Police Bhavan Kalaburagi

Police Bhavan Kalaburagi

Thursday, December 10, 2020

BIDAR DISTRICT DAILY CRIME UPDATE 10-12-2020

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 10-12-2020

 

ಖಟಕಚಿಂಚೊಳಿ ಪೊಲೀಸ್ ಠಾಣೆ ಅಪರಾಧ ಸಂ. 91/2020, ಕಲಂ. 279, 304() ಐಪಿಸಿ :-

ದಿನಾಂಕ 09-12-2020 ರಂದು ಫಿರ್ಯಾದಿ ವಿಜಯಕುಮಾರ ತಂದೆ ವಿಠಲರಾವ ಸೂರ್ಯವಂಶಿ ಸಾ: ಚಳಕಾಪೂರ ವಾಡಿ ರವರು ಚಳಕಾಪೂರ ವಾಡಿ ಗ್ರಾಮದಿಂದ ತಮ್ಮ ಮನೆಯಲ್ಲಿನ ಎಮ್ಮೆಯನ್ನು ತೆಗೆದುಕೊಂಡು ಮೇಯಿಸುವ ಸಲುವಾಗಿ ಚಿಟ್ಟಾ (ಕೆ) ಗ್ರಾಮದ ಫರೀದ ಮಚಕುರಿ ರವರ ಹೊಲಕ್ಕೆ ಹೊಗಿದ್ದು ಅಲ್ಲಿನ ಚಳಕಾಪೂರ - ಖಟಕ ಚಿಂಚೋಳಿ ರೋಡಿನ ಬದಿಯ ತಿರುವಿನಲ್ಲಿ ಮಾಧವರಾವ ಪಾಟೀಲ ಸಾ: ಚಿಟ್ಡಾ (ಕೆ) ಗ್ರಾಮದವರ ಹೊಲದ ಹತ್ತಿರ ಸ್ವಲ ದೂರದಲ್ಲಿ ಹೊಲದಲ್ಲಿ ಎಮ್ಮೆ ಮೇಯಿಸುತ್ತಿರುವಾಗ ಖಟಕ ಚಿಂಚೋಳಿ ಗ್ರಾಮದ ಕಡೆಯಿಂದ ಒಬ್ಬ ಮೊಟಾರ ಸೈಕಲ್ ಸವಾರನು ತನ್ನ ಮೋಟಾರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ತಿರುವಿನಲ್ಲಿ ರೋಡಿನ ತಗ್ಗಿನಲ್ಲಿ ಬಿದ್ದಿರುತ್ತಾನೆ, ಈ ವೇಳೆಯಲ್ಲಿ ಅಲ್ಲೆ ರೋಡಿನ ಬದಿಯಲ್ಲಿ ಹೊಗುತ್ತಿದ್ದ ತಮ್ಮೂರ ಅಂಕುಶ ತಂದೆ ಪ್ರಲ್ಹಾದ ಪಾಟೀಲ ರವರಿಗೆ ತನ್ನ ಜೊತೆ ಕರೆದುಕೊಂಡು ತಿರುವಿನಲ್ಲಿ ರೋಡಿನ ಬದಿಗೆ ತಗ್ಗಿನಲ್ಲಿ ಹೊಗಿ ನೋಡಲು ಒಬ್ಬ ಅಂದಾಜು 25-30 ವರ್ಷದ ಒಬ್ಬ ಗಂಡು ವ್ಯಕ್ತಿ ತಗ್ಗಿನಲ್ಲಿ ಬಿದ್ದಿದ್ದು ಆತನ ಹತ್ತಿರ ಹೊಗಿ ನೊಡಲು ಸದರಿ ವ್ಯಕ್ತಿ ಮೃತಪಟ್ಟಿದ್ದು ಇರುತ್ತದೆ ಮತ್ತು ಆತನ ತಲೆಯಲ್ಲಿ ಭಾರಿ ರಕ್ತಗಾಯ, ಬಲಗೈ ಭುಜದ ಹತ್ತಿರ ಭಾರಿ ಗುಪ್ತಗಾಯವಾಗಿ ಬಲಗೈ ಮುರಿದ್ದು ಇರುತ್ತದೆ ಮತ್ತು ಮೂಗಿನಿಂದ, ಬಾಯಿಂದ ರಕ್ತ ಬರುತ್ತಿರುತ್ತದೆ, ಈ ವೇಳೆಯಲ್ಲಿ ಫಿರ್ಯಾದಿ ಹಾಗೂ ಅಂಕುಶ ಪಾಟೀಲ ರವರು ಕೂಡಿ ತಗ್ಗಿನಲ್ಲಿ ಬಿದ್ದ ಮೋಟಾರ ಸೈಕಲ್ ನೋಡಲು ಆ ಮೋಟಾರ ಸೈಕಲ್ ಬಜಾಜ ಕಂಪನೀಯ ಖವಾಸಕಿ (ಬಾಕ್ಸರ್) ಆಗಿದ್ದು ಅದರ ನಂಬರ ಎ.ಪಿ-10/ಕ್ಯೂ-329 ಇರುತ್ತದೆ ಮತ್ತು ಸದರಿ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಹೆಸರು ಮತ್ತು ವಿಳಾಸ ಗೊತ್ತಾಗಿರುವುದಿಲ್ಲಾ ಅಂತ ಕೊಟ್ಟ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ ಸಂ. 149/2020, ಕಲಂ. 279, 304() ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 09-12-2020 ರಂದು ಫಿರ್ಯಾದಿ ಜಗನ್ನಾಥ ತಂದೆ ಹಣಮಂತ ಕಲ್ಲೂರ ಸಾ: ಸಂಗಮ ಕಲನ, ತಾ: ತಾಂಡೂರ, ಜಿಲ್ಲಾ: ವಿಕಾರಬಾದ ರವರ ಮಗನಾದ ಕೆ. ಮಹೇಶ ಇತನು ಹೈದ್ರಾಬಾದದಿಂದ ಹುಮನಾಬಾದ ಪಟ್ಟಣದ ಡೆಗೆ ತನ್ನ ಗೆಳೆಯನ ಮದುವೆ ಕಾರ್ಯಕ್ರಮಕ್ಕೆ ತನ್ನ ಹೊಂಡಾ ಶೈನ್ ಮೋಟಾರ ಸೈಕಲ್ ನಂ. ಟಿ.ಎಸ-34/ಬಿ-2100 ನೇದರ ಮೇಲೆ ಬಂದು ಮದುವೆ ಮುಗಿಸಿಕೊಂಡು ನಂತರ ಸಾಯಂಕಾಲ ಹೈದ್ರಾಬಾದಕ್ಕೆ ಹಳ್ಳಿಖೇಡ(ಬಿ) ಬೀದರ ಮಾರ್ಗವಾಗಿ ಹೋಗುವಾಗ ಹುಮನಾಬಾದ-ಬೀದರ ರೋಡ ಕಬೀರಾಬಾದವಾಡಿ ಗ್ರಾಮದ ಶಿವಾರದ ವಾಟರ್ ಫೀಲ್ಟರ್ ಹತ್ತಿರ ಕಾರ್ನರನಲ್ಲಿ ರೋಡಿನ ಮೇಲೆ ಕೆ. ಮಹೇಶ ಇತನು ಮೋಟಾರ ಸೈಕಲನ್ನು ಚಲಾಯಿಸಿಕೊಂಡು ಹೋಗುವಾಗ ಎದರುಗಡೆಯಿಂದ ಯಾವುದೋ ಒಂದು ಅಪರಿಚಿತ ವಾಹನದ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ಮಹೇಶ ಇತನ ಮೋಟಾರ ಸೈಕಲಗೆ ಡಿಕ್ಕಿ ಮಾಡಿ ತನ್ನ ವಾಹನ ನಿಲ್ಲಿಸದೇ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಮಹೇಶ ಇತನ ಹಣೆಗೆ, ಬಾಯಿಗೆ, ಗಟಾಯಿಗೆ ಭಾರಿ ರಕ್ತ ಮತ್ತು ಕಟ್ಟಾದ ಗಾಯ, ಬಲಗಡೆ ಮೋಳಕಾಲ ಮೇಲೆ ಭಾರಿ ಗುಪ್ತಗಾಯವಾಗಿ ಮುರಿದಿರುತ್ತದೆ, ಬಲಗಡೆ ತಲೆಗೆ ಭಾರಿ ಗುಪ್ತಗಾಯವಾಗಿ ಕಿವಿಯಿಂದ ರಕ್ತಸ್ರಾವ ಆಗಿರುತ್ತದೆ, ಬಲಗಡೆ ಪಕಳಿಗೆ, ಭುಜಕ್ಕೆ, ಬಲಗಣ್ಣಿನ ಮೇಲೆ ರಕ್ತಗಾಯಗಳು ಆಗಿರುತ್ತವೆ ಮತ್ತು ಬಲಗಾಲ ಮೋಳಕಾಲ ಕೆಳಗೆ ತರಚಿದ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 170/2020, ಕಲಂ. 279, 337, 338 ಐಪಿಸಿ :-

ದಿನಾಂಕ 09-12-2020 ರಂದು ಫಿರ್ಯಾದಿ ಖಲೀಲಮಿಯ್ಯಾ ತಂದೆ ಮಸ್ತಾನಸಾಬ ತಲಾಬವಾಲೆ, ವಯ: 65  ವರ್ಷ, ಜಾತಿ: ಮುಸ್ಲಿಂ, ಸಾ: ತಲಾಬಗಲ್ಲಿ ಚಿಟಗುಪ್ಪಾ ರವರ ಮಗನಾದ ಮಹ್ಮದ ರಫೀಕ @ ಸದ್ದಾಮ ಇತನು ಅವನ ಗೆಳೆಯನಾದ ಆಮೇರ ತಂದೆ ಇಸಾಮೋದ್ದಿನ ಗುಲಬರ್ಗಾವಾಲೆ ವಯ: 22 ವರ್ಷ ಇಬ್ಬರೂ ಹೊಂಡಾ ಶೈನ ಮೊಟಾರ್ ಸೈಕಲ್ ನಂ. ಕೆಎ-39/ಆರ್-4559 ಮೇಲೆ ನಾನಾ ಹಜರತ ದರ್ಗಾ ಕಡೆಯಿಂದ ಚಿಟಗುಪ್ಪಾ ಕಡೆಗೆ ಬರುವಾಗ ಆಮೇರ ಇತನು ಸದರಿ ಮೋಟರ ಸೈಕಲನ್ನು ಹುಮನಾಬಾದ ಚಿಟಗುಪ್ಪಾ ರೋಡ ಮೇಲೆ ಚಿಟಗುಪ್ಪಾದ ಪ್ರೀಯದರ್ಶಿನಿ ಕಾಲೋನಿಯ ತಿರುವಿನಲ್ಲಿ ಎದುರಿನಿಂದ ಬಂದ ಡಿ.ಸಿ.ಎಮ್ ಟೆಂಪೊ ನಂ. ಎಂ.ಹೆಚ್-24/ಜೆ-7788 ನೇದರ ಚಾಲಕನಾದ ಆರೋಇ ನಾಗನಾಥ ತಂದೆ ಬಾಬುರಾವ ವಾಡೇಕರ ಸಾ: ಚಿಟ್ಟಾ (ಕೆ), ತಾ: ಸವಕಲ್ಯಾಣ ಈತನು ತನ್ನ ವಾಹನವನ್ನು ಅತಿವೇಗ ಹಾಗು ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಆಮೇರನ ಮೋಟರ ಸೈಕಲಗೆ  ಡಿಕ್ಕಿ ಮಾಡಿ ಅಪಘಾತ ಪಡಿಸಿದ್ದು, ಸದರಿ ಅಪಘಾತದಿಂದ .ರಫೀಕ @ ಸದ್ದಾಮನಿಗೆ ಬಲಹುಬ್ಬಿಗೆ, ಮೂಗಿಗೆ ರಕ್ತಗಾಯ ಹಾಗು ತಲೆ ಗುಪ್ತಗಾಯವಾಗಿದ್ದು, ಆಮೇರನಿಗೆ ಬಲಮೋಳಕೈಗೆ ಗುಪ್ತಗಾಯ ಹಾಗು ಬಲಗಾಲ ಮೋಳಕಾಲ ಕೆಳಗೆ ಮೂಳೆ ಮುರಿದು ಭಾರಿ ಗುಪ್ತಗಾಯ ಹಾಗು ತರಚಿದ ರಕ್ತಗಾಯ ಹಾಗು ಬಲಗಾಲ ಪಾದ ಚಿದಿಯಾಗಿ ಭಾರಿ ರಕ್ತಗಾಯವಾಗಿದೆ. ನಂತರ ಅವರನ್ನು ಅಜಮತಪಾಶಾ ಗುಲಬರ್ಗಾವಾಲೆ ಹಾಗು ಇತರರು ಚಿಕಿತ್ಸೆಗಾಗಿ ಚಿಟಗುಪ್ಪಾ ಸರಕಾರಿ ಆಸ್ಪತ್ರೆಗೆ ತಂದಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 114/2020, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 09-12-2020 ರಂದು ಉಜಳಂಬ ಗ್ರಾಮದ ಶಿವಾಜಿ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಾಕಾ ಎಂಬ ನಸೀಬಿನ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆಂದು ಕು: ಜೈಶ್ರೀ ಪಿ.ಎಸ್. ಮಂಠಾಳ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ, ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಉಜಳಂಬ ಗ್ರಾಮಕ್ಕೆ ಹೋಗಿ ರೋಡಿನ ಪಕ್ಕದಲ್ಲಿರುವ ಮನೆಗಳ ಮರೆಯಾಗಿ ನಿಂತು ನೋಡಲು ಅಲ್ಲಿ ಉಜಳಂಬ ಗ್ರಾಮದ ಶಿವಾಜಿ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಪ್ರಲ್ಹಾದ ತಂದೆ ಬಳಿರಾಮ ಜೋಗೆ ವಯ: 50 ವರ್ಷ, ಜಾತಿ: ಕಬ್ಬಲಿಗ, ಸಾ: ಜೋಗೆವಾಡಿ ಗ್ರಾಮ ಇತನು ಮಟಕಾ ಎಂಬ ಜೂಜಾಟದ ನಂಬರ ಬರೆಯಿಸಿರಿ 01/- ರೂಪಾಯಿಗೆ 80/- ರೂಪಾಯಿ ಪಡೆಯಿರಿ ಅಂತಾ ಚಿರಾಡುತ್ತಾ ಸಾರ್ವಜನಿಕರಿಂದ ಹಣ ಪಡೆದು ನಂಬರ ಬರೆದುಕೊಳ್ಳುತ್ತಿದ್ದಾಗ ಪೊಲೀಸ್ ಸಿಬ್ಬಂದಿ ಕೂಡಿ ಪಂಚರ ಸಮಕ್ಷಮದಲ್ಲಿ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಅವನಿಗೆ ಹಿಡಿದುಕೊಂಡಾಗ ಹಣ ಕೊಟ್ಟು ಮಟಕಾ ನಂಬರ್ ಬರೆಯಿಸುತ್ತಿದ್ದ ಸಾರ್ವಜನಿಕರು ಓಡಿ ಹೋಗಿರುತ್ತಾರೆ, ನಂತರ ಸದರಿ ಆರೋಪಿಗೆ ವಿಚಾರಿಸಲು ನಾನು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಎಂಬ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದೆನೆ ಅಂತಾ ಹೇಳಿದ್ದು, ನಂತರ ಪಂಚರ ಸಮಕ್ಷಮದಲ್ಲಿ ಅವನ ಅಂಗ ಜಡ್ತಿ ಮಾಡಿದಾಗ ಅವನ ಹತ್ತಿರ 1) ನಗದು ಹಣ 5780/- ರೂ., 2) 2 ಮಟಕಾ ಚೀಟಿಗಳು ಮತ್ತು 3) ಒಂದು ಬಾಲ್ ಪೆನ್ ಸಿಕ್ಕಿದ್ದು ಅವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 163/2020, ಕಲಂ. 408, 420 ಐಪಿಸಿ :-

ದಿನಾಂಕ 09-12-2020 ರಂದು ಫಿರ್ಯಾದಿ ಕೆ.ರವಿಂದ್ರ ಬಿನ್ ಮಾಣಿಕಯ್ಯಾ ವಯ: 30 ವರ್ಷ, ಉ: ಬ್ಯಾಂಕ ಮ್ಯಾನೆಜರ್ ಪಿನ್ ಸರ್ವರ ಪ್ರವೇಟ್ ಲಿಮಿಟೆಡ್ 1-73 ಪುಲಕುರ್ಥಿ ಮೇದಕ (ತೆಲಂಗಾಣ), ಸದ್ಯ ಹುಮನಾಬಾದ ರವರ ಸಂಸ್ಥೆಯು ಕರ್ನಾಟಕ ರಾಜ್ಯದಾಂತ್ಯ ಕೆಲಸ ಮಾಡುತ್ತಿದ್ದು, ಹೀಗೆ ಸುಮಾರು 6 ವರ್ಷದಿಂದ ಹುಮನಾಬಾದನ ಸಿದ್ದಯ್ಯಪ್ಪ ಬಿಲಿಡಿಂಗ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಸಂಸ್ಥೆಯಿಂದ ಮಹಿಳಾ ಗುಂಪುಗಳಿಗೆ ಕಡಿಮೆ ಬಡ್ಡಿದರದಲ್ಲಿ 12,000/- ರಿಂದ 42,000/- ರವರಗೆ ಸಾಲ ಕೊಡುವ ವ್ಯವಸ್ಥೆ ಇದ್ದು, ಅದರಂತೆ ಹುಮನಾಬಾದನಲ್ಲಿರುವ ಶಾಖೆಯಿಂದ ಹುಮನಾಬಾದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬರುವ ಮಹಿಳಾ ಗುಂಪುಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಕೊಟ್ಟಿದ್ದು ಕೊಟ್ಟಿರುವ ಸಾಲದ ವಸೂಲಾತಿಗಾಗಿ ಫೈನಾನ್ಸನಲ್ಲಿ ಕೆಲಸ ಮಾಡಲು ಸಂಘ ಮೀತ್ರನಾದ ರಮೇಶ ತಂದೆ ಪಂಡಾರಿ ಸಾ: ಚಿಂತಾಕಿ ಬೀದರ ರವರನ್ನು ನೇಮಕ ಮಾಡಿಕೊಡಿದ್ದು, ರಮೇಶ ರವರು ಫೀಲ್ಡಗೆ ಹೋಗಿ ಸಾಲ ಪಡೆದುಕೊಂಡ ಮಹಿಳಾ ಸದಸ್ಯರಿಂದ ಅಸಲು ಮತ್ತು ಬಡ್ಡಿಯನ್ನು ವಸೂಲಾತಿ ಮಾಡಿಕೊಂಡು ಬಂದು ಫಿರ್ಯಾದಿಯವರ ಬಳಿಕೊಟ್ಟು ಫೈನಾನ್ಸಿಗೆ ಸಂಬಂದಿಸಿಂದ ಬ್ಯಾಂಕ ಖಾತೆಗೆ ಜಮಾ ಮಾಡುತ್ತಿದ್ದರು, ಹೀಗಿರುವಾಗ ದಿನಾಂಕ 27-05-2020 ರಿಂದ 01-10-2020 ಸಂಘದ ಮರುಪಾವತಿ ಸರಿಯಾಗಿ ಬ್ಯ್ರಾಂಚ್ ಮ್ಯಾನೆಜರ್ ಕೆ. ರವೀಂದ್ರ ಅವರಿಗೆ ಒಪ್ಪಿಸಿದ ಕಾರಣ ಅನುಮಾನಗೊಂಡು ರಮೇಶ ತಂದೆ ಪಂಡಾರಿ ಸರಿಯಾಗಿ ಕೆಲಸ ಮಾಡದೆ ದಿನಾಂಕ 03-10-2020 ರಂದು ಶಾಖೆಯಿಂದ ಮನೆಗೆ ಹೊಗಿರುತ್ತಾನೆ, ನಾವು ಅನುಮಾನಗೊಂಡು ಸದಸ್ಯರ ಮರು ಪಾವತಿ ಸಂಘದ ಪಾಸ ಬುಕ್ ಖಾತೆ ಪುಸ್ತಕ ಪರಿಶೀಲಿಸಿದಾಗ ರಮೇಶ ಇತನು ಮರು ಪಾವತಿ ಹಣ ಸರಿಯಾಗಿ ಫೈನಾನ್ಸಿಗೆ ಜಮಾ ಮಾಡದೆ ಇರುವುದು ಕಂಡು ಬಂದಿದ್ದು, ದಿನಾಂಕ 27-05-2020 ರಿಂದ 01-10-2020 ರವರೆಗಿನ ಮರು ಪಾವತಿ ಮಹಿಳಾ ಸಂಘದ ಸದಸ್ಯರುಗಳಿಂದ ಸಂಗ್ರಹ ಮಾಡಿಕೊಂಡು ಬಂದ ಹಣವನ್ನು ಫೈನಾನ್ಸಿಗೆ ಸರಿಯಾಗಿ ಜಮಾ ಮಾಡದೆ ತನ್ನ ಸ್ವಂತ ಬಳಕೆಗೆ ಉಪಯೋಗಿಸಿರುತ್ತಾನೆಂದು ಕಂಡುಬಂದಿದ್ದರಿಂದ ಕೂಡಲೆ ಅಡಿಟರ್ ಅವರಿಂದ ಆಡಿಟ್ ಮಾಡಿಸಿದಾಗ ಸಂಗ್ರಹವಾದ ಸಾಲ ವಸೂಲಾತಿ ಹಣ ಬ್ಯಾಂಕಗೆ ಜಮಾವಣೆಯಾಗದೆ ಇರುವುದು ಕಂಡು ಬಂದಿದ್ದು. ಕೂಡಲೆ ತಮ್ಮ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿ ನಂತರ ರಮೇಶ ಇತನಿಗೆ ವಿಚಾರಣೆ ಮಾಡಿದಾಗ ಅವನು ಹಣ ಸ್ವಂತ ಕೆಲಸಕ್ಕೆ ಬಳಸಿಕೊಂಡಿರುತ್ತಾನೆ, ಫೈನಾನ್ಸಿಗೆ ಹಣ ಕಟ್ಟುವುದಾಗಿ ತಿಳಿಸಿದ್ದು ಇಲ್ಲಿಯವರೆಗೂ ಸಂಸ್ಥೆಗೆ ಹಣ ಜಮಾವಣೆ ಮಾಡಿರುವುದಿಲ್ಲಾ, ರಮೇಶ ತಂದೆ ಪಂಡಾರಿ ಇತನು 87 ಸದಸ್ಯರಿಂದ ಸಂಗ್ರಹಿಸಿದ ಒಟ್ಟು 4,23,061/- ರೂ  ಹಣವನ್ನು ಫೈನಾನ್ಸಿಗೆ ಜಮಾ ಮಾಡದೆ ಮೊಸ ಮಾಡಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 157/2020, ಕಲಂ. 379 ಐಪಿಸಿ :-

ದಿನಾಂಕ 07, 08-12-2020 ರ ರಾತ್ರಿಯಲ್ಲಿ ಯಾರೋ ಕಳ್ಳರು ಫಿರ್ಯಾದಿ ಸಂಜೀವಕುಮಾರ ತಂದೆ ಚಂದ್ರಪ್ಪಾ ಮಂಠಾಳೆ ಸಾ: ಮೇಥಿಮೇಳಕುಂದಾ ವಾಡಿ ರವರ ಹೊಲದಲ್ಲಿರುವ ಬೊರವೆಲಗೆ ಅಳವಡಿಸಿದ 60 ಫೀಟ ಕೆಬಲ ವೈರ್ .ಕಿ 7000/- ರೂ. ಬೆಲೆ ಬಾಳುವುದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರು ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 09-12-2020 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.         

 

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 158/2020, ಕಲಂ. ಮಹಿಳೆ ಕಾಣೆ :-

ದಿನಾಂಕ 09-12-2020 ರಂದು ಫಿರ್ಯಾದಿ ಗಣಪತರಾವ ತಂದೆ ರಾಮಚಂದರರಾವ ಸಾ: ಕಳಸದಾಳ, ತಾ: ಭಾಲ್ಕಿ ರವರ ಹೆಂಡತಿ ಮೀನಾ ಗಂಡ ಗಣಪತರಾವ ಮಾಟೆ ಸಾ: ಕಳಸದಾಳ ರವರು ಮ್ಮ ಹೊಲಕ್ಕೆ ಹೋಗಿ ಹೊಲದಲ್ಲಿ ಬಿಳಿ ಜೊಳದಲ್ಲಿ ಸದೆ ಕಳೆದು ಬರುತ್ತೇನೆ ಅಂತ ಹೇಳಿ ಹೊಲಕ್ಕೆ ಹೋದವಳು ಸಾಯಂಕಾಲವಾದರು ಹೆಂಡತಿ ಮೀನಾ ಇವಳು ಮನೆಗೆ ಮರಳಿ ಬಂದಿರುವುದಿಲ್ಲ, ನಂತರ ಫಿರ್ಯಾದಿಯು ನಮ್ಮೂರಲ್ಲಿ ಹಾಗೂ ಗ್ರಾಮದ ಸುತ್ತಮುತ್ತಲು ಹಾಗೂ ಹೊಲದ ಕಡೆಗೆ ಹುಡಕಾಡಲು ತನ್ನ ಹೆಂಡತಿಯ ಬಗ್ಗೆ ಯಾವುದೆ ಮಾಹಿತಿ ಸಿಕ್ಕಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಚಿಂತಾಕಿ ಪೊಲೀಸ್ ಠಾಣೆ ಅಪರಾಧ ಸಂ. 54/2020, ಕಲಂ. 20(ಬಿ) (2) ಎನ್.ಡಿ.ಪಿ.ಎಸ್ ಕಾಯ್ದೆ :-

ದಿನಾಂಕ 09-12-2020 ರಂದು ನಾಗನಪಲ್ಲಿ ಗ್ರಾಮದ ಮಲ್ಲಿನಾಥ ಆಶ್ರಮಕ್ಕೆ ಹೋಗುವ ಕ್ರಾಸ ಹತ್ತಿರ 3 ಜನ ವ್ಯಕ್ತಿಗಳು ತಮ್ಮ ಹತ್ತಿರ 3 ಬಿಳಿ ಪ್ಲಾಸ್ಟಿಕ ಚೀಲದಲ್ಲಿ ಅಕ್ರಮವಾಗಿ ಗಾಂಜಾ ಇಟ್ಟುಕೊಂಡು ವಾಹನದ ದಾರಿ ಕಾಯುತ್ತಾ ನಿಂತಿರುತ್ತಾರೆಂದು ಡಾ: ದೇವರಾಜ(ಬಿ) ಪೊಲೀಸ ಉಪಾಧೀಕ್ಷಕರು ಭಾಲ್ಕಿ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಡಿಎಸ್ಪಿ ರವರು ಇಬ್ಬರು ಪಂಚರನ್ನು ಹಾಗೂ ಪಂತ್ರಾಂಕಿತ ಅಧಿಕಾರಿ ಹಾಗೂ ತಾಲೂಕಾ ದಂಡಾಧೀಕಾರಿ ಮತ್ತು ತೂಕ ಮಾಡುವ ವ್ಯಕ್ತಿ ಇವರ ಜೋತೆ ತೂಕ ಮಾಡುವ ಎಲೆಕ್ಟ್ರಾನಿಕ ಯಂತ್ರ ಮತ್ತು ಫೋಟೋ ಗ್ರಾಫರ್ ಇವರೆಲ್ಲರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಕಂಗಟಿ ಚಿಂತಾಕಿ ರೋಡಿನ ಹತ್ತಿರ ಹೋಗಿ ಒಂದು ಮರದ ಹಿಂದೆ ಮರೆಯಾಗಿ ನಿಂತು ನೋಡಲು ಮಲ್ಲಿನಾಥ ಆಶ್ರಮ ಕ್ರಾಸ ಹತ್ತಿರ ಒಂದು ಸಣ್ಣ ಬ್ರೀಡ್ಜ ಇದ್ದು ಅಲ್ಲಿ 3 ಜನ ವ್ಯಕ್ತಿಗಳು ಹಾಗೂ 3 ಬಿಳಿ ಚೀಲ ಮತ್ತು ಒಂದು ಮೊಟಾರ ಸೈಕಲ್ ನಿಂತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಆರೋಪಿತರಾದ 1) ಪರಶುರಾಮ ತಂದೆ ಜಮಲಾ ಜಾಧವ ವಯ: 42 ವರ್ಷ, ಜಾತಿ : ಎಸ್.ಸಿ(ಲಮಾಣಿ), ಸಾ: ಘೂಳಾ ತಾಂಡಾ ಜೂಕಲ್ ಮಂಡಲ್ ಟಿಎಸ್, 2) ಅಶೊಕ ತಂದೆ ಹೀರಾಮಣ್ಣ ರಾಠೋಡ ವಯ : 34 ವರ್ಷ, ಜಾತಿ: ಲಮಾಣಿ, ಸಾ: ದೆಗಲವಾಡಿ ತಾಂಡಾ ಹಾಗೂ 3) ನಾಮದೇವ ತಂದೆ ಬನ್ಸಿ ಜಾಧವ ವಯ: 28 ವರ್ಷ, ಜಾತಿ: ಲಮಾಣಿ, ಸಾ: ದೆಗಲವಾಡಿ ತಾಂಡಾ ಮಂಡಲ್ ಕಂಗಟಿ ಟಿಎಸ್ ಇವರೆಲ್ಲರ ಮೇಲೆ ದಾಳಿ ಅವರೆಲ್ಲರ ಅಂಗ ಝಡ್ತಿ ಮಾಡಿದ್ದು ಯಾವುದೆ ವಸ್ತು ಸಿಕ್ಕಿರುವುದಿಲ್ಲಾ, ನಂತರ ನಿಮ್ಮ  ಹತ್ತಿರ ಇರುವ 3 ಪ್ಲಾಸ್ಟೀಕ್ ಬಿಳಿ ಚೀಲದಲ್ಲಿ ಏನಿದೆ ಅಂತಾ ವಿಚಾರಿಸಿಸಲು ಅವರು ಚೀಲದಲ್ಲ್ಲಿ ಗಾಂಜಾ ಇರುತ್ತದೆ ಅಂತಾ ತಿಳಿಸಿರುತ್ತಾರೆ, ನಂತರ ಪಂಚರ ಸಮಕ್ಷಮ ಪತ್ರಂಕಿತ ಅಧಿಕಾರಿ ಮುಂದೆ ಪರಿಶಿಲಿಸಿ ನೋಡಲು ಖುಲ್ಲಾ ಬಿಚ್ಚಿ ಹಾಕಿದ ಗಾಂಜಾ ಇದ್ದು ತೂಕ ಮಾಡಿ ನೋಡಲು ಒಟ್ಟು 35 ಕೆಜಿ .ಕಿ 4,20,000/- ರೂ. ಗಾಂಜಾ ಇರುತ್ತದೆ ಹಾಗೂ ಒಂದು ಮೊಟಾರ ಸೈಕಲ್ ನಂ. ಟಿಎಸ್-08/ಜಿಟಿ-3861 .ಕಿ 60,000/- ರೂ. ಇರುತ್ತದೆ, ನಂತರ ಸದರಿ ಆರೋಪಿತರಿಗೆ ಗಾಂಜಾ ಎಲ್ಲಿಂದ ತರುತ್ತಿದ್ದಿರಿ ಅಂತಾ ವಿಚಾರಿಸಲು ಅವರು ನಾವು 3 ಜನರು ತೆಲಂಗಣಾ ರಾಜ್ಯದ ನಾರಾಯಣಖೇಡದಲ್ಲಿ ಒಬ್ಬ ವ್ಯಕ್ತಿಯು ಪರಿಚವಾಗಿದ್ದು ಅವನಿಂದ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಿಕೊಂಡು ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುವ ಗೊಸ್ಕರ ಮಹಾರಾಷ್ಟ್ರ ರಾಜ್ಯಕ್ಕೆ ತೆಗೆದುಕೊಂಡು ಹೋಗಲು ವಾಹನದ ದಾರಿ ಕಾಯುತ್ತಾ ನಿಂತಿರುತ್ತೇವೆ ಅಂತ ತಿಳಿಸಿದ್ದು, ನಂತರ ಅವರಿಂದ ಸದರಿ ಗಾಂಜಾ ಹಾಗೂ ಮೋಟಾರ್ ಸೈಕಲ ಜಪ್ತಿ ಮಾಡಕೊಂಡು ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.