Police Bhavan Kalaburagi

Police Bhavan Kalaburagi

Friday, October 23, 2020

BIDAR DISTRICT DAILY CRIME UPDATE 23-10-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 23-10-2020

 

ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಯು.ಡಿ.ಆರ್ ನಂ. 10/2020, ಕಲಂ. 174 ಸಿ.ಆರ್.ಪಿ.ಸಿ :-

ಈಗ ಸುಮಾರು 4-5 ದಿನಗಳಿಂದ ಫಿರ್ಯಾದಿ ಶ್ರೀದೇವಿ ಗಂಡ ಸಿದ್ದಪ್ಪಾ ಕುಂಬಾರ ವಯ: 28 ವರ್ಷ, ಸಾ: ಕಂದಗುಳ ಗ್ರಾಮ ರವರ ಗಂಡನಾದ ಸಿದ್ದಪ್ಪಾ ತಂದೆ ಶ್ರೀಮಂತ ಕುಂಬಾರ ವಯ: 32 ವರ್ಷ, ಸಾ: ಕಂದಗೂಳ ಗ್ರಾಮ ರವರು ಕುಳಿತ ಸ್ಥಳದಲ್ಲಿಯೇ ಕುಳಿತು ಏನೋ ವಿಚಾರ ಮಾಡುತ್ತಿದ್ದರು, ಸಮಯಕ್ಕೆ ಸರಿಯಾಗಿ ಊಟ ಸಹ ಮಾಡುತ್ತಿರಲಿಲ್ಲ, ಫಿರ್ಯಾದಿಯು ಅವರಿಗೆ ನೀವು ಹೀಗೆಕೆ ಮಾಡುತ್ತಿದ್ದರಿ ಅಂತಾ ವಿಚಾರಿಸಿದರೂ ಸಹ ಏನು ಹೇಳುತ್ತಿರಲಿಲ್ಲ, ಒಂದೊಂದು ಸಾರಿ ಯಾರಿಗು ಹೇಳದೆ ಕೇಳದೆ ರಾತ್ರಿ ಸಮಯದಲ್ಲಿ ಗ್ರಾಮದಲ್ಲಿ ತಿರುಗಾಡುತ್ತಿದ್ದರು, ಫಿರ್ಯಾದಿಯು ಅವರಿಗೆ ಗ್ರಾಮದಲ್ಲಿ ಹುಡುಕಾಡಿ ಮನೆಗೆ ಕರೆದುಕೊಂಡು ಬರುತ್ತಿದ್ದರು,  ಹೀಗೆ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದರು, ಹೀಗಿರುವಾಗ ದಿನಾಂಕ 21-10-2020 ರಂದು 1900 ಗಂಟೆ ಸುಮಾರಿಗೆ ಗಂಡ ಮನೆಯಿಂದ ಬಹಿರ್ದೇಸೆಗೆ ಹೊಗಿ ಬರುತ್ತೆನೆ ಅಂತಾ ಹೇಳಿ ಹೋದವರು ಸುಮಾರು ಒಂದು ಗಂಟೆಯಾದರು ಮನೆಗೆ ಬಾರದ ಕಾರಣ ಫಿರ್ಯಾದಿ ಮತ್ತು ಅತ್ತೆ ಶ್ರೀದೇವಿ ಹಾಗು ಮಾವ ಶ್ರೀಮಂತ ಎಲ್ಲರು ಗ್ರಾಮದಲ್ಲಿ ಹುಡುಕಾಲು ಎಲ್ಲಿಯು ಸಹ ಕಂಡು ಬಂದಿಲ್ಲಾ, ಫಿರ್ಯಾದಿಯವರ ಮನೆಯ ಸ್ವಲ್ಪ ದೂರದಲ್ಲಿದ್ದ ಪೆಂಟೆಪ್ಪಾ ತಂದೆ ಮಾಣಿಕಪ್ಪಾ ರವರ ಹೊಲದ ಬಾವಿಯಲ್ಲಿ ನೊಡಲು ಗಂಡ ಧರಿಸಿದ ಸರ ಬಾವಿಯ ನೀರಿನಲ್ಲಿ ತೆಲುತ್ತಿದ್ದು ಅದನ್ನು ನೊಡಿ ಗಂಡ ಸಿದ್ದಪ್ಪಾ ಬಾವಿಯಲ್ಲಿ ಬಿದ್ದರಬಹುದೆಂದು ಫಿರ್ಯದಿಯು ಗಾಬರಿಗೊಂಡು ಚಿರಾಡಿ ಅಳುತ್ತಿರುವಾಗ ಊರಿನ ಜನರೆಲ್ಲರು ಬಾವಿಯ ಹತ್ತಿರ ಬಂದು ಜಮಾಯಿಸಿದ್ದು, ರಾತ್ರಿ ಆಗಿದ್ದರಿಂದ ಲೈಟಿನ ವ್ಯವಸ್ಥೆ ಇರಲಾರದ ಕಾರಣ ದಿನಾಂಕ 22-10-2020 ರಂದು ಅಗ್ನಿ ಶಾಮಕ ದಳದವರು ಬಂದು ಬಾವಯಲ್ಲಿದ್ದ ಗಂಡನ ಶವ ಹುಡುಕಾಡಿ ನೀರಿನಿಂದ ಮೇಲೆ ತೆಗೆದಿರುತ್ತಾರೆ, ಫಿರ್ಯಾದಿಯವರ ಗಂಡ ಮಾನಸಿಕವಾಗಿ ವರ್ತಿಸುತ್ತಾ ಆಕಸ್ಮಿಕವಾಗಿ ಬಾವಿಯ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದು ಇರುತ್ತದೆ, ತನ್ನ ಗಂಡನು ಆಕಸ್ಮಿಕವಾಗಿ ಬಾವಿಯ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದು ಅವರ ಸಾವಿನ ಬಗ್ಗೆ ಯಾರ ಮೇಲೂ ಯಾವುದೆ ರೀತಿಯ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿ ಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 160/2020, ಕಲಂ. 454, 457, 380 ಐಪಿಸಿ :-

ದಿನಾಂಕ 10-10-2020 ರಂದು 1100 ಗಂಟೆಯಿಂದ ದಿನಾಂಕ 21-10-2020 ರಂದು 0700 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿ ಸಂಜು ರೆಡ್ಡಿ ತಂದೆ ಭೋವನ ರೆಡ್ಡಿ ಶೇರಿಕಾರ ವಯ: 41 ವರ್ಷ, ಜಾತಿ: ರೆಡ್ಡಿ, ಸಾ: ಸಾಲೆ ಬಿರನಳ್ಳಿ ಗ್ರಾಮ, ತಾ: ಚಿಂಚೋಳಿ, ಜಿ: ಕಲಬುರಗಿ, ಸದ್ಯ: ಗುಂಪಾ ಬೀದರ ರವರು ಬಾಡಿಗೆಯಿಂದ ವಾಸವಿದ್ದ ಮನೆಯ ಬೀಗ ಮುರಿದು ಒಳಗೆ ಪ್ರವೇಶಿಸಿ, ಅಲಮಾರಾದ ಕೀಲಿ ಮುರಿದು ಒಳಗಡೆ ಲಾಕರ ಕೀಲಿ ಮುರಿದು ಅಲಮಾರಾದಲ್ಲಿರುವ 1) 60 ಗ್ರಾಮ ಬಂಗಾರದ 04 ಕೈ ಉಂಗುರುಗಳು ಹಾಕು ಕಿವಿ ಝುಮಕಾಗಳು .ಕಿ 3,00,000/- ರೂ., 2) 04 ಬೆಳ್ಳಿಯ ಮಕ್ಕಳ ಉಡದಾರಾ 200 ಗ್ರಾಮ .ಕಿ 12,000/- ರೂ. ಹಾಗೂ 3) ನಗದು ಹಣ 45,000/- ರೂಪಾಯಿ ಹಿಗೆ ಒಟ್ಟು 3,57,000/- ರೂಪಾಯಿ ಮೌಲ್ಯದ ಬಂಗಾರ ಒಡವೆಗಳು, ಬೆಳ್ಳಿ ಮತ್ತು ನಗದು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

 

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 143/2020, ಕಲಂ. 498(), 323, 341, 448, 504, 506(2) ಜೊತೆ 149 ಐಪಿಸಿ :-

ಫಿರ್ಯಾದಿ ಪ್ರೀಯಾಂಕ ಗಂಡ ಚೇತನ ರಾಹುರಕರ ವಯ: 25 ವರ್ಷ, ಜಾತಿ: ಇಡಿಗಾ, ಸಾ: ಮಾಡಗಿ ಗಲ್ಲಿ ಹುಮನಾಬಾದ ರವರು ಆರೋಪಿ ಚೇತನ ಇತನೊಂದಿಗೆ ದಿನಾಂಕ 27-12-2018 ರಂದು ಅವರ ಸಂಪ್ರದಾಯದಂತೆ ಮದುವೆಯಾಗಿದ್ದು, ಮದುವೆಯಾದ ನಂತರ ಫಿರ್ಯಾದಿಯೊಂದಿಗೆ ಚೇತನ ಇತನು ಒಂದು ವಾರ ಚೆನ್ನಾಗಿದ್ದು ನಂತರ ಆರೋಪಿತನು ಫಿರ್ಯಾದಿಗೆ ಹೆಚ್ಚಿನ ವರದಕ್ಷಿಣೆ ತರುವಂತೆ ಕಿರುಕುಳ ಕೊಡುತ್ತಿರುವುದರಿಂದ ಫಿರ್ಯಾದಿಯು 5 ತಿಂಗಳು ಗರ್ಭವತಿ ಇದ್ದ ಪ್ರಯುಕ್ತ ತನ್ನ ತವರು ಮನೆ ವಾಸವಾಗಿರುತ್ತಾಳೆ, ಈಗ ಒಂದು ವಾರದ ಹಿಂದೆ ಚೇತನ ಇತನು ಹುಮನಾಬಾದಗೆ ಬಂದು ಸರಾಯಿ ಕುಡಿದು ಗಲಾಟೆ ಮಾಡಿ ಫಿರ್ಯಾದಿಗೆ ಕೈಯಿಂದ ಹೊಡೆದಿರುತ್ತಾನೆ, ನಂತರ ಫಿರ್ಯಾದಿಗೆ ಚೇತನ ಇತನು ಕರೆದುಕೊಂಡು ಹೋಗಿ ಕಲಬುರ್ಗಿಯಲ್ಲಿ ಮನೆ ಮಾಡಿಕೊಂಡಿದ್ದು, ನಂತರ ಪುನಃ ಅದೇ ರೀತಿಯಾಗಿ ಫಿರ್ಯಾದಿಗೆ ತೊಂದರೆ ಮಾನಸಿಕ ಕಿರುಕುಳ ಕೊಡುತ್ತಿದ್ದರಿಂದ ಫಿರ್ಯಾದಿ ತವರು ಮನೆಗೆ ಬಂದು ವಾಸವಾಗಿರುತ್ತಾಳೆ, ಹೀಗಿರುವಾಗ ದಿನಾಂಕ 13-10-2020 ರಂದು ಫಿರ್ಯಾದಿಯು ಮನೆಯಲ್ಲರುವಾಗ ಆರೋಪಿತರಾದ 1) ಚೇತನ (ಗಂಡ), 2) ಅಂಜನಾ ಬಾಯಿ, 3) ಚಂದ್ರಶೇಖರ, 4) ಪೂಜಾ ಎಲ್ಲರು ಸಾ: ಶಾಬಾದ, ತಾ: ಚಿತ್ತಾಪುರ ಇವರೆಲ್ಲರೂ ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ ಫಿರ್ಯಾದಿಗೆ ಅವಾಚ್ಯವಾಗಿ ಬೈದು ವರದಕ್ಷಿಣೆ ತೆಗೆದುಕೊಂಡು ಬಾ ಅಂದರೆ ಇಲ್ಲೆ ಸತ್ತಿದಿ ನಿನಗೆ ಜೀವಂತ ಬಿಡುವದಿಲ್ಲಾ ಅಂತಾ ಅಂದು ಕೈಯಿಂದ ಕಪಾಳದಲ್ಲಿ ಮತ್ತು ಹೊಟ್ಟೆಯಲ್ಲಿ ಹೊಡೆದಿರುತ್ತಾರೆ, ಫಿರ್ಯಾದಿಯ ಕುದಲು ಹಿಡಿದು ಎಳೆದಾಡಿರುತ್ತಾರೆ, ತನ್ನ ಕಾಲಿನಿಂದ ಕಾಲಿನ ಮೇಲೆ ಒದ್ದಿರುತ್ತಾರೆ, ಆಗ ಶಾರದಾಬಾಯಿ ಗಂಡ ಸುಭಾಷ ಮತ್ತು ಸುಭಾಷ ಗುತ್ತೆದಾರ ರವರು ಜಗಳ ಬಿಡಿಸಿಕೊಂಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 22-10-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂ. 94/2020, ಕಲಂ. 420, 468, 471 ಐಪಿಸಿ :-

ಅಶೋಕ ನಾಗಾ ತಂದೆ ಚಂದ್ರಕಾಂತ ಪ್ರಸ್ತುತ ತಾಲೂಕಾ ಯೋಜನಾಧಿಕಾರಿಗಳು ತಾಲೂಕಾ ಪಂಚಾಯತ ಔರಾದ[ಬಿ] ಹಿಂದಿನ ಸಹಾಯಕ ಸಾಂಖ್ಯಿಕ ಅಧಿಕಾರಿ ಬೀದರ ರವರು ಅನುಕಂಪದ ಆಧಾರದ ಮೇರೆಗೆ ಆರ್ಥಿಕ ಮತ್ತು ಸಾಂಖ್ಯಿಕ ನೇರ್ದೆಶನಾಲಯದಲ್ಲಿ ಗಣತಿದಾರರ ವೃಂದದಲ್ಲಿ ದಿನಾಂಕ 27-08-2001 ರಂದು ನೇಮಕಾತಿ ಹೊಂದಿ ಸಾಂಖ್ಯಿಕ ನಿರೀಕ್ಷಕರು/ಸಹಾಯಕ ಸಾಂಖ್ಯಿಕ ಅಧಿಕಾರಿ/ಸಹಾಯಕ ನಿರ್ದೆಶಕ ವೃಂದಕ್ಕೆ ಮುಂಬಡ್ತಿ ಹೊಂದುವ ಪ್ರಸ್ತುತ ತಾಲೂಕು ಯೋಜನಾಧಿಕಾರಿ ತಾಲೂಕಾ ಪಂಚಾಯತ ಔರಾದ[ಬಿ] ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಸದರಿ ನೌಕರರರಿಗೆ ಸಹಾಯಕ ಸಾಂಖ್ಯಿಕ ಅಧಿಕಾರಿ ಹುದ್ದೆಯಿಂದೆ ಸಹಾಯಕ ನಿರ್ದೆಶಕರು ಹುದ್ದೆಗೆ ಮುಂಬಡ್ತಿಗಾಗಿ ಪರಿಶೀಲಿಸಲು ಅವರ ಸೇವಾ ವಿವರಗೊಂದಿಗೆ ಪದವಿಯಲ್ಲಿ ತೆರ್ಗಡೆ ಹೊಂದಿದ ಬಗ್ಗೆ ಹಾಗು ಇತ್ಯಾದಿ ದಾಖಲೆಗಳನ್ನು ಸಲ್ಲಿಸುವಂತೆ  ಸೂಚಿಸಲಾಗಿರುವ ಪ್ರಯುಕ್ತ ಸದರಿಯವರು ಈಸ್ಟರ್ನ ಇನ್ಸ್ಟಿಟುಟ್ ಫಾರ್ ಇಂಟಿಗ್ರೆಟೆಡ್ ಲರ್ನಿಂಗ್ ಇನ್ ಮ್ಯಾನೆಜ್ಮೆಂಟ್ ಯುನಿವರ್ಸಿಟಿ ಸಿಕ್ಕಿಮ್   ವಿಶ್ವವಿದ್ಯಾನಿಲದಿಂದ ಪದವಿ ಪಡೆದಿರುವುದಾಗಿ ಧೃಡಿಕೃತ ಅಂಕಪಟ್ಟಿ ಹಾಗು ಪದವಿ ಪ್ರಮಾಣ ಪತ್ರವನ್ನು ಕಛೇರಿ ಮುಖ್ಯಸ್ಥರ  ಮೂಲಕ ನಿರ್ದೆಶನಾಲಯಕ್ಕೆ  ಸಲ್ಲಿಸಿರುತ್ತಾರೆ, ಇಲಾಖಾ ಮುಂಬಡ್ತಿ ಸಮೀತಿ ಸಭೆಯಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಪಡೆದ ಪದವಿ ಅಂಕಪಟ್ಟಿ ಹಾಗು ರಾಜ್ಯದ ಹೊರಗಿನ ವಿವಿಧ ವಿಶ್ವವಿದ್ಯಾನಿಲಯಗಳಿಂದ ದೂರ ಶಿಕ್ಷಣದ ಮೂಲಕ ಪಡೆದಿರುವ ಅಂಕಪಟ್ಟಿಗಳ  ನೈಜತೆ ಪರಿಶಿಲಿಸಲು ತಿರ್ಮಾನಿಸಿದಂತೆ ಸದರಿಯವರು ಸಲ್ಲಿಸಿರುವ ಈಸ್ಟರ್ನ ಇನ್ಸ್ಟಿಟುಟ್ ಫಾರ್ ಇಂಟಿಗ್ರೆಟೆಡ್ ಲರ್ನಿಂಗ್ ಇನ್ ಮ್ಯಾನೆಜ್ಮೆಂಟ್ ಯುನಿವರ್ಸಿಟಿ ಸಿಕ್ಕಿಮ್  ವಿಶ್ವವಿದ್ಯಾನಿಲಯದ ಪದವಿ ಅಂಕಪಟ್ಟಿ ನೈಜತೆ ಕುರಿತ ಪರಿಶೀಲನಗೆ ಸಂಬಂಧಿಸಿದ ವಿಶ್ವವಿದ್ಯಾನಿಲಯಕ್ಕೆ ಪತ್ರ ವ್ಯವಹಾರ ಮಾಡಲಾಗಿತ್ತು, ಅದರಂತೆ ಡೆಪುಟಿ ಡೈರೆಕ್ಟರ್ /ಎ.ಪಿ.ಐ.ಓ, ಹೈಯರ್ ಎಜುಕೇಶನ್ ಹ್ಯೂಮನ್ ರಿಸೋರ್ಸ ಡೆವಲಪಮೆಂಟ್ ಗವರ್ನಮೆಂಟ್ ಆಫ್ ಸಿಕ್ಕಿಮ್ ಇವರು  ಈ ರೀ ತಿಳಿಸಿರುತ್ತಾರೆ AS Such the  EIILUM related documents of Ashok bearing enrolment no EIIlUM/10/S2158659 for BA (Economics) is not valid and genuine There is no UGC// DEC recognition for these aforementioned degree courses since inception of university till its closure ಮೇಲಿನ ಅಂಶನಗಳನ್ನು ಪರಿಶೀಲಿಸಲಾಗಿ ಸದರಿಯವರು ನಿರ್ದೆಶನಾಲಯಕ್ಕೆ ನಕಲಿ ಪದವಿ ಪ್ರಮಾಣ ಪತ್ರ ಸಲ್ಲಿಸಿ ಮುಂಬಡ್ತಿ ಪಡೆದಿರುವುದು ಸ್ಪಷ್ಟವಾಗಿ ಕಂಡು ಬಂದಿರುತ್ತದೆ ಹಾಗು ಸರಕಾರಕ್ಕೆ/ ಇಲಾಖೆಗೆ ವಂಚನೆ ಮಾಡಿ ಕಾನೂನು ಬಾಹಿರವಾಗಿ ಕರ್ತವ್ಯಲೋಪವೆಸಗಿ ಸರಕಾರಿ ನೌಕರನೊಬ್ಬನಿಗೆ ಸಲ್ಲದ ರೀತಿಯಲ್ಲಿ ವರ್ತಿಸಿರುತ್ತಾರೆಂದು ಫಿರ್ಯಾದಿ ಮಾಣಿಕರಾವ ಪಾಟಿಲ್ ಇ.ಓ ತಾಲೂಕಾ ಪಂಚಾಯತ ಔರಾದ(ಬಾ) ರವರ ದೂರಿನ ಸಾರಾಂಸದ ಮೇರೆಗೆ ದಿನಾಂಕ 22-10-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.