ದಿನಂಪ್ರತಿ
ಅಪರಾಧಗಳ ಮಾಹಿತಿ ದಿನಾಂಕ: 06-05-2021
ಬೀದರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ
26/2021 ಕಲಂ 15(ಎ),32(3) ಕೆ.ಈ ಎಕ್ಟ:-
ದಿನಾಂಕ
05/05/2021 ರಂದು 1900
ಗಂಟೆಗೆ ಪಿಎಸ್ಐ ರವರು ಪೆಟ್ರೋಲಿಂಗ್
ಕರ್ತವ್ಯದಲ್ಲಿರುವಾಗ ಶ್ರೀನಿವಾಸ ತಂದೆ ಅಮೃತ್ತರಾವ ಪುಲ್ಲಾರಡ್ಡಿ ಸಾ|| ಸಿಕಿಂದ್ರಾಪೂರ
ರವರು ತನ್ನ ಕಿರಾಣಿ ಅಂಗಡಿಯ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಸರಕಾರದ ಯಾವುದೇ ಪರವಾನಿಗೆ
ಇಲ್ಲದೆ ಸಾರ್ವಜನಿಕರಿಗೆ ಸರಾಯಿ , ನೀರು ಮತ್ತು ಗ್ಲಾಸ ಕೊಟ್ಟು ಸರಾಯಿ ಕುಡಿಯಲು ಅನುವು
ಮಾಡಿಕೊಡುತಿದ್ದಾನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಮತ್ತು ಪಂಚರೊಂದಿಗೆ ಹೋಗಿ ನೋಡಿದಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಸರಾಯಿ , ನೀರು
ಮತ್ತು ಗ್ಲಾಸ ಕೊಟ್ಟು ಸರಾಯಿ ಕುಡಿಯಲು ಅನುವು ಮಾಡಿಕೊಡುತಿದ್ದನ್ನು ನೋಡಿ ಖಾತ್ರಿ
ಪಡಿಸಿಕೊಂಡು ದಾಳಿ ಮಾಡಿ ಸದರಿಯವನಿಗೆ
ಅಲ್ಲೆ ಹಿಡಿದು ಅಲ್ಲಿ ಸ್ಥಳದಲ್ಲಿ ಒಂದು
ಬಟ್ಟೆಯ ಬಿಳಿ ಕೈ ಚೀಲ ಇದ್ದು ಅದನ್ನು ಪರೀಶಿಲಿಸಿ ನೋಡಲಾಗಿ ಅದರಲ್ಲಿ ಓರಿಜಿನಲ್ ಚಾಯ್ಸ್ ಅಂತ
ಬರೆದಿದ್ದ ಸರಾಯಿ ತುಂಬಿದ ಟೆಟ್ರಾ ಪ್ಯಾಕೇಟಗಳು ಇರುತ್ತವೆ. ಸದರಿ ಸರಾಯಿ ಪ್ಯಾಕೇಟಗಳು 90 ಎಮ್ ಎಲ್ ವುಳ್ಳ
ಇದ್ದು ಎಣಿಕೆ ಮಾಡಿ ನೋಡಲಾಗಿ ಒಟ್ಟು 18
ಟೆಟ್ರಾ ಸರಾಯಿ ತುಂಬಿದ ಪೌಚಗಳು
ಇರುತ್ತವೆ. ಪ್ರತಿ ಪೌಚಗಳ ಮೇಲೆ ರೂ 35.13
ಅಂತ ಬೆಲೆ ಬರೆದಿದು ಇದ್ದು ಅವುಗಳ ಒಟ್ಟು
ಕಿಮ್ಮತ್ತು ರೂ 632/- ನೇದ್ದನ್ನು ಜಪ್ತಿ ಮಾಡಿಕೊಂಡು ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಚಿಟಗುಪ್ಪಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 77/2021 ಕಲಂ 279, 337, 304 (ಎ) ಐಪಿಸಿ :-
ದಿನಾಂಕ:05/05/2021 ರಂದು
07.00 ಗಂಟೆಗೆ ಹುಮನಾಬಾದ ಸರಕಾರಿ ಆಸ್ಪತ್ರೆಯಿಂದ ಮಾಹಿತಿ ಬಂದಿದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಅಪಘಾತದಲ್ಲಿ ಗಾಯಗೊಂಡ
ಗಾಯಾಳು ಉಮೇಶ ತಂದೆ ಬಸವರಾಜ ಕಟ್ಟಿಮನಿ, ವಯ: 21 ವರ್ಷ, ಜಾತಿ: ಕಬ್ಬಲಿಗ, ಉ: ಚಾಲಕ, ಸಾ/ ಆಳಂದ ಚೆಕ್ ಪೋಸ್ಟ, ಸಿದ್ದರಾಮೇಶ್ವರ ಶಾಲೆ
ಹತ್ತಿರ, ಕಲಬುರ್ಗಿ ರವರ
ಹೇಳಿಕೆ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ಇವರು ಕಲಬುರ್ಗಿಯಲ್ಲಿನ
ಆದರ್ಶ ಸುಪರಸ್ಪೆಶಿಯಾಲಿಟಿ ಆರ್ಥೇಪೆಡಿಕ ಆಸ್ಪತ್ರೆಯ ಅಂಬುಲೆನ್ಸ ನಂ:ಕೆ.ಎ.32.ಎ.9608 ವಾಹನ
ಮೇಲೆ ಚಾಲಕ ಕೆಲಸ ಮಾಡಿಕೊಂಡಿದ್ದು ಸದರಿ
ಅಂಬುಲೆನ್ಸನಲ್ಲಿ ಇವರ ಜೊತೆ ಮಲ್ಲಿಕಾರ್ಜುನ ತಂದೆ ಸಿದ್ರಾಮ ಮಾಲಿಪಾಟೀಲ ವಯ: 27 ವರ್ಷ
ಸಾ/ ತೆಲ್ಲೂರ ತಾ/ ಆಳಂದ ಈತನು ಸಹ ಚಾಲಕ ಕೆಲಸ ಮಾಡಿಕೊಂಡಿರುತ್ತಾನೆ. ಹೀಗಿರುವಾಗ ದಿನಾಂಕ: 04/05/2021 ರಂದು ರಾತ್ರಿ
12.00 ಗಂಟೆಗೆ ಕಲಬುರ್ಗಿಯ ಬಸವೇಶ್ವರ ಆಸ್ಪತ್ರೆಯಿಂದ ಕೋವೀಡ್-19 ರೋಗಿಗೆ
ಬೀದರ ಸರಕಾರಿ ಆಸ್ಪತ್ರೆಗೆ ಬಿಟ್ಟು ಬರಲು ಬಾಡಿಗೆ ಮೇಲೆ ದಿನಾಂಕ:05/05/2021 ರಂದು
ನಸುಕಿನ ಜಾವ 01.00 ಎ.ಎಮ್. ಗಂಟೆಗೆ ಸದರಿ ರೋಗಿಯನ್ನು ಅಂಬುಲುನ್ಸನಲ್ಲಿ ತೆಗೆದುಕೊಂಡು ಹೋಗಿ ಬೀದರ ಜಿಲ್ಲಾಸ್ಪತ್ರೆಗೆ
ಬಿಟ್ಟು ಮರಳಿ ಕಲಬುರ್ಗಿಗೆ ಹೋಗುವಾಗ ಅಂಬುಲೆನ್ಸನ್ನು ಮಲ್ಲಿಕಾರ್ಜುನನು ಚಲಾಯಿಸುತ್ತಿದ್ದು, ಫಿರ್ಯಾದಿಯು ಅಂಬುಲೆನ್ಸನಲ್ಲಿ
ಹಿಂದೆ ಮಲಗಿದ್ದು ದಿನಾಂಕ:05/05/2021 ರಂದು
ನಸುಕಿನ ಜಾವ 05.00 ಎ.ಮ್. ಗಂಟೆ ಸುಮಾರಿಗೆ ರಾಹೆ ನಂ:50 ಹುಮನಾಬಾದ-ಕಲಬುರ್ಗಿ ರೋಡಿನ
ಮೇಲೆ ಮುಸ್ತಾಪೂರ ಶಿವಾರದ ಲಾಲಧರಿ ಮಠದ ಎದುರು ಮಲ್ಲಿಕಾರ್ಜುನನು ಅಂಬುಲುನ್ಸನನ್ನು ಅತಿವೇಗ ಹಾಗು
ನಿಷ್ಕಾಳಜಿತನದಿಂದ ಚಲಾಯಿಸಿ ರೋಡಿನ ಬಲಕ್ಕೆ ಮಠದ ಎದುರು ಇರುವ ಅರಳೆ ಮರಕ್ಕೆ ಡಿಕ್ಕಿ ಮಾಡಿ ಅಪಘಾತ ಪಡಿಸಿರುತ್ತಾನೆ. ಅಪಘಾತದಿಂದ ಬಲಹಣೆಗೆ ರಕ್ತಗಾಯ, ಎಡಹುಬ್ಬಿಗೆ ತರಚಿದಗಾಯ, ಎಡಮೋಳಕಾಲಿಗೆ ತರಚಿದಗಾಯಗಳಾಗಿದ್ದು, ಮಲ್ಲಿಕಾರ್ಜುನನಿಗೆ
ಬಲತಲೆಗೆ ಭಾರಿ ರಕ್ತಗಾಯವಾಗಿ, ಎಡಗೈ ರಟ್ಟೆಗೆ ರಕ್ತಗಾಯಗಳಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ
52/2021 ಕಲಂ 341, 323, 395, 504, 506 ಐಪಿಸಿ :-
ದಿನಾಂಕ 05/05/2021 ರಂದು 1800 ಗಂಟೆಗೆ ಶ್ರೀ ಟಿ.ಬಾಬು ತಂದೆ
ರಾಮಯ್ಯಾ ಸಾ; ಗುಮಲದಿಬ್ಬಾ
ತಾ; ಕೌರ
ಜಿಲ್ಲಾ; ನೇಲ್ಲುರ
(ಎ.ಪಿ.) ರವರು ಠಾಣೆಗೆ ಹಾಜರಾಗಿ ಲಿಖಿತ
ದೂರು ಸಲ್ಲಿಸಿದರ ಸಾರಾಂಶವೇನೆಂದರೆ,
ಲಾರಿ
ನಂ ಎಪಿ-26/ಟಿ.ಡಿ-4284 ನೇದರ ಮೇಲೆ ಚಾಲಕ ಅಂತ ಕೆಲಸ ಮಾಡುತ್ತಿದ್ದು ಅದೇ ರೀತಿ ಲಾರಿ ಮೇಲೆ ಕ್ಲೀನರ ಅಂತ
ವೆಂಕಟರಮನಯ್ಯಾ ತಂದೆ ಶೇನ್ಯಾ ಸಾ; ಗುಮಲದಿಬ್ಬಾ ಅಂತ ಇರುತ್ತಾನೆ. ಸುಮಾರು 5,
6 ವರ್ಷದಿಂದ ಉದಗೀರ ಸಂದೀಪ ದಾಲ
ಇಂಡಸಟ್ರಿಜ ದಿಂದ ಲಾರಿಯಲ್ಲಿ ಲೋಡ ತುಂಬಿಕೊಂಡು
ಕಾವೇರಿ, ನೆಲ್ಲುರ
ಅಂದ್ರಪ್ರದೇಶಕ್ಕೆ ತೆಗೆದುಕೊಂಡು ಹೋಗುವದು ಮಾಡುತ್ತಿದ್ದು ಹೀಗಿರಲು ದಿನಾಂಕ
04/05/2021 ರಂದು ಸಾಯಂಕಾಲ ಲಾರಿ ನಂ. ಎಪಿ-26/ಟಿ.ಡಿ-4284 ನೇದ್ದರಲ್ಲಿ ಉದಗೀರ
ನಗರದಲ್ಲಿರುವ ಸಚೀನ ಅಗ್ರೋ ಫುಡ್ಡ ಎಲ್.ಎಲ್. ಪಿ. ಮೀಲದಲ್ಲಿ 30 ಕ್ವಿಂಟಲ್ ಕಡ್ಲೆ ಬ್ಯಾಳೆ ಅ;ಕಿ; 1,98,335/- ರೂ. ಲೋಡಮಾಡಿಕೊಂಡು ನಂತರ
ಸಂದೀಪ ದಾಲ ಇಂಡಸಟ್ರಿಜ ಮೀಲನಲ್ಲಿ 225 ಕ್ವಿಂಟಲ ತೊಗರಿ ಬೇಳೆ ಅ;ಕಿ; 23,92,955/- ರೂ ಲೋಡಮಾಡಿಕೊಂಡು
ಸಾಯಂಕಾಲ 7;15
ಗಂಟೆಗೆ ಲಾರಿ ಚಲಾಯಿಸುತ್ತಾ ಉದಗೀರ ದಿಂದ
ಬಿಟ್ಟು ಕಾವೇರಿ, ನೇಲ್ಲುರಕ್ಕೆ
ಹೋಗುತ್ತಿರುವಾಗ ದಾರಿಯಲ್ಲಿ ಅಂದರೆ ಉದಗೀರ-ಬೀದರ ರೋಡಿನ ಮೇಲೆ ವಳಸಂಗ ಕ್ರಾಸ್ ಹತ್ತಿರ ರಾತ್ರಿ
9;30
ಗಂಟೆಯ ಸುಮಾರಿಗೆ ಲಾರಿಯ ಹಿಂದಿನಿಂದ ಯಾರೋ 05
ಮೋಟಾರ ಸೈಕಲ ಮೇಲೆ 10 ಜನರು ಕುಳಿತು ಲಾರಿಯ ಮುಂದೆ ಎರಡು ಮೋಟಾರ ಸೈಕಲಗಳು ಬಂದು ಮತ್ತು
ಪಕ್ಕದಲ್ಲಿ ಹೋಗುತಿದ್ದ 03 ಮೋಟಾರ ಸೈಕಲ ಮೇಲೆ ಇರುವ ವ್ಯಕ್ತಿಗಳು ನನಗೆ ಅರೆ ಮಾಕೆ ಲವಡೆ ಕೀದರ
ಜಾರಹಾಹೈ ಲಾರಿ ರುಕಾದೇ ಅಂತ ಬೈದು ಅಡ್ಡಗಟ್ಟಿದ್ದರಿಂದ ಲಾರಿ
ನಿಲ್ಲಿಸಿದಾಗ 05 ಮೋಟಾರ ಸೈಕಲಗಳ ಮೇಲೆ ಇರುವ 10 ಜನರಲ್ಲಿ 05 ಜನರು ಲಾರಿಯ
ಕ್ಯಾಬಿನದಲ್ಲಿ ಬಂದು ನನಗೆ ಮತ್ತು ಲಾರಿ ಕ್ಲೀನರ ವೆಂಕಟರಮನಯ್ಯಾ ರವರಿಗೆ ಕೈಯಿಂದ ಮುಖದ ಮೇಲೆ
ಹೊಡೆದು ಒಬ್ಬ ವ್ಯಕ್ತಿ ಲಾರಿ ಚಲಾಯಿಸುತ್ತಾ
ಸ್ವಲ್ಪ ಮುಂದೆ ಒಯ್ದು ಲಾರಿ ಟರ್ನ ಮಾಡಿಸಿಕೊಂಡು ನಿಲ್ಲಿಸಿ, ಫಿರ್ಯಾದಿಗೆ ಮತ್ತು ಕ್ಲೀನರಗೆ ಲಾರಿಯ ಕೆಳಗೆ ಇಳಿಸಿಕೊಂಡು ರೋಡಿನ ಪಕ್ಕದಲ್ಲಿರುವ
ತಗ್ಗಿನಲ್ಲಿ ಒಯ್ದು ನನ್ನ ಮೈಮೇಲೆ ಇರುವ ಲುಂಗಿ ಹರಿದು ನನ್ನ ಮತ್ತು ಲಾರಿ ಕ್ಲೀನರನ ಕೈಕಾಲು
ಲುಂಗಿಯಿಂದ ಕಟ್ಟಿ ಸಾಲೆ ಚಿಲ್ಲಾಯೆತೋ ತುಮಕೊ ನಹಿ ಛೋಡತೆ ಅಂತ ಹೆದರಿಸಿ ಲಾರಿಯಲ್ಲಿರುವ
30 ಕ್ವೀಂಟಲ ಕಡ್ಲೆ ಬ್ಯಾಳೆ ಮತ್ತು 225 ಕ್ವೀಂಟಲ ತೊಗರಿ ಬೇಳೆ ಹೀಗೆ ಒಟ್ಟು ಅ;ಕಿ; 25, 91,290/-ರೂ, ದಷ್ಟು ಲೋಡಿನ ಸಮೇತ ಲಾರಿ
ಎಪಿ-26/ಟಿ.ಡಿ-4284 ನೇದ್ದನ್ನು ದೋಚಿಕೊಂಡು ಹೋಗಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲಾಗಿದೆ.