Police Bhavan Kalaburagi

Police Bhavan Kalaburagi

Wednesday, August 25, 2021

BIDAR DISTRICT DAILY CRIME UPDATE 25-08-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 25-08-2021

 

ಮನ್ನಳ್ಳಿ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 05/2021, ಕಲಂ. 174 ಸಿ.ಆರ್.ಪಿ.ಸಿ :-

ನರಸಪ್ಪಾ ತಂದೆ ಭೀಮಣ್ಣಾ ಲದ್ದೆಕರ್ ವಯ 20 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಬರೀದಾಬಾದ ಗ್ರಾಮ, ತಾ: ಜಿ: ಬೀದರ ರವರ ತಂದೆಯವರಾದ ಭೀಮಣ್ಣಾ ಇವರು ತಮ್ಮೂರಿನ ಬಸವರಾಜ ತಂದೆ ಅಪ್ಪರಾವ ಪಾಟೀಲ್ ರವರ ಹೋಲದಲ್ಲಿ ಮಾಡಿಕೊಂಡಿದ್ದು, ಹೀಗಿರುವಾಗ ದಿನಾಂಕ 24-08-2021 ರಂದು ತಂದೆಯವರು ಬಸವರಾಜ ರವರ ಹೊಲಕ್ಕೆ ಹೋಗಿ ಕಬ್ಬಿಗೆ ನೀರು ಬಿಡಲು ಕರೆಂಟ ಚಾಲು ಮಾಡಲು ಹೋದಾಗ ಸ್ಟಾಟರ್ ಡಬ್ಬಿಯ ಕರೆಂಟ ತಂದೆಯವರಿಗೆ ಹತ್ತಿ ಮೃತಪಟಿರುತ್ತಾರೆ, ಸದರಿ ಘಟನೆಯು ಆಕಸ್ಮಿಕವಾಗಿದ್ದು ಯಾರದೇ ಮೇಲೆ ಯಾವುದೆ ಅನುಮಾನ ದೂರು ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 77/2021, ಕಲಂ. 379 ಐಪಿಸಿ :-

ಫಿರ್ಯಾದಿ ಬಸೀರ ತಂದೆ ಅಬ್ದುಲಸಾಬ ಮುಲ್ಲಾ ವಯ: 60 ವರ್ಷ, ಜಾತಿ: ಮುಸ್ಲಿಂ, ಸಾ: ಉರ್ಕಿ ಗ್ರಾಮ, ತಾ: ಬಸವಕಲ್ಯಾಣ ರವರ ಕ್ರೂಜರ್ ವಾಹನ ಸಂ. ಕೆಎ-33/ಎಮ್-4375 ನೇದನ್ನು ಫಿರ್ಯಾದಿಯವರ ತಂಗಿಯ ಮಗನಾದ ಸಾಜೀದ ತಂದೆ ಬಾಬು ರಾಜುವಾಲೆ ವಯ: 26 ವರ್ಷ, ಸಾ: ಆಲಗೂಡ ಗ್ರಾಮ ಇತನು ಚಲಾಯಿಸಿಕೊಂಡಿದ್ದು, ಹೀಗಿರುವಾಗ ದಿನಾಂಕ 17-08-2021 ರಂದು 1900 ಗಂಟೆಗೆ ಸಾಜೀದ ಇತನು ಸದರಿ ವಾಹನವನ್ನು ಚಿಕ್ಕಪ್ಪನಾದ ಮೈನೋದ್ದಿನ ರಾಜುವಾಲೆ ರವರ ಮನೆಯ ಎದರುಗಡೆ ಇರುವ ನೀರಿನ ಟ್ಯಾಂಕ ಪಕ್ಕದಲ್ಲಿ ನಿಲ್ಲಿಸಿರುವುದನ್ನು ದಿನಾಂಕ 18-08-2021 ರಂದು 0100 ಗಂಟೆಯಿಂದ 0130 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ನಂತರ ಸದರಿ ವಾಹನವನ್ನು ಎಲ್ಲಾ ಕಡೆಗೆ ಹುಕುಕಾಡಿದರು ಸಹ ಸಿಕ್ಕಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 24-08-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 152/2021, ಕಲಂ. 379 ಐಪಿಸಿ :-

ದಿನಾಂಕ 12-08-2021 ರಂದು ಫಿರ್ಯಾದಿ ವೆಂಕಟೇಶಮೂರ್ತಿ.ಜೆ ತಂದೆ ಜವರೆಗೌಡ ಸಾ: ಆರ.ನಗರ ಮೈಸೂರ ಜಿಲ್ಲೆ, ಸದ್ಯ: ತಹಸಿಲ ಕಛೇರಿ ಭಾಲ್ಕಿ ರವರು ತನ್ನ ಹಿರೋ ಹೊಂಡಾ ಸ್ಪ್ಲೆಂಡರ್ ಪ್ಲಸ ಮೋಟಾರ್ ಸೈಕಲ್ ನಂ. ಕೆಎ-39/ಕೆ 0862 ನೇದನ್ನು ತೆಗೆದುಕೊಂಡು ಕೆಲಸಕ್ಕೆಂದು ಭಾಲ್ಕಿ ನಗರದಲ್ಲಿ ಹೋಗಿ ತನ್ನ ವಾಹನವನ್ನು ಕುಮಾರ ಬಾರ ಹಿಂದುಗಡೆ ಇರುವ ಒಂದು ಬ್ಯಾಂಗಲ್ ಸ್ಟೋರ್ ಹತ್ತಿರ ನಿಲ್ಲಿಸಿ ಶಾಪಿಂಗ ಮಾಡಲು ಹೋಗಿ ಅಂದಾಜು ಅರ್ಧ ಗಂಟೆಯ ನಂತರ ಬಂದು ನೋಡಲು ಫಿರ್ಯಾದಿಯು ನಿಲ್ಲಿಸಿದ ಜಾಗದಲ್ಲಿ ಫಿರ್ಯಾದಿಯವರ ಸದರಿ ಮೋಟಾರ್ ಸೈಕಲ್ ಇರಲಿಲ್ಲ, ಸದರಿ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಸದರಿ ಮೋಟಾರ್ ಸೈಕಲನ್ನು ಎಲ್ಲಾ ಕಡೆಗೆ ಹುಡುಕಾಡಿದೂರ ಸಹ ಸಿಕ್ಕಿರುವುದಿಲ್ಲ, ಕಳುವಾದ ಮೋಟಾರ್ ಸೈಕಲ ವಿವರ KA-39/K-0862, Chassis No. MBLHA10EZBHL53562, Engine No. HA10EFBH46942, ಅ.ಕಿ 15,000/- ರೂ. ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 24-08-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂ. 107/2021, ಕಲಂ. 279, 338 ಐಪಿಸಿ :-

ದಿನಾಂಕ 24-08-2021 ರಂದು ಫಿರ್ಯಾದಿ ರಮೇಶ ತಂದೆ ಠಾವರಾವ ಸಾ: ಖಂಡಿಕೇರಿ ತಾಂಡಾ ಔರಾದ(ಬಿ) ರವರ ಅಣ್ಣನ ಮಗನಾದ ವಿಕ್ರಮ ತಂದೆ ವಿನಾಯಕರಾವ ಚೌಹಾಣ ವಯ: 16 ವರ್ಷ ಇತನು ಮತ್ತು ವಿಜಯ ತಂದೆ ಭೀಮರಾವ ರಾಠೋಡ ಸಾ: ಖಂಡಿಕೇರಿ ತಾಂಡೆ ಇಬ್ಬರು ಔರಾದ(ಬಿ) ಪಟ್ಟಣಕ್ಕೆ ಬಂದು .ಪಿ.ಎಂ.ಸಿ ಕ್ರಾಸ ಹತ್ತಿರ ಬಂದಾಗ ಅಲ್ಲಿ ಒಂದು ಕಾರ್ಯಕ್ರಮದಲ್ಲಿದ್ದ ಹೈಡ್ರಾ ಕ್ರೇನ ನಂ. ಎಂ.ಹೆಚ್-24/ಡಿ-6860 ನೇದರ ಚಾಲಕನಾದ ಆರೋಪಿ ಸೋಮನಾಥ ತಂದೆ ಧನಾಜಿ ಸಾ: ಚಂದ್ರೇಶ್ವರ ಸಾ: ಸಂಗಮ, ತಾ: ದೇವಣಿ, ಜಿ: ಲಾತೂರ ಮಹಾರಾಷ್ಟ್ರ ಇತನು ಅತ್ತ ಇತ್ತ ನೋಡದೇ ನಿಷ್ಕಾಳಜಿತನದಿಂದ ಚಲಾಯಿಸಿ ಹೈಡ್ರಾ ಕ್ರೇನ ಮುಂದೆ ಇದ್ದ ಕೊಂಡಿ ಒಮ್ಮೇಲೆ ವಿಕ್ರಮ ಇತನ ಬಲಗಾಲಿನ ಮೇಲೆ ಬಿದ್ದು ಕಾಲು ಮೂರಿದು ಭಾರಿ ಗುಪ್ತಗಾಯ ಮತ್ತು ರಕ್ತಗಾಯವಾಗಿರುತ್ತದೆ, ಗಾಯಗೊಂಡ ವಿಕ್ರಮ ಇತನಿಗೆ ಚಿಕಿತ್ಸೆ ಕುರಿತು ಔರಾದ(ಬಿ) ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.