ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ : ೨೭-೦೯-೨೦೨೦
ಬೀದರ ಗ್ರಾಮೀಣ ಠಾಣೆ ಪ್ರಕರಣ ಸಂಖ್ಯೆ : 43/2020 ಕಲಂ 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 25/09/2020 ರಂದು ಸಾಯಾಂಕಾಲ 6.30 ಗಂಟೆಯ ಸುಮಾರಿಗೆ ಫಿರ್ಯಾದಿ ಅಬ್ದುಲ ಖಯುಮ ತಂದೆ ಅಬ್ದುಲ ಗಫೂರ ಮುನಸಿವಾಲೆ ವಯ-28 ಉ|| ಅಟೋ ಚಾಲಕ ಸಾ|| ಅಷ್ಟುರ ದರ್ಗಾ ಇವರಿಗೆ ತಮ್ಮುರಿನ ಅಸ್ಲಂ ತಂದೆ ಖಾಜಾಮಿಯ್ಯ ರವರು ಫೊನ ಮಾಢಿ ಹೇಳೀದೆನೆಂದರೆ ಸಾಯಾಂಕಾಲ 6 ಗಂಟೆಗೆ ನಿಮ್ಮ ಅಣ್ಣ ಅಬ್ದುಲ ಕಲೀಂ ರವರು ದನಗಳು ಹೊಡೆದುಕೊಂಡು ಮನೆಗೆ ಬರುವಾಗ ಎದುರಿನಿಂದ ಯಾವುದೋ ಒಂದು ದ್ವೀ ಚಕ್ರ ವಾಹನದ ಚಾಲಕನು ಅಪಘಾತಪಡಿಸಿ ನಿಲ್ಲಿಸಿದೇ ಓಡಿ ಹೋಗಿದ್ದು ಅಪಘಾತದಿಂದ ಅಬ್ದುಲ ಕಲೀಂ ರವರಿಗೆ ತಲೆಯ ಹಿಂದೆ ಹತ್ತಿ ಭಾರಿ ರಕ್ತಗಾಯವಾಗಿರುತ್ತದೆ ಅಂತ ತಿಳಿಸಿದ ಮೇರೆಗೆ ಫಿರ್ಯಾದಿಯು ಕೂಡಲೇ ಘಟನೆ ಸ್ಥಳಕ್ಕೆ ಹೋಗಿ ನೋಡಲಾಗಿ ಅಲ್ಲಿ ನನ್ನ ಅಣ್ಣ ಅಬ್ದುಲ ಕಲೀಂ ರವರಿಗೆ ತಲೆಯ ಹಿಂದೆ ಹತ್ತಿ ಭಾರಿ ರಕ್ತಗಾಯ ಆಗಿದ್ದು ಮಾತನಾಡುವ ಸ್ಥಿಯಲ್ಲಿ ಇರಲಿಲ್ಲಾ. ಚಿಕಿತ್ಸೆ ಕುರಿತು 108 ಅಂಬುಲನ್ಸದಲ್ಲಿ ಬೀದರ ಭಾಲ್ಕೆ ಆಸ್ಪತ್ರೆಗೆ ದಾಖಲು ,ಮಾಡಿರುತ್ತೇನೆ.ಚಿಕಿತ್ಸೆ ಕಾಲಕ್ಕೆ ಅಬ್ದುಲ ಕಲೀಂ ರವರು ಗುಣಮುಖನಾಗದೇ ಇಂದು ರಾತ್ರಿ 12.30 ಗಂಟೆಗೆ ತೀರಿಕೊಂಡಿರುತ್ತಾನೆ, ನನ್ನ ಅಣ್ಣ ಅಬ್ದುಲ ಕಲೀಂ ರವರಿಗೆ ಯಾವುದೋ ಒಂದು ಅಪರಿಚಿತ ದ್ವೀಚಕ್ರ ವಾಹನದ ಚಾಲಕ ಅಪಘಾತಪಡಿಸಿ ಓಡಿ ಹೋಗಿದ್ದು ಕಾರಣ ಮಾನ್ಯರು ಮುಂದಿನ ಕಾನೂನೂ ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತ ಕೊಟ್ಟ ಹೇಳೀಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಬಗದಲ್ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ : 64/2020 ಕಲಂ 279, 337, 338 ಐಪಿಸಿ :-
ದಿನಾಂಕ:25-09-2020 ರಂದು ರಾತ್ರಿ 8:30 ಪಿ.ಎಂ ಗಂಟೆಯ ಸುಮಾರಿಗೆ ಗಾಯಳು ಫಿಯರ್ಾದಿ ಸುನೀಲ ತಂದೆ ಶಿವರಾಮ ತಗಣೆಕರ ಸಾ: ಬಗದಲ ಗ್ರಾಮ ತಾ:ಜಿ:ಬೀದರ ಮನೆಯಿಂದ ನಮ್ಮೂರ ಸೈಲೇಶ ಇತನ ಹೊಟಲಗೆ ಹಾಲು ತರಲು ಹೊಗುತ್ತಿರುವಾಗ ಬೀದರ-ಮನ್ನಾಏಖೇಳ್ಳಿ ರೋಡಿನ ಮೇಲೆ ಸೈಡಿಗೆ ನಡೆದುಕೊಂಡು ಹೊಗುತ್ತಿರುವಾಗ ಬಗದಲ ಚರ್ಚ ಕ್ರಾಸ್ ಹತ್ತಿರ ಹಿಂದೆಯಿಂದ ಅಂದರೆ ಮನ್ನಾಏಖೇಳ್ಳಿ ಕಡೆಯಿಂದ ಬರುತ್ತಿದ್ದ ಒಂದು ಮೊಟರ ಸೈಕಲ್ ನಂ. ಂಕ-09 ಃಓ 3871 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೆಗ ಹಾಗೂ ನಿಷ್ಕಾಳಜಿತನದಿಂದ ಮಾನವ ಜೀವಕ್ಕೆ ಅಪವಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಕಂಟ್ರೋಲ್ ಮಾಡದೆ ಒಮ್ಮಲೆ ಬಂದು ಸೈಡಿಗೆ ನಡೆದುಕೊಂಡು ಹೊಗುತ್ತಿದ್ದ ಫಿಯರ್ಾದಿಗೆ ಹಿಂದೆಯಿಂದ ಡಿಕ್ಕಿ ಮಾಡಿರುತ್ತಾನೆ. ಡಿಕ್ಕಿಯ ಪ್ರಯುಕ್ತ ನಾನು ಮತ್ತು ಮೊಟರ ಸೈಕಲ್ ಚಾಲಕ ಇಬ್ಬರೂ ರೋಡಿನ ಮೇಲೆ ಬಿದ್ದೇವು, ನನಗೆ ಬಲಗಾಲ ಮೊಳಕಾಲ ಕೆಳಗೆ ರಕ್ತಗಾಯ, ಬಲಗಾಲ ಹೆಬ್ಬರಳಿಗೆ ರಕ್ತಗಾಯ ತಲೆಯ ಹಿಂಬದಿಗೆ ರಕ್ತಗಾಯ, ಬಲಭಾಗದ ಟೊಂಕಿಗೆ ಗುಪ್ತಗಾಯ ಹಾಗೂ ನನ್ನ ಬಲ ಭುಜಕ್ಕೆ ರಕ್ತಗಾಯವಾಗಿರುತ್ತದೆ. ರಸ್ತೆ ಅಪಘಾತ ಪಡಿಸಿದ ಮೊಟರ ಸೈಕಲ್ ಚಾಲಕನ ಹೆಸರು ರವಿ ತಂದೆ ವಿಶ್ವನಾಥ ಹಲಬುಗರ್ೆ ವಯ: 45 ವರ್ಷ ಜಾ: ಲಿಂಗಾಯತ ಉ: ಒಕ್ಕಲುತನ ಸಾ: ಸಿಸರ್ಿ(ಎ) ಗ್ರಾಮ ಅಂತ ಗೊತ್ತಾಯಿತ್ತು, ಸದರಿಯವನಿಗೂ ಸಹ ರಕ್ತ ಅಲ್ಲಲ್ಲಿ ಗಾಯಗಳಾಗಿದ್ದಂತೆ ಕಂಡು ಬಂದಿರುತ್ತದೆ. ಘಟನೆ ನೋಡಿ ಅಲ್ಲಿಯೆ ಹೊಟೇಲ್ ನಲ್ಲಿದ್ದ ನನ್ನ ಸಹೊದರ ಮಾವನಾದ ಯಶೇಪ್ಪಾ ತಂದೆ ಪೀರಪ್ಪಾ ಶ್ಯಾಣೆನೊರ್ ವಯ: 50 ವರ್ಷ ಸಾ: ಬಂಬಳಗಿ ಮತ್ತು ವಿಷಯ ತಿಳಿದು ಅಲ್ಲಿಗೆ ಬಂದ ನನ್ನ ತಮ್ಮನಾದ ದಿಲೀಪ ತಂದೆ ಶಿವರಾಮ ತಗಣೆಕರ್ ವಯ: 30 ವರ್ಷ ರವರು ಗಾಯಗೊಂಡ ನಮ್ಮಿಬ್ಬರಿಗೆ 108 ಅಂಬ್ಯೂಲೇನ್ಸ್ ಮುಖಾಂತರ ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕ ಮಾಡಿರುತ್ತಾರೆ. ಕಾರಣ ನಡೆದುಕೊಂಡು ಹೊಗುತ್ತಿದ್ದ ನನಗೆ ಹಿಂದೆಯಿಂದ ಬಂದು ಡಿಕ್ಕಿ ಮಾಡಿದ ಮೊಟರ ಸೈಕಲ್ ನಂ. ಂಕ-09 ಃಓ 3871 ನೇದ್ದರ ಚಾಲಕನಾದ ರವಿ ಇತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತ ಕೊಟ್ಟ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಗಿದೆ.
ಹಳ್ಳಿಖೇಡ (ಬಿ) ಪೊಲೀಸ ಠಾಣೆ ಪ್ರಕರಣ ಸಂಖ್ಯೆ : 114/2020 ಕಲಂ 78 (3) ಕರ್ನಾಟಕ ಪೊಲೀಸ್ ಕಾಯ್ದೆ :-
ದಿನಾಂಕ 26/09/2020 ರಂದು ಮುಂಜಾನೆ ನಾನು ನಿಂಗಪ್ಪಾ ಮಣ್ಣೂರ ಪಿ.ಎಸ್.ಐ(ಕಾಸು) ಠಾಣೆಯಲ್ಲಿದ್ದಾಗ ದುಬಲಗುಂಡಿ ಗ್ರಾಮದ ಶ್ರೀ ಭವಾನಿ ಮಂದಿರದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ರಮೇಶ ತಂದೆ ಹಣಮಂತಪ್ಪಾ ವಾಡೇಕರ ಸಾ: ದುಬಲಗುಂಡಿ ಅವನು ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಸಿಬ್ಬಂದಿಯವರೊಂದಿಗೆ 1240 ಗಂಟೆಗೆ ದುಬಲಗುಂಡಿ ಗ್ರಾಮದ ಶ್ರೀ ಭವಾನಿ ಮಂದಿರದ ಹತ್ತಿರ ಸ್ವಲ್ಪ ದೂರದಲ್ಲಿ ಹೋಗಿ ಮರೆಯಲ್ಲಿ ಜೀಪ ನಿಲ್ಲಿಸಿ ನಾವೆಲ್ಲರು ಜೀಪನಿಂದ ಇಳಿದು ಮರೆಯಾಗಿ ನಿಂತು ನೋಡಲು ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಬಗ್ಗೆ ನೋಡಿ ಖಚಿತಪಡಿಸಿಕೊಂಡು ಪಿ.ಎಸ್.ಐ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ 1245 ಗಂಟೆಗೆ ಸದರಿಯವನ ಮೇಲೆ ದಾಳಿ ಮಾಡಲು ಮಟಕಾ ಚೀಟಿ ಬರೆಯಿಸಿಕೊಳ್ಳುತ್ತಿದ್ದ ಸಾರ್ವಜನಿಕರು ಓಡಿ ಹೋಗಿದ್ದು, ಮಟಕಾ ಬರೆದುಕೊಡುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡೆವು. ನಂತರ ಸದರಿ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ರಮೇಶ ತಂದೆ ಹಣಮಂತಪ್ಪಾ ವಾಡೇಕರ ವಯ: 43 ವರ್ಷ ಜಾತಿ: ವಡ್ಡರ ಉ: ಕೂಲಿ ಕೆಲಸ ಸಾ: ದುಬಲಗುಂಡಿ ಅಂತ ತಿಳಿಸಿದನು. ನಂತರ ಪಂಚರ ಸಮಕ್ಷಮ ಅವನ ಅಂಗ ಜಡ್ತಿ ಮಾಡಲಾಗಿ ಆತನ ಹತ್ತಿರ 1,440/- ರೂ. ನಗದು ಹಣ, 1 ಮಟಕಾ ಚೀಟಿ ಮತ್ತು 1 ಪೆನ್ ಸಿಕ್ಕಿದ್ದು ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಮುದ್ದೆ ಮಾಲು ಹಾಗು ಆರೋಪಿತನನ್ನು ತಾಬೆಗೆ ತೆಗೆದುಕೊಳ್ಳಲಾಯಿತು. ನಂತರ ಮರಳಿ 1415 ಗಂಟೆಗೆ ಠಾಣೆಗೆ ಬಂದು ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹುಲಸೂರ ಪೊಲೀಸ ಠಾಣೆ ಪ್ರಕರಣ ಸಂಖ್ಯೆ: 73/2020 ಕಲಂ 78 (3) ಕರ್ನಾಟಕ ಪೊಲೀಸ್ ಕಾಯ್ದೆ:-
ದಿನಾಂಕ 26/09/2020 ರಂದು ಗುಪ್ತ ಮಾಹಿತಿ ಮೇರೆಗೆ ಪಿಎಸ್ಐ ರವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಬೇಲೂರ ಗ್ರಾಮದ ಬಸವೇಶ್ವರ ಚೌಕದಿಂದ ಸ್ವಲ್ಪ ದೂರದಲ್ಲಿ 1645 ಗಂಟೆಗೆ ಜೀಪ ನಿಲ್ಲಿಸಿ ಸ್ವಲ್ಪ ಮುಂದೆ ನಡೆದುಕೊಂಡು ಹೋಗಿ ಮರೆಯಾಗಿ ನಿಂತು ನೋಡಲು ಬೇಲೂರ ಗ್ರಾಮದ ಸರಕಾರಿ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ 1 ರೂಪಾಯಿಗೆ 90 ರೂಪಾಯಿ ಕೊಡುವದಾಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರಿನ ಚಿಟಿ ಬರೆದುಕೊಳ್ಳುತಿರುವದನ್ನು ನೋಡಿ ಅವರ ಮೇಲೆ 1650 ಗಂಟೆಗೆ ದಾಳಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ವ್ಯಕ್ತಿಗೆ ಹಿಡಿದುಕೊಂಡು ಅವರ ಹೆಸರು ಮತ್ತು ವಿಳಾಸ ವಿಚಾರಿಸಲು 1] ಮಹಾರುದ್ರ ತಂದೆ ಮಾರುತಪ್ಪ ಹೊಳ್ಳೆ ವಯ: 45 ವರ್ಷ ಜಾತಿ: ಲಿಂಗಾಯತ ಉ: ಕೂಲಿಕೆಲಸ ಸಾ: ಬೇಲೂರ ಅಂತ ತಿಳಿಸಿದ್ದು, ಮುಂದುವರೆದು ವಿಚಾರಿಸಲು ತಿಳಿಸಿದ್ದೆನೆಂದರೆ, 1 ರೂಪಾಯಿಗೆ 90 ರೂಪಾಯಿಗಳು ಕೊಡುವದಾಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಕಲ್ಯಾಣಿ ಮಟಕಾ ನಂಬರಿನ ಚೀಟಿ ಬರೆದುಕೊಳ್ಳುತ್ತಿರುವದಾಗಿ ತಿಳಿಸಿದ್ದು ಮಹಾರುದ್ರ ಈತನ ಬಳಿ ಇದ್ದ 1 ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ್ನ ಮತ್ತು ನಗದು ಹಣ 1517 ರೂಪಾಯಿಗಳನ್ನು ಜಪ್ತಿ ಮಾಡೊ ಮಹಾರುದ್ರ ಈತನಿಗೆ ದಸ್ತಗಿರಿ ಮಾಡಿಕೊಂಡು ಠಾಣೆಗೆ ಬಂದು ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಪ್ರಕರಣ ಸಂಖ್ಯೆ ; 130/2020 ಕಲಂ 87 ಕರ್ನಾಟಕ ಪೊಲೀಸ್ ಕಾಯ್ದೆ:-
ದಿನಾಂಕ 26/09/2020 ರಂದು 0030 ಗಂಟೆಗೆ ನಾನು ಪೊಲೀಸ್ ಠಾಣೆಯಲ್ಲಿರುವಾಗ ನನಗೆ ಖಚಿತ ಮಾಹಿತಿ ಬಂದಿದ್ದೆನೆಂದರೆ ಉದಗೀರ-ಬೀದರ ರೋಡಿಗೆ ಇರುವ ಅಂಬೆಸಾಂಗವಿ ಶಿವಾರದಲ್ಲಿರುವ ಕೊಂಡಲ ಸಾವಕಾರ ರವರ ತಗಡದ ಶೇಡ್ಡಿನ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಲೈಟಿನ ಬೆಳಕಿನಲ್ಲಿ ಕೆಲವು ಜನರು ಹಣ ಹಚ್ಚಿ ಪಣತೊಟ್ಟು ಅಂದರ ಬಹಾರ ಎಂಬ ನಸಬೀನ ಇಸ್ಪೀಟ ಜೂಜಾಟಾ ಆಡುತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವ್ರು ಸಿಬ್ಬಂದಿ ಹಾಗೂ ಪಂಚರೊಂದಿಗೆ ದಿನಾಂಕ 26/09/2020 ರಂದು 0045 ಗಂಟೆಗೆ ಬಿಟ್ಟು ಅಂಬೆಸಾಂಗವಿ ಶಿವಾರದಲ್ಲಿ ಉದಗೀರ-ಬೀದರ ರೋಡಿಗೆ ಇರುವ ಕೊಂಡಲ ಸಾವಕಾರ ರವರ ತಗಡದ ಶೇಡ್ಡಿನ ಸ್ವಲ್ಪ ದೂರುದಲ್ಲಿ 0100 ಗಂಟೆಗೆ ಹೋಗಿ ಜೀಪನ್ನು ಮರೆಯಾಗಿ ನಿಲ್ಲಿಸಿ ಎಲ್ಲರು ಜೀಪಿನಿಂದ ಕೆಳಗೆ ಇಳಿದ್ದು ಎಲ್ಲರು ನಡೆದುಕೊಂಡು ಕೊಂಡಲ ಸಾವಕಾರ ರವರ ತಗಡದ ಶೇಡ್ಡಿನ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ತಗಡದ ಶೇಡ್ಡಿನ ಲೈಟಿನ ಬೆಳಕಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ 18 ಜನರು ದುAಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಹಾರ ಎಂಬ ನಸಿಬಿನ ಜೂಜಾಟಾ ಆಡುತಿದ್ದ ಬಗ್ಗೆ ಖಚೀತ ಪಡಿಸಿಕೊಂಡು ಸದರಿ ವ್ಯಕ್ತಿಗಳ ಮೇಲೆ ಪಂಚರ ಸಮಕ್ಷಮ 01;15 ಗಂಟೆಗೆ ಪಿ.ಎಸ್.ಐ ರವರು ದಾಳಿ ಮಾಡಿ ಸದರಿ ವ್ಯಕ್ತಿಗಳಿಗೆ ಸಿಬ್ಬಂದಿಯವರ ಸಹಾಯದಿಂದ ಹಿಡಿದು ಅವರ ಹೆಸರು ಮತ್ತು ವಿಳಾಸ ವಿಚಾರಿಸಲು 1) ಗುನಾಜಿ ತಂದೆ ರಾಮರಾವ ಜಾಧವ ವಯ 39 ವರ್ಷ ಜಾ; ಲಮಾಣಿ ಉ; ವ್ಯಾಪಾರ ಸಾ; ಗೌಂಡಗಾಂವ ಥಾಂಡಾ ಇವರ ಕೈಯಲ್ಲಿ 52 ಎಲೆಗಳು ಹಾಗೂ ನಗದು ಹಣ 10900/- ರೂ ಇದ್ದು 2) ವಿಠಲ ತಂದೆ ರಾಮರಾವ ಪಾಟೀಲ ವಯ 35 ವರ್ಷ ಜಾ; ಮರಾಠಾ ಉ; ಒಕ್ಕಲುತನ ಸಾ; ಅಂಬೆಸಾಂಗವಿ ಇವರ ಕೈಯಲ್ಲಿ ನಗದು ಹಣ 700 ರೂ ಇದ್ದು 3) ಮಲ್ಲಿಕಾಜರ್ುನ ತಂದೆ ಸುರ್ಯಕಾಂತ ಮಲಗೊಂಡಾ ವಯ 25 ವರ್ಷ ಜಾ; ಕುರುಬ ಉ; ಡ್ರೈವರ ಕೆಲಸ ಸಾ; ಅಂಬೆಸಾಂಗವಿ ಇವರ ಕೈಯಲ್ಲಿ ನಗದು ಹಣ 800/- ರೂ ಇದ್ದು 4) ಯಶವಂತ ತಂದೆ ತಾನಾಜಿ ಮಾನೆ ವಯ 21 ವರ್ಷ ಜಾ; ಮರಾಠಾ ಉ; ಒಕ್ಕಲುತನ ಸಾ; ಅಂಬೆಸಾಂಗವಿ ಇವರ ಕೈಯಲ್ಲಿ ನಗದು ಹಣ 1100 ರೂ ಇದ್ದು 5) ಗಂಗಶೇಟ್ಟಿ ತಂದೆ ಸನ್ಮೂಖಪ್ಪಾ ಪ್ರಭಾ ವಯ 28 ವರ್ಷ ಜಾ; ಲಿಂಗಾಯತ ಉ; ಒಕ್ಕಲುತನ ಸಾ; ಅಂಬೆಸಾಂಗವಿ ಇವರ ಕೈಯಲ್ಲಿ ನಗದು ಹಣ 1000/- ರೂ ಇದ್ದು 6) ವಿನೋದ ತಂದೆ ತಾನಾಜಿರಾವ ಮಾನೆ ವಯ 28 ವರ್ಷ ಜಾ; ಮರಾಠಾ ಉ; ಒಕ್ಕಲುತನ ಸಾ; ಅಂಬೆಸಾಂಗವಿ ಇವರ ಕೈಯಲ್ಲಿ ನಗದು ಹಣ 1100 ರೂ ಇದ್ದು, 7) ಗಂಗಾರಾಮ ತಂದೆ ಕೀಶನ ಚವ್ಹಾಣ ವಯ 28 ವರ್ಷ ಜಾ; ಲಮಾಣಿ ಉ; ಕೂಲಿ ಕೆಲಸ ಸಾ; ಎರಾಗಡ್ಡಾ ಬಂಜಾರಾ ನಗರ ಹೈದ್ರಾಬಾದ ಇವರ ಕೈಯಲ್ಲಿ ನಗದು ಹಣ 1500/- ರೂ ಇದ್ದು 8) ಆಕಾಶ ತಂದೆ ಕೊಂಡಲರಾವ ಬಿರಾದಾರ ವಯ 21 ವರ್ಷ ಜಾ; ಮರಾಠಾ ಉ; ಕೂಲಿ ಕೆಲಸ ಸಾ; ಅಂಬೆಸಾಂಗವಿ ಇವರ ಕೈಯಲ್ಲಿ ನಗದು ಹಣ 1400/- ರೂ ಇದ್ದು, 9) ಮಹೇಶ ತಂದೆ ನ್ಯಾನೋಬಾ ಜಾಧವ ವಯ 21 ವರ್ಷ ಜಾ; ಲಮಾಣಿ ಉ; ಕೂಲಿ ಕೆಲಸ ಸಾ; ಅಂಬೆಸಾಂಗವಿ ಇವರ ಕೈಯಲ್ಲಿ ನಗದು ಹಣ 1200/- ರೂ ಇದ್ದು 10) ರಾಹೂಲ ತಂದೆ ಮಲ್ಲಿಕಾಜರ್ುನ ಬಿರಾದಾರ ವಯ 21 ವರ್ಷ ಜಾ; ಲಿಂಗಾಯತ ಉ; ಕೂಲಿ ಕೆಲಸ ಸಾ; ಅಂಬೆಸಾಂಗವಿ ಇವರ ಕೈಯಲ್ಲಿ ನಗದು ಹಣ 900/- ರೂ ಇದ್ದು 11) ಕೃಷ್ಣಾ ತಂದೆ ರಾಗೋಬಾ ಜಿಪಾರೆ ವಯ 24 ವರ್ಷ ಜಾ; ಮರಾಠಾ ಉ; ಒಕ್ಕಲುತನ ಸಾ; ಅಂಬೆಸಾಂಗವಿ ಇವರ ಕೈಯಲ್ಲಿ ನಗದು ಹಣ 1100/- ರೂ ಇದ್ದು 12) ನಟರಾಜ ತಂದೆ ಓಂಕಾರ ಬಿರಾದಾರ ವಯ 21 ವರ್ಷ ಜಾ; ಲಿಂಗಾಯತ ಉ; ಒಕ್ಕಲುತನ ಸಾ; ಅಂಬೆಸಾಂಗವಿ ಇವರ ಕೈಯಲ್ಲಿ ನಗದು ಹಣ 1000/- ರೂ ಇದ್ದು, 13) ಭೀಮ ತಂದೆ ಜಗನ್ನಾಥರಾವ ಖಾಶೆಂಪೂರೆ ವಯ 24 ವರ್ಷ ಜಾ; ಮರಾಠಾ ಉ; ಮೇಕಾನಿಕ ಸಾ; ಅಂಬೆಸಾಂಗವಿ ಇವರ ಕೈಯಲ್ಲಿ ನಗದು ಹಣ 1200/- ರೂ ಇದ್ದು 14) ರಜನಿಕಾಂತ ತಂದೆ ಮಾಣಿಕಪ್ರಭು ಬಿರಾದಾರ ವಯ 21 ವರ್ಷ ಜಾ; ಲಿಂಗಾಯತ ಉ; ಒಕ್ಕಲುತನ ಸಾ; ಅಂಬೆಸಾಂಗವಿ ಇವರ ಕೈಯಲ್ಲಿ ನಗದು ಹಣ 1100/- ರೂ ಇದ್ದು 15) ವಿಕಾಶ ತಂದೆ ಕೀಶನರಾವ ಬಿರಾದಾರ ವಯ 25 ವರ್ಷ ಜಾ; ಮರಾಠಾ ಉ; ಒಕ್ಕಲುತನ ಸಾ; ಅಂಬೆಸಾಂಗವಿ ಇವರ ಕೈಯಲ್ಲಿ ನಗದು ಹಣ 900/- ರೂ ಇದ್ದು 16) ವೆಂಕಟ ತಂದೆ ರಾಮು ಜಾಧವ ವಯ 40 ವರ್ಷ ಜಾ; ಲಮಾಣಿ ಉ; ಕೂಲಿ ಕೆಲಸ ಸಾ; ಗೌಂಡಗಾವ ಥಾಂಡಾ ಇವರ ಕೈಯಲ್ಲಿ ನಗದು ಹಣ 1300/- ರೂ ಇದ್ದು 17) ತಾನಾಜಿ ತಂದೆ ಗುಂಡಾಜಿ ಬಿರಾದಾರ ವಯ 50 ವರ್ಷ ಜಾ; ಮರಾಠಾ ಉ; ಒಕ್ಕಲುತನ ಸಾ; ಅಂಬೆಸಾಂಗವಿ ಇವರ ಕೈಯಲ್ಲಿ ನಗದು ಹಣ 800/- ರೂ ಇದ್ದು, 18) ಮಹಾದಪ್ಪಾ ತಂದೆ ಶಂಕರೆಪ್ಪಾ ಪ್ರಭಾ ವಯ 46 ವರ್ಷ ಜಾ; ಲಿಂಗಾಯತ ಉ; ಒಕ್ಕಲುತನ ಸಾ; ಅಂಬೆಸಾಂಗವಿ ಇವರ ಕೈಯಲ್ಲಿ ನಗದು ಹಣ 1100/- ರೂ ಹೀಗೆ ಒಟ್ಟು 52 ಇಸ್ಪೀಟ ಎಲೇಗಳು ಮತ್ತು ಅವರ ಹತ್ತಿರ ಇರುವ 29,100/- ರೂ ಮತ್ತು ಎಲ್ಲರ ಮಧ್ಯ ಇರುವ 11,450 ರೂ ಹೀಗೆ ಎಲ್ಲಾ ಒಟ್ಟು 52 ಇಸ್ಪೀಟ ಎಲೆಗಳು, 40,550/- ರೂ ನಗದು ಹಣ ಜಪ್ತಿ ಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಹಗೆದುಕೊಂಡು ಪೊಲೀಸ್ ಠಾಣೆಗೆ ಬಂದು ಪ್ರಕರಣ ದಾಖಲಿಸಿ ತನಿಕೆ ಕೈಕೊಳ್ಳಲಾಗಿದೆ
ಮೇಹಕರ್ ಪೊಲೀಸ್ ಠಾಣೆ ಅಪರಾಧ ಸಂಖ್ಯೆ : 67/2020 ಕಲಂ 87 ಕರ್ನಾಟಕ ಪೊಲೀಸ್ ಕಾಯ್ದೆ:-
ದಿನಾಂಕ;26/09/2020 ರಂದು 1030 ಗಂಟೆಗೆ ಪಿಎಸ್ಐ ರವರಿಗೆ ಖಚಿತ ಬಾತ್ಮಿ ಬಂದಿದೇನೆಂದ್ದರೆ, ಪಾಂಡರಿ ಗ್ರಾಮದ ಊರ ಒಳಗೆ ಹೋಗುವ ಸಾರ್ವಜನಿಕ ರೋಡಿನ ಬದಿಯಲ್ಲಿ ಕೆಲವು ಜನರು ಅಂದರ ಬಾಹರ ಅನ್ನುವ ನಸೀಬಿನ ಜೂಜಾಟ ಆಡುತ್ತಿದ್ದಾರೆಂದು ಖಚಿತ ಬಾತ್ಮಿ ಬಂದಿದ್ದು, ಪಿಎಸ್ಐ ರವರು ಸಿಬ್ಬಂದಿ ಹಾಗು ಪಂಚರೊಂದಿಗೆ 1215 ಗಂಟೆಗೆ ಪಾಂಡರಿ ಗ್ರಾಮದಲ್ಲಿ ಹೋಗುವಾಗ ರೋಡಿಗೆ ಜೀಪ ನಿಲ್ಲಿಸಿ ಜೀಪನ ಮರೆಯಲ್ಲಿ ನಿಂತು ನೋಡಲು ಅಲ್ಲಿ ಸಾರ್ವಜನಿಕ ರೋಡಿನ ಬದಿಯಲ್ಲಿ 05 ಜನರು ಗುಂಪಾಗಿ ಕುಳಿತು ಅಂದರ ಬಾಹಾರ ಅನ್ನುವ ನಸೀಬಿನ ಜೂಜಾಟ ಆಡುತ್ತಿದ್ದರು ಇದನ್ನು ಖಚಿತ ಪಡೆಯಿಸಿಕೊಂಡು ಸಿಬ್ಬಂದಿಯವರ ಸಹಾಯದಿಂದ ಅವರ ಮೇಲೆ 1230 ಗಂಟೆಗೆ ದಾಳಿ ಮಾಡಿ ಹಿಡಿದುಕೊಂಡು ಅವರಿಗೆ ಓಡಿ ಹೋಗದಂತೆ ಎಚ್ಚರಿಸಿ ಒಬ್ಬರಿಗೆ ಅವರ ಹೆಸರು ಕೇಳಿದಾಗ ಅವರುಗಳು ತಮ್ಮ ಹೆಸರು ಮತ್ತು ವಿಳಾಸ 1) ದತ್ತಾತ್ರಿ ತಂದೆ ಗುಣವಂತರಾವ ಮೇಹಕರೆ ವಯ: 54 ವರ್ಷ ಜಾ: ಮರಾಠಾ ಉ: ಒಕ್ಕಲುತನ ಸಾ: ಪಾಂಡರಿ 2) ತಾನಾಜಿ ತಂದೆ ಅಶೋಕರಾವ ಮೇಳಕುಂದೆ 39 ವರ್ಷ ಜಾ: ಮರಾಠಾ ಉ: ಒಕ್ಕಲುತನ ಸಾ: ಪಾಂಡರಿ 3) ದತ್ತಾ ತಂದೆ ಶಂಕರರಾವ ಹಲಸೆ ವಯ: 31 ವರ್ಷ ಜಾ: ಮರಾಠಾ ಉ: ಒಕ್ಕಲುತನ ಸಾ: ಪಾಂಡರಿ 4) ಪ್ರಶಾಂತ ತಂದೆ ಸುಗ್ರೀವ ಮುರುಮೆ ವಯ: 35 ವರ್ಷ ಜಾ: ಮರಾಠಾ ಉ: ಒಕ್ಕಲುತನ ಸಾ: ಪಾಂಡರಿ ಹಾಗು 5) ಸತೀಷ ತಂದೆ ಪಂಡರಿನಾಥ ರೋಡೆ ವಯ: 35 ವರ್ಷ ಜಾ: ಮರಾಠಾ ಉ: ಒಕ್ಕಲುತನ ಸಾ: ಪಾಂಡರಿ ಅಂತ ತಿಳಿಸಿದ್ದು ನಂತರ ಎಲ್ಲರ ಮಧ್ಯದಲ್ಲಿ ಇರುವ ವಸ್ತುವಿನ ಬಗ್ಗೆ ಪರಿಶೀಲಿಸಿದಾ 52 ಇಸ್ಪಿಟ ಎಲೆಗಳು ಮತ್ತು ನಗದು ಹಣ 500/- ಇರುತ್ತದೆ. ನಂತರ ಅವರ ಅಂಗ ಝಡ್ತಿ ಮಾಡಲು 1) ದತ್ತಾತ್ರಿ ಇವರ ಹತ್ತಿರ 100/- ನಗದು ಹಣ 2) ತಾನಾಜಿ ಹತ್ತಿರ 200/- ರೂ 3) ದತ್ತಾ ಇವರ ಹತ್ತಿರ 50/- ರೂ 4) ಪ್ರಶಾಂತ ಹತ್ತಿರ 150/- ರೂ ಹಾಗೂ 5) ಸತೀಷ ಹತ್ತಿರ 100/- ಇರುತ್ತವೆ. ಇವೆಲ್ಲದರ ಬಗ್ಗೆ ವಿಚಾರಿಸಿದಾಗ ನಾವು ಅಂದರ ಬಾಹರ ಅನ್ನುವ ನಸಿಬಿನ ಇಸ್ಪಿಟ ಜೂಜಾಟ ಆಡಲು ಬಳಸಿದ್ದು ಇರುತ್ತದೆ ಅಂತ ತಿಳಿಸಿದ್ದು ಇರುತ್ತದೆ. ನಂತರ 52 ಇಸ್ಲಿಟ ಎಲೆಗಳು , ಅವರೆಲ್ಲರ ಮಧ್ಯದ ನಗದು ಹಣ 500/- ಮತ್ತು ಅವರ ಅಂಗ ಝಡ್ತಿ ಮಾಡಿದಾಗ ದೊರೆತ ಹಣ 600/- ಎರಡು ಸೇರಿ 1100/-ರೂ ಹಣವನ್ನು ಪಂಚರ ಸಮಕ್ಷಮ ಜಪ್ತಿ ಮಾಡಿ ಆರೋಪಿತರನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಬಂದು ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮನ್ನಾಏಖೆಳ್ಳಿ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ: 008/2020 ಕಲಂ. 279, 338 ಐಪಿಸಿ :-
ದಿನಾಂಕ: 26/09/2020 ರಂದು ರಾತ್ರಿ 20:40 ಗಂಟೆಗೆ ಸರಕಾರಿ ಆಸ್ಪತ್ರೆ ಮನ್ನಾಎಖೇಳ್ಳಿಯಿಂದ ಒಂದು ವಾಹನ ಅಪಘಾತ ಬಗ್ಗೆ ಎಮ್ ಎಲ್ ಸಿ ಮಾಹಿತಿ ಬಂದಿದ್ದು ಆಸ್ಪತ್ರೆಗೆ ಭೇಟ್ಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಶ್ರೀ ಲೊಕೇಶ ತಂದೆ ಶಂಕರ ಮೇಲ್ದೊಡ್ಡಿ ವಯ: 20 ವರ್ಷ ಸಾ: ಸಿರಕಟನಳ್ಳಿ ಇವರು ತನ್ನ ಹೇಳಿಕೆ ಫಿಯರ್ಾದು ನೀಡಿದ್ದು ಸಾರಂಶವೇನೆಂದರೆ ನಾನು ಹೈದ್ರಾಬಾದನ ಖಾಸಗಿ ಕಂಪನಿಯಲ್ಲಿ ಕೇಲಸ ಮಾಡಿಕೊಂಡು ಉಪಜೀವಿಸುತ್ತೆನೆ. ಅದೆ ರೀತಿ ನಮ್ಮೂರ ದಶರಥ ತಂದೆ ಚಂದ್ರಪ್ಪಾ ಕೊಂಡೆನವರ ಇವರು ಕೂಡಾ ನನ್ನ ಕಂಪನಿಯಲ್ಲಿ ಕೇಲಸ ಮಾಡಿಕೊಂಡಿದ್ದು ರಜೆ ಇದ್ದುದ್ದರಿಂದ ಇಬ್ಬರು ದಿನಾಂಕ: 26/09/2020 ರಂದು ದಶರಥ ಇತನ ಮೊಟರ ಸೈಕಲ್ ನಂ ಏಂ38/ಖ 4904 ನೇದರ ಮೇಲೆ ನಾನು ಹಾಗು ನಮ್ಮೂರ ದಶರಥ ಇಬ್ಬರು ಕೂಡಿ ಹೈದ್ರಾಬಾದನಿಂದ 04:00 ಪಿಎಮ್ ಗಂಟೆಗೆ ಬಿಟ್ಟು ರಾಹೆ ನಂ 65 ರ ಮುಖಾಂತರ ಮನ್ನಾಎಖೇಳ್ಳಿ ಗ್ರಾಮದ ಒಳಗಿನಿಂದ ಬರುತ್ತಿರುವಾಗ ದಶರಥ ಇತನು ಮೊಟರ ಸೈಕಲ್ ನಡೆಸುತ್ತಿದ್ದು ರಾತ್ರಿ 8:00 ಪಿಎಮ್ ಗಂಟೆಗೆ ಮನ್ನಾಎಖೇಳ್ಳಿ ಗ್ರಾಮದ ಬೈ ಪಾಸ ರೊಡಿನ ಮೇಲೆ ಫೆಂಡ್ಸ ದಾಬಾದ ಹತ್ತಿರ ಹೊಗುತ್ತಿದ್ದಾಗ ಹುಮನಾಬಾದ ಕಡೆಯಿಂದ ಒಬ್ಬ ಕಾರ ಚಾಲಕ ತನ್ನ ವಾಹನ ಅತಿ ವೇಗ ಹಾಗು ನೀಷ್ಕಾಳಜಿತನದಿಂದ ಚಲಾಯಿಸುತ್ತಾ ಬಂದು ನಮ್ಮ ಮೊಟರ ಸೈಕಲ್ಗೆ ಡಿಕ್ಕಿ ಮಾಡಿದ ಪರಿಣಾಮ ನಾನು ಹಾಗು ದಶರಥ ಇಬ್ಬರು ವಾಹನ ಸಮೇತ ರೊಡಿನ ಮೇಲೆ ಬಿದ್ದೆವು ನಮಗೆ ಡಿಕ್ಕಿ ಮಾಡಿದ ಕಾರ ನಂ ನೊಡಲು ಒಊ12/ಉಏ5837 ಇದ್ದು ಚಾಲಕನು ಡಿಕ್ಕಿ ಮಾಡಿದ ಕೂಡಲೆ ತನ್ನ ವಾಹನ ಸ್ಥಳದಲ್ಲಿಯೆ ಬಿಟ್ಟು ಓಡಿ ಹೊಗಿದ್ದು ಸದರಿ ಅಪಘಾತದಿಂದ ನನಗೆ ಬಲಕಾಲಿನ ತೊಡೆಯ ಮೇಲೆ ಭಾರಿ ಗುಪ್ತಗಾಯ, ಬಲಕೈ ಮೋಳಕೈ ಮೇಲೆ ರಕ್ತಗಾಯವಾಗಿದ್ದು ದಶರಥ ಇತನಿಗೆ ಬಲಕಾಲಿನ ಹಿಮ್ಮಡಿಯ ಮೇಲೆ ಭಾರಿ ರಕ್ತಗಾಯ ಹಾಗು ಬಲ ಮೊಳಕಾಲ ತೊಡೆಯ ಮೇಲೆ ಭಾರಿ ಗುಪ್ತಗಾಯವಾಗಿದ್ದು, ಘಟನೆ ನೊಡಿ ಗಾಯಗೊಂಡ ನಮಗೆ ಪೇಟ್ರೊಲಿಂಗ ಕರ್ತವ್ಯದಲ್ಲಿದ ರಾಹೆ ನಂ 65 ರ ಎಲ್&ಟಿ ಸಿಬ್ಬಂದಿಯವರು ಬಂದು ನಮಗೆ ಅವರ ಅಂಬುಲೆನ್ಸದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರ ಮನ್ನಾಎಖೇಳ್ಳಿಗೆ ತಂದು ಸೇರಿಕ ಮಾಡಿದ್ದು ಇರುತ್ತದೆ. ಕಾರಣ ನಮಗೆ ಡಿಕ್ಕಿ ಮಾಡಿ ಓಡಿ ಹೊದ ಕಾರ ನಂ ಒಊ12/ಉಏ5837 ನೇದರ ಚಾಲಕನ ವಿರುದ್ದ ಕಾನುನ ಕ್ರಮ ಜರುಗಿಸಲು ವಿನಂತಿ ಡಿಕ್ಕಿ ಮಾಡಿದ ಹೊದ ಕಾರ ಚಾಲಕನಿಗೆ ನೊಡಿದರೆ ಗುರುತಿಸುತ್ತೆನೆ.ಅಂತಾ ಕೊಟ್ಟ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹಳ್ಳಿಖೇಡ (ಬಿ) ಪೊಲೀಸ ಠಾಣೆ ಪ್ರಕರಣ ಸಂಖ್ಯೆ : 115/2020 ಕಲಂ 287, 338 ಐಪಿಸಿ :-
ದಿನಾಂಕ : 26/09/2020 ರಂದು ಮದ್ಯಾಹ್ನ 1500 ಗಂಟೆಗೆ ಹಳ್ಳಿಖೇಡ[ಬಿ] ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಎಮ್.ಎಲ್.ಸಿ ಪತ್ರ ಸ್ವೀಕರಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ನಾಗಪ್ಪಾ ತಂದೆ ಮಾಣಿಕಪ್ಪಾ ಕೂಡಂಬಲ ಸಾ: ಕಬೀರಾಬಾದವಾಡಿ ರವರ ಬಾಯಿ ಮಾತಿನ ಫಿರ್ಯಾದು ಹೇಳಿಕೆಯನ್ನು ಸಾರಾಂಶವೆನೆಂದ್ದರೆ, ದಿನಾಂಕ: 26/09/2020 ರಂದು ಮುಂಜಾನೆ 1100 ಗಂಟೆ ಸುಮಾರಿಗೆ ನಾನು ಮತ್ತು ರಾಶಿ ಮಶೀನ್ ಮಾಲಿಕರಾದ ಓಂಕಾರ ತಂದೆ ತುಕರಾಮ ಹುಪ್ಪಳೆ ಇಬ್ಬರು ರಾಶಿ ಮಶೀನ್ ತೆಗೆದುಕೊಂಡು ನಮ್ಮೂರ ಅಶೋಕ ಮುರಾಳೆ ರವರ ಹೊಲಕ್ಕೆ ರಾಶಿ ಮಾಡುವ ಸಲುವಾಗಿ ಹೋಗಿರುತ್ತೇವೆ. ಅಶೋಕ ಮುರಾಳೆ ರವರ ಹೊಲದಲ್ಲಿ ಸೋಯಾ ರಾಶಿ ಮಾಡುವಾಗ ಅಶೋಕ ಮುರಾಳೆ ಮತ್ತು ನಾನು ಇಬ್ಬರು ಸೋಯಾವನ್ನು ರಾಶಿ ಮಶೀನದಲ್ಲಿ ಹಾಕುತ್ತಾ ರಾಶಿ ಮಾಡುವಾಗ ಮದ್ಯಾಹ್ನ ಅಂದಾಜು 02:00 ಗಂಟೆ ಸುಮಾರಿಗೆ ನಾನು ರಾಶಿ ಮಶೀನದಲ್ಲಿ ಸೋಯಾ ಹಾಕುವಾಗ ಒಮ್ಮೇಲೆ ನನ್ನ ಬಲಗೈ ಮುಂಗೈ ರಾಶಿ ಮಶೀನ್ ಒಳಗಡೆ ಸಿಲುಕಿಕೊಂಡಿದ್ದರಿಂದ ನನ್ನ ಬಲಗೈ ಮುಂಗೈಗೆ ಭಾರಿ ರಕ್ತಗಾಯವಾಗಿ ಜಜ್ಜಿದಂತೆ ಕಟ್ಟಾದ ರಕ್ತಗಾಯವಾಗಿರುತ್ತದೆ. ಆಗ ಅಲ್ಲೆ ಇದ್ದ ರಾಶಿ ಮಶೀನ್ ಮಾಲಿಕ ಓಂಕಾರ ತಂದೆ ತುಕರಾಮ ಹುಪ್ಪಳೆ ಇವರು ರಾಶಿ ಮಶೀನ್ ಬಂದ ಮಾಡಿ ನಂತರ ರಾಶಿ ಮಶೀನನಲ್ಲಿ ಸಿಲುಕಿಕೊಂಡಿದ್ದ ನನ್ನ ಕೈ ಹೊರ ತೆಗೆದಿರುತ್ತಾರೆ. ನಂತರ ಗಾಯಗೊಂಡ ನನಗೆ ಹೊಲದ ಮಾಲಿಕ ಅಶೋಕ ಮುರಾಳೆ ರವರು ಚಿಕಿತ್ಸೆ ಕುರಿತು ಹಳ್ಳಿಖೇಡ (ಬಿ) ಸರಕಾರಿ ಆಸ್ಪತ್ರೆಗೆ ತಂದು ಶೇರಿಕ ಮಾಡಿರುತ್ತಾರೆ. ಸದರಿ ಮಶೀನ್ ಮಾಲಿಕರಾದ ಓಂಕಾರ ಹುಪ್ಪಳೆ ರವರು ಸದರಿ ಮಶೀನ್ನಲ್ಲಿ ರಾಶಿ ಮಾಡುವಾಗ ಯಾವುದೇ ಮನುಷ್ಯನ ಪ್ರಾಣಕ್ಕೆ ಸಂಭವಿಸಬಹುದಾದ ಅಪಾಯವನ್ನು ತಡೆಯಲು ಬೇಕಾಗುವ ವ್ಯವಸ್ಥೆಯನ್ನು ಮಾಡದೆ ನಿರ್ಲಕ್ಷ್ಯ ವಹಿಸಿದ್ದರಿಂದ ಸದರಿ ಘಟನೆ ರಾಶಿ ಮಶೀನ್ ಮಾಲಿಕ ಓಂಕಾರ ತಂದೆ ತುಕರಾಮ ಹುಪ್ಪಳೆ ರವರ ನಿರ್ಲಕ್ಷ್ಯತನದಿಂದ ದಿನಾಂಕ: 26/09/2020 ರಂದು ಮದ್ಯಾಹ್ನ 02:00 ಗಂಟೆ ಸುಮಾರಿಗೆ ಕಬೀರಾಬಾದವಾಡಿ ಗ್ರಾಮ ಶಿವಾರ ಅಶೋಕ ಮುರಾಳೆ ರವರ ಹೊಲದಲ್ಲಿ ಸಂಭವಿಸಿದ್ದು, ಈ ಬಗ್ಗೆ ಓಂಕಾರ ತಂದೆ ತುಕರಾಮ ಹುಪ್ಪಳೆ ರವರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಕೊಟ್ಟ ಫಿಯರ್ಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
No comments:
Post a Comment