Police Bhavan Kalaburagi

Police Bhavan Kalaburagi

Sunday, October 21, 2018

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 20-10-2018 ರಂದು ಅಫಜಲಪೂರ ಪಟ್ಟಣದ ಅಮೋಘಸಿದ್ದ ಗುಡಿಯ ಮುಂದೆ ಸಾರ್ವಜನಿಕ ಸ್ಥಳದ ಖಾಲಿ ಜಾಗದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸಿಪಿಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಸ್ಥಳಕ್ಕೆ  ಹೋಗಿ ಅಲ್ಲೆ ಸ್ವಲ್ಪ ದೂರ ನಮ್ಮ ಜೀಪನ್ನು ನಿಲ್ಲಿಸಿ ನಡೆದುಕೊಂಡು ಹೋಗಿಮರೆಯಾಗಿ ನಿಂತು ನೋಡಲು ಸ್ಥಳಿಯ ಅಫಜಲಪೂರ ಪಟ್ಟಣದ ಅಮೋಘಸಿದ್ದ ಗುಡಿಯ ಮುಂದೆ ಸಾರ್ವಜನಿಕ ಜಾಗದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದರುನಾವು ಜೂಜಾಟ ಆಡುತ್ತಿದ್ದುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ಸದರಿಯವರ ಮೇಲೆ ದಾಳಿ ಮಾಡಿ ಎಲ್ಲಾ 05 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ವಿಠ್ಠಲ ತಂದೆ ಮಾಳಪ್ಪ ತೇಗ್ಗಳ್ಳಿ ಸಾ|| ಅಮೋಘಸಿದ್ದ ಗುಡಿಯ ಹತ್ತಿರ ಅಫಜಲಪೂರ 2) ಶರಣು ತಂದೆ ಬಸಣ್ಣ ಒಡೇಯರ ಸಾ|| ಅಮೋಘಸಿದ್ದ ಗುಡಿಯ ಹತ್ತಿರ ಅಫಜಲಪೂರ 3) ರಾಜಶೇಖರ ತಂದೆ ಭೀರಪ್ಪ ರುದ್ದಡಗಿ ಸಾ|| ಅಮೋಘಸಿದ್ದ ಗುಡಿಯ ಹತ್ತಿರ ಅಫಜಲಪೂರ 4) ಚೌಡಪ್ಪ ತಂದೆ ದುಂಡಪ್ಪ ಹಿಂಚಗೇರಿ ಸಾ|| ಅಮೋಘಸಿದ್ದ ಗುಡಿಯ ಹತ್ತಿರ ಅಫಜಲಪೂರ  5) ಶರಣಪ್ಪ ತಂದೆ ಭಾಗಪ್ಪ ಪೂಜಾರಿ ಸಾ|| ಅಮೋಘಸಿದ್ದ ಗುಡಿಯ ಹತ್ತಿರ ಅಫಜಲಪೂರ ಅಂತ ತಿಳಿಸಿದ್ದು ಸದರಿಯವರಿಂದ  ಇಸ್ಪೇಟ ಜೂಜಾಟಕ್ಕೆ ಸಂಭಂದಪಟ್ಟ ನಗದು ಹಣ 1060/- ರೂ ನಗದು ಹಣ  ಮತ್ತು 52 ಇಸ್ಪೆಟ ಎಲೆಗಳು ದೊರೆತಿದ್ದುಸದರಿವುಗಳನ್ನು ವಶಕ್ಕೆ ಪಡೆ್ಉಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 20-10-2018 ರಂದು ಬನ್ನಟ್ಟಿ ಗ್ರಾಮದಿಂದ ಒಬ್ಬ ವ್ಯಕ್ತಿ ಟ್ರ್ಯಾಕ್ಟರನಲ್ಲಿ ಮರಳು ತುಂಬಿಕೊಂಡು ಆನೂರ ಗ್ರಾಮಾದ  ಕಡೆ ಹೋಗುತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆಸಿ.ಪಿ.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹೊರಟು ಅಫಜಲಪೂರದ ಡಿಗ್ರಿ ಕಾಲೇಜ ಹತ್ತಿರ  ಹೋಗುತ್ತಿದ್ದಾಗ ನಮ್ಮ ಮುಂದೆ  ಒಂದು ಟ್ರ್ಯಾಕ್ಟರ ಆನೂರ ಗ್ರಾಮದ ಕಡೆ ಹೋಗುತಿತ್ತು , ಆಗ ಸದರಿ ಟ್ರ್ಯಾಕ್ಟರನ್ನು ನಾವು ಹಿಂದಿಕ್ಕಿ ಟ್ರ್ಯಾಕ್ಟರ ಚಾಲಕನಿಗೆ ನಿಲ್ಲಿಸಲು ಕೈ ಸೂಚನೆ ಕೊಟ್ಟಾಗಟ್ರ್ಯಾಕ್ಟರ ಚಾಲಕ ನಮ್ಮ ಪೊಲೀಸ್ ಜೀಪನ್ನು ನೋಡಿ ಟ್ರ್ಯಾಕ್ಟರನ್ನು ಸ್ಥಳದಲ್ಲೆ ಬಿಟ್ಟು ಕತ್ತಲಲ್ಲಿ ಓಡಿ ಹೋದನುಆಗ ನಾವು ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಚೆಕ್ಕ ಮಾಡಲು Mahindra Arjun ಕಂಪನಿಯ ಟ್ರ್ಯಾಕ್ಟರ ಇದ್ದು  ಅದರಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಅದರ  ನಂ ಕೆಎ-32 ಟಿಎ-6673 ,SL NO RJC01623 ಅಂತಾ ಇದ್ದು ಸದರಿ ಟ್ರ್ಯಾಕ್ಟರ ಅ.ಕಿ 5,00,000/-ರೂ  ಇರಬಹುದುಸದರಿ ಟ್ರ್ಯಾಕ್ಟರ ಟ್ರೈಲಿಯಲಿದ್ದ  ಮರಳಿನ ಅ.ಕಿ 3000/- ರೂ ಇರಬಹುದುನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರನ್ನು ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಹಲ್ಲೆ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ಸಂಗಣ್ಣ @ ಸಂಗಪ್ಪ  ತಂದೆ ಸಿದ್ದಪ್ಪಾ ಪರಸ್ತೆ ಸಾ; ಪಟ್ಟಣ ತಾ;ಜಿ;ಕಲಬುರಗಿ. ಇವರು ದಿನಾಂಕ.19-10-2018 ರಂದು ವಿಜಯದಶಮಿ ಹಬ್ಬವನ್ನು ಮುಗಿಸಿಕೊಂಡು ರಾತ್ರಿ ಎಲ್ಲರೂ ಊಟ ಮಾಡಿಕೊಂಡು ಮನೆಯಲ್ಲಿ ಮಲಗಿದ್ದೇವು. ದಿನಾಂಕ. 20-10-2018 ರಂದು ಬೆಳಗ್ಗೆ ನನ್ನ ಮಗಳು ಜೈಶ್ರೀ ಇವಳ ಗಂಡ  ಮಲ್ಲಿಕಾರ್ಜುನ ತಂದೆ ಈರಣ್ಣಾ ಅವರಾಧಿ ಇತನು ನಮ್ಮ ಮನೆಗೆ ಬಂದು ಬಾಗಿಲ ಬಾರಿಸಿದನು ಆಗ ನಾನು ಮತ್ತು ನನ್ನ ಮಗಳು ಜೈಶ್ರೀ ಹಾಗೂ ನನ್ನ ಹೆಂಡತಿ ಶಾಂತಾಬಾಯಿ ಎಲ್ಲರೂ ಎದ್ದು ಬಾಗಿಲು ತೆರೆದಾಗ ನಮ್ಮ ಅಳಿಯ ಸದರಿ ಮಲ್ಲಿಕಾರ್ಜುನ ಇವರು ಬಂದಿದ್ದು  ನನಗೆ ಏನೋ ಸೂಳೆ ಮಗನೆ ಹೊಲಮಾರಿದ್ದಿರಿ ನನಗೆ ಆಟೋ ತೆಗೆದುಕೊಳ್ಳಲು ಹಣಕೋಡು ನಾನು ನಂತರ ಕೋಡುತ್ತೇನೆ ಅಂತಾ ಕೇಳಿದನು ಆಗ ನಾನು ನಮ್ಮ ಹತ್ತಿರ ಹಣ ಇರುವದಿಲ್ಲಾ ಅಂತಾ ಅಂದುದಕ್ಕೆ “ ರಂಡಿ ಮಕ್ಕಳೆ ಆಟೋ  ತೆಗೆದುಕೊಳ್ಳಲು ಹಣಕೋಡುವದಿಲ್ಲಾ ಸೂಳೆ ಮಗನೆ  ನಿನಗೂ ಮತ್ತು ನಿನ್ನ ಮಗಳಿಗೂ ಜೀವಂತವಾಗಿ ಇಡುವದಿಲ್ಲಾ ಅಂತಾ ಅವಾಚ್ಯವಾಗಿ ಬೈಯುತ್ತಾ ನನ್ನನ್ನು ಅತೀಕ್ರಮವಾಗಿ ತಡೆದು ನಿಲ್ಲಿಸಿ ನನ್ನ ಎದೆಯ ಮೇಲಿನ ಅಂಗಿ ಹಿಡಿದು ಎಳೆದಾಡಿ ಕೈಯಿಂದ ಹೊಡೆಯಲು ಬಂದಾಗ ನನ್ನ ಮಗಳು ಜೈಶ್ರೀ ಮತ್ತು ನನ್ನ ಹೆಂಡತಿ ಶಾಂತಬಾಯಿ ಬಿಡಿಸಿಕೊಳ್ಳಲು ಬಂದಾಗ ಅವರಿಗೂ ಜೋರಾಗಿ ನೂಕಿಕೊಟ್ಟು ಸೂಳೆ ಮಗನೆ ನನಗೆ ಆಟೋ ತೆಗದುಕೊಳ್ಳಲು ಹಣ ಕೊಡದಿದ್ದರೆ ನೀನು ಜೀವಂತ ಇದ್ದರೆ ನನಗೆ ಏನು ಲಾಭ ಎಂದು ಬೈಯುತ್ತಾ ಮನೆಯಲ್ಲಿಯೇ ಇದ್ದ ಕುಡುಗೋಲು ತೆಗೆದುಕೊಂಡು ನನಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ ಕುತ್ತಿಗೆ ಹೊಡೆಯಲು ಬಂದಾಗ ನಾನು ಕುತ್ತಿಗೆಯನ್ನು ಸ್ವಲ್ಪ  ಸರಿಸದರೂ ಕೂಡಾ ನನ್ನ ಕುತ್ತಿಗೆಯ  ಬಲಭಾಗದಲ್ಲಿ ಹೊಡೆದನು ಇದರಿಂದ ನನ್ನ ಕುತ್ತಿಗೆ ಹತ್ತಿರ ಭಾರಿ ರಕ್ತಸ್ರಾವವಾಗ ಹತ್ತಿದ್ದು ಆಗ ನಾನು ಜೋರಾಗಿ ಕೆಳೆಗೆ ಬಿದ್ದು ಚಿರಾಡುವಾಗ ನನ್ನ ಹೆಂಡತಿ ಶಾಂತಾಬಾಯಿ ಹಾಗೂ  ನನ್ನ ಮಗಳು ಜೈಶ್ರೀ ಇವರು ಬಂದು ಬಿಡಿಸಿಕೊಳ್ಳುವಷ್ಟರಲ್ಲಿ ನನ್ನ ತಮ್ಮ ನಾಗೀಂದ್ರಪ್ಪಾ ಪರಸ್ತೆ ಬಂದಿದ್ದು ಆಗ ಎಲ್ಲರೂ ಕೂಡಿಕೊಂಡು ನನಗೆ ಹೊಡೆಯುವದನ್ನು ಬಿಡಿಸಿಕೊಂಡರು. ಆಗ ಸದರಿ ನನ್ನ ಅಳಿಯ ಮಲ್ಲಿಕಾರ್ಜುನ ಇತನು ಸೂಳೆ ಮಗನೆ ಇವತ್ತು ಉಳಿದುಕೊಂಡಿದ್ದಿಯ ಇನ್ನೊಂದು ಬಾರಿನಿನಗೆ ಜೀವಂತ ಬಿಡುವದಿಲ್ಲಾ ಅಂತಾ ಮರಣಾಂತಿಕ ಹಲ್ಲೆ ಮಾಡಿ ಓಡಿಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ನರೋಣಾ ಠಾಣೆ : ಶ್ರೀಮತಿ ಅಯ್ಯಮ್ಮ ಗಂಡ ದ್ಯಾವಣ್ಣಾ ದ್ಯಾವಪ್ಪಾ ಪೂಜಾರಿಸಾ:ದಣ್ಣೂರ ರವರ  ಮನೆಯ ಬಾಜು ಅಣ್ಣತಮ್ಮಕಿಯವರಾದ ಈರಣ್ಣಾ ತಂದೆ ನಿಂಗಪ್ಪಾ ಪೂಜಾರಿ ಇವರ ಮನೆ ಇರುತ್ತದೆ. ಸದರಿ ಈರಣ್ಣಾ ಇವರ ಮನೆಯವರು ಬಟ್ಟೆ ಒಗಿದ ನೀರು ನಮ್ಮ ಮನೆಯ ಬಾಗಿಲಿಗೆ ಬರುತ್ತಿರುವುದರಿಂದ ನಾನು ಮತ್ತು ನನ್ನ ಗಂಡ ಕೂಡಿ ಈರಣ್ಣಾ ಇವರಿಗೆ ಬಟ್ಟೆ ಒಗಿಯುವ ಕಲ್ಲು ಸ್ವಲ್ಪ ದೂರದಲ್ಲಿ ಹಾಕಿ ಬಟ್ಟೆ ಒಗೆಯಿರಿ ಎಂದು ಹೇಳಿದ್ದು ಅದಕ್ಕೆ ಅವರು ನಮ್ಮೊಂದಿಗೆ ತಕರಾರು ಮಾಡಿದ್ದು ದಿನಾಂಕ:17/10/2018 ರಂದು ಸಾಯಂಕಾಲ ಈರಣ್ಣಾ ಹಾಗೂ ಅವರ ಇಬ್ಬರು ಮಕ್ಕಳಾದ ಶ್ರೀಶೈಲ್ ಮತ್ತು ಮಲ್ಲಣ್ಣಾ ರವರುಗಳು ಕೂಡಿಕೊಂಡು ನಮ್ಮ ಮನೆಯ ಮುಂದೆ ಬಂದು ನನಗೆ ರಂಡಿ ಬೋಸಡಿ ಎಂದು ಅವಾಚ್ಯವಾಗಿ ಬೈಯುತ್ತಾ ಶ್ರೀಶೈಲನು ನನ್ನ ಕೂದಲು ಹಿಡಿದು ಎಳೆದಾಡುತ್ತಾ ಕೈಯಿಂದ ನನ್ನ ತಲೆಯ ಮೇಲೆ ಹೊಡೆದಿದ್ದು ಮಲ್ಲಣ್ಣ ಈತನು ಬಡಿಗೆಯಿಂದ ನನ್ನ ಹಣೆಯ ಮೆಲ್ಭಾಗಗಕ್ಕೆ ಹೊಡೆದಿದ್ದರಿಂದ ರಕ್ತಗಾಯವಾಗಿದ್ದು ಮತ್ತು ಈರಣ್ಣ ಈತನು ನನಗೆ ರಂಡಿ ನಿನಗೆ ಹಡತಿನಿ ಎಂದು ಅಶ್ಲೀಲವಾಗಿ ಬೈಯುತ್ತಾ ಕೈಯಿಂದ ಹೊಡೆದು ಕಾಲಿನಿಂದ ಎಡಗಾಲ ಮೊಳಕಾಲಿಗೆ ಸೊಂಟಕ್ಕೆ ಒದ್ದದ್ದರಿಂದ ಒಳಪೆಟ್ಟಾಗಿದ್ದು ಅಸ್ಟರಲ್ಲಿಯೇ ಅಲ್ಲಿಯೇ ಇದ್ದ ನಮ್ಮ ಓಣಿಯ ಅಂಬರಾಯ ತಂದೆ ಮೈಲಾರಿ ಪೂಜಾರಿ ಹಾಗೂ ಮಂಗಲಾ ಗಂಡ ಸೈಬಣ್ಣಾ ನರಗೆ ರವರುಗಳು ಜಗಳ ನೋಡಿ ಬಿಡಿಸಿರುತ್ತಾರೆ. ಅಲ್ಲದೇ ನಂತರ 3ಜನ ಸೇರಿ ನನಗೆ ರಂಡಿ ಇನ್ನಮುಂದೆ ಬಟ್ಟೆ ಹೊಗೆದ ನೀರಿನ ಬಗ್ಗೆ ಮಾತಾಡಿದರೆ ನಿನಗೆ ಖಲಾಸ  ಮಾಡುತ್ತೇವೆ ಎಂದು ಜೀವದ ಬೆದರಿಕೆ ಹಾಕಿರುತ್ತಾರೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ಶ್ರೀಮತಿ ಸುಶೀಲಾಬಾಯಿ ಗಂಡ ತಿರುಪತಿ ಚವ್ಹಾಣ ಸಾ || ರೇವನೂರ ರವರ  ಮಗಳಾದ ಜ್ಯೋತಿ ಇವಳಿಗೆ ಹಿರಿಯ ಮಗಳಾದ ಜ್ಯೋತಿ ಇವಳು ತನ್ನ ಸಂಗಡ ಊರಿಗೆ ಕರೆದುಕೊಂಡು ಹೋದ ವಿಷಯದಲ್ಲಿ ನನ್ನುಂದಿಗೆ 1) ಬಿಲ್ಲು ತಂದೆ ರಾಮು ರಾಠೋಡ 2) ಸುನೀಲ ತಂದೆ ಬಿಲ್ಲು ರಾಠೋಡ 3) ಅಶೋಕ ತಂದೆ ಪಾಂಡು ರಾಠೋಡ 4) ಕೇಸಿಬಾಯಿ ಗಂಡ ಬಿಲ್ಲು ರಾಠೋಡ ಸಾ| ಎಲ್ಲರ ರೇವನುರ ರವರು  ಜಗಳ ತೆಗೆದು ಹೊಡೆ ಬಡೆ ಮಾಡಿ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಜೇವರಗಿ ಠಾಣೆ : ಮೃತ ಮರೆಪ್ಪ ತಂದೆ ಸಿದ್ದಪ್ಪ ಸಾ|| ಕೆಂಭಾವಿ ರವರು  ಊರಲ್ಲಿ ಹಾಗು ಅವರಿವರ ಕೈಯಿಂದ ಹಣ ಪಡೆದುಕೊಂಡು ಸಾಲ ಮಾಡಿದ್ದು, ಮಳೆ ಆಗದೆ ಸರಿಯಾಗಿ ಬೆಳೆ ಬಾರದೆ ಸಾಲ ಹೇಗೆ ತಿರಿಸಬೆಕು ಎಂದು ಚಿಂತಿಸುತ್ತಾ ಜೀವನದಲ್ಲಿ ಬೇಸರ ಪಟ್ಟು  ಕೆಂಬಾವಿ ಕೆನಾಲ್ ನೀರಿನಲ್ಲಿ ಮುಳುಗಿ ಆತ್ಮಹತ್ಯ ಮಾಡಿಕೊಂಡಿರುತ್ತರೆ ಅಂತಾ ಶ್ರೀಮತಿ ನಿಂಗಮ್ಮ ಗಂಡ ಮರೆಪ್ಪ ತೆರದಾಳ ಸಾ || ಕೆಂಭಾವಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.