C¥sÀd®¥ÀÆgÀ ¥Éưøï oÁuÉ : ದಿನಾಂಕ: 06-02-2020 ರಂದು 2:00 ಪಿಎಮ್ ಕ್ಕೆ ಶ್ರೀಮತಿ
ಬಸಮ್ಮಾ ಗಂಡ ಶೆಂಕ್ರೆಪ್ಪಾ ಬಡಿಗೇರ ಸಾ|| ರಾಯನಪಾಳ್ಯ ತಾ|| ಹುಣಸಗಿ ಇವರು ಠಾಣೇಗೆ
ಹಾಜರಾಗಿ ಲಿಖಿತ ಪಿರ್ಯಾಧಿ ಸಲ್ಲಿಸಿದ್ದು ಸದರಿ ಪಿರ್ಯಾಧಿಸಾರಾಂಶವೆನೇಂದರೆ ಬಸಮ್ಮ ಗಂಡ
ಶಂಕ್ರೆಪ್ಪ ಬಡಿಗೇರ ವಯ|| 40 ವರ್ಷ ಜಾ|| ಪಂಚಾಳ ಉ|| ಕೂಲಿ ಸಾ|| ರಾಯನಪಾಳ್ಯ ತಾ|| ಹುಣಸಗಿ ಜಿ|| ಯಾದಗಿರಿ ಆದ ನಾನು ಅರ್ಜಿ
ಕೊಡುವುದೆನೆಂದರೆ, ನನ್ನ ಗಂಡನು ಅಫಜಲಪೂರ ತಾಲೂಕಿನ ಘತ್ತರಗಾದಲ್ಲಿ ನಡೆದ ಬ್ರೀಜ ಕಮ್
ಬ್ಯಾರೇಜ ಕಾಮಗಾರಿಯಲ್ಲಿ ಮೇಸ್ತ್ರಿ ಕೆಲಸ ಮಾಡಿಕೊಂಡಿರುತ್ತಾರೆ. ನನ್ನ ಗಂಡನ ಜೋತೆಗೆ ನಮ್ಮೂರಿನ
ಬಸವರಾಜ ತಂದೆ ಸೈಬಣ್ಣ ಡೆಣ್ಣಿಗೇರಿ ಇವರು ಸಹ ಕೆಲಸ ಮಾಡುತ್ತಾರೆ. ಇಂದು ದಿನಾಂಕ 06-02-2020 ರಂದು ಬೆಳಿಗ್ಗೆ 08:00 ಗಂಟೆ ಸುಮಾರಿಗೆ ನನ್ನ ಗಂಡನ
ಜೋತೆಗೆ ಕೆಲಸ ಮಾಡುವ ಬಸವರಾಜ ಈತನು ನನಗೆ ಪೋನ್ ಮಾಡಿ ನಿಮ್ಮ ಗಂಡನು ಭೀಮಾ ನದಿಗೆ ಇರುವ
ಘತ್ತರಗಾ – ಬಗಲೂರ ಬ್ರೀಜ್ ಮೇಲಿಂದ ಕೆಳಗೆ ಬಿದ್ದು ಮೃತಪಟ್ಟಿರುತ್ತಾನೆ ಎಂದು
ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಗಂಡನ ಅಣ್ಣನಾದ ಗುಂಡಪ್ಪ ಹಾಗೂ ನಮ್ಮೂರಿನ ದೇವಪ್ಪ ಗೋಪಾಳಿ, ವೆಂಕಟೇಶ ಮಾಲಿಪಾಟೀಲ ಇನ್ನು
ಕೆಲವು ಜನರು ಕೂಡಿ ಘತ್ತರಗಾಕ್ಕೆ ಬಂದು ನೋಡಲಾಗಿ ನನ್ನ ಗಂಡನ ಶವವು ಬ್ರೀಜ್ ಕೆಳಗೆ 36 ನಂಬರ ಪಿಲ್ಲರ ಹತ್ತಿರ
ಬೋರಲಾಗಿ ಬಿದ್ದಿತ್ತು. ನಂತರ ಅಲ್ಲಿದ್ದ ನನ್ನ ಗಂಡನ ಜೋತೆಗೆ ಕೆಲಸ ಮಾಡುವ ಸಂಜೀವಪ್ಪ ಕೂಡಗಿ, ಬಸವರಾಜ ಡೊಣ್ಣಿಗೇರಿ ಹಾಗೂ
ಮ್ಯಾನೇಜರ ಆದ ವಿಠ್ಠಲ ದಶವಂತ ರವರಿಗೆ ವಿಚಾರಿಸಲು ಸದರಿಯವರು ತಿಳಿಸಿದ್ದೆನೆಂದರೆ, ನಿಮ್ಮ ಗಂಡನು ಮೈಯಲ್ಲಿ ಆರಾಮ
ಇಲ್ಲದರಿಂದ ನಿನ್ನೆ ಕೆಲಸಕ್ಕೆ ಬಂದಿರುವುದಿಲ್ಲ. ನಿನ್ನೆ ಸಂಜೆ ಸರಾಯಿ ಕುಡಿದು ರಾತ್ರಿ 10:00 ಗಂಟೆ ವರೆಗೆ ಬ್ರೀಜ್ ಮೇಲೆ
ತಿರುಗಾಡುತ್ತಿದ್ದನು. ಇಂದು ಬೆಳಿಗ್ಗೆ ನಾವು ಕೆಲಸ ಮಾಡಲು ಹೋದಾಗ ನಿಮ್ಮ ಗಂಡನು ಕೆಳಗೆ ಬಿದ್ದು
ಮೃತ ಪಟ್ಟಿರುವುದನ್ನು ನೋಡಿರುತ್ತೇವೆ ಎಂದು ತಿಳಿಸಿದರು. ನನ್ನ ಗಂಡನು ಸರಾಯಿ ಕುಡಿದ ನಸೆಯಲ್ಲಿ
ನಿನ್ನೆ ದಿನಾಂಕ 05-02-2020 ರಂದು ರಾತ್ರಿ 10:00 ಗಂಟೆಯಿಂದ ಇಂದು ದಿನಾಂಕ 06-02-2020 ರಂದು ಬೆಳಿಗ್ಗೆ 06:00 ಗಂಟೆಯ ಮದ್ಯದ ಅವದಿಯಲ್ಲಿ
ಬ್ರೀಜ ಮೇಲೆ ತಿರುಗಾಡುತ್ತಿದ್ದಾಗ ಆಯ ತಪ್ಪಿ ಕೆಳಗೆ ಬಿದ್ದು ಮೃತಪಟ್ಟಿರುತ್ತಾನೆ. ನನ್ನ ಗಂಡನ
ಸಾವಿನಲ್ಲಿ ನಮಗೆ ಯಾರ ಮೇಲೆ ಯಾವುದೆ ತರಹದ ಸಂಶಯ ಇರುವುದಿಲ್ಲ. ಕಾರಣ ನನ್ನ ಗಂಡನು ಮೃತಪಟ್ಟ
ಬಗ್ಗೆ ಕಾನೂನು ಕ್ರಮ ಜರೂಗಿಸಬೇಕು ಎಂದು ಮಾನ್ಯ ರವರಲ್ಲಿ ವಿನಂತಿ ಇದೆ ಅಂತಾ ಕೊಟ್ಟ ದೂರಿನ ಸಾರಾಂಶದ
ಮೇಲಿಂದ ಠಾಣಾ ಯುಡಿಆರ್ ನಂ 02/2020 ಕಲಂ 174 CRPC ನೇದ್ದರ ಪ್ರಕಾರ ಪ್ರಕರಣ
ದಾಖಲಿಸಿಕೊಂಡು ಬಗ್ಗೆ ವರದಿ.