೇಲ ತಂದೆ ವಜೀರ ಪಟೇಲ; ಸಾ// ಅಬೂಬಕರ ಮಜೀದ ಹತ್ತೀರ ಶಹಾಬಾದ. 25) ಮಹ್ಹಮದ ಇಬ್ರಾಹಿಂ ಶೇಖ  ತಂದೆ ಬಾಬುಮಿಯಾ ಉಪರ ಮಡ್ಡಿ ಶಹಾಬಾದ 26) ಮಹ್ಮದ ಯುನಿಸ್ ತಂದೆ ಅಬ್ದುಲ ರಹಿಮಾನ ಪಟೇಲ ಸಾ// ಜೋಪುಡ ಪಟ್ಟಿ ಜೇವರಗಿ 27) ಮಹ್ಮದ ಹಸನ ತಂದೆ ಮಹ್ಮದ ಹುಸೇನ ಮಿಠಾಯಿವಾಲೆ ಸಾ// ಮುಸ್ಲಿಂ ಬಸ್ತಿ ಜೇವರಗಿ 28) ಮಹಿಬೂಬ ತಂದೆ ರೌವುಪಸಾಬ ಶೇಖ ಸಾ// ಮುಸ್ಲಿಂ ಬಸ್ತಿ ಜೇವರಗಿ 29) ಆರೀಪ್ ತಂದೆ ಹುಸೇನ ಚಾವುಸ ಸಾ// ಕೆ.ಎನ್.ಝೆಡ್  ಹತ್ತಿರ ರಿಂಗರೊಡ ಕಲಬುರಗಿ 30) ಮಹ್ಮದ ಗೌಸುದ್ದಿನ ತಂದೆ ಮಹ್ಮದ ಅಲಿ ಸಾ// ಎ.ಬಿ.ಎಲ್  ಕಾಲೋನಿ  ಶಹಾಬಾದ 31) ಅಬ್ದುಲ ಘನಿ ತಂದೆ ಮಹ್ಮದ ಯುನಿಸ್ ಸಾ// ಮನೆ ನಂ 7/2406 ಇ ಮಹ್ಮದ ಮಜೀದ ಹತ್ತಿರ  ಮೋಮಿನಪೂರ ಕಲಬುರಗಿ 32) ನಸೀರುದ್ದಿನ ತಂದೆ ಮಹ್ಮದ ರುಕ್ಮುದ್ದಿನ  ಸಾ// ಮಹಿಬೂಬ ನಗರ ಕಾಲೋನಿ ಕಲಬುರಗಿ 33) ಸೈಯ್ಯದ ಆಸೀಪ್ ತಂದೆ ಸೈಯ್ಯದ 34) ಸೈಯದ್ ತೌಸಿಫ್ ತಂದೆ ಸೈಯ್ಯದ ರಸೀದ ಲಕಡಿ ಅಡ್ಡಾವಾಲೆ ಸಾಃ ಮಿಲತ ನಗರ ಶಹಾಬಾದ, 35) ಮಹ್ಮದ್ ನಿಜಾಮೊದ್ದೀನ ತಂದೆ ಬಾ ಸಲೀಮೊದ್ದೀನ ಮೀರ್ ಸಾಃ ಹನುಮಾನನಗರ ಮೇನ ರೋಡ ಶಹಾಬಾದ 36) ಇಸೂಫ್ ಅಲೀ ತಂದೆ ಚಂದಪಾಷಾ ಜಮಾದಾರ ಸಾಃ ಕನಕದಾಸ ಚೌಕ ಜೇವರಗಿ, 37) ಮಹ್ಮದ್ ಸಿದ್ದೀಖ ತಂದೆ ಮಹ್ಮದ್ ಇಕ್ಬಾಲ ಕಂಬಾರ, ಸಾಃ ಲಕ್ಮೀಚೌಕ ಜೇವರಗಿ, 38) ಆಸೀಫ್ ಜಿಲಾನಿ ತಂದೆ ಅಬ್ದುಲ್ ಖಾಧಿರಿ ಸಾಃ ಶಹಾಪೂರ 39) ಮಹ್ಮದ್ ಇರ್ಪಾನ ತಂದೆ ಮಹ್ಮದ ಸಲಿಮ್ ಸಾಃ ಶಹಾಪೂರ 40) ಸೈಯ್ಯದ ಜುಲೇಫೆಕರ್ ತಂಧೆ ಸಲಿಮೊದ್ದಿನ ಸರಮತೆ, ಸಾಃ ಶಹಾಪೂರ, 41) ಮೈಹಿಬೂಬ ತಂದೆ ಖಲೀಲಸಾಬ ಸಾಃ ಖಾಜಾ ಕಾಲೊನಿ ಜೇವರಗಿ 42) ಇರ್ಪಾನ ಚಾಂದ ತಂದೆ ಅಬ್ದುಲ್ ರಹಿಮ್ ಸಾಃ ಶಹಾಪೂರ ಇವರೆಲ್ಲರೂ ಹಾಗೂ ಇತರೆ ನೂರಾರು ಜನರು ಕೂಡಿ ಅಕ್ರಮ ಕೂಟ ಮಾಡಿಕೊಂಡು ಕೈಯಲ್ಲಿ ಕಲ್ಲು ಬಡಿಗೆ ಚಾಕು ಹಿಡಿದುಕೊಂಡು ಬಂದು ಜೇವರಗಿ ಪಟ್ಟಣದಲ್ಲಿ ಪ್ರತಿಭಟನೆ ಮಾಡುತ್ತಿದ್ದಾಗ ನಾವು 144 ಕಲಂ ಜಾರಿ ಇದೆ ಗುಂಪು ಗುಂಪಾಗಿ ಜನರು ಸೇರ ಬೇಡರಿ ಇಲ್ಲಿಂದ ಚದುರಿ ಹೋಗಿರಿ ಎಂದು ಹೇಳುತ್ತಿದ್ದಾಗ ನಾವು ಹೇಳಿದ ಆದೇಶ ಪಾಲನೆ ಮಾಡದೆ ಕಲಂ: 144 ಸಿಆರ್‌ಪಿಸಿ ಉಲ್ಲಂಘನೆ ಮಾಡಿರುತ್ತಾರೆ. ಮತ್ತು ಪೋಲಿಸರು ಇಲ್ಲಿಂದ ಹೋಗಿರಿ ಎಂದು ಹೇಳುವಾಗ ಸಲಿಮ್ ತಂದೆ ಶಹಾಹುಸೇನ ನಾಯ್ಕೊಡಿ ಸಾಃ ಯಲಗೊಡ, ಈತನು ರಂಡಿ ಮಕ್ಕಳು ಪೊಲೀಸರು ಸಿದ್ದಲಿಂಗ ಸ್ವಾಮಿಗೆ ಸಪೋರ್ಟ್‌ ಮಾಡುತ್ತಿದ್ದಾರೆ ಹೊಡೆದು ಖಲಾಸ್ ಮಾಡಿರಿ ಎಂದು ಕೊಲೆ ಮಾಡುವ ಉದ್ದೇಶದಿಂದ ನಮ್ಮ ಮೇಲೆ ಕಲ್ಲಿನಿಂದ ಬೀಸಿ ಹೊಡೆದಾಗ ನಾನು ತಪ್ಪಿಸಿಕೊಂಡಿದ್ದು ನಂತರ ಉಳಿದವರು ಸಹ ನಮ್ಮ ಮೇಲೆ ಕಲ್ಲು ತೂರಟ ಮಾಡಿರುತ್ತಾರೆ.  ಕಾರಣ ಈ ಮೇಲಿನ ಎಲ್ಲರು ಕೂಡಿ ಅಕ್ರಮ ಕೂಟ ಮಾಡಿಕೊಂಡು ಬಂದು ಕಲಂ: 144 ಸಿಆರ್‌ಪಿಸಿ ಪ್ರಕಾರ ನಿಷೇದಾಜ್ಞೆ ಜಾರಿ ಆದೇಶ ಉಲ್ಲಂಘನೆ ಮಾಡಿ, ನಮಗೆ ಕೈಯಿಂದ ತಳ್ಳಾಟ ಮಾಡಿ ಸರಕಾರಿ ಕರ್ತವ್ಯಕ್ಕೆ ಅಡತಡೆ ಮಾಡಿ ನಮಗೆ ಕೊಲೆ ಮಾಡುವ ಉದ್ದೇಶದಿಂದ ಚಾಕು, ಬಡಿಗೆ, ಕಲ್ಲು ಹಿಡಿದುಕೊಂಡು ಬಂದು ಕಲ್ಲು ತೂರಾಟ ಮಾಡಿ ಜೀವದ ಭೆದರಿಕೆ ಹಾಕಿ ಓಡಿ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ದಿನಾಂಕ 30-10-2017 ರಂದು ಮದ್ಯಾಹ್ನ ಅಂದೋಲಾ ಗ್ರಾಮದ ಗಸ್ತು ಹೆಚ್ ಸಿ ಶ್ರೀ ಗುರುಬಸಪ್ಪ 65 ಇವರು ಅಪರಾಧ ಸಂ, 282/17 ನೇದ್ದರಲ್ಲಿ ಆರೋಪಿತನಾದ ಸಿದ್ದಲಿಂಗ ಸ್ವಾಮಿ ಕರುಣೇಶ್ವರ ಮಠ ಅಂದೋಲಾ ರವರು ಅಂದೋಲಾ ಮಠಕ್ಕೆ ಬಂದಿದ್ದು ಪುನಹ ಅವರು ತಪ್ಪಿಸಿಕೊಳ್ಳುವ ಸಾದ್ಯತೆ ಇರುತ್ತದೆ ಅಂತಾ ಮಾಹಿತಿ ನೀಡಿದ್ದರು. ಸದರಿ ವಿಷಯದ ಬಗ್ಗೆ ನಾನು ನಮ್ಮ ಮೇಲಾಧಿಕಾರಿಗಳಿಗೆ ಮಾಹಿತಿ ತಿಳಿಸಿ ಜೇವರಗಿ ಠಾಣೆಯ ಸಿಬ್ಬಂದಿ ಜನರಾದ 1] ಭಾಗಪ್ಪ ಪಿಸಿ 701, 2] ವಿಜಯಕುಮಾರ ಪಿಸಿ 961, 3] ಶಿವರಾಜಕುಮಾರ ಪಿಸಿ 498, 4] ಶಿವರಾಯ ಪಿಸಿ 859 ಇವರನ್ನು ಸಂಗಡ ಕರೆದುಕೊಂಡು ಇಲಾಖೆಯ ಜೀಪ ನಂ, ಕೆಎ-32-ಜಿ-427 ನೇದ್ದರಲ್ಲಿ ಅಂದೋಲಾ ಗ್ರಾಮಕ್ಕೆ ಹೋಗಿ ಗುನ್ನೆ ನಂ 282/2017 ಪ್ರಕರಣದ ಆರೋಪಿತನಾಗಿರುವ ಸಿದ್ದಲಿಂಗ ಸ್ವಾಮಿ ಕರುಣೇಶ್ವರ ಮಠ ಅಂದೋಲಾ ರವರು ಅಂದೋಲಾ ಗ್ರಾಮದಲ್ಲಿ ಇರುವ ಬಗ್ಗೆ ನಿಜವಿತ್ತು. ಸಿದ್ದಲಿಂಗ ಸ್ವಾಮಿ ಮಠದಲ್ಲಿ ಇರುವ ಬಗ್ಗೆ ಪುನಹ ಮೇಲಾಧಿಕಾರಿಗಳಿಗೆ ಮಾಹಿತಿ ತಿಳಿಸಲು, ಸ್ಥಳಕ್ಕೆ ಸಿಪಿಐ ಜೇವರಗಿ ರವರು ಬಂದಿದ್ದು ಸ್ವಲ್ಪ ಸಮಯದ ನಂತರ ಮಾನ್ಯ ಡಿಎಸ್ ಪಿ ಗ್ರಾಮೀಣ ಉಪ ವಿಭಾಗ ಕಲಬುರಗಿ ರವರು ಕೂಡಾ ಗ್ರಾಮಕ್ಕೆ ಬಂದರು. ಮಾನ್ಯ ಡಿಎಸ್ ಪಿ ಸಾಹೇಬರು ಹಾಗೂ ನಾನು ಸಿದ್ದಲಿಂಗ ಸ್ವಾಮಿ ಇವರಿಗೆ ನಿಮ್ಮ ವಿರುದ್ದ ಜೇವರಗಿ ಪೊಲೀಸ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ. ನಿಮಗೆ ದಸ್ತಗೀರಿ ಮಾಡಬೇಕಾಗಿದ್ದು ನಮ್ಮ ಸಂಗಡ ಠಾಣೆಗೆ ಬನ್ನಿರಿ ಅಂತಾ ಮನವೋಲಿಸಿದೇವು. ಅದಕ್ಕೆ ಸಿದ್ದಲಿಂಗ ಸ್ವಾಮಿ ಇವರು ನಮ್ಮ ಸಂಗಡ ಠಾಣೆಗೆ ಬರಲು ಒಪ್ಪಿದರು. ಸದರ ಸ್ವಾಮಿ ರವರನ್ನು ವಶಕ್ಕೆ ಪಡೆದುಕೊಂಡು ಹೋಗುವ ಕಾಲಕ್ಕೆ ಗ್ರಾಮಸ್ಥರು ಅಡೆ ತಡೆ ಮಾಡುವ ಸಾದ್ಯತೆಗಳು ಇದ್ದುದರಿಂದ ಉಪ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿಯವರು ಅಂದೋಲಾ ಗ್ರಾಮಕ್ಕೆ ಬಂದರು. ಸ್ವಾಮಿ ಇವರನ್ನು ಕರೆದುಕೊಂಡು ಮಠದ ಮುಂದುಗಡೆ ರೋಡಿನಲ್ಲಿ ಬರುತ್ತಿದ್ದಾಗ ಸಾಯಂಕಾಲ 6-05 ಗಂಟೆಗೆ ಅಂದೋಲಾ ಗ್ರಾಮದ 1) ಮಾನಪ್ಪಾ ತಂದೆ ರಾಮಚಂದ್ರ ಬೈಲ ಪತ್ತಾರ 02) ಸಿದ್ದಪ್ಪ ತಂದೆ ಹಣಮಂತ ವಡ್ಡರ 03) ರಮೇಶ ತಂದೆ ನಾಗಪ್ಪ ಕಟಬೂರ 04) ಅಶೋಕ ತಂದೆ ನಾಗಪ್ಪ ಕಟಬರ  05) ಶಿವಕುಮಾರ ತಂದೆ ಚನ್ನಬಸಪ್ಪಾ ಬಳಬಟ್ಟಿ 06) ಶಿವಲಿಂಗಪ್ಪ ತಂದೆ ಮಹಾದೇವಪ್ಪಾ ದೊಡಮನಿ 07) ಸಿದ್ದರಾಮ ತಂದೆ ಹಣಮಂತ್ರಾಯ ದಿವಾನ 8)  ಕರಣಪ್ಪಾ ತಂದೆ ಶಿವಶರಣಪ್ಫಾ ಬಂಗಾರಿ 9) ಮಹಾಂತೇಶ ತಂದೆ ಚನ್ನಬಸಪ್ಪಾ ಬಳಬಟ್ಟಿ 10) ಕರಣಪ್ಪಾ ತಂದೆ ಸಂಗಣ್ಣ ಮುನ್ನಳ್ಳಿ ಮತ್ತು ಇತರರು ಕೂಡಿ ಅಕ್ರಮಕೂಟ ಕಟ್ಟಿಕೊಂಡು ನಮ್ಮ ಜೀಪಿನ ಮುಂದೆ ಬಂದು ನಮಗೆ ತಡೆದು ನೀವು ಸ್ವಾಮಿಗಳನ್ನು  ಅರೇಸ್ಟ ಮಾಡಬೇಡರಿ, ಅವರನ್ನು ಇಲ್ಲಿಯೇ ಬಿಟ್ಟು ಹೋಗಿರಿ, ಅಂತಾ ಒದರಾಡ ಹತ್ತಿದರು. ಆಗ ಸಿದ್ದಲಿಂಗ ಸ್ವಾಮಿಗಳು ಅಲ್ಲಿ ಗುಂಪು ಕಟ್ಟಿಕೊಂಡು ಬಂದಿದ್ದ ಜನರಿಗೆ ಇಲ್ಲ ನನ್ನ ಮೇಲೆ ಕೇಸು ಇದೆ ನಾನು ಹೋಗಬೇಕಾಗುತ್ತದೆ. ನೀವು ಹೀಗೆ ಮಾಡಬೇಡಿರಿ ಅಂತಾ ಹೇಳಿದರೂ. ಕೂಡಾ ಅವರು ಸಿದ್ದಲಿಂಗ ಸ್ವಾಮಿಗಳ ಮಾತು ಕೇಳದೆ ಕರ್ತವ್ಯದ ಮೇಲಿದ್ದ ನಮಗೆ ಸೂಳೇ ಮಕ್ಕಳೇ ಪೊಲೀಸರೆ ನೀವು ಸ್ವಾಮಿಗಳಿಗೆ ಹೇಗೆ ಕರೆದುಕೊಂಡು ಹೋಗುತ್ತಿರಿ ಹೋಗಿರಿ ನಾವು ಅವರಿಗೆ ಕರೆದುಕೊಂಡು ಹೋಗಲು ಬಿಡುವದಿಲ್ಲ. ಅಂತಾ ನಮ್ಮ ಜೀಪಿನ ಮುಂದೆ ಬಂದು ಮಲಗುವದು. ನಮಗೆ ನೂಕಿಸಿಕೊಟ್ಟು ದಬ್ಬಾಡುವದು ಮಾಡುತ್ತಿರುವಾಗ ಕರ್ತವ್ಯದಲ್ಲಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿ ಜನರು ವಿರೋದ ಮಾಡುತ್ತಿದ್ದ ಅಂದೋಲಾ ಗ್ರಾಮಸ್ಥರನ್ನು ಪಕ್ಕಕ್ಕೆ ಸರಿಸಿ ಸಿದ್ದಲಿಂಗ ಸ್ವಾಮಿ ಇವರನ್ನು ಕರೆದುಕೊಂಡು ಠಾಣೆಗೆ ಬಂದಿರುತ್ತೇವೆ. ಠಾಣೆಯಲ್ಲಿ ವರದಿಯಾದ ಪ್ರಕರಣದ ಆರೋಪಿತನಾದ ಸಿದ್ದಲಿಂಗ ಸ್ವಾಮಿ ಇವರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ತರುವಾಗ ಮೇಲ್ಕಂಡ ಮಾನಪ್ಪಾ ತಂದೆ ರಾಮಚಂದ್ರ ಬೈಲ ಪತ್ತಾರ ಮತ್ತು ಇತರರು ಕೂಡಿ ಅಕ್ರಮ ಕೂಟ ಕಟ್ಟಿಕೊಂಡು ನಮ್ಮ ಹತ್ತಿರ ಬಂದು ಕರ್ತವ್ಯದ ಮೇಲಿದ್ದ ನಮಗೆ ತಡೆದು ಅವಾಚ್ಯ ಶಬ್ದಗಳಿಂದ ಬೈದು ಕರ್ತವ್ಯಕ್ಕೆ ಅಡೆ ತಡೆ ಮಾಡಿರುತ್ತಾರೆ. ಅಂತಾ ಶ್ರೀ ಮಂಜುನಾಥ ಹೂಗಾರ ಪಿಎಸ್ಐ ಜೇವರಗಿ ಪೊಲೀಸ ಠಾಣೆ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 31-10-2017 ಮಣೂರ ಗ್ರಾಮದಲ್ಲಿ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದಾರೆ. ಹಾಗೂ ಮಟಕಾದಲ್ಲಿ ಗೆದ್ದ ಜನರಿಗೆ ಯಾವುದೆ ಹಣ ಕೊಡದೆ ಮೋಸ ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಶ್ರೀ ಭೀಲೂ ಜಾದವ ಎ.ಎಸ್.ಐ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಮಣೂರ ಗ್ರಾಮಕ್ಕೆ ಹೋಗಿ ಬಸ್ ನಿಲ್ದಾಣದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ನಿಂತುಕೊಂಡು ಹೋಗಿ ಬರುವ ಜನಗಳಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದರು. ಹಾಗೂ ಮಟಕಾದಲ್ಲಿ ಹಣ ಗೆದ್ದಂತ ಜನರು ಸದರಿಯವರಿಗೆ ಹಣ ಕೇಳುತ್ತಿದ್ದರು, ಆಗ ಸದರಿಯರು ಯಾವ ಹಣ ನೀನು ಬರೆಸಿದ ನಂಬರ ಬಂದಿಲ್ಲ ಎಂದು ಜನರಿಗೆ ಗೆದ್ದಂತ ಹಣ ಕೊಡದೆ ಮೋಸ ಮಾಡುತ್ತಿದ್ದರು. ಆಗ ನಾನು ಹಾಗೂ ನಮ್ಮ ಸಿಬ್ಬಂದಿ ಜನರು ಪಂಚರ ಸಮಕ್ಷಮ ಸದರಿ ವ್ಯಕ್ತಿಯ ಮೇಲೆ ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ 1) ರಾಜಕುಮಾರ @ ರಾಜು ತಂದೆ ಶಾಂತಪ್ಪ ಎಮ್ಮೆನೋರ ಸಾ : ಮಣುರ ಗ್ರಾಮ ತಾ|| ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 850/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ದೊರೆತವು, 2) ರಾಮ ತಂದೆ ತಿಮ್ಮಯ್ಯ ಗೋಲ್ಲರ ಸಾ : ಮಣುರ ಗ್ರಾಮ ತಾ| ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 900/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ದೊರೆತವು, ಹಿಗೆ ಒಟ್ಟು 1750/- ರೂ ನಗದು ಹಣ, 2 ಮಟಕಾ ಚೀಟಿ, 2 ಪೆನ್ನಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಸ್ಪೋಟಕ ವಸ್ತು ಸ್ಪೊಟಗೊಂಡು ಮೃತಪಟ್ಟ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ನಾಗಮ್ಮ ಗಂಡ ಶಿವಯೋಗೆಪ್ಪ ಗೌನಳ್ಳಿ ಸಾ:ಮೇಳಕುಂದಾ ತಾ:ಜಿ:ಕಲಬುರಗಿ ಹಾ:ವ:ಕೆ ಕೆ ನಗರ ಕಲಬುರಗಿ ಇವರು ಕಪನೂರ ಇಂಡಸ್ಟ್ರೀಯಲ್ ಏರಿಯಾದಲ್ಲಿ ಇರುವ Korvi Activated Earth ಸಾವಳ ಪ್ಯಾಕ್ಟರಿಯಲ್ಲಿ ಕಳೆದ 10 ವರ್ಷಗಳಿಂದ ಲೇಬರ್ ಕೆಲಸ ಮಾಡುತ್ತೇನೆ, ನನ್ನಂತ ಗಂಡ ಶಿವಯೋಗೆಪ್ಪ@ಶಿವಯೋಗಿ ತಂದೆ ಗುಂಡಪ್ಪ ಗೌನಳ್ಳಿ ಇವರು ಕೂಡಾ Korvi Activated Earth ಸಾವಳ ಪ್ಯಕ್ಟರಿಯಲ್ಲಿ ಕಳೆದ 15 ವರ್ಷಗಳಿಂದ ಪ್ಯಾಕ್ಟರಿ ಚಾಲಕ ಅಂತಾ ಕೆಲಸ್ ಮಾಡುತ್ತಾರೆ. ದಿನಾಂಕ 30/10/2017 ರಂದು ಬೆಳಿಗ್ಗೆ 06.00 ಗಂಟೆ ಸುಮಾರಿಗೆ ನನ್ನ ಗಂಡ ಶಿವಯೋಗೆಪ್ಪ ಇವರು ಪ್ಯಾಕ್ಟರಿ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೋದರು ಅದರಂತೆ ನಾನೂ ಕೂಡಾ ಪ್ಯಕ್ಟರಿ ಕೆಲಸಕ್ಕೆಯೆಂದು ಮನೆಯಿಂದ ಪ್ಯಾಕ್ಟರಿಗೆ ಬೆಳಗ್ಗೆ 09-30 ಗಂಟೆಗೆ ಬಂದು ಪ್ಯಾಕ್ಟರಿಯಲ್ಲಿ ಕೆಲಸ್ ಮಾಡುತ್ತಾ ಇದ್ದೆನು. ಬೆಳಿಗಿನ 11-45 ಗಂಟೆ ಸುಮಾರಿಗೆ ಜೋರಾಗಿ ಎನೊ ಬ್ಲಾಸ್ಟ ಶಬ್ದ ಕೇಳಿ ನಾನು ಮತ್ತು ನನ್ನಂತೆ ಕೆಲಸ ಮಾಡುತ್ತಿದ್ದ ಅಂಬಿಕಾ ಗಂಡ ಸೋಮಶೇಖರ ಕುಂಬಾರ , ಮಧುಮತಿ ಗಂಡ ಸಿದ್ದರೂಡ ಸರಚೋಳಿನಿ ಮತ್ತು ಇತರೆ ಹೆಣ್ಣು ಮಕ್ಕಳು ಹಾಗೂ ಅರುಣ, ಚಂದ್ರಶೆಟ್ಟಿ, ಗುರುಲಿಂಗಪ್ಪ ಇತರೆ ಜನರು ಕೂಡಿಕೊಂಡು ನಮ್ಮ ಪ್ಯಾಕ್ಟರಿಯ  Raw Materil Mix ಮಾಡುವ ಮಶೀನ ಹತ್ತೀರ ಹೋಗಿ ನೋಡಲಾಗಿ Raw Materil Mix ಮಾಡುವ ಸ್ಥಳದಲ್ಲಿ ದಕ್ಷಿಣ ದಿಕ್ಕಿನ ಸಾಮಾನು ಹಾಕುವ ಸ್ಥಳದಲ್ಲಿ ಪಶ್ಚಿಮ ದಿಕ್ಕಿನ Waste ಸಾಮಾನುಗಳನ್ನು ಹಾಕುವ ಸ್ಥಳದಲ್ಲಿ ನನ್ನ ಗಂಡನ  ಮೃತ ದೇಹ ಬಿದ್ದಿದ್ದು ನೋಡಲಾಗಿ, ನನ್ನ ಗಂಡನ ಎಡಗಾಲ ಮೊಳಕಾಲು ಕಪ್ಪಾಗಿದ್ದು ಮಾಂಸ ಖಂಡ ಹೊರ ಬಿದ್ದಿದ್ದು ಹೊರಬಂದಿರುತ್ತದೆ, 3) ತೊರಡಗಳು ಒಡೆದು ಮಾಂಸ ಖಂಡ ಹೊರ ಬಂದಿದ್ದು ಮತ್ತು ಶಿಶ್ನ ಕೂಡಾ ಗಾಯವಾಗಿದ್ದು  4) ಹೊಟ್ಟೆಯ ಮೇಲೆ ಮತ್ತು ಹೊಕ್ಕಳ ಹತ್ತೀರ ಅಲ್ಲಲ್ಲಿ 7 ತೂತುಗಳು ಬಿದ್ದ ರಕ್ತಗಾಯಗಳಾಗಿರುತ್ತವೆ. 5) ಎದೆಯ ಮಧ್ಯದಲ್ಲಿ ತೂತು ಬಿದ್ದ ರಕ್ತಗಾಯ  6)ಗದ್ದಕ್ಕೆ ಹರಿದ ರಕ್ತಗಾಯ  7) ಕುತ್ತಿಗೆಯ ಹತ್ತೀರ ಅಲ್ಲಲ್ಲಿ ಸುಟ್ಟಗಾಯಗಳು ಇರುತ್ತವೆ. 8) ಎಡಗೈ ಮೊಳಕೈ ಮೇಲೆ ಹರಿದ ರಕ್ತಗಾಯವಾಗಿದ್ದು ಕಂಡು ಬಂತು. ನಾನು ಮತ್ತು ಚಂದ್ರಶೆಟ್ಟಿ ಅರುಣ, ಗುರುಲಿಂಗಪಗಪ್ಪ ಉದಯಕುಮಾರ ಎಲ್ಲರೂ ನನ್ನ ಗಂಡ ಹೇಗೆ ಮೃತಪಟ್ಟಿದ್ದಾನೆ ಅಂತಾ ವಿಚಾರಣೆ ಮಾಡಲಾಗಿ ಎಲ್ಲರೂ ಪ್ಯಾಕ್ಟರಿಯ ಮಶೀನಗಳು ಮತ್ತು ಕರೆಂಟ ಬೋರ್ಡಗಳು ನೋಡಲಾಗಿ ಎಲ್ಲಾ ಸರಿಯಾಗಿ ಇತ್ತು ನಂತರ ನನ್ನ ಗಂಡನ ಹೇಗೆ ಮೃತಪಟ್ಟಿದ್ದಾನೆ ಅಂತಾ ಸೂಕ್ಷ್ಮವಾಗಿ ಪರಿಶಿಲಿಸಲನೆ ನೋಡಲಾಗಿ Waste ಸಾಮಾನುಗಳು ಹಾಕುವ ಯಾವುದಾದರೂ ಸ್ಪೋಟಕ ವಸ್ತು ಇಟ್ಟಿದ್ದರಿಂದ ಅಲ್ಲಿ ನನ್ನ ಗಂಡ ಟ್ರ್ಯಾಕ್ಟರಕ್ಕೆ ಬೇಕಾಗುವ ಸಾಮಾನುಗಳು ತೆಗೆದುಕೊಳ್ಳಲು ಹೋದಾಗ ಸ್ಪೋಟಕ ವಸ್ತುಗಳ ಮೇಲೆ ಕಾಲಿಟ್ಟಾಗ ಮತ್ತು ಹೇಗೋ ಸ್ಪೋಟಕ ವಸ್ತು ಸ್ಪೋಟಗೊಂಡಿದ್ದು ಸ್ಪೋಟಗೊಂಡ ರಭಸದಿಂದ ನನ್ನ ಗಂಡ ಎಡಗಾಲಿನ ಕಾಲು ಕಟ್ಟಾಗಿ ಉತ್ತರ ದಿಕ್ಕಿನಲ್ಲಿ ಅಂದಾಜು 150 ಪೀಟ್ ಮೇಲೆ ಕಟ್ಟಾಗಿ ಬಿದ್ದಿದ್ದರು ಮತ್ತು ಅಂದಾಜು 80 ಪೀಟ್ ಮೇಲೆ ಪಶ್ಚಿಮಕ್ಕೆ ದಿಕ್ಕಿಗೆ ಇರುವ Waste Room ನ ಗ್ಲಾಸಗಳು ಬಡೆದಿದ್ದು ಮತ್ತು ನನ್ನ ಗಂಡನ ಮೈಯಲ್ಲಿನ ಮಾಂಸದ ತುಕ್ಕಡಿ ಬಿದ್ದಿರುತ್ತದೆ. ಮತ್ತು ನನ್ನ ಗಂಡ ಮೈಯಲ್ಲಿದ್ದ ಬಟ್ಟಿಗಳು ಪೂರ್ತಿ ಸುಟ್ಟು ಸುಟ್ಟಿರುತ್ತದೆ. ಅರೆ ಬರೆ ತುಕುಡಿಗಳು ಬಿದ್ದಿರುತ್ತವೆ. ಸದರಿ Korvi Activated Earth  ಮಾಲಿಕ ಶರಣ ಅಲ್ಲಮ ಪ್ರಭು ಖೂಬಾ ಸಾ: ಖೂಬಾ ಪ್ಲಾಟ್ ಕಲಬುರಗಿ ಮತ್ತು  Raw Materil Mix ಮಾಡುವ ಸ್ಥಳದ ಸೂಪರ್ ವೈಸರ್  ಮುರುಗಪ್ಪ ಹಾಗೂ ಮ್ಯಾನೇಜರ್ ಜಗದೀಶ ತಂದೆ ಶರಣಬಸವರಾಜ ದೇಶಮುಖ ಸಾ:ಸ್ವಸ್ಥಿಕ ನಗರ ಇವರೆಲ್ಲರೂ ಯಾವದೋ ಸುರಕ್ಷತೆ ಇಲ್ಲದೆ ಮತ್ತು ಮುಂಜಾಗೃಕತೆ ಕ್ರಮಕೈಕೊಳ್ಳದೆ ಮತ್ತು ಸ್ಥಳದಲ್ಲಿ ಹಾಜರ ಇರದೆ ಹಾಗು ನಿರ್ಲಕ್ಷತನ ಮಾಡಿ Raw Materil Mix ಸ್ಥಳದಲ್ಲಿ Waste ಸಾಮಾನುಗಳು ಹಾಕುವ ಸ್ಥಳದಲ್ಲಿ ಸ್ಪೋಟಕ ವಸ್ತುಗಳು ಮತ್ತು ಸ್ಪೋಟಗೊಳ್ಳುವ ಕೆಮಿಕಲ್ ಇದ್ದುದರಿಂದ ಸ್ಪೋಟಗೊಂಡು ನನ್ನ ಗಂಡ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ  30-10-2017 ಗುಡ್ಡೆವಾಡಿ ಗ್ರಾಮದ ಕಡೆಯಿಂದ  ಟ್ರ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಹೋಗುತ್ತಿದ್ದರೆ ಅಂತಾ ಬಾತ್ಮಿ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಆನೂರ ಗ್ರಾಮದ ಹೈಸ್ಕೂಲ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ಟ್ರ್ಯಾಕ್ಟರ ಬರುತ್ತಿತ್ತು, ಆಗ ಸದರಿ ಟ್ರ್ಯಾಕ್ಟರನ್ನು  ನಿಲ್ಲಿಸಲು ಕೈ  ಸೂಚನೆ  ಮಾಡಿದಾಗ ನಮ್ಮ ಪೊಲೀಸ ಜೀಪ ನೋಡಿ ಟ್ರ್ಯಾಕ್ಟರನ್ನು ನಿಲ್ಲಿಸಿ ಸ್ಥಳದಲ್ಲಿ ಬಿಟ್ಟು ಓಡಿ ಹೋಗುತ್ತಿದ್ದನ್ನು ಸದರಿಯವನನ್ನು ಬೆನ್ನು ಹತ್ತಿ ಹಿಡಿದು ಹೆಸರು ವಿಳಾಸ ವಿಚಾರಿಸಲು ಮಾಣಿಕಪ್ಪಾ ತಂದೆ ನಿಂಗಪ್ಪಾ ಪೂಜಾರಿ ಸಾ : ಗುಡ್ಡೆವಾಡಿ ಅಂತಾ ತಿಳಿಸಿದ್ದು ಟ್ರ್ಯಾಕ್ಟರ ಮಾಲಿಕರ ಬಗ್ಗೆ ವಿಚಾರಿಸಲು ಸಿದ್ದು @ಸಿದ್ದಪ್ಪ ತಂದೆ ಸಾಯಬಣ್ಣ ದಣ್ಣೂರ ಸಾ: ಗುಡ್ಡೆವಾಡಿ ಅಂತಾ ತಿಳಿಸಿದ್ದು ಮರಳಿನ ಬಗ್ಗೆ ವಿಚಾರಿಸಲು   ತನ್ನ ಹತ್ತಿರ ಯಾವುದೆ ದಾಖಲಾತಿಗಳು ಇರುವುದಿಲ್ಲ ಅಂತ ತಿಳಿಸಿದ್ದು  ಟ್ರಯಾಕ್ಟರ ಚಕ್ಕ ಮಾಡಲು ಜಾನ ಡಿಯರ ಕಂಪನಿಯದಿದ್ದು  ನಂಬರ ಇರಲಿಲ್ಲಾ ಸದರಿ ಟ್ರ್ಯಾಕ್ಟರ ಇಂಜಿನ ನಂಬರ NJCU2112 ಅಂತಾ ಇದ್ದು ಅಂದಾಜ ಕಿಮ್ಮತ್ತು 5,00,000/- ಮತ್ತು ಮರಳಿನ ಕಿಮ್ಮತ್ತು 1800/- ರೂ ಇದ್ದು ಸದರಿಯವನೊಂದಿಗೆ ಟ್ರ್ಯಾಕ್ಟರ ಸಮೇತ  ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಶಾಹಾಬಾದ ನಗರ ಠಾಣೆ : ದಿನಾಂಕ: 29/10/2017 ರಂದು ಶ್ರೀ ಮಹ್ಮದ ರಪೀಕ ತಂದೆ ಮಹ್ಮದ ಹುಸೇನ ಇತನು ಮೋಟಾರ ಸೈಕಲ ನಂಬರ ಕೆ.ಎ. 32 ಅರ್ 1363 ನೇದ್ದರ ಮೇಲೆ ಶಹಾಬಾದ ಮೇಡಿಕಲ್ ಅಂಗಡಿಗೆ ಹೋಗಿ ಮರಳಿ ಶಾಂತ ನಗರಕ್ಕೆ ಹೋಗುವಾಗ ಶಹಾಬಾದ – ವಾಡಿ ಕ್ರಾಸ ರೋಡಿ ರೈಲ್ವೆ ಬ್ರಿಡ್ಜ ಹತ್ತಿರ ರೋಡಿನಲ್ಲಿ ಲಾರಿ ಕೆ.ಎ. 28 ಎ 4738 ನೇದ್ದ ಚಾಲಕ ತನ್ನ ಲಾರಿಯನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿದ್ದರಿಂದ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಾಪೆಟ್ಟು ಆಗಿದ್ದು ಇರುತ್ತದೆ