Police Bhavan Kalaburagi

Police Bhavan Kalaburagi

Saturday, January 2, 2021

BIDAR DISTRICT DAILY CRIME UPDATE 02-01-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 02-01-2021

 

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 01/2021, ಕಲಂ. 279, 337, 338 ಐಪಿಸಿ :-

ದಿನಾಂಕ 01-01-2021 ರಂದು ಫಿರ್ಯಾದಿ ಧನರಾಜ ತಂದೆ  ಬಾಬುರಾವ ಪಾಟೀಲ ಸಾ: ಬೀರಿ (ಬಿ) ರವರು ತನ್ನ ಖಾಸಗಿ ಕೆಲಸಕ್ಕಾಗಿ ಬೀರಿ (ಬಿ) ಗ್ರಾಮದಿಂದ ಭಾಲ್ಕಿಗೆ ಕಾರ ನಂ. ಕೆಎ-39/ಎಂ-2143 ನೇದರಲ್ಲಿ ಕುಳಿತು ಬರುವಾಗ ಭಾಲ್ಕಿಯ ವಿವೇಕಾನಂದ ಚೌಕ ಹತ್ತಿರ ಬಂದಾಗ ಅವರ ಮುಂದೆ ಮುಂದೆ ಕಾರ ನಂ. ಕೆಎ-32/ಎಂ-8460 ನೇದರ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಓಡಿಸಿಕೊಂಡು ಭಾಲ್ಕಿ ಕಡೆಗೆ ಬರುತ್ತಿದನು ಹಾಗೂ ಭಾಲ್ಕಿ ಕಡೆಯಿಂದ ಅಪ್ಪಿ ಆಟೋ ನಂ. ಕೆಎ-39/4408 ನೇದರ ಚಾಲಕನಾದ ಆರೋಪಿಯು ತನ್ನ ಆಟೋ ನೇದನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಅಂಬೇಸಾಂಗವಿ ಕ್ರಾಸ ಕಡೆಗೆ ಹೊಗುತಿರುವಾಗ ಕಾರ ಮತ್ತು ಆಟೋ ಚಾಲಕರು ಪರಸ್ಪರ ಮುಖಾಮುಖಿ ಡಿಕ್ಕಿ ಮಾಡಿಕೊಂಡು ಆಟೋ ಚಾಲಕ ಅದೆ ವೇಗದಲ್ಲಿ ಕಾರಿನ ಹಿಂದೆ ಹಿಂದೆ ಬರುತ್ತಿದ ಫಿರ್ಯಾದಿಯ ಕಾರಿಗೆ ಕುಡ ಡಿಕ್ಕಿ ಮಾಡಿರುತ್ತಾನೆ, ಸದರಿ ಘಟನೆಯಲ್ಲಿ ಫಿರ್ಯಾದಿಯವರ ಕಾರಿನ ಮುಂಭಾಗ ಜಜ್ಜಿರುತ್ತದೆ ಹಾಗೂ ಕಾರ ನಂ. ಕೆಎ-32/ಎಂ-8460 ನೇದರಲ್ಲಿದ್ದ ನರಸಾಬಾಯಿ ಗಂಡ ಸಕಾರಾಮ ಕಾಂಬಳೆ ಸಾ: ಹುಣಜಿ () ರವರ ಹಣೆಯಲ್ಲಿ ರಕ್ತಗಾಯ ಮತ್ತು ಸುನಿಲ ತಂದೆ ಸಕಾರಾಮ ಕಾಂಬಳೆ ಸಾ: ಹುಣಜಿ () ರವರ ಎಡಗೈ ಮುಂಗೈ, ಎಡ ಭುಜದಲ್ಲಿ ಗುಪ್ತಗಾಯ ಆಗಿರುವುದರಿಂದ ಒಂದು ಆಟೋದಲ್ಲಿ ಕುಳಿತು ಇಲಾಜು ಕುರಿತು ಭಾಲ್ಕಿ ಸರಕಾರಿ ಆಸ್ಪತ್ರೆಗೆ ಹೊಗಿರುತ್ತಾರೆ, ಫಿರ್ಯಾದಿಗೆ ಯಾವುದೆ ಗಾಯ ಆಗಿರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಔರಾದ (ಬಿ) ಪೊಲೀಸ್ ಠಾಣೆ ಅಪರಾಧ ಸಂ. 01/2021, ಕಲಂ. 279, 337, 338 ಐಪಿಸಿ :-

ದಿನಾಂಕ 31-12-2020 ರಂದು ಮಾರುತಿ ಬೇಲ್ದಾರ ಸಾ: ಮಹಾಡೊಣಗಾಂವ ಇವರು ಹೃದಯ ಘಾತದಿಂದ ಮೃತಪಟ್ಟಿದ್ದು ಅವರ ಅಂತಿಮ ಸಂಸ್ಕಾರ ಕುರಿತು ದಿನಾಂಕ 01-01-2021 ರಂದು ಮಾರುತಿ ರವರ ಅಂತಿಮ ಸಂಸ್ಕಾರಕ್ಕೆ ಕಟ್ಟಿಗೆ ತರಲು ತಮ್ಮೂರ ವಿಠಲ ತಂದೆ ರಾಮರಾವ ದೇವಕೆ ರವರ ಜೀಪ ನಂ. ಎಂ.ಹೆಚ್-22/ಸಿ-484 ನೇದರಲ್ಲಿ ಔರಾದ[ಬಿ]ಗೆ ಫಿರ್ಯಾದಿ ಕಲ್ಲಪ್ಪ ತಂದೆ ಕೊಂಡಿಬಾ ಸಾ: ಮಹಾಡೊಣಗಾಂ ಮತ್ತು ಪುಂಡಲಿಕ ತಂದೆ ರಾಮ ದಂಡೆ, ಶಿವಾಜಿ ತಂದೆ ಶಂಕರ ಬೇಲ್ದಾಳ, ರಾಮದಾಸ ತಂದೆ ಶರಣಪ್ಪಾ ವಾಗ್ಮಾರೆ, ತುಕಾರಾಮ ತಂದೆ ಮರೇಪ್ಪಾ ಖಂದಾರೆ ಇವರೆಲ್ಲರು ವಿಠಲರಾವ ಇವರ ಜೀಪಿನಲ್ಲಿ ಕುಳಿತು ಔರಾದ[ಬಿ]ಗೆ ಬಂದು ಔರಾದ ಪಟ್ಟಣದ ಸಪ್ತಗಿರಿ ಧಾಬಾ ಎದುರುಗಡೆ ಇರುವ ಕಟ್ಟಿಗೆಯ ಅಡ್ಡಾದಲ್ಲಿ ಖರೀದಿಸಿ ಕಟ್ಟಿಗೆಗಳನ್ನು ಜೀಪಿನಲ್ಲಿ ತುಂಬಿಕೊಂಡು 6 ಜನರು ಮರಳಿ ತಮ್ಮೂರಿಗೆ ಹೋಗುವಾಗ ಹಣೆಗಾಂವ-ಔರಾದ[ಬಿ] ರೋಡಿನ ಮೇಲೆ ಬಸವ ಹೊಂಡಾ ಶೋರೂಂ ಎದುರುಗಡೆ .ಪಿ.ಎಂ.ಸಿ ಕಡೆಯಿಂದ ಟಿಪ್ಪರ್ ನಂ. ಕೆಎ-38/6982 ನೇದರ ಚಾಲಕನಾದ ಆರೋಪಿ ಮಾರುತಿ ತಂದೆ ಲಿಂಗಪ್ಪ ಮೇತ್ರೆ ಸಾ: ಮಮದಾಪೂರ, ತಾ: & ಜಿ: ಬೀದರ ಇತನು ತನ್ನ ಟಿಪ್ಪರ ನೇದನ್ನು ಅತೀವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಬಿ.ಸಿ.ಎಮ್ ಹಾಸ್ಟಲ್ ಎದುರಗಡೆ ಒಂದು ಮೋಟರ ಸೈಕಲ ಚಾಲಕ ಹೋಗುತ್ತಿದ್ದು ಅವನಿಗೆ ಡಿಕ್ಕಿ ಪಡಿಸಿದಾಗ ಮೋಟರ ಸೈಕಲ ಚಾಲಕನು ರೋಡಿನ ಎಡಗಡೆ ಬಿದ್ದಿದ್ದು, ಆರೋಪಿಯು ಪುನಃ ಬಲಗಡೆ ದಿಕ್ಕಿಗೆ ಕಟ್ಟ ಹೊಡೆದು ಫಿರ್ಯಾದಿಯವರು ಕುಳಿತ ಜೀಪಿನ ಮುಂದಿನ ಭಾಗಕ್ಕೆ ಡಿಕ್ಕಿ ಪಡಿಸಿ ಜೀಪ ಸಮೇತ ಎಳೆದುಕೊಂಡು .ಪಿ.ಎಂ.ಸಿ ಯಾರ್ಡ ಒಳಗೆ ಎಳೆದೊಯ್ದು ಮತ್ತು ಜೀಪಿನ ಹಿಂದೆ ಇನ್ನೊಂದು ಮೋಟರ ಸೈಕಲ ಬರುತ್ತಿದ್ದು ಅದರ ಮೇಲೆ ಇಬ್ಬರು ವ್ಯಕ್ತಿಗಳು ಇದ್ದರು ಅವರಿಗೆ ಜೀಪಿನ ಹಿಂದಿನ ಭಾಗದಿಂದ ಎಳೆದುಕೊಂಡು ಹೊಗಿ ಒಂದು ಕೆ..ಬಿ ಕಂಬಕ್ಕೆ ಹತ್ತಿ ಕೆ..ಬಿ ಕಂಬ್ ಮುರಿದು ನಂತರ .ಪಿ.ಎಂ.ಸಿ ಒಳಗೆ ಹೋಗುವ ರಸ್ತೆಯ ಮುಂದೆ ಇದ್ದ ಒಂದು ಫರ್ಸಿ ಅಂಗಡಿಯ ಒಳಗೆ ಹೋಗಿ ನುಗ್ಗಿ ನಿಂತಿದ್ದು ಅದರಿಂದ ಎರಡು ಮೋಟರ ಸೈಕಲಗಳು, ಜೀಪು ಮತ್ತು ಒಂದು ಕೆ..ಬಿ ಕಂಬ ಮುರಿದು ಪೂರ್ತಿ ಡ್ಯಾಮೇಜ ಆಗಿದ್ದು ಇರುತ್ತದೆ, ಸದರಿ ಡಿಕ್ಕಿಯಿಂದ ಜೀಪಿನಲ್ಲಿದ್ದ 1) ಫಿರ್ಯಾದಿಗೆ ಎಡಗೈ ಮುಂಗೈಗೆ, ಎಡಗಾಲು ಮೊಣಕಾಲಿಗೆ ತರಚಿದ ಗುಪ್ತಗಾಯ, 2) ತುಕಾರಾಮ ತಂದೆ ಮರೇಪ್ಪಾ ಖಂದಾರೆ ಇತನಿಗೆ ಬಾಯಿಂದ ರಕ್ತಬರುತಿದ್ದು, ಎರಡು ಮೊಣಕಾಲಿಗೆ ತರಚಿದ ಗುಪ್ತಗಾಯ, 3) ಶಿವಾಜಿ ತಂದೆ ಶಂಕರ ಬೇಲ್ದಾರ ಇತನಿಗೆ ಎಡಗಡೆ ರೊಂಡಿಗೆ, ಬಲಗಾಲ ಮೊಣಕಾಲಿಗೆ ಗುಪ್ತಗಾಯ, 4) ರಾಮದಾಸ ತಂದೆ ಶರಣಪ್ಪಾ ವಾಗ್ಮಾರೆ ಇತನಿಗೆ ಎದೆಗೆ ಗುಪ್ತಗಾಯ, ಎಡಗಡೆ ಮೊಣಕಾಲಿಗೆ ಗುಪ್ತಗಾಯ ಹಾಗು 5) ಜೀಪ ಚಾಲಕ ವಿಠಲ ದೇವಕತೆ ಇತನಿಗೆ ಹಣೆಗೆ ಭಾರಿ ರಕ್ತಗಾಯ, ಕಿವಿಯಿಂದ ರಕ್ತ ಸ್ರಾವ ಆಗುತಿದ್ದು, ಸೊಂಟಕ್ಕೆ, ಎದೆಗೆ ಗುಪ್ತಗಾಯ, 6) ಪುಂಡಲಿಕ ತಂದೆ ರಾಮಾ ಇತನಿಗೆ ಹಣೆಗೆ ಭಾರಿ ರಕ್ತಗಾಯ ತಲೆಗೆ ಭಾರಿ ರಕ್ತಗಾಯ, ಬಲಗಾಲ ಮೊಣಕಾಲಿಕೆ ಗುಪ್ತಗಾಯ, ಬಲಗೈ ಭುಜಕ್ಕೆ ಭಾರಿ ಗುಪ್ತಗಾಯವಾಗಿದ್ದು ಮತ್ತು ಮೋಟರ ಸೈಕಲ ನಂ. ಕೆಎ-38/ಜೆ-8987 ನೇದರ ಚಾಲಕನಾದ ಸುನೀಲಕುಮಾರ ನಾರಾಯಣಪೂರ ಇತನಿಗೆ ಬಲ ಭುಜಕ್ಕೆ, ಬಲಗಡೆ ತಲೆಗೆ ರಕ್ತಗಾಯ, ಬಲಗಾಲ ಮೊಣಕಾಲಿಗೆ ಗುಪ್ತಗಾಯ ಹಾಗು ಜೀಪಿನ ಹಿಂದೆ ಬರುತ್ತಿದ್ದ ಮೋಟರ ಸೈಕಲ ನಂ. ಕೆಎ-32/ಇಎ-2893 ನೇದರ ಮೇಲೆ ಇದ್ದ ಇಬ್ಬರು ಹುಡುಗರಾದ ಅಜಯ ತಂದೆ ಲಕ್ಷ್ಮಣ ವಾಸರೆ ಇತನಿಗೆ ಎರಡು ಮೊಣಕಾಲಿಗೆ ಭಾರಿ ರಕ್ತಗಾಯ, ಎಡಗಾಲು ಮುಂಗಾಲಿಗೆ ಭಾರಿ ರಕ್ತಗಾಯ, ಹಣೆಗೆ ಭಾರಿ ರಕ್ತಗಾಯ ಹಾಗು ಮಹೇಶ ತಂದೆ ವಿಜಯಕುಮಾರ ಬಿರಾದಾರ ಇತನಿಗೆ ತಲೆಗೆ ಭಾರಿ ರಕ್ತಗಾಯ, ಎರಡು ಕಾಲುಗಳಿಗೆ ಭಾರಿ ಗುಪ್ತಗಾಯವಾಗಿದ್ದು ಮತ್ತು ಡಿಕ್ಕಿ ಪಡಿಸಿದ ಟಿಪ್ಪರ ಚಾಲಕ ಮಾರುತಿ ತಂದೆ ಲಿಂಗಪ್ಪಾ ಮೇತ್ರೆ ಇತನಿಗೆ ಬಲಗಾಲ ತೊಡೆಗೆ ಗುಪ್ತಗಾಯವಾಗಿರುತ್ತದೆ, ನಂತರ ಅಪಘಾತವಾಗಿದ್ದನ್ನು ನೋಡಿ ಅಲ್ಲೆ ಇದ್ದ ಔರಾದ [ಬಿ] ಪಟ್ಟಣದ ಜನರು 108 ಅಂಬುಲೆನ್ಸಗೆ ಕರೆ ಮಾಡಿ ಅದರಲ್ಲಿ ಹಾಗು ಖಾಸಗಿ ವಾಹನದಲ್ಲಿ ಹಾಕಿಕೊಂಡು ಔರಾದ(ಬೀ0 ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 01/2021, ಕಲಂ. 302, 201 ಐಪಿಸಿ :-

ದಿನಾಂಕ 29, 30-12-2020 ರಾತ್ರಿ ವೇಳೆಯಲ್ಲಿ ಯಾರೂ ಅಪರಿಚಿತರು ಯಾವುದೋ ಕಾರಣಕ್ಕೆ ಫಿರ್ಯಾದಿ ತುಕಾರಾಮ ತಂದೆ ಶ್ರೀಪತಿ, ವಯ: 42 ವರ್ಷ, ಜಾತಿ: ಕುರುಬ, ಸಾ: ಯರನಳ್ಳಿ, ಸದ್ಯ: ಮಾಳೆಗಾಂವ, ತಾ & ಜಿ: ಬೀದರ ರವರ ಅಣ್ಣ ಪಂಡಿತ ತಂದೆ ಶ್ರೀಪತಿ ರವರಿಗೆ ಕೋಲೆ ಮಾಡಿ ಚಾದರದಲ್ಲಿ ಸುತ್ತಿ ಬಾವಿಯಲ್ಲಿ ಬಿಸಾಡಿ ಸಾಕ್ಷಿ ನಾಶ ಪಡಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 01-01-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.