ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 21-06-2021
ಬೀದರ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 07/2021, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಮಂಗಲಾ ಗಂಡ ಅಶೋಕ ಉಪಾದ್ಯಾಯ ವಯ: 40 ವರ್ಷ, ಸಾ: ಕಮಠಾಣಾ, ತಾ: ಜಿ: ಬೀದರ ರವರ ಮಗನಾದ ರಾಜು @ ಬಾಬು ತಂದೆ ಅಶೋಕ ಉಪಾದ್ಯಾಯ ವಯ: 18 ವರ್ಷ, ಇತನು ಸರಾಯಿ ಕುಡಿಯುವ ಚಟದವನಿದ್ದು, ದಿನಾಲು ಸರಾಯಿ ಕುಡಿಯುತ್ತಿದ್ದನು, ಹೀಗಿರುವಾಗ ದಿನಾಂಕ 20-06-2021 ರಂದು ರಾಜು @ ಬಾಬು ಇತನು ಸರಾಯಿ ಕುಡಿದು ನಶೆಯಲ್ಲಿ ತಮ್ಮೂರ ಸರಕಾರಿ ಬಾವಿಯಲ್ಲಿ ಬಿದ್ದು ಮೃತಪಟ್ಟಿರುತ್ತಾನೆ, ತನ್ನ ಮಗನ ಸಾವಿನಲ್ಲಿ ಯಾವುದೇ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 60/2021, ಕಲಂ. 363 ಐಪಿಸಿ :-
ದಿನಾಂಕ 19-06-2021 ರಂದು 0900 ಗಂಟೆಗೆ ಫಿರ್ಯಾದಿ ಬಾಬುರಾªÀ ತಂದೆ ತುಕಾರಾಮ ಖತಾಟೆ ವಯ: 60 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಖಡಕವಾಡಿ ಮಂಠಾಳ, ತಾ: ಬಸವಕಲ್ಯಾಣ ರವರ ಮೊಮ್ಮಗಳಾದ ಮಗಳಾದ ಕು: ಶೃದ್ಧಾ @ ಅಂಜಲಿ ತಂದೆ ಗೋಪಾಳ ಸೂರ್ಯವಂಶಿ ವಯ: 15 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಶಿರಮಳಿ, ತಾ: ಭಾಲ್ಕಿ, ಸದ್ಯ: ಮಂಠಾಳ ಗ್ರಾಮ ಮತ್ತು ಮೊಮ್ಮಗನಾದ ಕ್ರೀಷ್ಣಾ ತಂದೆ ಗೋಪಾಳ ಸೂರ್ಯವಂಶಿ ವಯ: 12 ವರ್ಷ ಇವರಿಬ್ಬರಿಗೆ ಮಂಠಾಳ ಗ್ರಾಮದ ಮನೆಯಲ್ಲಿ ಬಿಟ್ಟು ಫಿರ್ಯಾದಿಯು ತನ್ನ ಹೆಂಡತಿ ಭಾರತಬಾಯಿ ಇಬ್ಬರು ತಮ್ಮ ಹೊಲಕ್ಕೆ ಬೀಜ ಬಿತ್ತಣಿಕೆ ಮಾಡಲು ಹೋಗಿ ಬಿತ್ತಣಿಕೆ ಮಾಡಿಕೊಂಡು 1800 ಗಂಟೆ ಸುಮಾರಿಗೆ ಮನೆಗೆ ಬಂದಾಗ ಮೊಮ್ಮಗಳಾದ ಕು: ಶೃದ್ಧಾ @ ಅಂಜಲಿ ಇವಳು ಮನೆಯಲ್ಲಿ ಇರಲಿಲ್ಲ, ಆಗ ಮೊಮ್ಮಗನಾದ ಕ್ರೀಷ್ಣಾ ಇವನಿಗೆ ನಿಮ್ಮ ಅಕ್ಕ ಎಲ್ಲಿದ್ದಾಳೆ ಅಂತಾ ವಿಚಾರಿಸಲು ಅವನು ತಿಳಿಸಿದ್ದೆನೆಂದರೆ 1500 ಗಂಟೆ ಸುಮಾರಿಗೆ ಅವಳು ಮನೆಯಿಂದ ಹೊರಗೆ ಹೋದವಳು ಇಲ್ಲಿಯವರೆಗೆ ಬಂದಿಲ್ಲ ಅಂತಾ ಹೇಳಿದನÄ, ಆಗ ಫಿರ್ಯಾದಿಯು ತನ್ನ ಹೆಂಡತಿ ಹಾಗೂ ತಮ್ಮೂರ ಯಲ್ಲಪ್ಪಾ ತಂದೆ ಶರಣಪ್ಪ ಎಮ್ಮೆ ಕೂಡಿಕೊಂಡು ಕು: ಶೃದ್ಧಾ @ ಅಂಜಲಿ ಇವಳಿಗೆ ಊರೆಲ್ಲಾ ಹುಡುಕಾಡಿ ಎಲ್ಲಾ ಕಡೆ ವಿಚಾರಿಸಿದರು ಅವಳು ಸಿಕ್ಕಿರುವುದಿಲ್ಲಾ, ಅವಳು ಕಾಣೆಯಾಗಿರುತ್ತಾಳೆ, ಅಲ್ಲದೇ ಗ್ರಾಮದ ಮಹಾಂತೇಶ ತಂದೆ ವೆಂಕಪ್ಪಾ ಪವಾರ ವಯ: 25 ವರ್ಷಮ, ಜಾತಿ: ಎಸ್.ಸಿ ವಡ್ಡರ ಇªÀನು ಸಹ ಮಂಠಾಳದಲ್ಲಿ ಕಾಣುತ್ತಿಲ್ಲ, ಫಿರ್ಯಾದಿಯವರ ಮೊಮ್ಮಗಳಿಗೆ ಸದರಿ ಮಹಾಂತೇಶ ಫುಸಲಾಯಿಸಿ ತನ್ನ ಜೊತೆ ಕರೆದುಕೊಂಡು ಹೋಗಿರಬಹುದೆಂದು ಸಂಶಯ ಇರುತ್ತದೆ, ಕು: ಶೃದ್ಧಾ @ ಅಂಜಲಿ ಇವಳು ದುಂಡು ಮುಖ, ತಿಳಿ ಮೈಬಣ್ಣ, ನೇರ ಮೂಗು, ಅಂದಾಜು 4’ 5” ಫೀಟ್ ಎತ್ತರವಿದ್ದು, ವÄನೆಯಿಂದ ಹೋಗುವಾಗ ಕೆಂಪು ಬಣ್ಣದ ಒಳಗಡೆ ಬೆಳ್ಳಗೆ ಬಣ್ಣದ ಚುಕ್ಕೆ ಇದ್ದ ಡ್ರೆಸ್ ಹಾಕಿಕೊಂಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 20-06-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 119/2021, ಕಲಂ. 498(ಎ), 323, 324, 504, 506 ಜೊತೆ 34 ಐಪಿಸಿ :-
ಪಿರ್ಯಾದಿ ಆಶಾ ಗಂಡ ಮಾರುತಿ ಯರಸನ್, ವಯ: 30 ವರ್ಷ, ಜಾತಿ: ಹೇಳವಾ, ಸಾ: ಹಣಕುಣಿ, ತಾ: ಹುಮನಾಬಾದ ರವರ ಮದುವೆಯು 8 ವರ್ಷಗಳ ಹಿಂದೆ ಆಗಿದ್ದು, 2 ಜನ ಮಕ್ಕಳಿರುತ್ತಾರೆ, ಈಗ ಒಂದು ವರ್ಷದಿಂದ ಫಿರ್ಯಾದಿಯ ಮೇಲೆ ಸಂಶಯಪಟ್ಟು ಗಂಡ, ಮಾವ & ಅತ್ತೆ ಫಿರ್ಯಾದಿಗೆ ಹೋಡೆಬಡೆ ಮಾಡಿ ಮಾನಸೀಕ ಹಾಗು ದೈಹಿಕ ಕಿರುಕುಳ ನೀಡಿರುತ್ತಾರೆ, ಗಂಡ ಸರಾಯಿ ಕುಡಿಯುವ ಚಟದವನಾದ್ದು, ದಿನಾಂಕ 19-06-2021 ರಂದು ಫಿರ್ಯಾದಿಯು ಬರ್ಹಿದೆಸೆಗೆ ಹೋಗಿ ಬಂದ ನಂತರ ಗಂಡನು ಸಂಶಯಪಟ್ಟು ಜಗಳ ಮಾಡಿರುತ್ತಾನೆ, ಹೀಗಿರುವಾಗ ದಿನಾಂಕ 20-06-2021 ರಂದು ಫಿರ್ಯಾದಿಯು ಮನೆಯಲ್ಲಿದ್ದಾಗ ಗಂಡ ಸರಾಯಿ ಕುಡಿದು ಬಂದು ನೀನು ನಿನ್ನೆ ಸಾಯಂಕಾಲ ಎಲ್ಲಿಗೆ ಹೋಗಿರುವೆ ಅಂತಾ ಸಂಶಯಪಟ್ಟು ಅವಾಚ್ಯವಾಗಿ ಬೈದು ಬಡಿಗೆಯಿಂದ ಎಡಗಡೆ ತೊಡೆಯ ಮೇಲೆ ಹೋಡೆದಿರುತ್ತಾನೆ, ಮಾವ ಇಸ್ಮಾಯಿಲ್ ಇಕೆಗೆ ತವರು ಮನೆಗೆ ಬಿಟ್ಟು ಬಾ ಎಷ್ಟು ಹೇಳಿದರು ಕೇಳುವುದಿಲ್ಲಾ ಅಂತಾ ಬೈದು ಬಡಿಗೆಯಿಂದ ಎದುರಗಡೆ ತಲೆಯಲ್ಲಿ ಹೊಡೆದು ರಕ್ತಗಾಯ ಪಡಿಸಿರುತ್ತಾರೆ, ಅತ್ತೆ ಕೂದಲು ಹಿಡಿದು ಎಳೆದು ಕೈಯಿಂದ ಬೆನ್ನಲ್ಲಿ ಹೋಡೆದಿರುತ್ತಾಳೆ, ಗಂಡ ಮತ್ತು ಮಾವ ಇಬ್ಬರೂ ನೀನು ನಮ್ಮ ಮನೆಗೆ ಬರಬೇಡ ಬಂದರೆ ನಿನ್ನ ಜೀವ ತೆಗೆಯುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ, ನಂತರ ಫಿರ್ಯಾದಿಯು ತನ್ನ ತಾಯಿಯ ಜೊತೆ ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಹುಮನಾಬಾದ ಸರಕಾರಿ ಆಸ್ಪತ್ರೆಗೆ ಬಂದಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ್ ಪೊಲೀಸ್ ಠಾಣೆ ಅಪರಾಧ ಸಂ. 104/2021, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 20-06-2021 ರಂದು ಹುಮನಾಬಾದ ಪಟ್ಟಣದ ಶ್ರೀ ವೀರಭಧ್ರೇಶ್ವರ ಕಾಲೇಜ್ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿರುವ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ನಸೀಬಿನ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆಂದು ರವಿಕುಮಾರ ಪಿಎಸ್ಐ (ಕಾ.ಸು) ಹುಮನಾಬಾದ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹೋಗಿ ಆರೋಪಿತರಾದ 1) ಶ್ರೀನಿವಾಸ ತಂದೆ ಶಿವರತನ ಮಾರವಾಡಿ ವಯ: 33 ವರ್ಷ, ಜಾತಿ: ಮಾರವಾಡಿ, 2) ಉದಯಕುಮಾರ ತಂದೆ ಅಡೆಪ್ಪ ಕಬ್ಬಲಿಗೇರ ವಯಾ: 23 ವರ್ಷ, ಜಾತಿ: ಕಬ್ಬಲಿಗ, 3) ಸಾಗರ ತಂದೆ ಜವಾರಸಿಂಗ ರಜಪೂತ, ವಯ: 24 ವರ್ಷ, ಜಾತಿ: ರಜಪೂತ, 4) ಅಭಿಲಾಶ ತಂದೆ ಮಂಡೆಶ ಬಾಗವಾಲೆ ವಯ: 23 ವರ್ಷ, ಜಾತಿ: ಎಸ್.ಸಿ ಸಮಗಾರ, 5) ವೀರೇಶ ತಂದೆ ಶಂಕರ ಅಬ್ಬಂದರ ವಯ: 22 ವರ್ಷ, ಜಾತಿ: ಲಿಂಗಾಯತ, 6) ರಫೀಕ ತಂದೆ ಖಲೀಲ ತಾಬೂತವಾಲೆ ವಯ: 24 ವರ್ಷ, ಜಾತಿ: ಮುಸ್ಲಿಂ, ಎಲ್ಲರೂ ಸಾ: ಹುಮನಾಬಾದ ಇವರೆಲ್ಲರ ಮೇಲೆ ದಾಳಿ ಮಾಡಿ ಅವರಿಂದ 1) ನಗದು ಹಣ 4390/- ರೂ. & 2) 52 ಇಸ್ಪಿಟ್ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ತನಿಖೆ ಕೈಗೊಳ್ಳಲಾಗಿದೆ.