Police Bhavan Kalaburagi

Police Bhavan Kalaburagi

Tuesday, September 29, 2020

BIDAR DISTRICT DAILY CRIME UPDATE 29-09-2020

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 29-09-2020

ಚಿಟಗುಪ್ಪಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 126/2020 ಕಲಂ 32, 34 ಕೆಇ. ಕಾಯ್ದೆ :-

ದಿನಾಂಕ:28/09/2020 ರಂದು ಮಧ್ಯಾಹ್ನ 1530 ಗಂಟೆಗೆ ಪಿ.ಎಸ್.. ಚಿಟಗುಪ್ಪಾ ರವರು ಠಾಣೆಯಲ್ಲಿದ್ದಾಗ  ಚಿಟಗುಪ್ಪಾದಿಂದ ಮುದ್ನಾಳಕ್ಕೆ ವ್ಯಕ್ತಿಯೊಬ್ಬ ಮೋಟರ ಸೈಕಲ ಮೇಲೆ ಅಕ್ರಮವಾಗಿ ಸರಾಯಿ ಮಾರಾಟ ಮಾಡಲು ಸಾಗಿಸುತ್ತಿರುವ ಮಾಹಿತಿ ಬಂದಿದರಿಂದ ಸಿಬ್ಬಂದಿಯೊಂದಿಗೆ ಮುದ್ನಾಳ ರೋಡ ಮುದ್ನಾಳ ಶಿವಾರದಲ್ಲಿ ಶ್ರೀನಿವಾಸ ಬಿರಾದಾರ ರವರ ಹೊಲದ ಹತ್ತಿರ ರಸ್ತೆ ಕೆಳಗೆ ಜೀಪನ್ನು ಗಿಡಮರಗಳ ಮರೆಯಲ್ಲಿ ನಿಲ್ಲಿಸಿ, ನಾವು ಜೀಪಿನಿಂದ ಕೆಳಗಿಳಿದು ರಸ್ತೆ ಬದಿಯ ಪೊದೆಗಳ ಮರೆಯಲ್ಲಿ ನಿಂತು ನೋಡಲು 1630 ಗಂಟೆಗೆ ಚಿಟಗುಪ್ಪಾ ಕಡೆಯಿಂದ ಬಂದ ಒಂದು ಮೋಟರ ಸೈಕಲ ಮೇಲೆ ಒಬ್ಬ ವ್ಯಕ್ತಿ ತನ್ನ ಮೋಟರ ಸೈಕಲ ಮೇಲೆ ಎರಡು ಕಾಟನಗಳನ್ನು ಸಾಗಿಸುತ್ತಿದ್ದು, ಅವನನ್ನು ತಡೆದು ಆತನ ಹೆಸರು ವಿಚಾರಿಸಲು ತನ್ನ ಹೆಸರು ಧನರಾಜ ತಂದೆ ಹುಸೇನಪ್ಪಾ ದುಕಾನದಾರ ವಯ: 27 ವರ್ಷ, ಜಾತಿ: ಎಸ್.ಸಿ, ಸಾ/ ಮಾಡಗೂಳ ತಾ/ ಚಿಟಗುಪ್ಪಾ ಅಂತಾ ತಿಳಿಸಿದ್ದು, ಮೋಟರ ಸೈಕಲ ನಂ: KA02HE8938 ಇದ್ದು ಮೋಟರ ಸೈಕಲ ಮೇಲೆ ಸಾಗಿಸುತ್ತಿದ್ದ ಕಾಟನಗಳನ್ನು ಪರಿಶೀಲಸಿ ನೋಡಲು ಒಂದರಲ್ಲಿ US wisky 90 ml ವುಳ್ಳ 96 ಸರಾಯಿ ಪ್ಲಾಸ್ಟಿಕ ಬಾಟಲಗಳಿದ್ದು ಅದರ ಮೇಲೆ 6990705121 ರಿಂದ 6990705216 ವರೆಗೆ ಕ್ರಮಾಂಕಗಳಿದ್ದು ಒಂದರ ಅಂ.ಕಿ. ರೂ.35.13/- ಒಟ್ಟು 96 ಸರಾಯಿ ಪ್ಲಾಸ್ಟಿಕ ಬಾಟಲಗಳ ಅಂ.ಕಿ. ರೂ. 3372/- ಇದ್ದು, ಇನ್ನೊಂದು ಕಾಟನ ಪರಿಶೀಲಿಸಲು ಇದರಲ್ಲಿ Old Tavern wisky 180 ml ವುಳ್ಳ 48 ಸರಾಯಿ ಪೌಚಗಳಿದ್ದು ಅದರ ಮೇಲೆ 0288117313 ರಿಂದ 288117360 ರವರೆಗೆ ಕ್ರಮಾಂಕಗಳಿದ್ದು ಒಂದರ ಅಂ.ಕಿ. ರೂ.86.75/- ಒಟ್ಟು 48 ಸರಾಯಿ ಪೌಚಗಳ ಅಂ.ಕಿ. ರೂ.4164/- ಇದ್ದು, ಹೀಗೆ ಒಟ್ಟು 17.28 ಲೀಟರ ಸರಾಯಿ ಅಂ.ಕಿ. ರೂ. 7536/- ಬೆಲೆಬಾಳುವುದು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 132/2020 ಕಲಂ 78(3) ಕೆಪಿ ಕಾಯ್ದೆ :-

 ದಿನಾಂಕ 28/09/2020ರಂದು 1600 ಗಂಟೆಗೆ ಪಿಎಸ್ಐ ರವರು ಪೊಲೀಸ್ ಠಾಣೆಯಲ್ಲಿದ್ದಾಗ    ಖಚೀತ ಬಾತ್ಮಿ ಬಂದಿದ್ದೇನೆಂದರೆ,  ತಳವಾಡ (ಕೆ ) ಗ್ರಾಮದ ಸರಕಾರಿ ಹಿರಿಯ ಪ್ರಾಥಮೀಕ ಶಾಲೆಯ ಹತ್ತಿರ  ಇಬ್ಬರು ವ್ಯಕ್ತಿಗಳು ಸಾರ್ವಜನಿಕರಿಂದ 1 ರೂಪಾಯಿಗೆ 90 ರೂಪಾಯ ಕೊಡುತ್ತೇನೆ ಅಂತ ಹೇಳಿ ಸಾರ್ವಜನಿಕರಿಂದ ಮಟಕಾ ಚೀಟಿ ಬರೆದುಕೊಳ್ಳುತಿದ್ದಾರೆ ಅಂತ ಮಾಹಿತಿ ಮೇರೆಗೆ ಸಿಬ್ಬಂದಿಯೊಂದಿಗೆ ತಳವಾಡ (ಕೆ )  ಗ್ರಾಮದ ರೇಲ್ವೆ ಗೇಟ ಹತ್ತಿರ  ಸ್ವಲ್ಪ ದೂರದಲ್ಲಿ 1630 ಗಂಟೆಗೆ ತಲುಪಿ ಜೀಪ ಮರೆಯಾಗಿ ನಿಲ್ಲಿಸಿ ಎಲ್ಲರೂ ಜೀಪಿನಿಂದ ಕೆಳಗೆ ಇಳಿದು ಮರೆಯಾಗಿ ನೋಡಲು ಇಬ್ಬರು ವ್ಯಕ್ತಿಗಳು  1 ರೂಪಾಯಿ 90 ರೂಪಾಯಿ ಕೊಡುತ್ತೇವೆ ಅಂತಾ ಜೋರಾಗಿ ಕೂಗುತ್ತಾ ಜನರಿಂದ ಮಟಕಾ ಚೀಟಿ ಬರೆದುಕೊಳ್ಳುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು 1645 ಗಂಟೆಗೆ ಪಂಚರ ಸಮಕ್ಷಮ  ದಾಳಿ ಮಾಡಿದಾಗ ಜನರು ಓಡಿ ಹೋಗಿದ್ದು ಮಟಕಾ ಬರೆದುಕೊಳ್ಳುತ್ತಿದ್ದ ವ್ಯಕ್ತಿಗಳಿಗೆ ಹಿಡಿದು ಅವರ ಹೆಸರು ಮತ್ತು ವಿಳಾಸ ವಿಚಾರಿಸಲು 1) ಸಂಜೀವಕುಮಾರ ತಂದೆ ಮಾರುತಿ ಮೇತ್ರೆ ವಯ 40 ವರ್ಷ ಜಾ; ಕ್ರೀಶ್ಚನ  ; ಕೂಲಿ ಕೆಲಸ ಸಾ; ತಳವಾಡ (ಕೆ),  2)  ಸತೀಷ ತಂದೆ ಬಾಬುರಾವ ಸೈದುಮ  ವಯ 30 ವರ್ಷ ಜಾ; ಎಸ. ಸಿ. ಹೊಲಿಯಾ ಉ; ಕೂಲಿ ಕೆಲಸ ಸಾ; ತಳವಾಡ (ಕೆ ) ತಾ; ಭಾಲ್ಕಿ  ಅಂತಾ ತಿಳಿಸಿದರು . ಸಂಜೀನಕುಮಾರ  ಇತನ ಅಂಗ ಝಡ್ತಿ ಮಾಡಲು ಇತನ ಹತ್ತಿರ 2900/- ರೂಪಾಯಿ ಹಾಗೂ ನಾಲ್ಕು  ಬಿಳಿ ಹಾಳೆಯಲ್ಲಿ ಮಟಕಾ ನಂಬರ ಬರೆದ ಚೀಟಿಗಳು ಮತ್ತು ಒಂದು ಬಾಲ ಪೆನ್ನ ಸಿಕ್ಕಿರುತ್ತದೆ.  ಮತ್ತು ಸತೀಷ ತಂದೆ ಬಾಬುರಾವ ಈತನ ಅಂಗ ಝಡ್ತಿ ಮಾಡಲು ಆತನ ಹತ್ತಿರ ನಗದು ಹಣ 500/- ರೂ ಹಾಗೂ ನಾಲ್ಕು ಬಿಳಿ ಹಾಳೆಯಲ್ಲಿ ಮಟಕಾ ನಂಬರ ಬರೆದ ಚೀಟಿಗಳು ಹಾಗೂ ಒಂದು ಬಾಲ ಪೆನ್ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 ಹಳ್ಳಿಖೇಡ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 118/2020 ಕಲಂ 78(3) ಕೆಪಿ ಕಾಯ್ದೆ :-

ದಿನಾಂಕ-28/09/2020 ರಂದು ಮುಂಜಾನೆ 1130 ಗಂಟೆಗೆ  ನಿಂಗಪ್ಪಾ ಮಣ್ಣೂರ ಪಿ.ಎಸ್.ಐ(ಕಾಸು) ಠಾಣೆಯಲ್ಲಿದ್ದಾಗ ದುಬಲಗುಂಡಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ದುಬಲಗುಂಡಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಮರೆಯಾಗಿ ಜೀಪ ನಿಲ್ಲಿಸಿ ನಾವೆಲ್ಲರು ಜೀಪನಿಂದ ಇಳಿದು ಸ್ವಲ್ಪ ಮುಂದೆ ನಡೆದುಕೊಂಡು ಹೋಗಿ ಮರೆಯಾಗಿ ನಿಂತು ನೋಡಲು ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಬಗ್ಗೆ ನೋಡಿ ಖಚಿತಪಡಿಸಿಕೊಂಡು ಸದರಿಯವನ ಮೇಲೆ ದಾಳಿ ಮಾಡಲು ಮಟಕಾ ಬರೆಯಿಸಿಕೊಳ್ಳುತ್ತಿದ್ದ ಸಾರ್ವಜನಿಕರು ಓಡಿ ಹೋಗಿದ್ದು, ಮಟಕಾ ಬರೆದುಕೊಳ್ಳುತ್ತಿದ್ದ ವ್ಯಕ್ತಿಯನ್ನು ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಪರಶುರಾಮ ತಂದೆ ವಿಠಲ ನಂದಿ ವಯ: 44 ವರ್ಷ ಜಾ: ಎಸ್.ಸಿ ಮಾದಿಗ ಉ: ನಿರುದ್ಯೋಗಿ ಸಾ: ದುಬಲಗುಂಡಿ ಅಂತ ತಿಳಿಸಿದನು. ನಂತರ ಪಿ.ಎಸ್.ಐ ಸಾಹೇಬರು ಸದರಿ ವ್ಯಕ್ತಿಗೆ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಟ್ಟಿರುವ ಮಟಕಾ ಚೀಟಿ ಹಾಗೂ ಹಣವನ್ನು ಯಾರಿಗೆ ಕೊಡುತ್ತಿಯಾ ಅಂತ ವಿಚಾರಿಸಲು ಅವನು ತಿಳಿಸಿದ್ದೆನೆಂದ್ದರೆ, ನಾನು ಎರಡು ಕಾಲಿನಿಂದ ಅಂಗವಿಕಲನಿದ್ದು, ನನಗೆ ಓಡಾಡಲು ಬರದ ಕಾರಣ ನಾನು ಕುಳಿತಲ್ಲಿಯೆ ಕುಳಿತುಕೊಂಡು ಮಟಕಾ ಚೀಟಿ ಬರೆದು ಹಣ ಪಡೆದುಕೊಂಡು ನಂತರ ಮಟಕಾ ಚೀಟಿ ಮತ್ತು ಹಣ ಬಸವರಾಜ ತಂದೆ ತಿಪ್ಪಣ್ಣಾ ಸುಣಗಾರ ಇವನಿಗೆ ಕೊಡುತ್ತೇನೆ ಇವನು ಬಂದು ತೆಗೆದುಕೊಂಡು ಹೋಗುತ್ತಾನೆ ಅಂತ ತಿಳಿಸಿರುತ್ತಾನೆ.  ಅವನ ಅಂಗ ಜಡ್ತಿ ಮಾಡಲಾಗಿ ಅವನ ಹತ್ತಿರ ಒಟ್ಟು 900/- ರೂ ನಗದು ಹಣ, 1 ಮಟಕಾ ಚೀಟಿಗಳು ಹಾಗೂ 1 ಪೆನ ಇದ್ದು, ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 ಬೀದರ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 89/2020 ಕಲಂ 379 ಐಪಿಸಿ :-      

 ದಿನಾಂಕ 28/09/2020 ರಂದು 20:30 ಗಂಟೆಗೆ ಠಾಣೆಯಲ್ಲಿ  ಫಿಯರ್ಾದಿದಾರರಾದ ಶ್ರೀ ಅಬ್ದುಲ ವಾಜೀದ ಅಲಿ ತಂದೆ ಅಬ್ದುಲ ಗಫಾರ ವಯ: 32 ವರ್ಷ ಜಾತಿ: ಮುಸ್ಲಿಂ ಉ: ಬಟ್ಟೆ ಅಂಗಡಿ ವ್ಯಾಪಾರ ಸಾ// ಮನೆ ನಂ: 2-4-7/3 ಬಾವಚರ್ಿಗಲ್ಲಿ ಬೀದರ ರವರು ನೀಡಿದ ದೂರಿನ ಸಾರಂಶವೆನೆಂದರೆ ದಿನಾಂಕ 21/03/2020 ರಂದು ರಾತ್ರಿ 21:00 ಗಂಟೆಗೆ ತನ್ನ ಮೋಟಾರ ಸೈಕಲ ಮನೆಯ ಮುಂದೆ ನಿಲ್ಲಿಸಿ ಮನೆಯ ಒಳಗಡೆ ಹೋಗಿ ಊಟಮಾಡಿಕೊಂಡು ಮಲಗಿಕೊಂಡಿದ್ದು ನಂತರ ದಿನಾಂಕ 22/03/2020 ರಂದು ನಸುಕಿನ ಜಾವ 05:00 ಗಂಟೆಯ ಸುಮಾರಿಗೆ ಮೂತ್ರ ವಿಸರ್ಜನೆ ಕುರಿತು ಮನೆಯ ಹೊರಗಡೆ ಹೋಗಿ ನೋಡಲು   ಮನೆಯ ಮುಂದೆ ನಿಲ್ಲಿಸಿದ ನನ್ನ ದ್ವಿಚಕ್ರ ವಾಹನ ಇದ್ದಿರುವುದಿಲ್ಲಾ ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲ. ಯಾರೋ ಅಪರಿಚಿತ ಕಳ್ಳರು   ಮನೆಯ ಮುಂದೆ ನಿಲ್ಲಿಸಿದ ನನ್ನ ಹೊಂಡಾ ಸಿ.ಬಿ ಶೈನ್ ಮೋಟರ ಸೈಕಲ್ ನಂ ಕೆಎ-38-ಎಸ್-8931 ಅಂ.ಕಿ. 35,000/-ರೂಗಳದ್ದು ವಾಹನವನ್ನು ಯಾರೊ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ ಸಂಖ್ಯೆ 117/2020  ಕಲಂ. 32, 34 ಕೆ,ಈ ಆಕ್ಟ್  :-

ದಿನಾಂಕ : 28-09-2020 ರಂದು ಮುಂಜಾನೆ 1100 ಗಂಟೆಗೆ   ಶಿವಕುಮಾರ ಪಿ.ಎಸ್.ಐ(ಅವಿ) ಹಳ್ಳಿಖೇಡ(ಬಿ) ಪೊಲೀಸ ಠಾಣೆಯಲ್ಲಿದ್ದಾಗ ಖಚಿತ ಬಾತ್ಮಿ ಬಂದಿದ್ದೇನೆಂದರೆ, ವಡ್ಡನಕೇರಾ ಗ್ರಾಮದ ಕ್ರಾಸ್ ರಾಯಣ್ಣಾ ಟೀಪಿನ್ ಸೆಂಟರ್ ಹೊಟೇಲ್ ಹತ್ತಿರ ಒಬ್ಬ ವ್ಯಕ್ತಿ ಅನಧಿಕೃತವಾಗಿ ಸರಾಯಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ವಡ್ಡನಕೇರಾ ಗ್ರಾಮದ ಕ್ರಾಸ್ ರಾಯಣ್ಣಾ ಟೀಪಿನ್ ಸೆಂಟರ್ ಹೊಟೇಲ್ ಹತ್ತಿರ ಮದ್ಯಾಹ್ನ 1200 ಗಂಟೆಗೆ ಸ್ವಲ್ಪ ದೂರದಲ್ಲಿ ಮರೆಯಲ್ಲಿ ಹೋಗಿ ನೋಡಿದಾಗ ಒಬ್ಬ ವ್ಯಕ್ತಿ ರಾಯಣ್ಣಾ ಟಿಪಿನ್ ಸೇಂಟರ್ ಹೊಟೇಲ್ ಪಕ್ಕದಲ್ಲಿ ಒಂದು ಬಿಳಿ ಬಣ್ಣದ ಚೀಲ ಇಟ್ಟುಕೊಂಡು ನಿಂತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು   ಸದರಿ ವ್ಯಕ್ತಿಯ ಮೇಲೆ 1215 ಗಂಟೆಗೆ ದಾಳಿ ಮಾಡಿ  ಸದರಿ ವ್ಯಕ್ತಿಯ ಹೆಸರು ವಿಚಾರಿಸಲು ಅವನು ತನ್ನ ಹೆಸರು ವೀರಪ್ಪಾ ತಂದೆ ರಾಮಣ್ಣಾ ಹೂಗೊಂಡ ವಯ: 32 ವರ್ಷ ಜಾತಿ: ಎಸ್.ಟಿ ಗೊಂಡ ಉ: ಹೊಟೇಲ್ ಕೆಲಸ ಸಾ: ವಡ್ಡನಕೇರಾ ಅಂತ ತಿಳಿಸಿದನು.  ಸದರಿ ವ್ಯಕ್ತಿಯ ಹತ್ತಿರ ಇದ್ದ ಚೀಲ ತೆರೆದು ನೋಡಲು ಅದರಲ್ಲಿ 1] 180 ಎಮ್.ಎಲ್ ಉಳ್ಳ ಒಟ್ಟು 16 ಓಟಿ ವಿಸ್ಕಿ ಸರಾಯಿ ತುಂಬಿದ ಪೋಚುಗಳಿದ್ದು, ಒಂದು ಪೋಚಿನ ಅ.ಕಿ 86.75/- ರೂ ಇರುತ್ತದೆ, ಒಟ್ಟು 16 ಪೋಚುಗಳ ಅ.ಕಿ 1,388/- ರೂ ಇರುತ್ತದೆ. ಮತ್ತು  2] 90 ಎಮ್.ಎಲ್ ಉಳ್ಳ ಒಟ್ಟು 20 ಯು.ಎಸ್ ವಿಸ್ಕಿ ಸರಾಯಿ ತುಂಬಿದ ಪ್ಲಾಸ್ಟೀಕ್ ಬಾಟಲಗಳಿದ್ದು, ಒಂದು ಬಾಟಲಿನ ಅ.ಕಿ 35.13/- ರೂ ಇರುತ್ತದೆ, ಒಟ್ಟು 20 ಬಾಟಲಗಳ ಅ.ಕಿ 702.6/- ರೂ ನೇದ್ದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

 

Sunday, September 27, 2020

BIDAR DISTRICT DAILY CRIME UPDATE 27-09-2020

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ : ೨೭-೦೯-೨೦೨೦

ಬೀದರ ಗ್ರಾಮೀಣ ಠಾಣೆ ಪ್ರಕರಣ ಸಂಖ್ಯೆ : 43/2020 ಕಲಂ 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

  ದಿನಾಂಕ 25/09/2020 ರಂದು ಸಾಯಾಂಕಾಲ 6.30 ಗಂಟೆಯ ಸುಮಾರಿಗೆ ಫಿರ್ಯಾದಿ ಅಬ್ದುಲ ಖಯುಮ ತಂದೆ ಅಬ್ದುಲ ಗಫೂರ ಮುನಸಿವಾಲೆ ವಯ-28 ಉ|| ಅಟೋ ಚಾಲಕ ಸಾ|| ಅಷ್ಟುರ ದರ್ಗಾ ಇವರಿಗೆ ತಮ್ಮುರಿನ  ಅಸ್ಲಂ ತಂದೆ ಖಾಜಾಮಿಯ್ಯ ರವರು ಫೊನ ಮಾಢಿ ಹೇಳೀದೆನೆಂದರೆ ಸಾಯಾಂಕಾಲ 6 ಗಂಟೆಗೆ ನಿಮ್ಮ ಅಣ್ಣ ಅಬ್ದುಲ ಕಲೀಂ ರವರು ದನಗಳು ಹೊಡೆದುಕೊಂಡು ಮನೆಗೆ ಬರುವಾಗ ಎದುರಿನಿಂದ ಯಾವುದೋ ಒಂದು ದ್ವೀ ಚಕ್ರ ವಾಹನದ ಚಾಲಕನು ಅಪಘಾತಪಡಿಸಿ ನಿಲ್ಲಿಸಿದೇ ಓಡಿ ಹೋಗಿದ್ದು ಅಪಘಾತದಿಂದ ಅಬ್ದುಲ ಕಲೀಂ ರವರಿಗೆ ತಲೆಯ ಹಿಂದೆ ಹತ್ತಿ ಭಾರಿ ರಕ್ತಗಾಯವಾಗಿರುತ್ತದೆ ಅಂತ ತಿಳಿಸಿದ ಮೇರೆಗೆ ಫಿರ್ಯಾದಿಯು ಕೂಡಲೇ ಘಟನೆ ಸ್ಥಳಕ್ಕೆ ಹೋಗಿ ನೋಡಲಾಗಿ ಅಲ್ಲಿ ನನ್ನ ಅಣ್ಣ ಅಬ್ದುಲ ಕಲೀಂ ರವರಿಗೆ ತಲೆಯ ಹಿಂದೆ ಹತ್ತಿ ಭಾರಿ ರಕ್ತಗಾಯ ಆಗಿದ್ದು ಮಾತನಾಡುವ ಸ್ಥಿಯಲ್ಲಿ ಇರಲಿಲ್ಲಾ. ಚಿಕಿತ್ಸೆ ಕುರಿತು 108 ಅಂಬುಲನ್ಸದಲ್ಲಿ ಬೀದರ ಭಾಲ್ಕೆ ಆಸ್ಪತ್ರೆಗೆ ದಾಖಲು ,ಮಾಡಿರುತ್ತೇನೆ.ಚಿಕಿತ್ಸೆ ಕಾಲಕ್ಕೆ ಅಬ್ದುಲ ಕಲೀಂ ರವರು ಗುಣಮುಖನಾಗದೇ ಇಂದು ರಾತ್ರಿ 12.30 ಗಂಟೆಗೆ ತೀರಿಕೊಂಡಿರುತ್ತಾನೆ, ನನ್ನ ಅಣ್ಣ ಅಬ್ದುಲ ಕಲೀಂ ರವರಿಗೆ ಯಾವುದೋ ಒಂದು ಅಪರಿಚಿತ ದ್ವೀಚಕ್ರ ವಾಹನದ  ಚಾಲಕ ಅಪಘಾತಪಡಿಸಿ ಓಡಿ ಹೋಗಿದ್ದು ಕಾರಣ ಮಾನ್ಯರು ಮುಂದಿನ  ಕಾನೂನೂ ಕ್ರಮ ಜರುಗಿಸಲು ವಿನಂತಿ  ಇರುತ್ತದೆ ಅಂತ ಕೊಟ್ಟ ಹೇಳೀಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

 

ಬಗದಲ್ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ : 64/2020 ಕಲಂ 279, 337, 338 ಐಪಿಸಿ :-

ದಿನಾಂಕ:25-09-2020 ರಂದು ರಾತ್ರಿ 8:30 ಪಿ.ಎಂ ಗಂಟೆಯ ಸುಮಾರಿಗೆ  ಗಾಯಳು ಫಿಯರ್ಾದಿ ಸುನೀಲ ತಂದೆ ಶಿವರಾಮ ತಗಣೆಕರ ಸಾ: ಬಗದಲ ಗ್ರಾಮ ತಾ:ಜಿ:ಬೀದರ ಮನೆಯಿಂದ ನಮ್ಮೂರ ಸೈಲೇಶ ಇತನ ಹೊಟಲಗೆ ಹಾಲು ತರಲು ಹೊಗುತ್ತಿರುವಾಗ ಬೀದರ-ಮನ್ನಾಏಖೇಳ್ಳಿ ರೋಡಿನ ಮೇಲೆ ಸೈಡಿಗೆ ನಡೆದುಕೊಂಡು ಹೊಗುತ್ತಿರುವಾಗ ಬಗದಲ ಚರ್ಚ ಕ್ರಾಸ್ ಹತ್ತಿರ ಹಿಂದೆಯಿಂದ ಅಂದರೆ ಮನ್ನಾಏಖೇಳ್ಳಿ ಕಡೆಯಿಂದ ಬರುತ್ತಿದ್ದ ಒಂದು ಮೊಟರ ಸೈಕಲ್ ನಂ. ಂಕ-09 ಃಓ 3871 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೆಗ ಹಾಗೂ ನಿಷ್ಕಾಳಜಿತನದಿಂದ ಮಾನವ ಜೀವಕ್ಕೆ ಅಪವಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಕಂಟ್ರೋಲ್ ಮಾಡದೆ ಒಮ್ಮಲೆ ಬಂದು ಸೈಡಿಗೆ ನಡೆದುಕೊಂಡು ಹೊಗುತ್ತಿದ್ದ ಫಿಯರ್ಾದಿಗೆ ಹಿಂದೆಯಿಂದ ಡಿಕ್ಕಿ ಮಾಡಿರುತ್ತಾನೆ. ಡಿಕ್ಕಿಯ ಪ್ರಯುಕ್ತ ನಾನು ಮತ್ತು ಮೊಟರ ಸೈಕಲ್ ಚಾಲಕ ಇಬ್ಬರೂ ರೋಡಿನ ಮೇಲೆ ಬಿದ್ದೇವು, ನನಗೆ ಬಲಗಾಲ ಮೊಳಕಾಲ ಕೆಳಗೆ ರಕ್ತಗಾಯ, ಬಲಗಾಲ ಹೆಬ್ಬರಳಿಗೆ ರಕ್ತಗಾಯ ತಲೆಯ ಹಿಂಬದಿಗೆ ರಕ್ತಗಾಯ, ಬಲಭಾಗದ ಟೊಂಕಿಗೆ ಗುಪ್ತಗಾಯ ಹಾಗೂ ನನ್ನ ಬಲ ಭುಜಕ್ಕೆ ರಕ್ತಗಾಯವಾಗಿರುತ್ತದೆ. ರಸ್ತೆ ಅಪಘಾತ ಪಡಿಸಿದ ಮೊಟರ ಸೈಕಲ್ ಚಾಲಕನ ಹೆಸರು ರವಿ ತಂದೆ ವಿಶ್ವನಾಥ ಹಲಬುಗರ್ೆ ವಯ: 45 ವರ್ಷ ಜಾ: ಲಿಂಗಾಯತ ಉ: ಒಕ್ಕಲುತನ ಸಾ: ಸಿಸರ್ಿ(ಎ) ಗ್ರಾಮ ಅಂತ ಗೊತ್ತಾಯಿತ್ತು, ಸದರಿಯವನಿಗೂ ಸಹ ರಕ್ತ ಅಲ್ಲಲ್ಲಿ ಗಾಯಗಳಾಗಿದ್ದಂತೆ ಕಂಡು ಬಂದಿರುತ್ತದೆ. ಘಟನೆ ನೋಡಿ ಅಲ್ಲಿಯೆ ಹೊಟೇಲ್ ನಲ್ಲಿದ್ದ ನನ್ನ ಸಹೊದರ ಮಾವನಾದ ಯಶೇಪ್ಪಾ ತಂದೆ ಪೀರಪ್ಪಾ ಶ್ಯಾಣೆನೊರ್ ವಯ: 50 ವರ್ಷ ಸಾ: ಬಂಬಳಗಿ ಮತ್ತು ವಿಷಯ ತಿಳಿದು ಅಲ್ಲಿಗೆ ಬಂದ ನನ್ನ ತಮ್ಮನಾದ ದಿಲೀಪ ತಂದೆ ಶಿವರಾಮ ತಗಣೆಕರ್ ವಯ: 30 ವರ್ಷ ರವರು ಗಾಯಗೊಂಡ ನಮ್ಮಿಬ್ಬರಿಗೆ 108 ಅಂಬ್ಯೂಲೇನ್ಸ್ ಮುಖಾಂತರ ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕ ಮಾಡಿರುತ್ತಾರೆ. ಕಾರಣ ನಡೆದುಕೊಂಡು ಹೊಗುತ್ತಿದ್ದ ನನಗೆ ಹಿಂದೆಯಿಂದ ಬಂದು ಡಿಕ್ಕಿ ಮಾಡಿದ ಮೊಟರ ಸೈಕಲ್ ನಂ. ಂಕ-09 ಃಓ 3871 ನೇದ್ದರ ಚಾಲಕನಾದ ರವಿ ಇತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತ ಕೊಟ್ಟ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಗಿದೆ.

ಹಳ್ಳಿಖೇಡ (ಬಿ) ಪೊಲೀಸ ಠಾಣೆ ಪ್ರಕರಣ ಸಂಖ್ಯೆ : 114/2020 ಕಲಂ 78 (3) ಕರ್ನಾಟಕ ಪೊಲೀಸ್ ಕಾಯ್ದೆ :-

ದಿನಾಂಕ 26/09/2020 ರಂದು ಮುಂಜಾನೆ ನಾನು ನಿಂಗಪ್ಪಾ ಮಣ್ಣೂರ ಪಿ.ಎಸ್.ಐ(ಕಾಸು) ಠಾಣೆಯಲ್ಲಿದ್ದಾಗ ದುಬಲಗುಂಡಿ ಗ್ರಾಮದ ಶ್ರೀ ಭವಾನಿ ಮಂದಿರದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ರಮೇಶ ತಂದೆ ಹಣಮಂತಪ್ಪಾ ವಾಡೇಕರ ಸಾ: ದುಬಲಗುಂಡಿ ಅವನು ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಸಿಬ್ಬಂದಿಯವರೊಂದಿಗೆ  1240 ಗಂಟೆಗೆ ದುಬಲಗುಂಡಿ ಗ್ರಾಮದ ಶ್ರೀ ಭವಾನಿ ಮಂದಿರದ ಹತ್ತಿರ ಸ್ವಲ್ಪ ದೂರದಲ್ಲಿ ಹೋಗಿ ಮರೆಯಲ್ಲಿ ಜೀಪ ನಿಲ್ಲಿಸಿ ನಾವೆಲ್ಲರು ಜೀಪನಿಂದ ಇಳಿದು ಮರೆಯಾಗಿ ನಿಂತು ನೋಡಲು ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಬಗ್ಗೆ ನೋಡಿ ಖಚಿತಪಡಿಸಿಕೊಂಡು ಪಿ.ಎಸ್.ಐ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ 1245 ಗಂಟೆಗೆ ಸದರಿಯವನ ಮೇಲೆ ದಾಳಿ ಮಾಡಲು ಮಟಕಾ ಚೀಟಿ ಬರೆಯಿಸಿಕೊಳ್ಳುತ್ತಿದ್ದ ಸಾರ್ವಜನಿಕರು ಓಡಿ ಹೋಗಿದ್ದು, ಮಟಕಾ ಬರೆದುಕೊಡುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡೆವು. ನಂತರ ಸದರಿ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ರಮೇಶ ತಂದೆ ಹಣಮಂತಪ್ಪಾ ವಾಡೇಕರ ವಯ: 43 ವರ್ಷ ಜಾತಿ: ವಡ್ಡರ ಉ: ಕೂಲಿ ಕೆಲಸ ಸಾ: ದುಬಲಗುಂಡಿ ಅಂತ ತಿಳಿಸಿದನು. ನಂತರ ಪಂಚರ ಸಮಕ್ಷಮ ಅವನ ಅಂಗ ಜಡ್ತಿ ಮಾಡಲಾಗಿ ಆತನ ಹತ್ತಿರ 1,440/- ರೂ. ನಗದು ಹಣ, 1 ಮಟಕಾ ಚೀಟಿ ಮತ್ತು 1 ಪೆನ್ ಸಿಕ್ಕಿದ್ದು ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಮುದ್ದೆ ಮಾಲು ಹಾಗು ಆರೋಪಿತನನ್ನು ತಾಬೆಗೆ ತೆಗೆದುಕೊಳ್ಳಲಾಯಿತು. ನಂತರ ಮರಳಿ 1415 ಗಂಟೆಗೆ ಠಾಣೆಗೆ ಬಂದು ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

 

ಹುಲಸೂರ ಪೊಲೀಸ ಠಾಣೆ ಪ್ರಕರಣ ಸಂಖ್ಯೆ: 73/2020 ಕಲಂ 78 (3) ಕರ್ನಾಟಕ ಪೊಲೀಸ್ ಕಾಯ್ದೆ:-

ದಿನಾಂಕ 26/09/2020 ರಂದು ಗುಪ್ತ ಮಾಹಿತಿ ಮೇರೆಗೆ ಪಿಎಸ್ಐ ರವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಬೇಲೂರ ಗ್ರಾಮದ ಬಸವೇಶ್ವರ ಚೌಕದಿಂದ ಸ್ವಲ್ಪ ದೂರದಲ್ಲಿ 1645 ಗಂಟೆಗೆ ಜೀಪ ನಿಲ್ಲಿಸಿ ಸ್ವಲ್ಪ ಮುಂದೆ ನಡೆದುಕೊಂಡು ಹೋಗಿ ಮರೆಯಾಗಿ ನಿಂತು ನೋಡಲು ಬೇಲೂರ ಗ್ರಾಮದ ಸರಕಾರಿ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ 1 ರೂಪಾಯಿಗೆ 90 ರೂಪಾಯಿ ಕೊಡುವದಾಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರಿನ ಚಿಟಿ ಬರೆದುಕೊಳ್ಳುತಿರುವದನ್ನು ನೋಡಿ ಅವರ ಮೇಲೆ 1650 ಗಂಟೆಗೆ ದಾಳಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ವ್ಯಕ್ತಿಗೆ ಹಿಡಿದುಕೊಂಡು ಅವರ ಹೆಸರು ಮತ್ತು ವಿಳಾಸ ವಿಚಾರಿಸಲು 1] ಮಹಾರುದ್ರ ತಂದೆ ಮಾರುತಪ್ಪ ಹೊಳ್ಳೆ ವಯ: 45 ವರ್ಷ ಜಾತಿ: ಲಿಂಗಾಯತ ಉ: ಕೂಲಿಕೆಲಸ ಸಾ: ಬೇಲೂರ ಅಂತ ತಿಳಿಸಿದ್ದು, ಮುಂದುವರೆದು ವಿಚಾರಿಸಲು ತಿಳಿಸಿದ್ದೆನೆಂದರೆ, 1 ರೂಪಾಯಿಗೆ 90 ರೂಪಾಯಿಗಳು ಕೊಡುವದಾಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಕಲ್ಯಾಣಿ ಮಟಕಾ ನಂಬರಿನ ಚೀಟಿ ಬರೆದುಕೊಳ್ಳುತ್ತಿರುವದಾಗಿ ತಿಳಿಸಿದ್ದು ಮಹಾರುದ್ರ ಈತನ ಬಳಿ ಇದ್ದ 1 ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ್ನ ಮತ್ತು ನಗದು ಹಣ 1517 ರೂಪಾಯಿಗಳನ್ನು ಜಪ್ತಿ ಮಾಡೊ ಮಹಾರುದ್ರ ಈತನಿಗೆ ದಸ್ತಗಿರಿ ಮಾಡಿಕೊಂಡು ಠಾಣೆಗೆ ಬಂದು ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಪ್ರಕರಣ ಸಂಖ್ಯೆ ; 130/2020 ಕಲಂ 87 ಕರ್ನಾಟಕ ಪೊಲೀಸ್ ಕಾಯ್ದೆ:-

ದಿನಾಂಕ 26/09/2020 ರಂದು 0030   ಗಂಟೆಗೆ ನಾನು ಪೊಲೀಸ್ ಠಾಣೆಯಲ್ಲಿರುವಾಗ ನನಗೆ ಖಚಿತ ಮಾಹಿತಿ ಬಂದಿದ್ದೆನೆಂದರೆ  ಉದಗೀರ-ಬೀದರ ರೋಡಿಗೆ ಇರುವ ಅಂಬೆಸಾಂಗವಿ ಶಿವಾರದಲ್ಲಿರುವ ಕೊಂಡಲ ಸಾವಕಾರ ರವರ ತಗಡದ ಶೇಡ್ಡಿನ ಹಿಂದೆ  ಸಾರ್ವಜನಿಕ ಸ್ಥಳದಲ್ಲಿ ಲೈಟಿನ ಬೆಳಕಿನಲ್ಲಿ ಕೆಲವು ಜನರು ಹಣ ಹಚ್ಚಿ ಪಣತೊಟ್ಟು ಅಂದರ ಬಹಾರ ಎಂಬ ನಸಬೀನ ಇಸ್ಪೀಟ ಜೂಜಾಟಾ ಆಡುತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವ್ರು ಸಿಬ್ಬಂದಿ ಹಾಗೂ ಪಂಚರೊಂದಿಗೆ ದಿನಾಂಕ 26/09/2020 ರಂದು 0045 ಗಂಟೆಗೆ ಬಿಟ್ಟು ಅಂಬೆಸಾಂಗವಿ ಶಿವಾರದಲ್ಲಿ ಉದಗೀರ-ಬೀದರ ರೋಡಿಗೆ ಇರುವ ಕೊಂಡಲ ಸಾವಕಾರ ರವರ ತಗಡದ ಶೇಡ್ಡಿನ ಸ್ವಲ್ಪ ದೂರುದಲ್ಲಿ 0100 ಗಂಟೆಗೆ ಹೋಗಿ ಜೀಪನ್ನು ಮರೆಯಾಗಿ ನಿಲ್ಲಿಸಿ ಎಲ್ಲರು ಜೀಪಿನಿಂದ ಕೆಳಗೆ ಇಳಿದ್ದು ಎಲ್ಲರು ನಡೆದುಕೊಂಡು ಕೊಂಡಲ ಸಾವಕಾರ ರವರ ತಗಡದ ಶೇಡ್ಡಿನ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ತಗಡದ ಶೇಡ್ಡಿನ ಲೈಟಿನ ಬೆಳಕಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ 18 ಜನರು  ದುAಡಾಗಿ ಕುಳಿತು ಹಣವನ್ನು  ಪಣಕ್ಕೆ ಹಚ್ಚಿ ಅಂದರ ಬಹಾರ ಎಂಬ ನಸಿಬಿನ ಜೂಜಾಟಾ ಆಡುತಿದ್ದ ಬಗ್ಗೆ ಖಚೀತ ಪಡಿಸಿಕೊಂಡು ಸದರಿ  ವ್ಯಕ್ತಿಗಳ ಮೇಲೆ ಪಂಚರ ಸಮಕ್ಷಮ 01;15 ಗಂಟೆಗೆ ಪಿ.ಎಸ್.ಐ ರವರು ದಾಳಿ ಮಾಡಿ ಸದರಿ ವ್ಯಕ್ತಿಗಳಿಗೆ ಸಿಬ್ಬಂದಿಯವರ ಸಹಾಯದಿಂದ ಹಿಡಿದು ಅವರ ಹೆಸರು ಮತ್ತು ವಿಳಾಸ ವಿಚಾರಿಸಲು 1) ಗುನಾಜಿ ತಂದೆ ರಾಮರಾವ ಜಾಧವ ವಯ 39 ವರ್ಷ ಜಾ; ಲಮಾಣಿ ಉ; ವ್ಯಾಪಾರ ಸಾ; ಗೌಂಡಗಾಂವ ಥಾಂಡಾ ಇವರ ಕೈಯಲ್ಲಿ 52 ಎಲೆಗಳು ಹಾಗೂ ನಗದು ಹಣ 10900/- ರೂ ಇದ್ದು 2) ವಿಠಲ ತಂದೆ ರಾಮರಾವ ಪಾಟೀಲ ವಯ 35 ವರ್ಷ ಜಾ; ಮರಾಠಾ ಉ; ಒಕ್ಕಲುತನ ಸಾ; ಅಂಬೆಸಾಂಗವಿ  ಇವರ ಕೈಯಲ್ಲಿ ನಗದು ಹಣ 700 ರೂ ಇದ್ದು  3) ಮಲ್ಲಿಕಾಜರ್ುನ ತಂದೆ ಸುರ್ಯಕಾಂತ ಮಲಗೊಂಡಾ ವಯ 25 ವರ್ಷ ಜಾ; ಕುರುಬ ಉ; ಡ್ರೈವರ ಕೆಲಸ ಸಾ; ಅಂಬೆಸಾಂಗವಿ ಇವರ ಕೈಯಲ್ಲಿ ನಗದು ಹಣ 800/- ರೂ ಇದ್ದು 4) ಯಶವಂತ ತಂದೆ ತಾನಾಜಿ ಮಾನೆ ವಯ 21 ವರ್ಷ ಜಾ; ಮರಾಠಾ ಉ; ಒಕ್ಕಲುತನ ಸಾ; ಅಂಬೆಸಾಂಗವಿ ಇವರ ಕೈಯಲ್ಲಿ ನಗದು ಹಣ 1100 ರೂ ಇದ್ದು 5) ಗಂಗಶೇಟ್ಟಿ ತಂದೆ ಸನ್ಮೂಖಪ್ಪಾ ಪ್ರಭಾ ವಯ 28 ವರ್ಷ ಜಾ; ಲಿಂಗಾಯತ ಉ; ಒಕ್ಕಲುತನ ಸಾ; ಅಂಬೆಸಾಂಗವಿ ಇವರ ಕೈಯಲ್ಲಿ ನಗದು ಹಣ 1000/- ರೂ ಇದ್ದು 6) ವಿನೋದ ತಂದೆ ತಾನಾಜಿರಾವ ಮಾನೆ ವಯ 28 ವರ್ಷ ಜಾ; ಮರಾಠಾ ಉ; ಒಕ್ಕಲುತನ ಸಾ; ಅಂಬೆಸಾಂಗವಿ ಇವರ ಕೈಯಲ್ಲಿ ನಗದು ಹಣ 1100 ರೂ ಇದ್ದು, 7) ಗಂಗಾರಾಮ ತಂದೆ ಕೀಶನ ಚವ್ಹಾಣ ವಯ 28 ವರ್ಷ ಜಾ; ಲಮಾಣಿ ಉ; ಕೂಲಿ ಕೆಲಸ ಸಾ; ಎರಾಗಡ್ಡಾ ಬಂಜಾರಾ ನಗರ ಹೈದ್ರಾಬಾದ ಇವರ ಕೈಯಲ್ಲಿ ನಗದು ಹಣ 1500/- ರೂ ಇದ್ದು 8) ಆಕಾಶ ತಂದೆ ಕೊಂಡಲರಾವ ಬಿರಾದಾರ ವಯ 21 ವರ್ಷ ಜಾ; ಮರಾಠಾ ಉ; ಕೂಲಿ ಕೆಲಸ  ಸಾ; ಅಂಬೆಸಾಂಗವಿ ಇವರ ಕೈಯಲ್ಲಿ ನಗದು ಹಣ 1400/- ರೂ ಇದ್ದು, 9) ಮಹೇಶ ತಂದೆ ನ್ಯಾನೋಬಾ ಜಾಧವ ವಯ 21 ವರ್ಷ ಜಾ; ಲಮಾಣಿ ಉ; ಕೂಲಿ ಕೆಲಸ ಸಾ; ಅಂಬೆಸಾಂಗವಿ ಇವರ ಕೈಯಲ್ಲಿ ನಗದು ಹಣ 1200/- ರೂ ಇದ್ದು 10) ರಾಹೂಲ ತಂದೆ ಮಲ್ಲಿಕಾಜರ್ುನ ಬಿರಾದಾರ ವಯ 21 ವರ್ಷ ಜಾ; ಲಿಂಗಾಯತ ಉ; ಕೂಲಿ ಕೆಲಸ ಸಾ; ಅಂಬೆಸಾಂಗವಿ ಇವರ ಕೈಯಲ್ಲಿ ನಗದು ಹಣ 900/- ರೂ ಇದ್ದು 11) ಕೃಷ್ಣಾ ತಂದೆ ರಾಗೋಬಾ ಜಿಪಾರೆ ವಯ 24 ವರ್ಷ ಜಾ; ಮರಾಠಾ ಉ; ಒಕ್ಕಲುತನ ಸಾ; ಅಂಬೆಸಾಂಗವಿ ಇವರ ಕೈಯಲ್ಲಿ ನಗದು ಹಣ 1100/- ರೂ ಇದ್ದು 12) ನಟರಾಜ ತಂದೆ ಓಂಕಾರ ಬಿರಾದಾರ ವಯ 21 ವರ್ಷ ಜಾ; ಲಿಂಗಾಯತ ಉ; ಒಕ್ಕಲುತನ ಸಾ; ಅಂಬೆಸಾಂಗವಿ ಇವರ ಕೈಯಲ್ಲಿ ನಗದು ಹಣ 1000/- ರೂ ಇದ್ದು, 13) ಭೀಮ ತಂದೆ ಜಗನ್ನಾಥರಾವ ಖಾಶೆಂಪೂರೆ ವಯ 24 ವರ್ಷ ಜಾ; ಮರಾಠಾ ಉ; ಮೇಕಾನಿಕ ಸಾ; ಅಂಬೆಸಾಂಗವಿ ಇವರ ಕೈಯಲ್ಲಿ ನಗದು ಹಣ 1200/- ರೂ ಇದ್ದು 14) ರಜನಿಕಾಂತ ತಂದೆ ಮಾಣಿಕಪ್ರಭು ಬಿರಾದಾರ ವಯ 21 ವರ್ಷ ಜಾ; ಲಿಂಗಾಯತ ಉ; ಒಕ್ಕಲುತನ ಸಾ; ಅಂಬೆಸಾಂಗವಿ ಇವರ ಕೈಯಲ್ಲಿ ನಗದು ಹಣ 1100/- ರೂ ಇದ್ದು 15) ವಿಕಾಶ ತಂದೆ ಕೀಶನರಾವ ಬಿರಾದಾರ ವಯ 25 ವರ್ಷ ಜಾ; ಮರಾಠಾ ಉ; ಒಕ್ಕಲುತನ ಸಾ; ಅಂಬೆಸಾಂಗವಿ ಇವರ ಕೈಯಲ್ಲಿ ನಗದು ಹಣ  900/- ರೂ ಇದ್ದು 16) ವೆಂಕಟ ತಂದೆ ರಾಮು ಜಾಧವ ವಯ 40 ವರ್ಷ ಜಾ; ಲಮಾಣಿ ಉ; ಕೂಲಿ ಕೆಲಸ ಸಾ; ಗೌಂಡಗಾವ ಥಾಂಡಾ ಇವರ ಕೈಯಲ್ಲಿ ನಗದು ಹಣ 1300/- ರೂ ಇದ್ದು 17) ತಾನಾಜಿ ತಂದೆ ಗುಂಡಾಜಿ ಬಿರಾದಾರ ವಯ 50 ವರ್ಷ ಜಾ; ಮರಾಠಾ ಉ; ಒಕ್ಕಲುತನ ಸಾ; ಅಂಬೆಸಾಂಗವಿ ಇವರ ಕೈಯಲ್ಲಿ ನಗದು ಹಣ 800/- ರೂ ಇದ್ದು, 18) ಮಹಾದಪ್ಪಾ ತಂದೆ ಶಂಕರೆಪ್ಪಾ ಪ್ರಭಾ ವಯ 46 ವರ್ಷ ಜಾ; ಲಿಂಗಾಯತ ಉ; ಒಕ್ಕಲುತನ ಸಾ; ಅಂಬೆಸಾಂಗವಿ ಇವರ ಕೈಯಲ್ಲಿ ನಗದು ಹಣ 1100/- ರೂ ಹೀಗೆ ಒಟ್ಟು 52 ಇಸ್ಪೀಟ ಎಲೇಗಳು ಮತ್ತು ಅವರ ಹತ್ತಿರ ಇರುವ 29,100/- ರೂ ಮತ್ತು ಎಲ್ಲರ ಮಧ್ಯ ಇರುವ 11,450 ರೂ ಹೀಗೆ ಎಲ್ಲಾ ಒಟ್ಟು 52 ಇಸ್ಪೀಟ ಎಲೆಗಳು,  40,550/- ರೂ ನಗದು ಹಣ ಜಪ್ತಿ ಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಹಗೆದುಕೊಂಡು  ಪೊಲೀಸ್ ಠಾಣೆಗೆ ಬಂದು ಪ್ರಕರಣ ದಾಖಲಿಸಿ ತನಿಕೆ ಕೈಕೊಳ್ಳಲಾಗಿದೆ

 

ಮೇಹಕರ್ ಪೊಲೀಸ್ ಠಾಣೆ ಅಪರಾಧ ಸಂಖ್ಯೆ : 67/2020 ಕಲಂ 87 ಕರ್ನಾಟಕ ಪೊಲೀಸ್ ಕಾಯ್ದೆ:-

ದಿನಾಂಕ;26/09/2020 ರಂದು 1030 ಗಂಟೆಗೆ ಪಿಎಸ್ಐ ರವರಿಗೆ ಖಚಿತ ಬಾತ್ಮಿ ಬಂದಿದೇನೆಂದ್ದರೆ, ಪಾಂಡರಿ ಗ್ರಾಮದ ಊರ ಒಳಗೆ ಹೋಗುವ ಸಾರ್ವಜನಿಕ ರೋಡಿನ ಬದಿಯಲ್ಲಿ ಕೆಲವು ಜನರು ಅಂದರ ಬಾಹರ ಅನ್ನುವ ನಸೀಬಿನ ಜೂಜಾಟ ಆಡುತ್ತಿದ್ದಾರೆಂದು ಖಚಿತ ಬಾತ್ಮಿ ಬಂದಿದ್ದು, ಪಿಎಸ್ಐ ರವರು ಸಿಬ್ಬಂದಿ ಹಾಗು ಪಂಚರೊಂದಿಗೆ 1215 ಗಂಟೆಗೆ ಪಾಂಡರಿ ಗ್ರಾಮದಲ್ಲಿ ಹೋಗುವಾಗ ರೋಡಿಗೆ ಜೀಪ ನಿಲ್ಲಿಸಿ ಜೀಪನ ಮರೆಯಲ್ಲಿ ನಿಂತು ನೋಡಲು ಅಲ್ಲಿ ಸಾರ್ವಜನಿಕ ರೋಡಿನ ಬದಿಯಲ್ಲಿ 05 ಜನರು ಗುಂಪಾಗಿ  ಕುಳಿತು  ಅಂದರ ಬಾಹಾರ ಅನ್ನುವ ನಸೀಬಿನ ಜೂಜಾಟ ಆಡುತ್ತಿದ್ದರು ಇದನ್ನು ಖಚಿತ ಪಡೆಯಿಸಿಕೊಂಡು ಸಿಬ್ಬಂದಿಯವರ ಸಹಾಯದಿಂದ ಅವರ ಮೇಲೆ 1230 ಗಂಟೆಗೆ ದಾಳಿ ಮಾಡಿ ಹಿಡಿದುಕೊಂಡು ಅವರಿಗೆ ಓಡಿ ಹೋಗದಂತೆ ಎಚ್ಚರಿಸಿ ಒಬ್ಬರಿಗೆ ಅವರ ಹೆಸರು ಕೇಳಿದಾಗ ಅವರುಗಳು ತಮ್ಮ ಹೆಸರು ಮತ್ತು ವಿಳಾಸ  1) ದತ್ತಾತ್ರಿ ತಂದೆ ಗುಣವಂತರಾವ ಮೇಹಕರೆ ವಯ: 54 ವರ್ಷ ಜಾ: ಮರಾಠಾ ಉ: ಒಕ್ಕಲುತನ ಸಾ: ಪಾಂಡರಿ 2) ತಾನಾಜಿ ತಂದೆ ಅಶೋಕರಾವ ಮೇಳಕುಂದೆ 39 ವರ್ಷ ಜಾ: ಮರಾಠಾ ಉ: ಒಕ್ಕಲುತನ ಸಾ: ಪಾಂಡರಿ 3) ದತ್ತಾ ತಂದೆ ಶಂಕರರಾವ ಹಲಸೆ ವಯ: 31 ವರ್ಷ ಜಾ: ಮರಾಠಾ ಉ: ಒಕ್ಕಲುತನ ಸಾ: ಪಾಂಡರಿ 4) ಪ್ರಶಾಂತ ತಂದೆ ಸುಗ್ರೀವ ಮುರುಮೆ ವಯ: 35 ವರ್ಷ ಜಾ: ಮರಾಠಾ ಉ: ಒಕ್ಕಲುತನ ಸಾ: ಪಾಂಡರಿ ಹಾಗು 5) ಸತೀಷ ತಂದೆ ಪಂಡರಿನಾಥ ರೋಡೆ ವಯ: 35 ವರ್ಷ ಜಾ: ಮರಾಠಾ ಉ: ಒಕ್ಕಲುತನ ಸಾ: ಪಾಂಡರಿ ಅಂತ ತಿಳಿಸಿದ್ದು   ನಂತರ ಎಲ್ಲರ ಮಧ್ಯದಲ್ಲಿ ಇರುವ ವಸ್ತುವಿನ ಬಗ್ಗೆ ಪರಿಶೀಲಿಸಿದಾ 52 ಇಸ್ಪಿಟ ಎಲೆಗಳು ಮತ್ತು ನಗದು ಹಣ 500/- ಇರುತ್ತದೆ. ನಂತರ ಅವರ ಅಂಗ ಝಡ್ತಿ ಮಾಡಲು 1) ದತ್ತಾತ್ರಿ ಇವರ ಹತ್ತಿರ 100/- ನಗದು ಹಣ 2) ತಾನಾಜಿ ಹತ್ತಿರ 200/- ರೂ 3) ದತ್ತಾ ಇವರ ಹತ್ತಿರ 50/- ರೂ 4) ಪ್ರಶಾಂತ ಹತ್ತಿರ 150/- ರೂ ಹಾಗೂ 5) ಸತೀಷ ಹತ್ತಿರ 100/- ಇರುತ್ತವೆ. ಇವೆಲ್ಲದರ ಬಗ್ಗೆ  ವಿಚಾರಿಸಿದಾಗ ನಾವು ಅಂದರ ಬಾಹರ ಅನ್ನುವ ನಸಿಬಿನ ಇಸ್ಪಿಟ ಜೂಜಾಟ ಆಡಲು ಬಳಸಿದ್ದು ಇರುತ್ತದೆ ಅಂತ ತಿಳಿಸಿದ್ದು ಇರುತ್ತದೆ. ನಂತರ 52 ಇಸ್ಲಿಟ ಎಲೆಗಳು , ಅವರೆಲ್ಲರ ಮಧ್ಯದ ನಗದು ಹಣ 500/- ಮತ್ತು ಅವರ ಅಂಗ ಝಡ್ತಿ ಮಾಡಿದಾಗ ದೊರೆತ ಹಣ 600/- ಎರಡು ಸೇರಿ  1100/-ರೂ ಹಣವನ್ನು ಪಂಚರ ಸಮಕ್ಷಮ ಜಪ್ತಿ ಮಾಡಿ ಆರೋಪಿತರನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಬಂದು ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

 

ಮನ್ನಾಏಖೆಳ್ಳಿ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ: 008/2020 ಕಲಂ. 279, 338 ಐಪಿಸಿ :-

ದಿನಾಂಕ: 26/09/2020 ರಂದು ರಾತ್ರಿ 20:40 ಗಂಟೆಗೆ ಸರಕಾರಿ ಆಸ್ಪತ್ರೆ ಮನ್ನಾಎಖೇಳ್ಳಿಯಿಂದ ಒಂದು ವಾಹನ ಅಪಘಾತ ಬಗ್ಗೆ ಎಮ್ ಎಲ್ ಸಿ ಮಾಹಿತಿ ಬಂದಿದ್ದು ಆಸ್ಪತ್ರೆಗೆ ಭೇಟ್ಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಶ್ರೀ ಲೊಕೇಶ ತಂದೆ ಶಂಕರ ಮೇಲ್ದೊಡ್ಡಿ ವಯ: 20 ವರ್ಷ ಸಾ: ಸಿರಕಟನಳ್ಳಿ ಇವರು ತನ್ನ ಹೇಳಿಕೆ ಫಿಯರ್ಾದು ನೀಡಿದ್ದು ಸಾರಂಶವೇನೆಂದರೆ ನಾನು ಹೈದ್ರಾಬಾದನ ಖಾಸಗಿ ಕಂಪನಿಯಲ್ಲಿ ಕೇಲಸ ಮಾಡಿಕೊಂಡು ಉಪಜೀವಿಸುತ್ತೆನೆ. ಅದೆ ರೀತಿ ನಮ್ಮೂರ ದಶರಥ ತಂದೆ ಚಂದ್ರಪ್ಪಾ ಕೊಂಡೆನವರ ಇವರು ಕೂಡಾ ನನ್ನ ಕಂಪನಿಯಲ್ಲಿ ಕೇಲಸ ಮಾಡಿಕೊಂಡಿದ್ದು ರಜೆ ಇದ್ದುದ್ದರಿಂದ ಇಬ್ಬರು ದಿನಾಂಕ: 26/09/2020 ರಂದು ದಶರಥ ಇತನ ಮೊಟರ ಸೈಕಲ್ ನಂ ಏಂ38/ಖ 4904 ನೇದರ ಮೇಲೆ ನಾನು ಹಾಗು ನಮ್ಮೂರ ದಶರಥ ಇಬ್ಬರು ಕೂಡಿ ಹೈದ್ರಾಬಾದನಿಂದ 04:00 ಪಿಎಮ್ ಗಂಟೆಗೆ ಬಿಟ್ಟು ರಾಹೆ ನಂ 65 ರ ಮುಖಾಂತರ ಮನ್ನಾಎಖೇಳ್ಳಿ ಗ್ರಾಮದ ಒಳಗಿನಿಂದ ಬರುತ್ತಿರುವಾಗ ದಶರಥ ಇತನು ಮೊಟರ ಸೈಕಲ್ ನಡೆಸುತ್ತಿದ್ದು ರಾತ್ರಿ 8:00 ಪಿಎಮ್ ಗಂಟೆಗೆ ಮನ್ನಾಎಖೇಳ್ಳಿ ಗ್ರಾಮದ ಬೈ ಪಾಸ ರೊಡಿನ ಮೇಲೆ ಫೆಂಡ್ಸ ದಾಬಾದ ಹತ್ತಿರ ಹೊಗುತ್ತಿದ್ದಾಗ ಹುಮನಾಬಾದ ಕಡೆಯಿಂದ ಒಬ್ಬ ಕಾರ ಚಾಲಕ ತನ್ನ ವಾಹನ ಅತಿ ವೇಗ ಹಾಗು ನೀಷ್ಕಾಳಜಿತನದಿಂದ ಚಲಾಯಿಸುತ್ತಾ ಬಂದು ನಮ್ಮ ಮೊಟರ ಸೈಕಲ್ಗೆ ಡಿಕ್ಕಿ ಮಾಡಿದ ಪರಿಣಾಮ ನಾನು ಹಾಗು ದಶರಥ ಇಬ್ಬರು ವಾಹನ ಸಮೇತ ರೊಡಿನ ಮೇಲೆ ಬಿದ್ದೆವು ನಮಗೆ ಡಿಕ್ಕಿ ಮಾಡಿದ ಕಾರ ನಂ ನೊಡಲು ಒಊ12/ಉಏ5837 ಇದ್ದು ಚಾಲಕನು ಡಿಕ್ಕಿ ಮಾಡಿದ ಕೂಡಲೆ ತನ್ನ ವಾಹನ ಸ್ಥಳದಲ್ಲಿಯೆ ಬಿಟ್ಟು ಓಡಿ ಹೊಗಿದ್ದು ಸದರಿ ಅಪಘಾತದಿಂದ ನನಗೆ ಬಲಕಾಲಿನ ತೊಡೆಯ ಮೇಲೆ ಭಾರಿ ಗುಪ್ತಗಾಯ, ಬಲಕೈ ಮೋಳಕೈ ಮೇಲೆ ರಕ್ತಗಾಯವಾಗಿದ್ದು ದಶರಥ ಇತನಿಗೆ ಬಲಕಾಲಿನ ಹಿಮ್ಮಡಿಯ ಮೇಲೆ ಭಾರಿ ರಕ್ತಗಾಯ ಹಾಗು ಬಲ ಮೊಳಕಾಲ ತೊಡೆಯ ಮೇಲೆ ಭಾರಿ ಗುಪ್ತಗಾಯವಾಗಿದ್ದು, ಘಟನೆ ನೊಡಿ ಗಾಯಗೊಂಡ ನಮಗೆ ಪೇಟ್ರೊಲಿಂಗ ಕರ್ತವ್ಯದಲ್ಲಿದ ರಾಹೆ ನಂ 65 ರ ಎಲ್&ಟಿ ಸಿಬ್ಬಂದಿಯವರು ಬಂದು ನಮಗೆ ಅವರ ಅಂಬುಲೆನ್ಸದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರ ಮನ್ನಾಎಖೇಳ್ಳಿಗೆ ತಂದು ಸೇರಿಕ ಮಾಡಿದ್ದು ಇರುತ್ತದೆ. ಕಾರಣ ನಮಗೆ ಡಿಕ್ಕಿ ಮಾಡಿ ಓಡಿ ಹೊದ ಕಾರ ನಂ ಒಊ12/ಉಏ5837  ನೇದರ ಚಾಲಕನ ವಿರುದ್ದ ಕಾನುನ ಕ್ರಮ ಜರುಗಿಸಲು ವಿನಂತಿ ಡಿಕ್ಕಿ ಮಾಡಿದ ಹೊದ ಕಾರ ಚಾಲಕನಿಗೆ ನೊಡಿದರೆ ಗುರುತಿಸುತ್ತೆನೆ.ಅಂತಾ ಕೊಟ್ಟ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

 

ಹಳ್ಳಿಖೇಡ (ಬಿ) ಪೊಲೀಸ ಠಾಣೆ ಪ್ರಕರಣ ಸಂಖ್ಯೆ : 115/2020 ಕಲಂ 287, 338 ಐಪಿಸಿ :-

ದಿನಾಂಕ : 26/09/2020 ರಂದು ಮದ್ಯಾಹ್ನ 1500 ಗಂಟೆಗೆ ಹಳ್ಳಿಖೇಡ[ಬಿ] ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಎಮ್.ಎಲ್.ಸಿ ಪತ್ರ ಸ್ವೀಕರಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ನಾಗಪ್ಪಾ ತಂದೆ ಮಾಣಿಕಪ್ಪಾ ಕೂಡಂಬಲ ಸಾ: ಕಬೀರಾಬಾದವಾಡಿ ರವರ ಬಾಯಿ ಮಾತಿನ ಫಿರ್ಯಾದು ಹೇಳಿಕೆಯನ್ನು ಸಾರಾಂಶವೆನೆಂದ್ದರೆ, ದಿನಾಂಕ: 26/09/2020 ರಂದು ಮುಂಜಾನೆ 1100 ಗಂಟೆ ಸುಮಾರಿಗೆ ನಾನು ಮತ್ತು ರಾಶಿ ಮಶೀನ್ ಮಾಲಿಕರಾದ ಓಂಕಾರ ತಂದೆ ತುಕರಾಮ ಹುಪ್ಪಳೆ ಇಬ್ಬರು ರಾಶಿ ಮಶೀನ್ ತೆಗೆದುಕೊಂಡು ನಮ್ಮೂರ ಅಶೋಕ ಮುರಾಳೆ ರವರ ಹೊಲಕ್ಕೆ ರಾಶಿ ಮಾಡುವ ಸಲುವಾಗಿ ಹೋಗಿರುತ್ತೇವೆ. ಅಶೋಕ ಮುರಾಳೆ ರವರ ಹೊಲದಲ್ಲಿ ಸೋಯಾ ರಾಶಿ ಮಾಡುವಾಗ ಅಶೋಕ ಮುರಾಳೆ ಮತ್ತು ನಾನು ಇಬ್ಬರು ಸೋಯಾವನ್ನು ರಾಶಿ ಮಶೀನದಲ್ಲಿ ಹಾಕುತ್ತಾ ರಾಶಿ ಮಾಡುವಾಗ ಮದ್ಯಾಹ್ನ ಅಂದಾಜು 02:00 ಗಂಟೆ ಸುಮಾರಿಗೆ ನಾನು ರಾಶಿ ಮಶೀನದಲ್ಲಿ ಸೋಯಾ ಹಾಕುವಾಗ ಒಮ್ಮೇಲೆ ನನ್ನ ಬಲಗೈ ಮುಂಗೈ ರಾಶಿ ಮಶೀನ್ ಒಳಗಡೆ ಸಿಲುಕಿಕೊಂಡಿದ್ದರಿಂದ ನನ್ನ ಬಲಗೈ ಮುಂಗೈಗೆ ಭಾರಿ ರಕ್ತಗಾಯವಾಗಿ ಜಜ್ಜಿದಂತೆ ಕಟ್ಟಾದ ರಕ್ತಗಾಯವಾಗಿರುತ್ತದೆ. ಆಗ ಅಲ್ಲೆ ಇದ್ದ ರಾಶಿ ಮಶೀನ್ ಮಾಲಿಕ ಓಂಕಾರ ತಂದೆ ತುಕರಾಮ ಹುಪ್ಪಳೆ ಇವರು ರಾಶಿ ಮಶೀನ್ ಬಂದ ಮಾಡಿ ನಂತರ ರಾಶಿ ಮಶೀನನಲ್ಲಿ ಸಿಲುಕಿಕೊಂಡಿದ್ದ ನನ್ನ ಕೈ ಹೊರ ತೆಗೆದಿರುತ್ತಾರೆ. ನಂತರ ಗಾಯಗೊಂಡ ನನಗೆ ಹೊಲದ ಮಾಲಿಕ ಅಶೋಕ ಮುರಾಳೆ ರವರು ಚಿಕಿತ್ಸೆ ಕುರಿತು ಹಳ್ಳಿಖೇಡ (ಬಿ) ಸರಕಾರಿ ಆಸ್ಪತ್ರೆಗೆ ತಂದು ಶೇರಿಕ ಮಾಡಿರುತ್ತಾರೆ. ಸದರಿ ಮಶೀನ್ ಮಾಲಿಕರಾದ ಓಂಕಾರ ಹುಪ್ಪಳೆ ರವರು ಸದರಿ ಮಶೀನ್ನಲ್ಲಿ ರಾಶಿ ಮಾಡುವಾಗ ಯಾವುದೇ ಮನುಷ್ಯನ ಪ್ರಾಣಕ್ಕೆ ಸಂಭವಿಸಬಹುದಾದ ಅಪಾಯವನ್ನು ತಡೆಯಲು ಬೇಕಾಗುವ ವ್ಯವಸ್ಥೆಯನ್ನು ಮಾಡದೆ ನಿರ್ಲಕ್ಷ್ಯ ವಹಿಸಿದ್ದರಿಂದ ಸದರಿ ಘಟನೆ ರಾಶಿ ಮಶೀನ್ ಮಾಲಿಕ ಓಂಕಾರ ತಂದೆ ತುಕರಾಮ ಹುಪ್ಪಳೆ ರವರ ನಿರ್ಲಕ್ಷ್ಯತನದಿಂದ ದಿನಾಂಕ: 26/09/2020 ರಂದು ಮದ್ಯಾಹ್ನ 02:00 ಗಂಟೆ ಸುಮಾರಿಗೆ ಕಬೀರಾಬಾದವಾಡಿ ಗ್ರಾಮ ಶಿವಾರ ಅಶೋಕ ಮುರಾಳೆ ರವರ ಹೊಲದಲ್ಲಿ ಸಂಭವಿಸಿದ್ದು, ಈ ಬಗ್ಗೆ ಓಂಕಾರ ತಂದೆ ತುಕರಾಮ ಹುಪ್ಪಳೆ ರವರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಕೊಟ್ಟ ಫಿಯರ್ಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

 

Saturday, September 26, 2020

KALABURAGI DISTRICT CRIME REPORTED 26-09-2020

  ಮಟಕಾ ಜೂಜಾಟ ಪ್ರಕರಣ

ಅಫಜಲಪೂರ ಪೊಲೀಸ ಠಾಣೆ 

   ದಿನಾಂಕ 25-09-2020 ರಂದು 7:40 ಪಿ.ಎಮ್ ಕ್ಕೆ ಮಾನ್ಯ ಪಿ.ಎಸ್.ಐ ಸಾಹೇಬರು ಠಾಣೆಗೆ ಬಂದು ಆರೋಪಿ ಮತ್ತು ಮುದ್ದೆ ಮಾಲು ಹಾಗೂ ವರದಿ ಹಾಜರು ಪಡಿಸಿದ್ದು ವರದಿ ಸಾರಾಂಶವೇನೆಂದರೆ ದಿನಾಂಕ: 25-09-2020 ರಂದು 5:00 ಪಿಎಮ್ ಕ್ಕೆ ನಾನು ಪೊಲೀಸ್ ಠಾಣೆಯಲ್ಲಿದ್ದಾಗ ಖಚಿತ ಮಾಹಿತಿ ಬಂದಿದ್ದೇನೆಂದರೆಮಾಶಾಳ ಗ್ರಾಮದ ಬಸ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದುಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು ಮಟಕಾ ಬರೆದುಕೊಳ್ಳುತ್ತಿದ್ದಾನೆ. ಅಂತಾ ಮಾಹಿತಿ ಬಂದಿದ್ದರಿಂದ ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾಶಾಳ ಗ್ರಾಮಕ್ಕೆ ಹೋಗಿ ಬಸನಿಲ್ದಾಣದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲುಬಸ ನಿಲ್ದಾಣದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಹೋಗಿ ಬರುವ ಜನಗಳಿಗೆ ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದುಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟುಮಟಕಾ ಬರೆದುಕೊಳ್ಳುತ್ತಿದ್ದನು. ಅದನ್ನು ಖಚಿತ ಪಡಿಸಿಕೊಂಡು ಆಗ ನಾನು ಹಾಗೂ ನಮ್ಮ ಸಿಬ್ಬಂದಿ ಜನರು ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಿಲಾಗಿ ಶ್ರೀಶೈಲ ತಂದೆ ಜೋತಿಬಾ ಕ್ಷತ್ರಿ ವಯ|| 35 ವರ್ಷ ಜಾ|| ಕಟಬರ್ ಉ|| ಕೂಲಿ ಸಾ|| ಮಾಶಾಳ ಗ್ರಾಮ ತಾ|| ಅಫಜಲಪೂರ ಅಂತಾ ತಿಳಿಸಿದ್ದುಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1) 1050/-  ರೂಪಾಯಿ ನಗದು ಹಣ ಹಾಗೂ 2) ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಹಾಗೂ 3) ಒಂದು ಪೆನ್ನ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಆರೋಪಿತನ ವಿರುದ್ದ ಕಾನೂನು ಕ್ರಮ ಕೈಕೊಳ್ಳಲು ಕೊಟ್ಟ ವರದಿ ಸಾರಾಂಶದ ಮೇಲಿಂದ ಅಫಜಲಪೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಮಟಕಾ ಜೂಜಾಟ ಪ್ರಕರಣ

ವಾಡಿ ಪೊಲೀಸ ಠಾಣೆ 

        ದಿನಾಂಕ:25/09/2020 ರಂದು 3.00 ಪಿ.ಎಮ್ ಕ್ಕೆ ಸರ್ಕಾರಿ ತರ್ಪೇಯಿಂದ ಶ್ರೀ ವಿಜಯಕುಮಾರ ಪಿ.ಎಸ.ಐ [ಕಾ.ಸು] ರವರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿ ಮತ್ತು ಮುದ್ದೇಮಾಲು ಮತ್ತು ಜ್ಞಾಪನ ಪತ್ರ ಹಾಜರುಪಡಿಸಿದ ಸಾರಾಂಶವೆನೇಂದರೆ, ವಾಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಬರುವ ವಾಡಿಯ ಶ್ರೀನಿವಾಸ ಚೌಕನಲ್ಲಿರುವ ಪಾನಡಬ್ಬಿಯ ಮುಂದೆ ರೋಡಿಗೆ ಒಬ್ಬ ವ್ಯಕ್ತಿ ನಿಂತುಕೊಂಡು ಜನರಿಂದ ಹಣ ಪಡೆದು ಒಂದು ರೂಪಾಯಿಗೆ 80/- ರೂಪಾಯಿ ಗೆಲ್ಲಿರಿ ಅದೃಷ್ಠದ ಆಟ ಆಡಿರಿ ಅಂತಾ ಕೂಗಾಡುತ್ತಾ ಮಟಕಾ ಅಂಕಿ ಸಂಖ್ಯೆ ಬರೆದು ಚೀಟಿ ಕೊಡುತ್ತಿದ್ದಾನೆ. ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಠಾಣೆಯ ಸಿಬ್ಬಂದಿ ಹಾಗು ಪಂಚರು ಜನರೊಂದಿಗೆ ಹೊರಟು ವಾಡಿಯ ಶ್ರೀನಿವಾಸ ಚೌಕ ಹತ್ತಿರ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಜೀಪನಿಂದ ಇಳಿದು ಸ್ವಲ್ಪ ಮುಂದೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತ್ತಿದ್ದನ್ನು ಖಚಿತ ಪಡಿಸಿಕೊಂಡು ಸದರಿಯವನ ಪಂಚರ ಸಮಕ್ಷಮ ದಾಳಿ ಮಾಡಿ ಸಿಬ್ಬಂದಿ ಸಹಾಯದಿಂದ ಹಿಡಿದು ಆತನಿಗೆ ವಿಚಾರಿಸಲು ತನ್ನಹೆಸರು ರಾಜು ತಂದೆ ಚಂದ್ರಾಮ ಹಾಗರಗುಂಡಗಿ ವಃ25ವರ್ಷ ಉಃಕೂಲಿಕೆಲಸ ಜಾಃಹರಿಜನ ಸಾಃಸೋನಾಬಾಯಿ ಏರಿಯಾ ವಾಡಿ ಅಂತಾ ತಿಳಿಸಿದನು. ಆತನ ವಶದಿಂದ 650 /- ರೂ ನಗದು ಹಣ ಮತ್ತು 01 ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿ ಹಾಗೂ ಒಂದು ಬಾಲ ಪೆನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಒಬ್ಬ ಆರೋಪಿ ಹಾಗೂ ಮುದ್ದೆಮಾಲು ಜಪ್ತಿ ಪಂಚನಾಮೆಯೊಂದಿಗೆ ಮರಳಿ ಠಾಣೆಗೆ ಬಂದು ಸದರಿ ಆರೋಪಿತನ ವಿರುದ್ದ ಕ್ರಮ ಕೈಕೊಳ್ಳಲು ಈ ಜ್ಞಾಪನ ಪತ್ರದ  ನೀಡಿದ ಸಾರಾಂಶದ ಮೇಲಿಂದ ವಾಡಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಇಸ್ಪೇಟ ಜೂಜಾಟ ಪ್ರಕರಣ

ವಾಡಿ ಪೊಲೀಸ ಠಾಣೆ 

                ದಿನಾಂಕ:25/09/2020 ರಂದು 06-30 ಪಿ.ಎಮ್ ಕ್ಕೆ ಸರ್ಕಾರಿ ತರ್ಪೇಯಿಂದ ಶ್ರೀ ವಿಜಯಕುಮಾರ ಪಿ.ಎಸ.ಐ [ಕಾ.ಸು] ರವರು ಠಾಣೆಗೆ ಹಾಜರಾಗಿ 05 ಜನ ಆರೋಪಿ ಮತ್ತು ಮುದ್ದೇಮಾಲುಜಪ್ತಿ ಪಂಚನಾಮೆ ಮತ್ತು ಜ್ಞಾಪನ ಪತ್ರ ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆದಿನಾಂಕ:25/09/2020 ರಂದು 03-10 ಪಿಎಮ್ ಸುಮಾರಿಗೆ ವಾಡಿ ಪೊಲಿಸ ಠಾಣಾ ವ್ಯಾಪ್ತಿಯಲ್ಲಿ ಹಾಬಾನಾಯಕ ತಾಂಡಾ ಬೇಳಗೇರಾ ಗ್ರಾಮದ ನಾಮದೇವ ರಾಠೋಡ ಇತನ ಅಂಗಡಿಯ ಮುಂದಿನ ಸಾರ್ವಜನಿಕ ಕಟ್ಟೆಯ ಮೇಲೆ  ಕೆಲವು ಜನರು ಕುಳಿತು ಪಣಕ್ಕೆ ಹಣ ಹಚ್ಚಿ ಇಸ್ಪೀಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದಿದ್ದು ನಾನು ಠಾಣೆಯ ಸಿಬ್ಬಂದಿ ಜನರಾದ  1) ಶ್ರೀ ದೊಡ್ಡಪ್ಪ ಸಿಪಿಸಿ-836 ] ಬಸಲಿಂಗಪ್ಪ ಸಿಪಿಸಿ-1135 3] ಶ್ರೀ ಮಧುಕರ ಸಿಪಿಸಿ-631 4] ಶ್ರೀ ಚನ್ನಬಸವ ಸಿಪಿಸಿ-180 ಮತ್ತು ಪಂಚ ಜನರೊಂದಿಗೆ ಹೊರಟು ನಾಮಾದೇವ ರಾಠೋಡ ರವರ ಅಂಗಡಿ ಸಮೀಪ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಕೆಳಗಿಳಿದು ಮರೆಯಲ್ಲಿ ನಿಂತು ನೋಡಲಾಗಿ ನಾಮದೇವ ರಾಠೋಡ ರವರ ಅಂಗಡಿಯ ಮುಂದಿನ ಸಾರ್ವಜನಿಕ ಕಟ್ಟೆಯ ಮೇಲೆ ಕೆಲವು ಜನರು ಗುಂಪಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಇಸ್ಪೀಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದುದ್ದನ್ನು ನೋಡಿ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸದರಿಯವರ ಮೇಲೆ ದಾಳಿ ಮಾಡಿ ಇಸ್ಟೇಟ ಜೂಜಾಟ ಆಡುತ್ತಿದ್ದು 05 ಜನರನ್ನು ಹಿಡಿದುಕೊಂಡಿದ್ದು ಅವರ ಹೆಸರು ವಿಚಾರಣೆ ಮಾಡಲಾಗಿ 1]ಪೋಮು ತಂದೆ ಕಿಶನ ಪವಾರ ವಯ:50 ವರ್ಷ ಉ:ಒಕ್ಕಲುತನ ಸಾ:ಬೇಳಗೆರಾ  2] ನೇಹರು ತಂದೆ ನಾಮದೇವ ರಾಠೋಡ ವಯ:47 ವರ್ಷ ಉ:ಒಕ್ಕಲುತನ ಸಾ:ಹಾಬಾನಾಯಕ ತಾಂಡಾ ಬೇಳಗೆರಾ 3] ಶಂಕರ ತಂದೆ ಸುಭಾಷ ರಾಠೋಡ ವಯ:55 ವರ್ಷ ಉ:ಒಕ್ಕಲುತನ ಜಾ:ಲಂಬಾಣಿ ಸಾ:ಹಾಬಾನಾಯಕ ತಾಂಡಾ ಬೇಳಗೆರಾ 4] ಸಾಯಿಬಣ್ಣಾ ತಂದೆ ರಾಮನಿಂಗಪ್ಪ ಕೊಟ್ಟರಕಿ ವಯ:43 ವರ್ಷ ಉ:ಒಕ್ಕಲುತನ ಜಾ:ಕಬ್ಬಲಿಗ ಸಾ:ಯಾಗಾಫೂರ 5] ಬಸಲಿಂಗಪ್ಪ ತಂದೆ ಭೀಮರಾಯ ಡೊಂಕನೂರ ವಯ:30 ವರ್ಷ ಉ:ಕೂಲಿ ಜಾ:ಬೇಡರ ಸಾ:ಬಾಚವಾರ ಸದರಿಯವರ ಅಂಗಶೋಧನೆಯಿಂದ 2200-00 ರೂ ಹಾಗೂ ಪಣಕ್ಕೆ ಹಚ್ಚಿದ ನಗದು ಹಣ 500/-ರೂಪಾಯಿ ಹೀಗೆ ಒಟ್ಟು 2700/- ರೂಪಾಯಿ ನಗದು ಹಣ ಹಾಗೂ 52 ಇಸ್ಪೇಟ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ನಂತರ ಆರೋಪಿ, ಮುದ್ದೆಮಾಲು ಮತ್ತು ಜಪ್ತಿ ಪಂಚನಾಮೆಯೊಂದಿಗೆ ಮರಳಿ 06-30 ಪಿಎಮ್ ಕ್ಕೆ ಠಾಣೆಗೆ ಬಂದು ಸದರಿ 05 ಜನ ಆರೋಪಿತರ ವಿರುದ್ದ ಕ್ರಮ ಕೈಕೊಳ್ಳಲು ನೀಡಿದ ಜ್ಞಾಪನ ಪತ್ರದ  ಸಾರಾಂಶದ ಮೇಲಿಂದ ವಾಡಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಮಟಕಾ ಜೂಜಾಟ ಪ್ರಕರಣ

1) ಶಹಾಬಾದ ನಗರ ಪೊಲೀಸ ಠಾಣೆ 

          ದಿನಾಂಕಃ 24/09/2020 ರಂದು 2-30 ಪಿ ಎಮ್.ಕ್ಕೆ ಪಿ.ಐ ಶಹಾಬಾದ ರವರು ಠಾಣೆಗೆ ಬಂದು ಒಬ್ಬ ಅರೋಪಿ, ಮುದ್ದೇಮಾಲು ಮತ್ತು ಜಪ್ತಿ ಪಂಚನಾಮೆಯೊಂದಿಗೆ ಜ್ಞಾಪನ ಪತ್ರ ನೀಡಿದ್ದು ಅದರ ಸಾರಂಶವೆನೆಂದರೆ ಶಹಾಬಾದ ಪಟ್ಟಣದ ವಿ ಪಿ ಚೌಕ ಹತ್ತಿರ  ಒಬ್ಬ ಮನುಷ್ಯ ಮಟಕಾ ನಂಬರ ಬರೆದುಕೊಳ್ಳುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಸಿಬ್ಬಂದಿ ಮತ್ತು ಪಂಚಜನರೊಂದಿಗೆ  ಶಹಾಬಾದ ವಿ ಪಿ ಚೌಕ ಹತ್ತಿರ ಹೋಗಿ  ಮನೆಯ ಮರೆಯಾಗಿ ನಿಂತು ನೋಡಲಾಗಿ ವಿ ಪಿ ಚೌಕ ಹತ್ತಿರ ಕಟ್ಟೆಯ ಮೇಲೆ ಒಬ್ಬ  ಮನುಷ್ಯ ಕುಳಿತು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು  ಅವನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಮಹ್ಮದ ಜುಬೇರ ತಂದೆ ಚಾಂದಪಾಶಾ ಶೇಖ ವಯಾ: 21 ವರ್ಷ ಉ: ಕಾರಪೆಂಟರ ಕೆಲಸ ಸಾ: ವಿ ಪಿ ಚೌಕ ಅಂತಾ ತಿಳಿಸಿದನು ಅವನಿಗೆ ಮಟಕಾ ನಂಬರ ಬರೆದುಕೊಂಡು ಯಾರಿಗೆ ನೀಡುತ್ತಿ ಅಂತಾ ವಿಚಾರಿಸಲು ಖಲೀಲ ಅಹ್ಮೇದ ತಂದೆ ಹಾಜಿಸಾಬ ಸಾ: ಬಸ ನಿಲ್ದಾಣದ ರೋಡ ಶಹಾಬಾದ  ಇತನಿಗೆ ನೀಡುತ್ತೇನೆ ಅಂತಾ ತಿಳಿಸಿದನು ಹಿಡಿದವನಿಗೆ  ಅಂಗ ಶೋದನೆ ಮಾಡಲಾಗಿ ಮಟಕಾ ಜೂಜಾಟಕ್ಕೆ ಸಂಬಂಧಪಟ್ಟ ನಗದು ಹಣ  480- 00 ರೂಪಾಯಿ  ಮತ್ತು ಒಂದು ಮಟಕಾ ನಂಬರ ಬರೇದ ಚೀಟಿ, ಒಂದು ಪೆನ್ನು  ಪಂಚರ ಸಮಕ್ಷಮದಲ್ಲಿ  ಜಪ್ತಿ ಪಂಚನಾಮೆಯನ್ನು ಕೈಗೊಂಡು ಆರೋಪಿತನ ವಿರುದ್ದ  ಸೂಕ್ತ ಕ್ರಮ ಜರುಗಿಸುವಂತೆ ನೀಡಿದ ಜ್ಞಾಪನ ಪತ್ರದ ಆಧಾರ ಮೇಲಿಂದ ಶಹಾಬಾದ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2) ಶಹಾಬಾದ ನಗರ ಪೊಲೀಸ ಠಾಣೆ 

           ದಿನಾಂಕಃ 24/09/2020  ರಂದು 6-15 ಪಿ ಎಮ್ ಕ್ಕೆ ಪಿ.ಐ ಶಹಾಬಾದ ರವರು ಠಾಣೆಗೆ ಬಂದು ಒಬ್ಬ ಅರೋಪಿ, ಮುದ್ದೇಮಾಲು ಮತ್ತು ಜಪ್ತಿಪಂಚನಾಮೆಯೊಂದಿಗೆ ಜ್ಞಾಪನ ಪತ್ರ ನೀಡಿದ್ದು ಅದರ ಸಾರಂಶವೆನೆಂದರೆ  ದಿನಾಂಕಃ 24/09/2020 ರಂದು 3-30 ಪಿ ಎಮ್ ಕ್ಕೆ ಠಾಣೆಯಲ್ಲಿದ್ದಾಗ ದೇವನ ತೆಗನೂರ ಗ್ರಾಮದ ಬಸ ನಿಲ್ದಾಣದ ಹತ್ತಿರ ಒಬ್ಬ ಮನುಷ್ಯ ಮಟಕಾ ನಂಬರ ಬರೆದುಕೊಳ್ಳುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಸಿಬ್ಬಂದಿ ಮತ್ತು ಪಂಚ ಜನರೊಂದಿಗೆ  ಠಾಣೆಯಿಂದ ಹೊರಟು ದೇವನ ತೆಗನೂರ ಗ್ರಾಮಕ್ಕೆ ಹೋಗಿ ಹೊಟೇಲ ಗೊಡೆಯ ಮರೆಯಾಗಿ ನಿಂತು ನೋಡಲಾಗಿ ಬಸ ನಿಲ್ದಾಣದ ಹತ್ತಿರ ಕಟ್ಟೆಯ ಮೇಲೆ ಒಬ್ಬ  ಮನುಷ್ಯ ಕುಳಿತು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು  ಅವನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಮಲ್ಲಿಕಾರ್ಜುನ ತಂದೆ ಶಿವಪ್ಪ ಜಮದಾರ ವಯಾ: 65 ವರ್ಷ ಉ: ಕೂಲಿ ಕೆಲಸ ಜಾ: ಕಬ್ಬಲಿಗಾ ಸಾ: ದೇವನ ತೆಗನೂರ ಅಂತಾ ತಿಳಿಸಿದನು ಅವನಿಗೆ  ಅಂಗ ಶೋದನೆ ಮಾಡಲಾಗಿ ಮಟಕಾ ಜೂಜಾಟಕ್ಕೆ ಸಂಬಂಧಪಟ್ಟ ನಗದು ಹಣ 650-00 ರೂಪಾಯಿ  ಮತ್ತು ಒಂದು ಮಟಕಾ ನಂಬರ ಬರೇದ ಚೀಟಿ, ಒಂದು ಪೆನ್ನು  ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆಯನ್ನು ಕೈಗೊಂಡು ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಕ್ರಮ ಜರುಗಿಸುವಂತೆ ನೀಡಿದ ಜ್ಞಾಪನ ಪತ್ರದ ಅಧಾರ ಮೇಲಿಂದ  ಶಹಾಬಾದ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

Friday, September 25, 2020

BIDAR DISTRICT DAILY CRIME UPDATE 25-09-2020

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 25-09-2020

ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 71/2020 ಕಲಂ 279, 304(ಎ) ಐಪಿಸಿ ಜೊತೆ 187 ಐಎಮ್.ವಿ. ಕಾಯ್ದೆ :-

ದಿನಾಂಕ 23/09/2020 ರಂದು ಫೀರ್ಯಾದಿ  ಶ್ರೀ ಅರ್ಬಾಸ್  ತಂದೆ ಮುಸ್ತಾಫಾ ಖಾನ,   ವಯ: 21 ವರ್ಷ, ಜಾತಿ: ಮುಸ್ಲಿಂ, : ಪಾನಶಾಪ ಅಂಗಡಿ  ಸಾ|| ರೋಹಿಲೆಗಲ್ಲಿ ದರ್ಗಾಪೂರ ಬೀದರ. ಬೊಮ್ಮಗೊಂಡೇಶ್ವರ ವೃತ್ತದ ಹತ್ತಿರ ಇರುವ ಆದಾಬ ಪಾನಶಾಪದಲ್ಲಿ ವ್ಯಾಪಾರ ಮಾಡಿಕೊಂಡು ಇದ್ದಾಗ, ಪಾನಶಾಪ ಅಂಗಡಿ ಮುಂದೆ ಒಬ್ಬ ಅಪರಿಚಿತ ಅರೆ ಹುಚ್ಚನಂತೆ ಕಂಡು ಬಂದ 45-50 ವರ್ಷದ ವ್ಯಕ್ತಿ ಬೊಮ್ಮಗೊಂಡೇಶ್ವರ ವೃತ್ತದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಸುಮಾರು ರಾತ್ರಿ 9:30 ಗಂಟೆಗೆ ಮೈಲೂರ ಕ್ರಾಸ್ ಕಡೆಯಿಂದ ಬೊಮ್ಮಗೊಂಡೇಶ್ವರ ವೃತ್ತದ ಕಡೆಗೆ ಅಪರಿಚಿತ ಆಟೋ ಚಾಲಕ ತನ್ನ ಆಟೋವನ್ನು ಅತೀ ವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಮಾಡಿ ಆಟೋ ಸಮೇತ ಅಂಬೇಡ್ಕರ ವೃತ್ತದ ಕಡೆಗೆ ಓಡಿ ಹೋಗಿರುತ್ತಾನೆ. ಪರಿಣಾಮ ಅಪರಿಚಿತ ವ್ಯಕ್ತಿ ಕೆಳಗೆ ಬಿದ್ದಾಗ ಅವನಿಗೆ ತಲೆಯಲ್ಲಿ ರಕ್ತಗುಪ್ತಗಾಯವಾಗಿ, ಎಡಕಿವಿಯಿಂದ ರಕ್ತ ಬಂದಿರುತ್ತದೆ. ಕಾಲಿನ ಬೆರಳುಗಳಿಗೆ ತರಚಿದ ರಕ್ತಗಾಯವಾಗಿರುತ್ತದೆ. ಅವನು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಆಗ ಫಿರ್ಯಾದಿ ಮತ್ತು ಅಲ್ಲೆ ಇರುವ ಮೆಕಾನಿಕ ಫಿರೋಜ ತಂದೆ ಬಾಬುಖಾನ ಸಾ: ಬಿಲಾಲ ಕಾಲೋನಿ ಬೀದರ ಇಬ್ಬರು ಕೂಡಿ 108 ಅಂಬುಲೆನ್ಸ ಕರೆಯಿಸಿ   ಬೀದರ ಸರಕಾರಿ ಆಸ್ಪತ್ರೆಗೆ ದಾಖಲ ಮಾಡಿದ್ದು ದಿನಾಂಕ 24.09.2020 ರಂದು ಮುಂಜಾನೆ 08:04 ಚಿಕಿತ್ಸೆ ಫಲಕಾರಿಗಾಯದೆ ಮೃತಪಟ್ಟಿರುತ್ತಾನೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 112/2020 ಕಲಂ 78(3) ಕೆ.ಪಿ. ಕಾಯ್ದೆ :-

ದಿನಾಂಕ: 24/09/2020 ರಂದು 1330 ಗಂಟೆಗೆ ಬೀದರ ನಗರದ ಸುಜಾತಾ ಬಾರ್ ಹತ್ತಿರ  ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಬಾಂಬೆ ಮಟ್ಕಾ ಎಂಬ ನಸೀಬಿನ ಮಟ್ಕಾ ಚೀಟಿ ನಡೆಸುತ್ತಿದ್ದಾನೆಂದು ಖಚಿತ ಭಾತ್ಮಿ ಮೇರೆಗೆ ಪಿಎಸ್.ಐ. ರವರು ಸಿಬ್ಬಂದಿಯೊಂದಿಗೆ   ಸುಜಾತಾ ಬಾರ್ ಹತ್ತಿರ ತಲುಪಿ ಅಲ್ಲಿ ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಬಾರ್ ಮುಂದೆ  ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಮಟ್ಕಾ ನಸೀಬಿನ ಜೂಜಾಟ 01 ರೂ. ಗೆ 08 ಅಂತಲೂ ಮತ್ತು 10 ರೂ. ಗೆ 80 ರೂ. ಅಂತಾ ಹೇಳುತ್ತಾ ಸಾರ್ವಜನಿಕರಿಂದ ದುಡ್ಡು ಪಡೆದುಕೊಳ್ಳುತ್ತಾ ಅವರಿಗೆ ಮಟ್ಕಾ ಚೀಟಿ ಬರೆದುಕೊಡುತ್ತಿದ್ದನ್ನು ನೋಡಿ ಖಚಿತಪಡಿಸಿಕೊಂಡು ಪಿಎಸಐ ಹಾಗೂ ಸಿಬ್ಬಂದಿಗಳು  ಪಂಚರ ಸಮಕ್ಷಮ ಹಿಡಿದು ವಿಚಾರಿಸಲಾಗಿ  ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ವ್ಯಕ್ತಿಯ ಹೆಸರು  ಸುಧೀರ ತಂದೆ ಬಳಿರಾಮ ವಯ:42 ವರ್ಷ ಜಾತಿ:ಎಸ್.ಸಿ.ಹೊಲೆಯ :ಕಿರಾಣಿ ವ್ಯಾಪಾರ ಸಾ/ಸಿದ್ರಾಮಯ್ಯ ಲೇಔಟ ಬೀದರ ಎಂದು  ತಿಳಿಸಿದ್ದುಈತನ ಅಂಗ ಝಡ್ತಿ ಮಾಡಲಾಗಿ ಅವನ ಹತ್ತಿರ ಒಟ್ಟು 1500/-ರೂ. ನಗದು ಹಣ,  4 ಮಟ್ಕಾ ಚೀಟಿಗಳುಮತ್ತು ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 121/2020 ಕಲಂ 78(6) ಕೆಪಿ ಕಾಯ್ದೆ :-

ದಿನಾಂಕ:24/09/2020 ರಂದು 1500 ಗಂಟೆಗೆ ಜಿ.ಎಮ್. ಪಾಟೀಲ್ ಪಿಎಸ್ಐ (ಕಾಸೂ) ಬಸವಕಲ್ಯಾಣ ನಗರ ಪೊಲೀಸ ಠಾಣೆಯಲ್ಲಿದ್ದಾಗ ಬಸವಕಲ್ಯಾಣ ನಗರದ ತ್ರೀಪೂರಾಂತ ಮಡಿವಾಳ ಚೌಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ಜನರು ನಿಂತುಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಐಪಿಯಲ್ ಟೂರ್ನಿಯ ಕ್ರಿಕೇಟ್ ಆಟದ ತಂಡಗಳ ಮೇಲೆ ಗೆಲವು ಮತ್ತು ಸೋಲಿನ ಬಗ್ಗೆ ಸಾರ್ವಜನಿಕರಿಂದ ಹಣ ಪಡೆದು ಬೆಟ್ಟಿಂಗ್ ಕಟ್ಟಿಕೊಂಡು ಹಣ ಪಡೆಯುತ್ತಿದ್ದಾರೆ ಅಂತಾ  ಮಾಹಿತಿ ಬಂದಿದರಿಂದ ಸಿಬ್ಬಂದಿಯೊಂದಿಗೆ ತ್ರೀಪೂರಾಂತ ಮಡಿವಾಳ ಚೌಕ ದಿಂದ 50 ಅಡಿ ಅಂತರದಲ್ಲಿ ಮರೆಯಲ್ಲಿ ಜೀಪ ನಿಲ್ಲಿಸಿ ಎಲ್ಲರು ಜೀಪನಿಂದ ಕೇಳಗೆ ಇಳಿದು ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ಅಲ್ಲಿ ಇಬ್ಬರು ಜನರು  ಸಾರ್ವಜನಿಕ ರಸ್ತೆಯ ಮೇಲೆ  ನಿಂತುಕೊಂಡಿದ್ದು ಅದರಲ್ಲಿ ಒಬ್ಬರು  ಹೋಗಿ ಬರುವ ಸಾರ್ವಜನಿಕರಿಗೆ ನಿಮ್ಮ  ಅದೃಷ್ಟವನ್ನು ಅವಲಿಂಬಿಸಿಕೊಳ್ಳಿ  ಇಂದು ನಡೆಯುತ್ತಿರುವ  ರಾಯಲ್ ಚಾಲೆಂಜರ ಬೆಂಗಳೂರ ಕ್ರಿಕೇಟ್ ತಂಡ ಹಾಗು ಕಿಂಗ್ಸ ಪಂಜಾಬ ಕ್ರಿಕೇಟ್ ತಂಡಗಳ ಸೋಲು ಗೇಲುವಿನ ಬಗ್ಗೆ ಜನರಿಗೆ ಈ ಎರಡು ಕ್ರಿಕೇಟ್ ತಂಡಗಳ ಬೆಟ್ಟಿಂಗ ಕಟ್ಟಿ ಎಂದು ಕೂಗಿ ಹೇಳುತಿದ್ದರು ಇನ್ನೂ ಒಬ್ಬ ಸಾರ್ವಜನಿಕರಿಂದ  ಹಣ ಪಡೆದು ಕೋಳ್ಳುತ್ತಿದ್ದನು ನೋಡಿ  ಅವರ ಮೇಲೆ ಸಮಯ 18:15 ಗಂಟೆಗೆ ಎಲ್ಲರು ಒಮ್ಮಲೆ ದಾಳಿ ಮಾಡಿ   1] ದೀಪಕ ತಂದೆ ನೂರೊಂದಪ್ಪಾ ಗುಡ್ಡಾ ವಯಸ್ಸು//33 ವರ್ಷ ಜಾತಿ//ಲಿಂಗಾಯತ  //ವ್ಯಾಪಾರ ಸಾ// ಗುಡ್ಡಾ ಕಾಲೋನಿ ಬಸವಕಲ್ಯಾಣ ಎಂದು ತಿಳಿಸಿದಾಗ ಇವನ ಅಂಗ ಶೋಧನೆ ಮಾಡಲು ಇವನ ಹತ್ತಿರ ನಗದು ಹಣ 20120/- ರೂಪಾಯಿ   2] ಅಕ್ತರಪಾಶಾ ತಂದೆ ಅಹ್ಮದಮಿಯ್ಯಾ ಶೇಖ್ ವಯಸ್ಸು//40 ವರ್ಷ ಜಾತಿ//ಮುಸ್ಲಿಂ  // ವ್ಯಾಪಾರ ಸಾ//ಬಿರಾದಾರ ಕಾಲೋನಿ ಬಸವಕಲ್ಯಾಣ ಎಂದು ತಿಳಿಸಿದಾಗ ಇವನ ಅಂಗ ಶೋಧನೆ ಮಾಡಲು ಇವನ ಹತ್ತಿರ ನಗದು ಹಣ 10,000/- ರೂಪಾಯಿ ಸಿಕ್ಕಿರುತ್ತವೆ, ಸದರಿ ಇಬ್ಬರು ಆರೋಪಿತರ ಹತ್ತಿರ ಸಿಕ್ಕ ಒಟ್ಟು ಹಣ 30,120/-ರೂಪಾಯಿ ನೇದ್ದವುಗಳನ್ನು ಜಪ್ತಿ ಮಾಡಿಕೊಂಡು ಅರೋಪಿತರ ವಿರುದ್ಧ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ. 

ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 128/2020 ಕಲಂ 457, 380 ಐಪಿಸಿ :-

ದಿನಾಂಕ 24/09/2020 ರಂದು 1100 ಗಂಟೆಗೆ ಶ್ರೀ ವೀರಭದ್ರಪ್ಪಾ ತಂದೆ ಕಲ್ಲಪ್ಪಾ ಬಂಬಳಗೆ ಸಾ; ಡೊಣಗಾಪೂರ ತಾ; ಭಾಲ್ಕಿ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ ಡೊಣಗಾಪೂರ ಗ್ರಾಮದ ಇವರ ಪತ್ನಿ  ಪಲ್ಲವಿ ರವರು ದಿನಾಂಕ 23/09/2020 ರಂದು ಸಾಯಂಕಾಲ ತನ್ನ ತವರು ಮನೆ ಭಾತಂಬ್ರಾ ಗ್ರಾಮಕ್ಕೆ ಹೋಗಿರುತ್ತಾಳೆ.  ರೂಮಿನಲ್ಲಿ ಇವರ ತಾಯಿಯವರು ಒಂದು ಕಬ್ಬಿಣದ ಪೆಟ್ಟಿಗೆಯಲ್ಲಿ ಬಂಗಾರ, ಬೆಳ್ಳಿ, ಹಣ ಹಾಗೂ ಬಟ್ಟೆಗಳು ಇಡುತ್ತಾರೆ.  ದಿನಾಂಕ 23/09/2020 ರಂದು ರಾತ್ರಿ 9 ಗಂಟೆಯ ಸುಮಾರಿಗೆ   ಮನೆಯಲ್ಲಿ ಫಿರ್ಯಾದಿ ಹಾಗೂ ತಂದೆ ಕಲ್ಲಪ್ಪಾ ಮತ್ತು ತಾಯಿ ಸುಗಮ್ಮಾ ರವರು ಊಟ ಮಾಡಿ ನಂತರ ರಾತ್ರಿ 11 ಗಂಟೆಯ ಸುಮಾರಿಗೆ ತಂದೆ ತಾಯಿಯವರು ಮನೆಯ ಪಡಸಾಲಿಯಲ್ಲಿ ಮಲಗಿಕೊಂಡರು. ಫೀರ್ಯಾದಿಯು ಬಲಗಡೆ ಇರುವ ಬೆಡ್ ರೂಮಿನಲ್ಲಿ ಮಲಗಿಕೊಂಡಿರುತ್ತಾರೆ ನಂತರ ದಿನಾಂಕ 24/09/2020 ರಂದು 0300 ಗಂಟೆಯ ಸುಮಾರಿಗೆ ನಮ್ಮ ತಾಯಿಯವರು ಒಮ್ಮೇಲೆ ಚಿರಾಡಿದ್ದರಿಂದ ನಾನು ಒಮ್ಮೇಲೆ ಎದ್ದು ರೂಮಿನ ಹೊರಗಡೆ ಬಂದು ನನ್ನ ತಾಯಿಯವರಿಗೆ ವಿಚಾರಿಸಲು ಅವರು ತಿಳಿಸಿದ್ದೇನೆಂದರೆ,   ಮುತ್ರವಿಸರ್ಜನೆ ಮಾಡಲು ಎದ್ದು ಮನೆಯ ಮುಖ್ಯ ಗೇಟ ತೆರೆಯಲು ಹೋದಾಗ ಬಾಗೀಲು ತೆರೆದಿದನ್ನು ನೋಡಿ ನಂತರ ಮನೆಯಲ್ಲಿ ಬಂದು ರೂಮಿಗೆ ನೋಡಲು ರೂಮಿನ ಬಾಗೀಲು ಸಹ ತೆರೆದಿದ್ದು ಇರುವುದ್ದನ್ನು ನೋಡಿ   ರೂಮಿನ ಒಳಗಡೆ ಹೋಗಿ ನೋಡಲು ಸುಟಕೇಸ ತೆರವು ಮಾಡಿ ಚಿಲ್ಲಾಪಲ್ಲಿ ಮಾಡಿದ್ದು ಇರುತ್ತದೆ.  ಮನೆಯಲ್ಲಿರುವ ಕಬ್ಬಿಣದ ಪೆಟ್ಟಿಗೆಯಲ್ಲಿರುವ 1) 2 1/2 ತೋಲಿ ಬಂಗಾರದ ಹಳೆ ನಾಣ ಅ;ಕಿ; 50,000/- ರೂ, 2) ಒಂದು ತೋಲಿಯ ಬಂಗಾರದ ಹಳೆ ಗುಂಡಿನ ಸರಾ ಅ;ಕಿ; 15000/- ರೂ, 3) 5 ಗ್ರಾಂ. ಬಂಗಾರದ ಹಳ್ಳವುಳ್ಳ ಒಂದು ಹಳೆ ಸುತ್ತುಂಗುರು ಅ;ಕಿ; 7000/- ರೂ, 4) ಒಂದು ತೋಲಿಯವುಳ್ಳ ಬೆಳ್ಳಿಯ ಹಳೆ 12 ನಾಣ್ಯಗಳು ಅ;ಕಿ; 4000/- ರೂ, .ಹಾಗೂ ನಗದು ಹಣ 1500/- ರೂ, ಹೀಗೆ ಎಲ್ಲಾ ಒಟ್ಟು 77,500/- ರೂ ಬೆಲೆ ಬಾಳುವ ಬಂಗಾರ, ಬೆಳ್ಳಿಯ ಅಭರಣಗಳು ಹಾಗೂ ನಗದು ಹಣ ದಿನಾಂಕ 23/09/2020 ರಂದು ರಾತ್ರಿ 11 ಗಂಟೆಯಿಂದ ದಿನಾಂಕ 24/09/2020 ರಂದು 0300 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ರಾತ್ರಿ ವೇಳೆಯಲ್ಲಿ  ಬಂಗಾ ಹಾಗೂ ಬೆಳ್ಳಿಯ ಅಭರಣಗಳು ಹಾಗೂ ನಗದು ಹಣ ಕಳವು ಮಾಡಿಕೊಂಡು ಪೆಟ್ಟಿಗೆ ಬಿಸಾಡಿ ಹೋಗಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.