Police Bhavan Kalaburagi

Police Bhavan Kalaburagi

Thursday, December 12, 2019

KALABURAGI DISTRICT REPORTED CRIMES


ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 11/12/2019 ರಂದು ಬೆಳಿಗ್ಗೆ ಶ್ರೀಮತಿ ಇಂದ್ರಾಬಾಯಿ ಗಂಡ ಮಲ್ಲಿಕಾರ್ಜುನ ಜಮಾದಾರ ಸಾ: ಸೊನ್ನ ರವರಿಗೆ  ಒಂದು ಫೋನ್ ಕರೆ ಬಂದು ಫೋನ್ ಮಾಡಿದವರು ಶ್ರೀ ಬಸವಂತ ತಂದೆ ಲಕ್ಷ್ಮಣ ತಳವಾರ ಇವರು ಹೇಳಿದ್ದೇನೆಂದರೆ ಅಫಜಲಪೂರ-ವಿಜಯಪೂರ ರೋಡ ಶಿವಲಿಂಗ ಜಮಾದಾರ ರವರ ಹೊಲದ ಹತ್ತಿರ ನಿನ್ನ ಗಂಡ ಮಲ್ಲಿಕಾರ್ಜುನ ಮತ್ತು ನಾನು ಇಬ್ಬರು ಕೂಡಿಕೊಂಡು ವಾಕಿಂಗ್ ಗೆ ಹೋಗುತ್ತಿದ್ದಾಗ ನಾನು ಮೂತ್ರ ವಿಸರ್ಜನೆಗೆಂದು ರಸ್ತೆಯ ಬದಿಗೆ ಹೋದಾಗ ಹಿಂದಿನಿಂದ ಒಂದು ಕಾರು ಅಂದರ ಸ್ವಿಪ್ಟ ಡಿಜಾಯರ ದೇವಣಗಾಂವ ಕಡೆಯಿಂದ ಅತೀವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಅಡ್ಡಾ ದಿಡ್ಡಿಯಾಗಿ ಎಡಗಡೆ ಹೋಗುತ್ತಿದ್ದ ನಿನ್ನ ಗಂಡನಿಗೆ ವೇಗವಾಗಿ ಗುದ್ದಿತು ಆಗ ನಿನ್ನ ಗಂಡನ ಕಾಲಿನ ಮೇಲೆ, ಟೊಂಕದ ಮೇಲೆ ಹಾಯ್ದು ಹೋಗುವಾಗ ನಾನು ನೋಡಲಾಗಿ ಬಿಳಿ ಬಣ್ಣದ ಸ್ವೀಪ್ಟ ಡಿಜಾಯರ ಕಾರ ಹಿಂದಿನಿಂದ ಗುದ್ದಿದೆ ಕಾರ ನಂಬರ ಕೆಎ-28-ಪಿ-0850 ಇದ್ದು ಅಪಘಾತ ಪಡೆಸಿ ಅಫಜಲಪೂರ ಕಡೆ ಕಾರ ಸಮೇತ ಓಡಿ ಹೋಗಿತ್ತಾನೆಂದು ಆಗ ಪ್ರತ್ಯಕ್ಷ ನೋಡಿದ ಬಸವಂತ ತಳವಾರ ಹಾಗೂ ರಸ್ತೆಯ ಮೇಲೆ ಹೊರಟ ಇತರರು ನೋಡಿ ನನಗೆ ಹೇಳಿದ್ದರಿಂದ ನಾನು ನನ್ನ ಮಕ್ಕಳೊಂದಿಗೆ, ಗ್ರಾಮಸ್ಥರೊಂದಿಗೆ ಸ್ಥಳಕ್ಕೆ ಬಂದು ನೋಡಲಾಗಿ ಬಲಗಾಲಿಗೆ, ಬಲಟೊಂಕಕ್ಕೆ ಮತ್ತು ತಲೆ, ಹಣೆಗೆ, ಮುಖಕ್ಕೆ ಮತ್ತು ಇತರೆ ಕಡೆ ಭಾರಿ ಪ್ರಮಾಣದ ಗಾಯವಾಗಿ ರಕ್ತ ಸ್ರಾವಗೊಂಡು ಮೃತಪಟ್ಟಿದ್ದು ಕಂಡು ಬಂತು ನಾನು ಬಂದು ನನ್ನ ಗಂಡನಿಗೆ ಅಪಘಾತ ಪಡೆಸಿದ ಕಾರ ಚಾಲಕ ರಹೀಮ ಬೇಗ ಸಾ: ಇಂದಿರಾ ನಗರ ಅಫಜಲಪೂರ ಇತನ ಮೇಲೆ ಕಾನೂನು ಕ್ರಮ ತಗೆದುಕೊಳ್ಳಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ವಾಡಿ ಠಾಣೆ : ಶ್ರೀಮತಿ ಜಗದೇವಿ ಗಂಡ ಚಂದ್ರಕಾಂತ ದೊಡ್ಡಮನಿ ಮು:ಕುನ್ನೂರ ರವರು ದಿನಾಂಕ 06/12/2019 ರಂದು ಮದ್ಯಾಹ್ನ 01-00 ಗಂಟೆ ಸುಮಾರು ನಾನು ಮನೆಯಲ್ಲಿದ್ದಾಗ ನಮ್ಮ ಓಣಿಯ ರಾಜು ತಂದೆ ಭೀಮರಾಯ ದೊಡ್ಡಮನಿ ಇತನು ಮದ್ಯಪಾನ ಮಾಡಿ ನನ್ನ ಮನೆಗೆ ಬಂದು ನಿನ್ನ ಗಂಡ ಎಲ್ಲಿದ್ದಾನೆ ಅಂತಾ ಕೇಳಿದನು ಆಗ ನಾನು ಅವರು ಕೆಲಸಕ್ಕೆ ಹೋಗಿದ್ದಾರೆ ಅಂತಾ ಹೇಳಿದಾಗ ರಾಜು ಇತನು ನನ್ನೊಂದಿಗೆ ವಿನಾಕಾರಣ ತಕರಾರು ಮಾಡಿಕೊಂಡು ಹೋಗಿದ್ದು ಇರುತ್ತದೆ. ನಂತರ ಸಾಯಂಕಾಲ ನನ್ನ ಗಂಡ ಮನೆಗೆ ಬಂದಾಗ ಈ ವಿಷಯ ನನ್ನ ಗಂಡನಿಗೆ ತಿಳಿಸಿರುತ್ತೆನೆ. ನಿನ್ನೆ ದಿನಾಂಕ 10/12/2019 ರಂದು ಮದ್ಯಾಹ್ನ 02-00 ಗಂಟೆ ಸುಮಾರು ಈ ಬಗ್ಗೆ ರಾಜು ಮತ್ತು ಆತನ ಮನೆಯವರಿಗೆ ಕರೆಯಿಸಿ ಆತನಿಗೆ ಬುದ್ದಿವಾದ ಹೇಳಿ ಕಳುಹಿಸಿದರು. ನಂತರ ರಾತ್ರಿ 10-00 ಗಂಟೆ ಸುಮಾರು ನಾನು, ನನ್ನ ಗಂಡ ಮನೆಯಲ್ಲಿ ಊಟ ಮಾಡಿ ಮಲಗಿಕೊಂಡಾಗ ರಾತ್ರಿ 11-00 ಗಂಟೆ ಸುಮಾರು ನಮ್ಮ ಮನೆಯವರಿಗೆ ಯಾರೋ ಕೂಗಿದ ಹಾಗೇ ಶಬ್ದ ಕೇಳಿ ನಾನು ಮತ್ತು ನನ್ನ ಗಂಡ ಮನೆಯ ಹೊರಗಡೆ ಬಂದು ನೋಡಲಾಗಿ ನಮ್ಮ ಗ್ರಾಮದ ರಾಜು ತಂದೆ ಭೀಮರಾಯ ದೊಡ್ಡಮನಿ, ಅಶೋಕ ತಂದೆ ಶ್ಯಾಮರಾಯ ದೊಡ್ಡಮನಿ, ಸಚಿನ ತಂದೆ ಶ್ಯಾಮರಾಯ ದೊಡ್ಡಮನಿ, ಅಂಬ್ರೇಷ ತಂದೆ ಭೀಮರಾಯ ದೊಡ್ಡಮನಿ, ಅನುಸುಬಾಯಿ ಗಂಡ ಭೀಮರಾಯ ದೊಡ್ಡಮನಿ, ರಾಜಶ್ರೀ ಗಂಡ ರಾಜಪ್ಪ ಮುಗಟಾ,ರಾಜು ಇವರ ಸಂಬಂಧಿಕರಾದ ಗೌತಮ ತಂದೆ ನವರಂಗ, ಸದೇಶ ತಂದೆ ನವರಂಗ ಮು:ಇಬ್ಬರೂ ತಾರಫೇಲ್ ಕಲಬುರಗಿ ಹಾಗೂ ಇತರ 7-8 ಜನರಿದ್ದು ಅವರಲ್ಲಿ ರಾಜು ಇತನು ನನಗೆ ‘’ಬೋಸಡಿ ನಿನ್ನ ಸೊಕ್ಕು ಹೆಚ್ಚಾಗಿದೆ ಅಂತಾ ನನ್ನ ಬಲಗೈ ಹಿಡಿದು ಜಗ್ಗಾಡಿದ್ದು ಆಗ ನನ್ನ ಗಂಡ ಅವಳಿಗೆ ಏಕೆ ಜಗ್ಗಾಡುತ್ತಿ ಅಂತಾ ಕೇಳಿದಾಗ ನನ್ನ ಗಂಡನಿಗೆ ಅಶೋಕ ಮತ್ತು ಸಚಿನ ಕೈಯಿಂದ ಹೊಡೆ ಬಡೆ ಮಾಡ ಹತ್ತಿದರು. ಆಗ ಜಗಳದ ಬಾಯಿ ಕೇಳಿ ನಮ್ಮ ಚಿಕ್ಕಪ್ಪ ಬಸವರಾಜ ತಂದೆ ಲಾಲಪ್ಪ, ಮಸ್ತಾನ ತಂದೆ ಲಾಲಪ್ಪ, ಅತ್ತೆ ರತ್ನಾಬಾಯಿ ಗಂಡ ಲಾಲಪ್ಪ,ಸರಸ್ವತಿ ಗಂಡ ಭೀಮರಾಯ, ಬಸವರಾಜ ತಂದೆ  ಮರೆಪ್ಪ ರವರು ಬಂದು ವಿನಾಕಾರಣ ಯಾಕೇ ಹೊಡೆಯುತ್ತಿರಿ ಇವತ್ತು ಮದ್ಯಾಹ್ನ ಪಂಚಾಯತಿ ಮಾಡಿ ಬಗೆ ಹರಿಸಿರುತ್ತೆವೆ ಅಂತಾ ಹೇಳಿದಾಗ ಬಸವರಾಜ ತಂದೆ ಲಾಲಪ್ಪ ಇತನಿಗೆ ಅಶೋಕ ಇತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಹಣೆಗೆ ಹೊಡೆದು ರಕ್ತಗಾಯಪಡಿಸಿದನು, ಸಚಿನ  ಮತ್ತು ಅಂಬ್ರೇಷ ಇವರು ಮಸ್ತಾನ ಹಾಗೂ ಬಸವರಾಜ  ಇವರಿಗೆ ಕೈಯಿಂದ ಮೈ ಮೇಲೆ ಹೊಡೆ ಬಡೆ ಮಾಡ ಹತ್ತಿದ್ದು ಅಲ್ಲದೇ ಗೌತಮ ಇತನು ಅಲ್ಲೇ ಬಿದ್ದ ಕಲ್ಲನ್ನು ತೆಗೆದುಕೊಂಡು ಮಸ್ತಾನ ಇತನ ಬಲ ಹೊಟ್ಟೆಗೆ ಹೊಡೆದು ರಕ್ತಗಾಯಪಡಿಸಿರುತ್ತಾನೆ. ಸಂದೇಶ ಇತನು ಬಸವರಾಜ ತಂದೆ ಮರೆಪ್ಪ ಇತನಿಗೆ ಕೈಯಿಂದ ಮೈ ಮೇಲೆ ಹೊಡೆ ಬಡೆ ಮಾಡಿದ್ದು ಅಲ್ಲದೇ ಅನುಸುಬಾಯಿ, ರಾಜಶ್ರೀ ಇವರು ಸರಸ್ವತಿ ಇವಳಿಗೆ ಕೈಯಿಂದ ಮೈ ಮೇಲೆ ಹೊಡೆ ಬಡೆ ಮಾಡಿ ಹಾಟ್ಯಾನ್ ಮಕ್ಕಳಿಗೆ ಹೊಡೆಯರಿ ಬೀಡಬ್ಯಾಡರಿ ಸೊಕ್ಕು ಹೆಚ್ಚಾಗಿದೆ ಅಂತಾ ಬೈಯುತ್ತಿದ್ದು ಆಗ ಶರಣಬಸಪ್ಪ ತಂದೆ ಲಾಲಪ್ಪ ಮತ್ತು ಈಶ್ವರಾಜ ತಂದೆ ಮರೆಪ್ಪ ರವರು ಬಂದು ಜಗಳ ಬಿಡಿಸಿರುತ್ತಾರೆ. ಆಗ ಉಳಿದವರು ಸೂಳೇ ಮಕ್ಕಳೆ ನಿಮ್ಮ ಸೊಕ್ಕು ಹೆಚ್ಚಾಗಿದೆ ರಾಜು ಮತ್ತು ಅಶೋಕ ಇವರ ತಂಟೆಗೆ ಹೋದರೆ ನಿಮಗೆ ಖಲಾಸ  ಮಾಡುತ್ತೆವೆ ಅಂತಾ ಜೀವದ ಬೆದರಿಕೆ ಹಾಕುತ್ತ ಹೊರಟು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BIDAR DISTRICT DAILY CRIME UPDATE 12-12-2019


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 12-12-2019

ಹುಮನಾಬಾದ ಪೊಲೀಸ್ ಠಾಣೆ ಯು.ಡಿ.ಆರ್ ನಂ. 30/2019, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 09-12-2019 ರಂದು ರಾತ್ರಿ ವೇಳೆಯಲ್ಲಿ ಪಿüರ್ಯಾದಿ ಸಂತೋಷ ತಂದೆ ಚಂದ್ರಶೇಖರ ಪಾಟೀಲ, : 22 ರ್ಷ, ಜಾತಿ: ಬ್ರಾಹ್ಮಣ, ಸಾ: ಗೋದಾವರಿ ಲಾಡ್ಜ ಹಿಂದುಗಡೆ ವಿಜಯಪುರ ರವರ ತಂದೆಯಾದ ಚಂದ್ರಶೇಖರ ತಂದೆ ದೇವಿಂದ್ರಪ್ಪಾ ಪಾಟೀಲ : 57 ರ್ಷ ರವರು ಹುಮನಾಬಾದ ಬಸ ನಿಲ್ದಾಣದಲ್ಲಿ ಲಗಿಕೊಂಡಾಗ ಚಳಿ ಹೆಚ್ಚಾಗಿಯೋ ಅಥವಾ ಯಾವುದೋ ಬೇನೆಯಿಂದ ಮ್ರತಪಟ್ಟಂತೆ ಕಂಡುಬರುತ್ತದೆ, ಅವರ ಸಾವಿನಲ್ಲಿ ಯಾರ ಮೇಲೆ ಯಾವುದೇ ತರಹದ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 11-12-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಖಟಕಚಿಂಚೋಳಿ ಪೊಲೀಸ್ ಠಾಣೆ ಅಪರಾಧ ಸಂ. 132/2019, ಕಲಂ. 201, 302 ಐಪಿಸಿ :-
ಫಿರ್ಯಾದಿ ಸುಭಾಷ ತಂದೆ ಕಾಶಪ್ಪಾ ವಗ್ಗೆ ವಯ: 32 ವರ್ಷ, ಜಾತಿ: ಕುರುಬ, ಸಾ: ಚಳಕಾಪೂರ ವಾಡಿ, ತಾ: ಭಾಲ್ಕಿ ರವರಿಗೆ ತಮ್ಮೂರ ಶಿವಾರದಲ್ಲಿ ಹೊಲ ಸರ್ವೆ ನಂ. 242 ನೇದ್ದರಲ್ಲಿ 2 ಎಕರೆ 05 ಗುಂಟೆ ಜಮೀನು ಫಿರ್ಯಾದಿಯ ಹೆಸರಿನಿಂದ ಇರುತ್ತದೆ, ಈ ವರ್ಷ ಹೊಲದಲ್ಲಿ ಸೋಯಾ ಬೇಳೆ ಮತ್ತು ತೊಗರೆ ಬೇಳೆ ಬಿತ್ತಿದ್ದು, ಅಂದಾಜು 2 ತಿಂಗಳ ಹಿಂದೆ ಸೋಯಾ ಬೆಳೆ ತೆಗೆದು ಹೊಟ್ಟನ್ನು ಹೊಲದ ದಕ್ಷಿಣ ದಿಕ್ಕಿಗೆ ಸರಕಾರಿ ಹಣದಿಯಲ್ಲಿ ಇಟ್ಟಿದ್ದು, ಹೀಗಿರುವಾಗ ದಿನಾಂಕ 10-12-2019 ರಂದು ಪ್ರತಿ ದಿನದಂತೆ ಫಿರ್ಯಾದಿಯು ತನ್ನ ಹೊಲಕ್ಕೆ ಬಂದು ಕೆಲಸ ಮಾಡಿ 1800 ಗಂಟೆ ಸುಮಾರಿಗೆ ಮನೆಗೆ ಹೊಗಿದ್ದು,  ನಂತರ ದಿನಾಂಕ 11-12-2019 ರಂದು 0800 ಗಂಟೆ ಸುಮಾರಿಗೆ ಫಿರ್ಯಾದಿಯು ತಮ್ಮ ಹೊಲದ ಕೃಷಿ ಹೊಂಡಾದ ಹತ್ತಿರ ಹೊಗಿ ನೊಡಲು ಸೋಯಾ ಬೆಳೆ ಹೊಟ್ಟನ್ನು ಸುಟ್ಟಿದಂತೆ ಕಂಡು ಬಂದಿದ್ದರಿಂದ ಅದರ ಹತ್ತಿರ ಹೊಗಿ ನೋಡಲು ಸೋಯಾ ಬೆಳೆಯ ಸುಟ್ಟಿದ ಹೊಟ್ಟಿನ ಬೂದಿಯಲ್ಲಿ ಒಂದು ಶವ ಸುಟ್ಟಂತೆ ಕಂಡು ಬಂದಿರುತ್ತದೆ, ಶವವು ಪೂರ್ತಿ ಸುಟ್ಟು ಕರಕಲ್ ಆಗಿದ್ದು ತಲೆಯ ಬುರಡೆ, ಎದೆಯ ಭಾಗ ಅರ್ಧಾ-ಮರ್ದಾ ಸುಟ್ಟಿದ್ದು ಶವ ಅಂಗಾತವಾಗಿ ಪೂರ್ವಕ್ಕೆ ತಲೆ, ಪಶ್ಚಿಮಕ್ಕೆ ಕಾಲು ಮಾಡಿ ಬಿದ್ದಿರುತ್ತೆ, ಈ ಶವವು ಗಂಡು ವ್ಯಕ್ತಿಯ ಶವ ಇದ್ದು ಅಂದಾಜು ವಯ 25 ರಿಂದ 35 ವರ್ಷ ಇದ್ದಂತೆ ಕಂಡು ಬರುತ್ತದೆ, ಮೃತ ವ್ಯಕ್ತಿಯ ಹೆಸರು ಮತ್ತು ವಿಳಾಸ ಗೊತ್ತಾಗಿರುವದಿಲ್ಲಾ, ಯಾರೊ ಅಪರಿಚಿತ ವ್ಯಕ್ತಿಗಳು ಯಾವದೊ ಒಂದು ಉದ್ದೇಶದಿಂದ ಮೃತನಿಗೆ ಬೇರೆ ಸ್ಥಳದಲ್ಲಿ ಕೊಲೆ ಮಾಡಿ ದಿನಾಂಕ 10-12-2019 ರಂದು 1800 ಗಂಟೆಯಿಂದ ದಿನಾಂಕ 11-12-2019 ರಂದು 0800 ಗಂಟೆಯ ಅವಧಿಯಲ್ಲಿ ಶವ ತಂದು ಸೋಯಾಬಿನ ಹೊಟ್ಟಿನಲ್ಲಿ ಹಾಕಿ ಸಾಕ್ಷಿ ಪುರಾವೆ ನಾಶ ಮಾಡುವ ಉದ್ದೇಶದಿಂದ ಶವ ಸುಟ್ಟು ಹಾಕಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಮೌಖಿಕ ಹೇಳಿಕೆ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.          

ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂ. 206/2019, ಕಲಂ. 380 ಐಪಿಸಿ :-
ದಿನಾಂಕ 10-12-2019 ರಂದು ಫಿರ್ಯಾದಿ ಅನೀಲ ತಂದೆ ಶರಣಪ್ಪಾ ಹೊಕ್ರಾಣೆ : 42 ರ್ಷ, ಜಾತಿ: ಲಿಂಗಾಯತ, ಸಾ: ಸಂತಪೂರ, ಸದ್ಯ: ಗುಂಪಾ ಚಿಟ್ಟಾ ಕ್ರಾಸ ತ್ತಿರ ಬೀದರ ರವರು ಎಂದಿನಂತೆ ಮುಂಜಾನೆ ತನ್ನ ಅಂಗಡಿ ತೆರೆದಿದ್ದು, ನಂತರ ಫಿರ್ಯಾದಿಯವರ ತಂದೆಯವರು  ದ್ಯಾಹ್ನ ಮಯದಲ್ಲಿ ಬಂದು ಫಿರ್ಯಾದಿಗೆ 1 ಲಕ್ಷ ರೂಪಾಯಿ ಕಿರಾಣ ಸಾಮಾನು ತರುವಗೊಸ್ಕರ ತಂದು ಕೊಟ್ಟಿದ್ದು ತ್ತು ಕಿರಾಣ ಅಂಗಡಿಯಲ್ಲಿ 3-4 ದಿವಸಗಳಿಂದ ಗಿರಾಕಿ ಆಗಿದ ಒಟ್ಟು 60,000/- ರೂಪಾಯಿಗಳು ಇದ್ದು, ಫಿರ್ಯಾದಿಯವರ ಹತ್ತಿರ ಇದ್ದು ಹೀಗೆ ಒಟ್ಟು ಹಣ 1,60,000/- ರೂ ಇದ್ದು, ಫಿರ್ಯಾದಿಯು ಸ್ವಲ್ಪ ಕಿರಾಣ ಸಾಮಾನುಗಳು ತಂದಿದ್ದು ಅವುಗಳನ್ನು ಹಚ್ಚಿಕೊಳ್ಳಲು 2250 ಗಂಟೆಯಾಗಿದ್ದು ಮಯದಲ್ಲಿ ಯಾರೋ 3 ಜನರು ನನಗೆ ಸಿಗರೇಟ ಬೇಕು ಅಂತ ಕೇಳುತ್ತಿದ್ದಾಗ ಸ್ವಲ್ಪ ತಾಳು ಅಂತ ಹೇಳಿ, ದೂರದಿಂದ ಪೊಲೀಸ ಜೀಪ್ ಬರುತ್ತಿರುವಾಗ ನೋಡಿ ಅಂಗಡಿಯನ್ನು ಮುಚ್ಚಲು ತಡವಾಗಿದ್ದರಿಂದ ಫಿರ್ಯಾದಿಯು ತನ್ನ ಅಂಗಡಿಯಲ್ಲಿ ಟೇಬಲ ಮೇಲೆ ಒಂದು ಕ್ಯಾರಿಬ್ಯಾಗದಲ್ಲಿಟ್ಟಣವನ್ನು ಅಂಗಡಿಯ ಟೇಬಲ ಮೇಲೆ ಇಟ್ಟಿದ್ದು ಅವಸರದಲ್ಲಿ ಅಂಗಡಿಯ ಶೆಟರನ್ನು ಕೀಲಿ ಹಾಕದೇ ಕೆಳಗೆ ಳೆದು ಸ್ವಲ್ಪ ಮುಂದೆ ಬಂದು ನಿಂತಿದ್ದು ಪೊಲೀಸ ಜೀಪ ಬಂದು ಮುಂದೆ ಹೋ ನಂತರ ತನ್ನ ಅಂಗಡಿ ಕೀಲಿ ಹಾಕಲು ಹೋಗುವಷ್ಟರಲ್ಲಿ ಮೋದಲು ಕಿರಾಣ ಅಂಗಡಿಯಲ್ಲಿ ಸೀಗರೆಟ ಕೇಳಲು ಬಂದ 3 ಅಪರಿಚಿತ ಜನರು ಶೆಟರ್ ಎತ್ತಿ ಫಿರ್ಯಾದಿಯು ಟೇಬಲ ಮೇಲೆ ಇಟ್ಟ ಣದ ಕ್ಯಾರಿಬ್ಯಾಗವನ್ನು ತೆಗೆದುಕೊಂಡು ಓಡಿ ಹೋಗುತ್ತಿದ್ದಾಗ ಅವರಿಗೆ ಬೆನ್ನಹತ್ತಿದ್ದು ಅವರು ತನ್ನ ಮೋಟಾರ್ ಸೈಕಲ ಮೇಲೆ ಚಿಟ್ಟಾ ರೋಡಿನ ಕಡೆ ಓಡಿ ಹೋಗಿರುತ್ತಾರೆ, ಅವರ ಮುಖ ನೋಡಿದರೆ ನಾನು ಗುರುತಿಸುತ್ತೇನೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 11-12-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 111/2019, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ನಾಂಕ 11-12-2019 ರಂದು ಫಿರ್ಯಾದಿ ಕಾಶಿನಾಥ ತಂದೆ ಶೆಂಕರಪ್ಪಾ ಮಹಾಗಾಂವ ವಯ: 52 ವರ್ಷ, ಜಾತಿ: ಲಿಂಗಾಯತ, ಸಾ: ಕಣಜಿ, ಸದ್ಯ: ಬಸವನಗರ ಬೀದರ ರವರು ತನ್ನ ಮಗನಾದ ವಿಶಾಲ ತಂದೆ ಕಾಶಿನಾಥ ವಯ: 19 ವರ್ಷ ಇತನ ಜೊತೆಯಲ್ಲಿ ಲ್ಯಾಪಟಾಪ್ ರಿಪೇರಿ ಕುರಿತು ಮಡಿವಾಳ ವೃತ್ತದ ಕಡೆಯಿಂದ ಹೊಸ ಬಸನಿಲ್ದಾಣ ಕಡೆಗೆ ಮೋಟಾರ ಸೈಕಲ ನಂ. ಕೆಎ-39/ಎಲ್-5385 ನೇದರ ಮೇಲೆ ಹೋಗುತ್ತಿದ್ದಾಗ ವಿಜಯಲಕ್ಷ್ಮೀ ಸಾರಿ ಸೆಂಟರ್ ಹತ್ತಿರ ಬಂದಾಗ ಹಿಂದಿನಿಂದ ಅಂದರೆ ಮಡಿವಾಳ ವೃತ್ತದ ಕಡೆಯಿಂದ ಆಟೋ ನಂ.ಕೆಎ-38/6352 ನೇದರ ಚಾಲಕನಾದ ಆರೋಪಿಯು ತನ್ನ ಆಟೋವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಮಾಡಿ ಆಟೋ ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ವಿಶಾಲ ಈತನಿಗೆ ಬಲಗಡೆ ಗಲ್ಲದ ಮೇಲೆ ರಕ್ತಗಾಯ, ಬಲಗಾಲ ತೊಡೆಯ ಮೇಲೆ ಭಾರಿ ಗುಪ್ತಗಾಯವಾಗಿರುತ್ತದೆ, ಫಿರ್ಯಾದಿಗೆ ಚಿಕ್ಕ ಪುಟ್ಟ ಗಾಯಗಳಾಗಿದ್ದು ಆಗ ಅಲ್ಲಿಂದಲೇ ಹೋಗುತ್ತಿದ್ದ ಪರಿಚಯಸ್ಥರಾದ ಸುನೀಲ ತಂದೆ ವೈಜಿನಾಥ ಸಿಂದೆ ಸಾ: ಆನಂದ ನಗರ ಬೀದರ ಮತ್ತು ಶರಣಪ್ಪಾ ತಂದೆ ರೇವಣಪ್ಪಾ ಸಾ: ಕಣಜಿ ಫಿರ್ಯಾದಿಗೆ ಆದ ಗಾಯಗಳನ್ನು ನೋಡಿ ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 186/2019, ಕಲಂ. 379 ಐಪಿಸಿ :-
ದಿನಾಂಕ 26-12-2019 ರಂದು ಫಿರ್ಯಾದಿ ಮೊಹಮ್ಮದ ವಾಜಿದ ತಂದೆ ಎಕ್ಬಾಲಸಾಬ ಕಬಾಡಿ ವಯ: 26 ವರ್ಷ, ಜಾತಿ: ಮುಸ್ಲಿಂ, ಸಾ: ಮಹೇಬೂಬ ನಗರ ಕಲಬುರ್ಗಿ ರವರು ತನ್ನ ಗೆಳೆಯ ಅಬ್ದುಲ್ ರಸಿದ ತಂದೆ ಖಾಜಾ ಪಟೆಲ್ ರವರ ಜೊತೆಯಲ್ಲಿ ತನ್ನ ಹಿರೊ ಸ್ಪ್ಲೇಂಡರ ಪ್ಲಸ್ ಮೊಟಾರ ಸೈಕಲ ನಂ. ಕೆಎ-32/ಇ.ಬಿ-6813 ನೇದರ ಮೇಲೆ ಭಾಲ್ಕಿ ತಾಲೂಕಿನ ಮರೂರ ದರ್ಗಾಕ್ಕೆ ಬಂದು ದರ್ಗಾದ ಹತ್ತಿರ ಮೊಟಾರ ಸೈಕಲ ನಿಲ್ಲಿಸಿ ದರ್ಗಾದಲ್ಲಿ ದರ್ಶನ ಮಾಡಲು ಹೊಗಿ ಮರಳಿ ಮೊಟಾರ ಸೈಕಲ ನೀಲ್ಲಿಸಿದ ಸ್ಥಳಕ್ಕೆ ಬಂದು ನೊಡಲು ಅಲ್ಲಿ ಮೊಟಾರ ಸೈಕಲ ಇರಲಿಲ್ಲ, ನಂತರ ಎಲ್ಲಾ ಕಡೆಗೆ ಸುತ್ತಾಡಿ ಜನರಿಗೆ ವಿಚಾರಣೆ ಮಾಡಲು ಮೊಟಾರ ಸೈಕಲ ಸಿಕ್ಕಿರುವುದಿಲ್ಲ, ಅಂದಿನಿಂದ ಇಲ್ಲಿಯವರೆಗೆ ಕಳೆದು ಹೋದ ಮೊಟಾರ ಸೈಕಲ ಹುಡುಕಾಡಲು ಸಿಕ್ಕಿರುವುದಿಲ್ಲ, ಸದರಿ ಮೊಟಾರ ಸೈಕಲನ ಅ.ಕಿ 20,000/- ರೂಪಾಯಿ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 11-12-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.