Police Bhavan Kalaburagi

Police Bhavan Kalaburagi

Saturday, August 11, 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ:- 10/08/2018 ರಂದು ಮಧ್ಯಾಹ್ನ ಶ್ರೀಮತಿ ಶೋಭಾ ಗಂಡ ನಾಗಣ್ಣಾ ಗುಳೆದಗುಡ್ಡ  ಸಾ|| ಲಕ್ಷ್ಮಣರಾವ ಕುಲಕರ್ಣಿ ಆಳಂದ ಕಾಲೋನಿ ಕಲಬುರಗಿ. ರವರ ಗಂಡನಾದ  ನಾಗಣ್ಣ ತಂದೆ ಬಸವಣಪ್ಪಾ ಗುಳೆದಗುಡ್ಡ ರವರು ತನ್ನ .ಮೋಟಾರ ಸೈಕಲ KA-32-W-554 ನೇದ್ದರ ಮೇಲೆ ಒಬ್ಬರೇ ಕುಳಿತುಕೊಂಡು ಕಂಕರ ಮಶೀನ ಕಡೆಯಿಂದ ಕೆರಿಬೋಸಗಾ ಸೀಮಾಂತರದಲ್ ಶ್ರೀಮಂತರಾವ ಪೊಲೀಸ ಪಾಟೀಲ ಎಂಬುವವರ ಮನೆ ಎದುರಿನ ಕಲಬುರಗಿ-ಆಳಂದ ಮುಖ್ಯ ರಸ್ತೆಯ ರೋಡ ಎಡಬದಿಯಿಂದ ತಮ್ಮ ಸೈಡಹಿಡಿದುಕೊಂಡು ಹೊರಟಾಗ ಅದೇ ಸಮಯಕ್ಕೆ ಕಲಬುರಗಿ ಕಡೆಯಿಂದ ಒಬ್ಬ ಟಿಪ್ಪರ ಚಾಲಕ ಅದರ ಹಿಂದುಗಡೆಯಿಂದ ಒಬ್ಬ ಕೆ.ಎಸ.ಆರ.ಟಿ.ಸಿ ಬಸ್ಸ ಚಾಲಕ ಅತೀವೇಗ & ನಿಷ್ಕಾಳಜಿತನದಿಂದ ಹಾಗೂ ಅಡ್ಡಾ-ತಿಡ್ಡಿಯಾಗಿ ನಡೆಸುತ್ತಾ ಮುಂದೆ ಹೊರಟ ಟಿಪ್ಪರಕ್ಕೆ ಓವರಟೇಕ್ ಮಾಡಿ ಅತೀವೇಗದಿಂದ ನಡೆಯಸುತ್ತಾ ಬಂದವನೇ ಮೋಟಾರ ಸೈಕಲ ಬರುತ್ತಿದ್ದ ನಿನ್ನ ಗಂಡನಿಗೆ ಡಿಕ್ಕಿ ಹೊಡೆದು ಅಪಘಾತಡಿಸಿದಾಗ ಬಸ್ಸಿನ ಮುಂದಿನ ಗಾಲಿಯಲ್ಲಿ ಮೋಟಾರ ಸೈಕಲ ಸಿಕ್ಕಿ ಬಿದ್ದಿದರಿಂದ ಎಳೆದುಕೊಂಡು ಹೋಗಿದ್ದರಿಂದ ಅವರ ತಲೆಯ ಮೇಲಿಂದ ಹೊಟ್ಟೆ, ಬಲಸೊಂಟ್ ಮರ್ಮಾಂಗದ ಮೇಲೆ ಟಾಯಾರ ಹಾದೂ ಹೋಗಿದ್ದರಿಂದ ಪೂರ್ತಿ ತಲೆಒಡೆದು ಮಾಂಸಖಂಡ ಒಡೆದು ಹೊರಬಂದಿದ್ದು, ಬಲಸೊಂಟ್ ಮತ್ತು ಬಲಗಾಲ ಪಾದದಿಂದ ಹರಿದು ಮಾಂಸಖಂಡ ಹೊರಬಂದಿರುತ್ತದೆ. ಬಸ್ಸು ರೋಡಿನ ಬಲಬಾಗದಲ್ಲಿ ಇರುವ ಒಂದು ಗಿಡಕ್ಕೆ ಡಿಕ್ಕಿ ಹೊಡೆದು ನಿಂತಿರುತ್ತದೆ. ನಿಮ್ಮ ಗಂಡ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಅವರಿಗೆ ಡಿಕ್ಕಿ ಹೊಡೆದ KSRTC ಬಸ್ಸು  ನಂ- KA-32-F 2355  ಇರುತ್ತದೆ. ಅದರ ಚಾಲಕ ಕಿರಣಕುಮಾರ ಆಳಂದ ಡಿಪೋ ಬಸ್ಸು ನಿಲ್ಲಿಸಿದ ನಂತರ ಅಲ್ಲಿಂದ ಓಡಿ ಹೋಗಿರುತ್ತಾನೆ. ಸದರ ಅಪಘಾತವು ಈ ಮೇಲೆ KSRTC ಬಸ್ಸು  ನಂ- KA-32-F 2355  ಚಾಲಕ ಕಿರಣಕುಮಾರ ಆಳಂದ ಡಿಪೊ ಇತನ ಇತನ ತಪ್ಪಿನಿಂದ ಸಂಭವಿಸಿದ್ದರಿಂದ ಅವನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ದಿನಾಂಕ: 08/10/2018 ಮುಂಜಾನೆ ನಾನು ಮತ್ತು ನನ್ನ ಹೆಂಡತಿಯಾದ ಶಶಿಕಲಾ ಮನೆಯಲ್ಲಿದ್ದಾಗ ಕಿರಿಯ ಮಗನಾದ ಕೃಷ್ಣಾ ಈತನು ತನ್ನ ವೈಯಕ್ತಿಕ ಕೆಲಸಕ್ಕಾಗಿ ವ್ಹಿ.ಕೆ.ಸಗಲಗರ ಗ್ರಾಮಕ್ಕೆ ಹೋಗಿ ಬರುತ್ತೇನೆಂದು ಹೇಳಿ ನಮ್ಮ ಸಂಬಂದಿಕರಾದ ಖತಲಪ್ಪ ಭಜಂತ್ರಿ ಇವರ ಹೊಸ ಸ್ಪ್ಲೈಂಡರ್ ಪ್ಲಸ್ ಮೊಟಾರ್ ಸೈಕಲನ್ನು ತಗೆದುಕೊಂಡು ಅದರ ಮೇಲೆ ನನ್ನ ತಂಗಿಯ ಮಗನಾದ ಆಕಾಶ ತಂದೆ ಅರ್ಜುನ ಹೆಳವರು ಸಾ:ಮದರಾ ಬಿ ಈತನಿಗೆ ಕೂಡಿಸಿಕೊಂಡು ಮನೆಯಿಂದ ಹೋಗಿರುತ್ತಾನೆ. ಮುಂಜಾನೆ 09-00 ಗಂಟೆ ಸುಮಾರಿಗೆ ನಮ್ಮ ಊರಿನ ನಮ್ಮ ಮನೆಯ ಪಕ್ಕದಲ್ಲಿರುವ ಶಿವರಾಯ ತಂದೆ ಮಹಾದೇವ ನಾಟೀಕಾರ ಇವರು ಬಂದು ನನ್ನ ಮಗನಾದ ಕೃಷ್ಣಾ ಈತನು ಮೊಟಾರ್ ಸೈಕಲ್ ಮೇಲೆ ಸಲಗರ ಕಡೆಗಡ ಹೋಗುವಾಗ ಮಾಧುರಾಯ ಸಾಹುಕಾರ ಇವರ ಹೊಲದ ಹತ್ತಿರ ಹೋಗುತ್ತಿರುವಾ ಎದುರುಗಡೆಯಿಂದ ಲಾಡಮುಗಳಿ ಆರ್.ಎಂ.ಪಿ ಡಾಕ್ಟರಾದ ಸಂತೋಷ @ ರಿಚರ್ಡ ಎಂಬುವರು ಅವರ ಮೊಟಾರ್ ಸೈಕಲ್ ನಂ: ಕೆಎ32-ಇಬಿ4038 ನೇದ್ದನ್ನು ಅತೀವೇಗ ಮತ್ತು ನಿರ್ಲಕ್ಷತನಿಂದ ಚಲಾಯಿಸಿಕೊಂಡು ಬಂದು ಕೃಷ್ಣಾ ಈತ ಚಲಾಯಿಸಿಕೊಂಡು ಹೋಗುತ್ತಿದ್ದ ಮೊಟಾರ್ ಸೈಕಲಗೆ ಡಿಕ್ಕಿಪಡಿಸಿದ್ದರಿಂದ ಕೃಷ್ಣನಿಗೆ ಹಾಗೂ ಹಿಂದೆ ಕುಳಿತಿದ್ದ ಹುಡಗನಿಗೆ ಮತ್ತು ಡಾಕ್ಟರಗೆ ಕೂಡ ಗಾಯಗಳಾಗಿರುತ್ತವೆ. ಎಂದು ಸಂತೋಷ ಜೋಗಿ ಇವರು ಫೋನ್ ಮಾಡಿ ಅವರಿಗೆ ತಿಳಿಸಿರುವುದನ್ನು ನಮಗೆ ತಿಳಿಸಿದ ಮೇರೆಗೆ ನಾನು ನನ್ನ ತಮ್ಮನಾದ ಮಹಾದೇವ ಹಾಗೂ ಚಿಕ್ಕಪ್ಪನ ಮಗನಾದ ರವಿರವರುಗಳು ಕೂಡಿ ಸ್ಥಳಕ್ಕೆ ಹೋಗಿ ನೋಡಿ ನನ್ನ ಮಗ ಆಕಾಶ ಹಾಗೂ ಸಂತೋಷ ಡಾಕ್ಟರ್ ರವರು ಗಾಯಹೊಂದಿದ್ದು ನನ್ನ ಮಗನಾದ ಕೃಷ್ಣಾ ಈತನಿಗೆ ತಲೆಗೆ ಹಾಗೂ ದೇಹಕ್ಕೆ ಒಳಪೆಟ್ಟಾಗಿ ಮೂಗಿನಿಂದ ರಕ್ತ ಬರುತ್ತಿದ್ದು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ ಆಕಾಶನಿಗೆ ತಲಗೆಗೆ ಎದೆಗೆ ಮುಂಗೈಗೆ ಮೂಗಿಗೆ ತರಚಿದ ಗಾಯಗಳಾಗಿದ್ದು ಸಂತೋಷ ಡಾಕ್ಟರಿಗೂ ಕೂಡ ತರಚಿದ ಗಾಯಗಳಾಗಿವೆ ಅಸ್ಟರಲ್ಲಿ ನನ್ನ ತಮ್ಮನಾದ ಮಹಾದೇವನು ಅಂಬ್ರೆಷ ಕಾಂಬಳೆ ಇವರ ಕ್ರೂಜರ್ ಜೀಪ್ ತರಸಿದ್ದು ಅದರಲ್ಲಿ ಮೂರು ಜನರಿಗೆ ಹಾಕಿಕೊಂಡು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡುವಸ್ಟರಲ್ಲಿ ಮುಂಜಾನೆ 11-00 ಗಂಟೆಯ ಸುಮಾರಿಗೆ ನನ್ನ ಮಗ ಕೃಷ್ಣಾ ಈತನು ಮೃತಪಟ್ಟಿರುತ್ತಾನೆ  ಆಕಾಶ ಹಾಗೂ ಡಾಕ್ಟರವರಿಗೆ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೇವೆ. ಈ ಘಟನೆಗೆ ಕಾರಣರಾದ ಸಂತೋಷ @ ರಿಚರ್ಡ ತಂದೆ ವಿಶ್ವಾಸ ಸಾ:ಲಾಡಮುಗಳಿ ಇವರ ಮೇಲೆ ಹಾಗೂ ಅವರ ಮೊಟಾರ್ ಸೈಕಲ್ ನಂ:ಕೆಎ32-ಇಬಿ4038 ನೇದ್ದರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಸ್ರೀ ವಿಜಯಕುಮಾರ ತಂದೆ ಬಾಬು ಬಾಚಿಂದರೆ ಸಾ ಮುದ್ದಡಗಾ ತಾ : ಆಳಂದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ
ಹಲ್ಲೆ ಪ್ರಕರಣ :
ಸ್ಟೇಷನ ಬಜಾರ ಠಾಣೆ :  ಶ್ರೀ ರಾಜು ತಂದೆ ಮೇಘು ಆಡೆ ಸಾಃ ಕೆ.ಇ.ಬಿ ಕ್ವಾಟರ್ಸ್  ಹಳೇ ಜೇವರ್ಗಿ ರಸ್ತೆ ಕಲಬುರಗಿ ರವರು ದಿನಾಂಕಃ 10/08/2018 ರಂದು ಮದ್ಯಾಹ್ನ 15-00 ಗಂಟೆಯಿಂದ 15-15 ಗಂಟೆಯ ಸಮಯದಲ್ಲಿ  ನಾನು ಮನೆಯಲ್ಲಿ ಇರುವಾಗಲೇ ನಮ್ಮ ಮನೆಯ ಹತ್ತಿರ ವಾಸವಾಗಿರುವ ಸಚೀನ ತಂದೆ ನಿಜಪ್ಪ ಎಂಬುವನು ನನಗೆ ಮನೆಯಿಂದ ಕರೆದುಕೊಂಡು ಹಳೆ ಜೇವರ್ಗಿ ರಸ್ತೆಯ ಹನುಮಾನ ನಗರ ರೈಲ್ವೆ ಅಂಡರ ಬ್ರೀಡ್ಜ್ ಹತ್ತಿರ ಹೋದಾಗ ಸಚೀನ ಮತ್ತು ಆತನ 3 ಜನ ಸ್ನೇಹಿತರು ಸೇರಿಕೊಂಡು ನನಗೆ ಕಬ್ಬಿಣದ ರಾಡಿನಿಂದ ನನ್ನ ತಲೆಗೆ ಹೊಡೆದು ಗಾಯ ಪಡಿಸಿ ಹೊರಟು ಹೋಗಿರುತ್ತಾರೆ. ನಂತರ ಯಾರೋ ನನಗೆ ಕರೆದುಕೊಂಡು ಹೋಗಿ ನಮ್ಮ ಮನೆಯ ಹತ್ತಿರ ಬಿಟ್ಟಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.