Police Bhavan Kalaburagi

Police Bhavan Kalaburagi

Saturday, March 20, 2021

BIDAR DISTRICT DAILY CRIME UPDATE 20-03-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 20-03-2021

 

ವಾಡಾ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 02/2021, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ಅನೀಸಾಬೇಗಂ ತಂಡ ಅಜೀಮ ಚಾವುಸ ಸಾ: ಕನ್ನಳ್ಳಿ ಗ್ರಾಮ, ತಾ: & ಜಿ: ಬೀದರ ರವರ ಗಂಡ ಅಜೀಮ ಚಾವುಸ್ ರವರು ಕಳೆದ 15 ವರ್ಷಗಳಿಂದ ಸಾರಾಯಿ ಕುಡಿಯುವ ಚಟಕ್ಕೆ ಬಿದ್ದಿದ್ದು, ದಿನಾಲು ಸರಾಯಿ ಕುಡಿಯುತ್ತಿದ್ದರು, ಅವರು ದಿನಾಂಕ 18-03-2021 ರಂದು 1000 ಗಂಟೆಯ ಸುಮಾರಿಗೆ ಗಂಡ ಅಜೀಮ ರವರು ಮರಖಲ್ ಗ್ರಾಮದ ಸಂಬಂಧಿಕರ ಮನೆಯಲ್ಲಿ ಮದುವೆ ಕಾರ್ಯಕ್ರಮಕ್ಕೆ ಹೊಗಿರುತ್ತಾರೆ. ಹೀಗಿರುವಾಗ ಫಿರ್ಯಾದಿಯವರ ಗಂಡ ಅಜೀಮ ರವರು ಮರಖಲ್ ಗ್ರಾಮದಿಂದ ಮದುವೆ ಮುಗಿಸಿಕೊಂಡು ಜನವಾಡಾ ಗ್ರಾಮಕ್ಕೆ ಬಂದಿದ್ದು, ಅಲ್ಲಿ ಅತಿಯಾಗಿ ಸರಾಯಿ ಕುಡಿದು ಜನವಾಡಾ ಗ್ರಾಮದ ಬಸ್ ನಿಲ್ದಾಣದ ಹತ್ತಿರ 1800 ಗಂಟೆ ಸುಮಾರಿಗೆ ತಿರುಗಾಡುತ್ತಿದ್ದು, ನಂತರ ಅಜೀಮ ರವರು ಸರಾಯಿ ಕುಡಿದ ನಶೆಯಲ್ಲಿ ಜನವಾಡಾ ಗ್ರಾಮದ ಪಕ್ಕದ ಬೀದರ ರೋಡಿನ ಫುಲಿನ ಕಟ್ಟೆಯ ಮೇಲೆ ಮಲಗಿದ್ದು, ಫುಲಿನ ಮೇಲಿಂದ ಕೆಳಗಡೆ ಬಿದ್ದ ಪ್ರಯುಕ್ತ ಅವರ ಮುಖದ ಮೇಲೆ ಮತ್ತು ತಲೆಗೆ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ, ಅವರ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 19-03-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 06/2021, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 19-03-2021 ರಂದು ಫಿರ್ಯಾದಿ ಮಾಣಿಕರಾವ ತಂದೆ ತುಕಾರಾಮ ಜಾಧವ ಸಾ: ತೆಲಗಾಂವ ರವರ ಮಗನಾದ ವಿಜಯಕುಮಾರ ತಂದೆ ಮಾಣಿಕರಾವ ವಯ: 15 ವರ್ಷ ಇತನು ಮನೆಯ ಸ್ವಲ್ಪ ದೂರದಲ್ಲಿದ್ದ ಬಾವಿಗೆ ನೀರು ತರುವ ಸಲುವಾಗಿ ಹೋಗಿ ಬಾವಿಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಇಸಾಡಲು ಬರಲಾರದ ಕಾರಣ ನೀರು ಕುಡಿದು ಮ್ರತಪಟ್ಟಿರುತ್ತಾನೆ, ತನ್ನ ಮಗನ ಸಾವಿನಲ್ಲಿ ಯಾರ ಮೇಲೆ ದೂರು ಅಥವಾ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 21/2021, ಕಲಂ. 279, 304() ಐಪಿಸಿ ಜೊತೆ 187 .ಎಮ್.ವಿ ಕಾಯ್ದೆ :-

ದಿನಾಂಕ 19-03-2021 ರಂದು ಫಿರ್ಯಾದಿ ಬಲವಂತ ತಂದೆ ರವೀಂದ್ರ ಪಾಟೀಲ ವಯ: 30 ವರ್ಷ, ಜಾತಿ: ಎಸ್.ಟಿ ಬೇಡರ್, ಸಾ: ಬಟಗೇರಾವಾಡಿ, ತಾ: ಬಸವಕಲ್ಯಾಣ ರವರ ತಾಯಿ ತಂಗೆಮ್ಮಾ ರವರು ಸಂಘದ ಹಣವನ್ನು ಕಟ್ಟಲು ಆರೇಂಜ್ ಬಣ್ಣದ ಎಚ್.ಎಮ್.ಟಿ ಟ್ರ್ಯಾಕ್ಟರ್ ಇಂಜಿನ ನಂ. 7096 ನೇದರಲ್ಲಿ ಕುಳಿತುಕೊಂಡು ಧಾಮೂರಿ ಗ್ರಾಮದಿಂದ ಬಟಗೇರಾವಾಡಿ ಗ್ರಾಮಕ್ಕೆ ಬರುತ್ತಿರುವಾಗ ದಾರಿಯಲಿ ಸದರಿ ಟ್ರ್ಯಾಕ್ಟರ್ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ರಾಮತೀರ್ಥ-ಎಕ್ಕಂಬಾ ರೋಡಿನ ಮೇಲೆ ಚಲಾಯಿಸಿಕೊಂಡು ಬರುತ್ತಿರುವಾಗ ದಾರಿಯಲ್ಲಿ ಎಕ್ಕಂಬಾ ಶಿವಾರದ ಪಂಡರಿ ಲೌರಿ ರವರ ಹೊಲದ ಹತ್ತಿರ ಟ್ರ್ಯಾಕ್ಟರ್ ಚಾಲಕ ನಿಯಂತ್ರಣ ಕಳೆದುಕೊಂಡು ಟ್ರ್ಯಾಕ್ಟರ್ ರೋಡಿನ ಬದಿಯ ತಗ್ಗಿನಲ್ಲಿ ಪಲ್ಟಿ ಮಾಡಿದ್ದರಿಂದ ಟ್ರ್ಯಾಕ್ಟರ್ದಲ್ಲಿದ್ದ ತಾಯಿ ತಂಗೆಮ್ಮಾ ಇವಮೈಮೇಲೆ ಟ್ರ್ಯಾಕ್ಟರ್ ಇಂಜಿನ ಬಿದ್ದಿದ್ದು ಪರಿಣಾಮ ತಾಯಿ ತಲೆಗೆ, ಬೆನ್ನಲ್ಲಿ, ಹೊಟ್ಟೆಯ ಮೇಲೆ ಮತ್ತು ಎರಡು ಕೈಗಳಿಗೆ ಹಾಗೂ ಕಾಲುಗಳಿಗೆ ತರಚಿದ ರಕ್ತಗಾಯ ಮತ್ತು ಭಾರಿ ಗುಪ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ ಹಾಗು ಟ್ರ್ಯಾಕ್ಟರ್ ಚಾಲಕ ತನ್ನ ವಾಹನ ಘಟನಾ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಅರ್ಜಿ ಸಾರಾಂಶದÀ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 26/2021, ಕಲಂ. ಮನುಷ್ಯ ಕಾಣೆ :-

ಫಿರ್ಯಾದಿ ಬಲಭೀಮ ತಂದೆ ಪ್ರಕಾಶ ಬಸೋಳೆ ವಯ: 33 ವರ್ಷ, ಜಾತಿ: ರಾಠಾ, ಸಾ: ಲಖನಗಾಂವ, ಸದ್ಯ: ಶಿವನಗರ () ಬೀದರ ರವರ ಚಿಕ್ಕಪ್ಪ ದಿನಾಂಕ 17-03-2021 ರಂದು 1400 ಗಂಟೆಗೆ ಚಿಕಿತ್ಸೆ ಪಡೆಯುತ್ತಿದ್ದ ಬೀದರ ಜಿಲ್ಲಾ ಆಸ್ಪತ್ರೆಯಿಂದ ಕಾಣೆಯಾಗಿರುತ್ತಾರೆ, ಅವರನ್ನು ಎಲ್ಲಾ ಕಡೆಗೆ ಹುಡುಕಾಡಿದರೂ ಸಿಕ್ಕಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯುವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 19-03-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂ. 39/2021, ಕಲಂ. 379 ಐಪಿಸಿ :-

ಫಿರ್ಯಾದಿ ಭಗವಾನ ತಂದೆ ನಾಮದೇವ ರಾಠೋಡ ವಯ: 40 ವರ್ಷ, ಜಾತಿ: ಲಂಬಾಣಿ, ಸಾ: ಅಂಬರನಾಯಕ ತಾಂಡಾ ಹುಲ್ಯಾಳ, ಸದ್ಯ: ಲಿಡ್ಕರ ಕಾಲೋನಿ ಔರಾದ[ಬಿ] ರವರು ತಮ್ಮ ಮನೆಯ ಮುಂದೆ ನಿಲ್ಲಿಸಿದ ಮೋಟರ ಸೈಕಲ ನಂ. ಕೆಎ-38/ಆರ್-6465, ಚಾಸಿಸ್ ನಂ. MBLHA10AMFHA67381, ಇಂಜಿನ ನಂ. HA10EJFHA27120, .ಕಿ 30,000/- ರೂ. ನೇದನ್ನು ದಿನಾಂಕ 18-03-2021 ರಂದು ರಾತ್ರಿ 00:30 ಗಂಟೆಯಿಂದ 0600 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 19-03-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.