ದಿನಂಪ್ರತಿ ಅಪರಾಧಗಳ ಮಾಹಿತಿ
ದಿನಾಂಕ : 09-05-2020
ಮನ್ನಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 18/2020 3 & 4 ಇ.ಸಿ. ಕಾಯ್ದೆ :-
ದಿನಾಂಕ 08/05/2020 ರಂದು 21:30 ಗಂಟೆಗೆ ಶ್ರೀ ಅರುಣಕುಮಾರ ಆಹಾರ
ನೀರಿಕ್ಷಕರು ಬೀದರ ರವರು ಠಾಣೆಗೆ ಹಾಜರಾಗಿ ದೂರು ನೀಡಿದ ಸಾರಾಂಶವೆನೆಂದರೆ ದಿನಾಂಕ 08/05/2020 ರಂದು ಸಾಯಂಕಾಲ 1810 ಗಂಟೆ ಸುಮಾರಿಗೆ
ನಬಿಸಾಬ ಡಾಂಗೆ ರವರ ಕಾಂಪ್ಲೇಕ್ಸ್ ಎದುರುಗಡೆ ರೋಡಿನ ಪಕ್ಕದಲ್ಲಿ ವಾಹನ ನಿಂತಿದ್ದು ಅದನ್ನು
ನೋಡಿ ಪರಿಶೀಲಿಸಿ ನೋಡಲಾಗಿ ವಾಹನ ಚಾಲಕನಿಗೆ ವಿಚಾರಿಸಿದ್ದು ಆತನ ಹೆಸರು ಎಂ.ಡಿ ಜಾವೀದ್ ತಂದೆ
ಎಂ.ಡಿ ಮುಜೀಬ್ ವಯಃ 28 ವರ್ಷ ಜಾತಿಃ ಮುಸ್ಲಿಂ ಉಃ ಲಾರಿ ಚಾಲಕ ಮತ್ತು ವಾಹನದ ಮಾಲಿಕ ಸಾಃ ಮನ್ನಳ್ಳಿ
ಅಂತ ತಿಳಿಸಿದನು. ವಾಹನದಲ್ಲಿ ಏನಿದೆ ಅಂತ ಕೇಳಲಾಗಿ ಅಕ್ಕಿ ಇರುವುದಾಗಿ ತಿಳಿಸಿದಾಗ ನಾವು
ಅಕ್ಕಿಯನ್ನು ಪರಿಶೀಲಿಸಿ ನೋಡಲಾಗಿ ಪಡಿತರ ಅಕ್ಕಿ ಇರುವುದು ಧೃಡಿಪಟ್ಟಿದ್ದು ಸದರಿ ಲಾರಿ ಚಾಲಕನು
ಅಕ್ರಮವಾಗಿ ಪಡಿತರ ಅಕ್ಕಿಯ ಚೀಲಗಳನ್ನು ತನ್ನ ಈಚರ್ ಲಾರಿ ನಂ ಕೆ.ಎ 38 5891 ನೇದ್ದರಲ್ಲಿ ತುಂಬಿಕೊಂಡು
ಸಾಗಿಸುತ್ತಿದ್ದು, ಸದರಿ ಲಾರಿ ಚಾಲಕನಿಗೆ ಅಕ್ಕಿ
ಸಾಗಾಟದ ಬಗ್ಗೆ ಪರವಾನಿಗೆ ವಗೈರೆ ಇದೆಯೇ ಅಂತಾ ಕೇಳಿದಾಗ ಸದರಿಯವನು ಯಾವುದೇ ಪರವಾನಿಗೆ ವಗೈರೆ
ಇರುವುದಿಲ್ಲಾ ಅಂತಾ ತಿಳಿಸಿರುತ್ತಾನೆ. ನಂತರ ಅಕ್ಕಿ
ತುಂಬಿರುವ ಲಾರಿಯನ್ನು ಪರಿಶೀಲಿಸಿ ನೋಡಲಾಗಿ ಅದರ ನಂ ಕೆ.ಎ 38 5891 ಇದ್ದು ಲಾರಿಯಲ್ಲಿನ ಚೀಲಗಳನ್ನು ನೋಡಲಾಗಿ ಅಂದಾಜು 50 ಕೆ.ಜಿ ತೂಕದ 140 ಅಕ್ಕಿ ತುಂಬಿದ ಚೀಲಗಳು ಇವುಗಳನ್ನು ಆಹಾರ ನೀರಿಕ್ಷಕರಾದ ಶ್ರೀ ಅರುಣಕುಮಾರ
ರವರು ನೋಡಿ ಇವು ಸಾರ್ವಜನಿಕರಿಗೆ ವಿತರಿಸುವ ಉಚಿತ ಪಡಿತರ ಆಹಾರದ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಅಕ್ರಮವಾಗಿ ಸಾಗಾಟ
ಮಾಡುತ್ತಿದ್ದಾರೆ ಅಂತಾ ದೃಢಪಟ್ಟಿದ್ದು ಅಕ್ಕಿಯ
ಪ್ರತಿ ಚೀಲ 50 ಕೆ.ಜಿ ಉಳ್ಳದ್ದು ಒಟ್ಟು 140 ಪ್ಲಾಸ್ಟಿಕ್ ಮತ್ತು ಗೋಣಿ ಚೀಲಗಳು ಇರುತ್ತವೆ. ಒಟ್ಟು ತೂಕ 70 ಕ್ವಿಂಟಾಲ ಅಕ್ಕಿ ಇದ್ದು, ಇದರ ಅಂದಾಜು ಕಿಮ್ಮತ್ತು ಒಂದು ಕ್ವಿಂಟಾಲಗೆ ರೂ 2319 ರಂತೆ ಹೀಗೆ ಒಟ್ಟು ಅ.ಕಿ ರೂ 1,62,330/- ಹಾಗೂ ಐಚರ್ ಲಾರಿ ಅ.ಕಿ 7,00000/-ರೂ ಇರುತದೆ ಅಂತಾ ನೀಡಿದರ ದೂರಿನ ಮೇರೆಗೆ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಹುಲಸೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 30/2020 ಕಲಂ 87 ಕೆಪಿ ಕಾಯ್ದೆ :-
ದಿನಾಂಕ 08/05/2020 ರಂದು 1100 ಗಂಟೆಗೆ ಪಿಎಸ್ಐ ರವರು ಪೊಲೀಸ ಠಾಣೆಯಲ್ಲಿರುವಾಗ ಫೋನ್ ಮೂಲಕ ಮಾಹಿತಿ
ಬಂದಿದ್ದೆನೆಂದರೆ, ಮಿರಕಲ್ ಗ್ರಾಮದ ಸರಕಾರಿ
ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಹಲವು ಜನರು ಸೇರಿ ಹಣ ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ
ನಸೀಬಿನ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆಂಬ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ
ಹೋಗಿ ದಾಳಿ ಮಾಡಿ 1) ಜಗನ್ನಾಥ ತಂದೆ ಕಾಳಪ್ಪಾ ಮೇತ್ರೆ ವಯ 40 ವರ್ಷ, ಈತನ ಮುಂದೆ ನಗದು ಹಣ ರೂ. 600=00 ರೂ 2) ಅಶೋಕ ತಂದೆ ದೀಲಿಪರಾವ ಮೇತ್ರೆ ವಯ 33 ವರ್ಷ, ಇತನ ಮುಂದೆ ನಗದು ಹಣ ರೂ.700=00 ರೂ 3) ತುಕಾರಾಮ ತಂದೆ ಪ್ರಲ್ಹಾದ ಕೊಂಡಾಪೂರೆ ವಯ 37 ವರ್ಷ ಜಾತಿ ಇತನ
ಮುಂದೆ ನಗದು ಹಣ ರೂ.550=00 ರೂ 4] ಪರಮೇಶ್ವರ ತಂದೆ ವೆಂಕಟರಾವ ಮೇತ್ರೆ ವಯ 34 ಇತನ ಮುಂದೆ ನಗದು ಹಣ 910=00 ರೂ. 5] ರಾಜಕುಮಾರ ತಂದೆ ನರಸಪ್ಪಾ ಖಾನಾಪೂರೆ ವಯ 47 ವರ್ಷ, ಇತನ ಮುಂದೆ ನಗದು ಹಣ 590=00ರೂ 6] ಬಾಲಾಜಿ ತಂದೆ ಧನಾಜಿ ಮೂಳೆ ವಯ 32 ವರ್ಷ ಇತನ ಮುಂದೆ
ನಗದು ಹಣ 650=00 ರೂ, ಎಲ್ಲರ ಮಧ್ಯದಲ್ಲಿ ಜೂಜಾಟಕ್ಕೆ ಬಳಸಿದ ನಗದು ಹಣ 310-ರೂ. ಹೀಗೆ ಒಟ್ಟು: 4310=00 ರೂ. ಹಾಗು 52 ಇಸ್ಪೀಟ ಎಲೆಗಳು ಪಂಚರ ಸಮಕ್ಷಮ ಜಪ್ತ ಮಾಡಿ ಕೊಂಡು ಪ್ರಕರಣ
ದಾಖಲಿಸಕೊಂಡು ತನಿಖೆ ಕೈಗೊಳ್ಳಲಾಗಿದೆ.
ಖಟಕಚಿಂಚೊಳ್ಳಿ ಪೊಲೀಸ್ ಠಾಣೆ ಅಪರಾಧ
ಸಂಖ್ಯೆ 26/2020 ಕಲಂ 363 ಐಪಿಸಿ :-
ದಿನಾಂಕ 07/05/2020
ರಂದು ಪಿಎಸ್ಐ ರವರು ರಾತ್ರಿ 2200
ಗಂಟೆಯಿಂದ ವಿಶೇಷ ರಾತ್ರಿ ಗಸ್ತು ಚೇಕಿಂಗ ಮತ್ತು ರೋಡ ಪೇಟ್ರೊಲಿಂಗ ಕರ್ತವ್ಯ ಕುರಿತು ಸಿಬ್ಬಂದಿಯೊಂದಿಗೆ ಖಟಕ
ಚಿಂಚೋಳಿ ಕ್ರಾಸ್, ಏಣಕೂರ, ನಾವದಗಿ, ಮಾವಿನಹಳ್ಳಿ.
ಉಚ್ಛಾ, ಮೊರಂಬಿ ಕಡೆಗಳಿಗೆ ಹೊಗಿ ದಿನಾಂಕ-08/05/2020
ರಂದು ನಸುಕಿನ ಜಾವ 0430 ಗಂಟೆಗೆ ಬಾಜೋಳಗಾ
ಕ್ರಾಸ್ ಹತ್ತಿರ ಬಂದು ನಿಂತಾಗ ಅಲ್ಲಿ ಬಾಜೋಳಗಾ ಕ್ರಾಸ್ ಬಸ್ ನಿಲ್ದಾಣದ ಹತ್ತಿರ ನಿಂತಿದ್ದ
ಒಬ್ಬ ವ್ಯಕ್ತಿ ಸಮವಸ್ತ್ರದಲ್ಲಿದ್ದ ಪೊಲೀಸರನ್ನು
ಕಂಡು ತಕ್ಷಣ ಓಡಲು ಪ್ರಾರಂಬಿಸಿದಾಗ ಸದರಿ ವ್ಯಕ್ತಿಗೆ ಹಿಡಿದು ವಿಚಾರಣೆ
ಮಾಡಿದಾಗ ಅವನು ತನ್ನ ಹೇಸರು ಸಚೀನ ತಂದೆ ರಘುನಾಥ ಬಿರಾದಾರ ವಯ-30
ವರ್ಷ ಜಾ-ಮರಾಠಾ ಉ-ಕೂಲಿ ಕೆಲಸ ಸಾ-ಕೋರುರ ಅಂತಾ ತಿಳಿಸಿದ್ದು ಇರುತ್ತದೆ. ಸದರಿ ವ್ಯಕ್ತಿಗೆ ವಿಚಾರಣೆ ಮಾಡಲು ಅವನು
ತಿಳಿಸಿದ್ದೆನಂದರೆ ತಾನು ಬಾಜೋಳಗಾ ಕ್ರಾಸ್ ಹತ್ತಿರ ರಸ್ತೆಯ ಮೇಲೆ ಹೊಗಿ ಬರುವ ಮೊಟಾರ ಸೈಕಲ್
ವಾಹನಗಳ ಸವಾರರನ್ನು ತಡೆದು ಅವರ ಕಣ್ಣಲ್ಲಿ ಖಾರದ ಪುಡಿ ಎರಚಿ ಅವರಿಗೆ ಚಾಕು ತೊರಿಸಿ, ಹೇದರಿಸಿ
ಅವರಿಂದ ಹಣ ಕಿತ್ತುಕೊಳ್ಳುವ ಸಲುವಾಗಿ ನಿಂತಿರುತ್ತೆನೆ ಅಂತಾ ತಿಳಿಸಿರುತ್ತಾನೆ ನಂತರ ಸದರಿ
ವ್ಯಕ್ತಿ ಬಾಜೋಳಗಾ ಕ್ರಾಸ್ ಹತ್ತಿರ ರಸ್ತೆಯ ಮೇಲೆ ಹೊಗಿ ಬರುವ ಮೋಟಾರ ಸೈಕಲ್ ವಾಹಗಳ ಸವಾರರಿಗೆ
ತಡೆದು ಸೂಲಿಗೆ ಮಾಡಲು ಹೊಂಚುಹಾಕಿ ಪ್ರಯತ್ನ ಮಾಡಲು ನಿಂತಿರುವುದನ್ನು ಸದರಿ ವ್ಯಕ್ತಿಯ
ವಿಚಾರಣೆಯಿಂದ ಖಾತ್ರಿಯಾಗಿರುತ್ತದೆ ಸದರಿ ವ್ಯಕ್ತಿಯು ಸರಿಯಾಗಿ ನಡೆದುಕೊಂಡು ಬರದೆ
ಕುಂಟುತ್ತಿದ್ದರಿಂದ ಅವನಿಗೆ ಏನಾಗಿರುತ್ತದೆ ಅಂತಾ ವಿಚಾರಣೆ ಮಾಡಿದಾಗ ನಾನು ಪೊಲೀಸ
ಸಮವಸ್ತ್ರದಲ್ಲಿದ ತಮಗೆ ನೊಡಿ ಹೆದರಿ ಓಡುತ್ತಿರುವಾಗ ಒಂದು ಕಲ್ಲಿಗೆ ತೊಡಕಿ ಜಾರಿ
ಬಿದ್ದಿರುತ್ತೆನೆ ಅದರಿಂದ ನನ್ನ ಎಡಗಾಲಿನ ಮೋಳಕಾಲ ಕೆಳಗೆ ಸಣ್ಣ ಪುಟ್ಟ ಗುಪ್ತಗಾಯ ಆಗಿರುತ್ತವೆ
ಅಂತಾ ತಿಳಿಸಿರುತ್ತಾನೆ. ಅವನ ಅಂಗ
ಝಡ್ತಿ ಮಾಡಿ ಚೇಕ್ ಮಾಡಿ ನೊಡಲು ಸದರಿ ವ್ಯಕ್ತಿಯ
ಪ್ಯಾಂಟಿನ ಎಡ ಜೇಬಿನಲ್ಲಿ ಒಂದು ಚಾಕು ಇದ್ದು ಮತ್ತು ಬಲ ಜೇಬಿನಲ್ಲಿ ಒಂದು ಪೇಪರದಲ್ಲಿ ಖಾರದ
ಪುಡಿ ಇರುತ್ತವೆ. ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ
59/2020 ಕಲಂ 32, 34 ಕೆಇ ಕಾಯ್ದೆ:’
ದಿನಾಂಕ: 08/05/2020 ನಾನು 1400 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ ವಳಸಂಗ
ಗ್ರಾಮದಲ್ಲಿ ಬಾಲಾಜಿ ದಾಮುವಾಲೆ ಈತನ ತಗಡದ ಶೆಡ್ಡಿನ ಪಕ್ಕದಲ್ಲಿ ಒಬ್ಬ ವ್ಯಕ್ತಿ ಅಕ್ರಮವಾಗಿ ಸರಕಾರದಿಂದ
ಯಾವುದೆ ಪರವಾನಿಗೆ ಹೊಂದದೆ ಸರಾಯಿ ಬಾಟಲಗಳು ಮಾರಾಟ ಮಾಡುತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ
ಹೋಗಿ ಒಂದು ತಗಡದ ಶೆಡ್ಡಿನ ಪಕ್ಕದಲ್ಲಿ ಮರೆಯಾಗಿ ನಿಂತು ನೊಡಲು ಒಬ್ಬ ವ್ಯಕ್ತಿ
ತನ್ನ ಮುಂದೆ ಒಂದು ಬಿಳಿ ಬಣ್ಣದ
ಪ್ಲಾಸ್ಟಿಕ ಚೀಲದಲ್ಲಿ ಸರಾಯಿ ಬಾಟಲಗಳು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡಲು ನಿಂತಿರುವದನ್ನು ನೋಡಿ ಖಚಿತಪಡಿಸಿಕೊಂಡು ಆತನ ಮೇಲೆ ದಾಳಿ ಮಾಡಿ ಬಾಲಾಜಿ ತಂದೆ ಶ್ರೀಪತಿ ದಾಮುವಾಲೆ ವಯ 30 ವರ್ಷ ಜಾ; ಸಮಗಾರ ಉ; ಕೂಲಿ
ಕೆಲಸ ಸಾ; ವಳಸಂಗ ಇತನ ಹತ್ತಿರ ಇದ್ದ 90 ಎಂ.
ಎಲ್. ವುಳ್ಳ 90 ಯು.. ಎಸ್. ವಿಸ್ಕಿ ಸರಾಯಿ
ಬಾಟಲಗಳು ಇದ್ದು ಅದರ ಪ್ರತಿಯೊಂದು ಬಾಟಲ ಕಿ; 30.
32 ಪೈಸೆ /- ಇದ್ದು ಹೀಗೆ 2728. 8 ಪೈಸೆ ಬೇಲೆ
ಬಾಳುವ ಸರಾಯಿ ಬಾಟಲಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.