Police Bhavan Kalaburagi

Police Bhavan Kalaburagi

Wednesday, November 1, 2017

BIDAR DISTRICT DAILY CRIME UPDATE 01-11-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 01-11-2017

ºÀ½îSÉÃqÀ (©) ¥Éưøï oÁuÉ AiÀÄÄ.r.Dgï £ÀA. 14/2017, PÀ®A. 174 ¹.Dgï.¦.¹ :-
ಫಿರ್ಯಾದಿ ಭೀಮರಾವ ತಂದೆ ವೀರಪ್ಪಾ ನರಸಗೊಂಡಿ ವಯ: 59 ವರ್ಷ, ಜಾತಿ: ಲಿಂಗಾಯತ, ಸಾ: ದುಬಲಗುಂಡಿ ರವರಿಗೆ ದುಬಲಗುಂಡಿ ಶಿವಾರ ಹೊಲ ಸರ್ವೆ ನಂ. 213 ಮತ್ತು 214 ರಲ್ಲಿ ಒಟ್ಟು 11 ಎಕ್ಕರೆ ಜಮೀನು ಇದ್ದು, ಸದರಿ ಜಮೀನು ಸಂಬಂಧವಾಗಿ ನ್ಯಾಶನಲೈಸ್ ಬ್ಯಾಂಕ ಮತ್ತು ಪಿ.ಕೆ.ಪಿ.ಎಸ್ ಬ್ಯಾಂಕಿನಲ್ಲಿ ಹಾಗು ಖಾಸಗಿ ಸಾಲ ಸೇರಿ ಒಟ್ಟು 8 ರಿಂದ 9 ಲಕ್ಷದ ವರೆಗೆ ಸಾಲವಾಗಿದ್ದು, ಈಗ ಸುಮಾರು 4-5 ವರ್ಷದಿಂದ ಹೊಲದಲ್ಲಿ ಸರಿಯಾಗಿ ಬೆಳೆ ಬೆಳೆಯದ ಕಾರಣ ಫಿರ್ಯಾದಿಗೆ ಮನೆ ನಡೆಸುವುದು ಕಷ್ಟ ಆಗುತ್ತಿತ್ತು, ಹೀಗೆ ಫಿರ್ಯಾದಿಯವರ ಹೆಂಡತಿ ಶಾಂತಾಬಾಯಿ ಗಂಡ ಭೀಮರಾವ ನರಸಗೊಂಡಿ ವಯ 42 ವರ್ಷ, ಜಾತಿ: ಲಿಂಗಾಯತ, ಸಾ: ದುಬಲಗುಂಡಿ ರವರು ತನ್ನ ಗಂಡನ ಕಷ್ಟ ಚಿಂತೆಯನ್ನು ನೋಡಿ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ದಿನಾಂಕ 31-10-2017 ರಂದು 0800 ಗಂಟೆಯಿಂದ 0900 ಗಂಟೆಯ ಮಧ್ಯಾವಧಿಯಲ್ಲಿ ತನ್ನ ಹೊಲದ ಪಕ್ಕದ ಹೊಲದವರಾದ ಕಲ್ಲಪ್ಪಾ ಚಂದನಕೇರೆ ರವರ ಹೊಲದಲ್ಲಿರುವ ಬಾವಿಯ ನೀರಿನಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮನ್ನಾಎಖೇಳ್ಳಿ ಪೋಲಿಸ್ ಠಾಣೆ ಯು.ಡಿ.ಆರ್ ನಂ. 18/2017, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 25-10-2017 ರಂದು ಫಿರ್ಯಾದಿ ರಂಗಮ್ಮಾ ಗಂಡ ಜಗನ್ನಾಥ ವಯ: 24 ವರ್ಷ, ಜಾತಿ: ಕಬ್ಬಲಿಗ, ಸಾ: ರೇಕುಳಗಿ ರವರ ಗಂಡನಾದ ಜಗನ್ನಾಥ ತಂದೆ ನರಸಪ್ಪಾ ಗಿರಗಂಟಿ ವಯ: 28 ವರ್ಷ, ಜಾತಿ:  ಕಬ್ಬಲಿಗ, ಸಾ: ರೇಕುಳಗಿ ರವರು ತನ್ನ ಹೊಲದಲ್ಲಿ ಬೆಳೆದಿದ್ದ ತೊಗರಿ ಬೆಳೆ ನೋಡಲು ಹೊಗಿದ್ದು ಅಲ್ಲಿ ಛಳಿ ಜಾಸ್ತಿಯಾದ ಪ್ರಯುಕ್ತ ಕಾಯಿಸಿಕೊಳ್ಳಲು ಬಂಕಿ ಹಚ್ಚಿ ಕಾಯಿಸಿ ಕೊಳ್ಳುತ್ತಿರುವಾಗ ಆಕಸ್ಮೀಕವಾಗಿ ಗಂಡನ ಲುಂಗಿಗೆ ಬೆಂಕಿ ತಗುಲಿದ ಪ್ರಯುಕ್ತ ಅವರ ಮೈ ಸುಟ್ಟಿದ್ದು, ಎರಡು ಕಾಲು, ಮುಖ, ಹೊಟ್ಟೆಯ ಭಾಗ, ಎರಡು ಕೈಗಳು, ತೊಡೆಗೆಳು ಸುಟ್ಟಿದ್ದರಿಂದ ಚಿಕಿತ್ಸೆ ಕುರಿತು ಮನ್ನಾಎಖೆಳ್ಳಿ ಆಸ್ಪತ್ರೆಗೆ ತಂದಾಗ ವೈದ್ಯಾಧಿಕಾರಿಗಳು ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ಕಳುಹಿಸಿದ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಗಾಂಧಿ ಆಸ್ಪತ್ರೆಗೆ ಕಳುಹಿಸಿದಾಗ ಚಿಕಿತ್ಸೆಯ ಸಮಯದಲ್ಲಿ ಫಿರ್ಯಾದಿಯವರ ಗಂಡ ದಿನಾಂಕ 29-10-2017 ರಂದು  ಮೃತಪಟ್ಟಿರುತ್ತಾನೆ, ತನ್ನ ಗಂಡನ ಸಾವಿನಲ್ಲಿ ಯಾರ ಮೇಲೆ ಯಾವುದೆ ರೀತಿಯ ಸಂಶಯ ಇರುವುದಿಲ್ಲಾ, ಸದರಿ ಘಟನೆ ಆಕಸ್ಮಿಕವಾಗಿ ಜರೂಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರು ನೀಡಿದ ಹೇಳಿಕೆಯ ಸಾರಾಂಶದ ಮೇರೆಗೆ ದಿನಾಂಕ 31-10-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀ½îSÉÃqÀ (©) ¥ÉưøÀ oÁuÉ C¥ÀgÁzsÀ ¸ÀA. 157/2017, PÀ®A. 406, 409, 420 eÉÆvÉ 34 L¦¹ :-
ದಿನಾಂಕ 31-10-2017 ರಂದು ಫಿರ್ಯಾದಿ ಸಂಗಮೇಶ ಪಾಟೀಲ ಮಾಜಿ ಅಧ್ಯಕ್ಷರು ಬಿ.ಎಸ್.ಎಸ್.ಕೆ ಹಳ್ಳಿಖೇಡ (ಬಿ) ರವರ ನೀಡಿದ ಸಾರಾಂಶವೆನೆಂದರೆ ಬೀದರ ಸಹಕಾರ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಕಬ್ಬು ಕಟಾವು ಮಾಡುವ ಗುತ್ತೆದಾರರಿಂದ ಸುಮಾರು 11 ಲಾರಿಗಳು 2008 ನೇ ಸಾಲಿನಲ್ಲಿ ಜಪ್ತಿ ಮಾಡಿ ಇಡಲಾಗಿತ್ತು, ಫಿರ್ಯಾದಿ ಮತ್ತು ಬಿ.ಎಸ್.ಎಸ್.ಕೆ ಕಾರ್ಖಾನೆಯ ನಿರ್ದೆಶಕರಾದ ಕಿರಣ ಚಂದಾ ರವರು ದಿನಾಂಕ 23-10-2017 ರಂದು ಬಾಯಲಾರ ಪೂಜೆಗೆಂದು ಬಿ.ಎಸ್.ಎಸ್.ಕೆ ಕಾರ್ಖಾನೆಗೆ ಬಂದಾಗ ಜಪ್ತಿ ಮಾಡಿದ ಲಾರಿಗಳು ಕಾಣಿಸಲಿಲ್ಲ, ಆಗ ಅವರು ಕಾರ್ಖಾನೆಯ ಭದ್ರತಾ ಅಧಿಕಾರಿಯಾದ ಮಲ್ಲಿಕಾರ್ಜುನ ಭರಶೆಟ್ಟಿ ರವರನ್ನು ವಿಚಾರಿಸಿದಾಗ ಅವರು ನೀಡಿದ ಮಾಹಿತಿ ಪ್ರಕಾರ ಮಾನ್ಯ ಅಧ್ಯಕ್ಷರು ಸಂಜಯಖೇಣಿ ಮತ್ತು ಪ್ರಭಾರಿ ವ್ಯವಸ್ಥಾಪಕ ನಿರ್ದೆಶಕರಾದ ಶಿವಶರಣಪ್ಪಾ ಬಸಪ್ಪಾ ಹಾಗು ಮುಖ್ಯ ಕಬ್ಬು ಅಭಿವೃಧಿ ಅಧಿಕಾರಿಯಾದ ಸತೀಶ ಚೊಂಡೆ ರವರುಗಳ ಮೌಖಿಕ ಆದೇಶ ಅಪ್ಪಣೆಯ ಮೇರೆಗೆ ಕಾರ್ಖಾನೆಯ ಮುಖ್ಯದ್ವಾರದಿಂದ ನಾನು ಲಾರಿಗಳು ಬಿಡುಗಡೆ ಮಾಡಿರುತ್ತೇನೆ ಅಂತ ಭದ್ರತಾ ಅಧಿಕಾರಿಯಾದ ಮಲ್ಲಿಕಾರ್ಜುನ ಭರಶೆಟ್ಟಿ ಅವರು ದಾಖಲಾತಿ ಪ್ರತಿಗಳು ನೀಡಿದ್ದು, ದಾಖಲಾತಿ ಪ್ರಕಾರ ಸದರಿ ಲಾರಿಗಳನ್ನು ಗುಜರಿ ಅಂಗಡಿಯವನಾದ ಇಸಾಮೋದ್ದಿನ್ ಪಟೇಲ ಬಸವಕಲ್ಯಾಣ ಇವರು ತೆಗೆದುಕೊಂಡು ಹೋಗಿರುತ್ತಾರೆ ಅಂತ ಹೇಳಿರುತ್ತಾರೆ, ಸದರಿ ಲಾರಿಗಳನ್ನು ತೆಗೆದುಕೊಂಡು ಹೋದ ದಿನಾಂಕ ಮತ್ತು ಲಾರಿ ನಂಬರಗಳು ಇಂತಿವೆ, ದಿನಾಂಕ 16-09-2017 ರಂದು ಲಾರಿ ನಂ. ಎಪಿ-09/ವ್ಹಿ-6554, ಕೆಎ-38/ಎ-2072, ಎಂ.ಹೆಚ್-12/ಸಿ.ಹೆಚ್-2139, ಎಂ.ಹೆಚ್-22/ಎನ್-0072, ದಿನಾಂಕ 20-09-2017 ರಂದು ಲಾರಿ ನಂ. ಎಂ.ಹೆಚ್-26/ಬಿ-7963, ಎಂ.ಹೆಚ್-06/ಕೆ-3768, ಎಪಿ-37/ಟಿ-4059 ಮತ್ತು ದಿನಾಂಕ 22-09-2017 ರಂದು ಲಾರಿ ನಂ. ಎಂ.ಹೆಚ್-16/ಕ್ಯು-1433, ಎಂ.ಹೆಚ್-27/ಎಕ್ಸ-3337, ಎಂ.ಹೆಚ್-04/ಪಿ-6456, ಎಂ.ಹೆಚ್-15/ಕ್ಯು-1673 ನೇದ್ದವುಗಳನ್ನು ತೆಗೆದುಕೊಂಡು ಹೋಗಿರುತ್ತಾರೆ, ಸದರಿ ಲಾರಿಗಳನ್ನು ಕಾರ್ಖಾನೆಯ ಅಧ್ಯಕ್ಷರಾದ ಆರೋಪಿತರಾದ ಸಂಜಯಖೇಣಿ, ಪ್ರಭಾರಿ ವ್ಯವಸ್ಥಾಪಕ ನಿರ್ದೆಶಕರಾದ ಶಿವಶರಣಪ್ಪಾ ಬಸಪ್ಪಾ, ಕಬ್ಬು ಅಭಿವೃಧಿ ಅಧಿಕಾರಿಯಾದ ಸತೀಶ ಚೊಂಡೆ ಹಾಗು ಮಾರಾಟ ವಿಭಾಗದ ಸುಭಾಶಚಂದ್ರ ನಾಗಶೆಟ್ಟಿ ರವರುಗಳು ಸೇರಿಕೊಂಡು ಕಬ್ಬು ಕಟಾವು ಮಾಡುತ್ತಿದ್ದವರ ಲಾರಿಗಳು ಹಿಡಿದುಕೊಂಡು ಇದ್ದ ಲಾರಿಗಳನ್ನು ಯಾವುದೆ ಪರವಾನಿಗೆ ಪಡೆಯದೆ ಮತ್ತು ಮಾಲೀಕರನ್ನು ಕೇಳದೆ ತಮ್ಮ ಲಾಭಕ್ಕೋಸ್ಕರ ಗುಜರಿ ವ್ಯಾಪಾರ ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: