Police Bhavan Kalaburagi

Police Bhavan Kalaburagi

Wednesday, August 4, 2021

BIDAR DISTRICT DAILY CRIME UPDATE 04-08-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 04-07-2021

 

ಬೀದರ ನಗರ ಪೊಲೀಸ ಠಾಣೆ ಅಪರಾಧ ಸಂ. 54/2021, ಕಲಂ. 379 ಐಪಿಸಿ :-

ಫಿರ್ಯಾದಿ ಗುಲಾಮ ಖುದ್ದುಸ್ ತಂದೆ ಗುಲಾಮ ಮೊಹ್ಮದ ವಯ: 35 ವರ್ಷ, ಜಾತಿ: ಮುಸ್ಲಿಂ, ಸಾ: ಮನೆ ನಂ. 5-3-7 ಗೊಲೆ ಖಾನಾ ಬೀದರ ರವರ ಹಿರೋ ಹೊಂಡಾ ಫ್ಯಾಶನ್ ಪ್ಲಸ್ ಮೋಟಾರ ಸೈಕಲ್ ನಂ. KA-38/K-2446 , Chassis No. MBLHA10EL99C2425, Engine No. HA10EB99C25421, Model 2009, ಅ.ಕಿ 30,000/- ರೂ. ನೇದನ್ನು ತನ್ನ ಮನೆಯ ಮುಂದೆ ನಿಲ್ಲಿಸಿರುವುದನ್ನು ದಿನಾಂಕ 20-06-2021 ರಂದು 1900 ಗಂಟೆಯಿಂದ ದಿನಾಂಕ 21-06-2021 ರಂದು 0800 ಗಂಟೆಯ ಮದ್ಯಾವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 03-08-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 90/2021, ಕಲಂ. 379 ಐಪಿಸಿ :-

ದಿನಾಂಕ 02-08-2021 ರಂದು 1730 ಗಂಟೆಯಿ0 ದಿನಾಂಕ 03-08-2021 ರಂದು 0600 ಗಂಟೆಯ ಅವಧಿಯಲ್ಲಿ ಬೀದರ ನಗರದ ಪಾಪನಾಶ ಮಂದಿರದ ಹುಂಡಿ ಒಡೆದು ಹುಂಡಿಯಲ್ಲಿದ್ದ ಸುಮಾರು 8 ರಿಂದ 10 ಸಾವಿರ ನಗದು ಹಣವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಫಿರ್ಯಾದಿ ಸಂತೋಶ ತಂದೆ ಮಧುಕರರಾವ ಪಾಟೀಲ ವಯ: 44 ವರ್ಷ, ಜಾತಿ: ಬ್ರಾಹ್ಮಣ, ಸಾ: ಶಾಸ್ತ್ರಿ ನಗರ ಮೈಲೂರ ಬೀದರ ರವರು ನೀಡಿದ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂ. 51/2021, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 03-08-2021 ರಂದು ಚಾಂಬೋಳ ಗ್ರಾಮದ ಸಿದ್ದರಾಮೇಶ್ವರ ಮಠದ ಹಿಂದುಗಡೆ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆಂದು ಶಿವರಾಜ ಪಾಟೀಲ್ ಪಿಎಸ್ಐ (ಕಾ&ಸೂ) ಜನವಾಡಾ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಚಾಂಬೋಳ ಗ್ರಾಮದ ಸಿದ್ದರಾಮೇಶ್ವರ ಮಠದ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಸಿದ್ದಗೊಂಡ ತಂದೆ ತುಕಾರಾಮ ಎಮ್ಮೇನೋರ ವಯ: 35 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಚಾಂಬೋಳ ಗ್ರಾಮ ಇತನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಅಂಕೆ ಸಂಖ್ಯೆ ವುಳ್ಳ ಚೀಟಿ ಬರೆದುಕೊಡುತ್ತ 1/- ರೂಪಾಯಿಗೆ 80/- ರೂ ಹಾಗೂ 10/- ರೂಪಾಯಿಗೆ 800/- ರೂ ಕೊಡುತ್ತೆನೆ ಅಂತಾ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಅವನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಆತನಿಗೆ ಹಿಡಿದುಕೊಳ್ಳುವಷ್ಟರಲ್ಲಿ ಮಟಕಾ ಚೀಟಿಗೆ ಹಣ ಹಚ್ಚುತ್ತಿದ್ದ ಸಾರ್ವಜನಿಕರು ಓಡಿ ಹೊಗಿದ್ದು, ನಂತರ ಆರೋಪಿ ಸಿದ್ದಗೊಂಡ ಈತನು ನಾನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಡುತ್ತ ಅವರಿಂದ ಪಡೆದುಕೊಂಡ ಮಟಕಾ ಚೀಟಿ ಹಾಗೂ ಹಣ ಅಶೋಕ ಮತ್ತು ಉಮೇಶ ಮಂಗರವಾಡಿ ಬೀದರ ರವರಿಗೆ ನೀಡುತ್ತೆನೆ ಅಂತಾ ತಿಳಿಸಿದನು, ಸಿದ್ದಗೊಂಡನ ಅಂಗ ಶೋಧನೆ ಮಾಡಲಾಗಿ ಅವನ ಹತ್ತಿರ 1) ನಗದು ಹಣ 6060/- ರೂ., 2) ಅ.ಕಿ ಸಂಖ್ಯೆ ಬರೆದ 2 ಮಟಕಾ ಚೀಟಿಗಳು ಹಾಗೂ 3) 2 ಪೆನ್ನುಗಳು ಸಿಕ್ಕಿದ್ದು ನೇದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 62/2021, ಕಲಂ. 279, 337, 338 ಐಪಿಸಿ :-

ದಿನಾಂಕ 03-08-2021 ರಂದು ಫಿರ್ಯಾದಿ ಮಹಾದೇವ ತಂದೆ ಆನಂದರಾವ ಗಾಯಕವಾಡ, ವಯ: 47 ವರ್ಷ, ಜಾತಿ: ಎಸ್.ಸಿ (ಹೊಲಿಯಾ), ಸಾ: ಹತ್ಯಾಳ, ತಾ: ಬಸವಕಲ್ಯಾಣ ರವರ ಅಣ್ಣ ವಸಂತ ಗಾಯಕವಾಡ ವಯ: 49 ವರ್ಷ ರವರ ಹೆಂಡತಿಯ ತಂಗಿ ಮಗಳಾದ ಕು. ಗೌತಮಿ ವಯ: 17 ವರ್ಷ, ಸಾ: ನಿಲಂಗಾ ಇವಳು ಸುಮಾರು ಒಂದು ತಿಂಗಳಿಂದ ಫಿರ್ಯಾದಿಯ ಮನೆಯಲ್ಲೆ ಇದ್ದು ತನ್ನ ಊರಿಗೆ ಹೋಗುವುದಾಗಿ ತಿಳಿಸಿದ್ದರಿಂದ ಅಣ್ಣ ಅವಳಿಗೆ ಬಿಟ್ಟು ಬರಲು ಮೋಟರ ಸೈಕಲ್ ನಂ. ಕೆ-56/ಇ-1463 ನೇದರ ಮೇಲೆ ಹಿಂಭಾಗ ಕೂಡಿಸಿಕೊಂಡು ರಾ.ಹೇ ನಂ 65 ಮೇಲೆ ಬಂಗ್ಲಾ ಹತ್ತಿರ ಹೋಗುವಾಗ ಬಂಗ್ಲಾ ಸಮೀಪ ಐಚರ್ ವಾಹನ ನಂ. ಎಮ್.ಹೆಚ್-13/ಸಿ.ಯು-5336 ನೇದರ ಚಾಲಕನಾದ ಆರೋಪಿ ಅಬ್ಬಾಸ ತಂದೆ ಇಮಾಮ ಶೇಖ, ವಯ: 29 ವರ್ಷ, ಜಾತಿ: ಮುಸ್ಲಿಂ, ಸಾ: ಮಾಳಕೋಟ, ತಾ: & ಜಿ: ಸೋಲಾಪುರ (ಎಮ್.ಎಸ್) ಇತನು ರೋಡಿನ ಕೆಳಗಿನಿಂದ ತನ್ನ ವಾಹನವನ್ನು ಯಾವುದೇ ಮುನ್ಸೂಚನೆ ನೀಡದೆ ಇಂಡಿಕೇಟರ ಹಾಕದೇ ಒಮ್ಮೇಲೆ ನಿಷ್ಕಾಳಜಿತನದಿಂದ ಹಿಂದಕ್ಕೆ ರಿವರ್ಸ ತೆಗೆದುಕೊಂಡು ರೋಡಿನ ಮೇಲೆ ಐಚರ್ ವಾಹನದ ಬಲಭಾಗದಿಂದ ಅಣ್ಣನ ಮೋಟರ ಸೈಕಲಗೆ ಡಿಕ್ಕಿ ಮಾಡಿದನು, ಸದರಿ ಡಿಕ್ಕಿಯಿಂದ ಗೌತಮಿ ಕಾಂಬಳೆ ಇವಳಿಗೆ ಎಡಗಡೆ ಹಣೆಯ ಮೇಲೆ ರಕ್ತಗಾಯ, ಎಡಗಾಲು ಮೊಳಕಾಲಿಗೆ ತರಚಿದ ಗಾಯವಾಗಿರುತ್ತದೆ ಹಾಗೂ ಅಣ್ಣ ವಸಂತರವರಿಗೆ ಹಣೆಯ ಮೇಲೆ ಭಾರಿ ರಕ್ತಗಾಯ, ಬಲ ಭುಜಕ್ಕೆ ಗುಪ್ತಗಾಯ, ಹೊಟ್ಟೆಯ ಮೇಲೆ ತರಚಿದ ಗಾಯವಾಗಿರುತ್ತದೆ, ನಂತರ ಇಬ್ಬರಿಗೂ ಅಲ್ಲಿ ಸೇರಿದ ಜನರು ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನದಲ್ಲಿ ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ಕಳುಹಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 69/2021, ಕಲಂ. 279, 338 ಐಪಿಸಿ :-

ದಿನಾಂಕ 03-08-2021 ರಂದು ಫಿರ್ಯಾದಿ ಬಾಬು ತಂದೆ ಶರಣಪ್ಪಾ ಟೈಗರ ವಯ: 51 ವರ್ಷ, ಜಾತಿ: ಎಸ್. ಸಿ ಹೊಲೆಯಾ, ಸಾ: ಟೀಚರ ಕಾಲೋನಿ ಹುಮನಾಬಾದ ರವರ ಸಂಬಂಧಿಕರಾದ ಗೌತಮ ತಂದೆ ಪಿರಪ್ಪಾ ಡೊಮನೆ ವಯ: 35 ವರ್ಷ, ಜಾತಿ: ಎಸ್.ಸಿ ಹೊಲೆಯಾ, ಸಾ: ಕುಮಾರ ಚಿಂಚೋಳಿ ರವರು ತನ್ನ ಮೋಟರ ಸೈಕಲ ನಂ. ಕೆಎ-39/ಎಸ್-1511 ನೇದರ ಮೇಲೆ ತನ್ನ ಹೆಂಡತಿಯಾದ ಶಶಿಕಲಾ ಗಂಡ ಗೌತಮ ವಯ: 32 ವರ್ಷ ರವರಿಗೆ ಕೂಡಿಸಿಕೊಂಡು ಕುಮಾರ ಚಿಂಚೋಳಿ ಗ್ರಾಮದಿಂದ ಹುಮನಾಬಾದ ಗ್ರಾಮಕ್ಕೆ ಖಾಸಗಿ ಕೆಲಸದ ಪ್ರಯುಕ್ತ ಹೋಗಿ ಕೆಲಸವನ್ನು ಮುಗಿಸಿಕೊಂಡು ಮರಳಿ ಹುಮನಾಬಾದದಿಂದ ಚಂದನಹಳ್ಳಿ ಮಾರ್ಗವಾಗಿ ಕುಮಾರ ಚಿಂಚೋಳಿ ಗ್ರಾಮಕ್ಕೆ ಬರುವಾಗ ಗೌತಮ ಇತನು ತಾನು ಚಲಾಯಿಸುತ್ತಿದ್ದ ಮೋಟಾರ ಸೈಕಲನ್ನು ರೋಡಿನ ಮೇಲೆ ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಚಂದನಹಳ್ಳಿ ಹಂದಿಕೇರಾ ಗ್ರಾಮದ ಮಧ್ಯ ಚಂದನಹಳ್ಳಿ ಗ್ರಾಮ ಶಿವಾರದ ಬ್ರಿಡ್ಜ ಹತ್ತಿರ ರಸ್ತೆಯ ಮೇಲೆ ತನ್ನ ನಿಯಂತ್ರಣ ತಪ್ಪಿ ತನ್ನಿಂದ ತಾನೆ ಮೋಟಾರ ಸೈಕಲ ಸಮೇತ ಶಶಿಕಲಾರವರೊಂದಿಗೆ ರೋಡಿನ ಮೇಲೆ ಬಿದ್ದು ಅಪಘಾತ ಪಡಿಸಿರುತ್ತಾನೆ, ಸದರಿ ಅಪಘಾತದಲ್ಲಿ ಶಶಿಕಲಾರವರಿಗೆ ತಲೆಯ ಹಿಂದುಗಡೆ ಭಾರಿ ರಕ್ತ ಗಾಯವಾಗಿರುತ್ತದೆ ಮತ್ತು ಗೌತಮ ಈತನಿಗೆ ಯಾವುದೇ ಗಾಯಗಳು ಆಗಿರುವುದಿಲ್ಲಾ, ಆಗ ಅಲ್ಲಿಯೇ ಶಾಮಲಾಲ & ಸಂತೊಷ ಕೂಡಿಕೊಂಡು 108 ಅಂಬುಲೆನ್ಸನಲ್ಲಿ ಹುಮನಾಬಾದ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಮೌಖಿಕ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 70/2021, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 03-08-2021 ರಂದು ಫಿರ್ಯಾದಿ ಅಂಬಿಕಾ ಗಂಡ ಚಂದ್ರಶೇಖರ ತವಡೆ ವಯ: 26 ವರ್ಷ, ಜಾತಿ: ಕುರುಬ, ಸಾ: ಮೀನಕೇರಾ, ತಾ: ಚಿಟಗುಪ್ಪಾ, ಜಿ: ಬೀದರ ರವರ ಗ್ರಾಮ ದೇವತೆಯಾದ ಮರಗೆಮ್ಮಾ ದೇವಿಯ ನೈವಿದ್ಯೆ ಕೊಡಲು ನ್ನ ಮಗನಾದ ಗಣೇಶ ವಯ: 9 ವರ್ಷ ಇಬ್ಬರು ಹೋಗಿ ದೇವರಿಗೆ ನೈವಿಧ್ಯೆ ತೋರಿ ಮನೆಗೆ ಮರಳಿ ಬರುತ್ತಿರುವಾಗ ಮ್ಮೂರ ಸರಕಾರಿ ಶಾಲೆ ಎದರುಗಡೆ ರೋಡ ಮೇಲೆ ನಡೆದುಕೊಂಡು ಬರುತ್ತಿರುವಾಗ ಹಿಂದಿನಿಂದ ಮೋಟಾರ ಸೈಕಲ ನಂ. ಕೆ.-39/ಆರ-6805 ನೇದರ ಚಾಲಕನಾದ ಆರೋಪಿ ಅಮೀತ ತಂದೆ ರಾಚಪ್ಪಾ ಬಸಲಾಪುರ ಸಾ: ಮೀನಕೇರಾ ಇತನು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸುತ್ತಾ ಬಂದು ಮಗ ಗಣೇಶ ಇತನಿಗೆ ಡಿಕ್ಕಿ ಮಾಡಿದ್ದರಿಂದ ಆತನ ಬಲಗಾಲ ಮೋಳಕಾಲ ಕೆಳೆಗೆ ಮುರಿದು ಭಾರಿ ರಕ್ತ ಗಾಯ ಹಾಗು ಬಲ ಸೊಂಟ ಮೇಲೆ ರಚಿದ ಗಾಯ ಹೊಟ್ಟೆಯ ಮೇಲೆ ಗುಪ್ತಗಾಯವಾಗಿದ್ದು ಇರುತ್ತದೆ, ಆರೋಪಿಯು ತನ್ನ ಮೋಟಾರ ಸೈಕಲ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ನಂತರ ಫಿರ್ಯಾದಿಯು ಗಾಯಗೊಂಡ ಗಣೇಶ ಇತನಿಗೆ ಒಂದು ಖಾಸಗಿ ವಾಹಾನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಮನ್ನಾಏಖೇಳ್ಳಿ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 137/2021, ಕಲಂ. 457, 380 ಐಪಿಸಿ :-

ದಿನಾಂಕ 02/03-08-2021 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಫಿರ್ಯಾದಿ ದತ್ತಾತ್ರಿ ತಂದೆ ಶಂಕರರಾವ ನಿಂಬಾಳ್ಕರ ವಯ: 45 ವರ್ಷ, ಜಾತಿ: ಮರಾಠಾ, ಸಾ: ಥಮಗ್ಯಾಳ, ತಾ: ಭಾಲ್ಕಿ, ಸದ್ಯ: ದತ್ತನಗರ ಭಾಲ್ಕಿ ರವರ ಮನೆಯ ಕಿಲಿ ಮುರಿದು ಮನೆಯಲ್ಲಿ ಪ್ರವೇಶ ಮಾಡಿ ಮನೆಯಲ್ಲಿನ ಅಲಮಾರದ ಕಿಲಿ ಮುರಿದು ಅಲಮಾರದಲ್ಲಿಟ್ಟಿದ್ದ 1) 9 ಗ್ರಾಂ. ಬಂಗಾರದ ಝುಮಕಾ , 2) 5 ಗ್ರಾಂ. ಬಂಗಾರದ ಗುಂಡುಗಳು ಹಾಗು 3) ನಗದು ಹಣ 15,000/- ರೂ. ಮತ್ತು ಫಿರ್ಯಾದಿಯವರ ತಮ್ಮನ ಮನೆಯ ಬಾಗಿಲದ ಕೊಂಡಿ ಮುರಿದು ಅಲಮಾರದ ಕಿಲಿ ಮುರಿದು  ಅಲಮಾರದಲ್ಲಿದ್ದ 1) 5 ಗ್ರಾಂ. ತೂಕ ವುಳ್ಳ 2 ಉಂಗುರು, 2) 5 ಗ್ರಾಂ. ಲಾಕೆಟ ಹಾಗೂ 3) ನಗದು ಹಣ 20,000/- ರೂ. ಹೀಗೆ ಎಲ್ಲಾ ಸೇರಿ ಒಟ್ಟು 1,11,000/- ರೂ. ಬೆಲೆ ಬಾಳುವ ಬಂಗಾರ ಹಾಗೂ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶಧ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 138/2021, ಕಲಂ. 457, 380 ಐಪಿಸಿ :-

ದಿನಾಂಕ 02/03-8-2021 ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಫಿರ್ಯಾದಿ ಭಗವಾನ ತಂದೆ ಚಂದ್ರಭಾನ ವಯ: 32 ವರ್ಷ, ಜಾತಿ: ಹಿಂದು ಗೋಸಾವಿ, ಸಾ: ಮೇಥಿ ಮೆಳಕುಂದಾ, ತಾ: ಭಾಲ್ಕಿ ರವರ ಭಾವನ ಮನೆಯ ಕಿಲಿ ಮುರಿದು ಒಳಗಡೆ ಪ್ರವೇಶ ಮಾಡಿ ಮನೆಯಲ್ಲಿದ್ದ ಅಲಮಾರದ ಕಿಲಿ ಮುರಿದು ಅಲಮಾರದಲ್ಲಿದ್ದ ನಗದು ಹಣ 27,000/- ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.